For Quick Alerts
ALLOW NOTIFICATIONS  
For Daily Alerts

ಖತರ್ನಾಕ್ ಕಿಡ್ನಿ ಕ್ಯಾನ್ಸರ್‌ನ ಕೆಲವೊಂದು ಲಕ್ಷಣಗಳು ಮತ್ತು ಚಿಹ್ನೆಗಳು

|

ಯಾವುದೇ ರೀತಿಯ ಕ್ಯಾನ್ಸರ್ ಆದರೂ ಅದು ತುಂಬಾ ಅಪಾಯಕಾರಿ. ಕ್ಯಾನ್ಸರ್ ಅನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿದರೆ ಅದಕ್ಕೆ ಚಿಕಿತ್ಸೆ ನೀಡಬಹುದು. ಆದರೆ ಕೆಲವೊಂದು ರೀತಿಯ ಕ್ಯಾನ್ಸರ್ ಅಂತಿಮ ಹಂತದ ತನಕ ಸುಳಿವು ಬಿಟ್ಟುಕೊಡುವುದಿಲ್ಲ. ಇದರಿಂದ ಅದನ್ನು ಪತ್ತೆ ಹಚ್ಚುವುದು ಕಷ್ಟಕರ. ಸಾಮಾನ್ಯವಾಗಿ ಚರ್ಮ, ಸ್ತನ ಮತ್ತು ಜನನಾಂಗದ ಕ್ಯಾನ್ಸರ್ ಹೆಚ್ಚಿನವರಿಗೆ ತಿಳಿದಿದೆ. ಅದೇ ರೀತಿಯಾಗಿ ಕಿಡ್ನಿಯ ಕ್ಯಾನ್ಸರ್ ಕೂಡ ತುಂಬಾ ಅಪಾಯಕಾರಿ.

ಕಿಡ್ನಿ ಕ್ಯಾನ್ಸರ್ ಮೂತ್ರಪಿಂಡದ ಜೀವಕೋಶ ಕಾರ್ಸಿನೋಮ ಅಥವಾ ಆರ್ ಸಿಸಿಯನ್ನು ಸೂಚಿಸುವುದು. ಇದರಿಂದಾಗಿ ಶೇ.85ರಷ್ಟು ಕಿಡ್ನಿ ಕ್ಯಾನ್ಸರ್ ಬರುವುದು. ಆರ್ ಸಿಸಿಯು ಮೂತ್ರಪಿಂಡದ ನಾಳಗಳ ಒಳಪದರದಲ್ಲಿ ಗಡ್ಡೆಗಳನ್ನು ಉಂಟುಮಾಡುವುದು. ಮನುಷ್ಯರಲ್ಲಿ ಇರುವಂತಹ ಎರಡು ಕಿಡ್ನಿಗಳು ರಕ್ತದಲ್ಲಿನ ಕಲ್ಮಶ ಮತ್ತು ವಿಷ ಹೊರಹಾಕುವುದಲ್ಲದೆ, ರಕ್ತದಲ್ಲಿನ ರಾಸಾಯನಿಕ ಸಂಯೋಜನೆಯ ಸಮತೋಲನ ಕಾಪಾಡುವುದು. ಆಹಾರ ಜೀರ್ಣವಾಗುವಂತಹ ಹಾರ್ಮೋನುಗಳನ್ನು ಕಿಡ್ನಿ ಬಿಡುಗಡೆ ಮಾಡುವುದು. ಇದು ಮೂಳೆಮಜ್ಜೆಯು ಕೆಂಪುರಕ್ತದ ಕಣ ಉತ್ಪಾದಿಸಲು ಉತ್ತೇಜಿಸುವುದು.

ಕಿಡ್ನಿ ಕ್ಯಾನ್ಸರ್ ನ ಲಕ್ಷಣಗಳು ಮೂತ್ರನಾಳ ಅಥವಾ ಸೊಂಟದಲ್ಲಿ ಕಾಣಿಸಿಕೊಳ್ಳಬಹುದು. ಕಿಡ್ನಿಯ ಕ್ಯಾನ್ಸರ್ ಅಂತಿಮ ಹಂತಕ್ಕೆ ಬರುವ ತನಕ ಅಥವಾ ಗಡ್ಡೆ ಬೆಳೆಯುವ ತನಕ ನಿಮಗೆ ಅದರ ಲಕ್ಷಣ ಕಾಣಸಿಗದು. ಸಾಮಾನ್ಯ ಪರೀಕ್ಷೆ ವೇಳೆ ಇದು ಆಕಸ್ಮಿಕವಾಗಿ ಕಂಡುಬರಬಹುದು. ಕೆಲವೊಮ್ಮೆ ಕ್ಯಾನ್ಸರ್ ಕಿಡ್ನಿಗೆ ತಲುಪುವ ಮೊದಲು ದೇಹವು ಕೆಲವೊಂದು ಲಕ್ಷಣಗಳನ್ನು ತೋರಿಸುವುದು. ಈ ಚಿಹ್ನೆ ಹಾಗೂ ಲಕ್ಷಣಗಳನ್ನು ಸರಿಯಾದ ಸಮಯದಲ್ಲಿ ಗುರುತಿಸುವುದು ಅತೀ ಅಗತ್ಯವಾಗಿದೆ. ಕಿಡ್ನಿ ಕ್ಯಾನ್ಸರ್ ಯಾರಿಗೂ ಬರಬಹುದು. ಆದರೆ ಆಲ್ಕೋಹಾಲ್ ಮತ್ತು ಧೂಮಪಾನ ಮಾಡುವಂತಹ ಜನರಲ್ಲಿ ಈ ಕ್ಯಾನ್ಸರ್ ಬರುವಂತಹ ಸಾಧ್ಯತೆಯು ಅತಿಯಾಗಿರುವುದು.

ಮೂತ್ರದಲ್ಲಿ ರಕ್ತ

ಮೂತ್ರದಲ್ಲಿ ರಕ್ತ

ಕಿಡ್ನಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳ ಮೊದಲ ಚಿಹ್ನೆ ಅಥವಾ ಲಕ್ಷಣವೆಂದರೆ ಅದು ಮೂತ್ರದಲ್ಲಿ ರಕ್ತ ಬರುವುದು. ಮೂತ್ರದಲ್ಲಿ ರಕ್ತ ಕಾಣಿಸಿಕೊಂಡರೆ ಅದು ಕಿಡ್ನಿ ಕ್ಯಾನ್ಸರ್ ನ ಲಕ್ಷಣವೂ ಆಗಿರಬಹುದು. ಕೆಲವೊಂದು ಸಂದರ್ಭದಲ್ಲಿ ಮೂತ್ರದಲ್ಲಿ ರಕ್ತದ ಪ್ರಮಾಣವು ತುಂಬಾ ಕಡಿಮೆ ಇರುವುದು. ಇದರಿಂದ ಅದನ್ನು ಮೂತ್ರ ಪರೀಕ್ಷೆ ಮೂಲಕವೇ ಪತ್ತೆ ಹಚ್ಚಬೇಕಾಗಿದೆ. ಮೂತ್ರದಲ್ಲಿ ರಕ್ತದ ಅಂಶ ಕಂಡುಬಂದರೆ ಆಗ ನೀವು ನೇರವಾಗಿ ವೈದ್ಯರಲ್ಲಿ ಹೋಗಿ ಪರೀಕ್ಷೆ ಮಾಡಿಕೊಳ್ಳಿ.

Most Read: ಕಿಡ್ನಿಯನ್ನು ಅನಾರೋಗ್ಯದಿಂದ ದೂರವಿಡಲು ಏನು ಮಾಡಬೇಕು?

ರಕ್ತಹೀನತೆ

ರಕ್ತಹೀನತೆ

ಕಿಡ್ನಿಯು ಕೆಂಪು ರಕ್ತದ ಕಣಗಳ ಉತ್ಪತ್ತಿಯನ್ನು ಕೂಡ ನಿಯಂತ್ರಿಸುವುದು. ಕಿಡ್ನಿ ಕ್ಯಾನ್ಸರ್ ಲಕ್ಷಣವಾದರೆ ದೇಹದಲ್ಲಿ ಕೆಂಪು ರಕ್ತದ ಕಣಗಳ ಉತ್ಪತ್ತಿಯು ತುಂಬಾ ಕಡಿಮೆ ಆಗಬಹುದು. ಇದರಿಂದ ರಕ್ತಹೀನತೆ ಕಾಣಿಸಬಹುದು. ರಕ್ತಹೀನತೆ ಸಮಸ್ಯೆಯಿದ್ದರೆ ಆಗ ಯಾವಾಗಲೂ ನಿಶ್ಯಕ್ತಿಯು ಕಾಡುವುದು.

ಕಾರಣವಿಲ್ಲದೆ ತೂಕ ಕಳೆದುಕೊಳ್ಳುವುದು

ಕಾರಣವಿಲ್ಲದೆ ತೂಕ ಕಳೆದುಕೊಳ್ಳುವುದು

ಯಾವುದೇ ಕಾರಣವಿಲ್ಲದೆ ತೂಕ ಕಳೆದುಕೊಳ್ಳುತ್ತಲಿದ್ದರೆ ಆಗ ಇದು ಕಿಡ್ನಿ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಗಡ್ಡೆ ಬೆಳೆಯುತ್ತಿರುವ ಕಾರಣದಿಂದಾಗಿ ಹಸಿವು ಆಗದೆ ಇರಬಹುದು. ಇದರಿಂದ ನೀವು ಆಹಾರ ಸೇವನೆ ಕಡಿಮೆ ಮಾಡುವ ಕಾರಣದಿಂದಾಗಿ ತೂಕ ಇಳಿಯುವುದು. ಕಿಡ್ನಿಯ ಆರೋಗ್ಯವು ಕೆಡುವ ಕಾರಣದಿಂದಾಗಿ ತೂಕ ಇಳಿಕೆಯಾಗುವುದು.

ಹೊಟ್ಟೆಯ ಬಳಿಯಲ್ಲಿ ಬೊಕ್ಕೆಗಳು

ಹೊಟ್ಟೆಯ ಬಳಿಯಲ್ಲಿ ಬೊಕ್ಕೆಗಳು

ನಿಮ್ಮ ಹೊಟ್ಟೆ ಸುತ್ತಲು ಅಥವಾ ಕಿಡ್ನಿಯ ಜಾಗದಲ್ಲಿ ಬೊಕ್ಕೆ ಕಾಣಿಸುವುದು ಕೂಡ ಕಿಡ್ನಿ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಈ ಬೊಕ್ಕೆಯು ಆರಂಭಿಕ ಹಂತದಲ್ಲಿ ತುಂಬಾ ಕಠಿಣವಾಗಿರುವುದು. ಹೆಚ್ಚುವರಿ ಪರೀಕ್ಷೆ ಮಾಡಿದರೆ ವೈದ್ಯರಿಗೆ ಈ ಬೊಕ್ಕೆ ಹಿಂದಿರುವಂತಹ ನಿಜವಾದ ಕಾರಣವು ತಿಳಿದುಬರಲಿದೆ.

Most Read: ಕಿಡ್ನಿ ನೋವಿನ ರೋಗ ಲಕ್ಷಣಗಳೇನು? ಇದಕ್ಕೆ ಪರಿಹಾರವೇನು?

ತೂಕ ಇಳಿಕೆ

ತೂಕ ಇಳಿಕೆ

ಚಯಾಪಚಾಯ ಹಾಗೂ ಜೀರ್ಣಕ್ರಿಯೆಯಲ್ಲಿ ಕಿಡ್ನಿಯು ತುಂಬಾ ಪ್ರಮುಖ ಪಾತ್ರ ನಿರ್ವಹಿಸುವುದು. ಕಿಡ್ನಿಗೆ ಯಾವುದೇ ರೀತಿಯ ತೊಂದರೆಯಾಗಿದ್ದರೆ ಆಹಾರ ವಿಘಟನೆ ಮತ್ತು ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಕಿಡ್ನಿಗೆ ಕಷ್ಟವಾಗಬಹುದು. ತೂಕ ಕಡಿಮೆಯಾಗುವುದು ಕಿಡ್ನಿ ಕ್ಯಾನ್ಸರ್ ನ ಪ್ರಮುಖ ಲಕ್ಷಣಗಳಲ್ಲಿ ಒಂದು.

ಬೆನ್ನು ಅಥವಾ ದೇಹದ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು!

ಬೆನ್ನು ಅಥವಾ ದೇಹದ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು!

ಬೆನ್ನು ಅಥವಾ ದೇಹದ ಒಂದು ಬದಿಯಲ್ಲಿ ನೋವು ಅಥವಾ ಒತ್ತಡವು ಕಿಡ್ನಿ ಕ್ಯಾನ್ಸರ್‌ನ ಲಕ್ಷಣ. ಕಿಡ್ನಿಯ ದ್ರವ್ಯರಾಶಿಯು ದೊಡ್ಡದಾಗಿ ಅದು ಒತ್ತಡ ಹೇರಿದಾಗ ನೋವು ಕಾಣಿಸಿಕೊಳ್ಳುವುದು.

ಆಗಾಗ ಕಾಡುವ ನಿಶ್ಯಕ್ತಿ

ಆಗಾಗ ಕಾಡುವ ನಿಶ್ಯಕ್ತಿ

ಆಗಾಗ ಆಯಾಸವಾಗುವುದು ಅಥವಾ ನಿಶ್ಯಕ್ತಿಯು ಕಿಡ್ನಿ ಕ್ಯಾನ್ಸರ್‌ನ ಪ್ರಮುಖ ಲಕ್ಷಣ. ನಿಮ್ಮ ನಿಶ್ಯಕ್ತಿಗೆ ಕಾರಣವೇನೆಂದು ತಿಳಿದುಕೊಳ್ಳಲು ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದರೆ ಒಳ್ಳೆಯದು.

ರಕ್ತಕ್ಕೆ ಸಂಬಂಧಿಸಿದ ಸಮಸ್ಯೆ

ರಕ್ತಕ್ಕೆ ಸಂಬಂಧಿಸಿದ ಸಮಸ್ಯೆ

ಕಿಡ್ನಿ ಗಡ್ಡೆಯಿಂದಾಗಿ ರಕ್ತಹೀನತೆ, ವಿದ್ಯುದ್ವಿಚ್ಛೇದ ಅಥವಾ ಕ್ಯಾಲ್ಸಿಯಂನ ಅಸಮತೋಲನ ಅಥವಾ ರಕ್ತಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ ವೈದ್ಯಕೀಯ ನೆರವು ಅತೀ ಅಗತ್ಯ.

ಕಿಡ್ನಿ ಕ್ಯಾನ್ಸರ್ ಪತ್ತೆ ಮಾಡುವುದು

ಕಿಡ್ನಿ ಕ್ಯಾನ್ಸರ್ ಪತ್ತೆ ಮಾಡುವುದು

ಮೊದಲಿಗೆ ವೈದ್ಯರು ಕಿಡ್ನಿ ಕ್ಯಾನ್ಸರ್ ಗೆ ಸಂಬಂಧಿಸಿದ ಕೆಲವೊಂದು ಸಾಮಾನ್ಯ ಲಕ್ಷಣಗಳನ್ನು ಪರೀಕ್ಷೆ ಮಾಡುವರು. ಮೂತ್ರ ಪರೀಕ್ಷೆ, ರಕ್ತ ಪರೀಕ್ಷೆ, ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್ ಮತ್ತು ಎಂಆರ್ ಐ ಮೂಲಕ ಪರೀಕ್ಷೆ ಮಾಡಿಸಿಕೊಳ್ಳಲು ವೈದ್ಯರು ಸೂಚಿಸಬಹುದು. ಇದಕ್ಕೆ ಹೆಚ್ಚಾಗಿ ರೋಗಿಗೆ ವೈದ್ಯರು ಬಯೊಸ್ಪಿ ಮಾಡಿಸುವಂತೆ ಸೂಚಿಸಬಹುದು. ಇದರಿಂದ ಕ್ಯಾನ್ಸರ್ ನ್ನು ನಿಖರವಾಗಿ ಪತ್ತೆ ಮಾಡಬಹುದು. ಈ ಪರೀಕ್ಷೆಗಾಗಿ ಕಿಡ್ನಿಯ ಸಣ್ಣ ಅಂಗಾಂಶವನ್ನು ತೆಗೆದು ಪರೀಕ್ಷೆ ಮಾಡಲಾಗುತ್ತದೆ.

Most Read: ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು

ಕಿಡ್ನಿ ಕ್ಯಾನ್ಸರ್ ಗೆ ಚಿಕಿತ್ಸೆ

ಕಿಡ್ನಿ ಕ್ಯಾನ್ಸರ್ ಗೆ ಚಿಕಿತ್ಸೆ

ಕಿಡ್ನಿ ಕ್ಯಾನ್ಸರ್ ನ್ನು ವಿಕಿರಣ, ಕಿಮೋಥೆರಪಿ ಮತ್ತು ಶಸ್ತ್ರಚಿಕಿತ್ಸೆ ಮೂಲಕವಾಗಿ ಚಿಕಿತ್ಸೆ ನೀಡಬಹುದು. ಮೊದಲಿಗೆ ವೈದ್ಯರು ಕ್ಯಾನ್ಸರ್ ಯಾವ ಹಂತದಲ್ಲಿ ಇದೆ ಎಂದು ಪತ್ತೆ ಮಾಡಿದ ಬಳಿಕ ಚಿಕಿತ್ಸೆ ಸೂಚಿಸುವರು. ಕಿಡ್ನಿ ಸಮೀಪ ಇರುವಂತಹ ಇತರ ಕೆಲವು ಭಾಗಗಳಿಗೆ ಇದು ಹಬ್ಬಿದೆಯಾ ಎಂದು ತಿಳಿಯಲು ಪರೀಕ್ಷೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ಬಳಿಕ ಚಿಕಿತ್ಸೆಯು ಆರಂಭವಾಗುವುದು. ನಿಮಗೆ ಇಂತಹ ಯಾವುದೇ ಲಕ್ಷಣಗಳು ಕಾಣಿಸಿಕೊಂಡರೆ ಆಗ ನೀವು ವೈದ್ಯರನ್ನು ತಕ್ಷಣವೇ ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಿ. ಆರಂಭದಲ್ಲೇ ಪತ್ತೆ ಮಾಡಿದರೆ ಅದರಿಂದ ಕ್ಯಾನ್ಸರ್ ಹೆಚ್ಚಾಗುವುದನ್ನು ತಡೆಯಬಹುದು. ಕಿಡ್ನಿ ಕ್ಯಾನ್ಸರ್ ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರಬಹುದು. ಆರಂಭದಲ್ಲೇ ಆದರೆ ಇದು ಬೆಳವಣಿಗೆ ಆಗದಂತೆ ತಡೆಯಬಹುದು.

ನೆಫ್ರಿಕ್ಟೊಮಿ

ನೆಫ್ರಿಕ್ಟೊಮಿ

ವೈದ್ಯರಿಗೆ ಕಿಡ್ನಿ ಕ್ಯಾನ್ಸರ್ ಇರುವ ಬಗ್ಗೆ ತಿಳಿದುಬಂದರೆ, ನೆಫ್ರಿಕ್ಟೊಮಿ ಎನ್ನುವ ವಿಧಾನದ ಮೂಲಕ ಹಾನಿಗೊಳಗಾದ ಜೀವಕೋಶವನ್ನು ತೆಗೆಯುವರು. ಕ್ಯಾನ್ಸರ್ ಉಂಟಾದ ಜೀವಕೋಶಗಳನ್ನು ಮಾತ್ರ ತೆಗೆಯಲಾಗುವುದು ಮತ್ತು ಸಾಮಾನ್ಯ ಜೀವಕೋಶಗಳು ಹಾಗೆ ಇರುವುದು. ಕಿಡ್ನಿ ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವುದು ವೈದ್ಯರಿಗೆ ಕೂಡ ತುಂಬಾ ಕಷ್ಟಕರ. ಇದರಿಂದ ನಿಯಮಿತವಾಗಿ ದೇಹದ ಪರೀಕ್ಷೆ ಹಾಗೂ ಸ್ಕ್ಯಾನ್ ಮಾಡಿಕೊಂಡರೆ ಕಿಡ್ನಿ ಕ್ಯಾನ್ಸರ್ ನ್ನು ಬೇಗನೆ ಪತ್ತೆ ಹಚ್ಚಬಹುದು.

English summary

Alarming Signs and Symptoms of Kidney Cancer

Cancer is a deadly disease which can affect any part of the body. Kidney is one of the essential organs in the human body. It performs some essential functions like waste excretion, water level balancing, acid regulation, blood pressure regulation and red blood cell regulation. Cancer can affect your kidneys as well. Kidney cancer is considered very dangerous. However, before the onset of cancer in the kidneys, the human body gives some indications. It is very important to identify these signs and symptoms at the right time. Kidney cancer can affect anyone but usually, people who drink alcohol or smoke are more prone to this form of cancer.
X
Desktop Bottom Promotion