For Quick Alerts
ALLOW NOTIFICATIONS  
For Daily Alerts

ಮೂಲವ್ಯಾಧಿ ಗುಣಪಡಿಸಲು ಏಳು ಸಮರ್ಥ ಮನೆಮದ್ದುಗಳು

|

ಮೂಲವ್ಯಾಧಿ ಅಥವಾ ಪೈಲ್ಸ್ (Haemorrhoids)ಎಂದರೆ ಗುದದ್ವಾರದೊಳಗಿನ ಗೋಡೆಗಳಲ್ಲಿ ಕಾಣಬರುವ ಊತಗಳಾಗಿವೆ. ಸಾಮಾನ್ಯವಾಗಿ ನಲವತ್ತೈದು ಮತ್ತು ಅರವತ್ತೈದು ವರ್ಷ ವಯಸ್ಸಿನವರಲ್ಲಿಯೇ ಮೂಲವ್ಯಾಧಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ದೊಡ್ಡಕರುಳು ಕೊನೆಗೊಂಡು ಆಸನದ್ವಾರದವರೆಗಿನ ಗುದನಾಳದ ಗೋಡೆಗಳಲ್ಲಿರುವ ರಕ್ತನಾಳಗಳು ಊದಿಕೊಂಡು ಉರಿಯೂತ ಪ್ರಾರಂಭವಾದ ಬಳಿಕ ಮೂಲವ್ಯಾಧಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣಗಳು ಕೆಲವಾರಿವೆ. ಅನುವಂಶಿಕ ಕಾರಣಗಳು, ಅತಿಭಾರ ಎತ್ತುವವರು, ಮಲಬದ್ದತೆ, ಕೆಲವು ಆಹಾರಗಳ ಅಲರ್ಜಿ, ಆಹಾರದಲ್ಲಿ ನಾರಿನಂಶ ಇಲ್ಲದಿರುವುದು, ಸ್ಥೂಲಕಾಯ, ಗರ್ಭಾವಸ್ಥೆ, ವ್ಯಾಯಾಮದ ಕೊರತೆ ಹಾಗೂ ಅತಿ ಹೆಚ್ಚು ಕಾಲ ಕುಳಿತೇ ಅಥವಾ ನಿಂತೇ ಇರುವುದು ಮೊದಲಾದವು ಪ್ರಮುಖವಾಗಿವೆ. ಇದರಲ್ಲಿ ಅತಿ ಸಾಮಾನ್ಯವಾದ ಲಕ್ಷಣವೆಂದರೆ ಮಲವಿಸರ್ಜನೆಯ ಸಮಯದಲ್ಲಿ ಗುದದ್ವಾರದ ಅಂಚು ಮತ್ತು ಕೊಂಚವೇ ಒಳಭಾಗದಲ್ಲಿ ರಕ್ತ ಹೆಪ್ಪುಗಟ್ಟಿ ಒಸರುವುದು ಹಾಗೂ ಈ ಭಾಗದಲ್ಲಿ ಭಾರೀ ಉರಿಯಾಗುವುದು.

ಸಾಮಾನ್ಯವಾಗಿ ಮೂಲವ್ಯಾಧಿ ಗಂಭೀರವಾದ ಸಮಸ್ಯೆಯಾದರೂ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಈ ತೊಂದರೆಯನ್ನು ತಾನಾಗಿಯೇ ಗುಣಪಡಿಸುವ ಕ್ಷಮತೆ ಹೊಂದಿದೆ. ಆದರೆ ಗುಣವಾಗುವವರೆಗೂ ಪ್ರತಿಬಾರಿ ಮಲವಿಸರ್ಜಿಸುವಾಗಲೂ ಭಾರೀ ನೋವು ಎದುರಾಗುತ್ತದೆ. ಇನ್ನೊಂದು ಲಕ್ಷಣವೆಂದರೆ ಗುದನಾಳದ ಒಳಗಿನ ಭಾಗದಲ್ಲಿ ಗುಳ್ಳೆಯಂತಹ ಭಾಗ ಎದುರಾಗಿ ಮಲವಿಸರ್ಜನೆಯ ಒತ್ತಡದಿಂದ ಈ ಭಾಗ ಒಳಗಿನಿಂದ ಹೊರಭಾಗಕ್ಕೆ ಒತ್ತರಿಸಲ್ಪಟ್ಟು ಅಪಾರ ನೋವು ಎದುರಾಗುತ್ತದೆ. ಈ ತೊಂದರೆಯನ್ನು ನಿವಾರಿಸಲು ಕೆಲವು ಸುಲಭ ಮನೆಮದ್ದುಗಳಿದ್ದು ಇವುಗಳಲ್ಲಿ ಪ್ರಮುಖವಾದ ಏಳು ವಿಧಾನಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ, ಮೂಲವ್ಯಾಧಿ ನಿವಾರಣೆಗೆ ಸರಳ ಮನೆಮದ್ದುಗಳು.

ಲೋಳೆಸರ (Aloe vera)

ಲೋಳೆಸರ (Aloe vera)

ಲೋಳೆಸರದಲ್ಲಿರುವ ಉರಿಯೂತ ನಿವಾರಕ ಗುಣ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಗುಣ ಮೂಲವ್ಯಾಧಿಯಿಂದ ಎದುರಾದ ಉರಿ ಮತ್ತು ಊತವನ್ನು ನಿವಾರಿಸಲು ನೆರವಾಗುತ್ತವೆ. ಇದಕ್ಕಾಗಿ ಈಗತಾನೇ ಕೊಯ್ದ ಲೋಳೆಸರದ ಕೋಡೊಂದರಿಂದ ತಿರುಳನ್ನು ಸಂಗ್ರಹಿಸಿ, ಈ ತಿರುಳನ್ನು ಬೆರಳಿನ ಸಹಾಯದಿಂದ ಆಸನದ್ವಾರದ ಅಂಚು ಮತ್ತು ಒಳಭಾಗದಲ್ಲಿ ಹಚ್ಚಿಕೊಂಡು ಹೆಚ್ಚಿನ ಒತ್ತಡವಿಲ್ಲದೇ ಮಸಾಜ್ ಮಾಡಬೇಕು.

ಎಪ್ಸಂ ಉಪ್ಪು (Epsom Salt)

ಎಪ್ಸಂ ಉಪ್ಪು (Epsom Salt)

ಎಪ್ಸಂ ಉಪ್ಪು ಕರಗಿರುವ ಉಗುರುಬೆಚ್ಚನೆಯ ನೀರಿನಲ್ಲಿ ದೇಹವನ್ನು ಮುಳುಗಿಸಿಡುವುದೂ ಉತ್ತಮ ವಿಧಾನವಾಗಿದ್ದು ಮೂಲವ್ಯಾಧಿಯ ಉರಿಯನ್ನು ಶಮನಗೊಳಿಸುತ್ತದೆ. ಎಪ್ಸಂ ಉಪ್ಪಿನಲ್ಲಿರುವ ಮೆಗ್ನೇಶಿಯಂ ಸಲ್ಫೇಟ್ ಉರಿಯನ್ನು ಮತ್ತು ವಿಶೇಷವಾಗಿ ಹೊರಸೆಳೆಯಲ್ಪಟ್ಟ ಗುಳ್ಳೆಗಳಿಂದಾಗುವ ನೋವನ್ನು ಶಮನಗೊಳಿಸಲು ನೆರವಾಗುತ್ತದೆ. ಹಾರ್ವರ್ಡ್ ಹೆಲ್ತ್ ಸಂಸ್ಥೆಯ ಪ್ರಕಾರ ಪ್ರತಿ ಬಾರಿ ಮಲವಿಸರ್ಜಿಸಿದ ಬಳಿಕ ಎಪ್ಸಂ ಉಪ್ಪು ಬೆರೆತಿರುವ ಉಗುರುಬೆಚ್ಚನೆಯ ನೀರಿನಲ್ಲಿ ಸುಮಾರು ಇಪ್ಪತ್ತು ನಿಮಿಷ ದೇಹವನ್ನು ಮುಳುಗಿಸಿಡುವುದು ಹೆಚ್ಚು ಪರಿಣಾಮಕಾರಿಯಾಗಿದೆ.

Most Read: ಮೂಲವ್ಯಾಧಿ ಸಮಸ್ಯೆಯೇ..? ಮೂಲಂಗಿಯೇ ಸಮರ್ಥ ಮದ್ದು

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆಯಲ್ಲಿ ಉರಿಯೂತ ನಿವಾರಕ, ಸೂಕ್ಷ್ಮಜೀವಿ ನಿವಾರಕ ಹಾಗೂ ನೋವುನಿವಾರಕ ಗುಣಗಳಿದ್ದು ಮೂಲವ್ಯಾಧಿಯ ಉರಿ, ಊತ, ನೋವು ಹಾಗೂ ಅಸಮಾಧಾನವನ್ನು ನಿವಾರಿಸಲು ಬಳಕೆಯಾಗುತ್ತವೆ.

ಇದಕ್ಕಾಗಿ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ ಕೊಬ್ಬರಿ ಎಣ್ಣೆಯನ್ನು ಬೆರಳುಗಳಿಗೆ ಹಚ್ಚಿಕೊಂಡು ಆಸನದ್ವಾರ ಹಾಗೂ ಒಳಭಾಗಕ್ಕೆ ಹಚ್ಚಿಕೊಳ್ಳಬೇಕು ಹಾಗೂ ಕೊಂಚ ಪ್ರಮಾಣದ ಕೊಬ್ಬರಿ ಎಣ್ಣೆಯನ್ನು ನಿತ್ಯವೂ ಆಹಾರದ ಮೂಲಕ ಸೇವಿಸಬೇಕು.

ವಿಚ್ ಹ್ಯಾಜೆಲ್ (Witch hazel)

ವಿಚ್ ಹ್ಯಾಜೆಲ್ (Witch hazel)

ಈ ಹೆಸರಿನ ಮೂಲಿಕೆಯಲ್ಲಿ ಟ್ಯಾನಿನ್ ಮತ್ತು ಉರಿಯೂತವನ್ನು ಶಮನಗೊಳಿಸುವ ತೈಲಗಳಿವೆ. ಇವು ಮೂಲವ್ಯಾಧಿಯ ಕಾರಣ ಒಸರುವ ರಕ್ತವನ್ನು ನಿಲ್ಲಿಸಿ ಗುಣಪಡಿಸಲು ಉತ್ತಮ ನೆರವು ನೀಡುತ್ತವೆ. ಒಂದು ಅಧ್ಯಯನದ ಪ್ರಕಾರ ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣ ಉರಿಯನ್ನು ಶಮನಗೊಳಿಸುವುದರ ಜೊತೆಗೇ ಈ ತೊಂದರೆ ಉಲ್ಬಣಗೊಳ್ಳುವುದನ್ನೂ ತಡೆಯುತ್ತದೆ.

ಇದಕ್ಕಾಗಿ ಈ ಮೂಲಿಕೆಯಿಂದ ಹಿಂಡಲ್ಪಟ್ಟ ತೈಲವನ್ನು ನೇರವಾಗಿ ಆಸನದ್ವಾರ ಮತ್ತು ಒಳಭಾಗಕ್ಕೆ ಹಚ್ಚಿಕೊಳ್ಳಬೇಕು.

ತಣ್ಣನೆಯ ಒತ್ತಡ (Cold compress)

ತಣ್ಣನೆಯ ಒತ್ತಡ (Cold compress)

ಒಂದು ವೇಳೆ ಮೂಲವ್ಯಾಧಿಯ ಗಂಟುಗಳು ತುಂಬಾ ದೊಡ್ಡದಾಗಿದ್ದು ತೀವ್ರತರದ ನೋವಿನಿಂದ ಕೂಡಿದ್ದರೆ ಈ ಭಾಗಕ್ಕೆ ಮಂಜುಗಡ್ಡೆಯ ತಣಪನ್ನು ನೀಡುವ ಮೂಲಕ ಉರಿಯನ್ನು ಕಡಿಮೆಗೊಳಿಸಬಹುದು. ಇದಕ್ಕಾಗಿ ಕೊಂಚ ಮಂಜುಗಡ್ಡೆಯ ತುಂಡುಗಳನ್ನು ದಪ್ಪ ಟವೆಲ್ಲಿನಲ್ಲಿ ಸುತ್ತಿ ಆಸನದ್ವಾರಕ್ಕೆ ನೇರವಾಗಿ ತಗುಲುವಂತೆ ಸುಮಾರು ಹದಿನೈದು ನಿಮಿಷ ಇರಿಸಿ, ಬಳಿಕ ಸ್ವಚ್ಛನೀರಿನಿಂದ ತೊಳೆದುಕೊಳ್ಳಿ.

ಇಸಬ್ಗೋಲ್ (Psyllium husk)

ಇಸಬ್ಗೋಲ್ (Psyllium husk)

ಅಪ್ಪಟ ಕರಗುವ ನಾರು ಆಗಿರುವ ಇಸಬ್ಗೋಲ್ ಅತಿ ಸುರಕ್ಷಿತವಾದ ಆಹಾರವಾಗಿದ್ದು ಮೂಲವ್ಯಾದಿ, ಅತಿಸಾರ, ಕೊಲೆಸ್ಟ್ರಾಲ್, ಮಲಬದ್ದತೆ ಮೊದಲಾದ ಹಲವಾರು ತೊಂದರೆಗಳನ್ನು ನಿವಾರಿಸಲು ನೆರವಾಗುತ್ತದೆ. ಈ ನಾರು ನಮ್ಮ ಜೀರ್ಣಾಂಗದಲ್ಲಿ ಕೇವಲ ಕರಗಿ ಆಹಾರವನ್ನು ಮೆದುಗೊಳಿಸುತ್ತದೆ ಹಾಗೂ ಕನಿಷ್ಟ ಒತ್ತಡದಲ್ಲಿ ಸುಲಭವಾಗಿ ಹೊರಬರಲು ನೆರವಾಗುತ್ತದೆ. ಮೂಲವ್ಯಾಧಿ ಇರುವ ವ್ಯಕ್ತಿಗಳು ಈ ನಾರಿನಂಶವನ್ನು ತಮ್ಮ ನಿತ್ಯದ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸೇವಿಸುವ ಮೂಲಕ ಮಲವಿಸರ್ಜನೆಯನ್ನು ಸುಲಭಗೊಳಿಸಿ ರೋಗ ನಿರೋಧಕ ವ್ಯವಸ್ಥೆ ಈ ತೊಂದರೆಯನ್ನು ಶೀಘ್ರವಾಗಿ ಗುಣಪಡಿಸಲು ಪರೋಕ್ಷವಾಗಿ ನೆರವಾಗುತ್ತದೆ. ಸೂಚನೆ: ಈ ನಾರಿನಂಶವನ್ನು ಸೇವಿಸುವ ಮುನ್ನ ನಿಮ್ಮ ವೈದ್ಯರ ಸಲಹೆಯನ್ನು ಪಡೆದು ಅವರು ಸೂಚಿಸಿದ ಪ್ರಮಾಣವಷ್ಟನ್ನೇ ಸೇವಿಸಬೇಕು.

Most Read: ಪೈಲ್ಸ್‌ಗೆ ಮನೆಯಲ್ಲಿಯೇ ಚಿಕಿತ್ಸೆ- ಒಂದೆರಡು ದಿನಗಳಲ್ಲಿಯೇ ಗುಣಮುಖವಾಗುವಿರಿ

ಟೀ ಟ್ರೀ ತೈಲ (Tea tree oil)

ಟೀ ಟ್ರೀ ತೈಲ (Tea tree oil)

ಇದೊಂದು ಅವಶ್ಯಕ ತೈಲವಾಗಿದ್ದು ಪ್ರಬಲ ಉರಿಯೂತ ನಿವಾರಕ ಗುಣವನ್ನು ಹೊಂದಿದೆ. ಈ ಗುಣವೇ ಮೂಲವ್ಯಾಧಿಯ ಉರಿ ಮತ್ತು ಊತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಇದರಲ್ಲಿರುವ ಸೋಂಕುನಿವಾರಕ ಗುಣ ಮೂಲವ್ಯಾಧಿಯ ಲಕ್ಷಣಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಒಂದು ವೇಳೆ ಈ ತೈಲವನ್ನು ವಿಚ್ ಹ್ಯಾಜೆಲ್ ಅಥವಾ ಲೋಳೆಸರದ ಜೊತೆಗೆ ಪ್ರಯೋಗಿಸಿದರೆ ಇವುಗಳ ಒಟ್ಟಾರೆ ಗುಣ ಹಲವು ಪಟ್ಟು ಹೆಚ್ಚುತ್ತವೆ. ವಿಧಾನ: ಕೆಲವು ತೊಟ್ಟು ಈ ಅವಶ್ಯಕ ತೈಲವನ್ನು ಒಂದು ಚಿಕ್ಕ ಚಮಚದ ಮೂಲಕ ಮೂಲವ್ಯಾಧಿ ಆವರಿಸಿರುವ ಭಾಗಕ್ಕೆ ನೇರವಾಗಿ ಹಚ್ಚಿ ಸುಮಾರು ಹತ್ತು ನಿಮಿಷ ಹಾಗೇ ಬಿಟ್ಟು ಬಳಿಕ ಸ್ವಚ್ಛನೀರಿನಿಂದ ತೊಳೆದುಕೊಳ್ಳಬೇಕು.

ಮೂಲವ್ಯಾಧಿ ಆವರಿಸದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು

ಮೂಲವ್ಯಾಧಿ ಆವರಿಸದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು

  • ನಿಮ್ಮ ಆಹಾರದಲ್ಲಿ ಸಾಕಷ್ಟು ಕರಗುವ ಮತ್ತು ಕರಗದ ನಾರಿನಂಶವಿರಲಿ
  • ನಿತ್ಯವೂ ಎಂಟು ಲೋಟಗಳಷ್ಟು ನೀರನ್ನು ತಪ್ಪದೇ ಕುಡಿಯಿರಿ
  • ಅತಿ ಹೆಚ್ಚು ಹೊತ್ತು ಕುಳಿತೇ ಇರುವ ಅಥವಾ ನಿಂತೇ ಇರುವ ಸ್ಥಿತಿಯನ್ನು ತಪ್ಪಿಸಿ
  • ನಿಯಮಿತವಾಗಿ ವ್ಯಾಯಾಮ ಮಾಡಿ
  • ನಿಮ್ಮ ಒಳ ಉಡುಪುಗಳು ಹತ್ತಿಯದ್ದಾಗಿದ್ದು ಸಡಿಲವಾಗಿರಲಿ, ಹೊರ ಉಡುಪುಗಳೂ ಸಡಿಲವಾಗಿದ್ದು ಚಲನೆಯನ್ನು ಸುಲಭವಾಗಿಸುವಂತಿರಲಿ.

English summary

7 Effective Home Remedies To Treat Piles (Haemorrhoids)

Piles, also called haemorrhoids, are swellings that occur inside and around the anus. Piles are common among adults aged between 45 and 65. Piles is a common health problem that occurs when the veins in the anus and rectum become swollen and inflamed. It can be caused due to various factors like family history, heavy lifting, constipation, food allergies, a low-fibre diet, obesity, pregnancy, lack of physical activity, and prolonged sitting or standing.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more