For Quick Alerts
ALLOW NOTIFICATIONS  
For Daily Alerts

ನೀವು ಪ್ರತಿ ದಿನ ಯೋಗ ಮಾಡಲೇಬೇಕು ಯಾಕೆ ಗೊತ್ತೇ? ಇಲ್ಲಿದೆ 8 ಕಾರಣಗಳು

|

ಭಾರತೀಯರು ಪುರಾತನ ಕಾಲದಿಂದಲೂ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮನಸ್ಸನ್ನು ಶಾಂತವಾಗಿಡಲು ಯೋಗ ಹಾಗೂ ಧ್ಯಾನ ಮಾಡುತ್ತಲಿದ್ದರು. ಪ್ರತಿನಿತ್ಯ ಯೋಗ ಮಾಡಿದರೆ ಅದರಿಂದ ಮನಸ್ಸು ತುಂಬಾ ಶಾಂತ ಹಾಗೂ ಹಿಡಿತದಲ್ಲಿರುವುದು. ಯೋಗ ನೀಡುವಂತಹ ಹಲವಾರು ರೀತಿಯ ಆರೋಗ್ಯ ಲಾಭಗಳಿಂದಾಗಿ ಇಂದು ಅದು ವಿಶ್ವದಾದ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಯೋಗದಿಂದ ಆರೋಗ್ಯ ಲಾಭಗಳು ಇದೆ ಎಂದು ವೈದ್ಯಕೀಯವಾಗಿಯೂ ಸಾಬೀತು ಆಗಿದೆ ಮತ್ತು ಅದನ್ನು ದಿನಿನಿತ್ಯವು ಮಾಡಲು ಸೂಚಿಸಿದೆ. ಯೋಗವು ಹಲವಾರು ಭಂಗಿ, ಧ್ಯಾನ ಮತ್ತು ಉಸಿರಾಟದ ವಿಧಾನದ ಮೂಲಕ ನಿಮ್ಮ ದೇಹ, ಮನಸ್ಸು ಮತ್ತು ಸ್ಫೂರ್ತಿಯ ನಡುವೆ ಸಂಬಂಧವನ್ನು ಸೃಷ್ಟಿಸುವುದು.

8 Reasons Why You Should do Yoga Everyday

ಯೋಗವು ನಿಮ್ಮ ದೇಹ ಹಾಗೂ ಮನಸ್ಸಿಗೆ ಲಾಭವನ್ನು ನೀಡುವುದು. ಇದು ದೇಹಕ್ಕೆ ಪೋಷಣೆ ನೀಡುವುದ, ಏಕಾಗ್ರತೆ ಸುಧಾರಣೆ ಮಾಡುವುದು ಮತ್ತು ನೀವು ತುಂಬಾ ಆತ್ಮವಿಶ್ವಾಸದಿಂದ ಇರುವಂತೆ ಮಾಡುವುದು. ನೀವು ಪ್ರತಿನಿತ್ಯ ಯೋಗ ಮಾಡಲು ಆರಂಭಿಸಿದರೆ ಆಗ ಅದು ಆರಂಭದಲ್ಲಿ ನಿಮಗೆ ಸ್ವಲ್ಪ ಮಟ್ಟಿಗೆ ತುಂಬಾ ಕಠಿಣ ಎಂದು ಅನಿಸಬಹುದು. ಆದರೆ ನೀವು ಯೋಗ ತರಗತಿಗಳಿಗೆ ಹೋಗಿ ಅಲ್ಲಿ ಯೋಗ ಮಾಡಬೇಕಾಗಿಲ್ಲ. ನಿಮ್ಮ ಮನೆ ಅಥವಾ ಹೊರಾಂಡದಲ್ಲಿಯೂ ಯೋಗ ಮಾಡಬಹುದು. ಹೀಗೆ ನೀವು ಯೋಗ ಮಾಡುವುದು ತುಂಬಾ ಸರಳವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನೀವು ಪ್ರತಿನಿತ್ಯ ಯೋಗ ಮಾಡಬೇಕು ಎನ್ನುವುದಕ್ಕೆ ಕೆಲವೊಂದು ಕಾರಣಗಳು ಇಲ್ಲಿವೆ.

ಒತ್ತಡ ನಿವಾರಣೆ

ಒತ್ತಡ ನಿವಾರಣೆ

ನೀವು ದಿನನಿತ್ಯ ಯೋಗಾಭ್ಯಾಸ ಮಾಡಿದರೆ ಅದರಿಂದ ಒತ್ತಡವು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುವುದು. ಯೋಗದಲ್ಲಿ ಮುಖ್ಯವಾಗಿ ಧ್ಯಾನ ಮತ್ತು ಉಸಿರಾಟದ ವಿಧಾನವು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ನೀವು ದಿನ ನಿತ್ಯ ಯೋಗಾಭ್ಯಾಸ ಮಾಡಿದರೆ ಆಗ ಒತ್ತಡವು ಕಡಿಮೆ ಆಗುವುದು ಮತ್ತು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುವುದು. ಯೋಗದಿಂದ ಕಾರ್ಟಿಸೊಲ್ ಪ್ರಮಾಣವು ತಗ್ಗುವುದು. ಕಾರ್ಟಿಸೊಲ್ ಒತ್ತಡಕ್ಕೆ ಕಾರಣವಾಗುವ ಹಾರ್ಮೋನು ಆಗಿದೆ. ಇದರಿಂದ ಯೋಗವು ಸಂಪೂರ್ಣ ಮಾನಸಿಕ ಆರೋಗ್ಯವನ್ನು ಸುಧಾರಣೆ ಮಾಡಲು ನೆರವಾಗುವುದು ಮತ್ತು ಒತ್ತಡವನ್ನು ದೂರವಿಡುವುದು.

Most Read: 9 ಸಾಮಾನ್ಯ ಯೋಗ ಮುದ್ರಾಗಳು ಮತ್ತು ಅದರ ಆರೋಗ್ಯಕಾರಿ ಲಾಭಗಳು

ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ಯೋಗದಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿಯು ಹೆಚ್ಚಾಗುವುದು. ಯೋಗದಿಂದ ದೇಹದಲ್ಲಿ ಶ್ವಾಸಕೋಶ, ಹೃದಯ ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಉತ್ತೇಜನಗೊಂಡು ಪ್ರತಿರೋಧಕ ವ್ಯವಸ್ಥೆಯು ವೃದ್ಧಿಯಾಗುವುದು. ಇದು ದೇಹದಲ್ಲಿ ಅಂಗಾಂಶಗಳಿಗೆ ಪರಿಹಾರ ನೀಡುವುದು ಮತ್ತು ಹೆಚ್ಚಿಸುವುದು. ನೀವು ಆರೋಗ್ಯಕಾರಿ ಆಹಾರ ಸೇವಿಸುವಂತೆ ಇದು ಪ್ರೇರೇಪಿಸುವುದು ಮತ್ತು ಚಯಾಪಚಯ ಕ್ರಿಯೆ ಸುಧಾರಣೆ ಮಾಡುವುದು.

ಉರಿಯೂತ ತಗ್ಗಿಸುವುದು

ಉರಿಯೂತ ತಗ್ಗಿಸುವುದು

ದೀರ್ಘಕಾಲಿಕ ಉರಿಯೂತ ಸಮಸ್ಯೆಯಿಂದಾಗಿ ಕೆಲವೊಂದು ಮಾರಕ ಕಾಯಿಲೆಗಳಾಗಿರುವಂತಹ ಮಧುಮೇಹ, ಕ್ಯಾನ್ಸರ್ ಮತ್ತು ಹೃದಯದ ಸಮಸ್ಯೆಯು ಬರಬಹುದು. ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಉರಿಯೂತ ಶಮನ ಮಾಡಬಹುದು. ಯೋಗವು ಉರಿಯೂತ ಉಂಟು ಮಾಡುವ ಎಲ್ಲಾ ಸಾಧ್ಯತೆಗಳನ್ನು ತಡೆಯುವುದು.

ಸ್ಥಿತಿಸ್ಥಾಪಕತ್ವ ಹೆಚ್ಚಿಸುವುದು

ಸ್ಥಿತಿಸ್ಥಾಪಕತ್ವ ಹೆಚ್ಚಿಸುವುದು

ಯೋಗದಿಂದ ದೇಹದ ಎಲ್ಲಾ ಸ್ನಾಯುಗಳು ಹಲವಾರು ವಿಧದಿಂದ ಎಳೆಯಲ್ಪಡುವುದು. ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ನೀವು ಪ್ರತಿನಿತ್ಯವು ಯೋಗಾಭ್ಯಾಸ ಮಾಡಿದರೆ ಅದರಿಂದ ನಿಮ್ಮೊಳಗೆ ಬದಲಾವಣೆ ಕಂಡುಕೊಳ್ಳಬಹುದು. ಹಿಂದಕ್ಕೆ ಬಾಗುವುದು ಅಥವಾ ಕಾಲಿನ ಹೆಬ್ಬೆರಳನ್ನು ಮುಟ್ಟುವುದು ಆರಂಭದಲ್ಲಿ ನಿಮಗೆ ಸಾಧ್ಯವಾಗದು. ಆದರೆ ಪ್ರತಿನಿತ್ಯವು ನೀವು ಯೋಗಾಭ್ಯಾಸ ಮಾಡಿದರೆ ಆಗ ಅದರಿಂದ ನಿಮಗೆ ಇದು ಸುಲಭವಾಗುವುದು. ಯೋಗದಿಂದಾಗಿ ದೇಹದಲ್ಲಿನ ಸ್ನಾಯುಗಳು ಬಲಗೊಳ್ಳುವುದು ಮತ್ತು ಸ್ನಾಯುಗಳ ಮೇಲೆ ಪದೇ ಪದೇ ಒತ್ತಡ ಬೀಳುವುದು ಕಡಿಮೆಯಾಗುವುದು.

Most Read: ಯೋಗ ಟಿಪ್ಸ್: ಮಂಡಿಗಳ ಬಲವರ್ಧನೆಗೆ 'ಆಂಜನೇಯಾಸನ'

ಭಂಗಿ ಸುಧಾರಿಸುವುದು

ಭಂಗಿ ಸುಧಾರಿಸುವುದು

ನಿರಂತರವಾಗಿ ಕುಳಿತುಕೊಂಡು ಕೆಲಸ ಮಾಡುವುದರಿಂದ ಅದು ಬೆನ್ನಿನ ಮೂಳೆ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ, ದಿನವಿಡಿ ನಿಮಗೆ ಬಳಲಿದಂತೆ ಆಗುವುದು. ಯೋಗದಲ್ಲಿ ಇರುವಂತಹ ಹಲವಾರು ರೀತಿಯ ಆಸನಗಳಿಂದ ಭಂಗಿಯನ್ನು ಸುಧಾರಣೆ ಮಾಡಿಕೊಳ್ಳಬಹುದು ಮತ್ತು ಬೆನ್ನಿನ ಮೂಳೆ ಮೇಲೆ ಬೀಳುವ ಒತ್ತಡವು ಕಡಿಮೆಯಾಗುವುದು. ಯೋಗದಿಂದ ಬೆನ್ನು ಮತ್ತು ಬೆನ್ನಿನ ಕೆಳಭಾಗದಲ್ಲಿ ಉಂಟಾಗುವಂತಹ ನೋವು ಕಡಿಮೆ ಮಾಡಬಹುದು.

ತೂಕ ನಿಯಂತ್ರಣದಲ್ಲಿಡಲು ನೆರವಾಗುವುದು

ತೂಕ ನಿಯಂತ್ರಣದಲ್ಲಿಡಲು ನೆರವಾಗುವುದು

ಯೋಗದಿಂದ ನೀವು ದೇಹದ ತೂಕ ಇಳಿಸಬಹುದು ಮತ್ತು ಅದನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಇದರಿಂದ ದೇಹವು ಸರಿಯಾದ ರೀತಿ ಹಾಗೂ ಗಾತ್ರದಲ್ಲಿ ಇರುವುದು. ಯೋಗದಿಂದ ನೀವು ಅದ್ಭುತವಾಗಿ ತೂಕ ಕಳೆದುಕೊಳ್ಳಬಹುದು ಮತ್ತು ನಿಮಗೆ ಬೇಕಿರುವಂತಹ ತೂಕ ಪಡೆಯಬಹುದು.

ಹೃದಯದ ಆರೋಗ್ಯ ಕಾಪಾಡುವುದು

ಹೃದಯದ ಆರೋಗ್ಯ ಕಾಪಾಡುವುದು

ಯೋಗವು ಹೃದಯಕ್ಕೆ ರಕ್ತ ಸರಬರಾಜನ್ನು ಉತ್ತಮಪಡಿಸುವ ಕಾರಣದಿಂದಾಗಿ ಹೃದಯದ ಆರೋಗ್ಯವನ್ನು ಸುಧಾರಣೆ ಮಾಡುವುದು. ಇದು ಹೃದಯದ ಕಾಯಿಲೆ ಬರುವಂತಹ ಅಪಾಯ ತಪ್ಪಿಸುವುದು. ಇದು ರಕ್ತದೊತ್ತಡ ಸಮತೋಲದಲ್ಲಿ ಇಡುವುದು. ಇದರಿಂದ ಹೃದಯದ ಕಾಯಿಲೆ ಬರುವ ಸಾಧ್ಯತೆಯು ಕ್ಷೀಣಿಸುವುದು. ಯೋಗದಿಂದ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಬಹುದು.

Most Read: ಯೋಗ ಮಾಡುವ ಮುನ್ನ ತಿನ್ನಬಹುದಾದ ಆಹಾರಗಳು

ಯೋಗದಿಂದ ದೇಹಕ್ಕೆ ಚೈತನ್ಯ ಸಿಗುವುದು

ಯೋಗದಿಂದ ದೇಹಕ್ಕೆ ಚೈತನ್ಯ ಸಿಗುವುದು

ಯೋಗಾಭ್ಯಾಸ ಮಾಡಿದರೆ ಅದರಿಂದ ನೀವು ದಿನವಿಡಿ ಚೈತನ್ಯದಿಂದ ಇರಬಹುದು. ಇದು ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚು ಮಾಡುವುದು. ದೇಹದಲ್ಲಿ ರಕ್ತದ ಸರಬರಾಜು ಹೆಚ್ಚಾಗುವಂತೆ ಶಕ್ತಿ ನೀಡುವುದು. ಯೋಗಾಭ್ಯಾಸ ಮಾಡುವ ವೇಳೆ ನೀವು ಹೆಚ್ಚಿನ ಆಮ್ಲಜನಕ ಪಡೆಯುವಿರಿ. ಇದರಿಂದ ನಿಮ್ಮ ದೇಹದ ಸಂಪೂರ್ಣ ಶಕ್ತಿಯು ಹೆಚ್ಚಾಗುವುದು.

English summary

8 Reasons Why You Should do Yoga Everyday

Yoga is an ancient method to stay fit and keep your body calm. But it has now gained popularity due to the surprising health benefits it offers. Now even science has proved benefits of yoga and also suggests adopting it as a daily habit. Yoga develops a relationship between your body, mind, and spirit through different body postures, meditation and breathing patterns.
X
Desktop Bottom Promotion