For Quick Alerts
ALLOW NOTIFICATIONS  
For Daily Alerts

ಅಧಿಕ ಬಿಪಿ ಸಮಸ್ಯೆ ಇದೆಯೇ? ಹಾಗಾದರೆ ಅಕ್ಯುಪ್ರೆಶರ್ ಚಿಕಿತ್ಸೆ ಪ್ರಯತ್ನಿಸಿ

|

ಇಂದಿನ ಒತ್ತಡದ ಆಧುನಿಕ ಜೀವನ ಶೈಲಿಯಿಂದ ಅಧಿಕ ರಕ್ತದೊತ್ತಡ ಬಾಧಿಸುವುದು ಸಾಮಾನ್ಯವಾಗುತ್ತಿದೆ. ರಕ್ತದೊತ್ತಡ ಏರುಪೇರಾದಾಗ ಬಹುತೇಕರು ತಕ್ಷಣ ವೈದ್ಯರ ಬಳಿಗೆ ಧಾವಿಸಿ ಔಷಧಿ ಪಡೆದುಕೊಳ್ಳುತ್ತಾರೆ. ಇದು ಸಹಜ ಕೂಡ. ಆದರೆ ದೇಹದಲ್ಲಿನ ಕೆಲ ಮಾಂತ್ರಿಕ ಸ್ಥಳಗಳಲ್ಲಿ ಒಂದು ವಿಧಾನದ ಸರಳ ಚಿಕಿತ್ಸೆಯ ಮೂಲಕ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ನಿಜ. ಯಾವುದೇ ಔಷಧೋಪಚಾರ ಇಲ್ಲದೆ ರಕ್ತದೊತ್ತಡವನ್ನು ನಿಯಂತ್ರಿಸಲು ಸಾಧ್ಯ. ಹೆಚ್ಚಿನ ಜನರಿಗೆ ಬಾಧಿಸುತ್ತಿರುವ ಅಧಿಕ ರಕ್ತದೊತ್ತಡ ಅಧಿಕ ರಕ್ತದೊತ್ತಡ ಅಥವಾ ಸಾಮಾನ್ಯವಾಗಿ ಕರೆಯುವ ಬಿಪಿ (ಬ್ಲಡ್ ಪ್ರೆಶರ್) ಇಂದು ಭಾರತದಲ್ಲಿ ಅತ್ಯಧಿಕ ಜನರಿಗೆ ಬಾಧಿಸುವ ಸಮಸ್ಯೆಯಾಗಿದೆ.

ಇತ್ತೀಚೆಗೆ ರಾಷ್ಟ್ರೀಯ ಬಯೊಟೆಕ್ನಾಲಜಿ ಮಾಹಿತಿ ಕೇಂದ್ರವು ನಡೆಸಿದ ಸಂಶೋಧನೆಯೊಂದರ ಪ್ರಕಾರ ದೇಶದ ಶೇ.33 ನಗರವಾಸಿಗಳು ಹಾಗೂ ಶೇ.25 ರಷ್ಟು ಗ್ರಾಮೀಣ ಜನತೆ ಹೈ ಬಿಪಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ. ಅಧಿಕ ರಕ್ತದೊತ್ತಡದಿಂದ ಹೃದಯಾಘಾತ ಹಾಗೂ ಇನ್ನಿತರ ಹೃದಯ ಕಾಯಿಲೆಗಳು ಬರುವ ಸಂಭವವಿರುತ್ತವೆ.

blood pressure

ಇನ್ನು ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸೇವಿಸುವ ಮಾತ್ರೆಗಳಿಂದ ಸಹ ಅನೇಕ ಅಡ್ಡ ಪರಿಣಾಮಗಳು ಕಂಡು ಬರುತ್ತವೆ. ಬಿಪಿ ನಿಯಂತ್ರಣಕ್ಕೆ ಹೆಚ್ಚು ಔಷಧಿ ಸೇವಿಸುವುದರಿಂದ ನರಮಂಡಲಕ್ಕೆ ಹಾನಿಯಾಗಬಹುದು ಅಥವಾ ಲೈಂಗಿಕ ಜೀವನ ಹಾಳಾಗಲೂಬಹುದು. ಹೀಗಾಗಿ ಇದಕ್ಕೆ ಅಡ್ಡಪರಿಣಾಮಗಳಿಲ್ಲದ ಪರ್ಯಾಯ ಚಿಕಿತ್ಸೆಯತ್ತ ಗಮನಹರಿಸುವುದು ಅಗತ್ಯವಾಗಿದೆ. ಚೀನಾ ದೇಶದ ಪುರಾತನ ಚಿಕಿತ್ಸಾ ಪದ್ಧತಿಗಳಲ್ಲೊಂದಾಗಿರುವ ಅಕ್ಯುಪ್ರೆಶರ್ ಥೆರಪಿ ಮೂಲಕ ಅಧಿಕ ರಕ್ತದೊತ್ತಡವನ್ನು ಸಹಜವಾಗಿ ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದೆ ನಿಯಂತ್ರಿಸಬಹುದು ಎಂಬುದು ಸಮಾಧಾನದ ಸಂಗತಿಯಾಗಿ ಹೊರಹೊಮ್ಮಿದೆ.

ಬಿಪಿ ನಿಯಂತ್ರಣಕ್ಕೆ ಅಕ್ಯುಪ್ರೆಶರ್

ಬಿಪಿ ನಿಯಂತ್ರಣಕ್ಕೆ ಅಕ್ಯುಪ್ರೆಶರ್

ನಿಮ್ಮ ದೇಹದಲ್ಲಿರುವ ಕೆಲ ನಿರ್ದಿಷ್ಟ ಕೇಂದ್ರಗಳನ್ನು ಒತ್ತುವುದರಿಂದ ಬಿಪಿ ಕಡಿಮೆ ಮಾಡಬಹುದು. ಬಿಪಿ ಕಂಟ್ರೋಲ್ ಮಾಡಲು ಇಂಥದೊಂದು ಸರಳ ಉಪಾಯವಿರುವಾಗ ಹೈ ಡೋಸ್ ಔಷಧಿಗಳನ್ನು ಸೇವಿಸಿ ದೇಹಕ್ಕೆ ಮತ್ತಷ್ಟು ನೋವು ಕೊಡುವ ಅವಶ್ಯಕತೆ ಇರುವುದಿಲ್ಲ. ದೇಹದಲ್ಲಿನ ಪ್ರಮುಖ ಅಕ್ಯುಪ್ರೆಶರ್ ಕೇಂದ್ರಗಳ ಬಗ್ಗೆ ತಿಳಿದುಕೊಂಡರೆ ಬಿಪಿ ರೋಗಿಗಳು ತಾವಾಗಿಯೇ ಬಿಪಿ ನಿಯಂತ್ರಣ ಮಾಡಿಕೊಳ್ಳಬಹುದು. ದೇಹದಲ್ಲಿನ ಪ್ರಮುಖ ಅಕ್ಯುಪ್ರೆಶರ್ ಕೇಂದ್ರಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಲಾಗಿದೆ.

Most Read: ಏಕಾಗ್ರತೆ-ಜ್ಞಾಪಕಶಕ್ತಿ ಹೆಚ್ಚಿಸುವ ಆಕ್ಯುಪ್ರೆಷರ್ ಚಿಕಿತ್ಸೆ

ನಮ್ಮ ದೇಹದಲ್ಲಿನ ಪ್ರಮುಖ ಅಕ್ಯುಪ್ರೆಶರ್ ಕೇಂದ್ರಗಳು ಲಿವರ್ 3 ಅಥವಾ ಎಲ್‌ವಿ3

ನಮ್ಮ ದೇಹದಲ್ಲಿನ ಪ್ರಮುಖ ಅಕ್ಯುಪ್ರೆಶರ್ ಕೇಂದ್ರಗಳು ಲಿವರ್ 3 ಅಥವಾ ಎಲ್‌ವಿ3

ನಮಗೆ ನಡೆದಾಡಲು ಸಹಾಯ ಮಾಡುವ ಪಾದ ದೇಹದ ಅತಿ ಪ್ರಮುಖ ಅಂಗವಾಗಿದೆ. ಪಾದಗಳಲ್ಲಿ ಅಡಗಿರುವ ಕೆಲ ಪ್ರಮುಖ ಒತ್ತಡ ಕೇಂದ್ರಗಳನ್ನು ಒತ್ತಿದಾಗ ಆರೋಗ್ಯಕ್ಕೆ ಅನೇಕ ರೀತಿಯ ಲಾಭಗಳು ಸಿಗುತ್ತವೆ. ಪಾದದ ಹೆಬ್ಬೆರಳು ಹಾಗೂ ಎರಡನೇ ಬೆರಳಿನ ನಡುವಿನ ಜಾಗವನ್ನು ಲಿವರ್ 3 ಅಥವಾ ಎಲ್‌ವಿ 3 ಕೇಂದ್ರವೆಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಒಂದು ನಿಮಿಷದವರೆಗೆ ಒತ್ತಿ ಹಿಡಿದಲ್ಲಿ ದೇಹ ನಿರಾಳವಾಗಿ ಅಧಿಕ ರಕ್ತದೊತ್ತಡ ತನ್ನಿಂತಾನೇ ನಿಯಂತ್ರಣಕ್ಕೆ ಬರತೊಡಗುತ್ತದೆ.

ದೊಡ್ಡ ಕರುಳು 4 ಅಥವಾ ಎಲ್ ಐ 4

ದೊಡ್ಡ ಕರುಳು 4 ಅಥವಾ ಎಲ್ ಐ 4

ಮುಂಗೈ ಮೇಲಿನ ಹೆಬ್ಬೆರಳು ಹಾಗೂ ತೋರುಬೆರಳಿನ ಮಧ್ಯದ ಭಾಗವನ್ನು ದೊಡ್ಡ ಕರುಳು 4 ಅಥವಾ ಎಲ್ ಐ 4 ಎಂದು ಕರೆಯಲಾಗುತ್ತದೆ. ಮತ್ತೊಂದು ಕೈನ ಹೆಬ್ಬೆರಳಿನಿಂದ ಈ ಸ್ಥಾನದಲ್ಲಿ ಒತ್ತುವುದರಿಂದ ಅಥವಾ ನಿಧಾನವಾಗಿ ತಟ್ಟುವುದರಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗಲಾರಂಭಿಸುತ್ತದೆ. ಹೀಗೆ ಮಾಡುವುದರಿಂದ ದೇಹದ ಇತರ ಭಾಗಗಳಲ್ಲಿನ ನೋವು ಸಹ ಕಡಿಮೆಯಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಹೃದಯಕೋಶ 6 (ಪ್ಯಾರಿಕಾರ್ಡಿಯಂ 6) ಅಥವಾ ಪಿಸಿ 6

ಹೃದಯಕೋಶ 6 (ಪ್ಯಾರಿಕಾರ್ಡಿಯಂ 6) ಅಥವಾ ಪಿಸಿ 6

ಇದು ದೇಹದ ತೋಳಿನ ಒಳಭಾಗದಲ್ಲಿರುವ ಸ್ಥಳವಾಗಿದೆ. ಇದನ್ನು ಇನ್ನರ್ ಗೇಟ್ ಎಂದೂ ಹೇಳಲಾಗುತ್ತದೆ. ಮುಂಗೈ ಮಣಿಕಟ್ಟಿನಿಂದ ಮೂರು ಬೆರಳುಗಳ ಅಂತರ ಬಿಟ್ಟು ಸರಿಯಾಗಿ ಮಧ್ಯಭಾಗದಲ್ಲಿ ಈ ಕೇಂದ್ರವಿರುತ್ತದೆ. ಈ ಸ್ಥಳದಲ್ಲಿ ಮೃದುವಾಗಿ ಒತ್ತುವುದರಿಂದ ಹೃದಯ ಬಡಿತ ಸಹಜಗೊಂಡು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದು ವಾಕರಿಕೆ, ತಲೆನೋವು ಹಾಗೂ ಚಲನೆಯ ಅನಾರೋಗ್ಯವನ್ನು ಸಹ ವಾಸಿ ಮಾಡುತ್ತದೆ.

Most Read: ಆಕ್ಯುಪ್ರೆಷರ್ ಚಿಕಿತ್ಸೆಯ ಆರೋಗ್ಯಕಾರಿ ಪ್ರಯೋಜನಗಳು

ಗಾಲ್ ಬ್ಲಾಡರ್ 20 (ಪಿತ್ತಕೋಶ) ಅಥವಾ ಜಿಬಿ 20

ಗಾಲ್ ಬ್ಲಾಡರ್ 20 (ಪಿತ್ತಕೋಶ) ಅಥವಾ ಜಿಬಿ 20

ವಿಂಡ್ ಪೂಲ್ ಎಂದೂ ಕರೆಯಲಾಗುವ ಜಿಬಿ 20 ಎರಡು ಕೇಂದ್ರಗಳು ಕತ್ತಿನ ಹಿಂಭಾಗದಲ್ಲಿರುತ್ತವೆ. ತಲೆಯ ಕೆಳಭಾಗದಲ್ಲಿ ಬೆನ್ನುಮೂಳೆ ಆರಂಭವಾಗುವ ಭಾಗದಲ್ಲಿ ಬೆನ್ನುಮೂಳೆಯ ಎರಡೂ ಬದಿಗಳಲ್ಲಿ ಈ ಕೇಂದ್ರಗಳಿರುತ್ತವೆ. ಈ ಭಾಗವನ್ನು ಪ್ರಚೋದಿಸುವುದರಿಂದ ಅಧಿಕ ರಕ್ತದೊತ್ತಡ ನಿವಾರಿಸಬಹುದು ಹಾಗೂ ಕುತ್ತಿಗೆ ನೋವು, ಜ್ವರ ಮತ್ತು ಕಣ್ಣು ಬೇನೆಗಳನ್ನು ಸಹ ಉಪಶಮನಗೊಳಿಸಲು ಸಾಧ್ಯ. ಈ ಎರಡೂ ಒತ್ತಡ ಕೇಂದ್ರಗಳ ಮೇಲೆ ಸಾಧಾರಣ ಶಕ್ತಿಯಿಂದ ಒಂದು ನಿಮಿಷದವರೆಗೆ ಒತ್ತಬೇಕು. ಹೆಬ್ಬೆರೆಳಿನಿಂದ ಈ ಸ್ಥಳದಲ್ಲಿ ಒತ್ತುವಾಗ ಭುಜಗಳನ್ನು ಅಲ್ಲಾಡಿಸಬಾರದು.

Most Read: ಹೆಣ್ಣುಮಕ್ಕಳು ತಿಳಿಯಬೇಕಾದ ಹೊಟ್ಟೆಯ ಕ್ಯಾನ್ಸರ್‌ನ ಮುನ್ಸೂಚನೆಗಳು

ಗವರ್ನಿಂಗ್ ವೆಸೆಲ್ 20 ಅಥವಾ ಜಿವಿ 20

ಗವರ್ನಿಂಗ್ ವೆಸೆಲ್ 20 ಅಥವಾ ಜಿವಿ 20

ಸರಿಯಾಗಿ ತಲೆಯ ಮಧ್ಯಭಾಗದಲ್ಲಿರುವ ಈ ಸ್ಥಳವನ್ನು 'ಹಂಡ್ರೆಡ್ ಕಾನ್ವರ್ಜೆನ್ಸ್'ಎಂದೂ ಕರೆಯಲಾಗುತ್ತದೆ. ಒಂದು ಕಿವಿಯಿಂದ ಇನ್ನೊಂದು ಕಿವಿಗೆ ತಲೆಯ ಮೇಲ್ಭಾಗದಿಂದ ಹಾದು ಹೋಗುವಂತೆ ಒಂದು ರೇಖೆಯನ್ನು ಊಹಿಸಿ. ಹೀಗೆ ರೇಖೆ ತಲೆಯ ಮೇಲಿಂದ ದಾಟುವಾಗ ಮಧ್ಯದ ಸ್ಥಳವೇ ಜಿವಿ 20 ಆಗಿದೆ. ಈ ಕೇಂದ್ರದಲ್ಲಿ ನಿಧಾನವಾಗಿ ಒತ್ತುವುದರಿಂದ ಅಧಿಕ ರಕ್ತದೊತ್ತಡ ನಿವಾರಿಸಬಹುದು. ಜೊತೆಗೆ ಈ ವಿಧಾನದಿಂದ ತಲೆ ಸುತ್ತುವಿಕೆ ಹಾಗೂ ಮಾನಸಿಕ ಒತ್ತಡಗಳನ್ನೂ ನಿಯಂತ್ರಿಸಬಹುದು.

English summary

Have high blood pressure? try acupressure!

These are some magical points across your body that help you fight hypertension without high dose drugs affecting your body. Hypertension or high blood pressure in India has emerged to be one of the most prominent health burdens with about 33% urban and 25% of the rural population being hypertensive, reveals the latest report by National Centre for Biotechnology Information. Besides having greater risks of stroke and cardiovascular anomalies, the other pain point that most hypertension patients suffer from is the adverse effect of drugs they use to combat high pressure.
X
Desktop Bottom Promotion