For Quick Alerts
ALLOW NOTIFICATIONS  
For Daily Alerts

ಪಾರ್ಶ್ವವಾಯು ಮತ್ತು ಹೃದಯಾಘಾತವನ್ನು ನಿಯಂತ್ರಿಸಲು, ದಿನಾ ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯಿರಿ

|

ಪ್ರತಿಯೊಂದು ಹಣ್ಣಿನಲ್ಲೂ ವಿವಿಧ ರೀತಿಯ ಪೋಷಕಾಂಶಗಳು ಹಾಗೂ ವಿಟಮಿನ್ ಗಳು ಲಭ್ಯವಿದೆ. ಹಣ್ಣುಗಳನ್ನು ನಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡರೆ ಆಗ ನಮ್ಮ ಆರೋಗ್ಯವು ಚೆನ್ನಾಗಿ ಇರುವುದು. ಹಣ್ಣುಗಳನ್ನು ನೇರವಾಗಿ ತಿನ್ನುವ ಬದಲು ಹೆಚ್ಚಾಗಿ ಜ್ಯೂಸ್ ಮಾಡಿಕೊಂಡು ಕುಡಿಯಲಾಗುತ್ತದೆ. ಜ್ಯೂಸ್ ಕೂಡ ಆರೋಗ್ಯಕಾರಿ. ಆದರೆ ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಜ್ಯೂಸ್ ಕುಡಿಯುವ ವೇಳೆ ನಾವು ಇದಕ್ಕೆ ಸಕ್ಕರೆ ಹಾಕಿಕೊಳ್ಳಬಾರದು. ಸಕ್ಕರೆ ಮುಕ್ತವಾದ, ತಾಜಾ ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೀಗಾಗಿ ನಾವು ಆಯಾಯ ಋತುಗಳಲ್ಲಿ ಸಿಗುವಂತಹ ಹಣ್ಣುಗಳ ಜ್ಯೂಸ್ ತಯಾರಿಸಿಕೊಂಡು ಕುಡಿಯಬೇಕು.

orange juice

ಫಿಟ್ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಇಂದಿನ ದಿನಗಳಲ್ಲಿ ಹೆಚ್ಚಿನವರು ತಮ್ಮ ಆಹಾರ ಕ್ರಮದಲ್ಲಿ ಕಿತ್ತಳೆ ಜ್ಯೂಸ್ ನ್ನು ಸೇರಿಸಿಕೊಂಡಿರುವರು. ಇದು ತುಂಬಾ ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ. ಕಿತ್ತಳೆ ಜ್ಯೂಸ್ ನ್ನು ದಿನನಿತ್ಯವು ಕುಡಿದರೆ, ತುಂಬಾ ಅಪಾಯಕಾರಿ ಎಂದು ಹೇಳಲಾಗುವಂತಹ ಪಾರ್ಶ್ವವಾಯು ಬರುವ ಅಪಾಯವನ್ನು ಗಣನೀಯವಾಗಿ ತಪ್ಪಿಸಬಹುದು ಎಂದು ಅಧ್ಯಯನಗಳು ಹೇಳಿವೆ. ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್ ನಲ್ಲಿ ಪ್ರಕಟಗೊಂಡಿರುವ ವರದಿಯೊಂದರ ಪ್ರಕಾರ ಪ್ರತಿನಿತ್ಯ ಕಿತ್ತಳೆ ಜ್ಯೂಸ್ ಕುಡಿಯುವಂತಹ ವ್ಯಕ್ತಿಗಳಲ್ಲಿ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಂತಹ ಸಮಸ್ಯೆಯು ಶೇ. 24ರಷ್ಟು ಕಡಿಮೆ ಆಗಿದೆ. ಕಿತ್ತಳೆ ಜ್ಯೂಸ್ ನ್ನು ನಿಯಮಿತವಾಗಿ ಕುಡಿಯುವ ಜನರಲ್ಲಿ ಹೃದಯದ ಕಾಯಿಲೆಗಳ ಪ್ರಮಾಣವು ಶೇ. 12ರಿಂದ 13ರಷ್ಟು ತಗ್ಗಿದೆ ಎಂದು ಹೇಳಲಾಗಿದೆ.

ಇದರಲ್ಲಿ ಇರುವ ಸಕ್ಕರೆಯು ಅಪಾಯಕಾರಿಯಲ್ಲ!

ಇದರಲ್ಲಿ ಇರುವ ಸಕ್ಕರೆಯು ಅಪಾಯಕಾರಿಯಲ್ಲ!

ತಾಜಾ ಹಣ್ಣಿನ ಜ್ಯೂಸ್ ಗಳು ತುಂಬಾ ಆರೋಗ್ಯಕಾರಿ ಎಂದು ಯಾವಾಗಲೂ ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದರಲ್ಲಿ ಇರುವಂತಹ ಸಕ್ಕರೆ ಅಂಶದ ಬಗ್ಗೆ ಎಚ್ಚರಿಕೆ ಕೂಡ ನೀಡಲಾಗಿತ್ತು. ಆದರೆ ಹಣ್ಣುಗಳಲ್ಲಿಇರುವಂತಹ ಬೇರೆ ಆರೋಗ್ಯ ಲಾಭಗಳಾಗಿರುವಂತಹ ಹೃದಯದ ಕಾಯಿಲೆ ತಡೆಯುವುದು ಪಾರ್ಶ್ವವಾಯು ತಡೆಯುವ ಮುಂದೆ ಸಕ್ಕರೆ ಅಂಶವು ನಗಣ್ಯವಾಗುವುದು ಎಂದು ಅಧ್ಯಯನಗಳು ಹೇಳಿವೆ.

ಕಿತ್ತಳೆ ಜ್ಯೂಸ್ ರಕ್ತನಾಳಗಳನ್ನು ರಕ್ಷಿಸುವುದು

ಕಿತ್ತಳೆ ಜ್ಯೂಸ್ ರಕ್ತನಾಳಗಳನ್ನು ರಕ್ಷಿಸುವುದು

ಇದು ಕೇವಲ ಕಿತ್ತಳೆ ಹಣ್ಣಿನ ಜ್ಯೂಸ್ ಮಾತ್ರವಲ್ಲ, ಬೇರೆ ಹಣ್ಣಿನ ಜ್ಯೂಸ್ ಗಳು ಕೂಡ ಇಂತಹ ಲಾಭಗಳನ್ನು ನೀಡುವುದು. ಹಣ್ಣುಗಳಲ್ಲಿ ಕೆಲವೊಂದು ನೈಸರ್ಗಿಕದತ್ತವಾದ ಅಂಶಗಳು ಇರುವ ಕಾರಣದಿಂದಾಗಿ ಇದು ರಕ್ತನಾಳಗನ್ನು ಹಲವಾರು ರೀತಿಯ ಕಾಯಿಲೆಗಳಿಂದ ರಕ್ಷಿಸುವುದು.

ಕಿತ್ತಳೆ ಜ್ಯೂಸ್ ನಲ್ಲಿ ಇರುವಂತಹ ಪೋಷಕಾಂಶಗಳು

ಕಿತ್ತಳೆ ಜ್ಯೂಸ್ ನಲ್ಲಿ ಇರುವಂತಹ ಪೋಷಕಾಂಶಗಳು

*240 ಮಿ.ಲೀ. ಕಿತ್ತಳೆ ಜ್ಯೂಸ್ ನಿಂದ ಸಿಗುವ ಪೋಷಕಾಂಶಗಳು

*ಕ್ಯಾಲರಿ 110

*ವಿಟಮಿನ್ ಸಿ ಆರ್ ಡಿಐ(ದಿನದ ಅಗತ್ಯಕ್ಕೆ ಬೇಕಿರುವ)ಯ ಶೇ.67ರಷ್ಟು

*ಪ್ರೋಟೀನ್ 2 ಗ್ರಾಂ

*ಕಾರ್ಬ್ಸ್ 26 ಗ್ರಾಂ

*ಪೊಟಾಶಿಯಂ ಆರ್ ಡಿಐಯ ಶೇ. 10ರಷ್ಟು

Most Read:ಕಿತ್ತಳೆ ರಸದಲ್ಲಿದೆ ಕೇಳರಿಯದಷ್ಟು ಪ್ರಯೋಜನಗಳು! ನಿತ್ಯ ಸೇವಿಸಿ ನೋಡಿ

ಪ್ರತಿರೋಧಕ ಶಕ್ತಿ ವೃದ್ಧಿಸುವುದು

ಪ್ರತಿರೋಧಕ ಶಕ್ತಿ ವೃದ್ಧಿಸುವುದು

ಕಿತ್ತಳೆ ಹಣ್ಣಿನ ಜ್ಯೂಸ್ ನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ ಮತ್ತು ಇದು ಪ್ರತಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಇದರಿಂದಾಗಿ ದೇಹವನ್ನು ಶೀತ, ಜ್ವರ ಮತ್ತು ಇತರ ಕೆಲವು ಉರಿಯೂತ ಕಾಯಿಲೆಗಳಿಂದ ರಕ್ಷಿಸುವುದು.

ಅಧಿಕ ರಕ್ತದೊತ್ತಡ ತಡೆಯುವುದು

ಅಧಿಕ ರಕ್ತದೊತ್ತಡ ತಡೆಯುವುದು

ಕಿತ್ತಳೆ ಹಣ್ಣಿನ ಜ್ಯೂಸ್ ನಲ್ಲಿ ಇರುವಂತಹ ಹೆಸ್ಪೆರಿಡಿನ್ ಎನ್ನುವ ಆ್ಯಂಟಿಆಕ್ಸಿಡೆಂಟ್ ವಿವಿಧ ರೀತಿಯ ಕಾಯಿಲೆಗಳು ಹಾಗೂ ಕ್ಯಾನ್ಸರ್ ನಿಂದ ದೇಹವನ್ನು ರಕ್ಷಿಸುವುದು. ಅದಾಗ್ಯೂ, ನೀರನ್ನು ಹೀರಿಕೊಳ್ಳುವಂತಹ ಗುಣ ಹೊಂದಿರುವ ಈ ಹಣ್ಣಿನ ಮತ್ತೊಂದು ಗುಣವೆಂದರೆ ಅದು ಸಣ್ಣ ರಕ್ತನಾಳಗೂ ಸರಿಯಾಗಿ ಕಾರ್ಯನಿರ್ವಹಿಸಲು ನೆರವಾಗುವುದು.

ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಕಳೆದುಕೊಳ್ಳಲು ಸಹಕಾರಿ

ಕಿತ್ತಳೆ ಹಣ್ಣಿನ ಜ್ಯೂಸ್ ನ್ನು ನಿಯಮಿತವಾಗಿ ಕುಡಿದರೆ ಅದರಿಂದ ದೇಹದಲ್ಲಿ ಅಧಿಕವಾಗಿ ಇರುವ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದು ಕಡಿಮೆ ಕ್ಯಾಲರಿ ಹೊಂದಿದೆ ಮತ್ತು ಕೊಬ್ಬು ಮುಕ್ತ ಆಗಿದೆ.

ಕಿಡ್ನಿ ಕಲ್ಲುಗಳನ್ನು ನಿವಾರಿಸುವುದು

ಕಿಡ್ನಿ ಕಲ್ಲುಗಳನ್ನು ನಿವಾರಿಸುವುದು

ಕಿತ್ತಳೆ ಹಣ್ಣಿನ ಜ್ಯೂಸ್ ನಲ್ಲಿ ಉನ್ನತ ಮಟ್ಟ ಸಿಟ್ರಸ್ ಆಮ್ಲವಿದೆ. ಇದು ಕಿಡ್ನಿಯಲ್ಲಿ ಕಲ್ಲು ನಿರ್ಮಾಣ ಆಗುವುದನ್ನು ತಡೆಯವುದು ಎಂದು ನಂಬಲಾಗಿದೆ. ನಿಯಮಿತವಾಗಿ ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿಯುವ ಮೂಲಕ ಕಿಡ್ನಿಯಲ್ಲಿ ಕಲ್ಲು ನಿರ್ಮಾಣ ಆಗುವುದನ್ನು ತಡೆಯಬಹುದು.

ಉರಿಯೂತ ತಡೆಯುವುದು

ಉರಿಯೂತ ತಡೆಯುವುದು

ಕಿತ್ತಳೆ ಹಣ್ಣಿನ ಜ್ಯೂಸ್ ನಲ್ಲಿ ಉರಿಯೂತ ಶಮನಕಾರಿ ಗುಣಗಳು ಇರುವ ಕಾರಣದಿಂದಾಗಿ ಇದು ಉರಿಯೂತ ಕಡಿಮೆ ಮಾಡಿ, ದೀರ್ಘಕಾಲದ ಕಾಯಿಲೆಗಳ ಶಮನ ಮಾಡುವುದು. ಕಿತ್ತಳೆ ಹಣ್ಣಿನ ಜ್ಯೂಸ್ ಸೇವಿಸಿದರೆ ಅದರಿಂದ ನಿಮಗೆ ಚಯಾಪಚಯ ಸಮಸ್ಯೆ ನಿವಾರಣೆ ಮಾಡಬಹುದು. ಚಯಾಪಚಯ ಸಮಸ್ಯೆಯು ಟೈಪ್ 2 ಮಧುಮೇಹಕ್ಕೆ ಕಾರಣ ಆಗಬಹುದು.

Most Read: ಬೀಟ್‌ರೂಟ್-ಕಿತ್ತಳೆ ಹಣ್ಣಿನ ಜ್ಯೂಸ್‌‌ನಲ್ಲಿರುವ ಪವರ್....

ಚರ್ಮದ ಹಾನಿ ತಡೆಯುವುದು

ಚರ್ಮದ ಹಾನಿ ತಡೆಯುವುದು

ಕಿತ್ತಳೆ ಹಣ್ಣಿನ ಜ್ಯೂಸ್ ನಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಇದು ಚರ್ಮವನ್ನು ಫ್ರೀ ರ್ಯಾಡಿಕಲ್ ನಿಂದ ಆಗಿರುವ ಹಾನಿಯಿಂದ ತಪ್ಪಿಸುವುದು. ಕಿತ್ತಳೆ ಹಣ್ಣಿನ ಜ್ಯೂಸ್ ನಲ್ಲಿ ಇರುವಂತಹ ವಿಟಮಿನ್ ಸಿ ಕಾಲಜನ್ ಉತ್ಪತ್ತಿಗೆ ನೆರವಾಗುವುದು. ಇದರಿಂದ ಚರ್ಮಕ್ಕೆ ಯೌವನಯುತ ಕಾಂತಿ ಸಿಗುವುದು.

English summary

Drink orange juice daily to prevent and heart attack

Drinking orange juice daily may cut your risk of deadly strokes by almost a quarter, suggests a study. The study, published in the British Journal of Nutrition, showed that people who consumed the juice each day saw a reduction in the risk of a brain clot by 24 per cent, the Daily Mail reported. Further, the rates of heart disease were also reduced in regular drinkers, who were 12 to 13 per cent less likely to suffer with damaged arteries.
Story first published: Friday, April 5, 2019, 15:07 [IST]
X
Desktop Bottom Promotion