For Quick Alerts
ALLOW NOTIFICATIONS  
For Daily Alerts

ಕರುಳಿನ ಪರಾವಲಂಬಿ ಜೀವಿಗಳ ನಿವಾರಣೆಗೆ ನೈಸರ್ಗಿಕ ಆಹಾರಗಳು

|

ದೇಹದೊಳಗೆ ಕರುಳಿನಲ್ಲಿ ಪರಾವಲಂಬಿ ಜೀವಿಗಳು ಬೆಳೆಯಲು ಹಲವಾರು ರೀತಿಯ ಕಾರಣಗಳು ಇರಬಹುದು. ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ಪರಾವಲಂಬಿ ಜೀವಿಗಳು ಬೆಳೆಯಬಹುದು. ಪರಾವಲಂಬಿ ಜೀವಿಗಳು ಮನುಷ್ಯನ ದೇಹದೊಳಗೆ ಹೋಗುವುದು ಮತ್ತು ಆತ ಸೇವಿಸುವ ಆಹಾರ ಮತ್ತು ಬೇರೆ ದ್ರವಗಳಿಂದ ಜೀವಂತವಾಗಿರುವುದು. ಪರಾವಲಂಬಿ ಜೀವಿಗಳಿಂದಾಗಿ ಸಾಮಾನ್ಯದಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಜೀರ್ಣಕ್ರಿಯೆ ಸಮಸ್ಯೆಗಳು ದೀರ್ಘಕಾಲದ ತನಕ ಕಾಡಬಹುದು. ಸ್ವಚ್ಛತೆ ಇಲ್ಲದೆ ಇರುವುದು ಮತ್ತು ಅನಾರೋಗ್ಯಕರ ಆಹಾರ ಅಭ್ಯಾಸದಿಂದಾಗಿ ಈ ಸಮಸ್ಯೆಯು ಬರುವುದು.

ಕರುಳಿನಲ್ಲಿ ಪರಾವಲಂಬಿ ಜೀವಿಗಳು ಇರುವ ಲಕ್ಷಣಗಳು

ಕರುಳಿನಲ್ಲಿ ಪರಾವಲಂಬಿ ಜೀವಿಗಳು ಇರುವ ಲಕ್ಷಣಗಳು

*ಹೊಟ್ಟೆ ನೋವು

*ವಾಂತಿ

*ವಾಕರಿಕೆ

*ತೂಕ ಇಳಿಯುವುದು

*ಹೊಟ್ಟೆ ಸಮಸ್ಯೆ

*ನಿರ್ಜಲೀಕರಣ

*ಭೇದಿ

*ನಿಶ್ಯಕ್ತಿ ಮತ್ತು ಆಯಾಸ

*ಗ್ಯಾಸ್

*ಹೊಟ್ಟೆ ಉಬ್ಬರ

ಕರುಳಿನ ಪರಾವಲಂಬಿ ಜೀವಿಗಳ ನಿವಾರಣೆಗೆ ಕೆಲವು ಆಹಾರಗಳು

ಕರುಳಿನ ಪರಾವಲಂಬಿ ಜೀವಿಗಳ ನಿವಾರಣೆಗೆ ಕೆಲವು ಆಹಾರಗಳು

ಇಂತಹ ಪರಿಸ್ಥಿತಿ ನಿವಾರಣೆ ಮಾಡಲು ಕೆಲವೊಂದು ಮನೆಮದ್ದುಗಳು ತುಂಬಾ ಅದ್ಭುತವಾಗಿ ಕೆಲಸ ಮಾಡುವುದು. ಅದೇ ರೀತಿಯಾಗಿ ಕೆಲವೊಂದು ಆಹಾರ ಸೇವನೆಯಿಂದಲೂ ಕರುಳಿನ ಪರಾವಲಂಬಿ ಜೀವಿಗಳ ನಿವಾರಣೆ ಮಾಡಬಹುದು. ಕರುಳಿನಲ್ಲಿ ಪರಾವಲಂಬಿ ಜೀವಿಗಳು ಇದ್ದ ವೇಳೆ ಸೇವಿಸಬೇಕಾದ ಕೆಲವೊಂದು ಆಹಾರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಇದು ಪರಾವಲಂಬಿ ಬೆಳವಣಿಗೆ ತಡೆಯುವುದು ಮತ್ತು ಅದು ಬೆಳೆಯಲು ಯಾವುದೇ ವಾತಾವರಣ ನಿರ್ಮಾಣವಾಗದಂತೆ ಮಾಡುತ್ತದೆ.

Most Read: ಹೊಟ್ಟೆಯಲ್ಲಿರುವ ಪರಾವಲಂಬಿಗಳ ತಡೆಗಾಗಿ ನೈಸರ್ಗಿಕ ಪರಿಹಾರಗಳು

ಪಪ್ಪಾಯಿ ಬೀಜಗಳು

ಪಪ್ಪಾಯಿ ಬೀಜಗಳು

ಕರುಳಿನ ಪರಾವಲಂಬಿ ಜೀವಿಗಳ ನಿವಾರಣೆ ಮಾಡಲು ಪಪ್ಪಾಯಿ ಬೀಜಗಳು ತುಂಬಾ ಪರಿಣಾಮಕಾರಿ. ಒಣಗಿಸಿರುವ ಪಪ್ಪಾಯಿ ಬೀಜವನ್ನು ಜೇನುತುಪ್ಪದ ಜತೆಗೆ ಬೆರೆಸಿ ಸೇವಿಸಿದರೆ ಆಗ ಶೇ.77ರಷ್ಟು ಕರುಳಿನ ಪರಾವಲಂಬಿ ಜೀವಿಗಳು ಮಲದ ಮೂಲಕ ಹೊರಹೋಗಿರುವುದು ಅಧ್ಯಯನಗಳಿಂದ ಕಂಡುಕೊಳ್ಳಲಾಗಿದೆ. ಪಪ್ಪಾಯಿ ಬೀಜವು ತುಂಬಾ ಕಹಿ ಆಗಿರುವುದು. ಇದರಿಂದ ಕರುಳಿನ ಪರಾವಲಂಬಿ ಜೀವಿಗಳ ನಿವಾರಣೆ ಮಾಡಲು ಇದನ್ನು ಜೇನುತುಪ್ಪ ಹಾಕಿ ಸೇವಿಸಿ.

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜಗಳು ಜಂತುಹುಳು ನಿವಾರಣೆ ಮಾಡುವುದು. ಕುಂಬಳಕಾಯಿ ಬೀಜದಲ್ಲಿ ನಂಜುನಿರೋಧಕ ಗುಣವಿದೆ. ಇದರಲ್ಲಿ ಇರುವಂತಹ ಕುರ್ಕುಬಿಟಿನ್ ಎನ್ನುವ ಅಂಶವು ಜಂತುಹುಳುವಿನ ಪಾರ್ಶ್ವವಾಯುಗೆ ಒಳಗಾಗುವಂತೆ ಮಾಡುವುದು ಮತ್ತು ಅದು ಬದುಕುಳಿಯುವುದು ಕಷ್ಟವಾಗುವುದು. ಅಧ್ಯಯನಗಳ ಪ್ರಕಾರ ಕುಂಬಳಕಾಯಿ ಬೀಜವನ್ನು ಸಿಪ್ಪೆ ತೆಗೆದು ತಿಂದ ಶೇ.75ರಷ್ಟು ಜನರಲ್ಲಿ ಜಂತುಹುಳು ಮಲದ ಮೂಲಕವಾಗಿ ಹೊರಗೆ ಹೋಗಿದೆ.

ಬೇವಿನ ಎಲೆಗಳು

ಬೇವಿನ ಎಲೆಗಳು

ಬೇವಿನ ಎಲೆಗಳು ಹಲವಾರು ಸಮಸ್ಯೆ ನಿವಾರಣೆ ಮಾಡಲು ನೈಸರ್ಗಿಕ ಮದ್ದಾಗಿದೆ. ಇದು ಹೊಟ್ಟೆಯ ಆರೋಗ್ಯದಿಂದ ಹಿಡಿದು ಚರ್ಮದ ಆರೋಗ್ಯವನ್ನು ಕಾಪಾಡಲು ತುಂಬಾ ನೆರವಾಗುವುದು. ಹೊಟ್ಟೆಯಲ್ಲಿನ ಪರಾವಲಂಬಿ ಜೀವಿಗಳ ನಿವಾರಣೆ ಮಾಡಲು ಇದು ತುಂಬಾ ಪರಿಣಾಮಕಾರಿ. ಖಾಲಿ ಹೊಟ್ಟೆಯಲ್ಲಿ ಕೆಲವು ಬೇವಿನ ಎಲೆ ಜಗಿದರೆ ಅದು ತುಂಬಾ ಪರಿಣಾಮಕಾರಿ. ಇದು ಕೆಟ್ಟ ಬ್ಯಾಕ್ಟೀರಿಯಾ ತೆಗೆದುಹಾಕಿ, ಹೊಟ್ಟೆಯ ಆರೋಗ್ಯ ಕಾಪಾಡುವುದು.

ಬೆರ್ರಿಗಳು

ಬೆರ್ರಿಗಳು

ಪರಾವಲಂಬಿ ಜೀವಿಗಳ ನಿವಾರಣೆಗೆ ಬೆರ್ರಿ ತುಂಬಾ ರುಚಿಕರ ಮನೆಮದ್ದು. ಅಧ್ಯಯನಗಳು ಕಂಡುಕೊಂಡಿರುವ ಪ್ರಕಾರ ಪಾಲಿಫಿನಾಲ್ ಅಧಿಕವಾಗಿರುವಂತಹ ಬೆರ್ರಿಗಳು ಜಿ ಲಂಬಲಿಯಾವನ್ನು ಕೊಲ್ಲಲು ನೆರವಾಗುವುದು. ಸ್ಟ್ರಾಬೆರಿ, ಬ್ಲೂಬೆರ್ರಿ ಮತ್ತು ಇತರ ಕೆಲವೊಂದು ಬೆರ್ರಿಗಳನ್ನು ಬಳಸಿಕೊಳ್ಳಬಹುದು.

English summary

Foods to Intestinal Parasites

There are various factors which can contribute to intestinal parasites inside your body. Many unhealthy eating habits can lead to the development of parasites. Parasites infect a person's body and depend on the host for food and other requirements. Parasitic infection can cause illness varying from mild to severe. It can cause various digestive problems which may last longer. Poor sanitation and unhygienic eating habits are the major causes of parasitic infections.
Story first published: Wednesday, June 12, 2019, 13:18 [IST]
X
Desktop Bottom Promotion