For Quick Alerts
ALLOW NOTIFICATIONS  
For Daily Alerts

ದಿನಕ್ಕೆ ಎರಡು ಕಪ್ ಕಾಫಿ ಕುಡಿದರೆ ಸಾಕು-ಲೈಂಗಿಕ ಜೀವನವು ಸುಖಕರವಾಗಿರುವುದು!

|

ಜೀವನದಲ್ಲಿ ಪ್ರತಿಯೊಂದನ್ನು ಪಡೆದುಕೊಂಡು ಸುಖಿ ಸಂಸಾರ ನಡೆಸಬೇಕೆಂದು ಬಯಸುತ್ತೇವೆ. ಅದರಲ್ಲೂ ವೈವಾಹಿಕ ಜೀವನದಲ್ಲಿ ನಾವು ಲೈಂಗಿಕವಾಗಿ ಸುಖಿಯಾಗಿರಬೇಕು ಎನ್ನುವುದು ಪ್ರತಿಯೊಬ್ಬರ ಇಚ್ಛೆಯಾಗಿರುವುದು. ಲೈಂಗಿಕ ಜೀವನವು ಸುಖಕರವಾಗಿದ್ದರೆ ಆಗ ಸಂಬಂಧವು ಸರಿಯಾಗಿಯೇ ಇರುವುದು. ಸಂಗಾತಿಗಳಲ್ಲಿ ಇಬ್ಬರಲ್ಲಿ ಒಬ್ಬರಿಗೆ ತೃಪ್ತಿಯ ಲೈಂಗಿಕ ಜೀವನ ಸಿಗದೆ ಇದ್ದರೆ ಆಗ ಸಂಬಂಧದಲ್ಲಿಯೂ ಬಿರುಕು ಮೂಡುವುದು. ಇದರಿಂದ ಪ್ರತಿಯೊಬ್ಬ ಪುರುಷನು ತಾನು ಹಾಸಿಗೆಯಲ್ಲಿ ಅತ್ಯುತ್ತಮವಾಗಿರುವ ಪ್ರದರ್ಶನ ನೀಡಬೇಕು ಎಂದು ಬಯಸುವನು.

ಆದರೆ ಕೆಲವು ಬಾಹ್ಯ ಹಾಗೂ ಆಂತರಿಕ ಅಂಶಗಳಿಂದ ಇದು ಸಾಧ್ಯವಾಗಲ್ಲ. ಇದು ಹೆಚ್ಚಿನ ಜನರ ಆತ್ಮವಿಶ್ವಾಸವನ್ನೇ ಕುಂದಿಸುವುದು. ಯಾಕೆಂದರೆ ಹಾಸಿಗೆಯಲ್ಲಿ ಶಕ್ತಿಯ ಪ್ರದರ್ಶನ ಮಾಡದೆ ಇರುವುದು ದೊಡ್ಡ ಮಟ್ಟಿನ ಹಿನ್ನಡೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇದರಿಂದ ಹೆಚ್ಚಿನ ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ಕೆಲವೊಂದು ಕ್ರಮಗಳನ್ನು ಪಾಲಿಸಿಕೊಂಡು ಹೋಗುವ ಕಾರಣದಿಂದಾಗಿ ನೀವು ಬಯಸಿದಂತಹ ಶಕ್ತಿಯನ್ನು ಹಾಸಿಗೆಯಲ್ಲಿ ಪಡೆಯಬಹುದು. ಇದು ನೀವು ಆಲೋಚನೆ ಮಾಡಿರುವುದಕ್ಕಿಂತಲೂ ತುಂಬಾ ಸುಲಭವಾಗಿ ಪಡೆಯಬಹುದು! ಅದು ಹೇಗೆ ಗೊತ್ತಾ? ದಿನಕ್ಕೆ ಬರೀ ಎರಡು ಕಪ್ ಕಾಫಿ ಕುಡಿದರೆ ಸಾಕು ಅಷ್ಟೇ! ಮುಂದೆ ಓದಿ

ಶಿಶ್ನಕ್ಕೆ ಹೆಚ್ಚಿನ ರಕ್ತವು ಸಂಚಾರವಾಗುವಂತೆ ಮಾಡುವುದು!

ಶಿಶ್ನಕ್ಕೆ ಹೆಚ್ಚಿನ ರಕ್ತವು ಸಂಚಾರವಾಗುವಂತೆ ಮಾಡುವುದು!

ಹೌದು ಕಾಫಿ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಹಲವಾರು ರೀತಿಯ ಹಾನಿ ಉಂಟಾಗುವುದು ಎಂದು ವರದಿಗಳು ಹೇಳುತ್ತವೆ. ಆದರೆ ಲೈಂಗಿಕ ತಜ್ಞರ ಅವರ ಪ್ರಕಾರ, ಕಾಫಿಯು ಲೈಂಗಿಕ ಜೀವನಕ್ಕೆ ತುಂಬಾ ಒಳ್ಳೆಯದು. ಕೆಫಿನ್ ಅದ್ಭುತವಾಗಿ ಕೆಲಸ ಮಾಡುವುದು. ಇದು ಕಾನೂನುಬದ್ಧವಾದ ಉತ್ತೇಜಕವಾಗಿದೆ. ಇದು ನಮ್ಮ ದೇಹದ ಎಲ್ಲಾ ಭಾಗಗಳಿಗೆ ರಕ್ತ ಸಂಚಾರವನ್ನು ಹೆಚ್ಚಿಸುವುದು. ಅದರೊಂದಿಗೆ ನಮ್ಮ ಜನನೇಂದ್ರಿಯಗಳಿಗೂ. ಕೆಫಿನ್ ನಮ್ಮ ರಕ್ತನಾಳಗಳು ಆರಾಮವಾಗಿ ಇರುವಂತೆ ಮಾಡುವುದು ಮತ್ತು ಶಿಶ್ನಕ್ಕೆ ಹೆಚ್ಚಿನ ರಕ್ತವು ಸಂಚಾರವಾಗುವಂತೆ ಮಾಡುವುದು.

ದಿನಕ್ಕೆ ಎರಡು ಕಪ್ ಕಾಫಿ

ದಿನಕ್ಕೆ ಎರಡು ಕಪ್ ಕಾಫಿ

ದಿನಕ್ಕೆ ಎರಡು ಕಪ್ ಕಾಫಿ ಸೇವನೆ ಮಾಡುವುದರಿಂದ ನಿಮ್ಮ ಲೈಂಗಿಕ ಜೀವನದಲ್ಲಿ ಅದ್ಭುತವಾಗಿರುವ ಸುಧಾರಣೆಯು ಕಂಡು ಬರುವುದು ಎಂದು ಅಧ್ಯಯನ ವರದಿಯೊಂದು ಹೇಳಿದೆ. ಟೆಕ್ಸಾಸ್ ನ ಯೂನಿವರ್ಸಿಟಿಯು ನಡೆಸಿರುವಂತಹ ಅಧ್ಯಯನದ ಪ್ರಕಾರ ದಿನಕ್ಕೆ ಎರಡು ಕಪ್ ಕಾಫಿ ಸೇವನೆ ಮಾಡುವಂತಹ ಪುರುಷರಲ್ಲಿ ಇತರ ಪುರುಷರಗಿಂತ ನಿಮಿರು ದೌರ್ಬಲ್ಯದ ಸಮಸ್ಯೆಯು ಶೇ. 42ರಷ್ಟು ಕಡಿಮೆ ಇರುವುದು ಎಂದು ಹೇಳಲಾಗಿದೆ.

Most Read: 2019ರಲ್ಲಿ ಯಾವ್ಯಾವ ರಾಶಿಯವರಿಗೆ ಅದೃಷ್ಟ ತರುವ ಬಣ್ಣ ಯಾವುದು ಗೊತ್ತಾ?

ಅಧ್ಯಯನದ ಪ್ರಕಾರ

ಅಧ್ಯಯನದ ಪ್ರಕಾರ

ಅಮೆರಿಕಾದ ಸೈನ್ಸ್ ಜರ್ನಲ್ ಪ್ಲೊಸ್ ವನ್ ನಡೆಸಿರುವಂತಹ ಅಧ್ಯಯನದಲ್ಲಿ ವಿಜ್ಞಾನಿಗಳು ಸುಮಾರು 4000 ಜನರನ್ನು ಕೆಫಿನ್ ಯುಕ್ತ ಪಾನೀಯಗಳಾಗಿರುವಂತಹ ಕಾಫಿ, ಚಾ ಮತ್ತು ಇತರ ಕೆಲವೊಂದು ಕ್ರೀಡಾ ಪಾನೀಯಗಳ ಸೇವನೆಗೆ ಒಳಪಡಿಸಿದರು. ಇದರಲ್ಲಿ ಅವರ ತೂಕ, ವಯಸ್ಸು ಮತ್ತು ರಕ್ತದೊತ್ತಡದ ಹೊರತಾಗಿಯೂ ಫಲಿತಾಂಶ ಮಾತ್ರ ಒಂದೇ ಸಮಾನವಾಗಿತ್ತು. ವಿಜ್ಞಾನಿಗಳು ಹೇಳುವ ಪ್ರಕಾರ ಕೆಫಿನ್ ಸೇವನೆ ಮಾಡಿದಾಗ ಅದು ಒಂದು ರೀತಿಯ ರಾಸಾಯನಿಕವನ್ನು ಬಿಡುಗಡೆ ಮಾಡುವುದು. ಇದು ಸ್ನಾಯುಗಳಿಗೆ ಆರಾಮ ನೀಡಿ ಜನನೇಂದ್ರೀಯಕ್ಕೆ ಸರಿಯಾಗಿ ರಕ್ತಸಂಚಾರವಾಗಲು ನೆರವಾಗುವುದು. ಆದರೆ ಎರಡು ಕಪ್ ಕಾಫಿಗೆ ಇದು ನಿಗದಿಯಾಗಬೇಕು. ಯಾಕೆಂದರೆ ಇದಕ್ಕಿಂತ ಹೆಚ್ಚಿನ ಸೇವನೆ ಮಾಡಿದರೆ ಅದರಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಕಂಡುಬಂದಿದೆ ಎಂದು ಅಧ್ಯಯನಗಳು ತಿಳಿಸಿವೆ.

ಮಧುಮೇಹದಿಂದ ಬಳಲುತ್ತಾ ಇರುವಂತಹ ವ್ಯಕ್ತಿಗಳ ಮೇಲೆ

ಮಧುಮೇಹದಿಂದ ಬಳಲುತ್ತಾ ಇರುವಂತಹ ವ್ಯಕ್ತಿಗಳ ಮೇಲೆ

ಈಗಾಗಲೇ ಮಧುಮೇಹದಿಂದ ಬಳಲುತ್ತಾ ಇರುವಂತಹ ವ್ಯಕ್ತಿಗಳ ಮೇಲೆ ಇದು ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಎಂದು ಹೌಸ್ಟನ್ ನ ಯೂನಿವರ್ಸಿಟಿ ಆಫ್ ಟೆಕ್ಸಾಸ್ ನ ಪ್ರೋ. ಡೇವಿಡ್ ಲೊಪೆಜ್ ತಿಳಿಸಿದ್ದಾರೆ. ಬೊಜ್ಜು ದೇಹ, ಅತಿಯಾದ ತೂಕ ಮತ್ತು ಅಧಿಕ ರಕ್ತದೊತ್ತಡ ಇರುವಂತಹ ವ್ಯಕ್ತಿಗಳಲ್ಲಿ ನಿಮಿರು ದೌರ್ಬಲ್ಯದ ಸಮಸ್ಯೆಯು ಸಾಮಾನ್ಯವಾಗಿರುವುದು. ಆದರೆ ಮಧುಮೇಹ ಇರುವಂತಹ ವ್ಯಕ್ತಿಗಳಲ್ಲಿ ಇದು ಹಾಗಿಲ್ಲ ಎಂದು ಡೈಲಿ ಟೆಲಿಗ್ರಾಫ್ ನ ವರದಿಯೊಂದು ಹೇಳಿದೆ. ಕಾಫಿಯಲ್ಲಿರುವ ಕೆಫೀನ್ ವಿಶೇಷವಾಗಿ ಟೈಪ್ 2 ಮಧುಮೇಹವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಈ ಬಗೆಯ ಮಧುಮೇಹಿಗಳ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾದರೂ ಇದನ್ನು ಬಳಸಿಕೊಳ್ಳಲು ದೇಹ ವಿಫಲವಾಗುತ್ತದೆ. ಇದಕ್ಕೆ insulin sensitivity ಎಂದು ಕರೆಯುತ್ತಾರೆ. ಕೆಫೀನ್ ಈ ಇನ್ಸುಲಿನ್ ಬಳಕೆಯಾಗಲು ನೆರವಾಗುವ ಮೂಲಕ ದೇಹ ಗ್ಲುಕೋಸ್ ಅನ್ನು ಸ್ವೀಕರಿಸಲು ಹೆಚ್ಚು ಸಮರ್ಥವಾಗುತ್ತದೆ (glucose tolerance).ಇದು ಟೈಪ್ 2ಮಧುಮೇಹ ಆವರಿಸುವ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.

ಮಹಿಳೆಯರಲ್ಲೂ ಕೆಫಿನ್ ಲೈಂಗಿಕಾಸಕ್ತಿಯನ್ನು ಹೆಚ್ಚಿಸುವುದು

ಮಹಿಳೆಯರಲ್ಲೂ ಕೆಫಿನ್ ಲೈಂಗಿಕಾಸಕ್ತಿಯನ್ನು ಹೆಚ್ಚಿಸುವುದು

ಮಹಿಳೆಯರಲ್ಲೂ ಕೆಫಿನ್ ಲೈಂಗಿಕಾಸಕ್ತಿಯನ್ನು ಹೆಚ್ಚಿಸುವುದು ಎಂದು ಹಿಂದಿನ ಕೆಲವೊಂದು ಅಧ್ಯಯನಗಳು ಕಂಡುಕೊಂಡಿವೆ. 2006ರಲ್ಲಿ ಟೆಕ್ಸಾಸ್ ನ ಸೌತ್ ವೆಸ್ಟ್ ಯೂನಿವರ್ಸಿಟಿ ಹೆಣ್ಣು ಇಲಿಗಳ ಮೇಲೆ ನಡೆಸಿರುವಂತಹ ಅಧ್ಯಯನದ ಪ್ರಕಾರ ಕಾಫಿ ಸೇವನೆ ಮಾಡುವುದರಿಂದ ಮೆದುಳಿನ ಕೆಲವೊಂದು ಭಾಗಗಳು ಉತ್ತೇಜನಕ್ಕೆ ಒಳಗಾಗುವುದು ಮತ್ತು ಇದರಿಂದ ಲೈಂಗಿಕ ಆಸಕ್ತಿಯು ಹೆಚ್ಚಾಗುವುದು. ಆದರೆ ಈ ಪರಿಣಾಮವು ನಿಗದಿತವಾಗಿ ಕಾಫಿ ಕುಡಿಯದೆ ಇರುವಂತಹ ಮಹಿಳೆಯರಲ್ಲಿ ಮಾತ್ರ ಕಾಣಬಹುದಾಗಿದೆ.

ಅತಿಯಾಗಿ ಕಾಫಿ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ವಿಜ್ಞಾನಿಗಳು ಈಗಲೂ ಚರ್ಚೆ ಮಾಡುತ್ತಲೇ ಇದ್ದಾರೆ. ದಿನಕ್ಕೆ ನಾಲ್ಕು ಕಪ್ ಗಿಂತ ಹೆಚ್ಚು ಕಾಫಿ ಕುಡಿದರೆ ಅದರಿಂದ ನಿದ್ರಾಹೀನತೆ, ಕಿರಿಕಿರಿ, ಆರಾಮವಿಲ್ಲದಿರುವುದು ಮತ್ತು ಹೊಟ್ಟೆ ನೋವು ಕಾಣಿಸಬಹುದು.

Most Read: ಹಿಮಾಲಯದ ಈ 'ವಯಾಗ್ರಾ'ಕ್ಕಾಗಿ ಹಿ೦ಸೆ, ಕೊಲೆಗಳೇ ನಡೆಯುತ್ತವೆಯಂತೆ!

ಪಾರ್ಶ್ವವಾಯುವಿನ ಸಮಸ್ಯೆಯು ಕಡಿಮೆಯಾಗುವುದು!

ಪಾರ್ಶ್ವವಾಯುವಿನ ಸಮಸ್ಯೆಯು ಕಡಿಮೆಯಾಗುವುದು!

ಆದರೆ ಕಳೆದ ಮಾರ್ಚ್ ನಲ್ಲಿ ಸುಮಾರು 25 ಸಾವಿರ ಮಂದಿ ಮಧ್ಯ ವಯಸ್ಕ ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕವಾಗಿ ಅಧ್ಯಯನಕ್ಕೆ ಒಳಪಡಿಸಿದ ವೇಳೆ ದಿನಕ್ಕೆ ಮೂರರಿಂದ ಐದು ಕಪ್ ಕಾಫಿ ಕುಡಿದರೆ ಅದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಸಮಸ್ಯೆಯು ಕಡಿಮೆಯಾಗುವುದು. ಕಾಫಿ ಕಡಿಮೆ ಸೇವನೆ ಮಾಡುವಂತಹ ವ್ಯಕ್ತಿಗಳಲ್ಲಿ ಹೃದಯಾಘಾತದ ಸಮಸ್ಯೆಯು ತುಂಬಾ ಹೆಚ್ಚಾಗಿರುವುದು ಎಂದು ಅಧ್ಯಯನಗಳು ಇದೇ ವೇಳೆ ಕಂಡುಕೊಂಡಿದೆ. ಕಾಫಿಯ ಮಿತಪ್ರಮಾಣದ ನಿಯಮಿತ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗಿ ಹೃದಯ ಸ್ತಂಭನವಾಗುವ ಸಂಭವತೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ದಿನಕ್ಕೊಂದು ಕಪ್ ಕಾಫಿ ಮತ್ತು ನಾಲ್ಕು ಕಪ್ ಹಸಿರು ಟೀ ಸೇವನೆಯಿಂದ ಹೃದಯಾಘಾತದ ಸಂಭವತೆ 20% ಕಡಿಮೆಯಾಗಿದೆ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ.

ಇದರಲ್ಲಿ ವಿವಿಧ ಖನಿಜಗಳು ಮತ್ತು ಪೋಷಕಾಂಶಗಳಿವೆ

ಇದರಲ್ಲಿ ವಿವಿಧ ಖನಿಜಗಳು ಮತ್ತು ಪೋಷಕಾಂಶಗಳಿವೆ

ಕಾಫಿಯಲ್ಲಿ ವಿವಿಧ ಖನಿಜಗಳು ಮತ್ತು ಪೋಷಕಾಂಶಗಳಿವೆ, ಇದರಲ್ಲಿ ಪೊಟ್ಯಾಶಿಯಂ, ಮ್ಯಾಂಗನೀಸ್, ಪ್ಯಾಂಟೋಥೆನಿಕ್ ಆಮ್ಲ, ನಿಯಾಸಿನ್, ಮೆಗ್ನೀಶಿಯಂ ಮತ್ತು ರೈಬೋಫ್ಲೇವಿನ್ ಮೊದಲಾದ ಪೋಷಕಾಂಶಗಳು ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸಲು ನೆರವಾಗುತ್ತವೆ. ಒಂದು ಅಧ್ಯಯನದ ಪ್ರಕಾರ ವ್ಯಾಯಾಮದ ನಂತರ ಕಾಫಿ ಸೇವಿಸುವುದು ಕೆಟ್ಟದ್ದೇನಲ್ಲ. ಇದರಿಂದ ನೀವು ವ್ಯಾಯಾಮ ಮಾಡಿದ ನಂತರ ಸುಸ್ತಾದ ದೇಹಕ್ಕೆ ಲವಲವಿಕೆಯನ್ನು ನೀಡಬಹುದಂತೆ.

English summary

Two cups of coffee a day Improve Your Sex Life!

A cup of coffee could do much more than enhance your day or help you in the ... this hard to believe, well, coffee has also been proven to enhance sexual intimacy
Story first published: Monday, January 28, 2019, 15:15 [IST]
X
Desktop Bottom Promotion