For Quick Alerts
ALLOW NOTIFICATIONS  
For Daily Alerts

ಅಶ್ವಗಂಧ: ನಿಮ್ಮ ಮೆದುಳಿಗೊಂದು ಇದೊಂದು ಅದ್ಭುತವಾದ ಮೂಲಿಕೆ

|

ಸಾವಿರಾರು ವರ್ಷಗಳಿಂದಲೂ ಅಶ್ವಗಂಧದ ಪ್ರಯೋಜನಗಳನ್ನು ನಮ್ಮ ಪೂರ್ವಜರು ಅರಿತಿದ್ದರು. ಆದರೆ ಇದು ಮೆದುಳನ್ನು ಆರೋಗ್ಯಕರವಾಗಿರಿಸುತ್ತದೆ ಎಂದು ಗೊತ್ತಿತ್ತೇ? ಹೌದು ಎನ್ನುತ್ತಾರೆ ಆಯುರ್ವೇದ ತಜ್ಞರು ಹಾಗೂ ಕೆಲವು ಅಧ್ಯಯನಗಳ ಸಂಶೋಧಕರು. ಅಶ್ವಗಂಧವೂ ತುಳಸಿಯಂತೆ ಹಲವು ಬಗೆಯ ಕಾಯಿಲೆಗಳಿಗೆ ಔಷಧಿಯ ರೂಪದಲ್ಲಿ ಬಳಕೆಯಾಗುತ್ತದೆ ಹಾಗೂ ಇದರಲ್ಲಿ ಅದ್ಭುತವಾದ ಗುಣಪಡಿಸುವ ಗುಣಗಳಿವೆ. ಭಾರತದ ಪುರಾತನ ಋಷಿ ಮುನಿಗಳಿಗೆ ಅಶ್ವಗಂಧದ ಮಹತ್ವದ ಬಗ್ಗೆ ತಿಳಿದಿತ್ತು ಹಾಗೂ ತಮ್ಮ ಮಾನಸಿಕ ಮತ್ತು ದೈಹಿಕ ತೊಂದರೆಗಳಿಗೆ ಸ್ವತಃ ಚಿಕಿತ್ಸೆ ನೀಡಲು ಅಶ್ವಗಂಧವನ್ನು ಬಳಸುತ್ತಿದ್ದರು.

ಭಾರತದ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನು ಪಡೆದಿರುವ ಈ ಅದ್ಭುತ ಮೂಲಿಕೆಯಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ಹಾಗೂ ನರವ್ಯವಸ್ಥೆಯ ತೊಂದರೆಗಳ ವಿರುದ್ದ ಹೋರಾಡುವ ಗುಣಗಳಿವೆ. ಅಲ್ಲದೇ ಅಂತಃಸ್ರಾವಕ (endocrine) ಮತ್ತು ಸಂತಾನೋತ್ಪತ್ತಿ ವ್ಯವಸ್ಥೆಗಳನ್ನು ಬಲಪಡಿಸಲೂ ನೆರವಾಗುತ್ತದೆ. ವಿಶೇಷವಾಗಿ ನರಗಳಿಗೆ ರಕ್ಷಣೆ ಒದಗಿಸುವ, ಉರಿಯೂತ ನಿವಾರಕ, ಉದ್ವೇಗ ನಿವಾರಕ ಹಾಗೂ ಖಿನ್ನತಾನಿವಾರಕ ಗುಣಗಳನ್ನು ಪಡೆದಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ದಿಸಲು ಈ ಮೂಲಿಕೆಯನ್ನು ಆಯುರ್ವೇದ ಅತಿ ಪ್ರಮುಖವಾಗಿ ಬಳಸುತ್ತಿದೆ ಹಾಗೂ ಈ ಮೂಲಕ ದೇಹಕ್ಕೆ ಪ್ರದೂಷಣೆಗಳ ಕಾರಣದಿಂದ ಎದುರಾಗುವ ಕಾಯಿಲೆಗಳ ವಿರುದ್ದ ಹೋರಾಡುತ್ತದೆ ಹಾಗೂ ವೃದ್ದಾಪ್ಯ ಆವರಿಸುವ ಗತಿಯನ್ನು ತಡವಾಗಿಸುತ್ತದೆ.

Ashwagandha

ಅಶ್ವಗಂಧ ನಮ್ಮ ಮೆದುಳಿಗೆ ಹೇಗೆ ಪ್ರಯೋಜನಕಾರಿಯಾಗಿದೆ?
ಅಶ್ವಗಂಧದ ಗುಣಪಡಿಸುವ ಹಾಗೂ ಔಷಧೀಯ ಗುಣಗಳ ಬಗ್ಗೆ ಹಲವಾರು ಅಧ್ಯಯನಗಳನ್ನು ನಡೆಸಲಾಗಿದ್ದು ಇದರಲ್ಲಿ ಮೆದುಳಿನ ಮೇಲೆ ಈ ಮೂಲಿಕೆ ಉಂಟುಮಾಡುವ ಪ್ರಯೋಜನಗಳನ್ನು ಬಹಳವಾಗಿಯೇ ಕಂಡುಕೊಳ್ಳಲಾಗಿದೆ. ದೈಹಿಕ ಮತ್ತು ಮಾನಸಿಕ ಕ್ಷಮತೆಗಳನ್ನು ಹೆಚ್ಚಿಸುವ ಮೂಲಕ ಅಯಸ್ಸನ್ನು ಹೆಚ್ಚಿಸುವುದನ್ನು ಸಂಶೋಧನೆಗಳು ಸ್ಪಷ್ಟಪಡಿಸಿವೆ. ಅಲ್ಲದೇ ವಿಶೇಷವಾಗಿ ಈ ಮೂಲಿಕೆಯಲ್ಲಿ ನರವ್ಯವಸ್ಥೆಯನ್ನು ಕಾಪಾಡುವ ಗುಣವಿದೆ. ತಜ್ಞರ ಪ್ರಕಾರ ಈ ಗುಣದಿಂದಾಗಿ ಮೆದುಳಿಗೆ ಸಂಬಂಧಿಸಿದ ಕ್ಷಮತೆಗಳಾದ ಸ್ಮರಣಶಕ್ತಿಯನ್ನು ಹೆಚ್ಚಿಸುವುದು, ಪ್ರಾದೇಶಿಕ ಮತ್ತು ನೋಟಗಳನ್ನು ನೆನಪಿನಲ್ಲಿಡುವುದು, ಉತ್ಕರ್ಷಣಶೀಲ ಮೆದುಳಿನ ಒತ್ತಡದಿಂದ (oxidative brain stress) ರಕ್ಷಿಸುವುದು ಹಾಗೂ ನರಗಳ ಜೀವಕೋಶಗಳು ನಷ್ಟಹೊಂದುವುದನ್ನು ತಡೆಯುವುದು ಮೊದಲಾದ ಪ್ರಯೋಜನಗಳನ್ನು ಒದಗಿಸುತ್ತದೆ. ಇವೆಲ್ಲವೂ ನಮ್ಮ ಜೀವನಪರ್ಯಂತ ನಮ್ಮ ಮೆದುಳನ್ನು ಆರೋಗ್ಯಕರವಾಗಿರಿಸಿ ವಿಶೇಷವಾಗಿ ವಯಸ್ಸಿಗನುಗುಣವಾಗಿ ಆವರಿಸುವ ಮೆದುಳಿನ ತೊಂದರೆಗಳಿಂದ ರಕ್ಷಿಸುತ್ತದೆ.

ಅಶ್ವಗಂಧವನ್ನು ಮೆದುಳಿನ ಪ್ರಯೋಜನಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ. ಒಂದು ವೇಳೆ ನೀವು ಗರ್ಭವತಿಯಾಗಿದ್ದರೆ ಅಥವಾ ಮಾನಸಿಕ ರೋಗಕ್ಕಾಗಿ ಔಷಧಿಗಳನ್ನು ಸೇವಿಸುತ್ತಿದ್ದರೆ ನಿಮ್ಮ ವೈದ್ಯರಲ್ಲಿ ಸಮಾಲೋಚಿಸಿಯೇ ಈ ಮೂಲಿಕೆಯನ್ನು ನಿತ್ಯದ ಬಳಕೆಗಾಗಿ ಅಥವಾ ಹೆಚ್ಚುವರಿ ಬಳಕೆಯನ್ನು ಮುಂದುವರೆಸಿ.

ಉದ್ವೇಗವನ್ನು ಶಾಂತಗೊಳಿಸುತ್ತದೆ
ಅಶ್ವಗಂಧದಲ್ಲಿ ನಿರಾಳಗೊಳಿಸುವ, ವಿಶ್ರಾಂತ ಮತ್ತು ನಿದ್ರಾಜನಕ ಗುಣಗಳಿದ್ದು ಈ ಗುಣಗಳಿಂದಾಗಿಯೇ ಹಲವಾರು ಔಷಧಿಗಳಲ್ಲಿ ಇದರ ಬಳಕೆಯನ್ನು ಸಲಹೆ ಮಾಡಲಾಗುತ್ತದೆ. PLOS One ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಉದ್ವೇಗ ಎದುರಾದಾಗ ನರಗಳನ್ನು ಶಾಂತಗೊಳಿಸುವ ಗುಣವನ್ನು ಅಶ್ವಗಂಧ ಹೊಂದಿರುವುದನ್ನು ಸಂಶೋಧಕರು ಕಂಡುಕೊಂಡಿದ್ದು ಇದೊಂದು ಸುರಕ್ಷಿತ ಪ್ರಕೃತಿಚಿಕಿತ್ಸಕ ಔಷಧಿ ಎಂದು ವಿವರಿಸಿದ್ದಾರೆ.

ಒಂದು ವೇಳೆ ಅಶ್ವಗಂಧದಿಂದ ಪ್ರತ್ಯೇಕಿಸಲ್ಪಟ್ಟ ಹೆಚ್ಚಿನ ಸಾಂದ್ರತೆಯ ಔಷಧಿಯನ್ನು ಸತತವಾಗಿ ಐದು ದಿನಗಳವರೆಗೆ ಪಡೆದುಕೊಂಡರೆ ಇದರ ಪರಿಣಾಮ ಪ್ರಬಲ ಖಿನ್ನತಾನಿವಾರಕ ಔಷಧಿಯಾದ imipramine ಹಾಗೂ ನಿದ್ರಾಜನಕ ಔಷಧಿಯಾದ lorazepam ನಷ್ಟೇ ಪರಿಣಾಮಕಾರಿಯಾಗಿರುತ್ತದೆ. ಉದ್ವೇಗಕ್ಕೆ ಕಾರಣವಾದ ಮಾನಸಿಕ ಒತ್ತಡವನ್ನು ನಿವಾರಿಸುವ ಮೂಲಕ ಉದ್ವೇಗದ ಮಟ್ಟವನ್ನು ಶೇಖಡಾ ಎಂಭತ್ತರಷ್ಟು ಕಡಿಮೆ ಮಾಡುತ್ತದೆ. ಹಾಗಾಗಿ ಮಾನಸಿಕ ಒತ್ತಡದಲ್ಲಿಯೇ ಕಾರ್ಯನಿರ್ವಹಿಸಬೇಕಾದ ವ್ಯಕ್ತಿಗಳಿಗೆ ಈ ಔಷಧಿ ಅತ್ಯುತ್ತಮ ಹೆಚ್ಚುವರಿ ಔಷಧಿಯಾಗಿದೆ. ಅಲ್ಲದೇ ಮೆದುಳಿನಲ್ಲಿರುವ, ಮಾನಸಿಕ ಒತ್ತಡಕ್ಕೆ ಕಾರಣವಾದ ಕಾರ್ಟೀಸೋಲ್ ಎಂಬ ರಸದೂತಗಳ ಮಟ್ಟಗಳನ್ನು ಸರಾಸರಿ ಇಪ್ಪತ್ತಾರು ಶೇಖಡಾದಷ್ಟು ತಗ್ಗಿಸುವ ಮೂಲಕವೂ ಒತ್ತಡವನ್ನು ನಿವಾರಿಸುತ್ತದೆ.

ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ
ಜಪಾನ್ ನ ತ್ಸುಕುಬಾ ವಿಶ್ವವಿದ್ಯಾಲಯದ ನಿದ್ರಾ ವಿದ್ಯಾಸಂಸ್ಥೆಯ ಪ್ರಕಾರ ಒಂದು ವೇಳೆ ನೀವು ಈ ಭಾರತೀಯ ಮೂಲಿಕೆಯನ್ನು ಪ್ರಯತ್ನಿಸಿದ್ದೇ ಆದರೆ ನಿಮ್ಮ ನಿದ್ದೆಗೆ ಸಂಬಂಧಿಸಿದ ತೊಂದರೆಗಳೆಲ್ಲವೂ ಮಾಯವಾಗುತ್ತವೆ. ಈ ಎಲೆಗಳಲ್ಲಿರುವ ಪೋಷಕಾಂಶಗಳಿಗೆ ನಿದ್ರಾರಾಹಿತ್ಯವನ್ನು ನಿವಾರಿಸುವ ಗುಣವಿದೆ ಎಂದು ಜಪಾನ್ ನಲ್ಲಿ ಕಂಡುಹಿಡಿಯಲಾಗಿದೆ. ಯಾವುದೇ ಅಡ್ಡ ಪರಿಣಾಮವಿಲ್ಲದೇ ಗಾಢನಿದ್ದೆಯನ್ನು ಬರಿಸುವ ಈ ಅದ್ಭುತ ಮೂಲಿಕೆಯನ್ನು ಹಲವಾರು ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ.

ನಿರಾಳತೆ ನೀಡುವ ನೈಸರ್ಗಿಕ ಔಷಧಿಯಾಗಿದೆ
ಮಾನಸಿಕ ಒತ್ತಡ ಮತ್ತು ಉದ್ವೇಗವನ್ನು ಕಡಿಮೆಗೊಳಿಸುವ ಅಶ್ವಗಂಧ ನೈಸರ್ಗಿಕ ನಿರಾಳತೆ ನೀಡುವ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ. PLOS One ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಈ ತೊಂದರೆಗಳಿಗೆ ಸಾಮಾನ್ಯವಾಗಿ ನೀಡಲಾಗುವ lorazepam ಮತ್ತು imipramine ಎಂಬ ಔಷಧಿಗಳ ಬದಲಿಗೆ ಅಶ್ವಗಂಧವನ್ನು ಸುರಕ್ಷಿತವಾಗಿ, ಯಾವುದೇ ಅಡ್ಡಪರಿಣಾಮವಿಲ್ಲದೇ ಬಳಸಬಹುದು. ಈ ಕಾರ್ಯವನ್ನು ಅಶ್ವಗಂಧ ಮೆದುಳಿನಲ್ಲಿರುವ ಕಾರ್ಟೀಸೋಲ್ ಎಂಬ ಒತ್ತಡಕಾರಕ ರಸದೂತದ ಸ್ರವಿಕೆಯನ್ನು ತಗ್ಗಿಸುವ ಮೂಲಕ ಸಾಧಿಸುತ್ತದೆ. ಅಲ್ಲದೇ ಅಶ್ವಗಂಧದ ಅದ್ಭುತ ಆಂಟಿ ಆಕ್ಸಿಡೆಂಟ್ ಗುಣಗಳೂ ಇದಕ್ಕೆ ನೆರವಾಗುತ್ತವೆ.

ಮಾನಸಿಕ ಒತ್ತಡವನ್ನು ನಿವಾರಿಸುವ ಅದ್ಭುತ ಮೂಲಿಕೆಯಾಗಿದೆ
ಮಾನಸಿಕ ಒತ್ತಡ ಮಾನಸಿಕ ಕಾರಣಗಳ ಜೊತೆಗೇ ಭಾವನಾತ್ಮಕ ಕಾರಣಗಳಿಂದಲೂ ಎದುರಾಗಬಹುದು. ತನ್ಮೂಲಕ ಕೆಲವಾರು ಆರೋಗ್ಯಗಳ ತೊಂದರೆಗೆ ಮೂಲವಾಗುತ್ತದೆ. ಮಾನಸಿಕ ಒತ್ತಡದ ನಿವಾರಣೆಗೆ ಕೆಲವಾರು ಔಷಧಿಗಳಿದ್ದು ಇವುಗಳಲ್ಲಿ ಅಶ್ವಗಂಧ ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿಯಾದ ಒತ್ತಡ ನಿವಾರಕವಾಗಿದೆ.

ಲಘು ಪ್ರಮಾಣದ ಒತ್ತಡ (Acute stress) ಹೃದಯದ ಬಡಿತದ ಗತಿಯನ್ನು ಹೆಚ್ಚಿಸಿ ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ. ತನ್ಮೂಲಕ ರಕ್ತದಲ್ಲಿ ಗ್ಲೂಕೋಸ್ ಮಟ್ಟದ ಏರಿಳಿತದ ಪರಿಣಾಮಗಳ ತೊಂದರೆಗಳಾದ gluconeogenesis, glycogenolysis, lipolysis ಮತ್ತು hepatic glucose secretion ಮೊದಲಾದ ತೊಂದರೆಗಳು ಎದುರಾಗಬಹುದು. ಅಂದರೆ ರಕ್ತದಲ್ಲಿ ಅತಿ ಹೆಚ್ಚು ಗ್ಲುಕೋಸ್ ಸ್ರವಿಕೆಯಿಂದ ದೇಹದಲ್ಲಿ ಕ್ಯಾಟೆಖೋಲಮೈನ್ಸ್ (catecholamines) ಮತ್ತು ಕಾರ್ಟಿಸೋಲ್ ನಂತಹ ರಸದೂತಗಳ ಮಟ್ಟ ಹೆಚ್ಚುತ್ತದೆ. ಅಶ್ವಗಂಧ ಈ ರಸದೂತಗಳ ಉತ್ಪಾದನೆಯನ್ನು ನಿಗ್ರಹಗೊಳಿಸಿ ಮೆದುಳಿನಲ್ಲಿ ಕಾರ್ಟಿಸೋಲ್ ಮಟ್ಟ ಇಳಿಸುವ ಮೂಲಕ ಒತ್ತಡವನ್ನು ನಿವಾರಿಸುತ್ತದೆ.

ಖಿನ್ನತೆಯನ್ನು ದೂರವಾಗಿಸುತ್ತದೆ
ಖಿನ್ನತೆಯನ್ನು ನಿವಾರಿಸಿ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಈ ಮೂಲಿಕೆ ನೆರವಾಗುತ್ತದೆ. ಈ ಬಗ್ಗೆ ನಡೆಸಿದ ಕೆಲವು ಅಧ್ಯಯನಗಳಲ್ಲಿ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಗಳಿಗೆ ಪ್ರಯೋಗಾಲಯದಲ್ಲಿಯೇ ಅಶ್ವಗಂಧವನ್ನು ನೀಡಿ ಮನೋಭಾವವನ್ನು ಗಮನಿಸಿದಾಗ ಇವರ ಮನೋಭಾವ ಉತ್ತಮಗೊಂಡಿರುವುದು ಕಂಡುಬಂದಿದೆ. ಎಷ್ಟೋ ದೈಹಿಕ ಕಾಯಿಲೆಗಳಿಗೆ ಮಾನಸಿಕ ಖಿನ್ನತೆ ಮೂಲವಾಗಿದೆ. ಜುಗುಪ್ಸೆ, ಯಾವುದೇ ಕಾರ್ಯದಲ್ಲಿ ಉತ್ಸಾಹವಿಲ್ಲದೇ ಇರುವುದು, ನಿದ್ರಾರಾಹಿತ್ಯ, ಸುಸ್ತು, ಆತ್ಮಹತ್ಯೆಯ ಚಿಂತನೆ ಮೊದಲಾದವುಗಳಿಗೆ ಖಿನ್ನತೆ ಪ್ರಮುಖ ಕಾರಣ. ಫೈಟೋಮೆಡಿಸಿನ್ ಎಂಬ ಮಾಧ್ಯಮದಲಿ ಪ್ರಕಟವಾದ ವರದಿಯ ಪ್ರಕಾರ, ಅಶ್ವಗಂಧದ ಬೇರಿನಲ್ಲಿ ಕಂಡುಬರುವ ಪೋಷಕಾಂಶದಲ್ಲಿ ಖಿನ್ನತಾನಿವಾರಕ ಗುಣವಿದೆ. ಭಾರತದ Journal of Physiology and Pharmacology ಎಂಬ ಮಾಧ್ಯಮದಲ್ಲಿ ವರದಿಯಾದ ಪ್ರಕಾರ ಅಶ್ವಗಂಧವನ್ನು ಕೆಲವು ಬಗೆಯ ಉದ್ವೇಗ ನಿವಾರಣೆಗೆ ನೀಡಲಾಗುವ diazepam ಎಂಬ ಔಷಧಿಗೆ ಬದಲಿಯಾಗಿ ಬಳಸಬಹುದಾಗಿದೆ.

ಮೆದುಳಿನ ಜೀವಕೋಶಗಳ ಸವೆತದಿಂದ ರಕ್ಷಿಸುತ್ತದೆ
ಭಾವನಾತ್ಮಕ, ದೈಹಿಕ ಮತ್ತು ರಾಸಾಯನಿಕ ಕಾರಣಗಳಿಂದ ಮೆದುಳಿಗೆ ಮತ್ತು ನರವ್ಯವಸ್ಥೆಗೆ ಅಪಾರವಾದ ಹಾನಿಯಾಗುತ್ತದೆ. ಆದರೆ ಅಶ್ವಗಂಧ ಈ ಹಾನಿಯನ್ನು ರಕ್ಷಿಸುವ ಗುಣವನ್ನು ಹೊಂದಿದೆ. ಹಾಗಾಗಿ, ಮೆದುಳಿನ ಜೀವಕೋಶಗಳು ನಷ್ಟವಾಗಿ ಆ ಸ್ಥಳದಲ್ಲಿ ಹೊಸ ಜೀವಕೋಶಗಳು ಹುಟ್ಟದೇ ಇರುವ ಕಾಯಿಲೆಗಳಾದ (neurodegenerative diseases) ಅಲ್ಜೀಮರ್ಸ್ ಕಾಯಿಲೆ, ಹಂಟಿಗ್ಟನ್ಸ್ ಮತ್ತು ಪಾರ್ಕಿನ್ಸನ್ಸ್ ಕಾಯಿಲೆ ಗಳ ವಿರುದ್ದ ರಕ್ಷಣೆ ಒದಗಿಸುತ್ತದೆ. ಅಶ್ವಗಂಧ ಮೆದುಳಿನ ಜೀವಕೋಶಗಳ ನಷ್ಟವಾಗುವಿಕೆಯನ್ನು ನಿಧಾನವಾಗಿಸಿ, ಕ್ರಮೇಣ ನಿಲ್ಲಿಸಿ ಹಾಗೂ ಬಳಿಕ ಹೊಸ ಜೀವಕೋಶಗಳು ಹುಟ್ಟುವಂತೆ ಮಾಡುತ್ತದೆ. ಈ ಕಾಯಿಲೆಗಳು ಆವರಿಸಲು ಕಾರಣವಾಗುವ ಸ್ಥಿತಿಗಳಾದ neuritic atrophy (ನರವ್ಯವಸ್ಥೆಯನ್ನು ಬಳಸಿಕೊಳ್ಳಲಾಗದೇ ಹೋಗುವ ಸ್ಥಿತಿ) ಮತ್ತು synaptic loss(ನರಗಳ ಸೂಚನೆ ಪಡೆದು ಅಂಗಗಳು ಕಾರ್ಯನಿರ್ವಹಿಸುವ ಕ್ಷಮತೆ ಇಲ್ಲವಾಗುವುದು) ಗಳ ವಿರುದ್ದ ಅಶ್ವಗಂಧ ರಕ್ಷಣೆ ಒದಗಿಸುತ್ತದೆ.

ಮಿಶಿಗನ್ ರಾಜ್ಯ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಅಶ್ವಗಂಧದ ಬೀಜಗಳಿಂದ ಪ್ರತ್ಯೇಕಿಸಲ್ಪಟ್ಟ withanamides ಎಂಬ ಪೋಷಕಾಂಶ ಅಲ್ಜೀಮರ್ಸ್ ಕಾಯಿಲೆಗೆ ಔಷಧಿಯನ್ನು ತಯಾರಿಸಲು ವಿಜ್ಞಾನಿಗಳಿಗೆ ನೆರವಾಗುತ್ತದೆ. ಈ ಪೋಷಕಾಂಶ ನರಗಳ ಸವೆತವನ್ನು ರಕ್ಷಿಸುವ ಗುಣ ಪಡೆದಿದೆ ಹಾಗೂ ಈ ಮೂಲಕ ಎದುರಾಗುವ ಕಾಯಿಲೆಗಳನ್ನೂ ತಡವಾಗಿಸುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. Phytotherapy Research ಎಂಬ ಮಾಧ್ಯಮವೂ ಈ ವರದಿಯನ್ನು ಪ್ರಕಟಿಸಿದೆ.

ಜಾಣ್ಮೆಯನ್ನು ಆಧರಿಸಿದ ಕ್ಷಮತೆಯನ್ನು ಹೆಚ್ಚಿಸುತ್ತದೆ
ಅಶ್ವಗಂಧದಲ್ಲಿರುವ withanamides ಎಂಬ ಪೋಷಕಾಂಶ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವ ಮೂಲಕ ಹೆಚ್ಚಿನ ಜಾಣತನ ಪಡೆಯಲು ನೆರವಾಗುತ್ತದೆ. ಇದು ಮೆದುಳಿನ ಜೀವಕೋಶಗಳ ಬೆಳವಣಿಗೆಗೆ ನೆರವಾಗುವ ನೈಸರ್ಗಿಕ ಪೋಷಕಾಂಶವಾಗಿದ್ದು ನಡವಳಿಕೆಯ ತೊಂದರೆ (behavioural deficits) ಗಳಿಂದ ರಕ್ಷಿಸುತ್ತದೆ ಮತ್ತು ಮೆದುಳಿನ ಭಾಗದಲ್ಲಿ ಜೀವಕೋಶಗಳಲ್ಲದೇ ಇರುವ ಜಿಡ್ಡು (Senile plaques) ನಿವಾರಣೆಗೊಳಿಸುತ್ತದೆ ಮತ್ತು ಅರಿವಿನ ಶಕ್ತಿಯನ್ನು ಕುಂದಿಸುವ amyloid beta burden ಎಂಬ ಸ್ಥಿತಿಯಿಂದ ಕಾಪಾಡುತ್ತದೆ.

Dietary Supplements ಎಂಬ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಅಶ್ವಗಂಧ ಸ್ಮರಣಶಕ್ತಿಯ ಕೊರತೆಯಿಂದ ಬಳಲುತ್ತಿರುವ ವ್ಯಕ್ತಿಗಳ ಸ್ಮರಣಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಹೆಚ್ಚು ಗಮನವಿರಿಸಲು, ಮಾಹಿತಿಗಳನ್ನು ಸಂಸ್ಕರಿಸಲು ಹಾಗೂ ಒಟ್ಟಾರೆ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಮೆದುಳಿನಲ್ಲಿರುವ ಅಸಿಟೈಲ್ ಕೋಲೈನ್ (acetylcholine) ಎಂಬ ರಾಸಾಯನಿಕ ಮಟ್ಟವನ್ನು ನಿಯಂತ್ರಿಸುವ ಮೂಲಕ ಮೆದುಳಿನ GABA (Gamma-Aminobutyric acid (GABA)ಎಂಬ ರಾಸಾಯನಿಕಗಳ ಮಟ್ಟವನ್ನೂ ಹೆಚ್ಚಿಸುತ್ತದೆ.

ಇದೊಂದು ನ್ಯೂರೋಟ್ರಾನ್ಸ್ ಮಿಟರ್ ಅಥವಾ ನರಸಂವೇದನೆಗಳನ್ನು ರವಾನಿಸುವ ರಾಸಾಯಕನಿವಾಗಿದ್ದು ನರವ್ಯವಸ್ಥೆಯನ್ನು ಶಾಂತಗೊಳಿಸುತ್ತದೆ. ಅಲ್ಲದೇ ಆಶ್ವಗಂಧ ರಕ್ತಪರಿಚಲನೆಯನ್ನು ಸುಗಮಗೊಳಿಸುವ ಮೂಲಕ ನೈಟ್ರಿಕ್ ಆಮ್ಲದ ಉತ್ಪಾದನೆಯನ್ನು ಪ್ರಚೋದಿಸಿ ರಕ್ತನಾಳಗಳ ಮೇಲೆ ಬೀಳುವ ಒತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ. ಪರಿಣಾಮವಾಗಿ, ಮೆದುಳಿಗೆ ತಲುಪುವ ಆಮ್ಲಜನಕದ ಮಟ್ಟ ಹೆಚ್ಚುತ್ತದೆ ಹಾಗೂ ಅರಿವಿನ ಶಕ್ತಿಯೂ ಉತ್ತಮಗೊಳ್ಳುತ್ತದೆ.

English summary

Ashwagandha: The wonder herb for your brain

The health benefits of ashwagandha is well known since time immemorial. But does it also keep our brain healthy? Well, it does say ayurveda experts and reams of research. Ashwagandha is a herb that is said to come with amazing healing properties. Its health benefits were known to ancient Indian rishis or holy men who used this knowledge to successfully treat various mental and physical ailments.
X
Desktop Bottom Promotion