For Quick Alerts
ALLOW NOTIFICATIONS  
For Daily Alerts

ಇದು ಸರಳ ಶೀತ ಎಂದು ನಿರ್ಲಕ್ಷಿಸಬೇಡಿ! ಇದರಿಂದ ಸೈನಸ್ ಸೋಂಕು ಬರಬಹುದು!!

|

ಚಳಿಗಾಲದಲ್ಲಿ ಶೀತ ಆವರಿಸದಿರುವ ವ್ಯಕ್ತಿಗಳೇ ಇಲ್ಲ ಎನ್ನಬಹುದು. ಏಕೆಂದರೆ ಇನ್ನೂ ನಮ್ಮ ಭಾರತದಲ್ಲಿ, ಸೀನುವಾಗ ಕೆಮ್ಮುವಾಗ ಮುಖಕ್ಕೆ ಏನಾದರೂ ಅಡ್ಡವಿಟ್ಟುಕೊಳ್ಳಬೇಕೆಂದೇ ಹೆಚ್ಚಿನವರಿಗೆ ತಿಳಿದಿಲ್ಲ. ಹಾಗಾಗಿ ಇವರ ಸೀನಿನ ಮೂಲಕ ಸಿಡಿಯುವ ತುಂತುರುವಿನ ಮೂಲಕ ಶೀತದ ವೈರಸ್ಸುಗಳು ಗಾಳಿಯಲ್ಲಿ ತೇಲಾಡುತ್ತಾ, ಈ ವಾಯುವನ್ನು ಉಸಿರಾಡಿದವರಿಗೆಲ್ಲಾ ಶೀತ ಹಬ್ಬಿಸುತ್ತಾ ಹೋಗುತ್ತವೆ. ಪರಿಣಾಮ, ಗಂಟಲ ಕೆರೆತ, ಕೆಮ್ಮು, ಸೋರುವ ಮೂಗು, ಕಟ್ಟಿಕೊಂಡ ಮೂಗಿನ ಮೇಲ್ಭಾಗ ಇತ್ಯಾದಿ.

ಇದೆಲ್ಲಾ ಶೀತ ಆವರಿಸಿದ ಯಾರಿಗೂ ಆಗುವ ಅನುಭವಗಳೇ ಹೌದು. ಆದರೆ ಶೀತ ಎದುರಾದ ಬಳಿಕ ಇದನ್ನು ವಾಸಿಮಾಡಲು ಮನೆಮದ್ದೇ ಸಾಕಾಗುವ ಕಾರಣ ಹೆಚ್ಚಿನವರು ಶೀತವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಚಿಕನ್ ಸೂಪ್, ಕಷಾಯ, ವಿಟಮಿನ್ ಸಿ ಗುಳಿಗೆ, ಸಾಕಷ್ಟು ನಿದ್ದೆ ಮೊದಲಾದವುಗಳೇ ಶೀತಕ್ಕೆ ಸಾಕಾಗುತ್ತವೆ. ಆದರೆ ಕೆಲವೊಮ್ಮೆ ಶೀತ ಈ ಬಡಪೆಟ್ಟುಗಳಿಗೆಲ್ಲಾ ಬಗ್ಗದೇ ಉಲ್ಬಣಗೊಳ್ಳುತ್ತಲೇ ಹೋದರೆ, ಇದು ಕುಹರ ಅಥವಾ ಸೈನಸ್ ಸೋಂಕಿಗೆ ಪರಿವರ್ತಿತವಾಗಿರುವ ಸಾಧ್ಯತೆ ಅಧಿಕವಾಗಿರುತ್ತದೆ.

ಏನಿದು ಸೈನಸ್ ಸೋಂಕು? (​Sinus infection)

ಏನಿದು ಸೈನಸ್ ಸೋಂಕು? (​Sinus infection)

ನಮ್ಮ ಮೂಗಿನ ಮೇಲೆ, ಹಣೆಯ ನಡುವಣ ಭಾಗದ ಹಿಂದೆ ಒಂದು ಟೊಳ್ಳುಭಾಗವಿದೆ,. ಇದನ್ನೇ ಕುಹರ ಅಥವಾ ಸೈನಸ್ ಎಂದು ಕರೆಯುತ್ತಾರೆ. ಇಲ್ಲಿ ವೈರಸ್ಸು ಅಥವಾ ಬ್ಯಾಕ್ಟೀರಿಯಾಗಳು ಸಂಗ್ರಹಗೊಂಡರೆ ಸೋಂಕು ಎದುರಾಗುತ್ತದೆ. ಈ ಸೋಂಕೇ ಕುಹರದ ಸೋಂಕು. ಈ ಭಾಗದ ಪದರಗಳು ಸೋಂಕಿಗೊಳಗಾಗಿ ಭಾರೀ ಉರಿಯೂತಕ್ಕೆ ಒಳಗಾಗುತ್ತವೆ ಹಾಗೂ ಊದಿಕೊಳ್ಳುತ್ತವೆ ಹಾಗೂ ಇದನ್ನು ತಡೆಯಲು ರೋಗ ನಿರೋಧಕ ವ್ಯವಸ್ಥೆ ಅತಿ ಪ್ರಮಾಣದಲ್ಲಿ ಕಫವನ್ನು ಉತ್ಪಾದಿಸುತ್ತದೆ. ಹೆಚ್ಚಿನ ಸೂಚನೆಗಳೆಲ್ಲಾ ಸಾಮಾನ್ಯ ಶೀತದಂತೆಯೇ ಇರುತ್ತವೆ.

ಕುಹರ ಒಂದೇ ಭಾಗವೆನ್ನಿಸಿದರೂ ವಾಸ್ತವದಲ್ಲಿ ನಾಲ್ಕು ಭಾಗಗಳಿವೆ.

ಕುಹರ ಒಂದೇ ಭಾಗವೆನ್ನಿಸಿದರೂ ವಾಸ್ತವದಲ್ಲಿ ನಾಲ್ಕು ಭಾಗಗಳಿವೆ.

ಹೌದು ಕುಹರ ಒಂದೇ ಭಾಗವೆನ್ನಿಸಿದರೂ ವಾಸ್ತವದಲ್ಲಿ ನಾಲ್ಕು ಭಾಗಗಳಿವೆ. ಸೋಂಕು ಇವುಗಳಲ್ಲೊಂದರಲ್ಲಿಯೂ ಎದುರಾಗಬಹುದು ಅಥವಾ ಎರಡು ಮೂರು ಅಥವಾ ನಾಲ್ಕೂ ಭಾಗಗಳಿಗೂ ಆವರಿಸಬಹುದು. ಯಾವ ಭಾಗಕ್ಕೆ ಸೋಂಕು ತಗುಲಿದೆಯೋ ಆ ಪ್ರಕಾರ ಲಕ್ಷಣಗಳೂ ಭಿನ್ನವಾಗಿರುತ್ತವೆ. ಕೆನ್ನೆಯ ಮೇಲ್ಭಾಗದಲ್ಲಿರುವ ಭಾಗಕ್ಕೆ ತಗುಲಿದ್ದರೆ ದವಡೆಯ ಮೇಲ್ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಇತ್ಯಾದಿ.

ಕುಹರದ ಸೋಂಕು ಸಾಂಕ್ರಾಮಿಕವೇ?

ಕುಹರದ ಸೋಂಕು ಸಾಂಕ್ರಾಮಿಕವೇ?

ಈ ಸೋಂಕು ಬ್ಯಾಕ್ಟೀರಿಯಾ ಮತ್ತು ವೈರಸ್ ಎರಡರಿಂದಲೂ ಎದುರಾಗಬಹುದು. ಹಾಗಾಗಿ, ಈ ಸೋಂಕು ಬ್ಯಾಕ್ಟೀರಿಯಾದಿಂದ ಎದುರಾಗಿದ್ದರೆ ಇದು ಸಾಂಕ್ರಾಮಿಕವಾಗಬಹುದು. ಆದರೆ ವೈರಸ್ ನಿಂದ ಎದುರಾಗಿದ್ದರೆ ಇದು ಸಾಂಕ್ರಾಮಿಕವಾಗುವ ಸಾಧ್ಯತೆ ಕಡಿಮೆ. ಈ ಸೋಂಕು ವಾಸ್ತವವಾಗಿ ಸಾಮಾನ್ಯ ಶೀತದಿಂದಲೇ ಎದುರಾಗಿರುತ್ತದೆ ಹಾಗೂ ಶೀತಕ್ಕೆ ಸೂಕ್ತ ಆರೈಕೆ ಒದಗಿಸದೇ ಈ ಬ್ಯಾಕ್ಟೀರಿಯಾಗಳು ಕುಹರದವರೆಗೂ ತಲುಪುತ್ತವೆ. ಹಾಗಾಗಿ, ಶೀತ ಸಾಂಕ್ರಾಮಿಕವಾದರೂ ಈ ಶೀತದಿಂದಲೇ ಕುಹರದ ಸೋಂಕು ಸಹಾ ಆಗುತ್ತದೆ ಎಂದು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ, ಅಂತೆಯೇ ಪೂರ್ಣವಾಗಿ ಅಲ್ಲಗಳೆಯಲೂ ಆಗುವುದಿಲ್ಲ.

ತಪಾಸಣೆ

ತಪಾಸಣೆ

ಈ ಸೋಂಕಿನ ಲಕ್ಷಣಗಳು ಸಾಮಾನ್ಯ ಫ್ಲೂ ಹಾಗೂ ಶೀತದಂತೆಯೇ ಇರುವ ಕಾರಣ ತಜ್ಞ ವೈದ್ಯರಿಗೂ ಇದರ ಇರುವಿಕೆಯನ್ನು ಖಚಿತವಾಗಿ ಒಮ್ಮೆಲೇ ಹೇಳಲು ಸಾಧ್ಯವಿಲ್ಲ. ಅಲ್ಲದೇ ಪ್ರಯೋಗಾಲಯದಲ್ಲಿಯೂ ಈ ಸೋಂಕನ್ನು ಖಚಿತಪಡಿಸಲು ಸಾಧ್ಯವಿಲ್ಲ. ಹಾಗಾಗಿ ಏನಿದ್ದರೂ ಈ ಸೋಂಕು ಕೊಂಚ ಉಲ್ಬಣಗೊಂಡು ತನ್ನ ಇರುವಿಕೆಯ ಸೂಚನೆಗಳನ್ನು ತೋರಿಸತೊಡಗಿದ ಬಳಿಕವಷ್ಟೇ ವೈದ್ಯರು ತಮ್ಮ ಅನುಭವದ ಮೂಲಕ ಹೇಳಬಲ್ಲರು. ಏನೇ ಆದರೂ ಈ ಸೋಂಕನ್ನು ಕಂಡುಹಿಡಿಯುವುದು ತ್ರಾಸಕರ ಹಾಗೂ ಗೊಂದಲಕಾರಿಯೂ ಆಗಿದೆ.

ಕುಹರದ ಸೋಂಕಿನ ಲಕ್ಷಣಗಳು

ಕುಹರದ ಸೋಂಕಿನ ಲಕ್ಷಣಗಳು

ಶೀತಕ್ಕೆ ಮದ್ದು ತೆಗೆದುಕೊಂಡರೆ ಏಳು ದಿನ ಸಾಕಂತೆ, ಮದ್ದು ತೆಗೆದುಕೊಳ್ಳದೇ ಇದ್ದರೆ ವಾಸಿಯಾಗಲು ಏಳು ದಿನಗಳೇ ಬೇಕಂತೆ! ಹೀಗೊಂದು ಮಾತು ಮಲೆನಾಡಿನಲ್ಲಿ ಪ್ರಚಲಿತವಾಗಿದೆ. ಹಾಗಾಗಿ ನಿಮ್ಮ ಶೀತ ಆರೈಕೆ ಪಡೆದರೂ ಪಡೆಯದಿದ್ದರೂ ಒಂದು ವಾರಕ್ಕೂ ಮೀರಿ ಮುಂದುವರೆದರೆ ತಕ್ಷಣ ಮನೆಮದ್ದನ್ನು ನಿಲ್ಲಿಸಿ ವೈದ್ಯರನ್ನು ಕಾಣಬೇಕು ಹಾಗೂ ಕುಹರದ ಸೋಂಕಿನ ಇರುವಿಕೆಯ ಬಗ್ಗೆ ತಪಾಸಿಸಿಕೊಳ್ಳಬೇಕು. ಈ ಸೋಂಕಿನ ಸಾಮಾನ್ಯ ಲಕ್ಷಣಗಳೆಂದರೆ:

ಕಣ್ಣುಗಳ ಭಾಗದಲ್ಲಿ ನೋವು

ಕಣ್ಣುಗಳ ಭಾಗದಲ್ಲಿ ನೋವು

ಕಡಿಮೆಯಾಗಬೇಕಾಗಿದ್ದ ಶೀತ ಮುಂದುವರೆದ ಬಳಿಕ ಕಣ್ಣುಗಳ ಹಿಂಭಾಗದಲ್ಲಿ, ವಿಶೇಷವಾಗಿ ಹಣೆಯ ನಡುವಣ ಭಾಗದಲ್ಲಿ ನೋವು ಎನ್ನಿಸುತ್ತಿದ್ದರೆ ಕುಹರದ ಸೋಂಕು ಎದುರಾಗಿರುವ ಸಾಧ್ಯತೆ ದಟ್ಟವಾಗಿರುತ್ತದೆ. ಎಕೆಂದರೆ ಕುಹರದ ಟೊಳ್ಳು ಈ ಭಾಗದಲ್ಲಿದ್ದು ಇಲ್ಲಿ ಎದುರಾಗಿರುವ ಸೋಂಕಿನಿಂದ ಊದಿಕೊಂಡ ಭಾಗ ಪಕ್ಕದಲ್ಲಿಯೇ ಇರುವ ಕಣ್ಣುಗುಡ್ಡೆಗಳನ್ನು ಒತ್ತುತ್ತದೆ. ಇದೇ ಕಣ್ಣುಗಳಿಗೆ ನೋವು ಆಗಲು ಕಾರಣ. ಸಾಮಾನ್ಯವಾಗಿ ಕಣ್ಣುಗಳಿಗೆ ಈ ಕಾರಣದಿಂದ ನೋವಾದಾಗ ಹೆಚ್ಚಿನವರು ಕುಹರದ ಸೋಂಕಿನ ಬಗ್ಗೆ ಅರಿವಿಲ್ಲದೇ ತಮ್ಮ ಕಣ್ಣುಗಳಿಗೇ ಏನೋ ಆಗಿರಬೇಕೆಂಬ ದುಗುಡಕ್ಕೆ ಒಳಗಾಗುತ್ತಾರೆ.

ರಾತ್ರಿಯಿಡೀ ಕೆಮ್ಮು

ರಾತ್ರಿಯಿಡೀ ಕೆಮ್ಮು

ಸತತ ಕೆಮ್ಮಿನಿಂದ ರಾತ್ರಿಯಿಡೀ ನಿದ್ದೆ ಬರದೇ ಇದ್ದರೆ ಇದರ ಹಿಂಸೆಯನ್ನು ಅನುಭವಿಸಿದವರೇ ಬಲ್ಲರು. ಏಕೆಂದರೆ ಮಲಗಿರುವ ಭಂಗಿಯಲ್ಲಿ ಕುಹರದ ಭಾಗದಲ್ಲಿ ಉತ್ಪತ್ತಿಯಾಗಿದ್ದ ಸ್ನಿಗ್ಧ ಕಫ ನಿಧಾನವಾಗಿ ಇಳಿದು ಗಂಟಲ ಹಿಂಭಾಗಕ್ಕೆ ಬರುತ್ತದೆ ಹಾಗೂ ಇಲ್ಲಿ ಕಚಗುಳಿಯಿಟ್ಟಂತಾಗಿ ಕೆಮ್ಮು ಅನವರತವಾಗುತ್ತದೆ.

ಹಲ್ಲು ನೋವು

ಹಲ್ಲು ನೋವು

ಹಲ್ಲು ನೋವು ಎದುರಾದರೆ ಒಸಡಿನಲ್ಲಿ ಆಗಿರುವ ಸೋಂಕು ಎಂದೇ ಹೆಚ್ಚಿನ ಸಮಯದಲ್ಲಿ ಪರಿಗಣಿಸಲಾಗುತ್ತದೆ. ಆದರೆ ಇದು ಕುಹರದ ಸೋಂಕಿನಿಂದಲೂ ಎದುರಾಗಿರಬಹುದು. ಆದರೆ ಕುಹರದ ಸೋಂಕಿನ ಇರುವಿಕೆಯನ್ನು ಪ್ರಕಟಿಸುವ ಈ ಸೂಚನೆ ಅತಿ ಅಸಾಮಾನ್ಯವಾಗಿದೆ.

Most Read: ಸೈನಸ್ ಗುಣಪಡಿಸುವ ಆಹಾರಗಳಿವು

ತಲೆನೋವು

ತಲೆನೋವು

ಒಂದು ವೇಳೆ ಹಣೆಯ ಹಿಂಭಾಗದಲ್ಲಿ, ಹುಬ್ಬುಗಳ ಮೇಲೆ ತಲೆಯ ಕೇಂದ್ರದ ಮುಂಭಾಗದಲ್ಲಿ ಕೇಂದ್ರೀಕೃತವಾಗಿರುವಂತೆ ತಲೆನೋವು ಎದುರಾಗಿ ಸತತವಾಗಿ ಕಾಡುತ್ತಿದ್ದರೆ ಇದು ಕುಹರದ ಸೋಂಕಿನ ಪರಿಣಾಮವಾಗಿರಬಹುದು. ಈ ಸೋಂಕು ಇರುವ ವ್ಯಕ್ತಿಗಳು ಮುಂದಕ್ಕೆ ಬಾಗಿದಾಗ ಕಫ ಇನ್ನಷ್ಟು ಒಳಭಾಗಕ್ಕೆ ಸರಿದು ಸೋಂಕನ್ನು ಹೆಚ್ಚಿಸಿ ನೋವನ್ನೂ ಉಲ್ಬಣಗೊಳಿಸುತ್ತದೆ.

ಉಸಿರಿನ ದುರ್ವಾಸನೆ

ಉಸಿರಿನ ದುರ್ವಾಸನೆ

ಈ ಸೋಂಕಿನಿಂದ ಅತಿಸ್ನಿಗ್ಧ, ಹಳದಿಮಿಶ್ರಿತ ಹಾಗೂ ಅತಿ ಕಟು ವಾಸನೆಯುಳ್ಳ ಕಫ ಉತ್ಪತ್ತಿಯಾಗುತ್ತದೆ. ಈ ಕಫ ಇಳಿದು ಗಂಟಲಿಗೆ ಇಳಿದಾಗ, ಇದರ ಮೂಲಕ ಹಾದುಹೋಗುವ ಉಸಿರು ಸಹಾ ದುರ್ವಾಸನೆ ಪಡೆಯುತ್ತದೆ. ಈ ವಾಸನೆ ಎದುರಿನವರಿಗೆ ಅಸಹ್ಯವಾಗಿರುತ್ತದೆ.

Most Read: ಆರೋಗ್ಯ ಟಿಪ್ಸ್: ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!

ಕಡಿಮೆಯೇ ಆಗದ ಶೀತದ ಲಕ್ಷಣಗಳು

ಕಡಿಮೆಯೇ ಆಗದ ಶೀತದ ಲಕ್ಷಣಗಳು

ಸಾಮಾನ್ಯವಾಗಿ ವಾರದೊಳಗೇ ಇಲ್ಲವಾಗಬೇಕಾಗಿದ್ದ ಶೀತದ ಲಕ್ಷಣಗಳು ವಾರಕ್ಕೂ ಹೆಚ್ಚು ದಿನಗಳಿಗೆ ಮುಂದುವರೆದರೆ ಈ ಸೋಂಕು ತಗಲಿರುವ ಸಾಧ್ಯತೆ ಹೆಚ್ಚಿರುತ್ತದೆ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.

ದಿನಕ್ಕೆರಡು ಬಾರಿ ನೀರಿನ ಹಬೆ

ದಿನಕ್ಕೆರಡು ಬಾರಿ ನೀರಿನ ಹಬೆ

ತಜ್ಞರ ಪ್ರಕಾರ, ದಿನಕ್ಕೆರಡು ಬಾರಿ ನೀರಿನ ಹಬೆಯನ್ನು ಉಸಿರಿನ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಎಳೆದುಕೊಳ್ಳುವುದರಿಂದ ಕಫ ನೀರಾಗಿ ಹರಿದು ಹೋಗಲು ಸಾಧ್ಯವಾಗುತ್ತದೆ ಹಾಗೂ ಸೋಂಕು ಶೀಘ್ರವಾಗಿ ತಹಬಂದಿಗೆ ಬರುತ್ತದೆ.

English summary

Dont neglect! Cold also will turned into a sinus infection!

Sinus infection mimics cold and thus is hard to diagnose. The viral or bacterial infection of the sinus cavities is called sinus infection.
Story first published: Friday, January 25, 2019, 7:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more