For Quick Alerts
ALLOW NOTIFICATIONS  
For Daily Alerts

ಬಾದಾಮಿಗೂ ಹೊಟ್ಟೆ ಉಬ್ಬರಕ್ಕೂ ಸಂಬಂಧ ಇದೆಯೇ ?

|

ಸಾಮಾನ್ಯವಾಗಿ ಮನುಷ್ಯನ ದೇಹಕ್ಕೆ ಎಂದಾದರೂ ಪೋಷಕಾಂಷಕಾಂಶಗಳ ಕೊರತೆ ಕಂಡು ಬಂದರೆ ವೈದ್ಯರು ಥಟ್ಟನೆ ಸೂಚಿಸುವುದು ಡ್ರೈ ಫ್ರೂಟ್ಸ್ ಬಳಸಲು . ಏಕೆಂದರೆ ಅವುಗಳಲ್ಲಿರುವಷ್ಟು ಒಟ್ಟು ಪೌಷ್ಟಿಕಾಂಶಗಳು ಬೇರೆಲ್ಲೂ ಅಷ್ಟು ಸುಲಭವಾಗಿ ಸಿಗುವುದಿಲ್ಲ . ಒಣ ದ್ರಾಕ್ಷಿ , ಖರ್ಜೂರ , ಗೋಡಂಬಿ ಮತ್ತು ಬಾದಾಮಿ ಹೀಗೆ . ಒಂದಕ್ಕಿಂತ ಒಂದು ಹೆಚ್ಚು . ಅದರಲ್ಲೂ ಬಾದಾಮಿ ಯಲ್ಲಿ ನ್ಯೂಟ್ರಿಯೆಂಟ್ ಗಳ ಜೊತೆಗೆ ಮೆಗ್ನೀಷಿಯಂ , ವಿಟಮಿನ್ ' ಈ ' ಮತ್ತು ಫೈಬರ್ ನ ಅಂಶ ಅಗಾಧವಾಗಿದೆ .

ಇದು ಆಂಟಿ ಆಕ್ಸಿಡಾಂಟ್ ಆಗಿ ಕೂಡ ಕೆಲಸ ಮಾಡುತ್ತದೆ . ಬಾದಾಮಿ ಜೀರ್ಣ ಕ್ರಿಯೆಯಲ್ಲಿ ಬಹಳ ಸಹಾಯ ಮಾಡುತ್ತದೆ . ಆದರೆ ಇದರಲ್ಲಿ ಅಡಗಿರುವ ಹೆಚ್ಚು ಪ್ರೋಟೀನ್ ಅಂಶ ಹೊಟ್ಟೆಯಲ್ಲಿ ಸ್ವಲ್ಪ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡಿ ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ . ಕೆಲವರಿಗೆ ಬಾದಾಮಿ ಎಂದರೆ ಸಾಕು ಒಂದು ತರ ಅಲರ್ಜಿ . ಅಂತಹವರು ಬಾದಾಮಿಯಿಂದ ಸ್ವಲ್ಪ ದೂರವೇ ಉಳಿಯುವುದು ಒಳ್ಳೆಯದು . ಆದರೆ ಬಾದಾಮಿ ತಿನ್ನದೇ ಇರುವಾಗ ಕೂಡ ಅತಿಯಾದ ಗ್ಯಾಸ್ಟ್ರಿಕ್ ಆದಂತೆ ಕಂಡು ಬಂದು ಹೊಟ್ಟೆ ಉಬ್ಬರದ ಅನುಭವವಾದರೆ ಅದಕ್ಕೆ ಬೇರೆಯದೇ ಕಾರಣವಿದ್ದು ಜೀರ್ಣಾಂಗದಲ್ಲಿ ಸಮಸ್ಯೆ ಇದೆ ಎಂದೇ ಅರ್ಥ . ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

Almonds

ಫೈಬರ್ ಅಂಶದಿಂದ ಉಂಟಾಗುವ ಸಮಸ್ಯೆ

ಹಾರ್ವಾರ್ಡ್ ಸ್ಕೂಲ್ ಓಫ್ ಪಬ್ಲಿಕ್ ಹೆಲ್ತ್ ನ ಪ್ರಕಾರ ಮಕ್ಕಳಿಂದ ಹಿಡಿದು ದೊಡ್ಡವರೂ ಕೂಡ ದಿನ ನಿತ್ಯ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಸುಮಾರು 20 ರಿಂದ 30 ಗ್ರಾಂ ನಷ್ಟು ಫೈಬರ್ ಯುಕ್ತ ಆಹಾರವನ್ನು ಸೇವಿಸಬೇಕು . ಇದರಿಂದ ಮಲಬದ್ಧತೆ ನಿವಾರಣೆ ಆಗುತ್ತದೆ . ಒಂದು ಕಪ್ ಬಾದಾಮಿಯಲ್ಲಿ ಸುಮಾರು 18 ಗ್ರಾಂ ನಷ್ಟು ಫೈಬರ್ ಅಂಶ ಇರುತ್ತದೆ . ಪ್ರತಿದಿನ ಇದನ್ನು ಸೇವಿಸುತ್ತಾ ಬಂದಿದ್ದೇ ಆದರೆ ಬೇರೆ ಯಾವ ಫೈಬರ್ ಅಂಶವಿರುವ ಆಹಾರದ ಮೊರೆ ಹೋಗುವ ಅವಶ್ಯಕತೆ ಇರುವುದಿಲ್ಲ.

ಆದರೆ ಮೊದಲೇ ಹೇಳಿದಂತೆ ಇಷ್ಟು ಪ್ರಮಾಣದ ಬಾದಾಮಿ ಒಮ್ಮೆಲೇ ತಿಂದರೆ ಗ್ಯಾಸ್ಟ್ರಿಕ್ ಆಗುವ ಸಮಸ್ಯೆ ಸ್ವಲ್ಪ ಹೆಚ್ಚಿಗೆ ಇರುತ್ತದೆ . ಇದಕ್ಕೆ ಅಂಟಿಕೊಂಡಂತೆ ಹೊಟ್ಟೆ ಉಬ್ಬರ ಮತ್ತು ಹೊಟ್ಟೆ ಹಿಡಿದುಕೊಂಡಂತೆ ಕೂಡ ಆಗಬಹುದು . ಮೊದಲಿನಿಂದಲೂ ಅಭ್ಯಾಸವಿಲ್ಲದವರು ಈ ರೀತಿ ಫೈಬರ್ ಅಂಶವನ್ನು ಒಮ್ಮೆಲೇ ತಿಂದರೆ ಈ ಪಜೀತಿಯಾದೀತು ಜೋಕೆ !!! ನಿಧಾನವಾಗಿ ಬೇಕಾದರೆ ಅಭ್ಯಾಸ ಮಾಡಿಕೊಳ್ಳಬಹುದು.

Most Read: ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

Almonds

ಬಾದಾಮಿ ಎಂದರೆ ಸಾಕು ನನಗಂತೂ ಅಲರ್ಜಿ ಎನ್ನುವವರಿಗೆ

ಬಾದಾಮಿಯಿಂದ ಉಂಟಾಗುವ ಗ್ಯಾಸ್ಟ್ರಿಕ್ ಸಮಸ್ಯೆ ಒಂದು ಕಡೆಯಾದರೆ , ಅದನ್ನು ಕಂಡರೆ ಸಾಕು ವಾಕರಿಕೆ ಬರಿಸಿಕೊಳ್ಳುವವರೂ ಇದ್ದಾರೆ . ಬಾದಾಮಿಯು " ಮರದ ಬೀಜಗಳು " ಎಂಬ ಗುಂಪಿಗೆ ಸೇರಿದ ಬೀಜಗಳಾಗಿವೆ . ವಾಲ್ ನಟ್ , ಬ್ರೆಜಿಲ್ ನಟ್ , ಹ್ಯಾಝೆಲ್ ನಟ್ , ಗೋಡಂಬಿ ಮತ್ತು ಪಿಸ್ತಾ ಇವುಗಳ ಗುಂಪಿಗೆ ಸೇರಿದ ಇನ್ನಿತರ ಮರದ ಬೀಜಗಳಾಗಿವೆ. ಫುಡ್ ಅಲರ್ಜಿ ರಿಸರ್ಚ್ ಅಂಡ್ ಎಜುಕೇಶನ್ ನ ಪ್ರಕಾರ ಈ ರೀತಿಯ ಮರದ ಬೀಜಗಳೆಂದೇ ಇರುವ ಮೇಲಿನವುಗಳಿಂದ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು ಒಂದು ಸಾಮಾನ್ಯ ವಿಷಯವಾಗಿದೆ . ಈ ಕಾರಣದಿಂದಲೇ ಅಲರ್ಜಿ ಉಂಟಾಗಿ ಹೊಟ್ಟೆಯಲ್ಲಿ ಹಿಡಿದುಕೊಂಡಂತೆ ಆಗುವುದು , ವಾಕರಿಕೆ ಬಂದಂತಾಗುವುದು , ಹೊಟ್ಟೆ ಉಬ್ಬರ , ವಾಂತಿ ಮತ್ತು ಭೇಧಿ ಸಮಸ್ಯೆ ಹೀಗೆ ಹತ್ತು ಹಲವಾರು ಕಠಿಣ ರೋಗಗಳು ಎದುರಾಗಬಹುದು . ಅಲರ್ಜಿ ಇಂದ ಬಾಯಿಯ ಸುತ್ತಾ ತುರಿಕೆ ಮತ್ತು ಜುಮ್ಮ್ ಎನ್ನುವಂತಾಗುವುದೂ ಇದೆ . ಈ ರೀತಿಯಾದರೆ ತಕ್ಷಣ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳಿ .

ಅಸಮರ್ಪಕ ಜೀರ್ಣ ಕ್ರಿಯೆ

ಬಾದಾಮಿ ತಿಂದ ತಕ್ಷಣ ಹೊಟ್ಟೆ ಉಬ್ಬರಿಸಿಕೊಳ್ಳುವುದು ಜೀರ್ಣ ಕ್ರಿಯೆ ಯಲ್ಲಿ ಆಗುವ ವ್ಯತ್ಯಾಸ ದಿಂದಲೂ ಇರಬಹುದು . ಮನುಷ್ಯನ ಜೀರ್ಣಾಂಗದ ವ್ಯವಸ್ಥೆ ಸರಿ ಇಲ್ಲದಿದ್ದರೂ ಈ ರೀತಿ ಆಗುತ್ತದೆ . ಇದನ್ನು " ಇರ್ರಿಟೇಬಲ್ ಬೋವೆಲ್ ಸಿಂಡ್ರೋಮ್ " ಎಂದು ಕರೆಯುತ್ತಾರೆ . ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ನ ಪ್ರಕಾರ ಅಮೇರಿಕಾ ದ ಜನಸಂಖ್ಯೆಯಲ್ಲಿ ಶೇಖಡಾ 20 ರಷ್ಟು ಮಂದಿಗೆ ಅವರ ಜೀವನದ ಯಾವುದಾದರೂ ಒಂದು ಸಮಯದಲ್ಲಿ ಇರ್ರಿಟೇಬಲ್ ಬೋವೆಲ್ ಸಿಂಡ್ರೋಮ್ ಬಂದೊದಗುತ್ತದೆ . ಇರ್ರಿಟೇಬಲ್ ಬೋವೆಲ್ ಸಿಂಡ್ರೋಮ್ ಒಂದು ಸೌಮ್ಯ ರೂಪದ ಖಾಯಿಲೆ ಆಗಿದ್ದು ನಂತರ ಇದರಿಂದ ಉಂಟಾಗುವ ಸಮಸ್ಯೆಯ ಸರಮಾಲೆ ಮನುಷ್ಯನ ದೇಹದ ಮೇಲೆ ತುಸು ಹೆಚ್ಚಿನ ಪ್ರಭಾವವನ್ನೇ ಬೀರುತ್ತದೆ . ಇದರಿಂದ ಹೊಟ್ಟೆ ಉಬ್ಬರ , ಮಲಬದ್ಧತೆ , ಹೊಟ್ಟೆ ನೋವು ಮತ್ತು ವಾಂತಿಯ ಲಕ್ಷಣ ಕಾಣಿಸುತ್ತವೆ . ಇವೆಲ್ಲದಕ್ಕೂ ಮುಖ್ಯ ಕಾರಣ ಫೈಬರ್ ನ ಅಧಿಕ ಸೇವನೆ . ಇದೆಲ್ಲವನ್ನೂ ನೋಡಿದಾಗ ಹೊಟ್ಟೆ ಉಬ್ಬರ ಕೂಡ ಒಂದು ರೀತಿಯ ಕಠಿಣವಾದ ಸಮಸ್ಯೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read: ಬಾದಾಮಿ: ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು!

Almonds

ಮೇಲಿನ ಸಮಸ್ಯೆಗಳಿಗೆ ಪರಿಹಾರಗಳೇನಾದರೂ ಇದೆಯೇ?

ಸೌಮ್ಯ ರೀತಿಯ ಹೊಟ್ಟೆ ಉಬ್ಬರಕ್ಕೆ ಪರಿಹಾರ ಎಂದರೆ ನಿಧಾನವಾಗಿ ನೀವು ತಿನ್ನುವ ಬಾದಾಮಿಯ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದು . ಇನ್ನು ಬಾದಾಮಿ ತಿಂದು ಅಭ್ಯಾಸವೇ ಇಲ್ಲ ಎನ್ನುವವರಿಗೆ ನಿಧಾನವಾಗಿ ಬಾದಾಮಿಯನ್ನು ತಮ್ಮ ಉಪಹಾರದ ಜೊತೆಗೆ ಸೇರಿಸಿ ತಿಂದು ಅದಕ್ಕೆ ಅಡ್ಜಸ್ಟ್ ಆಗುವುದು . ಇದು ಕೆಲವು ವಾರಗಳೇ ಹಿಡಿಯಬಹುದು ಮತ್ತು ಇದರಿಂದ ನಿಧಾನವಾಗಿ ನಿಮ್ಮ ಹೊಟ್ಟೆ ಉಬ್ಬರ ಸಮಸ್ಯೆ ಕಡಿಮೆ ಆಗುತ್ತಾ ಬರುತ್ತದೆ . "ಸಿಮೆಥಿಕೋನ್" ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಂಡರೆ ಕರುಳಿನಲ್ಲಿ ಅಡಗಿರುವ ಗ್ಯಾಸ್ ಅನ್ನೂ ಹೊರ ಹಾಕಬಹುದು . ಇದರಿಂದಲೂ ಹೊಟ್ಟೆ ಉಬ್ಬರ ಕಡಿಮೆ ಆಗುತ್ತದೆ. ಆದರೆ ನಮ್ಮದೊಂದು ಸಲಹೆ ಏನೆಂದರೆ , ಹೊಟ್ಟೆ ಉಬ್ಬರ ಮತ್ತು ಹೊಟ್ಟೆಗೆ ಸಂಬಂಧ ಪಟ್ಟಂತೆ ಅಜೀರ್ಣದ ಸಮಸ್ಯೆಯಿಂದ ಧೀರ್ಘ ಕಾಲದಿಂದ ಬಳಲುತ್ತಿದ್ದರೆ , ದಯವಿಟ್ಟು ಕಡೆಗಣಿಸಬೇಡಿ . ಆದಷ್ಟು ಬೇಗನೆ ವೈದ್ಯರನ್ನು ಕಂಡು ಅವರಿಂದ ರೋಗ ಲಕ್ಷಣಗಳನ್ನು ಪತ್ತೆ ಹಚ್ಚಿಸಿ ಚಿಕಿತ್ಸೆ ಪಡೆದುಕೊಳ್ಳಿ .

English summary

Do Almonds Cause Bloating?

A handful of almonds is a healthy snack rich in nutrients and antioxidants. Almonds are also high in vitamin E and magnesium, as well as a good source of fiber, which can help keep your digestion healthy. For some people, however, almonds can cause gastrointestinal problems, including the feeling of being bloated. The high-fiber content in almonds is a common cause, but feeling bloated could also be because of an allergy to almonds
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more