For Quick Alerts
ALLOW NOTIFICATIONS  
For Daily Alerts

ಡೆಂಗ್ಯೂ ಜ್ವರದ ಲಕ್ಷಣಗಳು, ಚಿಕಿತ್ಸೆ, ಹಾಗೂ ಇದರ ನಿಯಂತ್ರಣ ಹೇಗೆ?

|

ಡೆಂಗ್ಯೂ ಜ್ವರ (ಸಾಮಾನ್ಯವಾಗಿ ನಾವೆಲ್ಲರೂ ಇದನ್ನು ಡೆಂಗ್ಯೂ ಎಂದು ಉಚ್ಛರಿಸುತ್ತೇವೆ, ಆದರೆ ವೈದ್ಯರ ಪ್ರಕಾರ ಇದರ ಸರಿಯಾದ ಉಚ್ಛಾರಣೆ ಡೆಂಘಿ ಅಥವ ಡೆಂಗಿ). ಒಂದು ವೈರಸ್ ಮೂಲಕ ತಗಲುವ ಜ್ವರವಾಗಿದ್ದು ಒಬ್ಬರಿಂದ ಒಬ್ಬರಿಗೆ ಒಂದು ಮಾಧ್ಯಮದ ಮೂಲಕ ಹರಡುವ ಜ್ವರವಾಗಿದೆ. ನೋಡಲಿಕ್ಕೆ ಪಟ್ಟೆಪಟ್ಟೆ ಇರುವ ಏಡಿಸ್ ಈಜಿಪ್ತಿ (Aedes aegypti)ಎಂಬ ಸೊಳ್ಳೆಯೇ ಈ ಮಾಧ್ಯಮವಾಗಿದ್ದು ಈ ಭಯಾನಕ ವೈರಸ್ ಅನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.

ಪ್ರತೀ ವರ್ಷ ಡೆಂಗ್ಯೂ ಜ್ವರದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯು ಹೆಚ್ಚುತ್ತಲೇ ಇದೆ. ಡೆಂಗ್ಯೂ ಜ್ವರವನ್ನು ತಡೆಯುವ ಉದ್ದೇಶದಿಂದ ಭಾರತ ಸರ್ಕಾರವು ವಿವಿಧ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಜನರಲ್ಲಿ ಕೂಡ ಇದರ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಹೆಚ್ಚಿನ ಡೆಂಗ್ಯೂ ಪ್ರಕರಣಗಳಲ್ಲಿ ರೋಗಿಯು ಸಾವನ್ನಪ್ಪುತ್ತಾನೆ. ಮಕ್ಕಳಲ್ಲಿ ಕೂಡ ಡೆಂಗ್ಯೂ ಜ್ವರವು ಕಾಣಿಸಿಕೊಳ್ಳುವುದು. ಮಕ್ಕಳಲ್ಲಿ ರೋಗ ಪ್ರತಿರೋಧಕ ಶಕ್ತಿಯು ಬೆಳೆಯುತ್ತಿರುವ ಕಾರಣದಿಂದಾಗಿ ಅವರಲ್ಲಿ ಈ ರೋಗದ ವಿರುದ್ಧ ಹೋರಾಡಲು ಸಾಧ್ಯವಾಗದೆ ರೋಗವು ತೀವ್ರ ಸ್ವರೂಪಕ್ಕೆ ತಲುಪುವುದು. ಇದಕ್ಕಾಗಿ ಈ ಪರಿಸ್ಥಿತಿಗೆ ಸರಿಯಾಗಿ ತಯಾರಾಗಿ ಇರಬೇಕು. ಪ್ರತೀ ವರ್ಷ ಡೆಂಗ್ಯೂ ಜ್ವರ ನಿವಾರಣೆ ಮಾಡಲು ಹಲವಾರು ರೀತಿಯ ತಯಾರಿ ನಡೆಸಲಾಗುತ್ತದೆ. ಡೆಂಗ್ಯೂವಿನಿಂದ ಮೊದಲು ಮಕ್ಕಳನ್ನು ರಕ್ಷಿಸುವುದು ಅತೀ ಅಗತ್ಯವಾಗಿದೆ. ಇದರಿಂದ ನೀವು ಪ್ರತೀ ಹಂತದಲ್ಲೂ ಮಕ್ಕಳ ಬಗ್ಗೆ ಗಮನಹರಿಸಬೇಕು ಮತ್ತು ಅವರಿಗೆ ಉತ್ತಮ ಆರೋಗ್ಯ ನೀಡಬೇಕು. ಮಕ್ಕಳಿಗೆ ಡೆಂಗ್ಯೂ ಬರದಂತೆ ತಡೆಯಲು ಕೆಲವೊಂದು ವಿಧಾನಗಳು ಈ ಲೇಖನದಲ್ಲಿ ಇದೆ.

Dengue fever

ಮನೆಯನ್ನು ಸ್ವಚ್ಛವಾಗಿಡಿ

ಡೆಂಗ್ಯೂ ವಿರುದ್ಧ ಹೋರಾಡುವ ಮೊದಲ ಕ್ರಮವೆಂದರೆ ಮನೆಯನ್ನು ಸ್ವಚ್ಛವಾಗಿ ಇಡಬೇಕು. ಮನೆಯನ್ನು ಸ್ವಚ್ಛಗೊಳಿಸುವ ಬಗ್ಗೆ ನೀವು ಮೊದಲಾಗಿ ಪರಿಗಣಿಸಬೇಕು. ಮನೆಯ ಪ್ರತಿಯೊಂದು ಮೂಲೆ ಕೂಡ ಸ್ವಚ್ಛವಾಗಿರಬೇಕು. ಮನೆಯನ್ನು ಸ್ವಚ್ಛಗೊಳಿಸುತ್ತಿರುವ ವೇಳೆ ನೀರನ್ನು ಹಾಗೆ ಶೇಖರಣೆ ಆಗಲು ಬಿಡಬಾರದು. ನೀರನ್ನು ಮುಚ್ಚದೆ ಇದ್ದರೆ ಆಗ ಅದರಲ್ಲಿ ಸೊಳ್ಳೆಗಳು ವಂಶಾಭಿವೃದ್ಧಿ ಮಾಡುವುದು. ಇದರಿಂದಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಸಂಗ್ರಹಿಸಿಕೊಂಡಿರುವ ನೀರನ್ನು ಸರಿಯಾಗಿ ಮುಚ್ಚಿ. ತುಂಬಾ ದಿನಗಳ ತನಕ ನೀರನ್ನು ಶೇಖರಣೆ ಮಾಡಿ ಇಡಬೇಡಿ. ದಿನಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಶೇಖರಣೆ ಮಾಡಿ. ಮನೆ ಒಳಗಡೆ ಕೂಡ ಸೊಳ್ಳೆಗಳು ನೆಲೆ ನಿಲ್ಲದಂತೆ ಮಾಡಿ.

ಬಟ್ಟೆ ಧರಿಸಿಕೊಳ್ಳಿ

ಸೊಳ್ಳೆಗಳು ಕಚ್ಚುವುದರಿಂದ ತಡೆಯಲು ಸರಿಯಾಗಿ ಬಟ್ಟೆ ಧರಿಸುವುದು ಕೂಡ ಅತೀ ಅಗತ್ಯವಾಗಿ ಇರುವುದು. ದೇಹದ ಸಂಪೂರ್ಣ ಭಾಗವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ಮಕ್ಕಳಿಗೆ ಉದ್ದ ಕೈಯ ಬಟ್ಟೆ ನೀಡಿ. ಈ ಬಟ್ಟೆಗಳು ಅವರಿಗೆ ತುಂಬಾ ಆರಾಮದಾಯಕವಾಗಿರಲಿ, ಯಾಕೆಂದರೆ ಇದರಿಂದ ಅವರಿಗೆ ಯಾವುದೇ ರೀತಿಯ ಚರ್ಮದ ಸಮಸ್ಯೆಗಳು ಬರದೇ ಇರಲಿ.

Dengue fever

ಮನೆ ಹೊರಗಡೆ ಹೋಗುವ ಮೊದಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಿ

ಮಕ್ಕಳನ್ನು ಯಾವಾಗಲೂ ಮನೆಯ ಒಳಗಡೆ ಕುಳ್ಳಿರಿಸಲು ಸಾಧ್ಯವಿಲ್ಲ. ಮಕ್ಕಳು ಏನಾದರೂ ಒಂದು ಕಾರಣ ಹೇಳಿಕೊಂಡು ಮನೆಯಿಂದ ಹೊರಗೆ ಹೋಗುವರು. ಇದನ್ನು ತಡೆಯಲು ಆಗದು. ಇದರಿಂದ ಮಕ್ಕಳಿಗೆ ಹೊರಗಡೆ ಹೋಗುವ ವೇಳೆ ಸೊಳ್ಳೆ ಕ್ರೀಮ್, ಎಣ್ಣೆ ಅಥವಾ ಮಾರುಕಟ್ಟೆಯಲ್ಲಿ ಸಿಗುವ ಬೇರೆ ಏನಾದರೂ ಬಳಸಿ.

ಲಕ್ಷಣಗಳನ್ನು ಅರಿತುಕೊಳ್ಳಿ

ಡೆಂಗ್ಯೂ ಜ್ವರವನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು ಮೊದಲಿಗೆ ಈ ರೋಗವು ಹರಡದಂತೆ ತಡೆಯಬೇಕು. ಡೆಂಗ್ಯೂವಿನ ಲಕ್ಷಣಗಳ ಬಗ್ಗೆ ನಿಮಗೆ ಸರಿಯಾಗಿ ತಿಳಿದಿದ್ದರೆ ಆಗ ನೀವು ಮಗುವಿಗೆ ಸರಿಯಾಗಿ ಚಿಕಿತ್ಸೆ ನೀಡಬಹುದು. ಆರಂಭದಲ್ಲೇ ಚಿಕಿತ್ಸೆ ನೀಡಿದರೆ ಆಗ ಒಳ್ಳೆಯ ರಕ್ಷಣೆ ಸಿಗುವುದು. ಮಗುವಿನಲ್ಲಿ ಡೆಂಗ್ಯೂವಿನ ಯಾವುದೇ ಲಕ್ಷಣಗಳು ಕಂಡುಬಂದರೆ ಆಗ ಕೂಡಲೇ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಚಿಕಿತ್ಸೆ ಪಡೆದುಕೊಳ್ಳಿ.

Dengue fever

ಪ್ರಯಾಣದಿಂದ ದೂರವಿರಿ

ಡೆಂಗ್ಯೂ ಜ್ವರದ ವೇಳೆ ಪ್ರಯಾಣ ಮಾಡುವುದನ್ನು ಕಡೆಗಣಿಸಬೇಕು. ಡೆಂಗ್ಯೂ ಬರುವ ಸಾಧ್ಯತೆ ಇರುವಂತಹ ಯಾವುದೇ ಸ್ಥಳಗಳಿಗೆ ನೀವು ಪ್ರಯಾಣದ ಯೋಜನೆ ಹಾಕಿಕೊಳ್ಳಬೇಡಿ. ಇದರಿಂದ ನಿಮಗೆ ಡೆಂಗ್ಯೂ ಬರಬಹುದು. ಆದ್ದರಿಂದ ಆದಷ್ಟು ಮಟ್ಟಿಗೆ ಒಳಗೆ ಇರಿ.

ಡೆಂಗ್ಯೂಜ್ವರದ ಲಕ್ಷಣಗಳೇನು?

ಡೆಂಗ್ಯೂಜ್ವರದ ವೈರಸ್ಸುಗಳು ಧಾಳಿ ಮಾಡಿದ ಅನತಿಕಾಲದಲ್ಲಿಯೇ ತೀವ್ರವಾದ ಮೂಳೆಸಂದುಗಳಲ್ಲಿ ಮತ್ತು ಸ್ನಾಯುಗಳಲ್ಲಿ ನೋವು, ಊದಿಕೊಂಡಿರುವ ದುಗ್ಧರಸಗ್ರಂಥಿಗಳು, ಅತೀವ ತಲೆನೋವು, ಅತಿ ಬಿಸಿಯಾದ ಶರೀರ, ಸುಸ್ತು ಮತ್ತು ಚರ್ಮದಲ್ಲಿ ಕೆಂಪಗಾಗಿ ಉರಿಯಾಗುವುದು ಮೊದಲಾದ ಲಕ್ಷಣಗಳು ಕಂಡುಬರುತ್ತವೆ. ಸೊಳ್ಳೆ ಕಡಿದ ಬಳಿಕ ಚಿಕ್ಕದಾಗಿ ಜ್ವರ ಕಾಣಿಸಿಕೊಂಡಂದಿನಿಂದ ಸುಮಾರು ಹತ್ತರಿಂದ ಹದಿನಾಲ್ಕು ದಿನ ತೀವ್ರ ಜ್ವರ ಬಾಧಿಸಬಹುದು. ಆ ಬಳಿಕ ಸುಮಾರು ಒಂದು ವಾರದ ಕಾಲ ಡೆಂಗಿಯ ಇತರ ಲಕ್ಷಣಗಳು ಮುಂದುವರೆಯಬಹುದು.

Dengue fever

ಪಪ್ಪಾಯಿ ಎಲೆಯ ರಸ ಉಪಯುಕ್ತವಾಗಬಲ್ಲುದು

ಗ್ರಾಮೀಣ ಜನತೆ ವೈದ್ಯರ ಬಳಿ ಬರುವ ಮುನ್ನ ತಮ್ಮ ಮನೆಮದ್ದುಗಳನ್ನು ಮೊದಲು ಪ್ರಯೋಗಿಸುತ್ತಾರೆ. ಡೆಂಗ್ಯೂ ಜ್ವರ ಎಂದು ಹೆಸರಿನಿಂದ ಅರಿವಿರದಿದ್ದರೂ ಈ ರೋಗದ ಲಕ್ಷಣ ಅರಿತವರು ಪಪ್ಪಾಯಿ ಮರದ ಎಲೆಗಳನ್ನು ಅರೆದು ಅದರ ರಸವನ್ನು ಹಿಂಡಿ ರೋಗಿಗೆ ಕುಡಿಸುವ ಮೂಲಕ ಹಲವಾರು ವರ್ಷಗಳಿಂದ ಈ ಜ್ವರದ ಮೇಲೆ ಹತೋಟಿ ಸಾಧಿಸುತ್ತಾ ಬಂದಿದ್ದಾರೆ. ಇದೊಂದು ನಿರೂಪಿತ ವಿಧಾನವಾದುದರಿಂದ ಪಪ್ಪಾಯಿ ಎಲೆಗಳ ರಸವನ್ನು ಕುಡಿಯುವುದು ಉತ್ತಮ. ಪ್ರತಿ ಬಾರಿ ಒಂದರಿಂದ ಎರಡು ಚಮಚದಷ್ಟು ಪ್ರಮಾಣದಲ್ಲಿ ದಿನಕ್ಕೆ ಮೂರು ಬಾರಿ ರಸವನ್ನು ಸೇವಿಸಬಹುದು.

Most Read: ಹಿತ್ತಲ ಗಿಡ 'ಪಪ್ಪಾಯಿ ಗಿಡದ ಎಲೆಗಳ' ಜಬರ್ದಸ್ತ್ ಪವರ್

ಹಸಿರು ತರಕಾರಿ ಮತ್ತು ಸೊಪ್ಪುಗಳನ್ನು ಸೇವಿಸಿ

ಬಸಲೆ, ಪಾಲಕ್ ಮೊದಲಾದ ದಪ್ಪ ಎಲೆಯ ಸೊಪ್ಪು ಮತ್ತು ಇತರ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮೂಲಕವೂ ಡೆಂಗಿಜ್ವರವನ್ನು ಕಡಿಮೆಗೊಳಿಸಲು ಸಾಧ್ಯ. ಆದರೆ ಸೊಪ್ಪನ್ನೇ ಆಗಲಿ ತರಕಾರಿಗಳನ್ನೇ ಆಗಲಿ ಪೂರ್ಣವಾಗಿ ಬೇಯಿಸಬೇಡಿ, ಇದರಿಂದ ಆ ತರಕಾರಿಗಳ ಅಗತ್ಯ ಪೋಷಕಾಂಶಗಳು ಪೋಲಾಗಿ ಹೋಗುತ್ತವೆ. ಆದ್ದರಿಂದ ರುಚಿಯಲ್ಲಿ ಮತ್ತು ಪೂರ್ಣವಾಗಿ ಮೆದುವಾಗದಿದ್ದರೂ ಜ್ವರ ಬಿಡುವವರೆಗೆ ಈ ತರಕಾರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ.

English summary

Dengue fever: symptoms, treatment and prevention

Many cases of dengue results in the death of the patient. Children are also prone to dengue. Since children have a growing immune system, they are not able to fight the disease effectively which leads to severe complications. To avoid such a situation you should be well prepared for the situation. Every year you should be prepared to conquer the situation well. You should safeguard your children especially. You should prevent your children with some steps and measures to ensure their good health.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more