For Quick Alerts
ALLOW NOTIFICATIONS  
For Daily Alerts

ಮಾವಿನ ಎಲೆಗಳ ಆರು ಅದ್ಭುತವಾದ ಆರೋಗ್ಯಕರ ಪ್ರಯೋಜನಗಳು

|

ಬೇಸಿಗೆಯಲ್ಲಿ ಲಭಿಸುವ ಹಣ್ಣುಗಳ ರಾಜ ಮಾವಿನಹಣ್ಣು ಕೇವಲ ರುಚಿಕರ ಮಾತ್ರವಲ್ಲ ಆರೋಗ್ಯಕರವೂ ಹೌದು. ಈ ಹಣ್ಣಿನಲ್ಲಿ ವಿವಿಧ ಖನಿಜಗಳು ಮತ್ತು ವಿಟಮಿನ್ನುಗಳಿದ್ದು ಆರೋಗ್ಯವನ್ನು ವೃದ್ದಿಸುವ ಜೊತೆಗೇ ಕೆಲವಾರು ತೊಂದರೆಗಳನ್ನು ಗುಣಪಡಿಸಲೂ ನೆರವಾಗುತ್ತದೆ. ಹಣ್ಣಿನಂತೆಯೇ ಮಾವಿನ ಎಲೆಗಳಲ್ಲಿಯೂ ಪ್ರಬಲ ಔಷಧೀಯ ಗುಣಗಳಿದ್ದು ಪೂರ್ವಾರ್ಧ ಗೋಳದ ಹಲವಾರು ದೇಶಗಳಲ್ಲಿ ಔಷಧಿಯ ರೂಪದಲ್ಲಿ ಬಳಸಲಾಗುತ್ತದೆ. ಮಾವಿನ ಎಲೆಗಳಲ್ಲಿ ವಿಟಮಿನ್ ಎ, ಬಿ, ಸಿ, ಫೆನಾಲ್ , ಫ್ಲೇವನಾಯ್ಡುಗಳ ಸಹಿತ ಆಂಟಿ ಆಕ್ಸಿಡೆಂಟ್ ಗುಣಗಳೂ ಇವೆ. ಮಾವಿನ ಎಲೆ ಚಿಗುರಾಗಿದ್ದಾಗ ಹಸಿರು ಬಣ್ಣದಲ್ಲಿಲ್ಲದೇ ನಸು ನೇರಳೆ ಬಣ್ಣದಲ್ಲಿದ್ದು ದೊಡ್ಡ ಗಾತ್ರ ಪಡೆಯುವವರೆಗೆ ಕೆಂಪು ಮಿಶ್ರಿತ ಕಂದು ಅಥವಾ ನೇರಳೆ ಬಣ್ಣದಲ್ಲಿರುತ್ತವೆ. ಕೋಮಲವಾದ ಎಳೆಯ ಎಲೆಗಳು ದೊಡ್ಡ ಗಾತ್ರವನ್ನು ಪೂರ್ಣವಾಗಿ ಪಡೆದ ಬಳಿಕವೇ ದಟ್ಟ ಹಸಿರು ಬಣ್ಣ ಪಡೆದು ಹೆಚ್ಚು ದೃಢವಾಗುತ್ತವೆ. ಏಷ್ಯಾದ ಆಗ್ನೇಯ ಭಾಗದಲ್ಲಿ ಮಾವಿನ ಎಲೆಗಳನ್ನು ಬೇಯಿಸಿ ಆಹಾರದ ರೂಪದಲ್ಲಿ ಸೇವಿಸಲಾಗುತ್ತದೆ.

ಮಾವಿನ ಎಲೆಗಳ ಆರೋಗ್ಯಕರ ಪ್ರಯೋಜನಗಳು:

1. ಟೈಪ್ 2 ಮಧುಮೇಹವನ್ನು ನಿಯಂತ್ರಿಸುತ್ತದೆ:

ಈ ಎಲೆಗಳಲ್ಲಿರುವ ಅಂಥೂಸೈಯಾನಿಡಿನ್ ಎಂಬ ಟ್ಯಾನಿನ್ ಗಳು ಮಧುಮೇಹವನ್ನು ನಿಯಂತ್ರಿಸುವ ಗುಣವನ್ನು ಪಡೆದಿವೆ. ಈ ಪೋಷಕಾಂಶವನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಮಧುಮೇಹದ ಚಿಕಿತ್ಸೆ ಹೆಚ್ಚು ಫಲಕಾರಿಯಾಗಿರುತ್ತದೆ. ಇದಕ್ಕಾಗಿ ಮಾವಿನ ಎಲೆಗಳನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಪುಡಿಮಾಡಿ ಈ ಪುಡಿಯನ್ನು ಕುದಿಸಿದ ಟೀ ಕುಡಿಯಬಹುದು.

2. ಮೆದುಳಿನ ಕ್ಷಮತೆ ಹೆಚ್ಚುತ್ತದೆ

ಟೈಪ್ 2 ಮಧುಮೇಹಿಗಳಲ್ಲಿ ಮೆದುಳಿಗೆ ಬಾಧಿಸುವ ಆಲ್ಜೀಮರ್ಸ್ ಕಾಯಿಲೆ ಹಾಗೂ ವ್ಯಾಸ್ಕುಲರ್ ಡಿಮೆನ್ಶಿಯಾ ಎಂಬ ಮರೆಗುಳಿತನಕ್ಕೆ ಸಂಬಂಧಿಸಿದ ಕಾಯಿಲೆ ಆವರಿಸುವ ಸಾಧ್ಯತೆ ಹೆಚ್ಚು. ಅಲ್ಲದೇ ಮರೆಗುಳಿತನಕ್ಕೆ ಅತಿ ಸಾಮಾನ್ಯ ಕಾರಣವೇ ಮಧುಮೇಹವಾಗಿದೆ. ಬ್ರೈನ್ ಪಾಥೋಲಜಿ ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಮಾವಿನ ಎಲೆಗಳಿಂದ ಪ್ರತ್ಯೇಕಿಸಲ್ಪಟ್ಟ ಪೋಷಕಾಂಶಗಳು ಟೈಪ್ 2 ಮಧುಮೇಹಿಗಳಲ್ಲಿ ಕೇಂದ್ರ ನರವ್ಯವಸ್ಥೆಯನ್ನು ಉತ್ತಮಗೊಳಿಸಿ ಮೆದುಳಿನ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ.

3. ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ:

Egyptian Journal of Hospital Medicine ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಮಾವಿನ ಎಲೆಗಳಲ್ಲಿ ಅಧಿಕ ರಕ್ತದೊತ್ತಡ ಕಡಿಮೆಗೊಳಿಸುವ ಗುಣಗಳಿವೆ. ಮಾನಿವ ಎಲೆಗಳನ್ನು ಸೇವಿಸುವ ಮೂಲಕ ರಕ್ತನಾಳಗಳು ಬಲಗೊಳ್ಳುತ್ತವೆ ಹಾಗೂ ನರಗಳು ಗೋಜಲಾಗುವ ವೆರಿಕೋಸ್ ವೇಯ್ನ್ಸ್ ಎಂಬ ಕಾಯಿಲೆ ಆವರಿಸುವ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.

4. ಅಸ್ತಮಾ ರೋಗ ಗುಣಪಡಿಸುತ್ತದೆ:

ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಾದ ಅಸ್ತಮಾ ಹಾಗೂ ಬ್ರಾಂಕೈಟಿಸ್ ಮೊದಲಾದವುಗಳನ್ನು ಮಾವಿನ ಎಲೆಗಳ ನೆರವಿನಿಂದ ಗುಣಪಡಿಸಬಹುದು. ಈ ತೊಂದರೆಗಳಿಂದ ಬಾಧಿತರಾಗಿರುವ ರೋಗಿಗಳು ನಿತ್ಯವೂ ಕುದಿನೀರಿನಲ್ಲಿ ಕೆಲವು ಮಾವಿನ ಎಲೆಗಳನ್ನು ಕೊಂಚ ಕಾಲ ಹಾಕಿ ಸೋಸಿದ ನೀರಿಗೆ ಕೊಂಚ ಜೇನು ಬೆರೆಸಿ ಕುಡಿಯಬೇಕು.

5. ಅತಿಸಾರವನ್ನು ಗುಣಪಡಿಸುತ್ತದೆ.

ಮಾವಿನ ಎಲೆಗಳಲ್ಲಿ ಬ್ಯಾಕ್ಟೀರಿಯಾನಿವಾರಕ ಹಾಗೂ ಅತಿಸೂಕ್ಷ್ಮಜೀವಿನಿವಾರಕ ಗುಣಗಳಿವೆ. ಈ ಗುಣಗಳು ಕಾಯಿಲೆಯುಂಟುಮಾಡುವ ಸ್ಟ್ರಾಫೈಲೋಕಾಕಸ್ ಔರಿಯಸ್ (Staphylococcus aureus) ಮತ್ತು ಸಾಲ್ಮೋನೆಲ್ಲಾ ಟೈಫೀಮೂರಿಯಮ್ (Salmonella typhimurium) ಎಂಬ ಬ್ಯಾಕ್ಟೀರಿಯಾಗಳಿಂದ ಎದುರಾದ ಕಾಯಿಲೆಗಳನ್ನು ಗುಣಪಡಿಸಲು ನೆರವಾಗುತ್ತವೆ. ಇದರಲ್ಲಿ Salmonella typhimurium ಮಾನವರಲ್ಲಿ ಬ್ಯಾಕ್ಟೀರಿಯಾದ ಸೋಂಕು ಉಂಟುಮಾಡಿದರೆ Staphylococcus aureus ಎಂಬುದು ರೋಗಕಾರಕವಾಗಿದ್ದು ರೋಗಿಯಲ್ಲಿ ಅತಿಸಾರವುಂಟುಮಾಡುತ್ತವೆ.

6. ಹೊಟ್ಟೆಯ ಆರೋಗ್ಯವನ್ನು ಉತ್ತಮಗೊಳಿಸುತ್ತದೆ:

ಮಾವಿನ ಎಲೆಗಳಲ್ಲಿ ಜಠರ ಮತ್ತು ಕರುಳಿನ ಆರೋಗ್ಯವನ್ನು ಬಲಪಡಿಸುವ ಗುಣಗಳಿವೆ ಹಾಗೂ ಈ ವ್ಯವಸ್ಥೆಗಳನ್ನು ಹಲವಾರು ತೊಂದರೆಗಳಿಂದ ರಕ್ಷಿಸುತ್ತವೆ. ಇದಕ್ಕಾಗಿ ಕೆಲವು ಮಾವಿನ ಎಲೆಗಳನ್ನು ಬಿಸಿನೀರಿನಲ್ಲಿ ಹಾಕಿ ಇಡಿಯ ರಾತ್ರಿ ನೆನೆಸಿಡಬೇಕು. ಮರುದಿನ ಬೆಳಿಗ್ಗೆ ಈ ನೀರನ್ನು ಸೋಸಿ ಪ್ರಥಮ ಆಹಾರವಾಗಿ ಸೇವಿಸಬೇಕು.

ಮಾವಿನ ಎಲೆಗಳ ಟೀ ತಯಾರಿಸುವ ವಿಧಾನ.

ಅಗತ್ಯವಿರುವ ಸಾಮಾಗ್ರಿಗಳು:

  • ಒಂದು ಲೀಟರ್ ನೀರು,
  • ಕೊಂಚ ಮಾವಿನ ಎಲೆಗಳು.

ವಿಧಾನ:

ಮಾವಿನ ಎಲೆಗಳನ್ನು ಚೆನ್ನಾಗಿ ತೊಳೆದು ಕೊಳೆ ಧೂಳುಗಳನ್ನುನಿವಾರಿಸಿ. ಈ ಎಲೆಗಳನ್ನು ಚೆನ್ನಾಗಿ ಜಜ್ಜಿ ನೀರಿನಲ್ಲಿ ಬೆರೆಸಿ. ಈ ನೀರನ್ನು ಬಿಸಿಮಾಡಿ ಕುದಿಯಲು ಆರಂಭವಾದ ಬಳಿಕ ಉರಿಯನ್ನು ಚಿಕ್ಕದಾಗಿಸಿ ಈ ನೀರು ಅರ್ಧದಷ್ಟಾಗುವವರೆಗೆ ಕುದಿಸಿ. ಬಳಿಕ ಈ ನೀರನ್ನು ಸೋಸಿ ಕೊಂಚ ಜೇನು ಬೆರೆಸಿ ಬಿಸಿಬಿಸಿಯಾಗಿಯೇ ಕುಡಿಯಿರಿ.

English summary

Astonishing Health Benefits Of Mango Leaves

Mango, the favourite summer fruit, is enjoyed for its taste and health benefits. The fruit is rich in vitamins and minerals and its leaves also possess healing and medicinal properties. Due to their immense medicinal properties, mango leaves have gained importance in Eastern medicine too. The leaves contain vitamin A, vitamin B, vitamin C, and antioxidants including phenols and flavonoids.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X