For Quick Alerts
ALLOW NOTIFICATIONS  
For Daily Alerts

ಈ ಆರು ತರಕಾರಿಗಳನ್ನು ಬೇಯಿಸಿಯೇ ತಿನ್ನಬೇಕೇ ಹೊರತು ಹಸಿಯಾಗಿಯಲ್ಲ

|

ವಿಜ್ಞನದ ಪ್ರಕಾರ ಕೆಲವು ತರಕಾರಿಗಳು ಮತ್ತು ಹಣ್ಣುಗಳನ್ನು ನಾವು ಹಸಿಯಾಗಿ ಸೇವಿಸಬಾರದು. ಇದಕ್ಕೆ ಪ್ರಮುಖ ಕಾರಣವೆಂದರೆ ಹಸಿಯಾಗಿ ಸೇವಿಸಿದರೆ ಇದರಲ್ಲಿರುವ ಪೋಷಕಾಂಶಗಳನ್ನು ನಾವು ಪಡೆದುಕೊಳ್ಳಲು ಸಾಧ್ಯವಾಗದೇ ಹೋಗುವುದಾಗಿದೆ.

ಆದರೆ ಈ ಸೂತ್ರ ಎಲ್ಲಾ ತರಕಾರಿ ಮತ್ತು ಹಣ್ಣುಗಳಿಗೆ ಅನ್ವಯಿಸುವುದಿಲ್ಲ. ಹಾಗಾಗಿ ಯಾವ ಹಣ್ಣು ತರಕಾರಿಗಳನ್ನು ಹಸಿಯಾಗಿ ಸೇವಿಸಬಹುದು ಮತ್ತು ಸೇವಿಸಬಾರದು ಎಂಬ ಬಗ್ಗೆ ನಮ್ಮಲ್ಲಿ ಸದಾ ಗೊಂದಲ ಮೂಡಿರುತ್ತದೆ. ಕೆಳಗೆ ವಿವರಿಸಿದ ಮಾಹಿತಿ ನಿಮ್ಮ ಗೊಂದಲವನ್ನು ನಿವಾರಿಸಲಿದೆ...

ಟೊಮಾಟೋ

ಟೊಮಾಟೋ

ಟೋಮಾಟೋದಲ್ಲಿರುವ ಲೈಕೋಪೀನ್ ಮತ್ತು ಇತರ ಆಂಟಿ ಆಕ್ಸಿಡೆಂಟುಗಳು ಬೇಯಿಸಿದ ಬಳಿಕವೇ ಜೀರ್ಣಗೊಳ್ಳಲು ಲಭ್ಯವಾಗುತ್ತವೆ. ಬಿಸಿಗೆ ಟೊಮಾಟೋದ ಜೀವಕೋಶಗಳ ಹೊರಪದ ಒಡೆದು ಸುಲಭವಾಗಿ ಜೀರ್ಣಗೊಳ್ಳಲು ನೆರವಾಗುತ್ತದೆ ಹಾಗೂ ದೇಹ ಲೈಕೋಪೀನ್ ಅನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ.

Most Read:ತರಕಾರಿಗಳನ್ನು ಬೇಯಿಸಿ ಸೇವಿಸಿದರೆ, ದುಪ್ಪಟ್ಟು ಲಾಭ!

ಆಲೂಗಡ್ಡೆ

ಆಲೂಗಡ್ಡೆ

ಆಲುಗಡ್ಡೆ ಬೇಯಿಸಿದ ಬಳಿಕವೇ ತಿನ್ನಲು ರುಚಿಯಾಗಿರುತ್ತದೆ. ಏಕೆಂದರೆ ಹಸಿ ಆಲೂಗಡ್ಡೆಯ ರುಚಿ ನಮ್ಮ ನಾಲಿಗೆಗಳಿಗೆ ರುಚಿಸುವುದಿಲ್ಲ ಹಾಗೂ ಇದರಲ್ಲಿರುವ ಬೀಟಾ ಕ್ಯಾರೋಟೀನ್ ಗಳ ಪ್ರಮಾಣ ಬೇಯಿಸಿದ ಬಳಿಕವೇ ಅಧಿಕಗೊಳ್ಳುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ.

ಕ್ಯಾರೆಟ್

ಕ್ಯಾರೆಟ್

ಗಜ್ಜರಿ ಅಥವಾ ಕ್ಯಾರೆಟ್ ನಲ್ಲಿರುವ ಬೀಟಾ ಕ್ಯಾರೋಟೀನ್ ಗಳು ಬೇಯಿಸಿದ ಬಳಿಕವೇ ಅಧಿಕವಾಗಿ ಬಿಡುಗಡೆಗೊಳ್ಳುತ್ತವೆ. ಜೀರ್ಣ ಕ್ರಿಯೆಯಲ್ಲಿ ಈ ಬೀಟಾ ಕ್ಯಾರೋಟೋನ್ ವಿಟಮಿನ್ ಎ ಆಗಿ ಪರಿವರ್ತಿತವಾಗುತ್ತದೆ. ನಮಗೆ ಸಾಲಾಡ್ ರೂಪದಲ್ಲಿ ಕ್ಯಾರೆಟ್ ಅನ್ನು ಹಸಿಯಾಗಿ ಸೇವಿಸುವ ಅಭ್ಯಾಸವಿದ್ದರೂ ಬೇಯಿಸಿದ ಬಳಿಕವೇ ಇದು ಹೆಚ್ಚು ಆರೋಗ್ಯಕರವಾಗಿದೆ. ಹಾಗಾಗಿ ಇನ್ನು ಮುಂದೆ ಬೇಯಿಸಿದೇ ಕ್ಯಾರೆಟ್ ಅನ್ನು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳುವುದೇ ಒಳಿತು.

ಹೂಕೋಸು

ಹೂಕೋಸು

ಹೂಕೋಸು ನೋಡಲು ಸುಂದರವಾಗಿದ್ದರೂ ಹಸಿಯಾಗಿ ತಿನ್ನಲು ಯೋಗ್ಯವಲ್ಲ ಹಾಗೂ ತಿಂದರೆ ಇದು ನಮಗೆ ಸುಲಭವಾಗಿ ಜೀರ್ಣವಾಗುವುದೂ ಇಲ್ಲ. ಹಾಗಾಗಿ ಹಬೆಯಲ್ಲಿ ಬೇಯಿಸಿ ಅಥವಾ ಪಲ್ಯದ ರೂದದಲ್ಲಿ ಸೇವಿಸುವುದು ಉತ್ತಮ ಆಯ್ಕೆಯಾಗಿದ್ದು ಈ ಮೂಲಕ ಇದರಲ್ಲಿರುವ ಪೋಷಕಾಂಶಗಳನ್ನು ಗರಿಷ್ಟ ಪ್ರಮಾಣದಲ್ಲಿ ಸೇವಿಸಬಹುದು.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಪಾಲಕ್ ಬಸಲೆ ಮೊದಲಾದ ದಪ್ಪನೆಯ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣ, ಕ್ಯಾಲ್ಸಿಯಂ ಹಾಗೂ ಮೆಗ್ನೇಶಿಯಂ ಇವೆ. ಬೇಯಿಸಿದ ಬಳಿಕ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳ ಪ್ರಮಾಣವೂ ಹೆಚ್ಚುತ್ತದೆ. ಹಾಗಾಗಿ, ನಿಮ್ಮ ತಾಯಿ ಪಾಲಕ್ ಪನೀರ್ ಮಾಡಿ ಬಡಿಸಿದರೆ ಯಾವುದೇ ತಕರಾರು ಒಡ್ಡದೇ ಸೇವಿಸಿ.

ಬ್ರೋಕೋಲಿ

ಬ್ರೋಕೋಲಿ

ಬ್ರೋಕೋಲಿಯನ್ನು ಹಸಿಯಾಗಿ ತಿಂದರೆ ಕೆಲವಾರು ಪ್ರಯೋಜನಗಳಿವೆ ಎಂಬ ಮಾಹಿತಿಗೆ ಹಲವಾರು ತಕರಾರುಗಳಿವೆ. ಆದರೆ ಬ್ರೋಕೋಲಿಯನ್ನು ಹಸಿಯಾಗಿ ಜೀರ್ಣಿಸಿಕೊಳ್ಳುವುದು ನಮ್ಮ ಜೀರ್ಣಾಂಗಗಳಿಗೆ ಬಹಳ ಕಷ್ಟಕರವಾದ ವಿಷಯವಾಗಿದೆ. ಹಾಗಾಗಿ ಬ್ರೋಕೋಲಿಯನ್ನೂ ಹಬೆಯಲ್ಲಿ ಬೇಯಿಸಿ ಸೇವಿಸಿದಾಗ ಮಾತ್ರವೇ ಇದರಲ್ಲಿರುವ ಪೋಷಕಾಂಶಗಳನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಬಹುದು.

English summary

Eat these 6 Veggies Cooked not Raw

According to science, there are various fruits and vegetables which should not be consumed raw. The main factor being nutrient absorption in our body. If you are also under the constant dilemma of what vegetables and fruits you should eat raw or cooked
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X