For Quick Alerts
ALLOW NOTIFICATIONS  
For Daily Alerts

ನಿಮಗೆ ಗೊತ್ತೇ? ಮಶ್ರೂಮ್‌ನ್ನು ಔಷಧಿಗಳಲ್ಲಿಯೂ ಬಳಸುತ್ತಾರಂತೆ!

|

ಮಶ್ರೂಮ್ ಕರಿ, ಮಶ್ರೂಮ್ ಚಿಲ್ಲಿ ಹಾಗೂ ಮಶ್ರೂಮ್ ನಿಂದ ಹಲವಾರು ರೀತಿಯ ಖಾದ್ಯಗಳನ್ನು ನೀವು ಮಾಡಿಕೊಂಡು ತಿನ್ನಬಹುದು. ಹೋಟೆಲ್ ಗೆ ಹೋಗಿ ಮೆನು ನೋಡಿದರೆ ನಿಮಗೆ ಮಶ್ರೂಮ್ ನಿಂದ ಸಿಗಬಹುದಾದ ಖಾದ್ಯಗಳ ಪಟ್ಟಿಯೇ ಇರುವುದು. ಮಶ್ರೂಮ್ ಎಂದರೆ ಕನ್ನಡದಲ್ಲಿ ಅಣಬೆ ಎಂದು ಕರೆಯಲಾಗುತ್ತದೆ. ಇದರಿಂದ ಹಲವಾರು ರೀತಿಯ ಲಾಭಗಳು ದೇಹಕ್ಕೆ ಸಿಗುವುದು ಎಂದು ಹೇಳಲಾಗುತ್ತದೆ.

You know, Mushrooms is usefull for Medicinal purpose also

ಮಶ್ರೂಮ್ ನ್ನು ಹಾಗೆ ತಿನ್ನಬಹುದು ಅಥವಾ ಖಾದ್ಯಕ್ಕೆ ಬಳಸಬಹುದು. ಇದರ ಸಪ್ಲಿಮೆಂಟ್ ಗಳನ್ನು ಬಳಸಬಹುದು. ಹೆಚ್ಚಾಗಿ ಹಸಿ ಮಶ್ರೂಮ್ ನ್ನು ತಿನ್ನುವುದು ತುಂಬಾ ಕಡಿಮೆ. ಇಂದು ವಿಶ್ವದೆಲ್ಲೆಡೆಯಲ್ಲಿ ಮಶ್ರೂಮ್ ಎನ್ನುವುದು ಭಾರೀ ಖ್ಯಾತಿ ಪಡೆದುಕೊಂಡಿದೆ. ಇಂತಹ ಮಶ್ರೂಮ್ ಬಗ್ಗೆ ನಿಮಗೆ ತಿಳಿಯದೆ ಇರುವ ಕೆಲವೊಂದು ವಿಚಾರಗಳನ್ನು ಈ ಲೇಖನದ ಮೂಲಕ ತಿಳಿಸಿಕೊಡುವಂತಹ ಪ್ರಯತ್ನ ಮಾಡಿದ್ದೇವೆ. ಓದಲು ನೀವು ತಯಾರಾಗಿರಿ.

ಮಶ್ರೂಮ್ ತರಕಾರಿಯಲ್ಲ!

ಮಶ್ರೂಮ್ ತರಕಾರಿಯಲ್ಲ!

ಇದು ನಿಜ. ಅಡುಗೆ ಮನೆಯಲ್ಲಿ ಮಶ್ರೂಮ್ ನ್ನು ನಾವು ಯಾವಾಗಲೂ ತರಕಾರಿಯೆಂದೇ ಪರಿಗಣಿಸಿದ್ದೇವೆ. ಆದರೆ ಮಶ್ರೂಮ್ ನ್ನು ವಿಜ್ಞಾನ ವಿಶ್ವದಲ್ಲಿ ಶಿಲೀಂಧ್ರ(ನಾಯಿಕೊಡೆ)ವೆಂದು ಕರೆಯಲಾಗುತ್ತದೆ. ಇವುಗಳಿಗೆ ಶಕ್ತಿ ಉತ್ಪತ್ತಿ ಮಾಡಲು ಬಿಸಿಲಿನ ಅಗತ್ಯವಿಲ್ಲ. ಕತ್ತಲು ಹಾಗೂ ತಂಪಾದ ಪ್ರದೇಶದಲ್ಲೂ ಇದು ಬೆಳೆಯುವುದು. ಅದಾಗ್ಯೂ, ತರಕಾರಿಗಳಲ್ಲಿ ಇರುವಂತೆ ಮಶ್ರೂಮ್ ನಲ್ಲಿ ಕೂಡ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ.

Most Read: ಆಯುರ್ವೇದದ ಮೂಲಕ 'ಬಾಡಿ ಹೀಟ್' ಕಡಿಮೆ ಮಾಡಲು ಸರಳ ಟಿಪ್ಸ್

ಶತಮಾನಗಳಿಂದ ಔಷಧಿಯಾಗಿ ಬಳಕೆ

ಶತಮಾನಗಳಿಂದ ಔಷಧಿಯಾಗಿ ಬಳಕೆ

ಚೀನಾದಲ್ಲಿ ಶತಮಾನಗಳಿಂದಲೂ ಮಶ್ರೂಮ್ ನ್ನು ಔಷಧಿಯಾಗಿಯು ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಜಪಾನ್ ನಲ್ಲಿಯೂ ಹಿಂದಿನ ಕಾಲದಲ್ಲಿ ಮಶ್ರೂಮ್ ನ್ನು ಔಷಧಿಯಾಗಿ ಬಳಕೆ ಮಾಡಲಾಗುತ್ತಿತ್ತು. 16ನೇ ಶತಮಾನದಲ್ಲಿ ರಷ್ಯಾ ಮತ್ತು ಅಮೆರಿಕಾದ ಕೆಲವು ಭಾಗಗಳಲ್ಲೂ ಇದು ಔಷಧಿಯಾಗಿ ಬಳಕೆ ಮಾಡಲಾಗುತ್ತಿತ್ತು. ಇಂದಿನ ದಿನಗಳಲ್ಲಿ ಮಶ್ರೂಮ್ ನ್ನು ಚೀನಾ, ಜಪಾನ್ ಮತ್ತು ಕೊರಿಯಾದಲ್ಲಿ ಬಳಕೆ ಮಾಡಲಾಗುತ್ತಿದೆ. 1960ರಿಂದ ನಡೆಸಿಕೊಂಡು ಬರುತ್ತಿರುವ ಅಧ್ಯಯನಗಳು ಮಶ್ರೂಮ್ ನಲ್ಲಿ ಲಾಭಗಳು ಮತ್ತು ವೈದ್ಯಕೀಯ ಗುಣಗಳನ್ನು ಹೊರಹಾಕಿವೆ.

ಎಲ್ಲಿ ಬೆಳೆಯಲಾಗಿದೆ ಎನ್ನುವುದು ಅತೀ ಅಗತ್ಯ

ಎಲ್ಲಿ ಬೆಳೆಯಲಾಗಿದೆ ಎನ್ನುವುದು ಅತೀ ಅಗತ್ಯ

ಮಶ್ರೂಮ್ ನ್ನು ಎಲ್ಲಿ ಬೆಳೆಯಲಾಗುತ್ತದೆಯಾ ಅದು ಅಲ್ಲಿರುವ ಪ್ರತಿಯೊಂದನ್ನು ಹೀರಿಕೊಳ್ಳುವುದು. ಇದರಲ್ಲಿ ಕೀಟನಾಶಗಳು ಅಥವಾ ರಾಸಾಯನಿಕಗಳು ಸೇರಬಹುದು. ಇದನ್ನು ಸೇವನೆ ಮಾಡಿದಾಗ ದೇಹವನ್ನು ಸೇರಬಹುದು. ಬೆಳೆದಿರುವ ಜಾಗದಲ್ಲಿರುವ ಪ್ರತಿಯೊಂದನ್ನು ಇದು ಹೀರಿಕೊಳ್ಳುವುದು ಮತ್ತು ಅದನ್ನು ತನ್ನಲ್ಲಿ ಬಲಪಡಿಸಿಕೊಳ್ಳುವುದು. ಇದರಿಂದ ಲೋಹ, ಕಲುಷಿತ ನೀರು ಅಥವಾ ಗಾಳಿಯಲ್ಲಿ ಮಶ್ರೂಮ್ ಬೆಳೆದಿದ್ದರೆ ಇದು ದೇಹಕ್ಕೆ ಹಾನಿಯುಂಟು ಮಾಡಬಹುದು. ಅದರಲ್ಲೂ ಲೋಹಗಳು ದೇಹಕ್ಕೆ ಹಾನಿಯುಂಟು ಮಾಡುವುದು. ಇದರಿಂದ ಮಶ್ರೂಮ್ ಎಲ್ಲಿ ಬೆಳೆದಿದೆ ಎನ್ನುವುದು ಮುಖ್ಯವಾಗಿರುವುದು.

Most Read: ನಿಮಗೆ ತಿಳಿದಿರಲೇಬೇಕಾದ ಅತಿ ಶಕ್ತಿಯುತ ನಾಲ್ಕು 'ದುರ್ಗಾ ಮಂತ್ರಗಳು'

ಔಷಧೀಯ ಶಿಲೀಂಧ್ರವು ದೇಹದಲ್ಲಿ ಪ್ರತಿರೋಧ ವ್ಯವಸ್ಥೆಗೆ ಬಲ ನೀಡುವುದು

ಔಷಧೀಯ ಶಿಲೀಂಧ್ರವು ದೇಹದಲ್ಲಿ ಪ್ರತಿರೋಧ ವ್ಯವಸ್ಥೆಗೆ ಬಲ ನೀಡುವುದು

ಹಲವಾರು ಅಧ್ಯಯನಗಳು ಮಶ್ರೂಮ್ ದೇಹದ ಪ್ರತಿರೋಧಕ ವ್ಯವಸ್ಥೆ ಬಲಗೊಳಿಸುತ್ತದೆ ಎಂದು ಹೇಳಿವೆ. ಮಶ್ರೂಮ್ ನಲ್ಲಿ ಪ್ರತಿರೋಧಕ ವ್ಯವಸ್ಥೆ ಬಲಗೊಳಿಸುವಂತಹ ಗುಣಗಳು ಇವೆ. ಪಾಲಿಸ್ಯಾಕರೈಡ್ ಎನ್ನುವ ಅಂಶವು ದೇಹದ ಪ್ರತಿರೋಧಕ ಶಕ್ತಿ ವೃದ್ಧಿಸುವುದು. ಸೂಕ್ಷ್ಮ ಮಟ್ಟದಲ್ಲಿ ಈ ಅಂಶವು ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಇದು ಸಾಮಾನ್ಯ ಶೀತದಿಂದ ಹಿಡಿದು ಕ್ಯಾನ್ಸರ್ ವಿರುದ್ಧ ಹೋರಾಟದ ತನಕವಿರಬಹುದು. ಕೆಲವೊಂದು ಮಶ್ರೂಮ್ ಗಳು ಆ್ಯಂಟಿವೈರಲ್ ನ್ನು ಉತ್ಪತ್ತಿ ಮಾಡಿ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು.

ವಿಟಮಿನ್ ಡಿಯ ಉನ್ನತ ಮೂಲ

ವಿಟಮಿನ್ ಡಿಯ ಉನ್ನತ ಮೂಲ

ವಿಟಮಿನ್ ಡಿ ನೀಡುವಂತಹ ಸಸ್ಯಹಾರಿ ಆಹಾರವೆಂದರೆ ಮಶ್ರೂಮ್. ವಿಟಮಿನ್ ಡಿಯು ಸೂರ್ಯನ ಬಿಸಿಲಿನಿಂದ ಸಿಗುವ ಕಾರಣದಿಂದಾಗಿ ಇದನ್ನು ಬಿಸಿಲಿನ ವಿಟಮಿನ್ ಎಂದು ಕರೆಯಲಾಗುತ್ತದೆ. ಇದು ಮಾನುಷ್ಯನ ಆರೋಗ್ಯಕ್ಕೆ ಅತೀ ಅಗತ್ಯ. ಪ್ರತಿನಿತ್ಯವು ದೇಹಕ್ಕೆ ವಿಟಮಿನ್ ಡಿ ಅಗತ್ಯವೆಂದು ತಜ್ಞ ವೈದ್ಯರು ಹೇಳುವರು. ಮಶ್ರೂಮ್ ಇದನ್ನು ದೇಹಕ್ಕೆ ಒದಗಿಸುವುದು.

Most Read: ಒಂಬತ್ತು ದಿನಗಳ ಕಾಲ ದೇವಿಯ ಆರಾಧನೆಗಾಗಿ 'ಶಕ್ತಿಯುತ' ಮಂತ್ರಗಳು

ವಿಟಮಿನ್ ಬಿ ಸಂಕೀರ್ಣವೂ ಇದರಲ್ಲಿದೆ

ವಿಟಮಿನ್ ಬಿ ಸಂಕೀರ್ಣವೂ ಇದರಲ್ಲಿದೆ

ಹೌದು, ಮಶ್ರೂಮ್ ನಲ್ಲಿ ವಿವಿಧ ರೀತಿಯ ವಿಟಮಿನ್ ಬಿಗಳಾಗಿರುವ ಬಿ2 ರಿಬೊಫ್ಲಾವಿನ್, ಬಿ3 ನಿಯಾಸಿನ್, ಬಿ6 ಮತ್ತು ಬಿ12 ಇದೆ. ಇವುಗಳು ದೇಹಕ್ಕೆ ಬೇಕಾಗಿರುವ ಅಗತ್ಯ ಪೋಷಕಾಂಶಗಳು. ನಾವು ಸೇವಿಸುವ ಕ್ಯಾಲರಿಯನ್ನು ಇವುಗಳು ಶಕ್ತಿಯಾಗಿ ಪರಿವರ್ತಿಸುತ್ತವೆ. ಕೆಲವೊಂದು ಬಿ ವಿಟಮಿನ್ ಗಳು ವಿಶೇಷ ಕಾರ್ಯನಿರ್ವಹಿಸುವುದು. ಉದಾಹರಣೆಗೆ ರಿಬೊಫ್ಲಾವಿನ್ ರಕ್ತನಾಳಗಳಿಗೆ ನೆರವಾಗುವುದು. ನಿಯಾಸಿನ್ ಜೀರ್ಣಕ್ರಿಯೆ ವ್ಯವಸ್ಥೆಗೆ ನೆರವಾಗುವುದು. ಪ್ರತಿನಿತ್ಯವೂ ಇದನ್ನು ನಾವು ಸೇವಿಸಬೇಕು. ಇದರಿಂದ ಮಶ್ರೂಮ್ ನ್ನು ಖಾದ್ಯವಾಗಿ ಅಥವಾ ಸಪ್ಲಿಮೆಂಟ್ ರೂಪದಲ್ಲಿ ಸೇವಿಸಬಹುದು.

ಮಶ್ರೂಮ್ ನಲ್ಲಿ ನೈಸರ್ಗಿಕ ಆ್ಯಂಟಿಬಯೋಟಿಕ್ ಮತ್ತು ಆ್ಯಂಟಿಆಕ್ಸಿಡೆಂಟ್

ಮಶ್ರೂಮ್ ನಲ್ಲಿ ನೈಸರ್ಗಿಕ ಆ್ಯಂಟಿಬಯೋಟಿಕ್ ಮತ್ತು ಆ್ಯಂಟಿಆಕ್ಸಿಡೆಂಟ್

ಎಲ್ಲಾ ರೀತಿಯ ಶಿಲೀಂಧ್ರಗಳು ಬೇರೆ ಸೂಕ್ಷ್ಮಾಣುಜೀವಿಗಳಿಂದ ರಕ್ಷಿಸಿಕೊಳ್ಳಲು ನೈಸರ್ಗಿಕ ಆ್ಯಂಟಿಬಯೋಟಿಕ್ ನ್ನು ಬಳಸುವುದು. ಆಹಾರ ಮೂಲದಿಂದ ದೂರವಿದ್ದು ಅಥವಾ ಕಾಯಿಲೆಗಳನ್ನು ದೂರ ಮಾಡಿ ಮತ್ತು ಹವಾಮಾನವನ್ನು ಕೆಡಿಸುವ ಮೂಲವನ್ನು ನಾಶ ಮಾಡಿ. ಪೆನಿಸಿಲಿನ್ ಎನ್ನುವ ಆ್ಯಂಟಿಬಯೋಟಿಕ್ ಶಿಲೀಂಧ್ರ ಜಾತಿಯಿಂದ ಬರುವುದು. ಮಶ್ರೂಮ್ ನಲ್ಲಿ ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದ್ದು, ಇದು ದೇಹದಲ್ಲಿ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಕೆಲವೊಂದು ಜಾತಿಯ ಮಶ್ರೂಮ್ ಗಳಲ್ಲಿ ಸೆಲೆನಿಯಂ ಅಧಿಕವಾಗಿದೆ. ಇದು ಜನನೇಂದ್ರೀಯ ಕ್ಯಾನ್ಸರ್ ನ ಅಪಾಯ ಕಡಿಮೆ ಮಾಡುವುದು.

ರಕ್ತದ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ

ರಕ್ತದ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ

ಅಣಬೆಯಲ್ಲಿ ಕಾರ್ಬೋಹೈಡ್ರೇಟ್ಸ್ ಮಟ್ಟವು ತುಂಬಾ ಕಡಿಮೆಯಾಗಿರುವ ಕಾರಣ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲ್ಲ. ಅಧ್ಯಯನಗಳ ಪ್ರಕಾರ ಅಣಬೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಉತ್ಕರ್ಷಣ ನಿರೋಧಕದಿಂದ ಸಮೃದ್ಧ

ಉತ್ಕರ್ಷಣ ನಿರೋಧಕದಿಂದ ಸಮೃದ್ಧ

ಅಣಬೆಯಲ್ಲಿ ಉತ್ಕರ್ಷಣ ನಿರೋಧಕ ಶಕ್ತಿ ಹೆಚ್ಚಿಸುವ ಗುಣಗಳು ಸಮೃದ್ಧವಾಗಿದೆ. ಇದರಲ್ಲಿ ಇರ್ಗೊಥಿಯೊನೈನೆ ಎನ್ನುವ ಉತ್ಕರ್ಷಣ ನಿರೋಧಕ ಅಂಶವಿದ್ದು, ಉತ್ಕರ್ಷಣ ನಿರೋಧಕವು ವಯಸ್ಸಾಗುವುದನ್ನು ತಡೆಯಲು, ಉರಿಯೂತ ಮತ್ತು ತೂಕ ಕಳಕೊಳ್ಳಲು ಪ್ರಮುಖಪಾತ್ರ ವಹಿಸುತ್ತದೆ.

ಕಬ್ಬಿಣಾಂಶದ ಆಗರ ಅಣಬೆಗಳು

ಕಬ್ಬಿಣಾಂಶದ ಆಗರ ಅಣಬೆಗಳು

ಕಬ್ಬಿಣಾಂಶದ ಪ್ರಮುಖ ಆಗರವಾಗಿರುತ್ತವೆ. ಇವುಗಳ ಸೇವನೆಯಿಂದ ಹಿಮೋಗ್ಲೋಬಿನ್ ಉತ್ಪಾದನೆ ಹೆಚ್ಚಾಗುತ್ತದೆ ಮತ್ತು ಕೆಂಪು ರಕ್ತ ಕಣಗಳ ಆಕ್ಸಿಜೆನೆಶನ್ ಆಗುತ್ತದೆ. ಜೊತೆಗೆ ಆಮ್ಲಜನಕವು ದೇಹದ ಎಲ್ಲಾ ಭಾಗಗಳಿಗೂ ಪಸರಿಸಲು ಇದು ಕಾರಣವಾಗುತ್ತದೆ.

English summary

You know, Mushrooms is usefull for Medicinal purpose also

So you’re curious about how mushrooms can be medicinal and boost your health. Well, where do we begin? The world of mushrooms runs wide and deep. Whether you’re eating mushrooms whole, or taking it as a supplelment, it’s important to know more! Here are facts that you may not know (but should!) about mushrooms…
X
Desktop Bottom Promotion