For Quick Alerts
ALLOW NOTIFICATIONS  
For Daily Alerts

ಶ್ಲೇಷ್ಮ ಕೆಮ್ಮು ನಿವಾರಣೆಗೆ ಪರಿಣಾಮಕಾರಿ ಮನೆಮದ್ದುಗಳು

|

ನಮ್ಮ ದೇಹವು ಕೆಲವೊಂದು ಸ್ವಚಿಕಿತ್ಸೆಯನ್ನು ಮಾಡಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಯಾಕೆಂದರೆ ಸಣ್ಣ ನೋವು ಅಥವಾ ಗಾಯವಾದರೆ ನಾವು ಏನೇ ಮಾಡದೆ ಇದ್ದರೂ ಅದು ತನ್ನಿಂದ ತಾನೇ ನಿವಾರಣೆಯಾಗುವುದು. ಇಂತಹ ಹಲವಾರು ಉದಾಹರಣೆಗಳು ಇದೆ. ಅದೇ ರೀತಿಯಾಗಿ ಉತ್ಪಾದಕ ಕೆಮ್ಮು ಅಥವಾ ಶ್ಲೇಷ್ಮ ಕೆಮ್ಮು ನೈಸರ್ಗಿಕವಾಗಿ ದೇಹವು ಶ್ವಾಸಕೋಶ ಮತ್ತು ಶ್ವಾಸನಾಳವನ್ನು ಕಫದಿಂದ ಮುಕ್ತವಾಗಿಡಲು ಮಾಡುವಂತಹ ಕ್ರಿಯೆಯಾಗಿದೆ.

ಅದಾಗ್ಯೂ, ಆದರೆ ಈ ಕೆಮ್ಮಿನ ಬಗ್ಗೆ ನಾವು ಕೆಲವೊಂದು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಯಾಕೆಂದರೆ ಈ ಶ್ಲೇಷ್ಮ ಕೆಮ್ಮು ದೀರ್ಘಕಾಲದ ತನಕ ಇದ್ದರೆ ಅಥವಾ ಕೆಮ್ಮಿನೊಂದಿಗೆ ಜ್ವರ, ತೂಕ ಇಳಿಕೆ ಅಥವಾ ಕೆಮ್ಮಿನೊಂದಿಗೆ ರಕ್ತಸ್ರಾವವು ಆಗುತ್ತಲಿದ್ದರೆ ಆಗ ಎಚ್ಚರಿಕೆ ವಹಿಸಬೇಕು.ಇಂತಹ ಯಾವುದೇ ಲಕ್ಷಣಗಳು ಇದ್ದರೂ ನೀವು ವೈದ್ಯರನ್ನು ಭೇಟಿಯಾಗಲೇಬೇಕು. ಆದರೆ ಶ್ಲೇಷ್ಮ ಕೆಮ್ಮಿಗೆ ಮನೆಯಲ್ಲೇ ಕೆಲವೊಂದು ನೈಸರ್ಗಿಕ ಪರಿಹಾರ ಕಂಡು ಕೊಳ್ಳಬಹುದು. ಇದಕ್ಕಾಗಿ ಕೆಲವು ಮನೆಮದ್ದುಗಳು ತುಂಬಾ ಪರಿಣಾಮಕಾರಿಯಾಗಿರುವುದು.

ಕೆಮ್ಮಿಗೆ ಜೇನುತುಪ್ಪದ ಮನೆಮದ್ದು

ಕೆಮ್ಮಿಗೆ ಜೇನುತುಪ್ಪದ ಮನೆಮದ್ದು

ಕೆಮ್ಮಿಗೆ ಜೇನುತುಪ್ಪವು ತುಂಬಾ ಪರಿಣಾಮಕಾರಿ ಮನೆಮದ್ದು ಆಗಿದೆ. ಎರಡು ಚಮಚ ಜೇನುತುಪ್ಪವನ್ನು ನೇರವಾಗಿ ಅಥವಾ ಬಿಸಿ ನೀರಿನೊಂದಿಗೆ ಬೆರೆಸಿಕೊಂಡು ಸೇವನೆ ಮಾಡಿದರೆ ಇದು ಉತ್ಪಾದಕ ಕೆಮ್ಮು ನಿವಾರಣೆ ಮಾಡುವುದು. ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಜೇನುತುಪ್ಪ ನೀಡಬೇಡಿ.

ಶ್ಲೇಷ್ಮ ಕೆಮ್ಮನ್ನು ನಿವಾರಣೆ ಮಾಡಲು ನೀಲಗಿರಿ ಎಣ್ಣೆ

ಶ್ಲೇಷ್ಮ ಕೆಮ್ಮನ್ನು ನಿವಾರಣೆ ಮಾಡಲು ನೀಲಗಿರಿ ಎಣ್ಣೆ

ಶ್ಲೇಷ್ಮ ಕೆಮ್ಮನ್ನು ನಿವಾರಣೆ ಮಾಡಲು ನೀಲಗಿರಿ ಎಣ್ಣೆಯನ್ನು ಮೂಗಿನ ಮೂಲಕ ಎಳೆದುಕೊಂಡರೆ ಒಳ್ಳೆಯದು. ಹಬೆಯಾಡುವಂತಹ ಬಿಸಿ ನೀರಿಗೆ 2-3 ಹನಿ ನೀಲಗಿರಿ ಎಣ್ಣೆಯನ್ನು ಹಾಕಿಕೊಳ್ಳಿ ಮತ್ತು ಅದನ್ನು ಸುಮಾರು 15 ನಿಮಿಷ ಕಾಲ ಎಳೆದುಕೊಂಡೆ ಆಗ ಕೆಮ್ಮು ನಿವಾರಣೆ ಆಗುವುದು ಮತ್ತು ಒಳ್ಳೆಯ ನಿದ್ರೆ ಕೂಡ ಬರುವುದು. ಕೆಲವೊಂದು ಜನರಿಗೆ ನೀಲಗಿರಿ ಎಣ್ಣೆಯಿಂದ ಅಲರ್ಜಿ ಉಂಟಾಗಬಹುದು. ಇದರ ಬಗ್ಗೆ ಎಚ್ಚರಿಕೆ ವಹಿಸಿಕೊಳ್ಳಬೇಕು.

Most Read:ಸಣ್ಣ ವಯಸ್ಸಿನ ಮಕ್ಕಳಲ್ಲಿ ಕಾಣಿಸುವ ಬಿಳಿ ಕೂದಲಿನ ಸಮಸ್ಯೆಗೆ ಕಾರಣಗಳು ಹಾಗೂ ಮನೆಮದ್ದುಗಳು

ಈರುಳ್ಳಿ ಮತ್ತು ಸಕ್ಕರೆ ಸಿರಪ್ ನ ಮನೆಮದ್ದಿನಿಂದ ಕೆಮ್ಮು ನಿವಾರಣೆ

ಈರುಳ್ಳಿ ಮತ್ತು ಸಕ್ಕರೆ ಸಿರಪ್ ನ ಮನೆಮದ್ದಿನಿಂದ ಕೆಮ್ಮು ನಿವಾರಣೆ

ಈರುಳ್ಳಿ ಮತ್ತು ಸಕ್ಕರೆ ಸಿರಪ್ ಕೆಮ್ಮು ನಿವಾರಣೆ ಮಾಡಲು ತುಂಬಾ ಪರಿಣಾಕಾರಿಯಾಗಿರುವ ಮನೆಮದ್ದು ಆಗಿದೆ. ಒಂದು ಈರುಳ್ಳಿಯನ್ನು ತುಂಡರಿಸಿಕೊಂಡು ಅದನ್ನು ಪಿಂಗಾಣಿಗೆ ಹಾಕಿಕೊಳ್ಳೀ. ಇದರ ಬಳಿಕ ಅರ್ಧ ಕಪ್ ಸಕ್ಕರೆ ಹಾಕಿಕೊಂಡು ಅದಕ್ಕೆ ಮುಚ್ಚಳ ಹಾಕಿಬಿಡಿ. ರಾತ್ರಿಯಿಡಿ ಇದು ಹಾಗೆ ಇರಲಿ ಅಥವಾ ಕೆಲವು ಗಂಟೆಗಳ ಕಾಲ ಹಾಗೆ ಬಿಡಿ. ಈರುಳ್ಳಿಯು ಸಕ್ಕರೆಯನ್ನು ಹೀರಿಕೊಳ್ಳುವ ಕಾರಣದಿಂದಾಗಿ ನಿಮಗೆ ಈರುಳ್ಳಿ ಸಿರಪ್ ಸಿಗುವುದು. ನೈಸರ್ಗಿಕವಾಗಿ ಶ್ಲೇಷ್ಮ ಕೆಮ್ಮು ನಿವಾರಣೆ ಮಾಡಲು ನೀವು ಎರಡು ಗಂಟೆಗೊಮ್ಮೆ ಒಂದು ಚಮಚ ಈರುಳ್ಳಿ ಸಿರಪ್ ನ್ನು ಸೇವಿಸಿ. ಇದು ತುಂಬಾ ಸರಳವಾಗಿರುವಂತಹ ಮನೆಮದ್ದು ಆಗಿದೆ.

ಚಿಕನ್ ಸೂಪ್ ನಿಂದ ಉತ್ಪಾದಕ ಕೆಮ್ಮಿಗೆ ಪರಿಹಾರ

ಚಿಕನ್ ಸೂಪ್ ನಿಂದ ಉತ್ಪಾದಕ ಕೆಮ್ಮಿಗೆ ಪರಿಹಾರ

ಸಾಮಾನ್ಯ ಶೀತದಿಂದ ಕಾಣಿಸಿಕೊಂಡಿರುವಂತಹ ಉತ್ಪಾದಕ ಕೆಮ್ಮನ್ನು ನಿವಾರಣೆ ಮಾಡಲು ಬಿಸಿಯಾಗಿರುವಂತಹ ಚಿಕನ್ ಸೂಪ್ ತುಂಬಾ ಪರಿಣಾಮಕಾರಿ ಆಗಿರುವುದು. ಕಫದ ಸ್ರವಿಸುವಿಕೆಯನ್ನು ತೆಳು ಮಾಡುವಂತಹ ಇದು ಕೆಮ್ಮಿನಿಂದ ಆರಾಮ ನೀಡುವುದು. ಇಷ್ಟು ಮಾತ್ರವಲ್ಲದೆ ಪ್ರತಿರೋಧಕ ವ್ಯವಸ್ಥೆಯಲ್ಲಿ ಇರುವಂತಹ ಉರಿಯೂತ ಹೆಚ್ಚಿಸುವ ಡಬ್ಲ್ಯೂಬಿಸಿಯನ್ನು ನಿಧಾನಗೊಳಿಸುವುದು.

Most Read:ದೇಹದ ಕಲ್ಮಶಗಳನ್ನು ಹೊರಹಾಕಲು ಮನೆಯಲ್ಲಿಯೇ ಮಾಡಿ- ನೈಸರ್ಗಿಕ ಜ್ಯೂಸ್

ಶುಂಠಿ ಮತ್ತು ಜೇನುತುಪ್ಪದ ಮಿಶ್ರಣ

ಶುಂಠಿ ಮತ್ತು ಜೇನುತುಪ್ಪದ ಮಿಶ್ರಣ

ಒಂದು ಹಸಿ ಶುಂಠಿಯನ್ನು ತುಂಡು ಮಾಡಿಕೊಂಡು ಅದನ್ನು ರುಬ್ಬಿಕೊಂಡು ಅದರ ರಸವನ್ನು ತೆಗೆಯಿರಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿಕೊಂಡು ಉಗುರು ಬೆಚ್ಚಗೆ ಮಾಡಿಕೊಂಡು ಸೇವನೆ ಮಾಡಿ. ಈ ಮಿಶ್ರಣವನ್ನು ನೀವು ದಿನದಲ್ಲಿ ಮೂರು ಸಲ ಸೇವನೆ ಮಾಡಿದರೆ ಆಗ ಕೆಮ್ಮು ಮಾಯವಾಗುವುದು. ಜೇನುತುಪ್ಪದೊಂದಿಗೆ ಶುಂಠಿ ಚಾ ಕುಡಿದರೆ ಅದರಿಂದ ಕೆಮ್ಮು ನಿವಾರಿಸಬಹುದು.

ಸಾಸಿವೆ

ಸಾಸಿವೆ

ಕೆಮ್ಮಿಗೆ ಸಾಸಿವೆಯು ತುಂಬಾ ಪರಿಣಾಮಕಾರಿಯಾದ ಮನೆಮದ್ದು. ಇದರಲ್ಲಿ ಇರುವಂತಹ ಸಲ್ಫರ್ ಅಂಶವು ಕಫದ ಹರಿವನ್ನು ಉತ್ತೇಜಿಸುವುದು. ಸಾಸಿವೆ ಕಾಳನ್ನು ಜಜ್ಜಿಕೊಳ್ಳಬೇಕು ಮತ್ತು ಅದನ್ನು 15 ನಿಮಿಷ ಕಾಲ ನೀರಿನಲ್ಲಿ ನೆನೆಸಿದ ಬಳಿಕ ಸೇವಿಸಬೇಕು.

Most Read:ದಿನಕ್ಕೆ ಎರಡು ಕಪ್ ಕಾಫಿ ಕುಡಿದರೆ ಸಾಕು-ಲೈಂಗಿಕ ಜೀವನವು ಸುಖಕರವಾಗಿರುವುದು!

ಹೆಚ್ಚು ದ್ರವಾಹಾರ ಸೇವನೆ ಮಾಡಿ

ಹೆಚ್ಚು ದ್ರವಾಹಾರ ಸೇವನೆ ಮಾಡಿ

ನೀರಿನೊಂದಿಗೆ ಹೆಚ್ಚಿನ ದ್ರವಾಹಾರ ಸೇವನೆ ಮಾಡುವುದರಿಂದ ಕೆಮ್ಮನ್ನು ಉಂಟು ಮಾಡುವಂತಹ ಸೋಂಕನ್ನು ನಿವಾರಣೆ ಮಾಡಲು ನೆರವಾಗುವುದು. ಇದಕ್ಕೆ ಹೊರತಾಗಿ ದೀರ್ಘಕಾಲದ ತನಕ ದೇಹವನ್ನು ತೇವಾಂಶದಿಂದ ಇಡುವ ಮೂಲಕವಾಗಿ ಕಫವನ್ನು ಸಡಿಲಗೊಳಿಸಲು ನೆರವಾಗುವುದು ಮತ್ತು ಇದರಿಂದ ದೇಹದಿಂದ ಸುಲಭವಾಗಿ ಅದು ಹೊರಗೆ ಹೋಗುವುದು. ಹಣ್ಣು ಮತ್ತು ತರಕಾರಿ ಜ್ಯೂಸ್ ನ ಜತೆಗೆ ನೀವು ಪ್ರತಿನಿತ್ಯ ಹತ್ತು ಲೋಟ ನೀರಿನ ಸೇವನೆ ಮಾಡಿದರೆ ಅದರಿಂದ ತುಂಬಾ ನೆರವಾಗುವುದು.

ಹಸಿಶುಂಠಿ

ಹಸಿಶುಂಠಿ

ಈ ವಿಧಾನವನ್ನು ಸಾಮಾನ್ಯವಾಗಿ ವಿಶ್ವದೆಲ್ಲೆಡೆ ಕೆಮ್ಮಿನ ನಿವಾರಣೆಗಾಗಿ ಬಳಸಲಾಗುತ್ತದೆ. ಅರ್ಧ ದೊಡ್ಡಚಮಚ ಹಸಿಶುಂಠಿಯನ್ನು ಜಜ್ಜಿ ಕೊಂಚ ಕಾಳುಮೆಣಸಿನ ಪುಡಿ ಹಾಗೂ ಒಂದು ದೊಡ್ಡ ಚಮಚ ಜೇನು ಮತ್ತು ಕೊಂಚ ಶಿರ್ಕಾ ಸೇರಿಸಿ. ಇವೆಲ್ಲವನ್ನೂ ಸುಮಾರು ಎರಡರಿಂದ ಮೂರು ದೊಡ್ಡಚಮಚ ನೀರು ಬೆರೆಸಿ ಈ ಪ್ರಮಾಣವನ್ನು ದಿನದಲ್ಲಿ ಮೂರು ಹೊತ್ತು ಸೇವಿಸಿ ಖಾಲಿ ಮಾಡಬೇಕು. ಇದರ ಬ್ಯಾಕ್ಟೀರಿಯಾ ನಿರೋಧಕ ಗುಣ ಹಲವು ರೀತಿಯ ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆ. ಕೆಮ್ಮಿನ ಒಂದು ಅಡ್ಡಪರಿಣಾಮವಾಗಿರುವ ಸೋಂಕನ್ನು ಹಸಿಶುಂಠಿ ನಿವಾರಿಸುವ ಕಾರಣ ಕೆಮ್ಮಿಗೆ ಇದು ಅತ್ಯುತ್ತಮ ಪರಿಹಾರವಾಗಿದೆ.

ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ

ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ

ಜೇನುತುಪ್ಪ, ಈರುಳ್ಳಿ ರಸ, ಹಾಗೂ ಬೆಳ್ಳುಳ್ಳಿ ಬಟ್ಟಲೊ೦ದರಲ್ಲಿ ಸ್ವಲ್ಪ ಈರುಳ್ಳಿಯ ರಸವನ್ನು ತೆಗೆದುಕೊ೦ಡು ಬಿಸಿಮಾಡಿರಿ. ಉರಿಯನ್ನು ನ೦ದಿಸಿದ ಬಳಿಕ, ಬೆಳ್ಳುಳ್ಳಿಯ ಒ೦ದು ದಳವನ್ನು ಇದಕ್ಕೆ ಸೇರಿಸಿರಿ. ಈರುಳ್ಳಿಯ ರಸವು ಇನ್ನೂ ಬಿಸಿಯಾಗಿಯೇ ಇರುವ ವೇಳೆ, ಬೆಳ್ಳುಳ್ಳಿಯ ದಳವನ್ನು ಸ್ವಲ್ಪ ಹುರಿಯಿರಿ. ಈ ಮಿಶ್ರಣವನ್ನು ಒ೦ದು ಲೋಟದಷ್ಟು ಬಿಸಿನೀರಿಗೆ ಸೇರಿಸಿರಿ ಹಾಗೂ ಇದಕ್ಕೆ ಒ೦ದು ಚಮಚದಷ್ಟು ಜೇನುತುಪ್ಪವನ್ನು ಸೇರಿಸಿರಿ. ಈಗ ಈ ನೈಸರ್ಗಿಕವಾದ ಕೆಮ್ಮಿನ ಸಿರಪ್ ಅನ್ನು ಹನಿಹನಿಯಾಗಿ ಸೇವಿಸಿರಿ.

English summary

Best Home Remedies for Productive Cough

Productive cough, also known as the Phlegm cough is the body’s natural way to keep the lungs and the airways clear of mucus. However, it is essential to take care in case the productive cough lasts for long or in case it is accompanied by fever, loss of weight, or in case if the individual is coughing up blood. It is very much needed to visit a doctor in case of such serious symptoms accompanying productive cough.
Story first published: Wednesday, January 30, 2019, 17:34 [IST]
X
Desktop Bottom Promotion