For Quick Alerts
ALLOW NOTIFICATIONS  
For Daily Alerts

ಹೊಟ್ಟೆಯುಬ್ಬರಿಕೆ ಸಮಸ್ಯೆ ಇದ್ದರೆ, ಊಟಕ್ಕೆ ಮೊದಲು ಇಂತಹ ಪಾನೀಯ ಕುಡಿಯಿರಿ

|

ಹೊಟ್ಟೆಯುಬ್ಬರಿಕೆಯನ್ನು ಸರಳ ಪದಗಳಲ್ಲಿ ವಿವರಿಸಬಹುದೆಂದರೆ ಊಟದ ಬಳಿಕ ಹೊಟ್ಟೆಯ ಭಾಗ ಊದಿಕೊಳ್ಳುವುದು. ಹೊಟ್ಟೆ ಉಬ್ಬಿದ್ದಾಗ ಅಸಹನೆ, ವಾಕರಿಕೆ ಮತ್ತು ಅಸಮಾಧಾನಕರ ಅನುಭವ ಎದುರಾಗುತ್ತದೆ ಹಾಗೂ ನಿತ್ಯದ ಕಾರ್ಯಗಳನ್ನು ನಿರ್ವಹಿಸಲು ತೊಡಕಾಗುತ್ತದೆ.

ಹೊಟ್ಟೆಯುಬ್ಬರಿಕೆಗೆ ಏಕೆ ಎದುರಾಗುತ್ತದೆ?

ಜಠರದಲ್ಲಿ ಉತ್ಪತ್ತಿಯಾದ ಅಧಿಕ ಪ್ರಮಾಣದ ವಾಯು ಅಥವಾ ಜೀರ್ಣಕ್ರಿಯೆಗೆ ಬಳಸಲ್ಲಡುವ ಸ್ನಾಯುಗಳ ಚಲನೆಯಲ್ಲಿ ಏನಾದರೂ ತೊಂದರೆಯಾದರೆ ಹೊಟ್ಟೆಯುಬ್ಬರಿಕೆ ಎದುರಾಗುತ್ತದೆ. ಪರಿಣಾಮವಾಗಿ ಹೊಟ್ಟೆಯ ಭಾಗದಲ್ಲಿ ನೋವು, ಹೊಟ್ಟೆ ಸಾಮರ್ಥ್ಯಕ್ಕೂ ಮೀರಿ ತುಂಬಿದ ಭಾವನೆ ಮೂಡಿ ಕಿರಿಕಿರಿ ಎದುರಾಗುತ್ತದೆ.

Drink

ಹೊಟ್ಟೆಯುಬ್ಬರಿಕೆಗೆ ಎದುರಾಗಿದೆ ಎಂದರೆ ಜಠರ ಹಾಗೂ ಜೀರ್ಣಾಂಗಗಳಲ್ಲಿ ಹೆಚ್ಚಿನ ಪ್ರಮಾಣದ ಘನ, ದ್ರವ ಮತ್ತು ಅನಿಲದ ಪ್ರಮಾಣ ಹೆಚ್ಚಿದೆ ಎಂದು ಅರ್ಥ. ಯಾವುದೇ ಸಮಯದಲ್ಲಿ ಈ ತೊಂದರೆ ಸುಮಾರು 16-30 ಶೇಖಡಾ ವ್ಯಕ್ತಿಗಳಿಗೆ ಸದಾ ಎದುರಾಗುತ್ತದೆ. ಇದೇ ಕಾರಣಕ್ಕೆ ಈ ತೊಂದರೆಯನ್ನು ವೈದ್ಯರು ಸಾಮಾನ್ಯವಾಗಿ ಎದುರಾಗುವ ಕಾಯಿಲೆ ಎಂದು ಪರಿಗಣಿಸುತ್ತಾರೆ.

ಖ್ಯಾತ ಆಹಾರತಜ್ಞ ಲ್ಯೂಕ್ ಕುಟಿನ್ಹೋರವರು ಈ ತೊಂದರೆಯಿಂದ ರಕ್ಷಿಸಲು ಕೆಲವು ಸುಲಭ ಮನೆಮದ್ದುಗಳನ್ನು ಪ್ರಸ್ತುತಪಡಿಸುತ್ತಿದ್ದು ಈ ಸರಳ ವಿಧಾನಗಳನ್ನು ಅನುಸರಿಸಿದ ಎರಡರಿಂದ ಮೂರು ವಾರಗಳಲ್ಲಿಯೇ ಹೊಟ್ಟೆಯುಬ್ಬರಿಕೆ ಇಲ್ಲವಾಗುತ್ತದೆ. ಇವರ ವಿಧಾನ ಹೀಗಿದೆ:

ಅಗತ್ಯವಿರುವ ವಸ್ತುಗಳು

  • ಒಂದು ಚಿಕ್ಕ ಚಮಚ ಇಸಬ್ಗೋಲ್ (psyllium husk)
  • ಒಂದು ಲೋಟ (200-250 ಮಿಲೀ) ನೀರು
  • ಎರಡು ದೊಡ್ಡ ಚಮಚ ಸೇಬಿನ ಶಿರ್ಕಾ

ತಯಾರಿಕಾ ವಿಧಾನ:

ಒಂದು ಲೋಟ ನೀರಿನಲ್ಲಿ ಇವೆರಡೂ ಸಾಮಾಗ್ರಿಗಳನ್ನು ಹಾಕಿ ಚೆನ್ನಾಗಿ ಕಲಕಿ ಊಟಕ್ಕೂ ಮುನ್ನ ಸೇವಿಸಬೇಕು.

ಒಂದು ವೇಳೆ ಶಿರ್ಕಾದ ರುಚಿ ನಿಮಗೆ ಹಿಡಿಸದೇ ಇದ್ದರೆ ಇದರ ಪ್ರಮಾಣವನ್ನು ಒಂದು ಚಮಚಕ್ಕಿಳಿಸಬಹುದು. ಇದೂ ಇಷ್ಟವಾಗದಿದ್ದರೆ ಶಿರ್ಕಾ ಇಲ್ಲದಿದ್ದರೂ ಸರಿ. ಬರೆಯ ಇಸಬ್ಗೋಲ್ ಸಹಾ ಆಗಬಹುದು.

ಈ ದ್ರವಾಹಾರವನ್ನು ಊಟಕ್ಕೂ ಸುಮಾರು ಇಪ್ಪತ್ತರಿಂದ ಮೂವತ್ತು ನಿಮಿಷ ಮೊದಲು ಸೇವಿಸಬೇಕು. ಉತ್ತಮ ಪರಿಣಾಮಕ್ಕಾಗಿ ದಿನದ ಮೂರೂ ಹೊತ್ತಿನ ಊಟಗಳ ಮುನ್ನ ಕುಡಿಯಬೇಕು.

ಈ ಶಿರ್ಕಾ ಸಾಂಪ್ರಾದಾಯಿಕ ವಿಧಾನದಲ್ಲಿ ತಯಾರಿಸಲ್ಪಟ್ಟಿರಬೇಕು. ಕಾರ್ಖಾನೆಯಲ್ಲಿ ತಯಾರಾದ ಶಿರ್ಕಾ ಉಪಯೋಗವಿಲ್ಲ. ಸಾವಯವ ಶಿರ್ಕಾ ಜೀರ್ಣಾಂಗಗಳಲ್ಲಿರುವ ಆರೊಗ್ಯಸ್ನೇಹಿ ಬ್ಯಾಕ್ಟೀರಿಯಾಗಳನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗುವ ಮೂಲಕ ಹೊಟ್ಟೆಯುಬ್ಬರಿಕೆಯಾಗದಂತೆ ತಡೆಯುತ್ತದೆ.

ಈ ದ್ರವ ಹೇಗೆ ಕೆಲಸ ಮಾಡುತ್ತದೆ?

ಈ ದ್ರವ ಹೊಟ್ಟೆಯಲ್ಲಿ ಉಬ್ಬರಿಕೆಯಾಗದಂತೆ, ವಾಯು ತುಂಬಿಕೊಳ್ಳದಂತೆ ಹಾಗೂ ಹೊಟ್ಟೆಯ ಒತ್ತಡ ಬಾಯಿಯ ಮೂಲಕ ಹೊರಬರುವಂತಹ ಅನುಭವಗಳನ್ನು ಇಲ್ಲವಾಗಿಸುತ್ತದೆ. ಈ ದ್ರವದ ಸೇವನೆಯ ಬಳಿಕ ಜಠರದ ಒಳಪದರದಲ್ಲಿ ಕೊಂಚ ಹೆಚ್ಚು ಜಠರ ರಸ ಸ್ರವಿಸಲು ಪ್ರಚೋದನೆ ನೀಡುತ್ತದೆ ಹಾಗೂ ತನ್ಮೂಲಕ ಜಠರರಸ ಕೊಂಚ ಹೆಚ್ಚು ಆಮ್ಲೀಯವಾಗುತ್ತದೆ. ಈ ಜೀರ್ಣರಸ ನಮ್ಮ ಆಹಾರದಲ್ಲಿರುವ ಪ್ರೋಟೀನ್ ಮತ್ತು ಬ್ಯಾಕ್ಟೀರಿಯಾಗಳನ್ನು ಒಡೆಯಲು ನೆರವಾಗುತ್ತದೆ. ಹಾಗಾಗಿ ಆಹಾರ ಯಾವುದೇ ಅನಗತ್ಯ ವಾಯುವಿನ ಉತ್ಪನ್ನವಿಲ್ಲದೇ ಅಪಾನವಾಯುವಾಗದೇ ಹೊಟ್ಟೆಯುಬ್ಬರಿಕೆಯಿಂದ ರಕ್ಷಣೆ ದೊರಕುತ್ತದೆ. ಈ ದ್ರವ ಕೇವಲ ಜಠರ ಮಾತ್ರವಲ್ಲ, ಇಡಿಯ ಜೀರ್ಣವ್ಯವಸ್ಥೆಗೇ ಒಳ್ಳೆಯದಾಗಿದೆ.

Drink

ಈ ವಿಧಾನವನ್ನೂ ನೀವು ಪ್ರಯತ್ನಿಸಬಹುದು.

ಒಂದು ವೇಳೆ ನೀವು ಈ ದ್ರವವನ್ನು ದಿನಕ್ಕೆರಡು ಬಾರಿ ಕುಡಿಯುವವರಾದರೆ ಒಂದು ಹೊತ್ತಿನಲ್ಲಿ ಕೊಂಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಸೇವಿಸಬಹುದು. ಈ ಮೂಲಕ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಮಟ್ಟ ಏರುವುದನ್ನು ತಡೆಯಬಹುದು. ಸಾಮಾನ್ಯವಾಗಿ ಊಟದ ಬಳಿಕ ರಕ್ತದಲ್ಲಿ ಸಕ್ಕರೆಯ ಮಟ್ಟ ಶೀಘ್ರವಾಗಿ ಏರುತ್ತದೆ.

ಅಲ್ಲದೇ, ಈ ದ್ರವ ಎಲ್ಲರಿಗೂ ಒಗ್ಗದೇ ಇರಬಹುದು. ಒಂದು ವೇಳೆ ಈ ದ್ರವ ನಿಮಗೆ ಒಗ್ಗದೇ ಇದ್ದರೆ ಈ ವಿಧಾನವನ್ನು ಮುಂದುವರೆಸದಿರಿ. ಏಕೆಂದರೆ ಪ್ರತಿಯೊಬ್ಬರ ಶಾರೀರವೂ ಬೇರೆಬೇರೆಯಾಗಿದ್ದು ಬೇರೆ ಬೇರೆಯಾಗಿ ಕಾರ್ಯನಿರ್ವಹಿಸುತ್ತದೆ.

ಈ ವಿಧಾನ ಪೂರ್ಣವಾಗಿ ಕಾರ್ಯನಿರ್ವಹಿಸಬೇಕಾದಾದರೆ ಸತತವಾಗಿ ಸುಮಾರು ಕನಿಷ್ಟ ಎರಡರಿಂದ ಮೂರು ವಾರವಾದರೂ ಸೇವಿಸಬೇಕು.

English summary

Drink THIS before meals to prevent bloating

In simple words, bloating is when your belly feels swollen after eating. This swollen belly can make you feel uncomfortable, nauseous and difficult to carry on with your regular work.Bloating is caused by excessive gas production or disturbance in the movement of the muscles of the digestive system. It can cause pain, make you feel stuffed and uncomfortable.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more