For Quick Alerts
ALLOW NOTIFICATIONS  
For Daily Alerts

ಎನ್ಸೆಫಲೈಟಿಸ್: ಬಿಹಾರದ ನೂರಕ್ಕೂ ಮಕ್ಕಳನ್ನು ಬಲಿ ತೆಗೆದುಕೊಂಡ ಮಾರಣಾಂತಿಕ ಕಾಯಿಲೆ

|

ಎನ್ಸೆಫಲೈಟಿಸ್ ಅಥವಾ Acute Encephalitis Syndrome (AES) ಎಂಬ ಮಾರಕ ರೋಗ ಈಗಾಗಲೇ ಬಿಹಾರದ ನೂರಕ್ಕೂ ಹೆಚ್ಚು ಮಕ್ಕಳನ್ನು ಬಲಿ ತೆಗೆದುಕೊಂಡಿದೆ. ಈ ಕಾಯಿಲೆಗೆ 'Litchi havoc','chamki fever','killer encephalitis' ಹಾಗೂ 'deadly Litchi toxin' ಎಂಬ ಹೆಸರುಗಳಿಂದಲೂ ಕರೆಯಲಾಗುತ್ತದೆ.

ಎನ್ಸೆಫಲೈಟಿಸ್ ಎಂದರೇನು?

ದೇಹಕ್ಕೆ ಒಂದು ಬಗೆಯ ವೈರಸ್ ಆಗಮಿದ ಬಳಿಕ ಮೆದುಳಿನ ಜೀವಕೋಶಗಳಲ್ಲಿ ಕಾಣಿಸಿಕೊಳ್ಳುವ ಲಘುಪ್ರಾಬಲ್ಯದ ಸೋಂಕು ಅಥವಾ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯೇ ತಪ್ಪಾಗಿ ಮೆದುಳಿನ ಜೀವಕೋಶಗಳ ಮೇಲೆ ಆಕ್ರಮಣ ಎಸಗುವ ಮೂಲಕ ಎದುರಾಗುವ ಕಾಯಿಲೆಯಾಗಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ವೈರಸ್ ಮೂಲಕ ಎದುರಾದ ಸೋಂಕು ಇದಕ್ಕೆ ಕಾರಣವಾಗಿರುತ್ತದೆ. ಈ ಸೋಂಕಿನ ಪ್ರಾಬಲ್ಯ ಹಾಗೂ ವ್ಯಕ್ತಿಯ ವಯಸ್ಸನ್ನಾಧರಿಸಿ ಈ ರೋಗ ಮಾರಣಾಂತಿಕವೂ ಆಗಬಹುದು.

ಎನ್ಸೆಫಲೈಟಿಸ್ ಗೆ ಕಾರಣಗಳು:

ಮೆದುಳಿಗೆ ಸೋಂಕು ಉಂಟುಮಾಡುವ ವೈರಸ್ ಹಾಗೂ ಬ್ಯಾಕ್ಟೀರಿಯಾಗಳು ಈ ಕಾಯಿಲೆಗೆ ಪ್ರಮುಖ ಕಾರಣಾವಾಗಿವೆ. ಇದುವರೆಗೆ ಕಂಢು ಹಿಡಿಯಲಾಗಿರುವ ವೈರಸ್ಸುಗಳೆಂದರೆ: ಹೆಚ್ ಎಸ್ ವಿ (herpes simplex virus (HSV),ಸೊಳ್ಳೆಗಳ ಮೂಲಕ ಹರಡಲ್ಪಡುವ ವೈರಸ್ (mosquito-borne viruses),ತಿಗಣೆ ಕಡಿತದಿಂದ ಹರಡಲ್ಪಡುವ ವೈರಸ್( tick-borne viruses)ಎಂಟಿರೋವೈರಸ್, ರೇಬೀಸ್ ವೈರಸ್, ಹಾಗೂ ಚಿಕ್ಕ ಮಕ್ಕಳಿಗೆ ಎದುರಾಗುವ ದಡಾರ, ಅಮ್ಮ ಹಾಗೂ ಜರ್ಮನ್ ಮೀಸಲ್ಸ್ ಎಂಬ ಕಾಯಿಲೆಗಳು.

ಎನ್ಸೆಫಲೈಟಿಸ್ ನಲ್ಲಿ ಎರಡು ವಿಧಗಳಿವೆ:

ಪ್ರಾಥಮಿಕ ಎನ್ಸೆಫಲೈಟಿಸ್- ದೇಹಕ್ಕೆ ಆಗಮಿಸಿದ ವೈರಸ್ ನೇರವಾಗಿ ಮೆದುಳಿನ ಜೀವಕೋಶಗಳ ಮೇಲೆ ಆಕ್ರಮಣ ಮಾಡಿದಾಗ ಎದುರಾಗುವ ಎನ್ಸೆಫಲೈಟಿಸ್. ಈ ಆಕ್ರಮಣದ ಮೂಲಕ ಮೆದುಳಿನ ಒಂದು ಭಾಗ ಮಾತ್ರ ಹಾನಿಗೊಳಗಾಗಬಹುದು ಅಥವಾ ಉಳಿದ ಭಾಗಗಳಿಗೂ ಹರಡಬಹುದು. ಮಾಧ್ಯಮಿಕ ಎನ್ಸೆಫಲೈಟಿಸ್: ಒಂದು ವೇಳೆ ತಪ್ಪಾಗಿ ದೇಹದ ರೋಗ ನಿರೋಧಕ ಶಕ್ತಿಯೇ ಸೋಂಕು ಉಂಟುಮಾಡುವ ಜೀವಕೋಶಗಳ ಬದಲಿಗೆ ಮೆದುಳಿನ ಆರೋಗ್ಯಕರ ಜೀವಕೋಶಗಳ ಮೇಲೆ ಧಾಳಿಯಿಟ್ಟರೆ ಎದುರಾಗುವ ಕಾಯಿಲೆಯಾಗಿದೆ.

ಎನ್ಸೆಫಲೈಟಿಸ್ ಆವರಿಸಿರುವ ಸೂಚನೆಗಳು:

ಈ ವ್ಯಕ್ತಿಗಳಿಗೆ ಫ್ಲೂ ಜ್ವರದಂತಹ ಲಕ್ಷಣಗಳೇ ಕಾಣಿಸಿಕೊಳ್ಳುತ್ತವೆ. ಜ್ವರ, ತಲೆನೋವು, ಸುಸ್ತು ಅಥವಾ ಬಳಲಿಕೆ, ಮೂಳೆಸಂದುಗಳಲ್ಲೆಲ್ಲಾ ನೋವು, ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಕಾಯಿಲೆ ಉಲ್ಬಣಗೊಂಡಾಗ ಕಾಣಿಸಿಕೊಳ್ಳುವ ಲಕ್ಷಣಗಳು:

ಸ್ನಾಯುಗಳ ಸೆಡೆತ, ಸ್ನಾಯುಗಳು ನಿತ್ರಾಣವಾಗುವುದು, ಗೊಂದಲ, ಚಡಪಡಿಕೆ ಅಥವಾ ಮರೀಚಿಕೆಗಳನ್ನು ಕಾಣುವುದು, ಶ್ರವಣ ಶಕ್ತಿ ಕುಂದುವುದು, ಮಾತನಾಡಲು ತೊದಲುವುದು, ಸ್ಪರ್ಶ ಸಂವೇದನೆ ಕಡಿಮೆಯಾಗುವುದು, ಕೆಲವು ಭಾಗಗಳಲ್ಲಿ, ವಿಶೇಷವಾಗಿ ಮುಖ ಹಾಗೂ ದೇಹದ ಪ್ರಮುಖ ಭಾಗಗಳಲ್ಲಿ ಪಾರ್ಶ್ವವಾಯು ಆವರಿಸುವುದು, ಪ್ರಜ್ಞೆಯೇ ಇಲ್ಲದಂತಿರುವುದು.

ಪುಟ್ಟ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು: ದೇಹವಿಡೀ ಸೆಡೆತಕ್ಕೆ ಒಳಗಾಗುವುದು, ವಾಕರಿಕೆ, ವಾಂತಿ, ತಲೆಬುರುಡೆಯಲ್ಲಿ ಒತ್ತಿದರೆ ಮೃದುವಾಗಿರುವ ಭಾಗಗಳೆಲ್ಲೆಲ್ಲಾ ಒಳಗಿನಿಂದ ದೂಡಿದಂತೆ ಉಬ್ಬಿಕೊಳ್ಳುವುದು (fontanels), ಮೈ ತುರಿಕೆ, ಹಾಲು ಕುಡಿಸಲು ಕಷ್ಟವಾಗುವುದು.

Most Read: ರಾತ್ರಿಯ ಊಟ ತಡವಾದರೆ ಈ ಎಲ್ಲಾ ಸಮಸ್ಯೆಗಳೂ ಎದುರಾಗಬಹುದು- ಎಚ್ಚರ !!!

ಎನ್ಸೆಫಲೈಟಿಸ್ ಆವರಿಸಲು ಸಂಭಾವ್ಯ ಅಂಶಗಳು:

 • ವಯಸ್ಸು: ಮಕ್ಕಳಿಗೆ ಹಾಗೂ ವೃದ್ದರಿಗೆ ಎನ್ಸೆಫಲೈಟಿಸ್ ಆವರಿಸುವ ಸಾಧ್ಯತೆ ಹೆಚ್ಚು
 • ಕುಂಠಿತಗೊಂಡ ರೋಗ ನಿರೋಧಕ ಶಕ್ತಿ: ಎಚ್ ಐ ವಿ ಅಥವಾ ಏಡ್ಸ್ ರೋಗಿಗಳು, ಸೊಳ್ಳೆ ಕಡಿತ ಮತ್ತು ತಿಗಣೆ ಕಡಿತಕ್ಕೆ ಒಳಗಾಗಿ ವೈರಸ್ ಸೋಂಕು ಹರಡಬಹುದಾದ ವ್ಯಕ್ತಿಗಳು
 • ವರ್ಷದ ಕೆಲವು ನಿಗದಿತ ತಿಂಗಳುಗಳು: ವರ್ಷದ ಕೆಲವು ತಿಂಗಳುಗಳಲ್ಲಿ ಸೊಳ್ಳೆ ಮತ್ತು ತಿಗಣೆಗಳು ಅತಿ ಹೆಚ್ಚಾಗುತ್ತವೋ ಆಗ ರೋಗ ಬಾಧಿಸುವ ಸಾಧ್ಯತೆಯೂ ಹೆಚ್ಚು.

ಸೋಂಕು ಉಲ್ಬಣಗೊಳ್ಳಲು ಕಾರಣಗಳು:

ಇದಕ್ಕೆ ವಯಸ್ಸು, ಸೋಂಕಿಗೆ ಕಾರಣ ಹಾಗೂ ಮೊದಲಾಗಿ ಸೋಂಕಿಗೆ ಒಳಗಾದ ಬಳಿಕ ಎಷ್ಟು ಪ್ರಾಬಲ್ಯದಲ್ಲಿದೆ ಎಂಬ ಅಂಶಗಳು ಇವನ್ನು ನಿರ್ಧರಿಸುತ್ತವೆ.

ಉಲ್ಬಣಗೊಂಡಾಗ ಎದುರಾಗುವ ಲಕ್ಷಣಗಳು: ಸತತವಾಗಿ ಸುಸ್ತು ಆವರಿಸುವುದು, ಸ್ನಾಯುಗಳ ಶಕ್ತಿಗುಂದುವುದು.

ಎನ್ಸೆಫಲೈಟಿಸ್ ಪತ್ತೆಹಚ್ಚುವಿಕೆ:

ವೈದ್ಯರು ಮೊದಲಾಗಿ ಕೆಲವು ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಿ ರೋಗಿಯ ವೈಧಕೀಯ ಇತಿಹಾಸವನ್ನು ಪರಿಶೀಲಿಸುತ್ತಾರೆ. ರೋಗದ ಅನುಮಾನ ಎದುರಾದರೆ ಕೆಲವು ಪರೀಕ್ಷೆಗಳನ್ನು ಬರೆದು ಕೊಡಬಹುದು. ಇದರಲ್ಲಿ ಪ್ರಮುಖವಾಗಿ : Brain imaging - ಮೆದುಳಿನ ಬಿಂಬದ ಪರೀಕ್ಷೆ ಪ್ರಮುಖವಾಗಿದೆ. ಇದಕ್ಕಾಗಿ CT ಸ್ಕ್ಯಾನ್ ಅಥವಾ MRI ಸ್ಕ್ಯಾನ್ ಬಳಸಬಹುದು ಹಾಗೂ ಮೆದುಳಿನ ರಚನೆಯಲ್ಲಿ ಆಗಿರುವ ಬದಲಾವಣೆಗಳನ್ನು ಪರಿಶೀಲಿಸಬಹುದು.

Lumbar puncture - ಈ ಪರೀಕ್ಷೆಯಲ್ಲಿ cerebrospinal fluid (CSF) ಅಥವಾ ಮೆದುಳು ಮತ್ತು ಮೆದುಳುಬಳ್ಳಿಯನ್ನು ಸುತ್ತುವರೆದಿರುವ ದ್ರವದ ಕೊಂಚ ಭಾಗವನ್ನು ಬಳಸಿಕೊಳ್ಳಲಾಗುತ್ತದೆ. ತಲೆಬುರುಡೆಗೆ ವಿದ್ಯುತ್ ಎಲೆಕ್ಟ್ರೋಡ್ ಗಳನ್ನು ಅಳವಡಿಸಿ ಮೆದುಳಿನ ಚಟುವಟಿಕೆಗಳನ್ನು ದಾಖಲಿಸಲಾಗುತ್ತದೆ. ಈ ಪರೀಕ್ಷೆಯಿಂದ ಮೆದುಳು ಅಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದರೆ ಪತ್ತೆಯಾಗುತ್ತದೆ. ಇತರ ಪ್ರಯೋಗಾಲದ ಪರೀಕ್ಷೆಗಳೆಂದರೆ ರಕ್ತಪರೀಕ್ಷೆ, ಮೂತ್ರ ಪರೀಕ್ಷೆ ಅಥವಾ ಗಂಟಲ ಹಿಂಭಾಗದಲ್ಲಿ ಅಂಟಿಕೊಂಡಿದ್ದ ಸ್ನಿಗ್ಧ ದ್ರವಭಾಗವನ್ನು ಪರೀಕ್ಷಿಸಿ ವೈರಸ್ ನ ಇರುವಿಕೆಯನ್ನು ಖಚಿತಪಡಿಸಲಾಗುತ್ತದೆ.

ಎನ್ಸೆಫಲೈಟಿಸ್ ಗೆ ಚಿಕಿತ್ಸೆ:

ಈ ರೋಗ ಪತ್ತೆಯಾದ ಬಳಿಕ ಕೊಂಚವೂ ತಡಮಾಡದೇ ಚಿಕಿತ್ಸೆಯನ್ನು ಪ್ರಾರಂಭಿಸಬೇಕು. ತಕ್ಷಣವೇ ರೋಗಿಯನ್ನು ಆಸ್ಪತ್ರೆಯ ತೀವ್ರನಿಗಾ ಘಟಕ( ಐಸಿಯು) ದಲ್ಲಿ ದಾಖಲಿಸಿಕೊಳ್ಳಲಾಗುತ್ತದೆ.

 • ಆಂಟಿ ವೈರಸ್ ಔಷಧಿಗಳು:ಒಂದು ವೇಳೆ ಈ ರೋಗಕ್ಕೆ ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ ಕಾರಣವೆಂದಾದರೆ ಅಥವಾ ಚಿಕಪ್ ಪಾಕ್ಸ್ ವೈರಸ್ ಆಗಿದ್ದರೆ ದಿನಕ್ಕೆ ಮೂರು ಬಾರಿಯಂತೆ ಎರಡರಿಂದ ಮೂರು ವಾರಗಳವರೆಗೆ ವೈರಸ್ ನಿರೋಧಕ ಗುಳಿಗೆಗಳನ್ನು ನೀಡಿದರೆ ಸಾಕಾಗುತ್ತದೆ.
 • Immunoglobulin therapy: ಇದು ರೋಗ ನಿರೋಧಕ ಶಕ್ತಿಯನ್ನು ನಿಯಂತ್ರಿಸುವ ಚಿಕಿತ್ಸೆಯಾಗಿದ್ದು ಒಂದು ವೇಳೆ ಸ್ಟೆರಾಯ್ಡು ಗಳ ಬಳಕೆಯೂ ಫಲ ನೀಡದಿದ್ದಾಗ ಬಳಸಲಾಗುತ್ತದೆ.
 • Steroid injections: ಒಂದು ವೇಳೆ ರೋಗ ನಿರೋಧಕ ವ್ಯವಸ್ಥೆಯೇ ಈ ಕಾಯಿಲೆಗೆ ಕಾರಣವಾಗಿದ್ದರೆ ಈ ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ. ಆದರೆ ಈ ಚುಚ್ಚುಮದ್ದುಗಳನ್ನು ಕೆಲವೇ ದಿನಗಳಿಗಾಗಿ ನೀಡಬೇಕಾಗುತ್ತದೆ ಹಾಗೂ ವೈದ್ಯರು ಸತತವಾಗಿ ರೋಗಿಯ ಆರೋಗ್ಯವನ್ನು ಗಮನಿಸಬೇಕಾಗುತ್ತದೆ.
 • ಪ್ರತಿಜೀವಕ ಮತ್ತು ಶಿಲೀಂಧ್ರನಿವಾರಕ ಔಷಧಿಗಳು (Antibiotics and antifungal medications): ಒಂದು ವೇಳೆ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರದ ಸೋಂಕು ಕಾಯಿಲೆಗೆ ಕಾರಣವೆಂದು ಖಚಿತವಾದರೆ ಈ ಔಷಧಿಗಳನ್ನು ನೀಡಲಾಗುತ್ತದೆ.
 • Plasmapheresis: ರಕ್ತದ ಮೂಲಕ ಮೆದುಳಿಗೆ ದಾಟಿಕೊಂಡು ಸೋಂಕು ಎಸಗುವ ಹಾನಿಕಾರಕ ಪ್ರತಿಜೀವಕಗಳನ್ನು (antibodies) ನಿವಾರಿಸಲು ಈ ಚಿಕಿ಼ತ್ಸೆಯನ್ನು ನೀಡಲಾಗುತ್ತದೆ.
 • ಶಸ್ತ್ರಚಿಕಿತ್ಸೆ: ಒಂದು ವೇಳೆ ಮೆದುಳಿನಲ್ಲಿ ಅಸಾಮಾನ್ಯವಾದ ಬೆಳವಣಿಗೆ ಅಥವಾ ಗಡ್ಡೆ ಕಾಣಿಸಿಕೊಂಡರೆ ಶಸ್ತ್ರಚಿಕಿತ್ಸೆಯ ಮೂಲಕ ಈ ಗಡ್ಡೆಯನ್ನು ನಿವಾರಿಸಲಾಗುತ್ತದೆ.
 • ಇತರ ಚಿಕಿತ್ಸೆಗಳು: ಶರೀರ ನಿರ್ಜಲೀಕರಣಕ್ಕೆ ಒಳಗಾಗದಿರಲು ನರಗಳಿಗೆ ಜೀವದ್ರವವನ್ನು ಒದಗಿಸಲಾಗುತ್ತದೆ.

ಸ್ನಾಯುಗಳ ಸೆಡೆತದಿಂದ ರಕ್ಷಿಸಿಕೊಳ್ಳಲು ಔಷಧಿಗಳನ್ನು ನೀಡಲಾಗುತ್ತದೆ.

ನೋವು ಕಡಿಮೆಯಾಗಿಸಲು ನೋವು ನಿವಾರಕ ಗುಳಿಗೆಗಳು.

ಜ್ವರ, ಸುಸ್ತು ಹಾಗೂ ಉಸಿರಾಟದ ತೊಂದರೆ ನಿವಾರಿಸಲು ಗುಳಿಗೆಗಳು ಹಾಗೂ ಆಮ್ಲಜನಕದ ಮುಖವಾಡ ಧರಿಸಲು ಸಲಹೆ ಮಾಡಬಹುದು.

Most Read: ಕರುಳಿನ ಪರಾವಲಂಬಿ ಜೀವಿಗಳ ನಿವಾರಣೆಗೆ ನೈಸರ್ಗಿಕ ಆಹಾರಗಳು

ಎನ್ಸೆಫಲೈಟಿಸ್ ಬಾರದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು:

 • ಆಹಾರ, ಪಾನೀಯಗಳನ್ನು ಹಂಚಿಕೊಳ್ಳದಿರುವುದು
 • ರೋಗಿ ಬಳಸಿದ ಊಟದ ತಟ್ಟೆ ಲೋಟಗಳನ್ನೂ ಹಂಚಿಕೊಳ್ಳಬಾರದು
 • ಸ್ವಚ್ಛತೆಗೆ ಆದಷ್ಟೂ ಹೆಚ್ಚಿನ ಪ್ರಾಮುಖ್ಯತೆ ಒದಗಿಸಬೇಕು
 • ಮಕ್ಕಳಿಗೆ ಆದಷ್ಟೂ ಬೇಗನೇ ರೋಗಗಳು ಎದುರಾಗದಂತೆ ಲಸಿಕೆಗಳನ್ನು ಹಾಕಿಸಬೇಕು
 • ಸೊಳ್ಳೆಕಡಿತದಿಂದ ರಕ್ಷಿಸಿಕೊಳ್ಳಬೇಕು. ಸೊಳ್ಳೆಗಳಿರುವ ಪ್ರದೇಶದಲ್ಲಿ ಸೊಳ್ಳೆ ವಿಕರ್ಷಿಸುವ ಕ್ರೀಮುಗಳನ್ನು ಹಚ್ಚಿಕೊಳ್ಳಬೇಕು.
 • ಸುತ್ತ ಮುತ್ತಲ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಈ ಚಿಕ್ಕ ಹೊಂಡಗಳಲ್ಲಿಯೇ ಸೊಳ್ಳೆಗಳು ಮೊಟ್ಟೆಯಿಟ್ಟು ಸಂಖ್ಯಾಭಿವೃದ್ದಿಗೊಳ್ಳುತ್ತವೆ.
English summary

Encephalitis: The Deadly Condition That Killed More Than 100 Children In Bihar

Encephalitis is an acute inflammation of the brain either caused by a viral infection or when the immune system mistakenly attacks the brain tissue. However, the most common cause is a viral infection. Fever, seizures, headache, muscle weakness,loss of consciousness, etc., are some symptoms of encephalitis.
X