For Quick Alerts
ALLOW NOTIFICATIONS  
For Daily Alerts

ಕ್ಯಾರೆಟ್ : ಪೌಷ್ಟಿಕ ಆಹಾರದ ಪ್ರಯೋಜನಗಳು ಹಾಗೂ ಇದರ ಅಡ್ಡಪರಿಣಾಮಗಳು

|

ಚಿಕ್ಕವರಿದ್ದಾಗಿನಿಂದಲೂ ಕ್ಯಾರೆಟ್ ತಿಂದರೆ ಕಣ್ಣಿಗೆ ಒಳ್ಳೆಯದು ಎಂದು ನಮ್ಮ ಪಾಲಕರು ಹೇಳುತ್ತಲೇ ಹಲವಾರು ಬಗೆಯ ಕ್ಯಾರೆಟ್ ತಿನಿಸುಗಳನ್ನು ತಿನ್ನಿಸುತ್ತಲೇ ಬಂದಿದ್ದಾರೆ. ಇದು ಹೆಚ್ಚಿನಾಂಶ ನಿಜ ಕೂಡಾ. ಕ್ಯಾರೆಟ್ ಒಂದು ಅತ್ಯುತ್ತಮ ಆರೋಗ್ಯಕರ ತರಕಾರಿಯಾಗಿದ್ದು ಹಸಿಯಾಗಿಯೂ ಬೇಯಿಸಿಯೂ ತಿನ್ನಬಹುದಾಗಿದೆ. ಇದರಲ್ಲಿ ಅತ್ಯುತ್ತಮ ಪ್ರಮಾಣದ ಸಸ್ಯಜನ್ಯ ಸಂಯುಕ್ತಗಳಾದ ಬೀಟಾ ಕ್ಯಾರೋಟೀನ್, ಲೈಕೋಪೀನ್, ಲ್ಯೂಟಿನ್, ಆಂಥೋಸೈಯಾನಿನ್ ಮತ್ತು ಪಾಲಿ ಅಸಿಟೈಲೀನ್ ಗಳಿವೆ.

ಸಾಮಾನ್ಯವಾಗಿ ಕ್ಯಾರೆಟ್ (ಕನ್ನಡದಲ್ಲಿ ಗಜ್ಜರಿ) ಕಿತ್ತಳೆಯ ಬಣ್ಣದಲ್ಲಿದ್ದರೂ ಉಳಿದಂತೆ ಕೆಂಪು, ಹಳದಿ, ನೇರಳೆ ಮತ್ತು ಬಿಳಿ ಬಣ್ಣದಲ್ಲಿಯೂ ಲಭ್ಯವಿವೆ. ಇದರಲ್ಲಿ ಕಿತ್ತಳೆಯ ಬಣ್ಣದ ಕ್ಯಾರೆಟ್ ಹೆಚ್ಚು ರುಚಿಕರ ಹಾಗೂ ಜನಪ್ರಿಯ. ಇದರ ಕಿತ್ತಳೆ ಬಣ್ಣಕ್ಕೆ ಇದರಲ್ಲಿರುವ ಬೀಟಾ ಕ್ಯಾರೋಟೀನ್ ಕಾರಣವಾಗಿದೆ. ಇದೊಂದು ಪ್ರಬಲ ಅಂಟಿ ಆಕ್ಸಿಡೆಂಟ್ ಆಗಿದ್ದು ಇದರ ಸೇವನೆಯ ಬಳಿಕ ದೇಹ ಈ ಪೋಷಕಾಂಶವನ್ನು ವಿಟಮಿನ್ ಎ ಆಗಿ ಬದಲಿಸುತ್ತದೆ. ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶ. ಕ್ಯಾರೆಟ್ ಕಣ್ಣಿಗೇಕೆ ಒಳ್ಳೆಯದು ಎಂದು ಈಗ ಗೊತ್ತಾಯಿತಲ್ಲ?

Carrots

ಕ್ಯಾರೆಟ್ ನ ಬಗೆಗಳು

1. ಚಾಂಟಿನೇ ಕ್ಯಾರೆಟ್ (Chantenay carrots)
2. ಇಂಪೀರೇಟರ್ ಕ್ಯಾರೆಟ್ ( Imperator carrots)
3. ನ್ಯಾಂಟೆಸ್ ಕ್ಯಾರೆಟ್ (Nantes carrots)
4. ಡ್ಯಾನ್ವರ್ಸ್ ಕ್ಯಾರೆಟ್ (Danvers carrots)
5. ಬೇಬಿ ಕ್ಯಾರೆಟ್ (Baby carrots)
6. ಪ್ಲಾನೆಟ್ ಕ್ಯಾರೆಟ್ (Planet carrots)

Most Read: ಕ್ಯಾರೆಟ್ ಸೇವಿಸಿದರೆ ಈ 12 ಲಾಭಗಳು ಗ್ಯಾರಂಟಿ!

ನಾವು ಸೇವಿಸುವ ಪ್ರತಿ ನೂರು ಗ್ರಾಂ ಕ್ಯಾರೆಟ್ ನಿಂದ ಲಭಿಸುವ ಪೋಷಕಾಂಶಗಳು ಇಂತಿವೆ:

* 88.29 ಗ್ರಾಂ ನೀರು
* 41 ಕಿಲೋಕ್ಯಾಲೋರಿ ಶಕ್ತಿ
ಉಳಿದಂತೆ ಇದರಲ್ಲಿರುವ ಇತರ ಪೌಷ್ಟಿಕ ಅಂಶಗಳೆಂದರೆ:
* 0.93 ಗ್ರಾಂ ಪ್ರೊಟೀನ್
* 0.24 ಗ್ರಾಂ ಕೊಬ್ಬು
* 9.58 ಗ್ರಾಂ ಕಾರ್ಬೋಹ್ರೈಡ್ರೇಟ್
* 2.8 ಗ್ರಾಂ ಕರಗುವ ನಾರು
* 4.74 ಗ್ರಾಂ ಸಕ್ಕರೆ
* 33 ಮಿಲಿಗ್ರಾಂ ಕ್ಯಾಲ್ಸಿಯಂ
* 0.30 ಮಿಲಿಗ್ರಾಂ ಕಬ್ಬಿಣ
* 12 ಮಿಲಿಗ್ರಾಂ ಮೆಗ್ನೀಶಿಯಂ
* 35 ಮಿಲಿಗ್ರಾಂ ಗಂಧಕ
* 320 ಮಿಲಿಗ್ರಾಂ ಪೊಟ್ಯಾಶಿಯಂ
* 69 ಮಿಲಿಗ್ರಾಂ ಸೋಡಿಯಂ
* 0.24 ಮಿಲಿಗ್ರಾಂ ಸತು
* 5.9 ಮಿಲಿಗ್ರಾಂ ವಿಟಮಿನ್ ಸಿ.್
* 0.066 ಮಿಲಿಗ್ರಾಂ ಥಿಯಾಮಿನ್
* 0.058 ಮಿಲಿಗ್ರಾಂ ರೈಬೋಫ್ಲೇವಿನ್
* 0.983 ಮಿಲಿಗ್ರಾಂ ನಿಯಾಸಿಸ್
* 0.138 ಮಿಲಿಗ್ರಾಂ ವಿಟಮಿನ್ ಬಿ6
* 19 ಮೈಕ್ರೋಗ್ರಾಂ ಫೋಲೇಟ್
* 16706 ಐ ಯು ಮಾಪಕ ವಿಟಮಿನ್ ಎ
* 0.66 ಮಿಲಿಗ್ರಾಂ ವಿಟಮಿನ್ ಇ
* 13.2 ಮೈಕ್ರೋಗ್ರಾಂ ವಿಟಮಿನ್ ಕೆ.

ಕ್ಯಾರೆಟ್ ನ ಆರೋಗ್ಯಕರ ಪ್ರಯೋಜನಗಳು

ತೂಕ ಇಳಿಕೆಗೆ ಸಹಕರಿಸುತ್ತದೆ

ಕ್ಯಾರೆಟ್ಟುಗಳು ಪೋಷಕಾಂಶಗಳಲ್ಲಿ ಹೆಚ್ಚಿದ್ದರೂ ಕ್ಯಾಲೋರಿಗಳು ಕಡಿಮೆಯೇ ಇರುವ ಕಾರಣ ಹಾಗೂ ನಿತ್ಯದ ಆಹಾರದಲ್ಲಿ ಕ್ಯಾರೆಟ್ಟುಗಳನ್ನು ಅಳವಡಿಸಿಕೊಳ್ಳುವ ಮೂಲಕ ಲಭಿಸುವ ಕರಗುವ ನಾರು ಇಡಿಯ ದಿನ ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಹಾಗಾಗಿ, ಒಂದು ವೇಳೆ ನೀವು ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ ಕ್ಯಾರೆಟ್ ನಿಮ್ಮ ನಿತ್ಯದ ಆಹಾರದ ಒಂದು ಭಾಗವಾಗಿರುವುದು ಉತ್ತಮ.

ಹೃದಯದ ಆರೋಗ್ಯ ಉತ್ತಮಗೊಳಿಸುತ್ತದೆ

ಕ್ಯಾರೆಟ್ ಸೇವನೆಯಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗುತ್ತದೆ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ. ತನ್ಮೂಲಕ ಹೃದಯದ ಮೇಲೆ ಬೀಳುವ ಹೊರೆ ಕಡಿಮೆಯಾಗಿ ಆಘಾತದ ಸಾಧ್ಯತೆಯೂ ಕಡಿಮೆಯಾಗುತ್ತದೆ. ಈ ತರಕಾರಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಹಾಗೂ ಆಂಟಿ ಆಕ್ಸಿಡೆಂಟುಗಳಾದ ಕ್ಯಾರೋಟಿನಾಯ್ಡ್, ವಿಟಮಿನ್ ಸಿ, ಮತ್ತು ಪಾಲಿಫೆನಾಲ್ ಮೊದಲಾದವುಗಳು ಲಭ್ಯವಿದ್ದು ಇವೆಲ್ಲವೂ ಹೃದಯಕ್ಕೆ ಉತ್ತಮವಾಗಿವೆ.

Most Read: ಕ್ಯಾರೆಟ್‍ನ ಮಹತ್ವ ಮತ್ತು ಆರೋಗ್ಯದ ಮಹಾತ್ಮೆ

ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ

ಕ್ಯಾರೆಟ್ ಸೇವನೆಯಿಂದ ಹಲವಾರು ಬಗೆಯ ಕ್ಯಾನ್ಸರ್ ಗಳು ಆವರಿಸುವ ಸಾಧ್ಯತೆ ತಗ್ಗುತ್ತದೆ. ವಿಶೇಷವಾಗಿ ಶ್ವಾಸಕೋಶ, ಪ್ರಾಸ್ಟೇಟ್, ಕರುಳು ಮತ್ತು ಜಠರದ ಕ್ಯಾನ್ಸರ್ ವಿರುದ್ದ ರಕ್ಷಣೆ ದೊರಕುತ್ತದೆ. ಒಂದು ಅಧ್ಯಯನದ ಪ್ರಕಾರ ಕ್ಯಾರೆಟ್ಟಿನಲ್ಲಿರುವ ಕ್ಯಾರೋಟಿನಾಯ್ಡುಗಳು ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್ ವಿರುದ್ದ ಹೋರಾಡುತ್ತವೆ. ಇನ್ನೊಂದು ಅಧ್ಯಯನದ ಪ್ರಕಾರ ಕ್ಯಾರೆಟ್ ಸೇವನೆ ಹೆಚ್ಚಿದ್ದಷ್ಟೂ ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕಡಿಮೆ ಇರುತ್ತದೆ.

ಅಧಿಕ ರಕ್ತದೊತ್ತಡವನ್ನು ತಗ್ಗಿಸುತ್ತದೆ

ಕ್ಯಾರೆಟ್ಟುಗಳಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇದೆ. ಇದು ರಕ್ತನಾಳಗಳನ್ನು ಸಡಿಲಿಸಿ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ ಹಾಗೂ ತನ್ಮೂಲಕ ಹೃದಯದ ಮೇಲೆ ಎರಗಿದ್ದ ಒತ್ತಡವನ್ನು ತಗ್ಗಿಸುತ್ತದೆ. ಈಮೂಲಕ ಅಧಿಕ ರಕ್ತದೊತ್ತಡದಿಂದ ಎದುರಾಗಬಹುದಾಗಿದ್ದ ಹಲವಾರು ತೊಂದರೆಗಳು ಮತ್ತು ಹೃದಯಾಘಾತದ ಸಾಧ್ಯತೆಯನ್ನು ತಗ್ಗಿಸುತ್ತದೆ.

ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಶಕ್ಯವಿದೆ

ಕ್ಯಾರೆಟ್ಟುಗಳಲ್ಲಿರುವ ಉತ್ತಮ ಪ್ರಮಾಣದ ಫೈಟೋಕೆಮಿಕಲ್ಸ್ ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತವೆ. ಹಾರ್ವರ್ಡ್ ಹೆಲ್ತ್ ಸಂಸ್ಥೆಯ ಪ್ರಕಾರ ಕ್ಯಾರೆಟ್ 39 ಗ್ಲೈಸೆಮಿಕ್ ಕ್ರಮಾಂಕವನ್ನು ಪಡೆದಿದೆ. ಅಂದರೆ ಇದು ತೀರಾ ಕಡಿಮೆ ಕ್ರಮಾಂಕವಾಗಿದ್ದು ಇದರ ಸೇವನೆಯಿಂದ ರಕ್ತದಲ್ಲಿ ತೀರಾ ನಿಧಾನವಾಗಿ ಸಕ್ಕರೆ ಸೇರ್ಪಡೆಯಾಗುತ್ತದೆ ಹಾಗೂ ರಕ್ತದಲ್ಲಿ ಗ್ಲೂಕೋಸ್ ಮಟ್ಟ ಕಡಿಮೆ ಇರಲು ನೆರವಾಗುತ್ತದೆ. ಈ ಗುಣ ಮಧುಮೇಹವನ್ನು ನಿಯಂತ್ರಣದಲ್ಲಿರಿಸಲು ಅತಿ ಅವಶ್ಯವಾಗಿ ಬೇಕಾಗಿರುತ್ತದೆ.

ಕಣ್ಣುಗಳ ದೃಷ್ಟಿಮಾಪಕ ಕಡಿಮೆ ಇರಲು ನೆರವಾಗುತ್ತದೆ

ದೇಹದಲ್ಲಿ ವಿಟಮಿನ್ ಎ ಕೊರತೆಯಾದಷ್ಟೂ ಕಣ್ಣುಗಳ ದೃಷ್ಟಿ ಕುಂಠಿತವಾಗುವ ಹಾಗೂ ರಾತ್ರಿಗುರುಡುತನ ಎದುರಾಗುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ನಿಯಮಿತವಾಗಿ ಕ್ಯಾರೆಟ್ಟುಗಳನ್ನು ಸೇವಿಸುತ್ತಾ ಬಂದರೆ ಈ ತೊಂದರೆ ಹಾಗೂ ವಯಸ್ಸಿಗನುಗುಣವಾಗಿ ಆವರಿಸುವ ದೃಷ್ಟಿಯ ಕ್ಷೀಣಿಸುವಿಕೆ ನಿಧಾನವಾಗುತ್ತದೆ ಹಾಗೂ ಕಡಿಮೆ ದೃಷ್ಟಿಮಾಪಕದ ಕನ್ನಡಕಗಳನ್ನು ಧರಿಸಲು ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ

ಕ್ಯಾರೆಟ್ಟುಗಳು ವಿಟಮಿನ್ ಸಿ ಪೋಷಕಾಂಶದ ಉತ್ತಮ ಆಗರಗಳಾಗಿವೆ. ಇದೊಂದು ನೀರಿನಲ್ಲಿ ಕರಗುವ ಪ್ರಬಲ ಆಂಟಿ ಆಕ್ಸಿಏಂಟ್ ಆಗಿದ್ದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ರೋಗ ನಿರೋಧಕ ಶಕ್ತಿ ಪ್ರಬಲವಾಗಿದ್ದಷ್ಟೂ ಹಲವಾರು ರೋಗ ಮತ್ತು ಸೋಂಕುಗಳನ್ನು ಎದುರಿಸಲು ಸಾಧ್ಯವಾಗುತ್ತದೆ ತನ್ಮೂಲಕ ಶೀತ ಮತ್ತು ಫ್ಲೂ ಮೊದಲಾದ ಸಾಮಾನ್ಯ ರೋಗಗಳಿಂದ ಹೆಚ್ಚಿನ ರಕ್ಷಣೆ ದೊರಕುತ್ತದೆ.

Most Read: ಆರೋಗ್ಯಕರವಾದ ತ್ವಚೆಗಾಗಿ ಕ್ಯಾರೆಟ್ ಜ್ಯೂಸ್ ಕುಡಿಯಿರಿ!

ತ್ವಚೆ ಮತ್ತು ಕೂದಲ ಆರೋಗ್ಯ ಉತ್ತಮಗೊಳಿಸುತ್ತದೆ

ಕ್ಯಾರೆಟ್ ಸೇವನೆಯ ಮೂಲಕ ಲಭಿಸುವ ಅಧಿಕ ಪ್ರಮಾಣದ ವಿಟಮಿನ್ ಎ ಕೇವಲ ಕಣ್ಣಿಗೆ ಮಾತ್ರವಲ್ಲ, ತ್ವಚೆಯ ಆರೊಗ್ಯವನ್ನೂ ವೃದ್ದಿಸುತ್ತದೆ. ಚರ್ಮದ ಅಂಗಾಂಶದ ಪ್ರಮುಖ ಜೀವಕೋಶಗಳ ಬೆಳವಣಿಗೆಗೆ ಈ ಪೋಷಕಾಂಶ ನೆರವಾಗುವ ಮೂಲಕ ತ್ವಚೆಯ ಸೆಳೆತ ಹೆಚ್ಚುತ್ತದೆ ಮತ್ತು ಉತ್ತಮ ಆರೋಗ್ಯ ಪಡೆಯುತ್ತದೆ. ಅಲ್ಲದೇ ಕೂದಲ ಬೆಳವಣಿಗೆಗೆ ಹಾಗೂ ತುಂಡಾಗುವುದರಿಂದ ತಪ್ಪಿಸಲೂ ವಿಟಮಿನ್ ಎ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶವಾಗಿದೆ.

ಕ್ಯಾರೆಟ್ ಸೇವನೆಯಿಂದ ಎದುರಾಗಬಹುದಾದ ಅಪಾಯಗಳ ಸಾಧ್ಯತೆಗಳು

ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರೂ ಕ್ಯಾರೆಟ್ ಅನ್ನು ಯಾವುದೇ ಅಳುಕಿಲ್ಲದೇ ಸೇವಿಸಬಹುದು. ಆದರೆ ಒಂದು ಆಧ್ಯಯನದಲ್ಲಿ ಕಂಡುಕೊಂಡಿರುವ ಪ್ರಕಾರ ಕೆಲವು ವ್ಯಕ್ತಿಗಳಲ್ಲಿ ಹೂವಿನ ಪರಾಗದಿಂದ ಎದುರಾಗುವ ಅಲರ್ಜಿ ಕ್ಯಾರೆಟ್ ಸೇವನೆಯಿಂದ ಹೆಚ್ಚುತ್ತದೆ. ಅಂದರೆ ಈ ಅಲರ್ಜಿ ಇರುವ ವ್ಯಕ್ತಿಗಳು ಕ್ಯಾರೆಟ್ ಸೇವಿಸಿದರೆ ತಕ್ಷಣವೇ ಮುಖದಲ್ಲಿ ತುರಿಕೆಯುಂಟಾಗಿ ಉರಿಯೂತ ಕಾಣಿಸಿಕೊಳ್ಳುತ್ತದೆ. ಇದರ ಹೊರತಾಗಿ ಬೇರಾವುದೇ ತೊಂದರೆ ಇಲ್ಲ.

ಕ್ಯಾರೆಟ್ ರೆಸಿಪಿಗಳು

ಕ್ಯಾರೆಟ್ ಅನ್ನು ಹಸಿಯಾಗಿಯೂ ಬೇಯಿಸಿಯೂ ಸೇವಿಸಬಹುದಾಗಿದ್ದು ಸರಳ ಸಾಂಬಾರ್ ನಿಂದ ಹಲ್ವಾದವರೆಗೆ ಹಲವು ವ್ಯಂಜನಗಳನ್ನು ಸಿದ್ಧಪಡಿಸಬಹುದು. ಇವುಗಳಲ್ಲಿ ಪ್ರಮುಖವಾದವು ಎಂದರೆ:

*ಗಾಜರ್ ಕಾ ಹಲ್ವಾ
*ಕ್ಯಾರೆಟ್ ಪೊರಿಯಾಲ್
*ಕ್ಯಾರೆಟ್ ಸೂಪ್
*ಕ್ಯಾರೆಟ್ ಖೀರ್
*ಕ್ಯಾರೆಟ್ ಮಂಚೂರಿಯನ್
*ಕ್ಯಾರೆಟ್ ಉಪ್ಪಿನಕಾಯಿ

English summary

Carrots: Nutritional Health Benefits and side effects

Carrots are of different colours like red, yellow, purple, orange, and white. The orange-coloured carrots are sweet, crunchy and aromatic. The health benefits of carrots include strengthening immunity, boosting heart health, reducing cancer risk, controlling diabetes, promoting eye health, helping in losing weight, etc.
X
Desktop Bottom Promotion