For Quick Alerts
ALLOW NOTIFICATIONS  
For Daily Alerts

ಪುರುಷರು ದಿನಕ್ಕೆ ಒಂದಾದರೂ ಬಾಳೆಹಣ್ಣು ತಿನ್ನಬೇಕಂತೆ! ಇದರಿಂದ ಅವರ ವೀರ್ಯದ ಗುಣಮಟ್ಟ ಹೆಚ್ಚಾಗುತ್ತದೆಯಂತೆ

|

ಆಧುನಿಕ ಯುಗದಲ್ಲಿ ಹಲವಾರು ವಿಚಾರಗಳು ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುವುದು. ಇದರಲ್ಲಿ ಪ್ರಮುಖವಾಗಿ ಇಂದಿನ ಜೀವನ ಶೈಲಿಯು ಸಂತಾನೋತ್ಪತ್ತಿಗೆ ವ್ಯತಿರಿಕ್ತ ಪರಿಣಾಮ ಬೀರುವುದು. ಒತ್ತಡ ಹಾಗೂ ಅತಿಯಾಗಿ ಎಲೆಕ್ಟ್ರಾನಿಕ್ ಸಾಧನಗಳ ಮುಂದೆ ಕುಳಿತುಕೊಳ್ಳುವ ಪರಿಣಾಮ ಬಂಜೆತನವೆನ್ನುವುದು ಕಾಣಿಸುತ್ತಿದೆ. ಬಂಜೆತನವೇನು ಎಂದು ಹೇಳಬಹುದು. ಇದು ಹಿಂದಿನಿಂದಲೂ ಕೇವಲ ಮಹಿಳೆಯರಲ್ಲಿ ಮಾತ್ರ ಎಂದು ಪರಿಗಣಿಸಲಾಗಿತ್ತು. ಆದರೆ ಬದಲಾದ ವೈದ್ಯಕೀಯ ಜಗತ್ತಿನಿಂದಾಗಿ ಪುರುಷರಲ್ಲಿ ಕೂಡ ಇದು ಕಾಣಿಸಬಹುದು ಎಂದು ತಿಳಿದುಬಂತು.

ಒಂದು ವರ್ಷದ ತನಕ ಯಾವುದೇ ಗರ್ಭನಿರೋಧಕಗಳನ್ನು ಬಳಸದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದರ ಹೊರತಾಗಿಯೂ ಸಂಗಾತಿಯು ಗರ್ಭ ಧರಿಸಲು ವಿಫಲವಾದರೆ ಆಗ ಇದನ್ನು ಬಂಜೆತನ ಎಂದು ಕರೆಯಲಾಗುತ್ತದೆ. ಆಧುನಿಕ ಯುಗದಲ್ಲಿ ಇದಕ್ಕೆ ಹಲವಾರು ರೀತಿಯ ಚಿಕಿತ್ಸೆಗಳು ಕೂಡ ಲಭ್ಯವಿದೆ. ಇದು ತುಂಬಾ ಪರಿಣಾಮಕಾರಿ ಕೂಡ. ಆದರೆ ಕೆಲವೊಂದು ಆಹಾರ ಪದ್ಧತಿಯಿಂದಲೂ ನಾವು ಬಂಜೆತನ ನಿವಾರಣೆ ಮಾಡಿಕೊಳ್ಳಬಹುದು. ಇದು ಪ್ರಕೃತಿ ನಮಗೆ ನೀಡಿರುವಂತಹ ವರದಾನ ಎಂದು ಹೇಳಬಹುದು. ಅದರಲ್ಲೂ ಪುರುಷರಲ್ಲಿ ವೀರ್ಯದ ಗುಣಮಟ್ಟ ಹಾಗೂ ವೀರ್ಯದ ಗಣತಿ ಕಡಿಮೆ ಇರುವಂತಹ ಸಮಸ್ಯೆ ಇರುವುದು. ಇಂತಹ ಸಮಯದಲ್ಲಿ ಇದನ್ನು ಹೆಚ್ಚಿಸಲು ಕೆಲವು ಆಹಾರ ಸೇವನೆ ಮಾಡಬೇಕು. ಅದು ತುಂಬಾ ಪರಿಣಾಮಕಾರಿ. ಇದರಲ್ಲಿ ಮುಖ್ಯವಾಗಿ ನೀವು ಬಾಳೆಹಣ್ಣನ್ನು ನೀವು ಪರಿಗಣಿಸಬಹುದು. ಈ ಲೇಖನದಲ್ಲಿ ಬಾಳೆಹಣ್ಣಿನಿಂದ ಬಂಜೆನತನ ನಿವಾರಣೆ ಮಾಡುವ ಬಗ್ಗೆ ತಿಳಿಸಿಕೊಡಲಿದ್ದೇವೆ.

ವೀರ್ಯ ಎನ್ನುವುದು ಪುರುಷತ್ವದ ಚಿಹ್ನೆ

ವೀರ್ಯ ಎನ್ನುವುದು ಪುರುಷತ್ವದ ಚಿಹ್ನೆ

ವೀರ್ಯ ಎನ್ನುವುದು ಪುರುಷರಿಗೆ ಅಂಗೀಕಾರದ ವಿಧಿ ಆಗಿದೆ. ಇದು ಪುರುಷತ್ವದ ಚಿಹ್ನೆ ಎಂದು ಕೂಡ ಪರಿಗಣಿಸಲಾಗುತ್ತದೆ. ಪ್ರತಿಯೊಂದು ಸಂಭ್ರಮದ ಕ್ಲೈಮ್ಯಾಕ್ಸ್ ಬಳಿಕ ವೀರ್ಯವು ಬಿಡುಗಡೆಯಾಗುವುದು. ಪುರುಷರಲ್ಲಿ ಶಕ್ತಿಯುತ ಪರಾಕಾಷ್ಠೆಯು ಕಂಡುಬರುವುದು ಮತ್ತು ಮಹಿಳೆಯರು ಈ ಬಲಿಷ್ಠ ಪರಾಕಾಷ್ಠೆಯ ಸಾಕ್ಷಿಯಾಗುವರು. ಈ ಎರಡು ಉದಾಹರಣೆಗೆ ವೀರ್ಯವೆನ್ನುವುದು ಬೇಕೇಬೇಕು. ಅದೇ ರೀತಿಯಾಗಿ ಸರಿಯಾದ ಪ್ರಮಾಣ ಮತ್ತು ಗುಣಮಟ್ಟದಲ್ಲಿ ಇಲ್ಲದೆ ಇದ್ದರೆ ಆಗ ಅದು ಸಂಪೂರ್ಣವಾಗಿ ನಾಶವಾಗುವುದು. ಇದೆರಡು ಇಲ್ಲವೆಂದಾದಲ್ಲಿ ಆಗ ಆ ಪುರುಷನು ತನ್ನ ಪತ್ನಿಯನ್ನು ಗರ್ಭಿಣಿ ಮಾಡಲು ಸಾಧ್ಯವಿಲ್ಲ.

ಹೆಚ್ಚಾಗಿ ಇದಕ್ಕೆಲ್ಲಾ 50 ಹರೆಯದ ವ್ಯಕ್ತಿಗಳೇ ಟಾರ್ಗೆಟ್!

ಹೆಚ್ಚಾಗಿ ಇದಕ್ಕೆಲ್ಲಾ 50 ಹರೆಯದ ವ್ಯಕ್ತಿಗಳೇ ಟಾರ್ಗೆಟ್!

ಇಂದಿನ ದಿನಗಳಲ್ಲಿ ಸರಾಸರಿ ಪುರುಷರ ವೀರ್ಯವು ಸಾಮಾನ್ಯ ವೀರ್ಯಕ್ಕಿಂತ ಅರ್ಧದಷ್ಟು ಮತ್ತು 50 ಹರೆಯದ ವ್ಯಕ್ತಿಗಳಿಗಿಂತಲೂ ತುಂಬಾ ಕೆಟ್ಟ ಗುಣಮಟ್ಟದ್ದು ಆಗಿರುವುದು ಎಂದು ಅಧ್ಯಯನಗಳು ಹೇಳಿವೆ. ಈಸ್ಟ್ರೋಜನ್ ಪರಿಣಾಮವನ್ನು ಅನುಕರಿಸುವಂತಹ ಕ್ಸೇನೋಈಸ್ಟ್ರೋಜನ್( ಕೀಟನಾಶಕ, ರಾಸಾಯನಿಕ, ಪ್ಲಾಸ್ಟಿಕ್, ಕಲ್ಮಷ ಇತ್ಯಾದಿಗಳು)ಗೆ ಒಗ್ಗಿಕೊಳ್ಳುವಂತಹ ಪರಿಣಾಮವಾಗಿದೆ ಎಂದು ನಂಬಲಾಗಿದೆ.

ಅಧ್ಯಯನದ ಪ್ರಕಾರ

ಅಧ್ಯಯನದ ಪ್ರಕಾರ

ಇಂದಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯದ ಗಣತಿಯು ತುಂಬಾ ಕಡಿಮೆ ಇರುವ ಪರಿಣಾಮದಿಂದಾಗಿ ಹೆಚ್ಚಿನ ಪುರುಷರಿಗೆ ತಮ್ಮ ಪತ್ನಿಯನ್ನು ಗರ್ಭಿಣಿಯನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ದಂಪತಿಗೆ ಮಗು ಆಗದೆ ಇರುವಾಗ ಹೆಚ್ಚಿನ ಸಂದರ್ಭಗಳಲ್ಲಿ ಮಹಿಳೆಯನ್ನು ದೂರುವುದು ಸಾಮಾನ್ಯವಾಗಿದೆ. ವೀರ್ಯದ ಗಣತಿಯು ತುಂಬಾ ಕಡಿಮೆ ಇರುವ ಕಾರಣದಿಂದಾಗಿ ಪುರುಷರಲ್ಲಿ ಕೂಡ ಫಲವತ್ತತೆ ಸಮಸ್ಯೆಯು ಕಾಣಿಸಿಕೊಳ್ಳಬಹುದು ಎಂದು ಅಧ್ಯಯನ ಒಂದು ಹೇಳಿದೆ.

ಬಿಸಿಯಿಂದಾಗಿ ವೀರ್ಯದ ಉತ್ಪತ್ತಿ ಕುಗ್ಗುವುದು

ಬಿಸಿಯಿಂದಾಗಿ ವೀರ್ಯದ ಉತ್ಪತ್ತಿ ಕುಗ್ಗುವುದು

ದೀರ್ಘಕಾಲ ತನಕ ಕುಳಿತುಕೊಂಡು ಇರುವುದು ಮತ್ತು ತುಂಬಾ ಬಿಗಿಯಾದ ಬಟ್ಟೆ ಧರಿಸುವುದರಿಂದಾಗಿ ಉಷ್ಣತೆಯು ಹೆಚ್ಚಾಗಿ ಅದರಿಂದ ವೀರ್ಯ ಉತ್ಪತ್ತಿ ಮೇಲೆ ಪರಿಣಾಮ ಉಂಟಾಗಬಹುದು. ನೈಲಾನ್ ಅಥವಾ ತುಂಬಾ ಬಿಗಿಯಾಗಿರುವ ಒಳ ಉಡುಪು ಧರಿಸುವ ಪರಿಣಾಮ ವೃಷಣದ ಭಾಗದಲ್ಲಿ ಅತಿಯಾದ ಉಷ್ಣತೆಯು ಉಂಟಾಗುವುದು. ಈ ಭಾಗದಲ್ಲಿ ಉಷ್ಣತೆಯು ಅಧಿಕವಾಗಿ ಅದರಿಂದ ವೀರ್ಯದ ಗುಣಮಟ್ಟದ ಮೇಲೆ ಪರಿಣಾಮವಾಗುವುದು. ಕ್ಸೇನೋಈಸ್ಟ್ರೋಜನ್ ಪರಿಣಾಮವನ್ನು ಕೆಲವೊಂದು ಕ್ರಮಗಳನ್ನು ಪಾಲಿಸುವ ಮೂಲಕವಾಗಿ ಕಡಿಮೆ ಮಾಡಿಕೊಳ್ಳಬಹುದು.

Most Read: ಶೀಘ್ರಸ್ಖಲನಕ್ಕೆ ಒತ್ತಡವೂ ಕಾರಣವಾಗಬಹುದಂತೆ! ಅದು ಹೇಗೆ ಗೊತ್ತೇ?

ರಾಸಾಯನಿಕ ಅಂಶಗಳಿಗೆ ಒಗ್ಗಿಕೊಳ್ಳುವುದನ್ನು ಕಡಿಮೆ ಮಾಡಿ

ರಾಸಾಯನಿಕ ಅಂಶಗಳಿಗೆ ಒಗ್ಗಿಕೊಳ್ಳುವುದನ್ನು ಕಡಿಮೆ ಮಾಡಿ

ಕ್ಲೋರೀನ ಬಳಸದೆ ಬಿಳಿಯಾಗಿಸಿರುವಂತಹ ಕಚೇರಿಯ ಕಾಗದ ಸಾಮಗ್ರಿಗಳನ್ನು ಬಳಸಿ. ಬ್ಲೀಚ್ ಮಾಡದೆ ಇರುವಂತಹ ಕಾಫಿ ಫಿಲ್ಟರ್, ಪೇಪರ್, ನ್ಯಾಪ್ಕಿನ್ ಮತ್ತು ಟಾಯ್ಲೆಟ್ ಪೇಪರ್ ನ್ನು ಬಳಕೆ ಮಾಡಿ. ಇದರಿಂದ ವಿಷಕಾರಿ ಅಂಶಕ್ಕೆ ಒಗ್ಗಿಕೊಳ್ಳುವುದು ಕಡಿಮೆಯಾಗುವುದು. ಕೀಟನಾಶಕ ಮತ್ತು ಸಸ್ಯನಾಶಕಗಳನ್ನು ಕಡೆಗಣಿಸಲು ನೀವು ಸಾವಯವ ಆಹಾರ ಸೇವನೆ ಮಾಡಿ ಸಿಂಥೆಟಿಕ್ ಡಿಯೋಡ್ರೆಂಟ್ ಅಥವಾ ಕಾಸ್ಮೆಟಿಕ್ ನ್ನು ನೀವು ಕಡೆಗಣಿಸಿ. ಆದಷ್ಟು ಮಟ್ಟಿಗೆ ನೀವು ಸಾವಯವ ಉತ್ಪನ್ನಗಳನ್ನು ಬಳಕೆ ಮಾಡಲು ಪ್ರಯತ್ನಿಸಿ. ಹಾರ್ಮೋನುಗಳು ಅತಿಯಾಗಿರುವಂತಹ ಅಧಿಕ ಕೊಬ್ಬು ಇರುವಂತಹ ಪ್ರಾಣಿಗಳ ಉತ್ಪನ್ನಗಳನ್ನು ಬಳಸಬೇಡಿ. ಇದರಲ್ಲಿ ಪ್ರಮುಖವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳು.

ಆಲ್ಕೋಹಾಲ್ ಮತ್ತು ಕೆಫೆನ್ ಕಡೆಗಣಿಸಿ

ಆಲ್ಕೋಹಾಲ್ ಮತ್ತು ಕೆಫೆನ್ ಕಡೆಗಣಿಸಿ

ಕರಿದ, ಇದ್ದಿಲಿನಿಂದ ಬೇಯಿಸಿದ ಅಥವಾ ಬಾರ್ಬಿಕ್ ಮಾಡಿರುವ ಆಹಾರವನ್ನು ಕಡೆಗಣಿಸಿ. ಆ್ಯಂಟಿಆಕ್ಸಿಡೆಂಟ್ ನಿಂದ ಅಧಿಕವಾಗಿರುವಂತಹ ಆಹಾರ ಸೇವನೆ ಮಾಡಿ. ಪ್ರಮುಖವಾಗಿ ಈ ಆಹಾರಗಳಲ್ಲಿ ಕ್ಯಾರೋಟಿನ್, ವಿಟಮಿನ್ ಎ, ಸಿ, ಇ ಮತ್ತು ಸೆಲೆನಿಯಂ ಇರಲಿ. ಇಂತಹ ಆಹಾರಗಳೆಂದರೆ ಹಸಿರೆಲೆ ತರಕಾರಿಗಳು, ಕ್ಯಾರೆಟ್, ಸಿಟ್ರಸ್ ಹಣ್ಣುಗಳು, ಬ್ರಾಕೋಲಿ, ಹೂಕೋಸು ಇತ್ಯಾದಿಗಳು.

ವಿಟಮಿನ್ ಇ

ವಿಟಮಿನ್ ಇ

ವಿಟಮಿನ್ ಇ ಅಂಶ ಒಳಗೊಂಡಿರುವ ಉತ್ತಮ ಗುಣಮಟ್ಟದ ಸ್ಪೆರ್ಮಟೊಜೊವಾ ಉತ್ಪತ್ತಿಯನ್ನು ಉತ್ತೇಜಿಸುವುದು ಮತ್ತು ಹೆಚ್ಚಿನ ತರಕಾರಿ ಹಾಗೂ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಉತ್ತಮ ಗುಣಮಟ್ಟದ ವೀರ್ಯದ ಉತ್ಪತ್ತಿಯು ಆಗುವುದು. ಇದರಿಂದ ಒಳ್ಳೆಯ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋಗಬೇಕು.

Most Read: ವೀರ್ಯ ಕಂದು ಬಣ್ಣದಂತೆ ಆಗಲು ಕಾರಣವೇನು? ಇದರ ಅರ್ಥವೇನು?

ನಿಯಮಿತ ವ್ಯಾಯಾಮ

ನಿಯಮಿತ ವ್ಯಾಯಾಮ

ನಿಯಮಿತ ವ್ಯಾಯಾಮ(ವಾರದಲ್ಲಿ ಐದು ದಿನ ಸುಮಾರು 45 ನಿಮಿಷ ಕಾಲ) ಮತ್ತು ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಅದರಿಂದ ನಿಮ್ಮ ದೇಹದ ತೂಕ ಸರಿಯಾಗಿರುವುದು ಮತ್ತು ಒತ್ತಡ ಹಾಗೂ ಆತಂಕವನ್ನು ನಿವಾರಣೆ ಮಾಡುವುದು.

ಪೋಷಕಾಂಶದ ಸಪ್ಲಿಮೆಂಟ್ ಸೇವನೆ ಮಾಡಿ

ಪೋಷಕಾಂಶದ ಸಪ್ಲಿಮೆಂಟ್ ಸೇವನೆ ಮಾಡಿ

ಪುರುಷರಲ್ಲಿ ಫಲವತ್ತತೆ ಹೆಚ್ಚು ಮಾಡುವಂತಹ ಪ್ರಮುಖ ಪೋಷಕಾಂಶಗಳು ಎಂದರೆ ಅದು ವಿಟಮಿನ್ ಸಿ ಮತ್ತು ಸತು. ವಿಟಮಿನ್ ಸಿ ಯು ವೀರ್ಯವು ಅಂಟಿಕೊಳ್ಳಲು ಮತ್ತು ಜತೆಯಾಗಿ ಇರಲು ನೆರವಾಗುವುದು ಮತ್ತು ಇದರಿಂದ ಫಲವತ್ತತೆಯ ಅವಕಾಶವು ಹೆಚ್ಚಾಗುವುದು. ಸತುವಿನ ಅಂಶವು ದೇಹದಲ್ಲಿ ಟೆಸ್ಟೋಸ್ಟೆರಾಣ್ ಮಟ್ಟವನ್ನು ಹೆಚ್ಚಾಗಿಸುವುದು, ಇದರೊಂದಿಗೆ ವೀರ್ಯದ ಗಣತಿ ಮತ್ತು ವೀರ್ಯದ ಚಲನಶೀಲತೆ ಹೆಚ್ಚಾಗುವುದು. ಸತು ಹೆಚ್ಚಾಗಿ ಇರುವಂತಹ ಸಿಂಪಿ, ತೆಳು ಬೀಫ್, ಟರ್ಕಿ, ಮಾಂಸ, ಗೋಧಿ ಭ್ರೂಣ, ದ್ವಿದಳ ಧಾನ್ಯಗಳು ಮತ್ತು ಬೀಜಗಳನ್ನು ನೀವು ಸೇವನೆ ಮಾಡಿ.

ದಿನಕ್ಕೆ ಒಂದಾದರೂ ಬಾಳೆಹಣ್ಣು ತಿನ್ನಿ

ದಿನಕ್ಕೆ ಒಂದಾದರೂ ಬಾಳೆಹಣ್ಣು ತಿನ್ನಿ

ಬಾಳೆಹಣ್ಣು ಲೈಂಗಿಕ ಶಕ್ತಿ ನೀಡುವ ಮತ್ತೊಂದು ಅದ್ಭುತ ಆಹಾರವಾಗಿದೆ. ಇದರಲ್ಲಿ ಅಧಿಕ ಮಟ್ಟದ ಮೆಗ್ನಿಶಿಯಂ, ವಿಟಮಿನ್ ಬಿ1, ವಿಟಮಿನ್ ಎ, ವಿಟಮಿನ್ ಸಿ ಮತ್ತು ಪ್ರೋಟೀನ್ ಇದೆ. ಇದು ವೀರ್ಯವನ್ನು ಸುಧಾರಿಸಲು ಮತ್ತು ಅದರ ಉತ್ಪತ್ತಿಯನ್ನು ಉತ್ತೇಜಿಸಲು ಪ್ರಮುಖವಾಗಿ ಬೇಕಾಗಿರುವುದು. ಬಾಳೆಹಣ್ಣಿನಲ್ಲಿ ಅಧಿಕ ಮಟ್ಟದ ವಿಟಮಿನ್ ಬಿ ಮತ್ತು ಬ್ರೊಮೆಲೈನ್ ಇರುವ ಕಾರಣದಿಂದಾಗಿ ಇದು ಹಾರ್ಮೋನು ನಿಯಂತ್ರಣ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಲೈಂಗಿಕ ಶಕ್ತಿ ವೃದ್ಧಿಸುವುದು. ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಬಾಳೆಹಣ್ಣನ್ನು ಸೇರಿಸಿಕೊಳ್ಳಿ. ನೀವು ಬಾಳೆಹಣ್ಣಿನ ಶೇಕ್ ಅಥವಾ ಸ್ಮೂಥಿ ತಯಾರಿಸಿಕೊಂಡು ಇದರ ಲಾಭ ಪಡೆದುಕೊಳ್ಳಬಹುದು. ಬಾಳೆಹಣ್ಣಿನಲ್ಲಿ ಹಲವು ಖನಿಜಗಳು ಹಾಗೂ ವಿಟಮಿನ್ ಎ, ಬಿ೧, ಹಾಗೂ ಸಿ ಸಮೃದ್ಧವಾಗಿದೆ. ಇವು ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಅಗತ್ಯವಾಗಿದ್ದು ಲೈಂಗಿಕ ಸಾಮರ್ಥ್ಯ ಹೆಚ್ಚಲೂ ನೆರವಾಗುತ್ತವೆ. ಅಲ್ಲದೇ ಬಾಳೆಹಣ್ಣಿನಲ್ಲಿರುವ ಬ್ರೋಮಿಲೈನ್ ಎಂಬ ಕಿಣ್ವ ಪುರುಷಕ ಲೈಂಗಿಕ ಶಕ್ತಿ ಹಾಗೂ ವೀರ್ಯಾಣುಗಳ ಸಂಖ್ಯೆ ಹೆಚ್ಚಲು ನೆರವಾಗುತ್ತದೆ.

ಅನಾರೋಗ್ಯಕರ ಹವ್ಯಾಸಗಳಿಂದ ದೂರವಿರಿ

ಅನಾರೋಗ್ಯಕರ ಹವ್ಯಾಸಗಳಿಂದ ದೂರವಿರಿ

ಧೂಮಪಾನ ಮತ್ತು ಮಧ್ಯಪಾನವು ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುವುದು ಎಂದು ವೈದ್ಯಕೀಯವಾಗಿಯೂ ಸಾಬೀತಾಗಿದೆ. ನಿಕೋಟಿನ್ ಮತ್ತು ಆಲ್ಕೋಹಾಲ್ ಆರೋಗ್ಯಕಾರಿ ವೀರ್ಯದ ಉತ್ಪತ್ತಿ ಮೇಲೆ ಪರಿಣಾಮ ಬೀರುವುದು. ಆಲ್ಕೋಹಾಲ್ ಮತ್ತು ಧೂಮಪಾನದ ಜತೆಗೆ ಡ್ರಗ್ಸ್ ಸೇವನೆ ಮಾಡುವಂತಹ ಪುರುಷರಲ್ಲಿ ಬಂಜೆತನದ ಅಪಾಯವು ಅಧಿಕವಾಗಿರುವುದು. ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಲು ವೈದ್ಯರ ಸಲಹೆ ಪಡೆಯುವುದು ಅತೀ ಅಗತ್ಯವಾಗಿರುವುದು.

Most Read: ದಿನಕ್ಕೆ ಎರಡು ಕಪ್ ಕಾಫಿ ಕುಡಿದರೆ ಸಾಕು-ಲೈಂಗಿಕ ಜೀವನವು ಸುಖಕರವಾಗಿರುವುದು!

ಸಿಟ್ರಸ್ ಇರುವ ಹಣ್ಣುಗಳನ್ನು ಸೇವಿಸಿ

ಸಿಟ್ರಸ್ ಇರುವ ಹಣ್ಣುಗಳನ್ನು ಸೇವಿಸಿ

ಕಿತ್ತಳೆ, ಮೂಸಂಬಿ ಇತ್ಯಾದಿ ಸಿಟ್ರಸ್ ಇರುವ ಹಣ್ಣುಗಳನ್ನು ಸೇವಿಸಿ. ಇದರಲ್ಲಿ ವಿಟಮಿನ್ ಸಿ ಇದೆ. ವಿಟಮಿನ್ ಸಿ ವೀರ್ಯದ ಸಂಖ್ಯೆ ಮತ್ತು ವೀರ್ಯಾಣು ಚತುರತೆಯನ್ನು ಸುಧಾರಿಸುವುದು.

ಸತು ಮಾತ್ರೆಗಳನ್ನು ಸೇವಿಸಿ

ಸತು ಮಾತ್ರೆಗಳನ್ನು ಸೇವಿಸಿ

ಬಂಜೆತನದ ಸಮಸ್ಯೆಯಿದ್ದರೆ ವೈದ್ಯರೊಂದಿಗೆ ಮಾತನಾಡಿಕೊಂಡು ಸತುವಿನ ಮಾತ್ರೆಗಳನ್ನು ಸೇವಿಸಿ. ಸತು ಟೆಸ್ಟೊಸ್ಟಿರಾನ್ ಮಟ್ಟವನ್ನು ಪರಿಣಾಮಕಾರಿಯಾಗಿ ಹೆಚ್ಚಿಸುವುದು.

English summary

Banana, sexual superfood to boost sperm count

Banana is another sexual super food is a rich source of magnesium, vitamin b1, vitamin a, vitamin c, and protein, which are required to improve and stimulate the production of more sperm.
X
Desktop Bottom Promotion