Latest Updates
-
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಬಾಯಿಯ ದುರ್ಗಂಧವನ್ನು ಹೋಗಲಾಡಿಸುವ ನೈಸರ್ಗಿಕವಾದ ಮೌತ್ ವಾಶ್
ಮನುಷ್ಯನ ಇಡೀ ದೇಹದ ಆರೋಗ್ಯ ನಿಂತಿರುವುದು ಆತ ತೆಗೆದುಕೊಳ್ಳುವ ಆಹಾರದ ಮೇಲೆ . ಆಹಾರದಲ್ಲಿ ಕೊಂಚ ಏರುಪೇರಾದರೂ ಸಂಪೂರ್ಣ ದೇಹ ನಿತ್ರಾಣಗೊಳ್ಳುತ್ತದೆ . ಹಾಗಾಗಿ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕಾದರೆ ಮೊದಲು ಶುಚಿ ರುಚಿಯಾದ ಆಹಾರವನ್ನು ಆಯ್ದುಕೊಳ್ಳುವ ಮೊದಲು ಬಾಯಿಯ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಬಾಯಿ ದುರ್ನಾತದಿಂದ ಕೂಡಿ ಹಲ್ಲು ವಸಡಿನ ಸಮಸ್ಯೆಗಳು ಶುರುವಾಗುತ್ತವೆ .

ಒಮ್ಮೆ ನಿಮ್ಮ ಬಾಲ್ಯವನ್ನು ನೆನೆಸಿಕೊಳ್ಳಿ . ಚಿಕ್ಕ ಹುಡುಗರಾಗಿದ್ದಾಗ ದಿನಕ್ಕೆ ಎರಡು ಬಾರಿಯಂತೆ ಬ್ರಷ್ ಮಾಡುತ್ತಿದ್ದೆವು . ಈಗಲೂ ಕೆಲವರು ಅದನ್ನು ಪಾಲಿಸಿಕೊಂಡು ಬಂದಿದ್ದಾರೆ . ಆದರೆ ಕೇವಲ ಬ್ರಷ್ ಮಾಡಿ ಹಲ್ಲುಗಳನ್ನು ಶುಚಿಯಾಗಿಟ್ಟುಕೊಂಡರೆ ಬಾಯಿ ಪೂರ್ತಿ ಶುಚಿಯಾಗಿರಲು ಸಾಧ್ಯವಿಲ್ಲ . ಹಲ್ಲುಗಳ ಸಂಧುಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಅಲ್ಪ ಸ್ವಲ್ಪ ಆಹಾರದ ಉಳಿಕೆಗಳು ಬಾಯಿಯ ಆರೋಗ್ಯವನ್ನು ಹಾಳು ಮಾಡುತ್ತವೆ . ಅದಕ್ಕೆ ಫ್ಲೋಸ್ಸಿಂಗ್ ( ಹಲ್ಲುಗಳ ಸಂಧುಗಳಲ್ಲಿ ದಾರದಿಂದ ಆಡಿಸಿ ಶುಚಿ ಮಾಡುವುದು ) ಮತ್ತು ಶುಚಿಯಾದ ನೀರಿನಿಂದ ಬಾಯಿ ಮುಕ್ಕಳಿಸಿ ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು. ನಿಮ್ಮ ಬಾಯಿಯ ಶುಚಿತ್ವವನ್ನು ಟೂತ್ ಪೇಸ್ಟ್ ಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಮನೆಯಲ್ಲೇ ಸಿಗುವ ಅನೇಕ ವಸ್ತುಗಳಿಂದ ಮಿಶ್ರಣವನ್ನು ತಯಾರು ಮಾಡಿ ಉಪಯೋಗಿಸಿ ಹೇಗೆಲ್ಲಾ ಸದಾ ಆರೋಗ್ಯವಾಗಿ ಇಟ್ಟುಕೊಳ್ಳಬಹುದು ಎಂದು ನೋಡೋಣ...

ಬೇಕಿಂಗ್ ಸೋಡಾ
ತಯಾರಿಸಲು ಬೇಕಾದ ಪದಾರ್ಥಗಳು :
* 1 / 2 ಟೀ ಚಮಚ ಬೇಕಿಂಗ್ ಸೋಡಾ
* 1 / 2 ಗ್ಲಾಸ್ ಬಿಸಿ ನೀರು
ತಯಾರು ಮಾಡುವ ವಿಧಾನ
ಬಿಸಿ ನೀರು ತೆಗೆದುಕೊಂಡು ಅದಕ್ಕೆ ಸೋಡಾ ಹಾಕಿ ಚೆನ್ನಾಗಿ ಕಲಸಿ ಅದನ್ನು ನೀವು ಬ್ರಷ್ ಮಾಡಿದ ನಂತರ ಈ ಮಿಶ್ರಣದಿಂದ ಬಾಯಿ ಮುಕ್ಕಳಿಸಿ .
ಇದರಿಂದಾಗುವ ಉಪಯೋಗ :
ಬೇಕಿಂಗ್ ಸೋಡಾ ಬಾಯಿಯ ದುರ್ವಾಸನೆಯನ್ನು ದೂರ ಮಾಡುತ್ತದೆ ಮತ್ತು ಓರಲ್ ಬ್ಯಾಕ್ಟೇರಿಯಾ ಗಳನ್ನೂ ನಾಶ ಪಡಿಸುತ್ತದೆ . ಇದು ವೈಜ್ಞಾನಿಕವಾಗಿ ಅಲ್ಕಲೈನ್ ಸ್ವಭಾವ ಹೊಂದಿದ್ದು ಬಾಯಿಯ ಲಾಲಾರಸದ ಪಿ ಹೆಚ್ ಜಾಸ್ತಿ ಮಾಡುತ್ತದೆ.

ವರ್ಜಿನ್ ತೆಂಗಿನ ಎಣ್ಣೆ
ಒಂದು ಟೀ ಸ್ಪೂನ್ ವರ್ಜಿನ್ ತೆಂಗಿನ ಎಣ್ಣೆ ತೆಗೆದುಕೊಂಡು ಬಾಯಿಯಲ್ಲಿ ಹಾಕಿ 10 ರಿಂದ 15 ನಿಮಿಷ ಸ್ವಿಶ್ ಮಾಡಿ . ನಂತರ ಅದನ್ನು ಆಚೆಗೆ ಉಗಿದು ಶುದ್ಧವಾದ ನೀರಿನಲ್ಲಿ ಬಾಯಿ ತೊಳೆದುಕೊಳ್ಳಿ .
ಇದರಿಂದಾಗುವ ಉಪಯೋಗ
ಈ ಪ್ರಕ್ರಿಯೆಯನ್ನು ಆಯಿಲ್ ಪುಲ್ಲಿಂಗ್ ಎಂದು ಕರೆಯುತ್ತಾರೆ .ತೆಂಗಿನ ಎಣ್ಣೆ ಕೇವಲ ನಿಮ್ಮ ಬಾಯಿಯ ಆರೋಗ್ಯವನ್ನು ಮಾತ್ರ ಕಾಪಾಡುವುದಲ್ಲದೆ ನಿಮ್ಮ ದೇಹದ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ . ನಿಮ್ಮ ಬಾಯಿಯಲ್ಲಿ ಪ್ಲೇಕ್ ಉಂಟಾಗುವುದನ್ನು ತಡೆಗಟ್ಟುತ್ತದೆ .

ಉಪ್ಪು
ತಯಾರು ಮಾಡಲು ಬೇಕಾಗಿರುವ ವಸ್ತುಗಳು :
* 1 / 2 ಟೀ ಸ್ಪೂನ್ ಪುಡಿ ಉಪ್ಪು
* 1 / 2 ಗ್ಲಾಸ್ ಬಿಸಿ ನೀರು
ತಯಾರು ಮಾಡುವ ವಿಧಾನ :
ನಿಮ್ಮ ಬಳಿಯಿರುವ ಪುಡಿ ಉಪ್ಪನ್ನು ಬಿಸಿ ನೀರಿಗೆ ಹಾಕಿ ಚೆನ್ನಾಗಿ ಟಿಪಾಯಿಸಿ . ನಿಮ್ಮ ಪ್ರತಿದಿನದ ಊಟ ಆದ ಮೇಲೆ ಈ ನೀರಿನಿಂದ ಬಾಯಿ ಮುಕ್ಕಳಿಸುವ ಅಭ್ಯಾಸ ಮಾಡಿಕೊಳ್ಳಿ.
ಇದರಿಂದ ನಿಮಗೇನು ಉಪಯೋಗ ?
ಮಾರುಕಟ್ಟೆಯಲ್ಲಿ ಹಣ ಸುರಿದು ನೀವು ತೆಗೆದುಕೊಳ್ಳುವ ಇತರೆ ಮೌತ್ ವಾಶ್ ಗಳಿಗಿಂತ 10 ಪಟ್ಟು ಪರಿಣಾಮಕಾರಿ . ಹಲ್ಲಿನ ಮತ್ತು ವಸಡಿನ ಸಮಸ್ಯೆಗಳನ್ನು ದೂರ ಮಾಡುವುದರ ಜೊತೆಗೆ ಪ್ಲೇಕ್ ಉಂಟಾಗುವುದನ್ನು ತಡೆಗಟ್ಟುತ್ತದೆ .

ಅಲೋವೆರಾ ಜ್ಯೂಸ್
ತಯಾರು ಮಾಡಲು ಬೇಕಾಗಿರುವ ವಸ್ತುಗಳು
* 1 / 2 ಕಪ್ ಅಲೋವೆರಾ ಜ್ಯೂಸು
* 1 / 2 ಕಪ್ ಡಿಸ್ಟಿಲ್ ಮಾಡಿರುವ ನೀರು
ಇದರಿಂದ ಏನು ಮಾಡಬೇಕು ?
ಅಲೋವೆರಾ ಜ್ಯೂಸು ಅನ್ನು ತಯಾರಿಸಿಕೊಂಡು ಅದಕ್ಕೆ ಡಿಸ್ಟಿಲ್ ಮಾಡಿರುವ ನೀರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನೀವು ಪ್ರತಿ ಬಾರಿ ಬ್ರಷ್ ಮಾಡಿದ ಮೇಲೆ ಬಾಯಿ ಮುಕ್ಕಳಿಸಿ ನಂತರ ಬಾಯಿ ತೊಳೆದುಕೊಳ್ಳಿ .
ಇದರಿಂದಾಗುವ ಉಪಯೋಗ:
ಬಾಯಿಯ ವಸಡಿನ ಸೋರುವಿಕೆಯನ್ನು ಆರಂಭದಲ್ಲೇ ತಡೆಗಟ್ಟುತ್ತದೆ . ಪ್ಲೇಕ್ ಉಂಟಾಗುವುದನ್ನು ಸಹ ತಡೆಗಟ್ಟುತ್ತದೆ.

ದಾಲ್ಚಿನ್ನಿ ( ಚೆಕ್ಕೆ ) ಮತ್ತು ಲವಂಗದ ಎಣ್ಣೆ
ಮಿಶ್ರಣ ತಯಾರಿಸಲು ಏನೇನು ಬೇಕು ?
* 1 ಕಪ್ ಡಿಸ್ಟಿಲ್ ಮಾಡಿರುವ ನೀರು
* 10 ತೊಟ್ಟು ಲವಂಗದ ಎಣ್ಣೆ
* 10 ತೊಟ್ಟು ದಾಲ್ಚಿನ್ನಿ ಎಣ್ಣೆ
ಹೇಗೆ ತಯಾರು ಮಾಡುವುದು ?
ಕಪ್ ಡಿಸ್ಟಿಲ್ ಮಾಡಿರುವ ನೀರಿಗೆ ಈ ಲವಂಗದ ಎಣ್ಣೆ ಮತ್ತು ದಾಲ್ಚಿನ್ನಿ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ . ಇದು ಬಹಳ ದಿನಗಳ ಕಾಲ ಕೆಡದೆ ಇರುವುದರಿಂದ ವರ್ಷಗಳ ಕಾಲ ನೀವು ಇದನ್ನು ಸ್ಟೋರ್ ಮಾಡಿಟ್ಟುಕೊಳ್ಳಬಹುದು ಮತ್ತು ನಿಮಗೆ ಯಾವಾಗ ಬೇಕೋ ಆವಾಗ ಉಪಯೋಗಿಸಬಹುದು .
ಇದರಿಂದಾಗುವ ಉಪಯೋಗ
ಇದು ಬಾಯಿಯ ದುರ್ವಾಸನೆಯನ್ನು ದೂರ ಮಾಡುತ್ತದೆ ಮತ್ತು ಹುಳುಕು ಹಲ್ಲಿನ ಸಮಸ್ಯೆಯನ್ನು ದೂರ ಮಾಡುತ್ತದೆ .



Click it and Unblock the Notifications