For Quick Alerts
ALLOW NOTIFICATIONS  
For Daily Alerts

ರಾತ್ರಿಯ ಊಟ ತಡವಾದರೆ ಈ ಎಲ್ಲಾ ಸಮಸ್ಯೆಗಳೂ ಎದುರಾಗಬಹುದು- ಎಚ್ಚರ !!!

|

ದಿನಕ್ಕೆ 3 ಬಾರಿ ಆಹಾರ ಸೇವನೆ , ಕನಿಷ್ಠ 8 ಗಂಟೆಗಳ ಕಾಲ ನಿಯಮಿತವಾದ ನಿದ್ದೆ , ದೇಹದ ಶುಚಿತ್ವ ಕಾಪಾಡಿಕೊಳ್ಳುವುದು . ಇದು ಒಬ್ಬ ಆರೋಗ್ಯವಂತ ಮನುಷ್ಯನ ಲಕ್ಷಣ. ಇದು ಕೇವಲ ಒಂದು ದಿನದ ಲೆಕ್ಕಾಚಾರವಲ್ಲ . ದಿನ ನಿತ್ಯ ಕಡಾಯವಾಗಿ ಪಾಲಿಸಲೇಬೇಕಾದ ದಿನಚರಿ. ಯಾರು ಇದನ್ನು ಪಾಲಿಸಲು ಸ್ವಲ್ಪ ಎಡವುತ್ತಾರೋ ಅವರಿಗೆ ನಿಧಾನವಾಗಿ ದೈಹಿಕ ಆರೋಗ್ಯ ಕೈ ಕೊಡಲು ಆರಂಭವಾಗುತ್ತದೆ .ಅದರಲ್ಲೂ ಈಗಿನ ಜನತೆಯಂತೂ ಬಹಳ ಸೂಕ್ಷ್ಮ. ಅವರ ದೇಹಕ್ಕೆ ಯಾವುದು ಹೆಚ್ಚಾದರೂ ಅಥವಾ ಕಡಿಮೆ ಆದರೂ ಎರಡೂ ಸಮಸ್ಯೆಯೇ.

ಆ ದಿನದ ಬೆಳಗಿನ ತಿಂಡಿ ಒಬ್ಬ ಮನುಷ್ಯನನ್ನು ಇಡೀ ದಿನ ಚಟುವಟಿಕೆಯಿಂದ ಕೂಡಿರಲು ಸಹಾಯ ಮಾಡಿದರೆ , ರಾತ್ರಿ ಊಟ ಇಡೀ ರಾತ್ರಿ ಹಸಿವಾಗದಂತೆ ಕಾಪಾಡಿ ಆರೋಗ್ಯಕರ ಮೆಟಬೋಲಿಸಂ ಮತ್ತು ದೇಹದ ತೂಕ ನಿಯಂತ್ರಣ ಮಾಡುವಲ್ಲಿ ಸಹಾಯ ಮಾಡುತ್ತದೆ . ರಾತ್ರಿಯ ಊಟ ನಿಜಕ್ಕೂ ಮನುಷ್ಯನ ದೇಹಕ್ಕೆ ಬಹಳ ಮುಖ್ಯ . ಆದರೆ ರಾತ್ರಿಯ ಊಟಕ್ಕೆ ಕೆಲವು ನಿಯಮಗಳಿವೆ . ಇಂತಹದೇ ಆಹಾರ ಮತ್ತು ಇಂತಹದೇ ಸಮಯ ಎಂಬ ನಿಯಮವಿದೆ. ಅಪ್ಪಿ ತಪ್ಪಿ ರಾತ್ರಿಯ ಊಟವನ್ನು ತಪ್ಪಿಸಿದರೆ ಅಥವಾ ಹೆಚ್ಚು ಊಟ ಮಾಡಿದರೆ ಅಥವಾ ಪ್ರತಿ ದಿನ ಊಟ ಮಾಡುವ ಸಮಯ ತಪ್ಪಿಸಿ ತಡವಾಗಿ ಊಟ ಮಾಡಿದ್ದೇ ಆದರೆ, ದೇಹದ ತೂಕ ಹೆಚ್ಚಾಗುವ ಸಂಭವ ಹೆಚ್ಚಿರುತ್ತದೆ ಮತ್ತು ಜೀರ್ಣಾಂಗಕ್ಕೆ ಸಂಬಂಧ ಪಟ್ಟಂತೆ ಬೇರೆ ಕಾಯಿಲೆಗಳು ಅಂಟಿಕೊಳ್ಳುವ ಸಮಸ್ಯೆ ಶುರುವಾಗುತ್ತದೆ .

Night Dinner

ಎಂದಿಗೂ ರಾತ್ರಿ ಊಟವನ್ನು ಮಾತ್ರ ತಪ್ಪಿಸಬೇಡಿ

ನಾವು ತಿನ್ನುವ ಪ್ರತಿ ಆಹಾರ ಕ್ಯಾಲೋರಿಗಳಾಗಿ ನಮ್ಮ ದೇಹಕ್ಕೆ ಶಕ್ತಿಯನ್ನು ನಿರಂತರವಾಗಿ ಪೂರೈಸುತ್ತಾ ಇರುತ್ತದೆ . ಅದು ನಾವು ಮಲಗಿದ್ದಾಗಲೂ ಸಹ . ದೇಹದ ಆರೋಗ್ಯ ಚೆನ್ನಾಗಿರಬೇಕಾದರೆ ಒಬ್ಬ ಮನುಷ್ಯನಿಗೆ ಆರೋಗ್ಯಕರ ಆಹಾರ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆತನು ಮಾಡುವ ನಿಯಮಿತ ನಿದ್ದೆ . ಆದರೆ ರಾತ್ರಿ ಹಸಿದುಕೊಂಡು ಅಂದರೆ ಊಟ ಬಿಟ್ಟು ಮಲಗಿಕೊಂಡರೆ ಯಾರಿಗೆ ಆದರೂ ನಿದ್ದೆ ಹತ್ತುವುದಿಲ್ಲ . ಆದ್ದರಿಂದ ಪ್ರತಿಯೊಬ್ಬರೂ ಸಹ ರಾತ್ರಿಯ ಊಟ ತಪ್ಪಿಸುವ ಬದಲು ಆರೋಗ್ಯಕರವಾದ ಆಹಾರ ಸೇವಿಸುವ ಬಗ್ಗೆ ಗಮನ ಹರಿಸಬೇಕು .

Most Read: ರಾತ್ರಿ ಸೇವಿಸಬಹುದಾದ ಉತ್ತಮ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ...

ಆರೋಗ್ಯಕರ ಆಹಾರ ಎಂದರೆ ಹೇಗಿರಬೇಕು ಮತ್ತು ಅವುಗಳ ಗುಣ ಲಕ್ಷಣಗಳೇನು ಎಂಬುದರ ಬಗ್ಗೆ ಗಮನ ಹರಿಸೋಣ .

* ಕಾರ್ಬೋ ಹೈಡ್ರೇಟ್ ಯುಕ್ತ ಆಹಾರಗಳನ್ನು ಆದಷ್ಟು ಕಡಿಮೆ ಮಾಡಬೇಕು .
* ಎಣ್ಣೆ ಪದಾರ್ಥಗಳಿಂದ ದೂರವಿರಿ . ಅಡುಗೆ ಮಾಡಲು ಮತ್ತು ಸೂಪ್ ಮಾಡಲು ' ವೆಜಿಟಬಲ್ ಬ್ರೋತ್ ' ಉಪಯೋಗಿಸಿ ಮತ್ತು ಅಡುಗೆಯ ಕನ್ಸಿಸ್ಟೆನ್ಸಿ ಕಾಪಾಡಿ .
* ದಿನ ನಿತ್ಯ ಮಾಡುವ ಅಡುಗೆಗೆ ಶುಂಠಿ , ಅರಿಶಿನ ಕೊಂಬು ಮತ್ತು ದಾಲ್ಚಿನ್ನಿಯನ್ನು ಉಪಯೋಗಿಸಿ . ಏಕೆಂದರೆ ಇವುಗಳಿಗೆ ಮನುಷ್ಯನ ದೇಹದ ಕೆಟ್ಟ ಕೊಬ್ಬಿನ ಅಂಶವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವ ಗುಣವಿದೆ .
* ಬೆಣ್ಣೆಯ ಮತ್ತು ಕೊಬ್ಬಿನ ಅಂಶವನ್ನು ಅಡುಗೆಯಲ್ಲಿ ಉಪಯೋಗಿಸುವುದನ್ನು ಕಡಿಮೆ ಮಾಡಿ . ಅದರಲ್ಲೂ ಬೆಣ್ಣೆಯ ಅಂಶವನ್ನು ತಿನ್ನಬೇಕೆಂದರೆ ತುಪ್ಪದ ರೂಪದಲ್ಲಿ ಅಥವಾ ರುಚಿಗೆ ಬೇಕೆಂದರೆ ಆಲಿವ್ ಆಯಿಲ್ ಕೂಡ ಉಪಯೋಗಿಸುವುದು ಒಳ್ಳೆಯದು .
* ಆದಷ್ಟು ನಿಮ್ಮ ಊಟದಲ್ಲಿ ಫೈಬರ್ ಅಂಶವನ್ನು ದುಪ್ಪಟ್ಟು ಗೊಳಿಸಿ ಮತ್ತು ಅಡುಗೆಯಲ್ಲಿ ಕಾಳುಗಳ ಉಪಯೋಗವನ್ನು ಜಾಸ್ತಿ ಮಾಡಿಕೊಳ್ಳಿ .
* ನೀವು ತಿನ್ನುವ ಆಹಾರದ ಪ್ರಮಾಣದ ಮೇಲೆ ಗಮನವಿರಿಸಿ .
* ಕೊನೆಯ ಮತ್ತು ಬಹಳ ಮುಖ್ಯ ಅಂಶ ಎಂದರೆ ರಾತ್ರಿಯ ಊಟವನ್ನು ಮಲಗುವ ಮುಂಚೆ 2 ರಿಂದ 3 ಗಂಟೆಗಳ ಮೊದಲು ಮಾಡುವುದನ್ನು ರೂಡಿ ಮಾಡಿಕೊಳ್ಳುವುದು.

Most Read: ರಾತ್ರಿಯ ಊಟ ಹೀಗಿರಲಿ..ಖಂಡಿತ ದೇಹದ ತೂಕ ಕಡಿಮೆಯಾಗುತ್ತದೆ...

ಊಟದ ವಿಷಯದಲ್ಲಿ ಸಮಯ ಪ್ರಜ್ಞೆ ಬಹಳ ಮುಖ್ಯ ಇದರಿಂದ ಆರೋಗ್ಯ ಬಹಳ ಚೆನ್ನಾಗಿರುತ್ತದೆ

ಸಾಮಾನ್ಯವಾಗಿ ಊಟದ ಸಮಯ ಮನುಷ್ಯನ ಜೀವನ ಶೈಲಿಯ ಮೇಲೆ ಮತ್ತು ಆತನ ಪ್ರತಿ ದಿನ ಶುರುವಾಗುವ ವೇಳಾಪಟ್ಟಿಯ ಮೇಲೆ ಅವಲಂಬಿತವಾಗಿರಬೇಕು ಎಂದು ಹೇಳುತ್ತಾರೆ . ಏಕೆಂದರೆ ಕೆಲವರು ಬೆಳಗ್ಗೆ ಬೇಗ ಏಳುತ್ತಾರೆ . ಇನ್ನೂ ಕೆಲವರು ಬೆಳಗ್ಗೆ 9 ಗಂಟೆ ಯವರೆಗೂ ಮಲಗಿಯೇ ಇರುತ್ತಾರೆ . ಯಾರು ದಿನ ನಿತ್ಯ ಬೇಗನೆ ಏಳುತ್ತಾರೋ , ಅವರು ತಮ್ಮ ದೇಹದ ಆರೋಗ್ಯದ ಜೊತೆಗೆ ತಮ್ಮ ದೇಹದ ತೂಕದ ಬಗ್ಗೆಯೂ ಯೋಚಿಸಬೇಕು . ಅವರ ದಿನ ನಿತ್ಯದ ತಿಂಡಿ ಮತ್ತು ಊಟ ಅವರು ಮಲಗುವ ಸಮಯದ ಮೇಲೆ ನಿಗದಿಯಾಗುವಂತೆ ಮಾಡಿಕೊಳ್ಳ ಬೇಕಾಗುತ್ತದೆ . ಉದಾಹರಣೆಗೆ ಆ ವ್ಯಕ್ತಿ ಪ್ರತಿ ದಿನ ರಾತ್ರಿ 10 ಗಂಟೆಗೆ ಮಲಗುವ ಅಭ್ಯಾಸ ಇಟ್ಟುಕೊಂಡಿದ್ದರೆ , ಸಂಜೆ 7 ಅಥವಾ 8 ಗಂಟೆಗೆ ಊಟ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು . ಮತ್ತು ಊಟವಾದ ಬಳಿಕ ಅರ್ಧ ಗಂಟೆ ವಾಕಿಂಗ್ ಮಾಡಬೇಕು . ನಂತರ ನಿಗದಿತ ಸಮಯಕ್ಕೆ ಮಲಗುವ ಅಭ್ಯಾಸ ಇಟ್ಟುಕೊಂಡರೆ ತಿಂದಿರುವ ಆಹಾರ ಕೂಡ ಬಹಳ ಚೆನ್ನಾಗಿ ಜೀರ್ಣವಾಗುತ್ತದೆ ಮತ್ತು ಒಳ್ಳೆಯ ನಿದ್ದೆ ಕೂಡ ಹತ್ತುತ್ತದೆ . ಅದೇ ನಾವು ಊಟ ಮಾಡಿದ ತಕ್ಷಣ ಮಲಗಿದರೆ ತಿಂದ ಆಹಾರ ದಲ್ಲಿನ ಕೊಬ್ಬಿನ ಅಂಶ ಹೊಟ್ಟೆಯ ಸುತ್ತಲೂ ಶೇಖರಣೆ ಗೊಳ್ಳುತ್ತಾ ಹೋಗುತ್ತದೆ . ಮತ್ತು ತಿಂದಿರುವ ಆಹಾರ ಸರಿಯಾಗಿ ಜೀರ್ಣ ಆಗದೆ ಬೆಳಗಿನ ಪಚನ ಶಕ್ತಿಯೂ ಕುಂಠಿತ ಗೊಳ್ಳುತ್ತದೆ .

ದೇಹದ ಆರೋಗ್ಯಕರ ಮೆಟಬೋಲಿಸಂ ಗೆ ಮತ್ತು ದೇಹದ ತೂಕ ನಿಯಂತ್ರಣಕ್ಕೆ ಕೆಲವು ಉಪಯುಕ್ತ ಟಿಪ್ಸ್ ಇಲ್ಲಿವೆ ಹಸಿದಾಗ ಊಟ ಮಾಡಬೇಕು ಎಂದು ದೊಡ್ಡವರೇ ಹೇಳಿದ ಮಾತು ನೆನಪಿಗೆ ಬರುತ್ತದೆ . ಇದು ನಿಜ ಕೂಡ . ಏಕೆಂದರೆ ಹೊಟ್ಟೆ ಹಸಿದಾಗ ನಾವು ಮಾಡುವ ಊಟದಲ್ಲಿನ ಆಹಾರ ದೇಹದಲ್ಲಿ ಕ್ಯಾಲೋರಿ ಯ ರೂಪದಲ್ಲಿ ಶೇಖರಣೆ ಗೊಂಡು ದೈಹಿಕ ಬೆಳವಣಿಗೆಗೆ ಸಹಕಾರಿ ಯಾಗುತ್ತದೆ . ಅದೇ ಹೊಟ್ಟೆ ಹಸಿವಿಲ್ಲದೆ ಮಾಡುವ ಊಟ ಯಾವ ರೀತಿಗೂ ಬದಲಾಗದೆ ಕೊಬ್ಬಿನ ಅಂಶದ ರೂಪದಲ್ಲಿ ದೇಹಕ್ಕೆ ಸೇರಿಕೊಳ್ಳುತ್ತಾ ಹೋಗುತ್ತದೆ . ಇದರಿಂದ ಮುಂದೆ ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಶುರುವಾಗುತ್ತವೆ.

Most Read: ತೂಕ ಇಳಿಸಬೇಕೇ? ರಾತ್ರಿ ಊಟಕ್ಕೆ ಇಂತಹ ಆಹಾರಗಳನ್ನು ಸೇವಿಸಿ

ನಾವು ಮಾಡುವ ಊಟ ನಮಗೆ ತೃಪ್ತಿದಾಯಕ ಆಗಿರಬೇಕು

ನಾವು ಎಷ್ಟು ಹೊತ್ತಿಗೆ ತಿನ್ನುತ್ತೇವೆ ಎನ್ನುವುದಕ್ಕಿಂತ ನಾವು ಏನು ತಿನ್ನುತ್ತೇವೆ ಎಂದು ಸೂಕ್ಷ್ಮವಾಗಿ ಗಮನಿಸಬೇಕು . ಅಂದರೆ ಅದೊಂದು ಕಂಪ್ಲೀಟ್ ಮೀಲ್ ಆಗಿರಬೇಕು . ಕಂಪ್ಲೀಟ್ ಮೀಲ್ ಎಂದರೆ ಅದರಲ್ಲಿ ಎಲ್ಲಾ ರೀತಿಯ ಪೌಷ್ಟಿಕಾಂಶಗಳೂ ಸೇರಿರಬೇಕು . ಆದಷ್ಟು ಕಡಿಮೆ ತಿನ್ನುವುದನ್ನು ರೂಡಿ ಮಾಡಿಕೊಳ್ಳಬೇಕು . ಯಥೇಚ್ಛವಾಗಿ ತಿಂದರೆ ಹೊಟ್ಟೆಯ ಸಮಸ್ಯೆ ಎದುರಿಸಬೇಕಾಗಬಹುದು .

ನಾವು ತಿನ್ನುವ ಆಹಾರ ತೆಳುವಿಕೆಯಿಂದ ಕೂಡಿರಬೇಕು . ಏಕೆಂದರೆ ಇಂತಹ ಆಹಾರ ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ ಮತ್ತು ನಮ್ಮ ದೇಹದ ತೂಕ ಹೆಚ್ಚಿಸುತ್ತದೆ . ನಮಗೆ ನಿಧಾನವಾಗಿ ನಿದ್ದೆ ಆವರಿಸ ತೊಡಗಿದರೆ ಮತ್ತು ಆಯಾಸವಾದಂತೆ ಕಂಡರೆ ನಮ್ಮ ರಾತ್ರಿಯ ಊಟ ಪ್ರತಿ ದಿನ ತಿನ್ನುವುದಕ್ಕಿಂತ ತುಂಬಾ ಜಾಸ್ತಿ ಆಯಿತೆಂದೇ ಅರ್ಥ.ಒಂದು ವೇಳೆ ನೀವು ಬೇಗನೆ ಊಟ ಮಾಡಲು ಇಷ್ಟ ಪಡದಿದ್ದರೆ , ಆದಷ್ಟು ನಿಮ್ಮ ಊಟದಲ್ಲಿ ಪ್ರೋಟೀನ್ ಅಂಶ ಇರುವ ಆಹಾರಗಳನ್ನೇ ಸೇರಿಸಿಕೊಳ್ಳಿ . ಉದಾಹರಣೆಗೆ ಮೊಸರು , ಬೆಣ್ಣೆ ಮತ್ತು ಡ್ರೈ ಫ್ರೂಟ್ಸ್ ಗಳಾದ ಬಾದಾಮಿ ಬೀಜಗಳು ಪ್ರೋಟೀನ್ ಅಂಶದಲ್ಲಿ ಯಥೇಚ್ಛವಾಗಿವೆ .

ವಿಶೇಷ ಟಿಪ್ಸ್

* ಒಳ್ಳೆಯ ಊಟ ಮಾಡಿ ನಿಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳಿ .
* ರಸ್ತೆ ಬದಿಯ ತಿಂಡಿಗಳಿಂದ ಆದಷ್ಟು ದೂರ ಇರಿ .
* ಮನೆ ಅಡುಗೆಯ ಕಡೆ ವಿಶೇಷ ಆಸಕ್ತಿ ಬೆಳೆಸಿಕೊಳ್ಳಿ .
* ತರಕಾರಿ , ಸೊಪ್ಪು ಮತ್ತು ಹಣ್ಣು ಹಂಪಲುಗಳಿಗೆ ನಿಮ್ಮ ದಿನ ನಿತ್ಯದ ಆಹಾರದಲ್ಲಿ ಸೇರಿಸಿಕೊಂಡು ನಿಮ್ಮ ಆರೋಗ್ಯ ವೃದ್ಧಿ ಪಡಿಸಿಕೊಳ್ಳಿ .

English summary

Eating Late Night Dinner Can Be Unhealthy

Dinner is the most important meal in a day. We often hear how breakfast is important to keep you going for the day, but dinner equally adds to a healthy digestive system. Your dinner is important to keep you full and nourished throughout the night for a healthy metabolism and weight management. Several factors are important when it comes to dinner. Right from what you are eating to the time you are eating your meal. We all know how late-night binging and late night dinners can lead to weight gain and other digestive problems.
X
Desktop Bottom Promotion