For Quick Alerts
ALLOW NOTIFICATIONS  
For Daily Alerts

ವಾಯು ಮಾಲಿನ್ಯದಿಂದ ಹುಟ್ಟುವಾಗಲೇ ಅಂಗವೈಕಲ್ಯ ಬರುವ ಸಾಧ್ಯತೆ ಹೆಚ್ಚಂತೆ!

|

ಇಂದಿನ ದಿನಗಳಲ್ಲಿ ಎಲ್ಲಿ ನೋಡಿದರೂ ನಾವು ವಾಯು ಮಾಲಿನ್ಯ, ಜಲ ಮಾಲಿನ್ಯ ಇತ್ಯಾದಿಗಳನ್ನು ನೋಡುತ್ತೇವೆ. ಜನಸಂಖ್ಯೆಯು ಹೆಚ್ಚಾಗುತ್ತಾ ಹೋದಂತೆ ಮಾಲಿನ್ಯವು ಹೆಚ್ಚಾಗುವುದು. ಅದೇ ರೀತಿಯಾಗಿ ನಾವು ಇಂದು ಬಳಸುವಂತಹ ವಾಹನಗಳಿಂದ, ಕೈಗಾರಿಕೆ ಇತ್ಯಾದಿಗಳಿಂದ ವಾಯು ಮಾಲಿನ್ಯವು ಅತಿಯಾಗುತ್ತಿದೆ. ಆದರೆ ವಾಯು ಮಾಲಿನ್ಯಕ್ಕೆ ಒಗ್ಗಿಕೊಂಡರೆ ಆಗ ಹುಟ್ಟುವ ಮಕ್ಕಳ್ಲಿ ಅಂಗ ವೈಕಲ್ಯವು ಕಾಣಿಸಿಕೊಳ್ಳುವುದು ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಹೇಳುವ ಪ್ರಕಾರ ವಿಶ್ವದಲ್ಲಿ ಪ್ರತೀ ಹತ್ತು ಮಂದಿಯಲ್ಲಿ 9 ಮಂದಿಯು ತುಂಬಾ ಕಲುಷಿತವಾದ ಗಾಳಿಯನ್ನು ಉಸಿರಾಡುವರು ಮತ್ತು ವಿಶ್ವದಲ್ಲಿ 9 ಸಾವು ಕಲುಷಿತ ಗಾಳಿಯಿಂದಾಗಿ ಆಗುತ್ತದೆ. ಇದರಿಂದಾಗಿ ಸುಮಾರು 7 ಮಿಲಿಯನ್ ಅಕಾಲಿಕ ಸಾವು ಸಂಭವಿಸುತ್ತದೆ.

ನ್ಯಾಷನಲ್ ಅಕಾಡಮಿ ಆಫ್ ಸೈನ್ಸ್ ನಲ್ಲಿ ಪ್ರಕಟಗೊಂಡಿರುವಂತಹ ಅಧ್ಯಯನ ವರದಿಯ ಪ್ರಕಾರ, ಭ್ರೂಣ ಬದುಕುಳಿಯುವ ಸಾಧ್ಯತೆಗಳು ತುಂಬಾ ಕಡಿಮೆ ಆಗಿದೆ ಮತ್ತು ಗರ್ಭಾವಸ್ಥೆಯ ದರಗಳನ್ನು ಕಡಿಮೆ ಮಾಡಿದೆ. ಇದರಿಂದಾಗಿ ತುಂಬಾ ಸಣ್ಣ ದೇಹದ ತೂಕ, ಮೆದುಳಿಗೆ ಹಾನಿ, ಹೃದಯ ಮತ್ತು ಇತರ ಕೆಲವೊಂದು ಅಂಗಾಂಗಗಳಿಗೆ ಕೂಡ ಹಾನಿಯಾಗಿರುವುದು ತಿಳಿದುಬಂದಿದೆ.

Air pollution

ಕೆಲವೊಂದು ಹೆಣ್ಣು ಇಲಿಗಳ ಮೇಲೆ ನಡೆಸಿರುವಂತಹ ಸಂಶೋಧನೆ ಮತ್ತು ಪರೀಕ್ಷೆಯಿಂದಾಗಿ ವಿಶ್ವದಲ್ಲಿ ಹೆಚ್ಚಾಗಿ ವಾಯುಮಾಲಿನ್ಯದ ವೇಳೆ ಕಂಡುಬರುವಂತಹ ಅಮೋನಿಯಂ ಸಲ್ಫೇಟ್ ನ್ನು ಇಲಿಗಳ ಮೇಲೆ ಪ್ರಯೋಗ ಮಾಡಿದ ವೇಳೆ ಅದರಿಂದ ತುಂಬಾ ವ್ಯತಿರಿಕ್ತ ಆರೋಗ್ಯ ಪರಿಣಾಮಗಳು ಕಂಡುಬಂದಿದೆ.

ಭಾರತ ಮತ್ತು ಚೀನಾದಲ್ಲಿ ಚಳಿಗಾಲದಲ್ಲಿ ವಾಯುಮಾಲಿನ್ಯವು ಹೆಚ್ಚಾಗುವುದು. ಇಲ್ಲಿ ಒಂದು ಕ್ಯೂಬಿಕ್ ಮೀಟರ್ ಗೆ ಸುಮಾರು ಮೈಕ್ರೋಗ್ರಾಂನಷ್ಟು ಪ್ರಮಾಣವು ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಅಮೋನಿಯಂ ಸಲ್ಫೇಟ್ ತುಂಬಾ ಹಾನಿಕಾರವಲ್ಲ ಎಂದು ಜನರು ತಿಳಿದಿದ್ದಾರೆ.

ಆದರೆ ವರದಿಗಳು ಹೇಳುವ ಪ್ರಕಾರ ಇದನ್ನು ಗರ್ಭಿಣಿ ಇಲಿಗಳ ಮೇಲೆ ಪ್ರಯೋಗ ಮಾಡಿದ ವೇಳೆ ಅದು ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ ಎಂದು ಅಮೆರಿಕಾದ ಟೆಕ್ಸಾಸ್ ನ ಎ ಆಂಡ್ ಎಂ ಯೂನಿವರ್ಸಿಟಿಯ ಪ್ರಾಧ್ಯಾಪಕ ರೆನಯಿ ಝಂಗ್ ಹೇಳಿದ್ದಾರೆ. ಈ ಪರಿಣಾಮಗಳಿಗೆ ಏನು ಕಾರಣ ಎಂದು ಇದುವರೆಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ನ್ಯಾನೋ ವಸ್ತುಗಳು ಅಥವಾ ಆಮ್ಲೀಯತೆಯು ಇದಕ್ಕೆ ಕಾರಣವಾಗಿರಬಹುದು ಎಂದು ಝಂಗ್ ತಿಲಿಸಿದರು.

ಕಲ್ಲಿದ್ದಲನ್ನು ಉರಿಸಿದ ವೇಳೆ ಸಲ್ಫೇಟ್ ಉತ್ಪತ್ತಿ ಆಗುವುದು. ಕಲ್ಲಿದ್ದಲು ಇಂದಿಗೂ ಹೆಚ್ಚಿನ ದೇಶಗಳಲ್ಲಿ ಇಂಧನದ ಮೂಲವಾಗಿದೆ. ಇದು ಅಭಿವೃದ್ಧಿ ಶೀಲ ಮತ್ತು ಅಭಿವೃದ್ಧಿ ಹೊಂದಿದ ಹೀಗೆ ಎರಡೂ ದೇಶಗಳಲ್ಲೂ ಬಳಕೆ ಮಾಡಲಾಗುತ್ತದೆ. ಅಮೋನಿಯಂನ್ನು ಅಮೋನಿಯಾ ದಿಂದ ಪಡೆಯಲಾಗುತ್ತದೆ. ಇದನ್ನು ಹೆಚ್ಚಾಗಿ ಕೃಷಿ, ಅಟೋಮೊಬೈಲ್ ಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದರಿಂದಾಗಿ ಇದು ಇಂದಿನ ದಿನಗಳಲ್ಲಿ ವಿಶ್ವದೆಲ್ಲೆಡೆಯಲ್ಲೂ ಇದೆ ಎಂದು ಝಂಗ್ ತಿಳಿಸುವರು.

English summary

Air pollution can lead to birth defects

According to the World Health Organization, nine out of 10 people worldwide breathe air containing a high level of pollutants, and one of every 9 global deaths can be attributed to exposure to air pollution, totalling over 7 million premature deaths a year. The research, published in the journal Proceedings of the National Academy of Sciences, showed definitive proof of decreased fetal survival rates, and also shortened gestation rates that can result in smaller body weight, in addition to damage to brains, hearts and other organs in the adult rat models.
X
Desktop Bottom Promotion