For Quick Alerts
ALLOW NOTIFICATIONS  
For Daily Alerts

ಇ.ಕೊಲೈ: ಈ ಕೊಲೆಗಾರ ಬ್ಯಾಕ್ಟೀರಿಯಾದ ಬಗ್ಗೆ ಮುಂಚೆಯೇ ತಿಳಿದ್ದರೆ ಎಲ್ಲರಿಗೂ ಒಳ್ಳೆಯದು!

|

Escherichia coli (E. coli) ಎಶರೀಕಿಯಾ ಕೊಲೈ ಅಥವಾ ಇ.ಕೊಲೈ ಎಂಬ ಹೆಸರು ಒಂದು ಬ್ಯಾಕ್ಟೀರಿಯಾದ್ದಾಗಿದೆ. ಈ ಏಕಜೀವಕೋಶ ಜೀವಿ ಕರುಳಿನಲ್ಲಿ ವಾಸಿಸುತ್ತದೆ. ಈ ಬ್ಯಾಕ್ಟೀರಿಯಾ ಪ್ರಾಣಿಗಳ ಮತ್ತು ಮನುಷ್ಟರಿಗೆ ಸಮಾನವಾಗಿ ಬಾಧಿಸಬಲ್ಲುದು. ಆದರೆ ಈ ಹೆಸರು ಆ ಬ್ಯಾಕ್ಟೀರಿಯಾದ ವರ್ಗವಾಗಿದ್ದು ಇದರೊಳಗೆ ಹಲವಾರು ಪ್ರಬೇಧಗಳಿವೆ ಹಾಗೂ ಓರ್ವರಲ್ಲಿ ಒಂದಕ್ಕಿಂತ ಹೆಚ್ಚು ಬಗೆಯ ಬ್ಯಾಕ್ಟೀರಿಯಾಗಳು ಏಕಕಾಲದಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಎಲ್ಲಾ ಬ್ಯಾಕ್ಟೀರಿಯಾಗಳು ಕಾಯಿಲೆ ತರುವುದಿಲ್ಲ, ಇವುಗಳಲ್ಲಿ ಕೆಲವು ಮಾತ್ರ ಉಂಡ ಮನೆಗೆ ದ್ರೋಹ ಬಗೆಯುವ ಕುತಂತ್ರಿಗಳಾಗಿರುತ್ತವೆ ಹಾಗೂ ಇವುಗಳಿಂದಲೇ ಕಾಯಿಲೆ ಆಗಮಿಸುತ್ತದೆ. ಈ ಬ್ಯಾಕ್ಟೀರಿಯಾಗಳು ಮಾಂಸಾಹಾರ, ಹಣ್ಣುಗಳು, ತರಕಾರಿಗಳು ಅಥವಾ ನೀರಿನಿಂದಲೂ ರೋಗಿಯ ಹೊಟ್ಟೆ ಸೇರಬಹುದು ಹಾಗೂ ಒಂದು ವೇಳೆ ಇದರಲ್ಲಿ ಕಾಯಿಲೆ ತರುವ ಪ್ರಬೇಧವಿದ್ದರೆ ಇದು ಖಂಡಿತವಾಗಿಯೂ ಕಾಯಿಲೆ ತರುತ್ತದೆ.

ಈ ಬ್ಯಾಕ್ಟೀರಿಯಾದ ವಿಶೇಷತೆ ಏನೆಂದರೆ ಒಮ್ಮೆ ಕರುಳಿಗೆ ಪ್ರವೇಶ ಪಡೆದ ಬಳಿಕ ಅಗತ್ಯಪ್ರಮಾಣದಲ್ಲಿ ಸಂಖ್ಯೆ ವೃದ್ದಿಯಾಗುವವರೆಗೂ ಯಾವುದೇ ಆಕ್ರಮಣ ಮಾಡದೇ ಬಲಾಢ್ಯ ಸಂಖ್ಯೆ ಪಡೆದ ಬಳಿಕ ಏಕಾಏಕಿ ಧಾಳಿ ಎಸಗುತ್ತದೆ ಹಾಗೂ ಇದರ ಪರಿಣಾಮವಾಗಿ ಜೀರ್ಣಕ್ರಿಯೆ ಏರುಪೇರಾಗುತ್ತದೆ. ಇದು ಹಲವಾರು ದಿನಗಳವರೆಗೆ ಮುಂದುವರೆಯಬಹುದು. ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕೆಲವೇ ದಿನಗಳಲ್ಲಿ ಈ ಬ್ಯಾಕ್ಟೀರಿಯಾಕ್ಕೆ ಸೂಕ್ತ ನಿರೋಧಕ ವ್ಯವಸ್ಥೆಯನ್ನು ಏರ್ಪಡಿಸಿಕೊಳ್ಳುವ ಮೂಲಕ ಈ ಧಾಳಿಯನ್ನು ಎದುರಿಸಿ ಹಿಮ್ಮೆಟ್ಟಿಸುತ್ತದೆ. ಅಪರೂಪದಲ್ಲಿ ಕೆಲವರಿಗೆ ಮಾತ್ರ ಇದು ಮಾರಣಾಂತಿಕ ಹಂತ ತಲುಪಬಹುದು.

ಈ ಬ್ಯಾಕ್ಟೀರಿಯಾ ಹೇಗೆ ಹರಡುತ್ತದೆ?

ಈ ಬ್ಯಾಕ್ಟೀರಿಯಾ ಹೇಗೆ ಹರಡುತ್ತದೆ?

ಸಾಮಾನ್ಯವಾಗಿ ಹುಲ್ಲು ಮೇಯುವ ಜಾನುವಾರುಗಳಲ್ಲಿ ಇದು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ದನ ಮತ್ತು ಎಮ್ಮೆಗಳಲ್ಲಿ ಅತಿ ಹೆಚ್ಚಾಗಿ,ಇದರ ಬಳಿಕ ಹಂದಿ, ಕುರಿ ಮತ್ತು ಕೋಳಿಗಳಲ್ಲಿಯೂ ಕಾಣಿಸಿಕೊಳ್ಳಬಹುದು. ಆದರೆ ಹುಲ್ಲು ಮೇಯುವ ಸಸ್ತನಿಗಳ ಜೀರ್ಣಾಂಗಗಳು ಮನುಷ್ಯರಿಗಿಂತಲೂ ಹೆಚ್ಚು ಪ್ರಬಲವಾದುದರಿಂದ ಈ ಬ್ಯಾಕ್ಟೀರಿಯಾಗಳು ಹೆಚ್ಚಿನ ಸೋಂಕು ನೀಡಲು ಸಾಧ್ಯವಾಗದೇ ಇವುಗಳ ಉಚ್ಛಿಷ್ಟದಲ್ಲಿ ಹೊರಬೀಳುತ್ತವೆ. ಇದರ ದ್ರವ ಬೆರೆತ ನೀರನ್ನು ಕುಡಿದವರ ಹೊಟ್ಟೆಗೆ ಈ ಬ್ಯಾಕ್ಟೀರಿಯಾಗಳು ಸಂತೋಷದಿಂದ ದಾಟಿಕೊಳ್ಳುತ್ತವೆ. ಅಲ್ಲದೇ ಈ ಪ್ರಾಣಿಗಳ ಮಾಂಸದಲ್ಲಿಯೂ ಕಾಣಿಸಿಕೊಳ್ಳಬಹುದು. ಈ ಮಾಂಸವನ್ನು ಪೂರ್ಣವಾಗಿ ಬೇಯಿಸದೇ ಸೇವಿಸಿದರೆ (ಇದೇ ಕಾರಣಕ್ಕೆ ಹಸಿಮಾಂಸವನ್ನೆಂದೂ ತಿನ್ನಬಾರದು) ಈ ಬ್ಯಾಕ್ಟೀರಿಯಾ ಹೊಟ್ಟೆಗೆ ಆಗಮಿಸಬಹುದು. ಅಲ್ಲದೇ ಸ್ವಚ್ಛತೆಗೆ ಆದ್ಯತೆ ನೀಡದ ವ್ಯಕ್ತಿಗಳಲ್ಲಿಯೂ ಈ ಬ್ಯಾಕ್ಟೀರಿಯಾಗಳು ಸುಲಭವಾಗಿ ಆವರಿಸಬಹುದು. ಇದೇ ಕಾರಣಕ್ಕೆ ಹೊರಗೆ ಆಡುವ ಮಕ್ಕಳಿಗೆ ಈ ಸೋಂಕು ತಗಲುವ ಸಾಧ್ಯತೆ ಹೆಚ್ಚು.

ಸೋಂಕು ತಗಲಿರುವ ಲಕ್ಷಣಗಳೇನು?

ಸೋಂಕು ತಗಲಿರುವ ಲಕ್ಷಣಗಳೇನು?

ಪ್ರಾರಂಭದಲ್ಲಿ ಕೆಳಹೊಟ್ಟೆಯಲ್ಲಿ ಸೆಡೆತ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಕ್ರಮೇಣ ವಾಕರಿಕೆ, ವಾಂತಿ ಮತ್ತು ಅತಿಸಾರ ಎದುರಾಗುತ್ತದೆ. ಮಲದಲ್ಲಿ ರಕ್ತಬೆರೆತ ನೀರು ಅಪಾರವಾಗಿ ಹರಿಯಬಹುದು. ಅಪರೂಪದಲ್ಲಿ ರೋಗಿಗೆ ಜ್ವರ ಮತ್ತು ನಡುಕವೂ ಕಾಣಿಸಿಕೊಳ್ಳಬಹುದು. ಕೆಲವು ಪ್ರಕರಣಗಳಲ್ಲಿ ಈ ಸೋಂಕು ವಿಪರೀತವಾಗಿ ಮೂತ್ರಪಿಂಡದ ವೈಫಲ್ಯ, ದೇಹ ಸ್ಥಗಿತತೆ, ಹೃದಯಸ್ತಂಭನ ಮೊದಲಾದವುಗಳಿಗೆ ಕಾರಣವಾಗಿ ಮಾರಣಾಂತಿಕವಾಗಬಹುದು.

Most Read: ವೈರಿಗಳಂತೆ ಕಾಡುವ ಬ್ಯಾಕ್ಟೀರಿಯಗಳ ಇತಿಹಾಸ ಕೆಣಕಿದಾಗ...

ಇದರ ಚಿಕಿತ್ಸೆ ಹೇಗೆ?

ಇದರ ಚಿಕಿತ್ಸೆ ಹೇಗೆ?

ಈ ಕೊಲೈ ಒಂದು ಪ್ರಬಲ ಬ್ಯಾಕ್ಟೀರಿಯಾವಾಗಿದ್ದು ಇದಕ್ಕೆ ಸ್ಪಷ್ಟವಾದ ಚಿಕಿತ್ಸೆ ಲಭ್ಯವಿಲ್ಲ. ಸಾಮಾನ್ಯವಾಗಿ ಈ ಸೋಂಕನ್ನು ನಮ್ಮ ದೇಹದ ರೋಗ ನಿರೋಧಕ ಶಕ್ತಿಯೇ ಕೆಲವು ದಿನಗಳಲ್ಲಿ ನಿವಾರಿಸುವ ಕಾರಣ ಈ ಸೋಂಕು ಉಲ್ಬಣಗೊಳ್ಳದೇ ತನ್ನಿಂತಾನೇ ಕಡಿಮೆಯಾಗುತ್ತದೆ. ಆದರೆ ಈ ಅವಧಿಯಲ್ಲಿ ನೀವು ಸಾಕಷ್ಟು ದ್ರವಾಹಾರವನ್ನು ಸೇವಿಸಬೇಕು ಹಾಗೂ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಒಂದು ವೇಳೆ ಈ ಸೂಚನೆಗಳು ಕಡಿಮೆಯಾಗದೇ ಮುಂದುವರೆದರೆ ವೈದ್ಯರ ನೆರವನ್ನು ಪಡೆಯಬೇಕು.

ಈ ಬ್ಯಾಕ್ಟೀರಿಯಾದ ಸೋಂಕಿನಿಂದ ರಕ್ಷಿಸಿಕೊಳ್ಳುವುದು ಹೇಗೆ?

ಈ ಬ್ಯಾಕ್ಟೀರಿಯಾದ ಸೋಂಕಿನಿಂದ ರಕ್ಷಿಸಿಕೊಳ್ಳುವುದು ಹೇಗೆ?

ಈ ಪ್ರಶ್ನೆಗೆ ನೇರವಾದ ಉತ್ತರವೆಂದರೆ ನೀವು ಸೇವಿಸುವ ಎಲ್ಲಾ ಅಹಾರಗಳನ್ನು ಚೆನ್ನಾಗಿ ಬೇಯಿಸಿಯೇ ಸೇವಿಸಬೇಕು. ಸೋಂಕಿಗೆ ಒಳಗಾದವರಲ್ಲಿ ಹೆಚ್ಚಿನವರಿಗೆ ಸರಿಯಾಗಿ ಬೇಯಿಸದ ಆಹಾರ ಸೇವನೆಯೇ ಕಾರಣವಾಗಿದೆ. ಈ ಬ್ಯಾಕ್ಟೀರಿಯಾ ಕುದಿಯುವ ನೀರಿನಲ್ಲಿ ಸಾಯುತ್ತದೆ. ಅಲ್ಲದೇ ಕರುಳಿಗೆ ಮಾರಕವಾಗಿರುವಇ.ಕೊಲೈ ಸಹಿತ ಇತರ ಎಲ್ಲಾ ಬ್ಯಾಕ್ಟೀರಿಯಾಗಳನ್ನೂ ಈ ವಿಧಾನದಿಂದ ಕೊಂದು ಸೋಂಕಿನಿಂದ ರಕ್ಷಣೆ ಪಡೆಯಬಹುದು.

ನೀವು ಸೇವಿಸುವ ಆಹಾರದ ಬಗ್ಗೆ ಮಾಹಿತಿ ಪಡೆಯಿರಿ

ನೀವು ಸೇವಿಸುವ ಆಹಾರದ ಬಗ್ಗೆ ಮಾಹಿತಿ ಪಡೆಯಿರಿ

ಒಂದು ವೇಳೆ ನೀವು ಸೇವಿಸುತ್ತಿರುವ ಮಾಂಸದ ತುಂಡನ್ನು ಅಡ್ಡಲಾಗಿ ಕತ್ತರಿಸಿದಾಗ ಇದರ ಕೇಂದ್ರಭಾಗ ಇನ್ನೂ ಕೊಂಚವಾದರೂ ಗುಲಾಬಿ ಬಣ್ಣ ಹೊಂದಿದ್ದರೆ ಇದು ಇನ್ನೂ ಪೂರ್ಣವಾಗಿ ಬೆಂದಿಲ್ಲವೆಂದು ಅರ್ಥ. ಬಿಸಿಗೆ ಈ ಬ್ಯಾಕ್ಟೀರಿಯಾಗಳೆಲ್ಲಾ ಈ ಕೇಂದ್ರಭಾಗಕ್ಕೆ ಬಂದು ಸೇರಿರುತ್ತವೆ. ಈ ಮಾಂಸವನ್ನು ಹಾಗೇ ತಿಂದರೆ ಸೋಂಕು ಉಂಟಾಗುವ ಸಾಧ್ಯತೆ ಅತಿ ಹೆಚ್ಚು. ಹಾಗಾಗಿ ನೀವು ಸೇವಿಸುವ ಆಹಾರ ಸರಿಯಾಗಿ ಬೆಂದಿರುವುದನ್ನು ಖಾತ್ರಿಪಡಿಸಿಕೊಳ್ಳಿ. ವಿಶೇಷವಾಗಿ ಹೋಟೆಲುಗಳಲ್ಲಿ ಊಟ ಮಾಡುವಾಗ ಹೆಚ್ಚಿನ ಎಚ್ಚರ ವಹಿಸಿ.

Most Read: ಶೌಚಾಲಯಕ್ಕಿಂತಲೂ ಹೆಚ್ಚಿನ ಕ್ರಿಮಿಗಳು ಇವುಗಳಲ್ಲಿವೆ ಕಣ್ರೀ!

ಸ್ವಚ್ಟತೆಯನ್ನು ಕಾಪಾಡಿ

ಸ್ವಚ್ಟತೆಯನ್ನು ಕಾಪಾಡಿ

ಈ ಕೊಲೈ ಸಹಿತ ಯಾವುದೇ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕು ಬರದಂತೆ ತಡೆಗಟ್ಟಲು ಅತ್ಯಂತ ಅಗತ್ಯಕ್ರಮವೆಂದರೆ ಸ್ವಚ್ಛತೆ. ಇದರ ಜೊತೆಗೇ ಊಟಕ್ಕೂ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು, ಊಟದ ಸ್ಥಳ, ಪಾತ್ರೆ, ಚಮಚ ತಟ್ಟೆ ಮೊದಲಾದವುಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದೂ ಅಗತ್ಯ. ಅಲ್ಲದೇ ಅಡುಗೆಗೂ ಮುನ್ನ ತರಕಾರಿ, ಮಾಂಸದ ತುಂಡುಗಳನ್ನು ಸ್ವಚ್ಛವಾಗಿ ಉಪ್ಪುನೀರಿನಿಂದ ತೊಳೆದುಕೊಳ್ಳಬೇಕು. ವಿಶೇಷವಾಗಿ, ಒಂದು ವೇಳೆ ನೀವು ಪ್ರಾಣಿಗಳೊಂದಿಗೆ ಒಡನಾಟದಲ್ಲಿದ್ದರೆ, ಪ್ರತಿಬಾರಿ ಪ್ರಾಣಿಯ ಮೈ ಮುಟ್ಟಿದಾಗಲೂ ಕೈಗಳನ್ನು ಸ್ವಚ್ಛಗೊಳಿಸದೇ ಯಾವುದೇ ಆಹಾರವನ್ನು ಸೇವಿಸಬರದು. ಅಲ್ಲದೇ ನಿಮ್ಮ ಸಾಕುಪ್ರಾಣಿಗಳೂ ಸ್ವಚ್ಛವಾಗಿರುವಂತೆ ಎಚ್ಚರ ವಹಿಸಬೇಕು.

ನೀವು ಕುಡಿಯುವ ಪೇಯಗಳ ಬಗ್ಗೆಯೂ ಗಮನವಿರಲಿ

ನೀವು ಕುಡಿಯುವ ಪೇಯಗಳ ಬಗ್ಗೆಯೂ ಗಮನವಿರಲಿ

ಕೇವಲ ಪ್ಯಾಶ್ಚರೀಕರಿಸಿದ ಹಾಲು ಮತ್ತು ಇತರ ಸಿದ್ದರೂಪದಲ್ಲಿ ಸಿಗುವ ಹಣ್ಣಿನ ರಸಗಳನ್ನು ಮಾತ್ರವೇ ಸೇವಿಸಿ. ಕುಡಿಯುವ ನೀರು ಕೇವಲ ಕುದಿಸಿ ತಣಿಸಿದ ಅಥವಾ ಸೂಕ್ತವಾದ ಉಪಕರಣದಿಂದ ಸೋಸಿರುವ ನೀರೂ ಮಾತ್ರವೇ ಆಗಿರಲಿ. ನೀವು ಸೇವಿಸುವ ಯಾವುದೇ ದ್ರವಾಹಾರ ಸ್ವಚ್ಛ, ಆರೋಗ್ಯಕರ ಎಂದು ಖಚಿತಪಟ್ಟ ಬಳಿಕವೇ ಸೇವಿಸಿ.

ಇತರ ಅಗತ್ಯ ಸೂಚನೆಗಳು

ಇತರ ಅಗತ್ಯ ಸೂಚನೆಗಳು

*ಒಂದು ವೇಳೆ ಇ.ಕೊಲೈ ಸೋಂಕು ಇರುವ ವ್ಯಕ್ತಿ ಮನೆಯಲ್ಲಿದ್ದರೆ ಈ ವ್ಯಕ್ತಿ ಶೌಚಾಲಯದಲ್ಲಿ ಬಳಸಿದ ನೀರನ್ನು ನೀವಾಗಲೀ ಮಕ್ಕಳಾಗಲೀ ಹಂಚಿಕೊಳ್ಳದಿರಿ.

*ಅಡುಗೆ ಮಾಡುವ ಸಮಯದಲ್ಲಿ ಹಸಿ ಮಾಂಸವನ್ನು ಇತರ ಆಹಾರಗಳ ಸಂಪರ್ಕಕ್ಕೆ ಬರದಂತೆ ಪ್ರತ್ಯೇಕವಾಗಿರಿಸಿ.

*ಮಕ್ಕಳ ಡಯಾಪರ್ ಗಳನ್ನು ಬದಲಿಸುವಾಗ ಕೈಗಳಿಗೆ ರಬ್ಬರ್ ಕೈಗವಸುಗಳನ್ನು ತೊಟ್ಟೇ ಬದಲಿಸಿ.

*ನೀವು ಊಟ ಮಾಡಲು ಹೋಗುವ ಹೋಟೆಲುಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

*ಒಂದು ವೇಳೆ ನಿಮಗೆ ಅತಿಸಾರದ ತೊಂದರೆ ಎದುರಾಗಿದ್ದರೆ ಸಾರ್ವಜನಿಕ ಈಜುಕೊಳವನ್ನು ಬಳಸದಿರಿ.

English summary

Everything You Need to Know About E. coli

Escherichia coli (E. coli) are bacteria that live in the intestines. It affects both animals and humans. There is a variety of bacteria in your intestines, but some of these bacteria carry genes that may lead to a disease. Meat, fruits and vegetables can be contaminated with E.coli, which makes you ill. The presence of E. coli in the system can lead to an upset stomach for several days. In rare cases, it might become fatal.
Story first published: Friday, March 22, 2019, 18:03 [IST]
X
Desktop Bottom Promotion