For Quick Alerts
ALLOW NOTIFICATIONS  
For Daily Alerts

ರಾತ್ರಿ ಮಲಗುವ ಮುನ್ನ ಒಂದು ಲೋಟ ಉಗುರು ಬೆಚ್ಚಗಿನ ಬಿಸಿನೀರು ಕುಡಿಯಿರಿ-ಆರೋಗ್ಯವಾಗಿರುವಿರಿ

|

ಉತ್ತಮ ಆರೋಗ್ಯಕ್ಕೆ ಬೆಳಗ್ಗಿನ ಪ್ರಥಮ ಆಹಾರವಾಗಿ ಉಗುರುಬೆಚ್ಚನೆಯ ನೀರನ್ನು ಕುಡಿಯುವುದರ ಮಹತ್ವವನ್ನು ತಜ್ಞರು ವಿವರಿಸುತ್ತಲೇ ಬಂದಿದ್ದಾರೆ. ರಾತ್ರಿಯ ಅನೈಚ್ಛಿಕ ಕಾರ್ಯಗಳ ಬಳಿಕ ಮುಂಜಾನೆ ಎದ್ದ ಬಳಿಕ ಪ್ರಾರಂಭವಾಗುವ ಐಚ್ಛಿಕ ಕಾರ್ಯಗಳು ಸುಗಮವಾಗಿ ನೆರವೇರಲು ನೀರು ಅಗತ್ಯವಾಗಿ ಬೇಕಾಗಿದ್ದು ಈ ನೀರು ತಣ್ಣಗಿದ್ದರೆ ಈ ಕಾರ್ಯಗಳು ಸರಿಯಾಗಿ ನೆರವೇರಲಾರವು. ಹಾಗಾಗಿ ಈ ಸಮಯದಲ್ಲಿ ಉಗುರುಬೆಚ್ಚನೆಯ ನೀರಿನ ಸೇವನೆಯೇ ಅತ್ಯುತ್ತಮ. ಆದರೆ ರಾತ್ರಿ ಮಲಗುವ ಮುನ್ನವೂ ಉಗುರುಬೆಚ್ಚನೆಯ ನೀರನ್ನು ಸೇವಿಸುವುದರಿಂದ ಲಾಭವಿದೆ ಎಂದು ನಿಮಗೆ ಗೊತ್ತಿತ್ತೇ?

ಸಾಮಾನ್ಯವಾಗಿ ಪ್ರಯಾಣಕ್ಕೂ ಮುನ್ನ ನೀರು ಕುಡಿಯದೇ ಇರುವುದರಿಂದ ಪ್ರಯಾಣದ ನಡುವೆ ಮೂತ್ರವಿಸರ್ಜನೆಗೆ ಅವಸರವಾಗದಿರಲು ಸಾಧ್ಯವಾಗುತ್ತದೆ ಎಂಬ ವಾದದಂತೆಯೇ ರಾತ್ರಿ ಮಲಗುವ ಮುನ್ನ ನಡುರಾತ್ರಿ ಮೂತ್ರವಿಸರ್ಜನೆಗೆ ಏಳಬೇಕಾಗಿ ಬರಬಹುದು ಎಂಬ ಆತಂಕದಿಂದ ಹಲವರು ನೀರನ್ನೇ ಕುಡಿಯುವುದಿಲ್ಲ. ಆದರೆ ರಾತ್ರಿಯ ಅನೈಚ್ಛಿಕ ಕಾರ್ಯಗಳಿಗೂ ನೀರು ಅಗತ್ಯವಾಗಿ ಬೇಕಾಗಿದ್ದು ಈ ನೀರು ಉಗುರುಬೆಚ್ಚಗಿದ್ದರೆ ಅತ್ಯುತ್ತಮವಾಗಿರುತ್ತದೆ ಹಾಗೂ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನಂಬಿಕೆ ಬರಲ್ಲಿಲ್ಲವೇ: ಮುಂದೆ ಓದಿ: ಉಗುರುಬೆಚ್ಚನೆ ನೀರಿನ ಸೇವನೆಯ ಪ್ರಯೋಜನಗಳು: ರಾತ್ರಿ ಮಲಗುವ ಮುನ್ನ ಕುಡಿದರೆ ಹೇಗೆ ಪ್ರಯೋಜಕ?

ಉದ್ವೇಗ ಮತ್ತು ಖಿನ್ನತೆಯ ವಿರುದ್ಧ ಹೋರಾಡುತ್ತದೆ

ಉದ್ವೇಗ ಮತ್ತು ಖಿನ್ನತೆಯ ವಿರುದ್ಧ ಹೋರಾಡುತ್ತದೆ

ಹಲವಾರು ಸಂಶೋಧನೆಗಳ ಮೂಲಕ ಸಾಬೀತುಪಡಿಸಲಾಗಿರುವ ವಿಷಯದ ಪ್ರಕಾರ ರಾತ್ರಿ ಮಲಗಿದ್ದ ಸಮಯದಲ್ಲಿ ದೇಹದಲ್ಲಿ ನೀರಿನ ಕೊರತೆಯುಂಟಾದರೆ ಇದರಿಂದ ಮಾನಸಿಕ ಒತ್ತಡವೂ ಹೆಚ್ಚುತ್ತದೆ ಹಾಗೂ ಖಿನ್ನತೆಗೆ ಕಾರಣವಾಗಬಲ್ಲುದು. ಇದು ನಿದ್ದೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿ ನಿದ್ದೆಯ ಕ್ರಮವನ್ನೇ ಬದಲಿಸಿಬಿಡಬಹುದು. ಹಾಗಾಗಿ ರಾತ್ರಿ ಮಲಗುವ ಮುನ್ನ ಒಂದು ಲೋಟ ಉಗುರುಬೆಚ್ಚನೆಯ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆಯಾಗದೇ ಎಲ್ಲಾ ಕಾರ್ಯಗಳು ಸುಗಮವಾಗಿ ನೆರವೇರುತ್ತವೆ ಹಾಗೂ ಮಾನಸಿಕ ಶಾಂತಿ ಕದಡುವ ಕಾರಣಗಳೂ ಇಲ್ಲವಾಗುತ್ತವೆ.

ದೇಹದಿಂದ ಕಲ್ಮಶಗಳನ್ನು ತೊಡೆಯಲು ಸಾಧ್ಯವಾಗುತ್ತದೆ

ದೇಹದಿಂದ ಕಲ್ಮಶಗಳನ್ನು ತೊಡೆಯಲು ಸಾಧ್ಯವಾಗುತ್ತದೆ

ಉಗುರುಬೆಚ್ಚನೆಯ ನೀರು ದೇಹದ ತಾಪಮಾನವನ್ನೂ ಕೊಂಚ ಹೆಚ್ಚಿಸುತ್ತದೆ ಹಾಗೂ ಈ ತಾಪಮನಾವನ್ನು ತಗ್ಗಿಸಲು ಹೆಚ್ಚು ಬೆವರಬೇಕಾಗುತ್ತದೆ. ತನ್ಮೂಲಕ ರಕ್ತಪರಿಚಲನೆಯೂ ಉತ್ತಮ ಗೊಳ್ಳುತ್ತದೆ ಹಾಗೂ ಕಲ್ಮಶಗಳು ಪೂರ್ಣವಾಗಿ ದೇಹದಿಂದ ಹೊರಹಾಕಲ್ಪಡುತ್ತವೆ. ಹಾಗಾಗಿ ಪ್ರತಿರಾತ್ರಿಯೂ ಮಲಗುವ ಮುನ್ನ ಒಂದು ಲೋಟ ಉಗುರುಬೆಚ್ಚನೆಯ ನೀರನ್ನು ಕುಡಿಯುವುದನ್ನು ಅಬ್ಯಾಸ ಮಾಡಿಕೊಳ್ಳುವುದೇ ಜಾಣತನವಾಗಿದೆ.

ಕಳೆದುಕೊಂಡಿದ್ದ ದ್ರವವನ್ನು ಮರುದುಂಬಿಸುತ್ತದೆ

ಕಳೆದುಕೊಂಡಿದ್ದ ದ್ರವವನ್ನು ಮರುದುಂಬಿಸುತ್ತದೆ

ದಿನದ ಹತ್ತು ಹಲವು ಕಾರ್ಯಗಳ ಮೂಲಕ ದೇಹ ನೀರನ್ನು ಕಳೆದುಕೊಳ್ಳುತ್ತಾ ಇರುತ್ತದೆ. ಬೆವರು, ಮೂತ್ರ, ಮಲವಿಸರ್ಜನೆ ಮೊದಲಾದವುಗಳಿಂದ ದೇಹದಿಂದ ದ್ರವ ಹೊರಹೋಗುತ್ತದೆ. ಆದರೆ ದೇಹದ ವ್ಯವಸ್ಥೆ ಸುಗಮವಾಗಿ ಸಾಗುತ್ತಿರಲು ನೀರಿನ ಪೂರೈಕೆಯಾಗುತ್ತಲೇ ಇರಬೇಕು. ರಾತ್ರಿ ಮಲಗುವ ಮುನ್ನ ಕುಡಿಯುವ ಒಂದು ಲೋಟ ಉಗುರುಬೆಚ್ಚನೆಯ ನೀರು ರಾತ್ರಿಯ ಸಮಯದ ದೇಹದ ಕಾರ್ಯಗಳನ್ನು ಸುಗಮವಾಗಿ ನಡೆಸಿಕೊಡುತ್ತದೆ ಹಾಗೂ ಯಾವುದೇ ಬಗೆಯ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ.

ಜೀರ್ಣಕ್ರಿಯೆಗೆ ಸಹಕರಿಸುತ್ತದೆ

ಜೀರ್ಣಕ್ರಿಯೆಗೆ ಸಹಕರಿಸುತ್ತದೆ

ಸಾಮಾನ್ಯ ನೀರಿಗಿಂತಲೂ ಬೆಚ್ಚನೆಯ ನೀರಿನಲ್ಲಿ ಆಹಾರವಸ್ತುಗಳು ಹೆಚ್ಚು ಸುಲಭವಾಗಿ ಕರಗುತ್ತವೆ. ಇದೇ ರೀತಿಯಾಗಿ ರಾತ್ರಿ ಮಲಗುವ ಮುನ್ನ ಕುಡಿಯುವ ಉಗುರುಬೆಚ್ಚನೆಯ ನೀರಿನಲ್ಲಿ ಆಹಾರದ ಅನಗತ್ಯ ಭಗವೂ ಕರಗುತ್ತದೆ ಹಾಗೂ ಜೀರ್ಣಕ್ರಿಯೆ ಈಗ ಹೆಚ್ಚು ಸುಲಭವಾಗುತ್ತದೆ. ರಾತ್ರಿಯ ಸಮಯದಲ್ಲಿ ನಮ್ಮ ಜೀರ್ಣಕ್ರಿಯೆ ಕಡಿಮೆ ಸಾಮರ್ಥ್ಯದಲ್ಲಿ ಜರುಗುವುದರಿಂದ ಈಗಾಗಲೇ ಕರಗಿರುವ ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗಿ, ಇನ್ನಷ್ಟು ಕ್ಷಿಪ್ರವಾಗಿ ಹಾಗೂ ಯಾವುದೇ ತಡೆಯಿಲ್ಲದೇ ಪೂರೈಸಲು ಸಾಧ್ಯವಾಗುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ರಾತ್ರಿಯ ಸಮಯದಲ್ಲಿ ಅನೈಚ್ಛಿಕವಾಗಿ ನಡೆಯುವ ಜೀರ್ಣಕ್ರಿಯೆಯಲ್ಲಿ ಆಹಾರ ಪರಿಪೂರ್ಣವಾಗಿ ಜೀರ್ಣಗೊಳ್ಳಲು ಸಾಧ್ಯವಾಗುತ್ತದೆ ಹಾಗೂ ಇನ್ನಷ್ಟು ಬೇಗನೇ ಆಹಾರವನ್ನು ಒಡೆಯಲು ನೆರವಾಗುತ್ತದೆ. ತನ್ಮೂಲಕ ತೂಕ ಇಳಿಸುವ ಪ್ರಕ್ರಿಯೆಯೂ ಚುರುಕಾಗಿ ನಡೆಯುತ್ತದೆ.

ಇಂದಿನಿಂದಲೇ ರಾತ್ರಿ ಮಲಗುವ ಮುನ್ನ ಒಂದು ಲೋಟ ಉಗುರುಬೆಚ್ಚನೆಯ ನೀರು ಕುಡಿಯಿರಿ

ಇಂದಿನಿಂದಲೇ ರಾತ್ರಿ ಮಲಗುವ ಮುನ್ನ ಒಂದು ಲೋಟ ಉಗುರುಬೆಚ್ಚನೆಯ ನೀರು ಕುಡಿಯಿರಿ

ಈ ಮಾಹಿತಿಯನ್ನು ಹಲವಾರು ಆಹಾರ ತಜ್ಞರು ಈಗಾಗಲೇ ಪುಷ್ಟೀಕರಿಸಿದ್ದು ಉಗುರುಬೆಚ್ಚನೆಯ ನೀರಿನ ಸೇವನೆ ಆರೋಗ್ಯಕ್ಕೆ ಅತ್ಯುತ್ತಮ ಎಂದು ವಿವಿರಿಸಿದ್ದಾರೆ. ಹಾಗಾಗಿ ಇಂದಿನಿಂದಲೇ ದಿನದ ಪ್ರಥಮ ಆಹಾರವಾಗಿ ಹಾಗೂ ರಾತ್ರಿ ಮಲಗುವ ಮುನ್ನ ದಿನದ ಕೊನೆಯ ಆಹಾರವಾಗಿ ಒಂದು ಲೋಟ ಉಗುರುಬೆಚ್ಚನೆಯ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಹಾಗೂ ಕೆಲವೇ ದಿನಗಳಲ್ಲಿ ಇದರ ಅದ್ಭುತ ಮತ್ತು ಗಮನಾರ್ಹ ಪರಿಣಾಮವನ್ನು ಗಮನಿಸುವಿರಿ.

English summary

Drink Warm Water Before Bed For A Healthy Living

Warm water plays a vital part in the smooth running of all bodily functions as cold water is devoid of many important nutrients. We have all heard and read about how drinking a glass of warm water right out of bed promotes health and beauty. But, did you know adapting the same habit right before going to bed is also good for us?Many people avoid drinking water at bedtime lest they feel the need to urinate during the night and ruin their sleep pattern. What they don't know is drinking warm water before hitting the bed will actually lead to better sleep in addition to providing other health benefits
X
Desktop Bottom Promotion