For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಹಲ್ಲುಗಳ ಆರೈಕೆಗೆ ಬಳಸಿ 'ತೆಂಗಿನ ಎಣ್ಣೆ'!

|

ಹಲ್ಲುಗಳ ಸರಿಯಾದ ರೀತಿಯಲ್ಲಿ ಆರೈಕೆ ಮಾಡದೆ ಇದ್ದರೆ ಆಗ ದೇಹದ ಸಂಪೂರ್ಣ ಆರೈಕೆಯು ನಡೆಯುವುದಿಲ್ಲ. ಹೀಗಾಗಿ ದಂತದ ಆರೈಕೆಯು ಅತೀ ಮುಖ್ಯವಾಗಿ ಇರುವುದು. ದಂತಗಳನ್ನು ಶುಚಿಗೊಳಿಸಿ, ಬ್ಯಾಕ್ಟೀರಿಯಾ ಮುಕ್ತವಾಗಿ ಇರಿಸಿಕೊಳ್ಳುವುದು ಅತೀ ಅಗತ್ಯವಾಗಿರುತ್ತದೆ. ಇದರಿಂದ ಸೋಂಕು, ದಂತಕುಳಿ ಮತ್ತು ಒಸಡಿನ ಸಮಸ್ಯೆಯು ನಿವಾರಣೆ ಆಗುವುದು. ದಂತಗಳು ಆರೋಗ್ಯವಾಗಿ ಇಲ್ಲದೆ ಇದ್ದರೆ ಆಗ ಇತರ ಕೆಲವು ಆರೋಗ್ಯ ಸಮಸ್ಯೆಗಳಾಗಿರುವ ಹೃದಯದ ಕಾಯಿಲೆ, ಉಸಿರಾಟದ ಸಮಸ್ಯೆ ಇತ್ಯಾದಿಗಳು...

ಹಲ್ಲುಗಳಲ್ಲಿ ನಿಂತಿರುವಂತಹ ಪದರಗಳನ್ನು ತೆಗೆದುಹಾಕಲು ನಾವು ಹಲ್ಲಿನ ಪೇಸ್ಟ್ ನ್ನು ಮೊದಲಿಗೆ ಬಳಸಿಕೊಳ್ಳುತ್ತೇವೆ. ಇದು ಅತೀ ಅಗತ್ಯ ಮತ್ತು ಅನಿವಾರ್ಯ ಕೂಡ. ಈ ರೀತಿಯಾಗಿ ನಾವು ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳುತ್ತೇವೆ. ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಇನ್ನೂ ಹಲವಾರು ವಿಧಾನಗಳು ಇವೆ. ಇದರಿಂದ ಬಾಯಿಯ ಆರೋಗ್ಯವನ್ನು ಸುಧಾರಿಸಬಹುದು. ಇಲ್ಲಿ ಮುಖ್ಯವಾಗಿ ತೆಂಗಿನೆಣ್ಣೆ ಬಳಸಿಕೊಂಡು ಬಾಯಿಯ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.

Coconut Oil

ತೆಂಗಿನ ಕಾಯಿಯ ತಿರುಳಿನಿಂದ ತೆಂಗಿನ ಎಣ್ಣೆಯನ್ನು ತೆಗೆಯಲಾಗುತ್ತದೆ ಮತ್ತು ಇದರಲ್ಲಿ ಎಂಸಿಟಿ ಅಂಶವಿದೆ. ಇದನ್ನು ತುಂಬಾ ಭಿನ್ನವಾಗಿ ಚಯಾಪಚಯಾಗೊಳಿಸಲಾಗಿದೆ. ಇದರಿಂದಾಗಿ ತೆಂಗಿನ ಎಣ್ಣೆಯಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ತೆಂಗಿನ ಎಣ್ಣೆಯಲ್ಲಿ ಶೇ. 50ರಷ್ಟು ಲೌರಿಕ್ ಆಮ್ಲವಿದೆ, ಮಧ್ಯಮ ಪ್ರಮಾಣದ ಕೊಬ್ಬಿನಾಮ್ಲವಿದ್ದು, ಇದನ್ನು ವಿಘಟಿಸಿ ಮೊನೊಲೌರಿನ್ ಎನ್ನುವ ಅಂಶವನ್ನಾಗಿ ಪರಿವರ್ತಿಸಲಾಗಿದೆ. ಇದರಿಂದ ದೇಹವನ್ನು ಹಾನಿಕಾರಕ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ವೈರಸ್ ನಿಂದ ಕಾಪಾಡಬಹುದಾಗಿದೆ. ಹಲ್ಲುಗಳಿಗೆ ತೆಂಗಿನ ಎಣ್ಣೆಯನ್ನು ಬಳಸುವ ಕೆಲವೊಂದು ಲಾಭಗಳು

1.ತೆಂಗಿನ ಎಣ್ಣೆಯನ್ನು ಹಲ್ಲಿನ ಪದರಗಳನ್ನು ತೆಗೆಯಲು ಬಳಸುವುದರಿಂದ ಹಲ್ಲಿನ ಕೆಲವೊಂದು ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಪದರವು ನಿರ್ಮಾಣವಾಗುವುದು ಹಲ್ಲಿನ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ಇದರಿಂದ ತೆಂಗಿನ ಎಣ್ಣೆ ಬಳಸಿಕೊಂಡು ಪದರವನ್ನು ತೆಗೆದು ಒಸಡಿನ ಸಮಸ್ಯೆ ನಿವಾರಣೆ ಮಾಡಬಹುದು.

2.ಹಾನಿಕಾರಕ ಬ್ಯಾಕ್ಟೀರಿಯಾ ನಿವಾರಿಸುವುದು

ತೆಂಗಿನ ಎಣ್ಣೆಯನ್ನು ಬಳಸಿಕೊಂಡು ಬಾಯಿಯಲ್ಲಿ ಇರುವಂತಹ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲುವುದು. ಎಣ್ಣೆಯಲ್ಲಿ ಇರುವಂತಹ ಲೌರಿಕ್ ಆಮ್ಲವು ಉಸಿರಿನ ದುರ್ವಾಸನೆ, ದಂತಕುಳಿ ಮತ್ತು ಒಸಡಿನ ಸಮಸ್ಯೆ ಉಂಟು ಮಾಡುವಂತಹ ಬ್ಯಾಕ್ಟೀರಿಯಾ ವಿರುದ್ಧ ತುಂಬಾ ಪರಿಣಾಮಕಾರಿಯಾಗಿ ಹೋರಾಡುವುದು ಎಂದು ಅಧ್ಯಯನಗಳು ಹೇಳಿವೆ.

3.ದಂತಕುಳಿ ತಡೆಯುವುದು

ಹಲ್ಲುಗಳ ಆರೋಗ್ಯಕ್ಕೆ ತೆಂಗಿನ ಎಣ್ಣೆ ಬಳಸುವ ಕಾರಣದಿಂದಾಗಿ ಅದು ಸ್ಟ್ರೆಪ್ಟೋಕೊಕಸ್ ಮ್ಯುಟಾನ್ಸ್ ಮತ್ತು ಲ್ಯಾಕ್ಟೋಬಾಸಿಲಸ್ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವುದು. ಇದು ದಂತಕುಳಿ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಬ್ಯಾಕ್ಟೀರಿಯಾ ನಿರ್ಮಾಣ ಮಾಡುವುದನ್ನು ತೆಂಗಿನ ಎಣ್ಣೆಯು ಕಡಿಮೆ ಮಾಡುವುದು ಎಂದು ವಿವಿಧ ರೀತಿಯ ಅಧ್ಯಯನಗಳು ಹೇಳಿವೆ. ಒಸಡಿಗೆ ಸುಮಾರು 20-25 ದಿನಗಳ ಕಾಲ ನಿರಂತರವಾಗಿ ತೆಂಗಿನ ಎಣ್ಣೆ ಬಳಸಿಕೊಂಡು ಮಸಾಜ್ ಮಾಡಿಕೊಳ್ಳಿ ಮತ್ತು ಆಗ ನಿಮಗೆ ವ್ಯತ್ಯಾಸವು ಕಂಡುಬರುವುದು. 9-10 ನಿಮಿಷ ಕಾಲ ನೀವು ಮಸಾಜ್ ಮಾಡಿಕೊಳ್ಳಿ.

ಹಲ್ಲುಗಳಿಗೆ ತೆಂಗಿನ ಎಣ್ಣೆ ಬಳಸುವುದು ಹೇಗೆ?

ತೆಂಗಿನ ಎಣ್ಣೆಯ ಟೂಥ್ ಪೇಸ್ಟ್

ಬೇಕಾಗುವ ಸಾಮಗ್ರಿಗಳು

•½ ಕಪ್ ತೆಂಗಿನ ಎಣ್ಣೆ
•2 ಚಮಚ ಅಡುಗೆ ಸೋಡಾ
•10-20 ಹನಿ ಪುದೀನಾ ಅಥವಾ ದಾಲ್ಚಿನಿ ಸಾರಭೂತ ತೈಲ

ಬಳಸುವ ವಿಧಾನ

•ತೆಂಗಿನ ಎಣ್ಣೆಯು ದ್ರವ ರೂಪಕ್ಕೆ ಬರುವ ತನಕ ಕುದಿಸಿ.
•ಇದಕ್ಕೆ ಅಡುಗೆ ಸೋಡಾ ಹಾಕಿಕೊಂಡು ಕಲಸಿಕೊಳ್ಳಿ.
•ಇದು ಪೇಸ್ಟ್ ಆಗುವ ತನಕ ಸರಿಯಾಗಿ ಕಲಸಿಕೊಳ್ಳಿ.
•ಈಗ ಸಾರಭೂತ ತೈಲ ಹಾಕಿ ಮತ್ತು ಮಿಶ್ರಣ ಮಾಡಿ.
•ಈ ಟೂಥ್ ಪೇಸ್ಟ್ ನ್ನು ಮುಚ್ಚಿದ ಡಬ್ಬದಲ್ಲಿ ಹಾಕಿಡಿ.

ಆಯಿಲ್ ಪುಲ್ಲಿಂಗ್

ಬೇಕಾಗುವ ಸಾಮಗ್ರಿಗಳು
•1ಚಮಚ ತೆಂಗಿನ ಎಣ್ಣೆ

ವಿಧಾನ

•ಬಾಯಿಯಲ್ಲಿ ತೆಂಗಿನ ಎಣ್ಣೆ ಹಾಕಿಕೊಳ್ಳಿ.
•ಇದನ್ನು ನೀವು 15-20 ನಿಮಿಷ ಕಾಲ ಮುಕ್ಕಳಿಸಿಕೊಳ್ಳಿ. ಇದು ಹಲ್ಲುಗಳ ಮಧ್ಯೆ ಇರಲಿ.
•ಈಗ ಎಣ್ಣೆಯನ್ನು ಹೊರಗೆ ಉಗುಳಿ ಮತ್ತು ಹಲ್ಲುಗಳನ್ನು ಬ್ರಷ್ ಮಾಡಿ. ಹಲ್ಲಿನ ಪೇಸ್ಟ್ ಅಥವಾ ತೆಂಗಿನ ಎಣ್ಣೆಯಿಂದ ಮಾಡಿದ ಪೇಸ್ಟ್ ಬಳಸಿ.
ಸೂಚನೆ: ಉಪಾಹಾರಕ್ಕೆ ಮೊದಲು ಹೀಗೆ ಮಾಡಿ ಮತ್ತು ಬಾಯಿಯನ್ನು ತೊಳೆಯುವ ಮೊದಲು ಇದನ್ನು ಉಗುಳಿ.

ಅಂತಿಮವಾಗಿ ಒಂದು ಮಾತು

ಟೂಥ್ ಪೇಸ್ಟ್ ಗೆ ಪರ್ಯಾಯವಾಗಿ ತೆಂಗಿನ ಎಣ್ಣೆಯನ್ನು ಬಳಸಬಹುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಇದರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾ ಕೊಲ್ಲಲು ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ ಮತ್ತು ಇದು ವಿಷಕಾರಿ ಅಂಶವನ್ನು ಹೊರಗೆ ಹಾಕುವುದು. ರಾಸಾಯನಿಕಗಳಿಗಿಂತ ನೈಸರ್ಗಿಕವಾದದ್ದು ತುಂಬಾ ಒಳ್ಳೆಯದು. ನಿಯಮಿತವಾಗಿ ಬಳಸುವಂತಹ ಟೂಥ್ ಪೇಸ್ಟ್ ನಲ್ಲಿ ಬ್ಯಾಕ್ಟೀರಿಯಾ ವಿರೋಧಿಯಾಗಿರುವಂತಹ ಟ್ರಿಕ್ಲೊಸನ್ ಇದೆ. ಈ ರಾಸಾಯನಿಕವು ಬ್ಯಾಕ್ಟೀರಿಯಾದ ಪ್ರತಿರೋಧಕವನ್ನು ಹೆಚ್ಚಿಸುವುದು ಮತ್ತು ದೇಹದಲ್ಲಿ ಅಂತಃಸ್ರಾವಕ ಉಂಟು ಮಾಡಬಹುದು. ಟೂಥ್ ಪೇಸ್ಟ್ ನಲ್ಲಿ ಇರುವಂತಹ ಫ್ಲೋರೈಡ್ ಕೂಡ ಒಳ್ಳೆಯದಲ್ಲ.

English summary

Benefits Of Coconut Oil For Teeth

Coconut oil is extracted from coconut meat and stands out due to its content of medium-chain triglycerides which are metabolized differently, therefore, possessing various health benefits. 50 per cent of coconut oil is lauric acid, a medium-chain fatty acid which is broken down into monolaurin that help protect your body from harmful bacteria, fungi and viruses.
X
Desktop Bottom Promotion