For Quick Alerts
ALLOW NOTIFICATIONS  
For Daily Alerts

ಗ್ರೇವ್ಸ್ ಕಾಯಿಲೆ ಎಂದರೇನು? ಅದರ ಲಕ್ಷಣಗಳು ಹಾಗೂ ಚಿಕಿತ್ಸೆಯ ವಿಧಗಳು

|

ವಿಷಕಾರಿ ವಿಕೀರ್ಣ ಗೊಯಿಟ್ರೆ ಎಂದು ಕರೆಯಲ್ಪಡುವಂತಹ ಗ್ರೇವ್ಸ್ ಕಾಯಿಲೆಯು ಸ್ವಯಂ ನಿರೋಧಕ ಕಾಯಿಲೆಯಾಗಿದ್ದು, ಇದು ಥೈರಾಯ್ಡ್ ಮೇಲೆ ಪರಿಣಾಮ ಬೀರುತ್ತದೆ. ಇದು ಥೈರಾಯ್ಡ್ ಹಾರ್ಮೋನುಗಳ ಉತ್ಪತ್ತಿ ಮೇಲೆ ಪರಿಣಾಮ ಬೀರುವುದು ಮತ್ತು ಇದರಿಂದಾಗಿ ಹೈಪರ್ ಥೈರೋಡಿಸಮ್ ಸಮಸ್ಯೆ ಕಾಣಿಸುವುದು. ಅತಿಯಾಗಿ ಕಾರ್ಯನಿರ್ವಹಿಸುವಂತಹ ಥೈರಾಯ್ಡ್ ಗ್ರಂಥಿಯಿಂದಾಗಿ ಈ ಸಮಸ್ಯೆಯು ಕಂಡುಬರುವುದು ಮತ್ತು ಇದಕ್ಕೆ ಚಿಕಿತ್ಸೆ ನೀಡದೆ ಇದ್ದರೆ ಆಗ ಇದು ಗಂಭೀರ ಸ್ಥಿತಿಗೆ ತಲುಪಬಹುದು.

ಸಾಮಾನ್ಯವಾಗಿ ಸ್ವಯಂ ನಿರೋಧಕ ಕಾಯಿಲೆಯಾಗಿರುವ ಗ್ರೇವ್ಸ್ ಮಹಿಳೆಯರಲ್ಲಿ 40ರ ಹರೆಯಕ್ಕೆ ಮೊದಲು ಕಂಡುಬರುವುದು. ಅದಾಗ್ಯೂ, ಇದು ಪುರುಷರಲ್ಲಿಯೂ ಕಂಡುಬರುತ್ತದೆ. ಈ ಪರಿಸ್ಥಿತಿಯನ್ನು ಸಾಮಾನ್ಯವಾಗಿ ಹೊರಗಣ್ಣಿನ ಗೊಯಿಟ್ರೆ ಎಂದು ಕರೆಯಲಾಗುತ್ತದೆ. 1835ರಲ್ಲಿ ಐರಿಷ್ ವೈದ್ಯ ಸರ್ ರಾಬರ್ಟ್ ಗ್ರೇವ್ಸ್ ಅವರು ಈ ಪರಿಸ್ಥಿತಿಯನ್ನು ಕಂಡುಹಿಡಿದು ವಿವರಿಸಿದ ಬಳಿಕ ಇದಕ್ಕೆ ಅವರ ಹೆಸರನ್ನೇ ನೀಡಲಾಯಿತು.

Graves Disease

ಗ್ರೇವ್ಸ್ ಕಾಯಿಲೆಯು ನಿಮ್ಮ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಮತ್ತು ಇದಕ್ಕೆ ಚಿಕಿತ್ಸೆ ನೀಡುವುದು ಸುಲಭ. ಇದರ ಲಕ್ಷಣಗಳನ್ನು ಕಂಡುಹಿಡಿದು ಅದಕ್ಕೆ ಮೊದಲು ಚಿಕಿತ್ಸೆ ನೀಡಬೇಕು ಮತ್ತು ಥೈರಾಯ್ಡ್ ಹಾರ್ಮೋನುಗಳು ಅತಿಯಾಗಿ ಉತ್ಪತ್ತಿ ಆಗುವುದನ್ನು ನಿಯಂತ್ರಣ ಮಾಡಿಕೊಳ್ಳಬೇಕು.

ಗ್ರೇವ್ಸ್ ಕಾಯಿಲೆಯ ಲಕ್ಷಣಗಳು

ಗ್ರೇವ್ಸ್ ಕಾಯಿಲೆಯ ಕೆಲವೊಂದು ಸಾಮಾನ್ಯ ಲಕ್ಷಣಗಳು ಈ ರೀತಿಯಾಗಿ ಇದೆ.
•ಆತಂಕ
•ಕಿರಿಕಿರಿ
•ಕೈ ಮತ್ತು ಬೆರಳಿನ ನಡುಕ
•ಉಷ್ಣತೆಯ ಸೂಕ್ಷ್ಮತೆ
•ಋತುಚಕ್ರದ ಆವರ್ತನದಲ್ಲಿ ಬದಲಾವಣೆ
•ಬೆವರುವಿಕೆ ಹೆಚ್ಚಾಗುವುದು
•ತೂಕ ಇಳಿಯುವುದು
•ಥೈರಾಯ್ಡ್ ಗ್ರಂಥಿಗಳು ಹಿಗ್ಗುವುದು.
•ನಿಮಿರು ದೌರ್ಬಲ್ಯ
•ಕಾಮಾಸಕ್ತಿ ಕುಂದುವುದು
•ಅಧಿಕ ರಕ್ತದೊತ್ತಡ
•ದಪ್ಪ, ಕೆಂಪು ಚರ್ಮ ಅಥವಾ ಪಾದಗಳಲ್ಲಿ ಈ ಪರಿಸ್ಥಿತಿ ಕಂಡುಬರುವುದು.
•ಪದೇ ಪದೇ ಮಲ ವಿಸರ್ಜನೆ
•ಉಬ್ಬುವ ಕಣ್ಣುಗಳು
•ನಿಶ್ಯಕ್ತಿ
•ದೃಷ್ಟಿ ಸಮಸ್ಯೆ
•ಪದೇ ಪದೇ ಅಥವಾ ಅಸಾಮಾನ್ಯ ಹೃದಯ ಬಡಿತ

ಗ್ರೇವ್ಸ್ ಕಾಯಿಲೆಗೆ ಕಾರಣಗಳು

ದೇಹದಲ್ಲಿ ರೋಗ ನಿರೋಧಕವಾಗಿರುವ ಪ್ರತಿರೋಧಕ ವ್ಯವಸ್ಥೆ ಮೇಲೆ ಪರಿಣಾಮ ಬೀರಿದಾಗ ಈ ಸ್ಥಿತಿ ಕಂಡುಬರುವುದು. ಇದರ ಹೊರತಾಗಿ ಗ್ರೇವ್ಸ್ ಬರುವುದು ಹೇಗೆ ಎಂದು ಇದುವರೆಗೆ ತಿಳಿದಿಲ್ಲ. ದೇಹದಲ್ಲಿ ಈ ಪರಿಸ್ಥಿತಿಯು ಕಂಡುಬಂದ ವೇಳೆ ಇದು ಥೈರಾಯ್ಡ್ ಗ್ರಂಥಿಯ ಒಂದು ಭಾಗದಲ್ಲಿ ಅಂಗಾಂಶಗಳ ಮೇಲೆ ಪ್ರತಿಕಾಯವನ್ನು ಉತ್ಪತ್ತಿ ಮಾಡುವುದು. ಆದರೆ ಇದರ ಹಿಂದೆ ಕಾರಣಗಳು ಏನು ಎಂದು ಇದುವರೆಗೆ ಸಂಶೋಧನೆಗಳು ಮತ್ತು ವೈದ್ಯಕೀಯ ಲೋಕಕ್ಕೆ ತಿಳಿದುಬಂದಿಲ್ಲ.

ಗ್ರೇವ್ಸ್ ಕಾಯಿಲೆಯು ಅನುವಂಶೀಯತೆ ಮತ್ತು ವಾತಾವರಣದಲ್ಲಿನ ಕೆಲವೊಂದು ಬದಲಾವಣೆಗಳ ಮಿಶ್ರಣದಿಂದ ಕಂಡುಬರುವುದು ಎಂದು ಕೆಲವು ಅಧ್ಯಯನಗಳು ಹೇಳಿವೆ. ಸ್ವಯಂ ನಿರೋಧಕ ಕಾಯಿಲೆಯು ಕೌಟುಂಬಿಕವಾಗಿ ನಿಮ್ಮಲ್ಲಿ ಇದ್ದರೆ ಆಗ ಈ ಪರಿಸ್ಥಿತಿಯು ಬರುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಸ್ಪಷ್ಟ ಕಾರಣ ಮಾತ್ರ ತಿಳಿದುಬಂದಿಲ್ಲ. ಧೂಮಪಾನದ ಅಭ್ಯಾಸವು ಇದಕ್ಕೆ ಕಾರಣವಾಗಿದೆ.

ಗ್ರೇವ್ಸ್ ಕಾಯಿಲೆಯ ಕೆಲವು ಅಪಾಯಗಳು

ಸಂಶೋಧನೆಗಳ ಪ್ರಕಾರ ಈ ಕಾಯಿಲೆಯು ಯಾರಿಗೆ ಬೇಕಿದ್ದರೂ ಬರಬಹುದು. ಕೆಲವೊಂದು ಅಂಶಗಳು ಈ ಕಾಯಿಲೆಯು ಬರುವ ಅಪಾಯವನ್ನು ಹೆಚ್ಚಿಸುವುದು. ಅವು ಈ ರೀತಿಯಾಗಿ ಇದೆ.
•ವಯಸ್ಸು
•ಕೌಟುಂಬಿಕ ಹಿನ್ನೆಲೆ
•ಲಿಂಗ
•ಭಾವನಾತ್ಮಕ ಅಥವಾ ದೈಹಿಕ ಒತ್ತಡ
•ಇತರ ಕೆಲವು ಸ್ವಯಂ ನಿರೋಧಕ ಕಾಯಿಲೆಗಳು
•ಗರ್ಭಧಾರಣೆ
•ಧೂಮಪಾನ

ಗ್ರೇವ್ಸ್ ಕಾಯಿಲೆಯ ತೊಡಕುಗಳು

ಈ ಸ್ವಯಂ ನಿರೋಧಕ ಕಾಯಿಲೆಯು ನಿಮ್ಮ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಗ್ರೇವ್ಸ್ ಕಾಯಿಲೆಯ ಕೆಲವೊಂದು ಗಂಭೀರ ಸಮಸ್ಯೆಗಳ ಬಗ್ಗೆ ನಾವು ಇಲ್ಲಿ ತಿಳಿಸಲಿದ್ದೇವೆ.
•ಗರ್ಭಧಾರಣೆಯ ಸಮಸ್ಯೆಯಾಗಿರುವಂತಹ ಗರ್ಭಪಾತ, ಅಕಾಲಿಕ ಹೆರಿಗೆ, ಭ್ರೂಣದ ಥೈರಾಯ್ಡ್ ಅಸಾಮಾನ್ಯ ಕ್ರಿಯೆ, ಹೆರಿಗೆ ವೇಳೆ ತಾಯಿಗೆ ಹೃದಯಾಘಾತ ಮತ್ತು ಪ್ರಿಕ್ಲಾಂಪ್ಸಿಯಾ.
•ಥೈರಾಯ್ಡ್ ಮಾರುತ(ಹೈಪರ್ ಥೈರಾಯ್ಡಿಸಮ್ ಹೆಚ್ಚಾಗುವುದು ಅಥವಾ ಥೈರೋಟಾಕ್ಸಿಕ್ ಸಮಸ್ಯೆಗಳು)
•ಹೃದಯದ ಸಮಸ್ಯೆ
•ಮೂಳೆಗಳಲ್ಲಿ ಬಿರುಕು(ಅಸ್ಥಿರಂಧ್ರತೆ)

ಗ್ರೇವ್ಸ್ ಕಾಯಿಲೆ ಪತ್ತೆ ಮಾಡುವುದು ಹೇಗೆ?

ವೈದ್ಯರು ನಿಮ್ಮ ದೈಹಿಕ ಪರೀಕ್ಷೆ ಮಾಡುವರು. ಈ ವೇಳೆ ಅವರು ಕಣ್ಣುಗಳಲ್ಲಿ ಯಾವುದೇ ಕಿರಿಕಿರಿ ಅಥವಾ ಚಾಚಿಕೊಂಡಿದೆಯಾ ಎಂದು ಪರೀಕ್ಷೆ ಮಾಡುವರು. ಥೈರಾಯ್ಡ್ ಗ್ರಂಥಿಯನ್ನು ಕೂಡ ಇದೇ ವೇಳೆ ಪರೀಕ್ಷೆ ಮಾಡಲಾಗುತ್ತದೆ. ಇದರೊಂದಿಗೆ ನಾಡಿಬಡಿತ ಮತ್ತು ರಕ್ತದೊತ್ತಡವನ್ನು ಪರೀಕ್ಷಿಸುವರು.
ಇದರ ಹೊರತಾಗಿ ವೈದ್ಯರು ಕೆಲವೊಂದು ರಕ್ತ ಪರೀಕ್ಷೆ ಮಾಡಿಸಲು ಸೂಚಿಸುವರು. ಇದರಿಂದ ಅವರು ಥೈರಾಯ್ಡ್ ಉತ್ತೇಜನಗೊಳಿಸುವ ಹಾರ್ಮೋನು ಮಟ್ಟವನ್ನು ಪರೀಕ್ಷೆ ಮಾಡಿಸಿಕೊಳ್ಳುವರು.
ನಿಮಗೆ ಈ ವೇಳೆ ವಿಕಿರಣ ಐಯೋಡಿನ್ ನೀಡಲಾಗುತ್ತದೆ. ಇದರಿಂದ ವಿಶೇಷ ಸ್ಕ್ಯಾನಿಂಗ್ ಕ್ಯಾಮರಾದ ಮೂಲಕ ಥೈರಾಯ್ಡ್ ಗ್ರಂಥಿಗಳು ಎಷ್ಟು ಪ್ರಮಾಣದಲ್ಲಿ ಐಯೋಡಿನ್ ಸ್ವೀಕರಿಸುತ್ತಿದೆ ಎಂದು ವೈದ್ಯರು ತಿಳಿದುಕೊಳ್ಳುವರು.
ಅಲ್ಟ್ರಾಸೌಂಡ್ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಥೈರಾಯ್ಡ್ ಗ್ರಂಥಿಯು ಹಿಗ್ಗಿದೆಯಾ ಎಂದು ತಿಳಿಯುವರು. ಇನ್ನು ಕೆಲವು ಪರೀಕ್ಷೆಯಾಗಿರುವ ಸಿಟಿ ಸ್ಕ್ಯಾನ್ ಮತ್ತು ಎಂಆರ್ ಐ ಸ್ಕ್ಯಾನ್ ಕೂಡ ಮಾಡಲಾಗುತ್ತದೆ.

ಗ್ರೇವ್ಸ್ ಕಾಯಿಲೆಗೆ ಚಿಕಿತ್ಸೆಗಳು

ಇದರ ಲಕ್ಷಣಗಳನ್ನು ತಡೆಯುವುದು ಮತ್ತು ಥೈರಾಯ್ಡ್ ಹಾರ್ಮೋನುಗಳ ಉತ್ಪತ್ತಿಯನ್ನು ಸಮತೋಲನದಲ್ಲಿ ಇಡುವುದು ಇದಕ್ಕೆ ಚಿಕಿತ್ಸೆಯ ಪ್ರಮುಖ ಅಂಶವಾಗಿದೆ. ದೇಹದಲ್ಲಿ ಹಾರ್ಮೋನು ಪ್ರಭಾವವನ್ನು ತಡೆಯುವುದು ಕೂಡ ಇದಕ್ಕೆ ಒಂದು ರೀತಿಯ ಚಿಕಿತ್ಸೆಯಾಗಿದೆ.
ಗ್ರೇವ್ಸ್ ಕಾಯಿಲೆಗೆ ಕೆಲವು ಚಿಕಿತ್ಸೆಗಳು ಈ ರೀತಿಯಾಗಿ ಇದೆ.
•ವಿಕಿರಣಶೀಲ ಐಯೋಡಿನ್ ಚಿಕಿತ್ಸೆ
•ಥೈರಾಯ್ಡ್ ವಿರೋಧಿ ಔಷಧಿಗಳು
•ಬೆಟಾ ಬ್ಲಾಕರ್ ಗಳು
•ಶಸ್ತ್ರಚಿಕಿತ್ಸೆ.

English summary

Grave's Disease: Symptoms, Causes, Diagnosis & Treatment

Grave's disease is also known as toxic diffuse goitre and an autoimmune disease that affects the thyroid. It causes the over production of thyroid hormones, making it the major cause of hyperthyroidism. One of the most common autoimmune condition, Grave's disease is commonly found in women and before the age of 40. It can affect your overall well-being.
X
Desktop Bottom Promotion