For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್ ರೋಗಿಗಳು ಯಾವುದೇ ಅನುಮಾನವಿಲ್ಲದೆ ತಿನ್ನಬಹುದಾದ ಆರೋಗ್ಯಕರವಾದ ಆಹಾರಗಳು

|

"ಕ್ಯಾನ್ಸರ್" ಈ ಮಹಾಮಾರಿಯ ಹೆಸರು ಕೇಳಿದೊಡನೆಯೇ ಎದೆ ಝಲ್ ಎನ್ನುತ್ತದೆ . ಏಕೆಂದರೆ ಅದರ ಸ್ವರೂಪವೇ ಅಂತಹುದು . ನೆಂಟನಾಗಿ ಒಮ್ಮೆ ಪ್ರವೇಶಿಸಿತೆಂದರೆ ಯಮನಾಗಿ ಸ್ವರ್ಗಕ್ಕೋ ಇಲ್ಲ ಇಲ್ಲಿಯೇ ಸ್ವಲ್ಪ ನರಕ ತೋರಿಸಿ ಮಿಕ್ಕಂತಹ ಕಷ್ಟ ಕೊಡಲು ನೇರವಾಗಿ ನರಕಕ್ಕೇ ಕರೆದೊಯ್ಯಲು ಯಾವುದೇ ಸಂಕೋಚ ಪಡುವುದಿಲ್ಲ . ಕ್ಯಾನ್ಸರ್ ರೋಗವನ್ನು ಹೊಂದಿರುವವರ ಪಾಡನ್ನಂತೂ ಹೇಳಲೂ ಅಸಾಧ್ಯ . ಅವರ ಪ್ರತಿದಿನದ ಜೀವನ ಕ್ರಮ , ಆಹಾರ ಶೈಲಿ ಎಲ್ಲವೂ ನಿಜಕ್ಕೂ ನರಕ ಯಾತನೆಯೆ ಸರಿ .

ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಾಗಿ ಹಸಿವಾಗದಿರುವುದು ಮತ್ತು ಅವರ ಆಹಾರ ಕ್ರಮವನ್ನು ಮನೆಯ ಇತರ ಸಿಬ್ಬಂದಿ ಅತ್ಯಂತ ಜಾಗರೂಕರಾಗಿ ಗಮನಿಸಬೇಕಾಗಿರುವುದು ಅನಿವಾರ್ಯ . ಕಾಲಕಾಲಕ್ಕೆ ಅವರ ಚಿಕೆತ್ಸೆಗೆ ಮೊದಲು ಮತ್ತು ಚಿಕಿತ್ಸೆಯ ನಂತರ ಯಾವ ಯಾವ ಆಹಾರ ಕೊಡಬೇಕು ಎನ್ನುವುದು ಬಹಳ ಮಹತ್ವದ ಸಂಗತಿ . ಈ ಕೆಳಗೆ ನಾವು ಕ್ಯಾನ್ಸರ್ ರೋಗಿಗಳಿಗೆಂದೇ ಸೂಕ್ತವಾದ ಮತ್ತು ಸರಿಯಾದ ಆಹಾರಗಳನ್ನು ನಮ್ಮ ಕೈಲಾದ ಮಟ್ಟಿಗೆ ಪಟ್ಟಿ ಮಾಡಿದ್ದೇವೆ . ಮೊದಲಿಗೆ ಕ್ಯಾನ್ಸರ್ ರೋಗಿಗಳು ಯಾವ್ಯಾವ ಆಹಾರಗಳನ್ನು ತಿನ್ನಬಹುದು ಎಂಬ ಬಗ್ಗೆ ನೋಡೋಣ....

ತರಕಾರಿಗಳು (ಯಾವುದು ಸೂಕ್ತ )

ತರಕಾರಿಗಳು (ಯಾವುದು ಸೂಕ್ತ )

ಕ್ಯಾನ್ಸರ್ ರೋಗಿಗಳಿಗೆ ಪೂರಕವಾದ ತರಕಾರಿಗಳು ಯಾವುವು ?

ಟೊಮೇಟೊ , ಕುಂಬಳಕಾಯಿ , ಕ್ಯಾರಟ್ , ಹಸಿ ಬಟಾಣಿ ಮತ್ತು ಟರ್ನಿಪ್ ಗಳು . ಇವುಗಳಲ್ಲಿ ಅಧಿಕವಾದ ವಿಟಮಿನ್ ಗಳು ಮತ್ತು ಪ್ರೋಟೀನ್ ಅಂಶವಿರುತ್ತದೆ . ಇನ್ನು ಟೊಮೇಟೊ ಬಗ್ಗೆ ಹೇಳಬೇಕೆಂದರೆ ಪ್ರೋಸ್ಟೇಟ್ ಕ್ಯಾನ್ಸರ್ ರೋಗಿಗಳಿಗೆ ಹೇಳಿ ಮಾಡಿಸಿದ ಪೌಷ್ಟಿಕ ಆಹಾರ . ಕೋಸುಗಳಾದ ಎಲೆಕೋಸು , ಗಡ್ಡೆ ಕೋಸು ಮತ್ತು ಹೂ ಕೋಸುಗಳೂ ಕ್ಯಾನ್ಸರ್ ರೋಗಕ್ಕೆ ಒಳ್ಳೆಯ ಆಹಾರಗಳು ಎಂದು ಸಾಬೀತು ಪಡಿಸಿವೆ . ಏಕೆಂದರೆ ಇವುಗಳಲ್ಲಿ ಅಡಗಿರುವ ಸಸ್ಯ ರಾಸಾಯನಿಕಗಳು ಕ್ಯಾನ್ಸರ್ ರೋಗಿಗಳ ದೇಹದಲ್ಲಿನ ಕೆಟ್ಟ ಈಸ್ಟ್ರೋಜೆನ್ ಅನ್ನು ಒಳ್ಳೆಯ ಮತ್ತು ಉಪಯುಕ್ತ ಈಸ್ಟ್ರೋಜೆನ್ ಆಗಿ ಪರಿವರ್ತಿಸುತ್ತವೆ ಮತ್ತು ಕ್ಯಾನ್ಸರ್ ರೋಗ ಮರುಕಳಿಸದಂತೆ ತಡೆಯುತ್ತವೆ. ಕ್ಯಾನ್ಸರ್ ರೋಗಿಗಳು ತಿನ್ನಬಹುದಾದ ಹಣ್ಣುಗಳು..

Most Read: ಬಾಯಿಯ ಕ್ಯಾನ್ಸರ್‌ ನಿಯಂತ್ರಿಸುವ ಪವರ್ ಇಂತಹ ಆಹಾರಗಳಲ್ಲಿದೆ!

ಹಣ್ಣುಗಳು

ಹಣ್ಣುಗಳು

ಕಿತ್ತಳೆ ಹಣ್ಣು , ಬಾಳೆ ಹಣ್ಣು, ಕಿವಿ, ಪೀಚ್, ಸ್ಟ್ರಾಬೆರಿ, ಮಾವಿನ ಹಣ್ಣು ಮತ್ತು ಪೇರಳೆ ಹಣ್ಣುಗಳು ವಿಟಮಿನ್ ಮತ್ತು ಫೈಬರ್ ಅಂಶದಲ್ಲಿ ಮುಂದಿವೆ . ನೀವು ದಿನನಿತ್ಯ ಸೇವಿಸುವ ಆಹಾರದ ಜೊತೆಗೆ ಈ ಹಣ್ಣುಗಳನ್ನು ಸೇರಿಸುವುದರ ಜೊತೆಗೆ ಆವಕಾಡೊಗಳು, ಒಣದ್ರಾಕ್ಷಿ, ಸೀಬೆ ಹಣ್ಣು , ಏಪ್ರಿಕಾಟ್ ಮತ್ತು ಅಂಜೂರದ ಹಣ್ಣುಗಳು ನಿಮಗೆ ಆರೋಗ್ಯ ವೃದ್ಧಿಯ ಜೊತೆಗೆ ಶಕ್ತಿಯನ್ನೂ ಒದಗಿಸುತ್ತವೆ .

ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರಗಳು ಕ್ಯಾನ್ಸರ್ ರೋಗಿಗಳಿಗೆ ಉಪಯುಕ್ತ ಎಂದು ನಂಬಲಾಗಿದೆ

ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರಗಳು ಕ್ಯಾನ್ಸರ್ ರೋಗಿಗಳಿಗೆ ಉಪಯುಕ್ತ ಎಂದು ನಂಬಲಾಗಿದೆ

ಒಳ್ಳೆಯ ಕಾರ್ಬೋಹೈಡ್ರೇಟ್ ಅಂಶ ಹೊಂದಿರುವ ಆಹಾರಗಳೆಂದರೆ , ಅನ್ನ , ಬ್ರೆಡ್ , ನೂಡಲ್ಸ್ , ಚಪಾತಿ , ಪಾಸ್ಟಾ , ಓಟ್ಸ್ , ಜೋಳ , ಆಲೂಗಡ್ಡೆ , ಹಾಲಿನ ಉತ್ಪನ್ನಗಳು ಮತ್ತು ಬೀನ್ಸ್ . ಜೇನುತುಪ್ಪಕ್ಕೆ ಆಂಟಿ ಬ್ಯಾಕ್ಟೇರಿಯಲ್ ಮತ್ತು ಆಂಟಿ ಫಂಗಲ್ ಗುಣ ಲಕ್ಷಣಗಳಿರುವುದರಿಂದ ಕ್ಯಾನ್ಸರ್ ಸೋಂಕು ಇನ್ನಿತರ ಭಾಗಗಳಿಗೆ ಹರಡುವುದನ್ನು ತಡೆಗಟ್ಟುತ್ತದೆ. ಆದರೆ ಜೇನುತುಪ್ಪವನ್ನು ಆದಷ್ಟು ಮಿತವಾಗಿ ಬಳಸಿ.

Most Read:ತುಟಿಗಳ ಕ್ಯಾನ್ಸರ್ ವಿರುದ್ಧ ಹೋರಾಡುವ ನೈಸರ್ಗಿಕ ಆಹಾರಗಳು

ಸದಾ ಪ್ರೋಟೀನ್ ಅಂಶ ಹೆಚ್ಚಿರುವ ಆಹಾರವನ್ನೇ ಬಳಸಿ

ಸದಾ ಪ್ರೋಟೀನ್ ಅಂಶ ಹೆಚ್ಚಿರುವ ಆಹಾರವನ್ನೇ ಬಳಸಿ

ಪ್ರೋಟೀನ್ ಅಂಶ ಹೆಚ್ಚಾಗಿರುವ ಆಹಾರಗಳೆಂದರೆ ಡೈರಿ ಉತ್ಪನ್ನಗಳು , ಬೀಜಗಳು , ಒಣಗಿದ ಬೀನ್ಸ್, ಕಡಲೆ, ಮತ್ತು ಮಾಂಸಾಹಾರಿಗಳಾದರೆ ಮಾಂಸ ,ಮೀನು, ಕೋಳಿ ಮತ್ತು ಮೊಟ್ಟೆ . ಪ್ರೋಸ್ಟೇಟ್ ಕ್ಯಾನ್ಸರ್ ರೋಗಿಗಳಿಗೆ ಇವುಗಳು ಉಪಯುಕ್ತ .

ಈಗ ಕ್ಯಾನ್ಸರ್ ರೋಗಿಗಳು ಯಾವ್ಯಾವ ಆಹಾರಗಳನ್ನು ತಿನ್ನಬಾರದು ಎಂಬ ಬಗ್ಗೆ ನೋಡೋಣ

ಈಗ ಕ್ಯಾನ್ಸರ್ ರೋಗಿಗಳು ಯಾವ್ಯಾವ ಆಹಾರಗಳನ್ನು ತಿನ್ನಬಾರದು ಎಂಬ ಬಗ್ಗೆ ನೋಡೋಣ

ಈ ಆಹಾರಗಳು ನಿಜಕ್ಕೂ ಕ್ಯಾನ್ಸರ್ ರೋಗಿಗಳಿಗೆ ಮಾರಕ . ಅವುಗಳೆಂದರೆ ಎಣ್ಣೆಯಲ್ಲಿ ಕರಿದ ತಿಂಡಿಗಳು , ಅತಿಯಾದ ಉಪ್ಪು ಮತ್ತು ಸಕ್ಕರೆಯ ಸೇವನೆ , ಸಂಸ್ಕರಿಸಿದಂತಹ ಆಹಾರ ಮತ್ತು ಬೇಯಿಸದೆ ಇರುವ ಮಾಂಸ . ಆಲ್ಕೋಹಾಲ್ ಮತ್ತು ನೈಟ್ರೇಟ್ ಅಂಶವಿರುವ ಉಪ್ಪಿನಕಾಯಿ ಮತ್ತು ಜಾಮ್ ಗಳನ್ನು ಹತ್ತಿರಕ್ಕೆ ಸೇರಿಸದಿರುವುದು ಬಹಳ ಒಳ್ಳೆಯದು .

ವಿಶೇಷ ಸೂಚನೆ :

ವಿಶೇಷ ಸೂಚನೆ :

ಈ ಮೇಲಿನ ಮಾಹಿತಿ ಎಲ್ಲರೂ ಅನುಸರಿಸುವ ಆಹಾರಗಳ ಸಾಮಾನ್ಯ ಮಾಹಿತಿಯಾಗಿದೆ . ಕ್ಯಾನ್ಸರ್ ರೋಗಿಗಳು ನಿಮ್ಮ ಪ್ರತಿ ನಿತ್ಯದ ಆಹಾರ ಬದಲಾವಣೆಗೆ ನಿಮ್ಮ ವೈದ್ಯರನ್ನು ಕೇಳಿ ತಿಳಿದು ನಂತರ ಈ ಆಹಾರ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕೆಂದು ನಮ್ಮ ವಿನಂತಿ

English summary

Foods cancer patients can eat without any guilt

Dealing with a fatal disease like cancer definitely requires a lot of precautions. Health experts suggest that as a cancer patient loses appetite, it’s extremely important to eat healthy and also at regular intervals. They also advise eating the healthy and right food before, after and during the treatment. Here we have listed the right foods that are good for cancer patients.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X