For Quick Alerts
ALLOW NOTIFICATIONS  
For Daily Alerts

ಕಾಮಾಲೆ ರೋಗಿಗಳ ಡಯಟ್: ಇಂತಹ ಸಮಯದಲ್ಲಿ ತಿನ್ನಬೇಕಾದ, ಹಾಗೂ ತಿನ್ನಬಾರದ ಆಹಾರಗಳ ಪಟ್ಟಿ

|

ಮನುಷ್ಯನ ದೇಹಕ್ಕೆ ಹಲವಾರು ರೀತಿಯ ರೋಗಗಳು ಬರುವುದು. ಪ್ರತಿರೋಧಕ ಶಕ್ತಿಯು ಕಡಿಮೆ ಇದ್ದರೆ ಆಗ ರೋಗಗಳು ಕಾಡುವುದು ಹೆಚ್ಚು. ಇನ್ನು ಕೆಲವೊಮ್ಮೆ ನಾವು ಸೇವಿಸುವಂತಹ ಆಹಾರ ಮತ್ತು ನೀರು ಕಲುಷಿತವಾಗಿದ್ದರೆ ಆಗ ರೋಗ ಬರಬಹುದು. ಕಲುಷಿತ ನೀರು ಮತ್ತು ಕೆಲವೊಂದು ಜೀವನಶೈಲಿಯಿಂದಾಗಿ ಸಮಸ್ಯೆಗಳು ಬರುವುದು. ಇದರಲ್ಲಿ ಕಾಮಾಲೆಯು ಒಂದು. ಆದರೆ ಕಾಮಾಲೆ ಎನ್ನುವುದು ಒಂದು ರೋಗವಲ್ಲ ಎನ್ನುವುದು ಹೆಚ್ಚಿನವರಿಗೆ ತಿಳಿದೇ ಇದೆ. ಆದರೆ ಇದರ ಕೆಲವೊಂದು ಲಕ್ಷಣಗಳು ಯಕೃತ್ ಮತ್ತು ಮೇದೋಜೀರಕ ಗ್ರಂಥಿ ಮತ್ತು ಪಿತ್ತಕೋಶದ ಮೇಲೆ ಯಾವುದಾದರೂ ತೊಂದರೆ ಆಗಿದೆ ಎಂದು ತಿಳಿದುಕೊಳ್ಳಬೇಕು. ಕಾಮಾಲೆಯು ವಯಸ್ಕರಲ್ಲಿ ಸಾಮಾನ್ಯವಲ್ಲ ಮತ್ತು ಇದು ಬರಲು ಕೆಲವೊಂದು ಕಾರಣಗಳು ಕೂಡ ಇದೆ. ಈ ಕಾರಣಗಳು ಯಾವುದು ಎಂದು ನಾವು ಈ ಲೇಖನದ ಮೂಲಕ ತಿಳಿಯುವ.

 Jaundice

ಹೆಪಟೈಟಿಸ್

ವೈರಲ್ ಸೋಂಕಿನಿಂದಾಗಿ ಯಕೃತ್ ಬಿಲಿರುಬಿನ್ ಉತ್ಪತ್ತಿ ಮಾಡಲು ಸಾಧ್ಯವಾಗದೆ ಇರಬಹುದು. ಇದರಿಂದಾಗಿ ಚರ್ಮದಲ್ಲಿ ಹಳದಿ ಬಣ್ಣವು ಕಾಣಿಸಿಕೊಳ್ಳುವುದು, ಕಣ್ಣಿನ ಬಿಳಿ ಭಾಗ ಕೂಡ ಹಳದಿ ಬಣ್ಣಕ್ಕೆ ತಿರುಗುವುದು.

ಯಕೃತ್‌ಗೆ ಹಾನಿ

ಆಲ್ಕೋಹಾಲ್, ಡ್ರಗ್ಸ್ ಅಥವಾ ಇತರ ಕೆಲವೊಂದು ಹಾನಿಕಾರಕ ವಿಷಗಳಿಂದಾಗಿ ಯಕೃತ್ ಗೆ ಹಾನಿ ಆಗುವುದು ಮತ್ತು ಇದು ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಉಂಟು ಮಾಡುವುದು.

ಪಿತ್ತರಸ ನಾಳವು ನಿರ್ಬಂಧಿಸಲ್ಪಡುವುದು

ಯಕೃತ್ ಪಿತ್ತರಸವನ್ನು ಉತ್ಪತ್ತಿ ಮಾಡುವುದು. ಇದು ಪಿತ್ತಕೋಶದಲ್ಲಿ ಜಮೆ ಆಗುವುದು. ಈ ಪಿತ್ತರಸವು ಸಣ್ಣ ಕರುಳಿನಲ್ಲಿ ಇರುವಂತಹ ಕೊಬ್ಬನ್ನು ವಿಘಟಿಸುವುದು ಮತ್ತು ಜೀರ್ಣಿಸಿಕೊಳ್ಳಲು ನೆರವಾಗುವುದು. ಯಕೃತ್ ನಿಂದ ಪಿತ್ತಕೋಶದ ತನಕ ಪಿತ್ತರಸವನ್ನು ಸಾಗಿಸುವಂತಹ ಸಣ್ಣ ನರಗಳನ್ನು ಪಿತ್ತನಾಳವೆಂದು ಕರೆಯಲಾಗುತ್ತದೆ. ಈ ನಾಳಗಳಲ್ಲಿ ತಡೆ ಉಂಟಾದರೆ, ಆಗ ಅದು ಕಾಮಾಲೆಗೆ ಕಾರಣವಾಗುವುದು.

Most Read:ಕಾಮಾಲೆ ರೋಗವನ್ನು ಬುಡ ಸಮೇತ ಕಿತ್ತು ಹಾಕುವ ಮನೆಮದ್ದುಗಳು

ಮೇದೋಜೀರಕ ಗ್ರಂಥಿ(ಪ್ಯಾಂಕಿಯಾಟಿಕ್) ಅಥವಾ ಯಕೃತ್ ನ ಕ್ಯಾನ್ಸರ್

ಮೇದೋಜೀರಕ ಗ್ರಂಥಿ ಅಥವಾ ಯಕೃತ್ ನ ಕ್ಯಾನ್ಸರ್ ಸಂದರ್ಭದಲ್ಲಿ ಕಾಮಾಲೆ ಲಕ್ಷಣಗಳು ಕಾಣಿಸಿಕೊಳ್ಳುವುದು.
ಯಾವುದೇ ಸಂದರ್ಭದಲ್ಲಿ ಕಾಮಾಲೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು. ಕಾಮಾಲೆ ಸಮಸ್ಯೆಯು ಕಾಣಿಸಿಕೊಂಡರೆ ತಕ್ಷಣವೇ ಹೋಗಿ ವೈದ್ಯರನ್ನು ಭೇಟಿಯಾಗಿ. ಚಿಕಿತ್ಸೆ ನಡೆಯುತ್ತಲಿದ್ದರೂ ಕಾಮಾಲೆ ರೋಗಿಗೆ ಕೆಲವೊಂದು ಆಹಾರ ಪಥ್ಯವು ಅತೀ ಅಗತ್ಯವಾಗಿರುವುದು.

ಕಾಮಾಲೆ ರೋಗಕ್ಕೆ ಕೆಲವೊಂದು ಆಹಾರ ಪಥ್ಯಗಳು

ಆರೋಗ್ಯಕಾರಿ, ಕಡಿಮೆ ಕೊಬ್ಬು, ಕಡಿಮೆ ಪ್ರೋಟೀನ್, ಅಧಿಕ ನೀರಿನಾಂಶ, ಅಧಿಕ ಕಾರ್ಬೋಹೈಡ್ರೇಟ್ಸ್ ಆಹಾರವು ಯಕೃತ್ ಬೇಗನೆ ಚೇತರಿಕೆ ಪಡೆದುಕೊಳ್ಳಲು ನೆರವಾಗುವುದು. ಮಾಂಸ, ಧಾನ್ಯಗಳು, ಬೆಣ್ಣೆ ಮತ್ತು ತುಪ್ಪವು ಹಾನಿಗೀಡಾಗಿರುವಂತಹ ಅಂಗಾಂಗದ ಮೇಲೆ ಮತ್ತಷ್ಟು ಒತ್ತಡ ಹಾಕಬಹುದು. ಇದರಿಂದಾಗಿ ಇಂತಹ ಆಹಾರಗಳನ್ನು ಕಡೆಗಣಿಸಬೇಕು. ವೈದ್ಯರು ಮತ್ತು ಆಹಾರ ತಜ್ಞರು ಸೂಚಿಸಿರುವಂತಹ ಕೆಲವೊಂದು ಆಹಾರಗಳು ಯಕೃತ್ ಬೇಗನೆ ಚೇತರಿಸಿಕೊಳ್ಳಲು ನೆರವಾಗುವುದು.

ನೀರು

ದುರ್ಬಲ ಯಕೃತ್ ವಿಷಕಾರಿ ಅಂಶವನ್ನು ಹೊರಗೆ ಹಾಕಲಾರದು. ಇದರಿಂದ ನೀರು ವಿಷಕಾರಿ ಅಂಶವನ್ನು ಹೊರಗೆ ಹಾಕುವಲ್ಲಿ ತುಂಬಾ ಪ್ರಮುಖ ಪಾತ್ರ ನಿರ್ವಹಿಸುವುದು. ಕಾಮಾಲೆ ರೋಗಿಯು ನೀರಿನ ಸೇವನೆ ಹೆಚ್ಚಿಸಬೇಕು. ಆತ/ಆಕೆಗೆ ನೀರು ಕುಡಿದು ಹೊಟ್ಟೆ ತುಂಬಿದಂತೆ ಆದರೂ ಅಥವಾ ವಾಕರಿಕೆ ಬಂದರೂ ನೀರು ಸೇವನೆ ನಿಲ್ಲಿಸಬಾರದು. ಲಿಂಬೆ ನೀರಿನ ಜತೆಗೆ ಸ್ವಲ್ಪ ಜೇನುತುಪ್ಪ ಅಥವಾ ಉಪ್ಪು ಹಾಕಿಕೊಂಡು ಕುಡಿದರೆ ಅದರಿಂದ ವಿಷಕಾರಿ ಅಂಶವನ್ನು ಹೊರಗೆ ಹಾಕಬಹುದು ಮತ್ತು ಇದು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಗ್ರೀನ್ ಟೀ ಕುಡಿದರೆ ಅದು ದೇಹದ ಸಂಪೂರ್ಣ ಕೊಬ್ಬಿನಾಂಶವನ್ನು ಕಡಿಮೆ ಮಾಡುವುದು. ಗ್ರೀನ್ ಟೀಯಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಅಂಶವು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು. ಎಳನೀರಿನಲ್ಲಿ ಒಳ್ಳೆಯ ವಿಷ ಹೊರಹಾಕುವಂತಹ ಅಂಶವಿದೆ ಮತ್ತು ಇದು ಮಲಬದ್ಧತೆ ನಿವಾರಣೆ ಮಾಡಲು ನೆರವಾಗುವುದು. ಕಬ್ಬಿನ ಹಾಲು ಕೂಡ ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕಲು ನೆರವಾಗುವುದು ಮತ್ತು ಯಕೃತ್ ನ ಕಾರ್ಯಕ್ಕೆ ನೆರವಾಗುವುದು. ಮೂಲಂಗಿ ಮತ್ತು ಪಪ್ಪಾಯಿ ಎಲೆಗಳ ಜ್ಯೂಸ್ ಕೂಡ ತುಂಬಾ ಸಹಕಾರಿ ಎಂದು ಪರಿಗಣಿಸಲಾಗಿದೆ.

ನಾರಿನಾಂಶ

ಹೀರಿಕೊಳ್ಳುವ ನಾರಿನಾಂಶವು ಅಧಿಕವಾಗಿ ಇರುವಂತಹ ಆಹಾರವನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ನಾರಿನಾಂಶವು ಯಕೃತ್ ನಿಂದ ಪಿತ್ತರಸವನ್ನು ಹೊರಗೆ ತರುವುದು ಮತ್ತು ದೇಹದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು. ಓಟ್ಸ್, ತರಕಾರಿಗಳು, ಕುಚ್ಚಲಕ್ಕಿಯಲ್ಲಿ ಹೆಚ್ಚಿನ ಮಟ್ಟದ ನಾರಿನಾಂಶವು ಇದೆ.

Most Read: ಜಾಂಡೀಸ್ ರೋಗ: ವೈದ್ಯರಿಗೆ ಸವಾಲೆಸೆಯುವ ಹಳ್ಳಿ ಮದ್ದು!

ಹಣ್ಣುಗಳು

ಕೆಲವೊಂದು ಹಣ್ಣುಗಳಲ್ಲಿ ಉನ್ನತ ಮಟ್ಟದ ಜೀರ್ಣಕ್ರಿಯೆ ಕಿಣ್ವಗಳು ಇವೆ ಮತ್ತು ಇದು ರಕ್ತದಲ್ಲಿನ ಬಿಲಿರುಬಿನ್ ಅಂಶವನ್ನು ಕಡಿಮೆ ಮಾಡುವುದು. ದ್ರಾಕ್ಷಿ, ಅನಾನಸು, ಅವಕಾಡೊ ಯಕೃತ್‌ಗೆ ತುಂಬಾ ಸಹಕಾರಿ ಆಗಿ ಇರಲಿದೆ. ನೇರಳೆ ಮತ್ತು ಕ್ರಾನ್ಬೇರಿ ಹಣ್ಣುಗಳು ಕೂಡ ಹಾನಿಯನ್ನು ಕಡಿಮೆ ಮಾಡುವುದು.

ಕಾಮಾಲೆ ಇರುವ ವೇಳೆ ಯಾವ ಆಹಾರ ಕಡೆಗಣಿಸಬೇಕು

ಕಾಮಾಲೆ ಇರುವ ವೇಳೆ ಯಕೃತ್ ನ ಕಾರ್ಯವು ತುಂಬಾ ನಿಧಾನವಾಗಿ ಆಗುವ ಕಾರಣದಿಂದಾಗಿ ಪಿತ್ತರಸದ ಉತ್ಪತ್ತಿ ಮೇಲೆ ಪರಿಣಾಮ ಬೀರುವುದು. ಇದರಿಂದಾಗಿ ಕೊಬ್ಬನ್ನು ಕರಗಿಸಲು ತುಂಬಾ ಕಷ್ಟವಾಗಬಹುದು ಮತ್ತು ಇದರಿಂದ ಕೊಬ್ಬು ಸೇವನೆ ಕಡಿಮೆ ಮಾಡಬೇಕು. ಬೆಣ್ಣೆ, ತುಪ್ಪ, ಜಂಕ್ ಫುಡ್, ಚಿಪ್ಸ್ ಅಥವಾ ಸೋಡಾವನ್ನು ಕಡೆಗಣಿಸಬೇಕು. ಆಲ್ಕೋಹಾಲ್‌ನ್ನು ಮುಟ್ಟಲೇಬಾರದು. ಮಾಂಸವನ್ನು ಕರಗಿಸಲು ತುಂಬಾ ಕಷ್ಟವಾಗಬಹುದು ಮತ್ತು ಇದರಿಂದಾಗಿ ಇದು ವಿಷವಾಗಬಹುದು. ಇದರಿಂದ ಈ ವೇಳೆ ತರಕಾರಿ ಸೇವಿಸಿ. ಉಪ್ಪು ಮತ್ತು ಸಕ್ಕರೆ ಸೇವನೆ ಕೂಡ ಕಡಿಮೆ ಮಾಡಿ. ಪಿಷ್ಠ ಅಧಿಕವಾಗಿ ಇರುವಂತಹ ಬ್ರೆಡ್, ರೊಟ್ಟಿಯನ್ನು ಕಡೆಗಣಿಸಬೇಕು. ಬೀನ್ಸ್ ಮತ್ತು ದ್ವಿದಳ ಧಾನ್ಯಗಳನ್ನು ಕಡೆಗಣಿಸಬೇಕು. ಯಾಕೆಂದರೆ ಇದು ದೇಹದಲ್ಲಿ ನಿಟ್ರೋಜನ್ ಮಟ್ಟವನ್ನು ಹೆಚ್ಚಿಸುವುದು ಮತ್ತು ಯಕೃತ್ ನ ಮೇಲೆ ಒತ್ತಡ ಹಾಕುವುದು. ಇದರಿಂದಾಗಿ ಮೊಟ್ಟೆ, ಕೆಫಿನ್ ಮತ್ತು ಹಾಲಿನ ಉತ್ಪನ್ನಗಳನ್ನು ನೀವು ಕಡೆಗಣಿಸಿ.

ಕಾಮಾಲೆ ರೋಗಕ್ಕೆ ಆಹಾರ ಪಟ್ಟಿ

ಯಾವ ಆಹಾರ ಸೇವಿಸಬೇಕು ಮತ್ತು ಸೇವಿಸಬಾರದು ಎನ್ನುವುದರ ಮೇಲೆ ಇಲ್ಲಿ ಒಂದು ಆಹಾರ ಪಟ್ಟಿ ತಯಾರಿಸಲಾಗಿದೆ. ಇಲ್ಲಿ ಪ್ರಮುಖವಾಗಿ ಒಂದೇ ಸಲ ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವನೆ ಮಾಡಬೇಡಿ. ಇದರ ಬದಲಿಗೆ ಸಣ್ಣ ಸಣ್ಣ ಪ್ರಮಾಣದಲ್ಲಿ ಆಗಾಗ ಆಹಾರ ಸೇವಿಸಿ. ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಿ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಿ. ಮತ್ತೆ ಮತ್ತೆ ಇದೇ ರೀತಿಯ ಸಮಸ್ಯೆಯು ಕಾಡುತ್ತಲಿದ್ದರೆ ಅಥವಾ ಬೇರೆ ಯಾವುದೇ ಹೊಸ ಸಮಸ್ಯೆಗಳು ಬಂದರೆ ಆಗ ನೀವು ವೈದ್ಯರನ್ನು ಭೇಟಿಯಾಗಲು ಮರೆಯಬೇಡಿ.

English summary

Diet For Jaundice Patients: What To Eat and What To Avoid

Not many of us know that jaundice is not a disease, but more of a symptom that indicates trouble with the liver or pancreas, gall bladder or red blood cells. Although jaundice is not that common in adults, there are some reasons it occurs
X
Desktop Bottom Promotion