For Quick Alerts
ALLOW NOTIFICATIONS  
For Daily Alerts

ಬೆಳಗ್ಗೆ ಲಿಂಬೆ ನೀರು ಕುಡಿದರೆ ಸಿಗುವ 7 ಆರೋಗ್ಯ ಲಾಭಗಳು

|

ಮನುಷ್ಯನಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ನಮಗೆ ಪ್ರಕೃತಿ ಹಲವಾರು ರೀತಿಯಲ್ಲಿ ದಾರಿಗಳನ್ನು ತೋರಿಸಿಕೊಟ್ಟಿದೆ. ನಾವು ಮಾತ್ರ ಎಲ್ಲವನ್ನು ಕಡೆಗಣಿಸಿ, ನಮಗೆ ಬೇಕಾದಂತಹ ಜೀವನ ಸಾಗಿಸುತ್ತೇವೆ. ಇದರಿಂದ ಬೊಜ್ಜು ಸಹಿತ ಹಲವಾರು ರೀತಿಯ ಕಾಯಿಲೆಗಳು ದೇಹವನ್ನು ವಕ್ಕರಿಸಿಕೊಳ್ಳುವುದು. ಇದರ ಬದಲಿಗೆ ಆರೋಗ್ಯಕಾರಿ ಆಹಾರ ಸೇವನೆ ಮಾಡಿದರೆ ಆಗ ಜೀವನ ಸುಂದರವಾಗಿರುವುದು. ಪ್ರಕೃತಿದತ್ತವಾಗಿ ಸಿಗುವಂತಹ ಹಣ್ಣು ಹಾಗೂ ತರಕಾರಿಗಳನ್ನು ಬಳಸಿಕೊಂಡು ನಾವು ಆಹಾರ ಕ್ರಮವನ್ನು ಮಾಡಬೇಕು.

ಅದರಲ್ಲೂ ಲಿಂಬೆರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ಹೇಳಲಾಗುತ್ತದೆ. ಇದು ಕೆಲವೊಂದು ಅಧ್ಯಯನಗಳಿಂದಲೂ ಸಾಬೀತು ಆಗಿದೆ. ಒಂದು ಲೋಟ ಲಿಂಬೆ ನೀರು ಕುಡಿದರೆ ನಿಮ್ಮ ಆ ದಿನವು ಉತ್ತಮವಾಗಿರುವುದು. ಲಿಂಬೆ ನೀರಿನ ಜತೆಗೆ ನೀವು ದಿನದ ಆರಂಭ ಮಾಡಿದರೆ ಅದು ಆರೋಗ್ಯ ಮತ್ತು ಫಿಟ್ನೆಸ್ ಗೆ ಅದ್ಭುತವಾಗಿ ಕೆಲಸ ಮಾಡುವುದು. ಆರೋಗ್ಯ ತಜ್ಞರ ಪ್ರಕಾರ ಲಿಂಬೆನೀರು ಚಯಾಪಚಯ ಕ್ರಿಯೆಗೆ ವೇಗ ನೀಡುವುದು ಮತ್ತು ತೂಕ ಕಳೆದುಕೊಳ್ಳಲು ಸಹಕಾರಿ ಯಾಗುವುದು. ಅದೇ ರೀತಿಯಲ್ಲಿ ಕಿಡ್ನಿಯಲ್ಲಿ ಕಲ್ಲು ಶೇಖರಣೆ ಆಗುವುದನ್ನು ಇದು ತಡೆಯುವುದು. ಲಿಂಬೆ ನೀರಿನಲ್ಲಿ ವಿಟಮಿನ್ ಸಿ, ಪೊಟಾಶಿಂ, ನಾರಿನಾಂಶ, ಕ್ಯಾಲ್ಸಿಯಂ, ವಿಟಮಿನ್ ಬಿ6, ಕಬ್ಬಿನಾಂಶ ಮತ್ತು ಮೆಗ್ನಿಶಿಯಂ ಸಮೃದ್ಧವಾಗಿದೆ...

ಲಿಂಬೆ ನೀರು ಎಂದರೇನು?

ಲಿಂಬೆ ನೀರು ಎಂದರೇನು?

ಲಿಂಬೆ ನೀರು ಎಂದರೆ ಲಿಂಬೆಯಿಂದ ತೆಗೆದಿರುವ ರಸವನ್ನು ನೀರಿನೊಂದಿಗೆ ಬೆರೆಸಿರುವುದು. ಬಿಸಿ ಅಥವಾ ತಣ್ಣೀರಿನ ಜತೆಗೆ ಲಿಂಬೆ ನೀರನ್ನು ಆನಂದಿಸಬಹುದು. ಪುದೀನಾ ಎಲೆಗಳು ಅಥವಾ ಜೇನುತುಪ್ಪ ಸೇರಿಸಿಕೊಂಡು ಕುಡಿದರೆ ಆಗ ಇದರ ರುಚಿಯು ಮತ್ತಷ್ಟು ಹೆಚ್ಚಾಗುವುದು.ಬೆಳಗ್ಗೆ ಲಿಂಬೆನೀರು ಕುಡಿಯುವಾಗ ಸಿಗುವ ಕೆಲವು ಲಾಭಗಳು

ಕಿಡ್ನಿ ಕಲ್ಲು ಆಗದಂತೆ ತಡೆಯುವುದು

ಕಿಡ್ನಿ ಕಲ್ಲು ಆಗದಂತೆ ತಡೆಯುವುದು

ಕಿಡ್ನಿ ಕಲ್ಲುಗಳು ಕ್ಯಾಲ್ಸಿಯಂ ಒಕ್ಸಲೇಟ್ ನಿಂದ ನಿರ್ಮಾಣ ಆಗುವುದು. ಲಿಂಬೆ ಹಣ್ಣಿನಲ್ಲಿ ಇರುವಂತಹ ಸಿಟ್ರಸ್ ಅಂಶವು ಕ್ಯಾಲ್ಸಿಯಂ ಬೇರೆ ಅಂಶಗಳೊಂದಿಗೆ ಸೇರಿಕೊಂಡು ಕಲ್ಲು ನಿರ್ಮಾಣ ಮಾಡುವುದನ್ನು ತಡೆಯುವುದು. ಲಿಂಬೆ ನೀರಿನಲ್ಲಿ ಉನ್ನತ ಮಟ್ಟದ ಸಿಟ್ರಸ್ ಅಂಶವಿದೆ ಮತ್ತು ಇದು ಕಿಡ್ನಿ ಕಲ್ಲನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ಪ್ರತಿರೋಧಕ ಶಕ್ತಿ ಹೆಚ್ಚಿಸುವುದು

ಲಿಂಬೆ ನೀರಿನಲ್ಲಿ ಆಂಟಿಆಕ್ಸಿಡೆಂಟ್ ಗಳಾಗಿರುವಂತಹ ವಿಟಮಿನ್ ಸಿ ಇದ್ದು, ಕೋಶಗಳಿಗೆ ಆಗುವಂತಹ ಹಾನಿಯನ್ನು ಇದು ತಪ್ಪಿಸುವುದು. ಲಿಂಬೆಯಲ್ಲಿ ಇರುವ ಫ್ಲಾವನಾಯ್ಡ್ ರಕ್ತ ಸಂಚಾರವನ್ನು ಸುಗಮಗೊಳಿಸುವುದು ಮತ್ತು ಆಕ್ಸಿಡೇಟಿವ್ ಒತ್ತಡ ಮತ್ತು ಹಾನಿ ತಡೆಯುವುದು.

ತೂಕ ಕಳೆದುಕೊಳ್ಳಲು ಸಹಕಾರಿ

ತೂಕ ಕಳೆದುಕೊಳ್ಳಲು ಸಹಕಾರಿ

ಲಿಂಬೆ ನೀರಿನಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದೆ ಮತ್ತು ಇದು ತೂಕ ಕಳೆದುಕೊಳ್ಳಲು ಇದು ತುಂಬಾ ಸಹಕಾರಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬೆ ನೀರು ಕುಡಿದರೆ ಅದರಿಂದ ಚಯಾಪಚಯ ಕ್ರಿಯೆಗೆ ಶಕ್ತಿ ಸಿಗುವುದು ಮತ್ತು ಹೊಟ್ಟೆ ತುಂಬಿದಂತೆ ಆಗುವುದು. ಇದರಿಂದ ತೂಕ ಇಳಿಸಬಹುದು.

ಜೀರ್ಣಕ್ರಿಯೆ ವೃದ್ಧಿಸುವುದು

ಜೀರ್ಣಕ್ರಿಯೆ ವೃದ್ಧಿಸುವುದು

ಬೆಳಗ್ಗೆ ಲಿಂಬೆ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ವೇಗ ಪಡೆಯುವುದು. ಇದರಿಂದಾಗಿ ಆಹಾರವು ಸುಲಭವಾಗಿ ಜೀರ್ಣಗೊಳ್ಳುವುದು ಮತ್ತು ವಿಷಕಾರಿ ಅಂಶವು ಜಮೆ ಆಗುವುದನ್ನು ತಡೆಯಬಹುದು. ಲಿಂಬೆ ನೀರು ವಿರೇಚಕವಾಗಿ ಕೆಲಸ ಮಾಡುವ ಕಾರಣದಿಂದಾಗಿ ಮಲಬದ್ಧತೆ ನಿವಾರಿಸುವುದು. ಮಲಬದ್ಧತೆ ಇರುವವರು ಖಾಲಿ ಹೊಟ್ಟೆಗೆ ಒಂದು ಲೋಟ ಲಿಂಬೆ ನೀರು ಕುಡಿಯಿರಿ.

ಬಾಯಿಯ ಆರೋಗ್ಯ ಕಾಪಾಡುವುದು

ಬಾಯಿಯ ಆರೋಗ್ಯ ಕಾಪಾಡುವುದು

ಲಿಂಬೆಯಲ್ಲಿ ಇರುವಂತಹ ವಿಟಮಿನ್ ಸಿ ಬಾಯಿಯಲ್ಲಿ ಬ್ಯಾಕ್ಟೀರಿಯಾ ಜಮೆಯಾಗದಂತೆ ನೋಡಿಕೊಳ್ಳುವುದು. ಲಿಂಬೆ ನೀರು ಕುಡಿದರೆ ಅದು ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುವುದು ಮತ್ತು ಬಾಯಿಯು ತಾಜಾವಾಗಿ ಇರುವಂತೆ ಕಾಪಾಡುವುದು. ಜೊಲ್ಲು ಉತ್ಪತ್ತಿಯನ್ನು ಇದು ಉತ್ತೇಜಿಸುವುದು ಮತ್ತು ಬಾಯಿ ಒಣಗಿ, ಬಾಯಿಯಿಂದ ದುರ್ವಾಸನೆ ಬರದಂತೆ ಅದು ತಡೆಯುವುದು.

ಶಕ್ತಿ ನೀಡುವುದು

ಶಕ್ತಿ ನೀಡುವುದು

ಲಿಂಬೆ ನೀರಿನಲ್ಲಿ ಉತ್ತಮ ಮಟ್ಟದ ಪೊಟಾಶಿಯಂ ಇದೆ ಮತ್ತು ಇದು ಕೋಶಗಳ ಕಾರ್ಯನಿರ್ವಹಣೆ ಮತ್ತು ಚಯಾಪಚಯ ಕ್ರಿಯೆಗೆ ತುಂಬಾ ಒಳ್ಳೆಯದು. ಪೊಟಾಶಿಯಂ ವಿದ್ಯುದ್ವಿಚ್ಛೇದವಾಗಿದ್ದು, ದೇಹಕ್ಕೆ ಶಕ್ತಿ ನೀಡುವುದು, ಸ್ನಾಯುಗಳು ಮತ್ತು ನರಗಳ ಸಂವಹನಕ್ಕೆ ನೆರವಾಗುವುದು.

ಚರ್ಮ ಮತ್ತು ಕೂದಲಿನ ಆರೋಗ್ಯ ವೃದ್ಧಿಸುವುದು

ಚರ್ಮ ಮತ್ತು ಕೂದಲಿನ ಆರೋಗ್ಯ ವೃದ್ಧಿಸುವುದು

ಲಿಂಬೆಯಲ್ಲಿ ಇರುವಂತಹ ವಿಟಮಿನ್ ಸಿ ಚರ್ಮಕ್ಕೆ ತುಂಬಾ ಅದ್ಭುತವಾಗಿ ಕೆಲಸ ಮಾಡುವುದು. ಒಂದು ಅಧ್ಯಯನವು ಹೇಳಿರುವ ಪ್ರಕಾರ ವಿಟಮಿನ್ ಸಿ ಹೆಚ್ಚಿಗೆ ಸೇವನೆ ಮಾಡಿದರೆ ಅದರಿಂದ ನೆರಿಗೆ ಬೀಳುವುದು ಕಡಿಮೆ ಆಗುವುದು. ಫ್ರೀ ರ್ಯಾಡಿಕಲ್ ನಿಂದ ಆಗುವ ಹಾನಿ ತಡೆಯವುದು. ವಿಟಮಿನ್ ಸಿ ಯು ಕಾಲಜನ್ ಸಂಶ್ಲೇಷಣೆಯಲ್ಲಿ ಭಾಗಿ ಆಗುವುದು. ಇದರ ಪರಿಣಾಮವಾಗಿ ಚರ್ಮದ ಅಡಿಯಲ್ಲಿರುವ ಅಂಗಾಂಶಗಳು ಸಂಪರ್ಕಿಸುವುದು. ವಿಟಮಿನ್ ಸಿಯು ಕಬ್ಬಿನಾಂಶವನ್ನು ಸರಿಯಾಗಿ ಹೀರಿಕೊಳ್ಳುವುದು. ಇದು ಕೂದಲಿನ ಬೆಳವಣಿಗೆಗೆ ಬೇಕಾಗಿರುವ ಪ್ರಮುಖ ಖನಿಜಾಂಶ ಆಗಿದೆ.

ಲಿಂಬೆ ನೀರಿನ ಕೆಲವು ಸಾಧ್ಯತೆಯ ಅಪಾಯಗಳು

ಲಿಂಬೆ ನೀರಿನ ಕೆಲವು ಸಾಧ್ಯತೆಯ ಅಪಾಯಗಳು

ಅತಿಯಾಗಿ ಲಿಂಬೆ ನೀರು ಕುಡಿದರೆ ಅದರಿಂದ ನಿಮ್ಮ ಹಲ್ಲಿಗೆ ಹಾನಿ ಆಗಬಹುದು. ಇದರಿಂದ ಹಲ್ಲುಗಳು ಬೇಗನೆ ದಂತಕುಳಿಯಂತಹ ಸಮಸ್ಯೆಗೆ ಸಿಲುಕಬಹುದು. ಯಾಕೆಂದರೆ ಲಿಂಬೆಯಲ್ಲಿ ಸಿಟ್ರಸ್ ಆಮ್ಲವಿದೆ. ಇದನ್ನು ಸ್ಟ್ರಾದಲ್ಲಿ ಕುಡಿಯಿರಿ ಅಥವಾ ಕುಡಿದ ಬಳಿಕ ಬಾಯಿ ತೊಳೆಯಿರಿ. ಎದೆ ಉರಿ ಸಮಸ್ಯೆಯ ವಿಚಾರಕ್ಕೆ ಬಂದಾಗ ಲಿಂಬೆ ನೀರು ಎರಡು ವಿಧದಿಂದಲೂ ಕೆಲಸ ಮಾಡಬಹುದು. ಇದು ಎದೆ ಉರಿ ಕಡಿಮೆ ಮಾಡಬಹುದು ಅಥವಾ ಅದನ್ನು ಹೆಚ್ಚಿಸಬಹುದು.

ಲಿಂಬೆ ನೀರು ತಯಾರಿಸುವುದು ಹೇಗೆ?

ಲಿಂಬೆ ನೀರು ತಯಾರಿಸುವುದು ಹೇಗೆ?

ಬೇಕಾಗುವ ಸಾಮಗ್ರಿಗಳು

*1 ಲಿಂಬೆ

*ಒಂದು ಲೋಟ ನೀರು

ವಿಧಾನ

ಒಂದು ಲೋಟಕ್ಕೆ ಲಿಂಬೆ ರಸವನ್ನು ಸರಿಯಾಗಿ ಹಿಂಡಿಕೊಳ್ಳಿ

ಇದಕ್ಕೆ ನೀವು ಪುದೀನಾ ಎಲೆಗಳು, ಜೇನುತುಪ್ಪ ಅಥವಾ ದಾಲ್ಚಿನಿ ಹಾಕಿಕೊಂಡು ರುಚಿ ಹೆಚ್ಚಿಸಬಹುದು.

ಸರಿಯಾಗಿ ಕಲಸಿಕೊಂಡು ಕುಡಿಯಿರಿ.

English summary

7 Benefits Of Drinking Lemon Water In The Morning

Lemons are packed full of vitamin C, potassium, fibre, calcium, vitamin B6, iron, and magnesium. Lemon water is the juice squeezed from a lemon and mixed with water. The lemon water can be enjoyed either hot or cold. Other ingredients like mint leaves or honey are also added to enhance the flavour.
X
Desktop Bottom Promotion