For Quick Alerts
ALLOW NOTIFICATIONS  
For Daily Alerts

ಪುರುಷರು ಕಡೆಗಣಿಸಬಾರದ ಕೆಲವು ಆರೋಗ್ಯ ಸಮಸ್ಯೆಗಳ ಲಕ್ಷಣಗಳು

|

ಪುರುಷರು ವೈದ್ಯರಲ್ಲಿ ಹೋಗುವುದು ತುಂಬಾ ಕಡಿಮೆ ಎಂದು ಹೇಳಬಹುದು. ಯಾಕೆಂದರೆ ಪುರುಷರು ಯಾವಾಗಲೂ ತುಂಬಾ ಸದೃಢರು ಹಾಗೂ ಯಾವುದೇ ಕಾಯಿಲೆಯನ್ನು ದಿಟ್ಟವಾಗಿ ಎದುರಿಸುವಂತಹ ಶಕ್ತಿ ಹೊಂದಿರುವರು ಎಂದು ನಂಬಲಾಗಿದೆ.

Alarming Signs of Health Problem Men Should Never Ignore

ಆದರೆ ಪುರುಷರಿಗೂ ಕೂಡ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಕಾಡುವುದು. ಇದನ್ನು ಅವರು ಕಡೆಗಣಿಸಿದರೆ ಆಗ ದೊಡ್ಡ ಮಟ್ಟದ ಅಪಾಯ ಎದುರಾಗಬಹುದು. ಹೀಗಾಗಿ ಈ ಲೇಖನದಲ್ಲಿ ನಾವು ಪುರುಷರು ಕಡೆಗಣಿಸಬಾರದ ಕೆಲವು ಅನಾರೋಗ್ಯದ ಲಕ್ಷಣಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

ಬಂಜೆತನ (ನಿಮಿರು ದೌರ್ಬಲ್ಯ)

ಬಂಜೆತನ (ನಿಮಿರು ದೌರ್ಬಲ್ಯ)

ಪುರುಷರು ಜೀವಮಾನದಲ್ಲಿ ಒಂದು ಸಲವಾದರೂ ಬಂಜೆತನದ ಸಮಸ್ಯೆಯನ್ನು ಖಂಡಿತವಾಗಿಯೂ ಎದುರಿಸಿರುವರು. ಅದಾಗ್ಯೂ, ನಿಮಿರು ದೌರ್ಬಲ್ಯ ಎನ್ನುವುದು ಹಲವಾರು ಸಂದರ್ಭದಲ್ಲಿ ಸಂತೃಪ್ತಿಯ ಲೈಂಗಿಕ ಚಟುವಟಿಕೆಯು ನಡೆಸಲು ಸಾಧ್ಯವಾಗದೆ ಇರುವುದು. ಹೀಗೆ ನಿಯಮಿತವಾಗಿ ನಡೆದರೆ ಅದನ್ನು ನಿಮಿರು ದೌರ್ಬಲ್ಯ ಸಮಸ್ಯೆ ಎನ್ನಬಹುದು. ಈ ವೇಳೆ ಖಂಡಿತವಾಗಿಯೂ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಭಬೇಕು. ಹೆಚ್ಚಿನ ಜನರು ಇಂತಹ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂಜರಿಯುವರು. ಯಾಕೆಂದರೆ ಅವರಿಗೆ ತುಂಬಾ ಮುಜುಗರವಾಗುವುದು. ಆದರೆ ವೈದ್ಯರ ಬಳಿಯಲ್ಲಿ ಎಲ್ಲವನ್ನು ಹೇಳಿಕೊಳ್ಳಬಹುದು. ನಿಮಿರು ದೌರ್ಬಲ್ಯವು ಗಂಭೀರ ಅನಾರೋಗ್ಯದ ಸಮಸ್ಯೆಯಾಗಿರುವಂತಹ ಹೃದಯದ ಕಾಯಿಲೆ, ಮಧುಮೇಹ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಯಾಗಿರಲೂ ಬಹುದು.

Most Read: ಮಲಗುವ ಮುನ್ನ ಈ ಐದು ಪೇಯವನ್ನು ಸೇವಿಸಿ, ಬಹುಬೇಗ ತೂಕ ಇಳಿಸಿ

ವೃಷಣದಲ್ಲಿ ಗುಳ್ಳೆ

ವೃಷಣದಲ್ಲಿ ಗುಳ್ಳೆ

ವೃಷಣದಲ್ಲಿ ಮೂಡುವಂತಹ ಹೆಚ್ಚಿನ ಗುಳ್ಳೆಗಳೂ ಯಾವುದೇ ಹಾನಿ ಉಂಟು ಮಾಡದು. ಆದರೆ ಕೆಲವೊಂದು ಸಂದರ್ಭದಲ್ಲಿ ಇದು ಗಂಭೀರ ಅನಾರೋಗ್ಯದ ಸಂಕೇತ ಆಗಿರಬಹುದು. ವೃಷಣವನ್ನು ನಿಯಮಿತವಾಗಿ ನೀವೇ ಪರೀಕ್ಷೆ ಮಾಡಿಕೊಳ್ಳುತ್ತಾ ಇದ್ದರೆ ವೃಷಣದ ಕ್ಯಾನ್ಸರ್ ಸಮಸ್ಯೆಯನ್ನು ತಡೆಯಬಹುದು. 20-35ರ ಹರೆಯದವರಲ್ಲಿ ವೃಷಣದ ಕ್ಯಾನ್ಸರ್ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು. ಆದರೆ ಎಲ್ಲಾ ಗುಳ್ಳೆಗಳು ವೃಷಣದ ಕ್ಯಾನ್ಸರ್ ಎಂದು ಹೇಳಲು ಆಗದು. ಕೆಲವೊಂದು ದ್ರವ ಸಂಗ್ರಹದ ಲಕ್ಷಣವಾಗಿರಬಹುದು, ಸೋಂಕು ಅಥವಾ ಚರ್ಮ ಅಥವಾ ನರಗಳ ಊತದಿಂದಲೂ ಆಗಬಹುದು.

Most Read: ಹೆಚ್ಚಿನ ಪ್ರಮಾಣದಲ್ಲಿ ಅಯೋಡೀನ್‌ ಹೊಂದಿರುವ ಆರೋಗ್ಯಕಾರಿ ಆಹಾರಗಳು

ಮಚ್ಚೆಗಳು

ಮಚ್ಚೆಗಳು

ಎಲ್ಲಾ ಮಚ್ಚೆಗಳು ಕ್ಯಾನ್ಸರ್ ಉಂಟು ಮಾಡುವುದು ಎಂದು ಯಾವತ್ತೂ ಭಾವಿಸಬಾರದು. ಮನುಷ್ಯರ ದೇಹದಲ್ಲಿ ಮಚ್ಚೆ ಎನ್ನುವುದು ಸಾಮಾನ್ಯ ಮತ್ತು ಇದರ ಸಂಖ್ಯೆ 10-440ರ ತನಕ ಇರುತ್ತದೆ. ಕ್ಯಾನ್ಸರ್ ಲಕ್ಷಣಗಳನ್ನು ತೋರಿಸುವಂತಹ ಮಚ್ಚೆಗಳು ತಮ್ಮ ಬಣ್ಣ ಹಾಗು ಗಾತ್ರದಲ್ಲಿ ಬದಲಾಗುತ್ತಾ ಇರುತ್ತದೆ. ತುಂಬಾ ತುರಿಕೆ, ರಕ್ತಸ್ರಾವ, ನೋವು ಕಂಡುಬರುತ್ತಲಿದ್ದರೆ ಆಗ ನೀವು ಹೋಗಿ ಚರ್ಮ ವೈದ್ಯರನ್ನು ಭೇಟಿಯಾಗಿ ಅವರಿಂದ ಪರಿಶೀಲಿಸಿಕೊಳ್ಳಬೇಕು.

ಮಚ್ಚೆಗಳು ಕ್ಯಾನ್ಸರ್ ಲಕ್ಷಣವನ್ನು ಉಂಟು ಮಾಡುತ್ತಲಿದ್ದರೆ ಆಗ ನೀವು ಎಬಿಸಿಡಿಇ ತಿಳಿಯಿರಿ

*ಎ-ಅಸಿಮೈಟ್ರಿ ಅರ್ಧದಷ್ಟು ಮಚ್ಚೆಗಳು ಮತ್ತೊಂದಕ್ಕೆ ಹೊಂದಾಣಿಕೆ ಆಗುತ್ತಿಲ್ಲ.

*ಬಿ-ಅಂಚು(ಗಡಿ)-ಮಚ್ಚೆಯ ಗಡಿಯು ತುಂಬಾ ಮಾಸಿದಂತೆ ಅನಿಯಮಿತವಾಗಿ ಇರಬಹುದು.

*ಸಿ-ಬಣ್ಣ ಮಚ್ಚೆಗಳ ಬಣ್ಣದಲ್ಲಿ ಯಾವಾಗಲೂ ಒಂದೇ ರೀತಿಯಾಗಿ ಇರದು ಅಥವಾ ಇದು ಕಂದು, ಕಪ್ಪು, ನೀಲಿ, ಬಿಳಿ ಅಥವಾ ಕೆಂಪು ಆಗಿರಬಹುದು.

*ಡಿ-ಡಯಾಮೀಟರ್-ಮಚ್ಚೆಯ ಗಾತ್ರವು ಒಂದು ಪೆನ್ಸಿಲ್ ರಬ್ಬರ್ ಗಿಂತಲೂ ದೊಡ್ಡದಾಗಿರುವುದು.

*ಇ-ಬದಲಾವಣೆ- ಮಚ್ಚೆಯು ಯಾವಾಗಲೂ ತನ್ನ ಬಣ್ಣ, ಗಾತ್ರ ಮತ್ತು ವಿನ್ಯಾಸದಲ್ಲಿ ಬದಲಾಗುತ್ತಿರುವುದು.

ಮೂತ್ರದ ಸಮಸ್ಯೆ

ಮೂತ್ರದ ಸಮಸ್ಯೆ

ಮೂತ್ರದ ಸಮಸ್ಯೆಯು ಯಾವಾಗಲೂ ವಯಸ್ಸಾದವರಲ್ಲಿ ಕಂಡುಬರುವುದು. ನಿಮಗೆ ಮೂತ್ರದ ಸಮಸ್ಯೆಯಿದ್ದರೆ ಅಥವಾ ಮೂತ್ರ ತಡೆಯಲು ಅಥವಾ ಬರಲು ತುಂಬಾ ಕಷ್ಟವಾಗುತ್ತಿದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ. ಪ್ರಾಸ್ಟೇಟ್ ದೊಡ್ಡದಾದ ವೇಳೆ ಮೂತ್ರ ನಾಳಕ್ಕೆ ಹೋಗುವಂತಹ ಟ್ಯೂಬ್ ನ್ನು ಇದು ದಬ್ಬುವುದು. ಇದರಿಂದ ಮೂತ್ರ ವಿಸರ್ಜನೆಗೆ ಕಷ್ಟವಾಗಬಹುದು. ಇದು ಪ್ರಾಸ್ಟೇಟ್ ನ ಸಮಸ್ಯೆಯ ಕಾರಣವಾಗಿರಬಹುದು. ಇತರ ಕೆಲವೊಂದು ಸಮಸ್ಯೆಗಳೆಂದರೆ ಮೂತ್ರ ವಿಸರ್ಜನೆ ವೇಳೆ ಉರಿ ಅಥವಾ ನೋವು. ಪದೇ ಪದೇ ಮೂತ್ರ ವಿಸರ್ಜನೆ ಆಗುವುದು. ಇಂತಹ ಸಮಸ್ಯೆಗಳು ಇದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ. ನಿಮ್ಮ ಬಗ್ಗೆ ನೀವು ಕಾಳಜಿ ವಹಿಸಬೇಕು. ಯಾವುದೇ ರೀತಿಯ ನೋವು ಅಥವಾ ಆರೋಗ್ಯ ಸಮಸ್ಯೆಯನ್ನು ಕಡೆಗಣಿಸಬೇಡಿ. ಯಾಕೆಂದರೆ ಇದು ದೊಡ್ಡ ಮಟ್ಟದ ಹಾನಿ ಉಂಟು ಮಾಡಬಹುದು. ಸರಿಯಾದ ಸಮಯದಲ್ಲಿ ನೀವು ಹೋಗಿ ವೈದ್ಯರನ್ನು ಭೇಟಿ ಮಾಡಿ ಅವರಿಂದ ಚಿಕಿತ್ಸೆ ಪಡೆದುಕೊಳ್ಳಿ.

English summary

Alarming Signs of Health Problem Men Should Never Ignore

Men visit doctor half of as regularly as women and reason behind it can be that men are expected to be solid, reliable and extreme. But it is necessary to know about changes to your health, and to see your doctor with no delay if you see something wrong.
X
Desktop Bottom Promotion