For Quick Alerts
ALLOW NOTIFICATIONS  
For Daily Alerts

ಮೆದುಳು ಸ್ನೇಹಿ ಆಹಾರಗಳು- ದಿನನಿತ್ಯ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ

|

ಮನುಷ್ಯನ ದೇಹದಲ್ಲಿ ಪ್ರಮುಖ ಅಂಗವಾಗಿರುವಂತಹ ಮೆದುಳಿನಿಂದಾಗಿಯೇ ಎಲ್ಲಾ ಕಾರ್ಯಗಳು ನಡೆಯುವುದು. ಮೆದುಳು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದರೆ ಆಗ ದೇಹದ ಬೇರೆ ಯಾವ ಭಾಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಹೀಗಾಗಿ ಮೆದುಳು ಎನ್ನುವುದು ಅತೀ ಪ್ರಮುಖ ಅಂಗವಾಗಿದೆ. ಮೆದುಳನ್ನು ಚುರುಕು ಮಾಡಲು ಹಲವಾರು ರೀತಿಯ ಚಟುವಟಿಕೆಗಳ ಮೂಲಕ ಸಾಧ್ಯವಿದೆ. ಮೆದುಳು ಎನ್ನುವುದು ದಿನದ 24 ಗಂಟೆಯು ಕೆಲಸ ಮಾಡುತ್ತದೆ. ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಅದಕ್ಕೆ ಸರಿಯಾದ ಇಂಧನ ಒದಗಿಸಬೇಕು. ಹೀಗಾದರೆ ಮಾತ್ರ ಅದು ಮತ್ತಷ್ಟು ಚುರುಕಾಗುವುದು. ಮೆದುಳಿಗೆ ಸ್ನೇಹಿಯಾಗಿರುವ ಕೆಲವೊಂದು ಆಹಾರಗಳು ಇವೆ. ಇದನ್ನು ನೀವು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಆಗ ಮೆದುಳಿನ ಆರೋಗ್ಯ ಕಾಪಾಡುವ ಜತೆಗೆ ಅದರ ಕಾರ್ಯಕ್ಷಮತೆ ಹೆಚ್ಚಿಸಬಹುದು.

ಮೊಟ್ಟೆ

ಮೊಟ್ಟೆ

ಮೊಟ್ಟೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದೆ ಮತ್ತು ಇದು ನಮ್ಮ ದೇಹಕ್ಕೆ ತುಂಬಾ ಲಾಭಕಾರಿ ಎನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಮೊಟ್ಟೆಯಲ್ಲಿ ಉನ್ನತ ಮಟ್ಟದ ಪ್ರೋಟೀನ್ ಇದೆ ಮತ್ತು ಇದನ್ನು ನಾವು ಉಪಾಹಾರದಲ್ಲಿ ಸುಲಭವಾಗಿ ಸೇವಿಸಬಹುದು. ಮೊಟ್ಟೆಯನ್ನು ವಿವಿಧ ರೀತಿಯಿಂದ ತಯಾರಿಸಿಕೊಂಡು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಇದು ಮೆದುಳಿನ ಶಕ್ತಿಯನ್ನು ಹೆಚ್ಚಿಸುವುದು. ಮೊಟ್ಟೆ ಸೇವನೆಯಿಂದ ಆರೋಗ್ಯಕಾರಿ ಮೆದುಳು ಪಡೆಯಬಹುದು.

ಬೀಜಗಳು

ಬೀಜಗಳು

ಮೆದುಳಿಗೆ ಶಕ್ತಿ ನೀಡಲು ಬಾದಾಮಿ ಸೇವಿಸಿ ಎಂದು ನಿಮ್ಮ ಅಜ್ಜಿ ಸಲಹೆ ನೀಡಿರಬಹುದು. ಮೆದುಳಿನ ಕಾರ್ಯಕ್ಷಮತೆ ಹೆಚ್ಚು ಮಾಡಲು ಬೇರೆ ಬೀಜಗಳನ್ನು ಕೂಡ ಸೇವನೆ ಮಾಡಬೇಕು. ಬೀಜಗಳು ತುಂಬಾ ಆರೋಗ್ಯಕಾರಿ ಮತ್ತು ದೀರ್ಘಕಾಲದ ತನಕ ಹೊಟ್ಟೆ ತುಂಬಿದಂತೆ ಇಡುವುದು. ಒಂದು ಹಿಡಿ ಬೀಜಗಳನ್ನು ತೆಗೆದುಕೊಂಡು ಪ್ರತಿನಿತ್ಯ ತಿನ್ನಿ ಮತ್ತು ಮೆದುಳಿನ ಆರೋಗ್ಯ ಕಾಪಾಡಿ.

Most Read: ಒಣ ಬೀಜಗಳ ಈ ಸಮಯದಲ್ಲಿ ಸೇವನೆ ಮಾಡಿದರೆ ಲಾಭ ಖಚಿತ

ಕೊಬ್ಬಿನಾಮ್ಲವಿರುವ ಮೀನುಗಳು

ಕೊಬ್ಬಿನಾಮ್ಲವಿರುವ ಮೀನುಗಳು

ಮೆದುಳಿನ ಆಹಾರದಲ್ಲಿ ಕೊಬ್ಬಿನಾಮ್ಲವಿರುವ ಮೀನುಗಳು ಮೊದಲ ಸ್ಥಾನದಲ್ಲಿವೆ. ಕೊಬ್ಬಿನಾಮ್ಲವಿರುವ ಆಹಾರ ಸೇವನೆ ಮಾಡುವ ಕಾರಣದಿಂಧಾಗಿ ಕಲಿಯಲು ಮತ್ತು ಜ್ಞಾಪಕಶಕ್ತಿ ಚುರುಕುಗೊಳಿಸಲು ನೆರವಾಗುವುದು. ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಕೊಬ್ಬಿನಾಮ್ಲವಿರುವ ಮೀನಿನ ರುಚಿಯನ್ನು ಸವಿಯಬಹುದು. ಇದು ಮೆದುಳಿಗೆ ಅದ್ಭುತವಾದ ಆಹಾರ. ಇದು ನಿಮಗೆ ಇತರ ಕೆಲವು ಆಹಾರ ಲಾಭಗಳನ್ನು ಕೂಡ ನೀಡುವುದು.

ಹಸಿರು ತರಕಾರಿಗಳು

ಹಸಿರು ತರಕಾರಿಗಳು

ಕೆಲವು ಜನರಿಗೆ ಹಸಿರು ತರಕಾರಿಗಳ ರುಚಿ ಇಷ್ಟವಾಗಲ್ಲ. ಆದರೆ ಹಸಿರು ತರಕಾರಿಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಸಿರು ತರಕಾರಿಗಳನ್ನು ವಿವಿಧ ರೀತಿಯಿಂದ ಸೇವಿಸಬಹುದು. ದಿನನಿತ್ಯವು ನೀವು ಹಸಿರು ತರಕಾರಿಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಇದು ನಿಮ್ಮ ಸಂಪೂರ್ಣ ಆರೋಗ್ಯ ಮತ್ತು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಗ್ರೀನ್ ಟೀ

ಗ್ರೀನ್ ಟೀ

ತೂಕ ಕಳೆದುಕೊಳ್ಳಲು ಗ್ರೀನ್ ಟೀ ತುಂಬಾ ಪರಿಣಾಮಕಾರಿ ಎಂದು ನಮಗೆ ತಿಳಿದಿದೆ. ಆದರೆ ಇದು ಮೆದುಳಿನ ಶಕ್ತಿ ಹೆಚ್ಚಿಸುವ ಕಾರ್ಯ ಮಾಡುವುದು ಎಂದು ನಿಮಗೆ ತಿಳಿದಿದೆಯಾ? ದಿನಕ್ಕೆ ಎರಡು ಕಪ್ ಗ್ರೀನ್ ಟೀ ಕುಡಿದರೆ ಅದು ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಮೆದುಳು ಸ್ನೇಹಿ ಪಾನೀಯವಾಗಿದೆ. ಇದನ್ನು ನೀವು ದಿನದ ಯಾವುದೇ ಸಮಯದಲ್ಲಿ ಕುಡಿಯಬಹುದು.

English summary

Brain Foods You Must Include in Your Diet

The human brain is undoubtedly one of the most important parts of the body. It is responsible for every body function in some or the other way. The human brain works for 24 hours. You might be indulging yourself in different activities to boost your brain power. For better functioning of the human brain you need to fuel it. For a healthy brain a brain friendly diet is the best fuel
Story first published: Friday, May 17, 2019, 16:21 [IST]
X
Desktop Bottom Promotion