Latest Updates
-
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ!
ಅಲ್ಜೀಮಾರ್ ಕಾಯಿಲೆಗೆ ಅರಿಶಿನದ ಕರ್ಕ್ಯುಮಿನ್ ಅಂಶದಲ್ಲಿದೆ ಪರಿಹಾರ!
ನಮ್ಮ ಭಾರತೀಯ ಹಿಂದೂ ಸಂಸ್ಕೃತಿಯಲ್ಲಿ ಅರಿಶಿಣಕ್ಕೊಂದು ವಿಶೇಷ ಸ್ಥಾನವಿದೆ . ಅಡುಗೆಯಿಂದ ಮಂಗಳ ಕಾರ್ಯದವರೆಗೂ ಅರಿಶಿನ ಎಲ್ಲರ ಮನೆ ಮಾತಾಗಿದೆ . ಹಾಗಾಗಿಯೇ ಎಲ್ಲರೂ ಅರಿಶಿನವನ್ನು ಪೂಜ್ಯ ಮತ್ತು ಗೌರವ ಭಾವನೆಗಳಿಂದ ಕಾಣುತ್ತಾರೆ. ಶುಭ ಕಾರ್ಯದಲ್ಲಿ ಅರಿಶಿನ ಮೈ ಮೇಲೆ ಬಿದ್ದರೆ ಒಳ್ಳೆಯ ಸಂಕೇತ ಎಂದು ಹೇಳುತ್ತಾರೆ. ಅರಿಶಿನ ಚೆಲ್ಲಿದರೆ ಅದನ್ನು ತುಳಿಯಬಾರದು ಎಂದು ಹಲವರು ನಂಬಿದ್ದಾರೆ ಮತ್ತು ಅದೇ ರೀತಿ ಈಗಲೂ ಪಾಲಿಸುತ್ತಿದ್ದಾರೆ ಕೂಡ.
ಇನ್ನು ಆರೋಗ್ಯದ ವಿಷಯಕ್ಕೆ ಬರುವುದಾದರೆ ಬಹಳ ಹಿಂದಿನ ಕಾಲದ ಆಯುರ್ವೇದ ಔಷಧಿಯಿಂದ ಹಿಡಿದು ಈಗಿನ ಕಾಲದಲ್ಲಿ ಕೂಡ ಅನೇಕ ನಾಟಿ ವೈದ್ಯರು ಅರಿಶಿನ ದ ಉಪಯೋಗದ ಬಗ್ಗೆ ಚೆನ್ನಾಗಿ ಅರಿತು ಅದರಿಂದ ಔಷಧಿಗಳನ್ನು ತಯಾರಿಸಿ ಸಮಾಜದ ಜನರ ಖಾಯಿಲೆ ವಾಸಿ ಮಾಡುವ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ .

ಅರಿಶಿನದಿಂದ ಆರೋಗ್ಯಕ್ಕೆ ಆಗುವಂತ ಪ್ರಯೋಜನಗಳು ಹಲವಾರು . ಇದರಲ್ಲಿ ಆಂಟಿ ಒಕ್ಸಿಡಾಂಟ್ ಮತ್ತು ಆಂಟಿ ಇಂಪ್ಲಾಮೇಟರಿ ಗುಣ ಲಕ್ಷಣಗಳು ಕೂಡಿದ್ದು ಮನುಷ್ಯನ ದೇಹದ ಕಾಂತಿಯಿಂದ ಹಿಡಿದು ಮೂಳೆಗಳ ಸಮಸ್ಯೆ , ಹೃದಯದ ಸಮಸ್ಯೆ , ಹೊಟ್ಟೆಯ ಸಮಸ್ಯೆ ಮತ್ತು ಕ್ಯಾನ್ಸರ್ ನಂತಹ ಮಹಾಮಾರಿ ರೋಗಗಳಿಗೂ ಅರಿಶಿಣದಲ್ಲಿನ ಚಮತ್ಕಾರಿ ಅಂಶಗಳು ಮುಕ್ತಿ ಕೊಡುತ್ತವೆ...
ಈಗ ಮೆದುಳಿನ ಸಮಸ್ಯೆಗಳಿಗೆ ಅರಿಶಿನದಿಂದ ಯಾವ ರೀತಿ ಪರಿಹಾರವಿದೆ ಎಂಬುದನ್ನು ನೋಡೋಣ.
ಹಲವಾರು ಮಂದಿ ವಯಸ್ಸಿಗೆ ಅನುಗುಣವಾಗಿ ಮರೆವಿನ ಖಾಯಿಲೆಯಿಂದ ಬಳಲುತ್ತಿರುತ್ತಾರೆ . ಕೆಲವರು ವಯಸ್ಸಿನಲ್ಲಿ ಚಿಕ್ಕವರಿದ್ದರೂ ಎಲ್ಲಾ ಮರೆಯುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ . ಅರಿಶಿನದಲ್ಲಿ ಈ ಸಮಸ್ಯೆಯಿಂದ ಮುಕ್ತಿ ಕೊಡಿಸುವ ಶಕ್ತಿ ಇದೆ. ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದ್ದು ಮನುಷ್ಯರು ಬಳಲುವ " ಆಲ್ಜಿಮರ್ " ಖಾಯಿಲೆಗೆ ಇದು ಒಳ್ಳೆಯ ಔಷಧಿಯಾಗಿದೆ. ಇದು " ಅಮೇರಿಕನ್ ಜರ್ನಲ್ ಓಫ್ ಜೆರಿಯಾಟ್ರಿಕ್ ಸೈಕಿಯಾಟ್ರಿ " ಪ್ರಕಟಗೊಳಿಸಿದ ವರದಿಯಲ್ಲಿ ಸಾಬೀತಾಗಿದೆ.
ಅಲ್ಲಿನ ಸಂಶೋಧಕರು ಡೆಮೆನ್ಷಿಯಾ ಇಲ್ಲದ ಮನುಷ್ಯರ ಮೇಲೆ ಅರಿಶಿನದ ಕರ್ಕ್ಯುಮಿನ್ ಅಂಶ ದೇಹದ ಒಳಗೆ ಸೇರಿದರೆ ಯಾವ ರೀತಿ ಅವರ ಜ್ಞಾಪಕ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ ಎಂದು ಪರೀಕ್ಷಿಸಿದರು. ಜೊತೆಗೆ ಮೊದಲೇ ಮೆದುಳಿನಲ್ಲಿ ದದ್ದುಗಳು ಮತ್ತು ಗೋಜಲುಗಳನ್ನು ಹೊಂದಿ ಆಲ್ಜಿಮರ್ ಖಾಯಿಲೆಯಿಂದ ಬಳಲುತ್ತಿರುವ ಜನರ ಮೇಲೆ ಅರಿಶಿನದ ಕರ್ಕ್ಯುಮಿನ್ ಅಂಶದ ಪರಿಣಾಮ ಹೇಗಿರುತ್ತದೆ ಎಂದು ಅದೇ ಸಮಯದಲ್ಲಿ ಪರೀಕ್ಷಿಸಿದರು.
ಆಗ ಅವರಿಗೆ ತಿಳಿದ ಸತ್ಯ ಏನೆಂದರೆ ಕರ್ಕ್ಯುಮಿನ್ ಅದರ ಪರಿಣಾಮಗಳನ್ನು ಮಾನವನ ಮೆದುಳಿನ ಮೇಲೆ ಹೇಗೆ ಉಂಟು ಮಾಡುತ್ತದೆ ಎಂಬುದು ಖಚಿತವಾಗದಿದ್ದರೂ , ಮೆದುಳಿನಲ್ಲಿ ಉಂಟಾಗಿರುವ ಉರಿಯೂತವನ್ನು (inflammation)ಕಡಿಮೆ ಮಾಡುವ ಶಕ್ತಿ ಅರಿಶಿನಕ್ಕಿದೆ ಎಂದು ಸಾಬೀತಾಯಿತು . ಮೆದುಳಿನ ಉರಿಯೂತದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿರುತ್ತಾರೆ ಮತ್ತು ಅಂತವರಿಗೆ ಆಲ್ಜಿಮರ್ ನಂತಹ ಕಾಯಿಲೆಗಳು ಬಹಳ ಬೇಗನೆ ಅವರಿಸತೊಡಗುತ್ತವೆ. ಆದ್ದರಿಂದ ಅರಿಶಿನ ಈ ಎರಡೂ ರೀತಿಯ ಸಮಸ್ಯೆಗಳಿಗೆ ರಾಮಬಾಣ ಎಂದು ಗೊತ್ತಾಯಿತು ಎಂದು ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿರುವ ಪ್ರತಿಷ್ಠಿತ " ಯೂನಿವರ್ಸಿಟಿ ಓಫ್ ಕ್ಯಾಲಿಫೋರ್ನಿಯಾ " ದ ಸದಸ್ಯರಾದ ಗ್ಯಾರಿ ಸ್ಮಾಲ್ ರವರು ಅಭಿಪ್ರಾಯ ಪಟ್ಟಿದ್ದಾರೆ .
ಅಲ್ಲಿನ ಸಂಶೋಧಕರು ಈ ಪರೀಕ್ಷೆಗೆ ಸುಮಾರು 40 ಜನರನ್ನು ಒಳಪಡಿಸಿದ್ದರು . ಎಲ್ಲರೂ 50 ವರ್ಷದಿಂದ 90 ವರ್ಷ ವಯಸ್ಸಾಗಿದ್ದ ವರಾಗಿದ್ದು ಅದರಲ್ಲಿ ಕೆಲವರಿಗೆ ಸೌಮ್ಯ ರೀತಿಯಲ್ಲಿ ಜ್ಞಾಪಕ ಶಕ್ತಿ ಕುಂಠಿತವಾಗಿತ್ತು . ಸಂಶೋಧನೆಯಲ್ಲಿ ಅವರಿಗೆ 90 ಮಿಲ್ಲಿ ಗ್ರಾಂ ನಷ್ಟು ಕರ್ಕ್ಯುಮಿನ್ ಸೇವಿಸುವಂತೆ ಅಥವಾ 18 ತಿಂಗಳ ಕಾಲ ಪ್ರತಿದಿನ ಪ್ಲೇಸ್ಬೊ ಗೆ ಒಳಗಾಗುವಂತೆ ಹೇಳಿದರು.
ಸಂಶೋಧನೆಗೆ ಒಳಗಾಗಿದ್ದ ಎಲ್ಲಾ 40 ಜನರು ಪ್ರಮಾಣೀಕೃತ ಅರಿವಿನ ಮೌಲ್ಯಮಾಪನಗಳಿಗೆ ಸಂಶೋಧನೆಯ ಶುರುವಿನ ಸಮಯದಲ್ಲಿ ಮತ್ತು 6 ತಿಂಗಳ ನಡುವಿನಲ್ಲಿ ಒಳಗಾಗಿದ್ದರು ಮತ್ತು ಅಧ್ಯಯನದ ಪ್ರಾರಂಭದಲ್ಲಿ ಮತ್ತು 18 ತಿಂಗಳ ನಂತರ ಅವರ ರಕ್ತದಲ್ಲಿನ ಕರ್ಕ್ಯುಮಿನ್ ಮಟ್ಟವನ್ನು ಪರೀಕ್ಷೆಯ ಮೂಲಕ ತಿಳಿದುಕೊಳ್ಳಲಾಯಿತು. 30 ಮಂದಿ ಸ್ವಯಂ ಸೇವಕರು ಅವರ ಮೆದುಳಿನಲ್ಲಿ ಅಮೈಲೋಯ್ಡ್ ಮತ್ತು ಟೌ ಅಂಶ ಪತ್ತೆ ಹಚ್ಚಲು ಸಂಶೋಧನೆಯ ಮೊದಲ ಹಂತದಲ್ಲಿ ಮತ್ತು 18 ತಿಂಗಳ ನಂತರ " ಪಾಸಿಟ್ರಾನ್ ಎಮಿಶನ್ ಟೊಮೊಗ್ರಫಿ " ಅಥವಾ ಪಿ . ಈ . ಟಿ . ಎಂಬ ಸ್ಕ್ಯಾನಿಂಗ್ ಪರೀಕ್ಷೆಗೆ ಒಳಪಟ್ಟಿದ್ದರು .
ಇದರಲ್ಲಿ ಯಾರು ಕರ್ಕ್ಯುಮಿನ್ ಅಂಶವನ್ನು ತೆಗೆದುಕೊಂಡು ಸಂಶೋಧನೆಗೆ ಹಾಜರಾಗಿದ್ದರೋ ಅವರು ಮಾನಸಿಕವಾಗಿ ಬಹಳ ಸದೃಢವಾಗಿದ್ದರು ಏಕೆಂದರೆ ಅವರ ಬುದ್ಧಿ ಶಕ್ತಿ ಮತ್ತು ನೆನಪಿನ ಶಕ್ತಿ ಬಹಳ ಚೆನ್ನಾಗಿ ಅಭಿವೃದ್ಧಿ ಕಂಡಿತ್ತು . ಅದೇ ಪ್ಲೇಸ್ ಬೊ ತೆಗೆದುಕೊಂಡವರಿಗೆ ಯಾವ ಬದಲಾವಣೆಗಳೂ ಆಗಿರಲಿಲ್ಲ.
ಈ ಸಂಶೋಧನೆಯ ಕೊನೆಯ ಹಂತಕ್ಕೆ ಬಂದ ಮೇಲೆ ಸಂಶೋಧಕರು ಕರ್ಕ್ಯುಮಿನ್ ಅಂಶವನ್ನು ಅದರ ಸುರಕ್ಷಿತ ರೂಪದಲ್ಲಿ ತೆಗೆದುಕೊಂಡರೆ ಕೆಲವು ವರ್ಷಗಳಲ್ಲಿ ಬುದ್ಧಿ ಶಕ್ತಿಯಲ್ಲಿ ಮತ್ತು ಅರಿವಿನ ವಿಷಯದಲ್ಲಿ ಒಳ್ಳೆಯ ಬದಲಾವಣೆ ಕಾಣಬಹುದು . ಕರ್ಕ್ಯುಮಿನ್ ಅಂಶವನ್ನು ಹೊಂದಿರುವ ಅರಿಶಿನ ಆರೋಗ್ಯದ ವಿಚಾರದಲ್ಲಂತೂ ತನ್ನ ಒಳ್ಳೆಯ ಪ್ರಭಾವ ಉಂಟುಮಾಡುವ ಗುಣವನ್ನು ಇತರ ಎಲ್ಲಾ ಮಸಾಲೆ ಪದಾರ್ಥಗಳಿಗೆ ಹೋಲಿಸಿದರೆ ಅರಿಶಿಣವೇ ಶ್ರೇಷ್ಠ ಎಂದು ಅಭಿಪ್ರಾಯ ಪಟ್ಟಿದ್ದಾರೆ . ಆದ್ದರಿಂದ ನಿಮ್ಮ ಮನೆಯ ಅಡುಗೆಯಲ್ಲಿ ನೀವು ಪ್ರತಿ ದಿನ ಯಾವುದೇ ಸಂಕೋಚವಿಲ್ಲದೆ ಅರಿಶಿನವನ್ನು ಉಪಯೋಗಿಸಬಹುದು .
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


