For Quick Alerts
ALLOW NOTIFICATIONS  
For Daily Alerts

ಕಾಂಡೋಮ್ ಸರಿಯಾಗಿ ಬಳಕೆ ಮಾಡುತ್ತಲಿದ್ದೀರಾ?

|

ಕಾಂಡೋಮ್ ಬಳಸುವ ವೇಳೆ ಯಾವುದೇ ತಪ್ಪಾದರೆ ಆಗ ಬಯಸದೆ ಇರುವ ಗರ್ಭಧಾರಣೆ ಮತ್ತು ಕೆಲವೊಂದು ಲೈಂಗಿಕ ರೋಗಗಳು ಹರುಡವಂತಹ ಸಾಧ್ಯತೆಗಳು ಇರುವುದು. ಇದರಿಂದ ಕಾಂಡೋಮ್ ಬಳಸುವ ವೇಳೆ ತುಂಬಾ ಎಚ್ಚರಿಕೆ ವಹಿಸಬೇಕು. ಇದು ಹೇಗೆ ಎಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಬಯಸದೆ ಇರುವ ಗರ್ಭಧಾರಣೆ ಮತ್ತು ಲೈಂಗಿಕ ರೋಗಗಳು ಹರಡದೆ ಇರಲು ಕಾಂಡೋಮ್ ನ್ನು ಬಳಸಲಾಗುತ್ತದೆ. ಯಾಕೆಂದರೆ ಇದು ವೀರ್ಯ ಒಳಹೋಗುವುದು, ಯೋನಿಯ ದ್ರವ ಮತ್ತು ಸಂಗಾತಿಯ ರಕ್ತವು ಹರಡದಂತೆ ತಡೆಯುತ್ತದೆ.

ಕಳೆದ ವರ್ಷ ಭಾರತದ ಸಂಸ್ಥೆಯೊಂದು ಮಾಡಿರುವಂತಹ ಸಮೀಕ್ಷೆಯೊಂದರ ಪ್ರಕಾರ 1000ಕ್ಕೂ ಹೆಚ್ಚಿನ ಜನರು ಹೊರಹಾಕಿದ ಮಾಹಿತಿ ಎಂದರೆ ಶೇ.84ರಷ್ಟು ಪುರುಷರು ಮತ್ತು ಶೇ. 68ರಷ್ಟು ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ನಿರತರಾಗಿರುವುದಾಗಿ ತಿಳಿಸಿದ್ದಾರೆ. ಅದಾಗ್ಯೂ, ಸಮೀಕ್ಷೆಯಲ್ಲಿ ಭಾಗಿಯಾದ ಪ್ರತೀ ಐದು ಮಂದಿಯಲ್ಲಿ ಮೂರು ಮಂದಿ ಮಾತ್ರ ಸುರಕ್ಷಿತ ಸೆಕ್ಸ್ ಗಾಗಿ ಕಾಂಡೋಮ್ ಬಳಕೆ ಮಾಡುತ್ತಾರೆ. ಕಾಂಡೋಮ್ ಬಳಕೆ ಮಾಡುವುದು ಸುರಕ್ಷಿತ ಲೈಂಗಿಕ ಕ್ರಿಯೆ ಮತ್ತು ಬೇಡದೆ ಇರುವ ಗರ್ಭವನ್ನು ತಡೆಯಬಹುದು. ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿದರೆ ಆಗ ಅದರಿಂದ ಹಲವಾರು ಲಾಭಗಳು ಸಿಗುವುದು...

ಕಾಂಡೋಮ್ ಬಳಕೆ ವೇಳೆ ನೀವು ಮಾಡುವಂತಹ ಕೆಲವೊಂದು ತಪ್ಪುಗಳು

ಕಾಂಡೋಮ್ ಬಳಕೆ ವೇಳೆ ನೀವು ಮಾಡುವಂತಹ ಕೆಲವೊಂದು ತಪ್ಪುಗಳು

ಕಾಂಡೋಮ್ ಬಳಸುವುದು ದೊಡ್ಡ ರಾಕೆಟ್ ವಿಜ್ಞಾನವಲ್ಲ. ಆದರೆ ಹೆಚ್ಚಿನ ಜನರು ಇದನ್ನು ತುಂಬಾ ತಪ್ಪಾಗಿ ಬಳಕೆ ಮಾಡುವರು ಮತ್ತು ಇದರಿಂದ ಪರಿಣಾಮ ಕಡಿಮೆ ಆಗುವುದು. ಕಾಂಡೋಮ್ ನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಮತ್ತು ಧರಿಸಿಕೊಂಡರೆ ಮಾತ್ರ ಆಗ ಶೇ.97ರಷ್ಟು ಅದು ಪರಿಣಾಮಕಾರಿ ಆಗಿ ಇರಲಿದೆ ಎಂದು ಹೇಳಲಾಗುತ್ತದೆ. ಅದಾಗ್ಯೂ, ಇದನ್ನು ಸರಿಯಾಗಿ ಬಳಸದೆ ಇರುವ ವೇಳೆ ಮತ್ತು ಹಾನಿಗೀಡಾಗಿರುವ ಕಾಂಡೋಮ್ ಬಳಸುವಾಗ ಶೇಕಡಾವಾರು ಪ್ರಮಾಣವು ಕಡಿಮೆ ಆಗಬಹುದು. ಸರಿಯಾದ ಗಾತ್ರದ ಕಾಂಡೋಮ್ ಖರೀದಿಸದೆ ಇರುವುದು, ಅಸಮರ್ಪಕವಾಗಿ ಇಡುವುದು, ಇದರೊಂದಿಗೆ ಎಣ್ಣೆಯುಕ್ತ ಲ್ಯೂಬ್ರಿಕೆಂಟ್ ಬಳಸುವುದು ಮತ್ತು ಇನ್ನು ಹಲವಾರು.ಇವೆಲ್ಲಾ ಕಾರಣಗಳಿಂದಾಗಿ ಕಾಂಡೋಮ್ ಒಡೆದುಹೋಗುವುದು. ನೀವು ಮಾಡುವಂತಹ ಕಾಂಡೋಮ್ ಬಳಕೆಯ ಕೆಲವೊಂದು ತಪ್ಪುಗಳು ಮತ್ತು ಅದನ್ನು ಸರಿ ಪಡಿಸುವುದು ಹೇಗೆ ಎಂದು ತಿಳಿಯಿರಿ.

ಸರಿಯಾಗಿ ಧರಿಸದೆ ಇರುವುದು

ಸರಿಯಾಗಿ ಧರಿಸದೆ ಇರುವುದು

ನೀವು ಕಾಂಡೋಮ್ ನ್ನು ಸರಿಯಾಗಿ ಧರಿಸದೆ ಇದ್ದರೆ ಆಗ ಅದು ಮಧ್ಯದಲ್ಲಿ ಒಡೆದುಹೋಗುವುದು. ಇಲ್ಲಿ ಕೇಳುವಂತಹ ಸಾಮಾನ್ಯ ಪ್ರಶ್ನೆಗಳೆಂದರೆ ನನಗೆ ಎಸ್ ಟಿಐ ಬರುತ್ತದೆಯಾ ಅಥವಾ ಯುಟಿಐ ಬರುವುದೇ? ನನ್ನ ಸಂಗಾತಿಯು ಗರ್ಭಧರಿಸುವಳೇ? ಕಾಂಡೋಮ್ ಧರಿಸುವ ವೇಳೆ ಗಾಳಿಯು ಒಳಗೆ ಹೋಗದಂತೆ ನೋಡಿಕೊಳ್ಳಿ. ಇದು ಕಾಂಡೋಮ್ ಒಡೆಯುವಂತೆ ಮಾಡುವುದು. ಇದು ಹೆಚ್ಚಾಗಿ ಕಾಂಡೋಮ್ ಒಡೆಯಲು ಇರುವ ಸಾಮಾನ್ಯ ಕಾರಣವಾಗಿದೆ. ಸರಿಯಾಗಿ ಮಾಡಿ: ತುಂಬಾ ಬಿಗಿಯಾಗಿರುವಂತಹ ಅಥವಾ ಅತಿ ಸಡಿಲವಾಗಿರುವುದನ್ನು ಕೂಡ ನೀವು ಧರಿಸಬೇಡಿ. ಎರಡೂ ಸಂದರ್ಭದಲ್ಲಿ ಕಾಂಡೋಮ್ ಒಡೆದು ಹೋಗುವಂತಹ ಸಂಭವ ಹೆಚ್ಚಾಗಿರುವುದು. ಶಿಶ್ನವು ನಿಮಿರುವಿಕೆ ಆದ ಮೇಲೆ ಕಾಂಡೋಮ್ ಧರಿಸಿ. ಕಾಂಡೋಮ್ ನ ತುದಿಯಲ್ಲಿ ಅರ್ಧ ಇಂಚು ಹಾಗೆ ಬಿಟ್ಟುಬಿಡಿ ಮತ್ತು ಅದನ್ನು ಮುಟ್ಟಲು ಹೋಗಬೇಕು.

ಸರಿಯಾದ ಗಾತ್ರ ಆಯ್ಕೆ ಮಾಡದೆ ಇರುವುದು

ಸರಿಯಾದ ಗಾತ್ರ ಆಯ್ಕೆ ಮಾಡದೆ ಇರುವುದು

ಬ್ರಿಟಿಷ್ ಜರ್ನಲ್ ಆಫ್ ಯುರಾಜಲಿಯಲ್ಲಿ ಪ್ರಕಟ ಗೊಂಡಿರುವಂತಹ ಅಧ್ಯಯನ ವರದಿಯ ಪ್ರಕಾರ ವಿಶ್ವದೆಲ್ಲೆಡೆ ಸಾಮಾನ್ಯ ಶಿಶ್ನದ ಗಾತ್ರವು ಸರಾಸರಿ 5.16 ಇಂಚು ಇರುತ್ತದೆ. ಈ ಅಧ್ಯಯನಕ್ಕಾಗಿ ವಿಶ್ವದೆಲ್ಲೆಡೆಯ ಸುಮಾರು 15 ಸಾವಿರ ಪುರುಷರನ್ನು ಭಾಗಿಯಾದರು. ಗಾತ್ರವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ವಾಗಿರುವುದು. ಆದರೆ ಸರಿಯಾದ ಗಾತ್ರದ ಕಾಂಡೋಮ್ ಧರಿಸುವುದು ಅತೀ ಅಗತ್ಯವಾಗಿರುವುದು. ದೊಡ್ಡ ಗಾತ್ರದ ಮತ್ತು ಸಣ್ಣ ಗಾತ್ರದ ಕಾಂಡೋಮ್ ಧರಿಸುವ ಕಾರಣದಿಂಧಾಗಿ ಅದು ಒಡೆದುಹೋಗುವುದು. ಸರಿಯಾಗಿ ಮಾಡಿ: ಶಿಶ್ನವು ನಿಮಿರುವಾಗ ಯಾವ ಗಾತ್ರದ್ದು ಆಗಿರುತ್ತದೆ ಎಂಧು ತಿಳಿದು ಕಾಂಡೋಮ್ ಆಯ್ಕೆ ಮಾಡಿ. ನಿಮಿರುವಿಕೆ ವೇಳೆ ಶಿಶ್ನದ ಗಾತ್ರ ಲೆಕ್ಕ ಹಾಕಿ. ಭಾರತದಲ್ಲಿ ಹೆಚ್ಚಾಗಿ ನಿಯಮಿತ ಗಾತ್ರದ ಕಾಂಡೋಮ್ ನ್ನು ಮಾರಾಟ ಮಾಡಲಾಗುತ್ತದೆ. ಕೆಲವೊಂದು ಸಣ್ಣ ಮತ್ತು ದೊಡ್ಡ ಗಾತ್ರದ್ದು ಕೂಡ ಇದೆ. ಸಣ್ಣ ಕಾಂಡೋಮ್ 6-7 ಇಂಚು ಉದ್ದ ಇರುತ್ತದೆ ಮತ್ತು 1.7-2 ಇಂಚು ಅಗಲ ಇರುವುದು. ದೊಡ್ಡ ಗಾತ್ರದ ಕಾಂಡೋಮ್ 8 ಇಂಚು ಉದ್ದ ಮತ್ತು 2.13 ಇಂಚು ಅಗಲ ಇರುವುದು. ಸಾಮಾನ್ಯ ಕಾಂಡೋಮ್ ನ ಉದ್ದವು 7ರಿಂದ 7.9 ಇಂಚು ಇರುವುದು ಮತ್ತು 2 ಇಂಚು ಅಗಲವಿರುತ್ತದೆ.

ಸುವಾಸನೆಯ ಕಾಂಡೋಮ್ ಬಳಸುತ್ತಿದ್ದೀರಾ?

ಸುವಾಸನೆಯ ಕಾಂಡೋಮ್ ಬಳಸುತ್ತಿದ್ದೀರಾ?

ನೀವು ಸುವಾಸನೆಯುಕ್ತ ಕಾಂಡೋಮ್ ಬಳಕೆ ಮಾಡುತ್ತಲಿದ್ದರೆ ಆಗ ನಿಮ್ಮ ಸಂಗಾತಿಗೆ ಶಿಲೀಂಧ್ರ ಸೊಂಕು ಬರುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಯಾಕೆಂದರೆ ಇದರಲ್ಲಿ ಸಕ್ಕರೆ ಅಂಶವಿರುವುದು. ಸರಿಯಾದ ಕ್ರಮ: ಇಂತಹ ಕಾಂಡೋಮ್ ಗಳನ್ನು ಬಾಯಿ ಸೆಕ್ಸ್ ಗೆ ಮಾತ್ರ ಬಳಕೆ ಮಾಡಿ. ಒಳನುಗ್ಗುವಿಕೆ ವೇಳೆ ನಿಮಗೆ ಹೆಚ್ಚಿನ ಖುಷಿ ಬೇಕಿದ್ದರೆ ಆಗ ನೀವು ಬೇರೆ ಏರೆ ರೀತಿಯ ಕಾಂಡೋಮ್ ಗಳನ್ನು ಬಳಕೆ ಮಾಡಬಹುದು.

ಕಾಂಡೋಮ್ ಜತೆಗೆ ಎಣ್ಣೆಯುಕ್ತ ಲ್ಯುಬ್ರಿಕೆಂಟ್ ಬಳಕೆ ಮಾಡುವುದು

ಕಾಂಡೋಮ್ ಜತೆಗೆ ಎಣ್ಣೆಯುಕ್ತ ಲ್ಯುಬ್ರಿಕೆಂಟ್ ಬಳಕೆ ಮಾಡುವುದು

ಕಾಂಡೋಮ್ ನ್ನು ಎಣ್ಣೆಗೆ ಸ್ವಲ್ಪ ಮುಟ್ಟಿಸಿದರೂ ಆಗ ಅದರ ಪರಿಣಾಮವು ತುಂಬಾ ಕುಗ್ಗುವುದು ಎಂದು ಹೇಳಲಾಗುತ್ತದೆ. ಎಣ್ಣೆಯುಕ್ತ ಲ್ಯುಬ್ರಿಕೆಂಟ್ ಗಳು ಲೈಂಗಿಕ ಕ್ರಿಯೆ ಮೊದಲಿನ ಆಟಕ್ಕೆ ಒಳ್ಳೆಯದು. ಆದರೆ ಇದನ್ನು ಕಾಂಡೋಮ್ ಜತೆಗೆ ಬಳಸಿ ಕೊಳ್ಳೂವುದು ತುಂಬಾ ಅಪಾಯಕಾರಿ. ಇದರಿಂದ ಅದು ಒಡೆದು ಹೋಗುವಂತಹ ಸಾಧ್ಯತೆಯು ಇರುವುದು. ಸರಿಯಾದ ಕ್ರಮ: ಎಣ್ಣೆಯುಕ್ತ ಲ್ಯುಬ್ರಿಕೆಂಟ್ ಬದಲಿಗೆ ನೀರಿನಾಂಶ ಇರುವಂತಹ ಲ್ಯುಬ್ರಿಕೆಂಟ್ ಬಳಕೆ ಮಾಡಿ. ಇದು ಸಂಗಾತಿ ಜತೆಗೆ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ವೇಳೆ ತುಂಬಾ ಒಳ್ಳೆಯದು.

ಅದಕ್ಕೆ ಹಾನಿಯಾಗಿದೆಯಾ? ಇಲ್ಲವಾ ಎಂದು ನೋಡದೆ ಇರುವುದು

ಅದಕ್ಕೆ ಹಾನಿಯಾಗಿದೆಯಾ? ಇಲ್ಲವಾ ಎಂದು ನೋಡದೆ ಇರುವುದು

ಕಾಂಡೋಮ್ ಸರಿಯಾಗಿ ಇದೆಯಾ ಅಥವಾ ಅದಕ್ಕೆ ಹಾನಿಯಾಗಿ ಇದೆಯಾ ಎಂದು ನೋಡುವುದು ತುಂಬಾ ಅಪರೂಪ ಎನ್ನಬಹುದು. ದಿನಾಂಕ ಮೀರಿದ ಅಥವಾ ಹರಿದಿರುವ ಕಾಂಡೋಮ್ ಬಳಕೆ ಮಾಡುವುದರಿಂದ ಬೇಡದ ಗರ್ಭ ಧರಿಸುವ ಸಾಧ್ಯತೆಯು ಇರುವುದು. ಇದರಿಂದ ನಿಮಗೆ ಹಾಗೂ ಸಂಗಾತಿಗೆ ಯುಟಿಐ ಅಥವಾ ಎಸ್ ಟಿಐ ಬರುವುದು. ಹೀಗೆ ಮಾಡಿ: ಕಾಂಡೋಮ್ ಪ್ಯಾಕೆಟ್ ನ ದಿನಾಂಕವನ್ನು ಮೊದಲು ನೋಡಿ ಮತ್ತು ಕೆಲವೊಂದು ಸಲ ಕಾಂಡೋಮ್ ಗಳು ತುಂಬಾ ಸುಲಭವಾಗಿ ಹರಿದಿರುವುದು. ಕಾಂಡೋಮ್ ತೆಗೆದ ಬಳಿಕ ಅದು ತುಂಬಾ ನಯ ಮತ್ತು ಸ್ಥಿತಿಸ್ಥಾಪಕತ್ವ ಇದೆಯಾ ಎಂದು ನೋಡಿ. ಇದರಲ್ಲಿ ಯಾವುದೇ ತೊಂದರೆ ಇದ್ದರೆ ಆಗ ನೀವು ಬೇರೆ ಬಳಸಿಕೊಳ್ಳಿ.

ಸರಿಯಾಗಿ ಶೇಖರಣೆ ಮಾಡದಿರುವುದು

ಸರಿಯಾಗಿ ಶೇಖರಣೆ ಮಾಡದಿರುವುದು

ಕಾಂಡೋಮ್ ಪರಿಣಾಮಕಾರಿ ಇರಬೇಕಾದರೆ ಅದನ್ನು ಸರಿಯಾದ ಜಾಗದಲ್ಲಿ ಇಡಬೇಕು. ಆದರೆ ಹೆಚ್ಚಿನವರು ಇದನ್ನು ಕಾರ್, ವ್ಯಾಲೆಟ್, ರೆಫ್ರಿಜರೇಟರ್ ಅಥವಾ ಪ್ಯಾಂಟ್ ನ ಹಿಂದಿನ ಕಿಸೆಯಲ್ಲಿ ಇಟ್ಟುಕೊಳ್ಳುವರು. ಇದರಿಂದಾಗಿ ಅದರ ಪರಿಣಾಮವು ಕಡಿಮೆ ಆಗಬಹುದು. ಇದನ್ನು ವ್ಯಾಲೆಟ್ ಅಥವಾ ಪಾಕೆಟ್ ನಲ್ಲಿ ಇಡುವುದರಿಂದ ಹರಿದು ಹೋಗಬಹುದು. ಕಾರ್ ಮತ್ತು ರೆಫ್ರಿಜರೇಟ್ ನಲ್ಲಿ ಇಡುವುದು ಕೂಡ ಸರಿಯಾದ ಆಯ್ಕೆಯಲ್ಲ. ಯಾಕೆಂದರೆ ಅಲ್ಲಿ ಕಾಂಡೋಮ್ ಅತೀ ತಾಪಮಾನಕ್ಕೆ ಸಿಲುಕುವುದು. ಗಾಜು ಹಾಕಿದ್ದ ವೇಳೆ ಕಾರ್ ತುಂಬಾ ಬಿಸಿಯಾಗುವುದು. ಹೀಗೆ ಮಾಡಿ: ನೀವು ಕಾಂಡೋಮ್ ನ್ನು ಒಂದು ಬ್ಯಾಗ್ ಅಥವಾ ಮುಚ್ಚಳವನ್ನು ಸರಿಯಾಗಿ ಮುಚ್ಚಿರುವಂತಹ ಡಬ್ಬದಲ್ಲಿ ಇಡಬಹುದು. ಇದರಿಂದಾಗಿ ಅಧಿಕ ತಾಪಮಾನಕ್ಕೆ ಒಗ್ಗಿಕೊಳ್ಳುವುದು ತಪ್ಪುವುದು. ಕತ್ತಲು ಇರುವಂತಹ ಜಾಗದಲ್ಲಿ ಇಟ್ಟರೆ ಆಗ ಈ ವಸ್ತುವನ್ನು ತುಂಬಾ ಸುರಕ್ಷಿತವಾಗಿ ಇಡಬಹುದು. ಇದನ್ನು ಬಟ್ಟೆಯಲ್ಲಿ ಮುಚ್ಚಿಟ್ಟರೂ ಒಳ್ಳೆಯದು.

ಲ್ಯಾಟೆಕ್ಸ್ ಅಲರ್ಜಿ

ಲ್ಯಾಟೆಕ್ಸ್ ಅಲರ್ಜಿ

ಹೆಚ್ಚಿನ ಕಾಂಡೋಮ್ ಗಳನ್ನು ಲ್ಯಾಟೆಕ್ಸ್ ನಿಂದ ಮಾಡಲಾಗುತ್ತದೆ. ಇದನ್ನು ರಬ್ಬರ್ ಮರದಿಂದ ಬರುವ ದ್ರವದಿಂದ ತಯಾರಿಸ ಲಾಗುವುದು. ದ ಅಮೆರಿಕನ್ ಅಕಾಡಮಿ ಆಫ್ ಅಲರ್ಜಿ, ಅಸ್ತಮಾ ಆ್ಯಂಡ್ ಇಮ್ಯೂನಾಲಜಿ ರಬ್ಬರ್ ನಲ್ಲಿ ಇರುವಂತಹ ಪ್ರೋಟೀನ್ ನಿಂದಾಗಿ ಕೆಲವೊಂದು ಜನರಿಗೆ ಅಲರ್ಜಿಯು ಕಾಣಿಸಿಕೊಳ್ಳುವುದು. ಇದು ತುಂಬಾ ಅಪರೂಪ. ಅಲರ್ಜಿಯ ಲಕ್ಷಣಗಳು ತುಂಬಾ ಭಿನ್ನವಾಗಿ ಇರಬಹುದು. ಇದು ತೀವ್ರ ಮಟ್ಟದ್ದಾಗಿರಬಹುದು, ಸೀನು, ಶೀತ, ತುರಿಕೆ, ಬೊಕ್ಕೆ ಬರ ಬಹುದು. ಇನ್ನು ತೀವ್ರವಾದ ಸೋಂಕಿನ ಲಕ್ಷಣಗಳೆಂದರೆ ಉಬ್ಬಸ, ಊತ, ನಿಶ್ಯಕ್ತಿ ಮತ್ತು ಲಘು ತಲೆನೋವು. ಕೆಲವೊಂದು ಸಂದರ್ಭಧಲ್ಲಿ ಲ್ಯಾಟೆಕ್ಸ್ ಅಲರ್ಜಿ ಯಿಂದಾಗಿ ಅನಾಫಿಲ್ಯಾಕ್ಸಿಸ್ ಎನ್ನುವ ಪ್ರಾಣಹಾನಿ ಉಂಟು ಮಾಡುವ ಪರಿಸ್ಥಿತಿ ಉಂಟಾಗ ಬಹುದು. ಇಂತಹ ಕಾಂಡೋಮ್ ಗಳು ಲೈಂಗಿಕ ಕ್ರಿಯೆ ವೇಳೆ ಹರಿದು ಹೋಗುವಂತಹ ಸಾಧ್ಯತೆಯು ಅಧಿಕವಾಗಿರುವುದು ಮತ್ತು ಇವುಗಳು ಯೋನಿಯ ದ್ರವಕ್ಕೆ ಹೊಂದಿಕೊಳ್ಳುವುದಿಲ್ಲ.

ಒಂದರ ಬದಲಿಗೆ ಎರಡು ಉಪಯೋಗಿಸಿದರೆ ಹೇಗೆ?

ಒಂದರ ಬದಲಿಗೆ ಎರಡು ಉಪಯೋಗಿಸಿದರೆ ಹೇಗೆ?

ಸಾಮಾನ್ಯವಾಗಿ 'ಒಬ್ಬರಿಗಿಂತ ಇಬ್ಬರಿದ್ದರೆ ಲೇಸು' ಎಂಬ ಕನ್ನಡದ ನಾಣ್ಣುಡಿ ಎಲ್ಲೆಡೆ ಅನ್ವಯವಾಗುವುದಿಲ್ಲ.ಸಾಮಾನ್ಯವಾಗಿ ಸಮಸ್ಯೆಯನ್ನು ಪರಿಹರಿಸಲು ಇಬ್ಬರಿದ್ದರೆ ವಿಚಾರ ವಿಮರ್ಶಿಸಿ, ಪರಸ್ಪರ ಸಹಕಾರದ ಮೂಲಕ ಈ ಸಮಸ್ಯೆಯನ್ನು ಬಿಡಿಸುವುದು ಹೆಚ್ಚು ಸುಲಭವಾಗುತ್ತದೆ ಎಂಬುದೇ ಈ ನಾಣ್ಣುಡಿಯ ಅರ್ಥ ವಾಗಿದೆ. ಈ ನಾಣ್ಣುಡಿ ಎಲ್ಲಾ ಸಂದರ್ಭಗಳಲ್ಲಿಯೂ ಅನ್ವಯಿಸಿ ಕೊಳ್ಳಬಹುದು ಎಂದು ನಂಬಿರುವ ವ್ಯಕ್ತಿಗಳು ಒಂದರ ಬದಲು ಎರಡು ಕಾಂಡೊಮ್‌ಗಳನ್ನು ಬಳಸಿದರೆ ಹೆಚ್ಚಿನ ಸುರಕ್ಷತೆ ಸಿಗಬಹುದು ಎಂಬ ಅಭಿಪ್ರಾಯ ಹೊಂದಿದ್ದಾರೆ. ಹೆಚ್ಚಿನ ರಬ್ಬರ್ ಎಂದರೆ ಇಬ್ಬರಿಗೂ ಹೆಚ್ಚಿನ ಸುರಕ್ಷತೆ ಎಂದು ಇವರ ಲೆಕ್ಕಾಚಾರ. ಆದರೆ, ಇದು ನಿಜವೇ?

 ಪುರುಷರ ಕಾಂಡೊಮ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಪುರುಷರ ಕಾಂಡೊಮ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಈ ಪರಿಕರದ ಮುಖ್ಯ ಉದ್ದೇಶ ಪುರುಷರ ವೀರ್ಯಾಣು ಮಹಿಳೆಯ ಗರ್ಭಕಂಠಕ್ಕೆ ತಲುಪದಂತೆ ಮಾಡುವುದು. ಪುರುಷ ಜನನಾಂಗ ಉದ್ರೇಕ್ತ ಸ್ಥಿತಿಯಲ್ಲಿದ್ದಾಗ ಕಾಂಡೊಮ್ ಧರಿಸಬೇಕು. ಇದರ ತುದಿಯಲ್ಲಿ ಚಿಕ್ಕದಾದ ಚೀಲದಂತಹ ಭಾಗವಿದ್ದು ಇದು ಧರಿಸುವ ಮುನ್ನ ಖಾಲಿ ಯಾಗಿರುತ್ತದೆ. ಈ ಖಾಲಿಜಾಗವನ್ನು ಸ್ಖಲನದ ಬಳಿಕ ವೀರ್ಯಾಣುಗಳನ್ನು ಸಂಗ್ರಹಿಸಲೆಂದೇ ವಿನ್ಯಾಸ ಗೊಳಿಸಲಾಗಿದೆ. ಆದರೆ ಈ ಖಾಲಿಜಾಗ ಉಳಿದ ಭಾಗದಂತೆ ಬಿಗಿಯಾಗಿ ಅಂಟಿ ಕೊಂಡಿರದೇ ಸಡಿಲವಾಗಿರುವುದೇ ಇದು ಹರಿಯುವ ಸಂಭವವಿರುತ್ತದೆ.

ಇದನ್ನು ತಡೆಗಟ್ಟಲು ಎರಡು ಕಾಂಡೊಮ್ ಬಳಸಿದರೆ?

ಇದನ್ನು ತಡೆಗಟ್ಟಲು ಎರಡು ಕಾಂಡೊಮ್ ಬಳಸಿದರೆ?

ಮೊದಲನೆಯ ಕಾಂಡೊಮ್ ಮೇಲೆ ಎರಡನೆಯದನ್ನು ಧರಿಸಿದರೆ ಹೆಚ್ಚಿನ ಘರ್ಷಣೆಗೆ ಹಾಗೂ ಹೆಚ್ಚಿನ ಬಿಗಿತಕ್ಕೆ ಕಾರಣವಾಗುತ್ತದೆಯೇ ಹೊರತು ಹರಿಯುವಿಕೆಯ ವಿರುದ್ಧ ಪೂರ್ಣವಾದ ರಕ್ಷಣೆ ಒದಗುವುದಿಲ್ಲ. ಅಲ್ಲದೇ ಕಾಂಡೊಮ್ ಅನ್ನು ಒಂದು ಬಾರಿಗೆ ಒಂದೇ ಉಪಯೋಗಿಸುವಂತೆ ವಿನ್ಯಾಸಗೊಳಿಸಲಾಗಿದ್ದು ಇದರ ಮೇಲೆ ಎರಡನೆಯದನ್ನು ಧರಿಸಿದರೆ ಇದು ಸರಿಯಾಗಿ ಕುಳಿತುಕೊಳ್ಳುವುದೂ ಇಲ್ಲ ಹಾಗೂ ಎರಡನೆಯ ಕಾಂಡೊಮ್‌ನ ತುದಿಯ ಖಾಲಿಚೀಲ ಒಳಗಿನ ಕಾಂಡೊಮ್‌ನ ಖಾಲಿಚೀಲವನ್ನು ಮಡಚಿರುವಂತೆ ಮಾಡಿ ಹರಿಯುವ ಸಾಧ್ಯತೆಯನ್ನು ಹೆಚ್ಚಿಸ್ತುತದೆ. ಎರಡು ಕಾಂಡೊಮ್‌ಗಳನ್ನು ಧರಿಸಿವುದು ಖಚಿತವಾಗಿಯೂ ಅಸಮರ್ಪಕ ವಾಗಿರುತ್ತದೆ ಹಾಗೂ ಒಂದರ ಮೇಲೊಂದು ಸುಲಭವಾಗಿ ಜಾರುವ ಮೂಲಕ ಮೂಲ ಉದ್ದೇಶವೇ ಭಂಗಗೊಳ್ಳುತ್ತದೆ.

English summary

Are you using your birth control cover in right way?

Condom is the one stop solution against unwanted pregnancy and sexually transmitted infections (STIs). This is because this barrier method prevents the exchange of sperms, vaginal fluids, and blood with your partner. A survey conducted by a local Indian firm last year which included more than 1,000 people revealed that 84 per cent of men and 68 per cent of women agreed that they were sexually active. However, out of all the participants, only three out of five were using condom for safe sex. While opting for condom is the prerequisite for safe sex and avoiding unwanted pregnancy, using it right is essential to reap the benefits.
Story first published: Friday, May 17, 2019, 20:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X