For Quick Alerts
ALLOW NOTIFICATIONS  
For Daily Alerts

ಎಮ್.ಟಿ. ನೋಸ್ ಸಿಂಡ್ರೋಮ್ :ಕಾರಣಗಳು, ಲಕ್ಷಣಗಳು, ಪತ್ತೆ ಹಚ್ಚುವಿಕೆ ಮತ್ತು ಚಿಕಿತ್ಸೆ

|

ಎಂಪ್ಟೀ ನೋಸ್ ಸಿಂಡ್ರೋಮ್ ಎಂಬ ಹೆಸರಿನ ಈ ಕಾಯಿಲೆ ಅಪರೂಪವಾಗಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆ ಆವರಿಸಿದಾಗ ಮೂಗಿನ ಕ್ಷಮತೆ ಬಾಧೆಗೊಳ್ಳುತ್ತದೆ ಹಾಗೂ ಶ್ವಾಸನಾಳದ ವ್ಯಾಸವೂ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಮೂಗಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಉದಾಹರಣೆಗೆ ಟರ್ಬಿನೆಕ್ಟೋಮಿ ಮಾಡಿಸಿಕೊಂಡ ವ್ಯಕ್ತಿಗಳಲ್ಲಿ ಈ ತೊಂದರೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಖಾಲಿ ಮೂಗಿನ ಲಕ್ಷಣ ಆವರಿಸಲು ಕಾರಣಗಳೇನು?

ಮೂಗಿನ ಒಂದು ಭಾಗದಲ್ಲಿ ಅಥವಾ ಎರಡೂ ಭಾಗಗಳಲ್ಲಿ ಅಥವಾ ಮೂಗಿನ ನಾಳದ ಯಾವುದೋ ಭಾಗದಲ್ಲಿ ಶಸ್ತ್ರಚಿಕಿತ್ಸೆ ಪಡೆದವರಿಗೆ ಈ ತೊಂದರೆ ಎದುರಾಗುವ ಸಾಧ್ಯತೆ ಅತಿ ಹೆಚ್ಚು. ಮೂಗಿನ ಒಳಗಿನ ನಾಳದ ವಕ್ರತೆಯನ್ನು ಸರಿಪಡಿಸುವ ಸೆಪ್ಟೋಪ್ಲಾಸ್ಟಿ ಹಾಗೂ ವಿಪರೀತ ದೊಡ್ಡದಾಗಿದ್ದ ಹೊಳ್ಳೆಗಳನ್ನು ಚಿಕ್ಕದಾಗಿಸಲು ನಡೆಸುವ ಟರ್ಬಿನೇಟ್ ರಿಡಕ್ಷನ್ ಎಂಬ ಶಸ್ತ್ರಚಿಕಿತ್ಸೆಗಳಿಗೆ ಒಳಗಾದವರಿಗೂ ಈ ತೊಂದರೆ ಆವರಿಸುವ ಸಾಧ್ಯತೆ ಹೆಚ್ಚು ವಕ್ರವಾದ ಶ್ವಾಸನಾಳವನ್ನು ಸರಿಪಡಿಸಿ ಶ್ವಾಸವನ್ನು ಉತ್ತಮಗೊಳಿಸಲು ಹಾಗೂ ಸ್ಲೀಪ್ ಅಪ್ನಿಯಾ ಎಂಬ ಕಾಯಿಲೆಗಳ ಚಿಕಿತ್ಸೆಯಾಗಿ ಈ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಬಳಿಕ ಈ ವ್ಯಕ್ತಿಗಳಿಗೆ ಉಸಿರಾಟ ಸುಲಭವಾಗುವ ಬದಲು ಇನ್ನಷ್ಟು ಉಲ್ಬಣಗೊಳ್ಳುವುದು ಕಂಡುಬರುತ್ತದೆ. ಈ ತೊಂದರೆಯನ್ನೇ ಖಾಲಿ ಮೂಗಿಲ ಲಕ್ಷಣ ಎಂದು ಕರೆಯಬಹುದು.

ಖಾಲಿ ಮೂಗಿನ ಲಕ್ಷಣ ಕಾಯಿಲೆಯ ಲಕ್ಷಣಗಳು

* ಮೂಗಿನ ಮೂಲಕ ಉಸಿರಾಡಲು ಕಷ್ಟವಾಗುವುದು

* ಮೂಗು ಒಣಗಿದ್ದು ಒಳಗಿನ ಚರ್ಮ ಪಕಳೆಯೇಳುವುದು

* ಮೂಗಿನಿಂದ ರಕ್ತ ಸೋರುವುದು

* ಉಸಿರಾಡಲು ಪಡೆಯುವ ಗಾಳಿಯ ಪ್ರಮಾಣ ಕಡಿಮೆಯಾಗುವುದು

* ತಲೆನೋವು

* ಉಸಿರು ಎಳೆದುಕೊಳ್ಳಲು ಕಷ್ಟವಾಗುವುದು

* ಮೂಗಿನ ಭಾಗದಲ್ಲಿ ಬಾವು ಮತ್ತು ನೋವು

* ಸುಸ್ತು.

* ಮೂಗಿನಲ್ಲಿ ಸಿಂಬಳವಿಲ್ಲದೇ ಇರುವುದು

* ತಲೆಸುತ್ತುವಿಕೆ

* ವಾಸನೆ ಗ್ರಹಿಸುವ ಮತ್ತು ರುಚಿ ಗ್ರಹಿಸುವ ಸಾಮರ್ಥ್ಯ ಕುಂದುವುದು

* ಹೃದಯದ ಬಡಿತ ಹೆಚ್ಚಳವಾದ ಅನುಭವ

ಖಾಲಿ ಮೂಗಿನ ಲಕ್ಷಣ ಕಾಯಿಲೆಯ ಪತ್ತೆ ಹಚ್ಚುವಿಕೆ:

ಈ ಕಾಯಿಲೆಯನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ, ಏಕೆಂದರೆ ಈ ಕಾಯಿಲೆಯನ್ನು ಪತ್ತೆ ಹಚ್ಚಲೆಂದೇ ವಿಶಿಷ್ಟವಾದ ಪರೀಕ್ಷೆಯೇ ಇಲ್ಲ! ಈ ಕಾಯಿಲೆಯ ಲಕ್ಷಣಗಳು ಶಸ್ತ್ರಚಿಕಿತ್ಸೆಯ ನಡೆಸಿದ ಕೆಲವು ವಾರಗಳ ಬಳಿಕ ಅಥವಾ ತಿಂಗಳುಗಳ ಬಳಿಕ ಅಥವಾ ಕೆಲವೊಮ್ಮೆ ಕೆಲ ವರ್ಷಗಳ ಬಳಿಕವೇ ಕಾಣಿಸಿಕೊಳ್ಳಬಹುದು. ಆದರೂ, ಕಿವಿ ಮೂಗು ಗಂಟಲು ತಜ್ಞರು ಈ ಕಾಯಿಲೆಯ ಸಾಮಾನ್ಯ ಲಕ್ಷಣಗಳನ್ನು ಗಮನಿಸುವ ಮೂಲಕ ಈ ತೊಂದರೆಯ ಇರುವಿಕೆಯನ್ನು ಅಂದಾಜಿಸಿ, ಹತ್ತಿಯುಂಡೆಯನ್ನು ಮೂಗಿನೊಳಗೆ ತೂರಿಸಿ ನಡೆಸುವ ಸರಳ ಪರೀಕ್ಷೆಯ ಮೂಲಕ ಖಚಿತಪಡಿಸಬಲ್ಲರು.

ಖಾಲಿ ಮೂಗಿನ ಲಕ್ಷಣ ಕಾಯಿಲೆಯ ಚಿಕಿತ್ಸೆ:

ಮೊದಲಾಗಿ ಈ ಕಾಯಿಲೆಯಿಂದ ಎದುರಾದ ತೊಂದರೆಗಳನ್ನು ತಾತ್ಕಾಲಿಕವಾಗಿ ಸರಿಪಡಿಸುವಂತೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಮೂಗಿನೊಳಗೆ ಹಚ್ಚಿಕೊಳ್ಳಬಹುದಾದ ಮುಲಾಮು ಅಥವಾ ಸಿಂಪಡಿಸುವ ಸ್ಪ್ರೇಗಳನ್ನು ನೀಡುವ ಮೂಲಕ ಮೂಗಿನ ಒಳಭಾಗದಲ್ಲಿ ಆರ್ದ್ರತೆಯನ್ನು ಒದಗಿಸಲು ಯತ್ನಿಸಲಾಗುತ್ತದೆ. ಆದರೆ ಈ ಮೂಲಕ ಮೂಗಿನ ಒಳಭಾಗದಲ್ಲಿ ಶ್ವಾಸನಾಳದ ಒಳಪದರದಲ್ಲಿ ಧೂಳು ಕಲ್ಮಶಗಳನ್ನು ಅಂಟಿಸಿಕೊಳ್ಳುವ ಗುಣವಿರುವ ಸ್ನಿಗ್ಧ ಸಿಂಬಳ ಮತ್ತು ಪೆಪ್ಟೈಡ್ ಗಳನ್ನೂ ನಿವಾರಿಸುವ ಅಪಾಯ ಎದುರಾಗಬಹುದು.

ಇದರ ಜೊತೆಗೇ ಮನೆಯಲ್ಲಿಯೇ ನಡೆಸಲು ಸಾಧ್ಯವಾಗುವಂತೆ ಕೆಲವು ಸುಲಭ ಚಿಕಿತ್ಸೆಗಳನ್ನು ವೈದ್ಯರು ಸೂಚಿಸುತ್ತಾರೆ. ಇವುಗಳೆಂದರೆ:

ಆರ್ದ್ರತೆ ನೀಡುವ ಉಪಕರಣ (ಹ್ಯೂಮಿಡಿಫೈಯರ್) ಚಲಾಯಿಸಿರುವ ಕೋಣೆಯಲ್ಲಿ ಪವಡಿಸುವುದು

ಬೆಚ್ಚಗಿನ ಮತ್ತು ತೇವಭರಿತ ವಾತಾವರಣದಲ್ಲಿಯೇ ಹೆಚ್ಚು ಕಾಲ ಕಳೆಯುವುದು

ಬಿಸಿ ಬಿಸಿಯಾಗಿ ಸೂಪ್ ಮತ್ತು ಇತರ ದ್ರವಾಹಾರಗಳನ್ನು ಸೇವಿಸುವುದು

ಮೂಗಿನ ಒಳಗೆ ಸಿಂಪಡಿಸಬಹುದಾದ ಪ್ರತಿಜೀವಕ ಔಷಧಿಗಳನ್ನು ಸಿಂಪಡಿಸಿ ಮೂಗಿನೊಳಗಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು

ಮೂಗಿನ ಒಳಗೆ ಅಂಗಾಂಶ ಕಸಿಯ ಮೂಲಕ ಅಥವಾ ಅಳವಡಿಸಲು ಸಾಧ್ಯವಾಗುವ ಇತರ ಸಾಮಾಗ್ರಿಗಳಿಂದ ಮೂಗಿನ ಹೊಳ್ಳೆಯ ಗಾತ್ರವನ್ನು ಹಿಗ್ಗಿಸುವುದು.

ಈ ಕಾಯಿಲೆಯಿಂದ ಪ್ರಾಣಾಪಾಯದ ತೊಂದರೆಯೇನೂ ಇಲ್ಲ. ಆದರೆ ಈ ಮೂಲಕ ಎದುರಾಗುವ ಖಿನ್ನತೆ ಮತ್ತು ಉದ್ವೇಗದಂತಹ ಮಾನಸಿಕ ತೊಂದರೆಗಳು ಮಾತ್ರ ಹೆಚ್ಚು ಅಪಾಯಕಾರಿಯಾಗಿವೆ.

English summary

Empty Nose Syndrome: Causes, Symptoms, & Treatment

Empty nose syndrome is a rare kind of disorder that affects the nose and nasal passages. It is most common in people who have had nasal surgery like turbinectomy. An ENT specialist can suspect empty nose syndrome depending on the person's symptoms and by performing a cotton test. Topical treatments like saline gels or saline sprays can aid in moisturizing the nose.
X