For Quick Alerts
ALLOW NOTIFICATIONS  
For Daily Alerts

ಮಲೇರಿಯಾ ರೋಗ ನಿಯಂತ್ರಿಸುವ ಆಯುರ್ವೇದ ಮನೆಮದ್ದುಗಳು

|

ಮಲೇರಿಯಾ ಅನ್ನುವುದು ಇಂದು ವಿಶ್ವದೆಲ್ಲೆಡೆಯಲ್ಲಿ ತುಂಬಾ ವೇಗವಾಗಿ ಹರಡುತ್ತಿರುವಂತಹ ಕಾಯಿಲೆಯಾಗಿದೆ. ಇದು ಪ್ರಾಣಹಾನಿ ಕೂಡ ಉಂಟು ಮಾಡುವುದು. ಮಲೇರಿಯಾ ಸೋಂಕು ಸೂಕ್ಷ್ಮಾಣುಜೀವಿಯಾಗಿರುವಂತಹ ಪ್ಲಾಸ್ಮೋಡಿಯಮ್ ಗುಂಪಿಗೆ ಸೇರಿದ ಪರಾವಲಂಬಿ ಪ್ರೊಟೊಜೊವಾನ್ ನಿಂದ ಬರುವುದು. ಸೊಳ್ಳೆಗಳು ಕಚ್ಚುವುದರಿಂದಾಗಿ ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು. 1990ರಿಂದ ಇಲ್ಲಿಯವರೆಗೆ ಭಾರತದಲ್ಲಿ ಒಟ್ಟು 1.5 ರಿಂದ 2.6 ಮಿಲಿಯನ್ ಜನರಲ್ಲಿ ಮಲೇರಿಯಾ ಸೋಂಕು ಕಾಣಿಸಿಕೊಂಡಿದೆ.

ಇದು ಪ್ರಾಣಹಾನಿ ಉಂಟು ಮಾಡುವ ಜ್ವರ ಎಂದು ಪರಿಗಣಿಸಲ್ಪಟ್ಟಿದ್ದರೂ ಸರಿಯಾದ ಔಷಧಿಯಿಂದ ಇದನ್ನು ನಿವಾರಣೆ ಮಾಡಬಹುದು. ಮಲೇರಿಯಾದಿಂದ ಬಳಲುತ್ತಾ ಇರುವವರಿಗೆ ಆಯುರ್ವೇದದಲ್ಲಿ ಕೆಲವೊಂದು ಚಿಕಿತ್ಸೆಗಳು ಇವೆ. ಇಂದಿನ ದಿನಗಳಲ್ಲಿ ಸಿಗುವಂತಹ ಮಲೇರಿಯಾದ ವಿರೋಧಿ ಔಷಧಿಗಳು ತುಂಬಾ ದುಬಾರಿಯಾಗಿದೆ ಮತ್ತು ಇದು ಗ್ರಾಮೀಣ ಭಾಗದ ಜನರ ಕೈಗೆಟಕುವಂತೆ ಇಲ್ಲ. ಮಲೇರಿಯಾದ ರೋಗಿಗಳು ಯಾವುದೇ ಔಷಧಿಗಳಿಗೆ ಸ್ಪಂದಿಸದೆ ಇರುವುದು ಮತ್ತು ಅದು ಗ್ರಾಮೀಣ ಭಾಗಗಳಿಗೆ ಈ ಔಷಧಿಯು ತಲುಪದೆ ಇರುವ ಪರಿಣಾಮವಾಗಿ ಹಲವಾರು ಮಂದಿ ಮಲೇರಿಯಾದಿಂದ ಜೀವ ಕಳೆದುಕೊಂಡಿದ್ದಾರೆ. ಆದರೆ ಆಯುರ್ವೇದದಲ್ಲಿ ಕೆಲವೊಂದು ಔಷಧಿಗಳು ಮಲೇರಿಯಾ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ. ಮಲೇರಿಯಾದ ಲಕ್ಷಣಗಳು

ಮಲೇರಿಯಾದ ಕೆಲವೊಂದು ಸಾಮಾನ್ಯ ಲಕ್ಷಣಗಳು ಮತ್ತು ಚಿಹ್ನೆಗಳು

ಮಲೇರಿಯಾದ ಕೆಲವೊಂದು ಸಾಮಾನ್ಯ ಲಕ್ಷಣಗಳು ಮತ್ತು ಚಿಹ್ನೆಗಳು

•ಚಳಿಯೊಂದಿಗೆ ತೀವ್ರ ಜ್ವರ

•ಬೆವರುವುದು

•ರಕ್ತಹೀನತೆ

•ತಲೆನೋವು

•ವಾಂತಿ

•ವಾಕರಿಕೆ

•ಮಲದಲ್ಲಿ ರಕ್ತ

•ಹೊಟ್ಟೆ ನೋವು

•ಸ್ನಾಯುಗಳ ನೋವು

•ಕಾಮಾಲೆ

•ಉಸಿರಾಟದ ತೊಂದರೆ

•ಗಂಭೀರ ಸಮಸ್ಯೆಗಳಲ್ಲಿ ಬದಲಾವಣೆ ಕಂಡುಬರಬಹುದು.

•ಗುಲ್ಮ ಹಿಗ್ಗುವಿಕೆ

Most Read: ಮಲೇರಿಯಾ ರೋಗ ಗುಣಪಡಿಸುವ ಪವರ್‌ಫುಲ್ ಮನೆಮದ್ದು

ಮಲೇರಿಯಾಗೆ ಕೆಲವೊಂದು ಆಯುರ್ವೇದ ಚಿಕಿತ್ಸೆಗಳು

ಮಲೇರಿಯಾಗೆ ಕೆಲವೊಂದು ಆಯುರ್ವೇದ ಚಿಕಿತ್ಸೆಗಳು

ಮಲೇರಿಯಾದ ಲಕ್ಷಣಗಳು ಇರುವಂತಹ ವ್ಯಕ್ತಿಗೆ ಕೆಲವೊಂದು ನೈಸರ್ಗಿಕ ಔಷಧಿಗಳನ್ನು ಆಯುರ್ವೇದ ತಜ್ಞರು ಸೂಚಿಸುವರು. ಈ ಚಿಕಿತ್ಸೆಯಿಂದಾಗಿ ರೋಗಿಯು ತುಂಬಾ ದುರ್ಬಲತೆಯಿಂದ ಮೇಲೇಳಲು ನೆರವಾಗುವುದು. ಆಯುರ್ವೇದದಲ್ಲಿ ಮಲೇರಿಯಾಗೆ ಚಿಕಿತ್ಸೆ ನೀಡಲು ಬಳಸುವಂತಹ ಕೆಲವೊಂದು ಗಿಡಮೂಲಿಕೆಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

ಸಪ್ತಪರ್ಣದ ತೊಗಟೆ

ಸಪ್ತಪರ್ಣದ ತೊಗಟೆ

ಸಪ್ತಪರ್ಣವೆನ್ನುವುದು ಉಷ್ಣವಲಯದಲ್ಲಿ ಕಾಣಿಸಿಕೊಳ್ಳುವ ಮರವಾಗಿದ್ದು, ಇದನ್ನು ಹಲವಾರು ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಲಾಗುತ್ತದೆ. ಇದನ್ನು ಆಯುರ್ವೇದದಲ್ಲಿ ವಿವಿಧ ರೀತಿಯಿಂದ ಬಳಕೆ ಮಾಡಿಕೊಲ್ಳುವರು. ಅದರಲ್ಲೂ ಮುಖ್ಯವಾಗಿ ಇದು ಮಲೇರಿಯಾ, ಇನ್ಫ್ಲುಯೆನ್ಸ್, ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾಗೆ ಇದು ತುಂಬಾ ಪರಿಣಾಮಕಾರಿ. ಇದರ ತೊಗಟೆ ಮತ್ತು ಎಲೆಗಳಲ್ಲಿ ಇರುವಂತಹ ಆಲ್ಕಲಾಯ್ಡ್ ಗಳು ಚಿಕಿತ್ಸಕ ಗುಣವನ್ನು ಹೊಂದಿದೆ. ಮಲೇರಿಯಾಗೆ ಚಿಕಿತ್ಸೆ ನೀಡಲು ಇದರ ತೊಗಟೆಯ ಕಷಾಯ ಮಾಡಿಕೊಂಡು ಕುಡಿಯಬೇಕು. ಇದನ್ನು ನಿಯಮಿತವಾಗಿ ಕುಡಿದರೆ ಮಲೇರಿಯಾ ಮಾಯವಾಗುವುದು.

ಹರ್ತಕಿ

ಹರ್ತಕಿ

ಈ ಗಿಡಮೂಲಿಕೆಯು ಹಿಮಾಲಯದಲ್ಲಿ ಬೆಳೆಯುತ್ತದೆ. ಇದರಲ್ಲಿ ಇರುವಂತಹ ಚಿಕಿತ್ಸಕ ಗುಣವು ಪರಾವಲಂಬಿ ಜೀವಿಗಳು ಬೆಳೆಯದಂತೆ ತಡೆಯುವುದು. ಮಲೇರಿಯಾದಿಂದ ಬಳಲುತ್ತಿರುವ ವೇಳೆ ಮೂರು ಗ್ರಾಂನಷ್ಟು ಹರ್ತಕಿ ಹುಡಿಯನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿಕೊಂಡು ನಿಯಮಿತವಾಗಿ ಕುಡಿಯಬೇಕು.

ಕೊತ್ತಂಬರಿ ನೀರು

ಕೊತ್ತಂಬರಿ ನೀರು

ಮಲೇರಿಯಾದಲ್ಲಿ ಯಾವಾಗಲೂ ತೀವ್ರ ಜ್ವರವು ಕಂಡುಬರುವುದು ಮತ್ತು ಕೊತ್ತಂಬರಿ ನೀರು ಇದನ್ನು ನಿವಾರಣೆ ಮಾಡಲು ಪರಿಣಾಮಕಾರಿ. ಕೊತ್ತಂಬರಿಯಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣಗಳು ದೇಹದಲ್ಲಿರುವ ಉಷ್ಣತೆ ಕಡಿಮೆ ಮಾಡುವುದು. ಇದು ದೇಹದ ತಾಪಮಾನ ಕಡಿಮೆ ಮಾಡುವುದು. 500 ಮಿ.ಲೀ. ನೀರಿನಲ್ಲಿ ಕೊತ್ತಂಬರಿಯನ್ನು ಬಿಸಿ ಮಾಡಿಕೊಳ್ಳಿ. ಇದನ್ನು ಸೋಸಿಕೊಂಡು ದಿನಕ್ಕೆ ಒಂದು ಸಲ ಕುಡಿಯಿರಿ.

Most Read: ಮಲೇರಿಯಾ ರೋಗ: ಮುನ್ನೆಚ್ಚರಿಕೆ ಕ್ರಮಕ್ಕೆ ಮೊದಲ ಆದ್ಯತೆ ನೀಡಿ...

ಗಿಲೋಯ್

ಗಿಲೋಯ್

ಆಂಟಿಆಕ್ಸಿಡೆಂಟ್ ಗಳಿಂದ ತುಂಬಿರುವಂತಹ ಆಯುರ್ವೇದದ ಗಿಡಮೂಲಿಕೆ ಇದಾಗಿದೆ. ಇದು ಜ್ವರನಿವಾರಕ ಮತ್ತು ಪ್ರತಿರಕ್ಷಣ ವ್ಯವಸ್ಥೆ ಬಲಪಡಿಸುವುದು. ಇದರಿಂದ ದೇಹವು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡಲು ನೆರವಾಗುವುದು. ಗಿಲೋಯ್ ಜ್ಯೂಸ್ ನ್ನು 5-10 ಮಿ.ಲೀ.ನಷ್ಟು ಪ್ರತಿನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ರಕ್ತಕಣಗಳು ಹೆಚ್ಚಾಗುವುದು ಮತ್ತು ಮಲೇರಿಯಾ ವಿರುದ್ಧ ಹೋರಾಡಲು ನೆರವಾಗುವುದು. ಇದು ಹಿಮೋಗ್ಲೊಬಿನ್ ಹೆಚ್ಚು ಮಾಡುವುದು ಮತ್ತು ಸೋಂಕಿನ ವಿರುದ್ಧ ದೇಹಕ್ಕೆ ಹೋರಾಡಲು ಶಕ್ತಿ ನೀಡುವುದು.

ಶುಂಠಿ ಹುಡಿ

ಶುಂಠಿ ಹುಡಿ

ಮಲೇರಿಯಾ ನಿವಾರಣೆ ಮಾಡಲು ಒಣಶುಂಠಿ ಹುಡಿಯು ತುಂಬಾ ಪರಿಣಾಮಕಾರಿ ಎಂದು ನಂಬಲಾಗಿದೆ. ಇದರಲ್ಲಿ ಇರುವಂತಹ ಹೈಡ್ರೋಕಾರ್ಬನ್ ಮತ್ತು ಜಿಂಜರಾಲ್ ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಎರಡು ಅಂಶಗಳು ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚು ಮಾಡುವುದು ಮತ್ತು ಜ್ವರದ ವಿರುದ್ಧ ಹೋರಾಡಲು ರೋಗಿಗೆ ಶಕ್ತಿ ನೀಡುವುದು.

ತುಳಸಿ

ತುಳಸಿ

ಮಲೇರಿಯಾ ನಿವಾರಣೆ ಮಾಡಲು ಪ್ರತಿನಿತ್ಯವು ಕೆಲವು ತುಳಸಿ ಎಲೆಗಳನ್ನು ಸೇವನೆ ಮಾಡಬೇಕು. ಸುಮಾರು 11 ಗ್ರಾಂನಷ್ಟು ತುಳಸಿ ಎಲೆಗಳಿಂದ ತೆಗೆಯುವಂತಹ ರಸವನ್ನು ಮೂರು ಗ್ರಾಂನಷ್ಟು ಕರಿಮೆಣಸಿನ ಹುಡಿ ಜತೆಗೆ ಬೆರೆಸಿಕೊಂಡು ಕುಡಿದರೆ ಮಲೇರಿಯಾದಿಂದ ಬಾಧಿಸುವಂತಹ ಚಳಿ ಕಡಿಮೆ ಆಗುವುದು. ಇದರಿಂದ ಮಲೇರಿಯಾದ ತೀವ್ರತೆ ಕೂಡ ಕಡಿಮೆ ಮಾಡಬಹುದು.

ಚಿರಾಹ್ತಾ

ಚಿರಾಹ್ತಾ

ಮಲೇರಿಯಾ ಜ್ವರವು ಬಿಟ್ಟು ಬಿಟ್ಟು ಬರುವುದನ್ನು ನಿವಾರಣೆ ಮಾಡಲು ಚಿರಾಹ್ತಾವು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದು ದೇಹದ ತಾಪಮಾಣ ಕಡಿಮೆ ಮಾಡಲು ನೆರವಾಗುವುದು. ಈ ಗಿಡಮೂಲಿಕೆ ಬಳಕೆ ಮಾಡಲು 15 ಗ್ರಾಂನಷ್ಟು ಚಿರಾಹ್ತಾವನ್ನು 250 ಮಿ.ಲೀ. ಬಿಸಿ ನೀರಿಗೆ ಬೆರೆಸಿ ಸೇವಿಸಬೇಕು. ದಾಲ್ಚಿನಿ ಮತ್ತು ಲವಂಗ ಸೇರಿಸಿ ಕುಡಿಯಬಹುದು.

Most Read: ಮಲೇರಿಯಾ ರೋಗ ನಿಯಂತ್ರಣಕ್ಕೆ ಸೂಕ್ತ ಸಲಹೆಗಳು

ಬ್ರಾಹ್ಮಿ

ಬ್ರಾಹ್ಮಿ

ಮಲೇರಿಯಾದ ಲಕ್ಷಣಗಳನ್ನು ನಿವಾರಣೆ ಮಾಡುವಲ್ಲಿ ಬ್ರಾಹ್ಮಿ ಕೂಡ ತುಂಬಾ ಪರಿಣಾಮಕಾರಿ ಆಗಿದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಇದು ಮಲೇರಿಯಾದ ಲಕ್ಷಣವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಇದರಲ್ಲಿ ಅತ್ಯಧಿಕ ಮಟ್ಟದ ಆಂಟಿಆಕ್ಸಿಡೆಂಟ್ ಮತ್ತು ಚಿಕಿತ್ಸಕ ಗುಣವು ಇದೆ.

ಆಯುರ್ವೇದದ ಮೂಲಕ ಮಲೇರಿಯಾ ನಿವಾರಣೆ

ಆಯುರ್ವೇದದ ಮೂಲಕ ಮಲೇರಿಯಾ ನಿವಾರಣೆ

•ತುಂಬಾ ಲಘು ಮತ್ತು ಬೇಗನೆ ಕರಗುವಂತಹ ಆಹಾರವಾಗಿರುವ ಕಿಚಡಿ, ಸೂಪ್, ಹದವಾಗಿ ಬೇಯಿಸಿದ ಅನ್ನ ಇತ್ಯಾದಿ ಸೇವಿಸಿ.

•ಗುಡುಚಿ, ಸುದರ್ಶನ್ ಚೂರ್ಣ, ಅಮೃತಾರಿಸ್ಟಾ, ಶಂದಗಡಿ ಚೂರ್ಣ ಮತ್ತು ತ್ರಿಭುವನ ಕೇರಿ ರಸವನ್ನು ಸೇವಿಸಿದರೆ ಪರಿಣಾಮಕಾರಿ.

•ಉಪ್ಪಿನಕಾಯಿ, ಖಾರದ ಆಹಾರ, ಕಾಫಿ, ಚಾ, ಕಾರ್ಬೊನೇಟೆಡ್ ಪಾನೀಯ, ಆಲ್ಕೋಹಾಲ್ ತ್ಯಜಿಸಿ.

•ಉಗುರುಬೆಚ್ಚಗಿನ ನೀರು ಕುಡಿಯುವ ಮೂಲಕ ದೇಹವನ್ನು ಯಾವಾಗಲೂ ತೇವಾಂಶದಿಂದ ಇಟ್ಟುಕೊಳ್ಳಿ.

•ಬಿಸಿ ನೀರು ಕುಡಿದರೆ ಆಗ ಕರುಳಿನ ಚಲನೆಗಳು ಯಾವಾಗಲೂ ಸರಾಗವಾಗಿ ಆಗುವುದು.

•ಜ್ವರ ಕಡಿಮೆ ಮಾಡಲು ತಂಪಾದ ಶಾಖ ನೀಡಿ.

•ಬಿಸಿ ನೀರಿನ ಬಾಟಲಿಗಳನ್ನು ಪಾದ ಮತ್ತು ದೇಹದ ಬದಿಗೆ ಇಟ್ಟುಕೊಳ್ಳಬಹುದು.

ಮಲೇರಿಯಾ ತಡೆಯಲು ಕೆಲವು ಸಲಹೆಗಳು

•ದಿನದಲ್ಲಿ ಒಂದು ಸಲ ನೀವು ಜೇನುತುಪ್ಪದ ಜತೆಗೆ ತುಳಸಿ ರಸ ಕುಡಿಯಿರಿ.

•ಬೇವು, ಅರಶಿನ ಮತ್ತು ಗುಗ್ಗುಲುನಿಂದ ಮನೆಗೆ ಹೊಗೆಯಾಡಿಸಿ.

•ಮಲಗುವ ವೇಳೆ ಸೊಳ್ಳೆ ಪರದೆ ಬಳಸಿಕೊಳ್ಳಿ.

•ರಾತ್ರಿ ವೇಳೆ ತಿರುಗಾಡಬೇಡಿ.

•ತುಳಸಿ ಗಿಡಗಳನ್ನು ಮನೆಯ ಸುತ್ತಲು ಬೆಳೆಸಿ. ಇದರಿಂದ ಸೊಳ್ಳೆಗಳು ದೂರವಾಗುವುದು.

•ರಾತ್ರಿಯಾದ ಬಳಿಕ ಹೊರಗಡೆ ಹೋಗಲು ಇದ್ದರೆ ಆಗ ಸಂಪೂರ್ಣ ಮೈಮುಚ್ಚುವಂತಹ ಬಟ್ಟೆ ಧರಿಸಿ.

•ಚರಂಡಿ ನೀರು, ಕಸ ಮತ್ತು ಇತ್ಯಾದಿಗಳಲ್ಲಿ ಯಾವಾಗಲೂ ಸೊಳ್ಳೆ ಬೆಳೆಯದಂತೆ ನೋಡಿಕೊಳ್ಳಿ.

ಈ ಎಲ್ಲಾ ಕ್ರಮಗಳು ಹಾಗೂ ಚಿಕಿತ್ಸೆ ಬಳಸಿಕೊಂಡರೆ ಮಲೇರಿಯಾವನ್ನು ದೂರ ಮಾಡಬಹುದು.

English summary

Ayurvedic Remedies For Malaria

Malaria is one of the most widespread diseases in the world. It is an infectious disease caused by a group of single-celled microorganisms called parasitic protozoans belonging to the Plasmodium type. This deadly illness spreads through mosquito bites. From 1990s to date, the reported malaria incidence in India has been around 1.5 to 2.6 million cases per year
Story first published: Tuesday, May 7, 2019, 16:55 [IST]
X
Desktop Bottom Promotion