For Quick Alerts
ALLOW NOTIFICATIONS  
For Daily Alerts

ಧೂಮಪಾನದ ಚಟವನ್ನು ಬಿಡಿಸುವ ಪವರ್ ಫುಲ್ ಆಹಾರಗಳು

By Hemanth
|

ಮೇ 31ರಂದು ವಿಶ್ವದಾದ್ಯಂತ ತಂಬಾಕು ಮುಕ್ತ ದಿನವನ್ನವಾಗಿ ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ ಒ) ಈ ವರ್ಷ ದ ತಂಬಾಕು ಮುಕ್ತ ದಿನಕ್ಕೆ ತಂಬಾಕು ಮತ್ತು ಹೃದಯ ಕಾಯಿಲೆ' ಎನ್ನುವ ವಿಷಯವನ್ನು ಇಟ್ಟುಕೊಂಡಿದೆ. ವಿಶ್ವದಾದ್ಯಂತ ತಂಬಾಕು ಸೇವನೆಯಿಂದ ಬರುವಂತಹ ಹೃದಯಸಂಬಂಧಿ ಕಾಯಿಲೆಗಳ ಬಗ್ಗೆ ಜಾಗೃತಿಗೊಳಿಸುವುದೇ ಇದರ ಉದ್ದೇಶವಾಗಿದೆ. ಈ ಲೇಖನದಲ್ಲಿ ನಿಮಗೆ ನಾವು ತಂಬಾಕಿನಿಂದ ದೂರವಿಡಬಲ್ಲ ಆಹಾರಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

ತಂಬಾಕಿನಿಂದ ವಿಶ್ವದಾದ್ಯಂತ ಪ್ರತೀ ವರ್ಷ ಲಕ್ಷಾಂತರ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ತಂಬಾಕಿನಿಂದಾಗಿ ಪ್ರತೀ ವರ್ಷ 70 ಲಕ್ಷ ಜನರು ವಿಶ್ವದಾದ್ಯಂತ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಧೂಮಪಾನಿಗಳು ಮತ್ತು ತಂಬಾಕು ಸೇವನೆ ಮಾಡುವವರಲ್ಲಿ ಕಂಡುಬರುವಂತಹ ಮಾರಕ ಕಾಯಿಲೆಯೇ ಶ್ವಾಸಕೋಶದ ಕ್ಯಾನ್ಸರ್.

ಭಾರತದಲ್ಲಿ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಿರುವ ಪುರುಷರು ಹಾಗೂ ಮಹಿಳೆಯರಲ್ಲಿ ಶೇ. 6.9 ಮತ್ತು ಶೇ. 9.3ರಷ್ಟು ಮಂದಿ ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ತಂಬಾಕು ಸೇವನೆಯಿಂದ ಅಪಧಮನಿ ಹೃದಯ ಕಾಯಿಲೆ, ಹೃದಯಾಘಾತ, ಬಾಹ್ಯ ನಾಳೀಯ ಕಾಯಿಲೆ ಕಾಣಿಸುತ್ತದೆ. ಧೂಮಪಾನ ಮಾಡದಂತೆ ತಡೆಯಲು ಕೆಲವೊಂದು ರೀತಿಯ ಆಹಾರಗಳು ನಿಮಗೆ ನೆರವಾಗಲಿದೆ. ಇದರಿಂದ ಇವುಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಧೂಮಪಾನದಿಂದ ರಕ್ಷಿಸಲು ಆಹಾರಗಳು....

 cigarette

ಹಾಲು
ಧೂಮಪಾನಿಗಳು ಸಿಗರೇಟ್ ಸೇದುವ ಮೊದಲು ಒಂದು ಲೋಟ ಹಾಲು ಕುಡಿದರೆ ಆಗ ಸಿಗರೇಟ್ ರುಚಿ ತುಂಬಾ ಕೆಟ್ಟದಾಗಿರುತ್ತದೆ ಎಂದು ಡ್ಯುಕ್ ಯೂನಿವರ್ಸಿಟಿ ಹೇಳಿದೆ. ಸಿಗರೇಟ್ ಸೇದಬೇಕೆಂದು ಅನಿಸಿದಾಗ ನೀವು ಒಂದು ಲೋಟ ಹಾಲು ಕುಡಿಯಿರಿ. ಇದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಿರಿ.

ಲೈಕೊರೈಸ್
ಗಿಡಮೂಲಿಕೆಯಾಗಿರುವ ಲೈಕೊರೈಸ್ ನಲ್ಲಿ ಕಫಹಾರಿ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಧುಮಪಾನ ಮಾಡುವುದನ್ನು ನೈಸರ್ಗಿಕವಾಗಿ ತಡೆಯುವುದು. ಇದು ಯಾಕೆಂದು ನಿಮಗೆ ತಿಳಿದಿದೆಯಾ? ಲೈಕೊರೈಸ್ ನ ಸ್ವಲ್ಪ ಸಿಹಿ ರುಚಿಯು ಧೂಮಪಾನಕ್ಕೆ ನಿಮ್ಮ ಬಯಕೆ ಕಡಿಮೆ ಮಾಡುವುದು. ನಿಕೋಟಿನ್ ಬಯಕೆಗಾಗಿ ನೀವು ಲೈಕೊರೈಸ್ ನ ಬೇರಿನ ಸಣ್ಣ ತುಂಡು ಜಗಿಯಿರಿ. ಲೈಕೊರೈಸ್ ಬೇರಿನ ಚಹಾವನ್ನು ದಿನದಲ್ಲಿ ಒಂದು ಅಥವಾ ಎರಡು ಸಲ ಸೇವಿಸಿ.

ಜಿನ್ಸೆಂಗ್
ಜಿನ್ಸೆಂಗ್ ನಲ್ಲಿ ನಿಕೋಟಿನ್ ಬಯಕೆ ಕಡಿಮೆ ಮಾಡುವಂತಹ ಗುಣವು ಇದೆ. ಇದು ಮೂತ್ರಜನಕಾಂಗದ ಗ್ರಂಥಿಗಳ ಬಲವರ್ಧನೆ ಮಾಡುವುದು ಮತ್ತು ರಕ್ತನಾಳಗಳಲ್ಲಿ ಕಾರ್ಟಿಸಾಲ್ ಹಾರ್ಮೋನ್ ನ್ನು ಉತ್ಪತ್ತಿ ಮಾಡುವುದು. ಒಂದು ಚಮಚ ಜಿನ್ಸೆಂಗ್ ಹುಡಿಯನ್ನು ಒಂದು ಲೋಟ ಹಾಲು ಅಥವಾ ಸಿರೇಲ್ ಗೆ ಹಾಕಿ ಕುಡಿದರೆ ಧೂಮಪಾನ ಮಾಡುವ ಬಯಕೆ ಕಡಿಮೆ ಮಾಡುವುದು. ಧೂಮಪಾನ ಬಿಡಬೇಕೆನ್ನುವ ಮಾನಸಿಕ ಒತ್ತಡವನ್ನು ಇದು ಕಡಿಮೆ ಮಾಡುವುದು.

ಒಣ ಶುಂಠಿ ಮತ್ತು ಲಿಂಬೆ
ಶುಂಠಿಯು ಆಯುರ್ವೇದದ ತುಂಬಾ ಅಮೂಲ್ಯವಾಗಿರುವ ಗಿಡಮೂಲಿಕೆ ಯಾಕೆಂದು ನಿಮಗೆ ತಿಳಿದಿದೆಯಾ? ಯಾಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣ, ಉರಿಯೂತ ಶಮನಕಾರಿ ಗುಣ ಮತ್ತು ಸಲ್ಫರ್ ಅಂಶ ಉತ್ತಮವಾಗಿದೆ. ಇದು ಧೂಮಪಾನದ ಬಯಕೆ ಕಡಿಮೆ ಮಾಡುವುದು. ಸಣ್ಣ ತುಂಡು ಶುಂಠಿಯನ್ನು ಲಿಂಬೆರಸದಲ್ಲಿ ಮುಳುಗಿಸಿಡಿ ಮತ್ತು ಅದಕ್ಕೆ ಕರಿಮೆಣಸಿನ ಹುಡಿ ಹಾಕಿ. ಧೂಮಪಾನ ಮಾಡಬೇಕೆಂದು ನಿಮಗೆ ಅನಿಸಿದಾಗ ಶುಂಠಿಯ ಒಂದು ತುಂಡನ್ನು ಬಾಯಿಗೆ ಹಾಕಿಕೊಳ್ಳಿ.

ಗ್ರೀನ್ ಟೀ ಮತ್ತು ಬ್ಲ್ಯಾಕ್ ಟೀ
ಗ್ರೀನ್ ಟೀ ಮತ್ತು ಬ್ಲ್ಯಾಕ್ ಟೀ ಕುಡಿಯುವಂತಹ ಧೂಮಪಾನಿಗಳು ಶ್ವಾಸಕೋಶದ ಕ್ಯಾನ್ಸರ್ ಗೆ ಒಳಗಾಗುವಂತಹ ಸಾಧ್ಯತೆಯು ಇತರ ಧೂಮಪಾನಿಗಳಿಗಿಂತ ಕಡಿಮೆ ಇರುವುದು ಎಂದು ಅಧ್ಯಯನಗಳು ಹೇಳಿವೆ. ಚಹಾದಲ್ಲಿ ಇರುವಂತಹ ಉನ್ನತ ಮಟ್ಟದ ಫ್ಲಾವನಾಯ್ಡ್ ಎಂದು ಕರೆಯಲ್ಪಡುವ ಫೈಥೋಕೆಮಿಕಲ್ ಕ್ಯಾಟೆಚಿನ್ ಇದೆ. ಫ್ಲಾವನಾಯ್ಡ್ ಆ್ಯಂಟಿಆಕ್ಸಿಡೆಂಟ್ ಆಗಿದ್ದು, ಇದು ಫ್ರೀ ರ್ಯಾಡಿಕಲ್ ನ ಚಟುವಟಿಕೆ ಪ್ರತಿಬಂಧಿಸುವುದು. ಕಡು ಚಾಕಲೇಟ್, ಕಪ್ಪು ದ್ರಾಕ್ಷಿ ಮತ್ತು ಬ್ಲ್ಯಾಕ್ ಬೆರ್ರಿಗಳಲ್ಲಿ ಕ್ಯಾಟೆಚಿನ್ ಇದೆ.

ವಿಟಮಿನ್ ಸಿ ಅಧಿಕವಾಗಿರುವ ಹಣ್ಣುಗಳು
ನಿಯಮಿತವಾಗಿ ಧುಮಪಾನ ಮಾಡುವಂತಹ ಜನರಲ್ಲಿ ವಿಟಮಿನ್ ಸಿ ಕೊರತೆಯು ಕಂಡುಬರುವುದು. ಯಾಕೆಂದರೆ ಫ್ರೀ ರ್ಯಾಡಿಕಲ್ ವಿರುದ್ಧ ತಡೆಯಾಗಲು ದೇಹಕ್ಕೆ ಹೆಚ್ಚಿನ ವಿಟಮಿನ್ ಸಿ ಬೇಕಾಗಿರುವುದು. ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ನ ಪ್ರಕಾರ ಧೂಮಪಾನಿಯು ಪ್ರತಿನಿತ್ಯ ಸುಮಾರು 35 ಮಿ.ಗ್ರಾಂ.ನಷ್ಟು ವಿಟಮಿನ್ ಸಿ ಸೇವನೆ ಮಾಡಬೇಕು. ಇಷ್ಟು ಪ್ರಮಾಣದಲ್ಲಿ ದೇಹಕ್ಕೆ ವಿಟಮಿನ್ ಸಿ ಸಿಗದೇ ಇದ್ದರೆ ಆಗ ಹೃದಯದ ಕಾಯಿಲೆ, ಕಣ್ಣಿನ ಸಮಸ್ಯೆ ಮತ್ತು ಕ್ಯಾನ್ಸರ್ ಬರುವುದು.

ಸಂಯೋಜಿತ ಗೋಧಿ ಭ್ರೂಣ
ಒಂದು ವಾರಗಳ ಕಾಲ ಧೂಮಪಾನದಿಂದ ದೂರವಿದ್ದು, ವಿಟಮಿನ್ ಇ ಇರುವಂತಹ ಆಹಾರ ಸೇವನೆ ಮಾಡಿದಾಗ ಅಂತಹವರ ರಕ್ತನಾಳಗಳ ಚಟುವಟಿಕೆಯು ಸುಧಾರಣೆಯಾಗಿರುವುದು ಅಧ್ಯಯನಗಳಿಂದ ಕಂಡುಬಂದಿದೆ. ವಿಟಮಿನ್ ಇ ಸಮೃದ್ಧವಾಗಿರುವ ಆಹಾರಗಳಾದ ಸಂಯೋಜಿತ ಗೋಧಿ ಭ್ರೂಣ, ಬಾದಾಮಿ, ಸೂರ್ಯಕಾಂತಿ ಬೀಜ, ಮೊಟ್ಟೆ ಮತ್ತು ಹಸಿರೆಲೆ ತರಕಾರಿಗಳನ್ನು ಸೇವಿಸಿದರೆ ಹೃದಯ ಕಾಯಿಲೆಯ ಅಪಾಯ ಕಡಿಮೆಯಾಗುವುದು. ವಿಟಮಿನ್ ಇ ಗೆ ಅತ್ಯುತ್ತಮವಾದ ಆಹಾರವೆಂದರೆ ಅದು ಗೋಧಿ ಭ್ರೂಣದ ಎಣ್ಣೆ.

ಹಲವು ದಳಗಳ ತರಕಾರಿಗಳು
ಹಲವಾರು ದಳಗಳು ಇರುವಂತಹ ತರಕಾರಿ ಸೇವನೆ ಮಾಡುವಂತಹ ಧೂಮಪಾನಿಗಳು ಇತರ ಧೂಮಪಾನಿಗಳಿಗಿಂತ ಶ್ವಾಸಕೋಶದ ಕ್ಯಾನ್ಸರ್ ಗೆ ಒಳಗಾಗುವ ಸಾಧ್ಯತೆ ಕಡಿಮೆ. ಇಂತಹ ತರಕಾರಿಯಲ್ಲಿ ನೈಸರ್ಗಿಕವಾದ ಐಸೋಥಿಯೋಸೈನೇಟ್ ಗಳು ಇವೆ. ಕ್ಯಾನ್ಸರ್ ನ ಕೋಶಗಳು ಬೆಳವಣಿಗೆ, ಹರಡುವುದದನ್ನು ಈ ಐಸೋಥಿಯೋಸೈನೇಟ್ ಗಳು ತಡೆಯುತ್ತದೆ. ಹೂಕೋಸು, ಎಲೆಕೋಸು, ಕಾಲೆ, ಬ್ರಾಕೋಲಿ, ಮೂಲಂಗಿ ಇತ್ಯಾದಿಗಳನ್ನು ಸೇವಿಸಿ.

ಕ್ಯಾಮೋಮೈಲ್ ಟೀ
ನಿಕೋಟಿನ್ ಅಗತ್ಯತೆಯ ಬೇಡಿಕೆಯನ್ನು ಕಡಿಮೆಗೊಳಿಸುವ ಮತ್ತು ನರಗಳಿಗೆ ಪ್ರಶಾಂತತೆ ನೀಡುವ ಏಕಮಾತ್ರ ಪದಾರ್ಥವೆಂದರೆ ಕ್ಯಾಮೋಮೈಲ್ ಟೀ, ಹೀಗೆಂದು Molecular Medicine Reports ಎಂದ ವೈದ್ಯಕೀಯ ಪತ್ರಿಕೆ ತಿಳಿಸಿದೆ. ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಧೂಮಪಾನದ ಮೂಲಕ ದೇಹದಲ್ಲಿ ಉತ್ಪತ್ತಿಯಾಗಿರುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ಪ್ರಭಾವದಿಂದ ದೇಹಕ್ಕೆ ಹಾನಿಯಾಗದಂತೆ ತಡೆಯುತ್ತದೆ. ಪರಿಣಾಮವಾಗಿ ಹೆಚ್ಚುತ್ತಿರುವ ನಿಕೋಟಿನ್ ಬಯಕೆಯನ್ನು ಕಡಿಮೆಗೊಳಿಸುತ್ತದೆ.

ಜೇನುತುಪ್ಪ
ಧೂಮಪಾನದಿಂದ ದೂರ ಸರಿಯಲು ಸಹಾಯ ಮಾಡುವ ಇನ್ನೊಂದು ನೈಸರ್ಗಿಕ ಉತ್ಪನ್ನವೆಂದರೆ ಜೇನುತುಪ್ಪ. ಜೇನುತುಪ್ಪವು ಜೀವಸತ್ವ, ಕಿಣ್ವಗಳು ಮತ್ತು ಪ್ರೋಟೀನ್‍ಗಳನ್ನು ಒಳಗೊಂಡಿರುತ್ತದೆ. ಇದರ ಸೇವನೆಯಿಂದ ಧೂಮಪಾನದ ಅಭ್ಯಾಸವನ್ನು ಬಿಡಬಹುದು. ಧೂಮಪಾನದ ಪ್ರಚೋದನೆ ಉಂಟಾದಾಗ ಇದನ್ನು ಸೇವಿಸಿ ನೀರು ಕುಡಿಯಬೇಕು. ಆಗ ಧೂಮಪಾನದ ಬಯಕೆಯು ಕಡಿಮೆಯಾಗುವುದು.

ಶುಂಠಿ
ಧೂಮಪಾನ ತೊರೆದಾಗ ಕೆಲವರಿಗೆ ವಾಕರಿಕೆ ಸಂವೇಧನೆ ಉಂಟಾಗುತ್ತದೆ. ಅಂತಹ ಸಮಯದಲ್ಲಿ ಚಿಕ್ಕ ಶುಂಠಿ ಚೂರನ್ನು ಜಗೆಯುವುದು ಅಥವಾ ಶುಂಠಿ ಚಹಾ ಸೇವಿಸುವುದರಿಂದ ವಾಕರಿಕೆ ಉಂಟಾಗುವುದನ್ನು ತಡೆಯಬಹುದು. ಅಲ್ಲದೆ ಧೂಮಪಾನ ಮಾಡಲು ಮನಸ್ಸಾಗದಂತೆ ಪ್ರೇರೇಪಿಸುತ್ತದೆ.

ವಿಟಮಿನ್ ಸಿ ಹೆಚ್ಚಾಗಿರುವ ಆಹಾರಗಳು
ಸಿಗರೇಟಿನ ಹೊಗೆಯ ಮೂಲಕ ರಕ್ತಕ್ಕೆ ಧಾವಿಸಿದ ನಿಕೋಟಿನ್ ಅನ್ನು ನಿಭಾಯಿಸಲು ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅಗತ್ಯವಿದೆ. ಇದು ಲಭ್ಯವಿರುವ ವಿಟಮಿನ್ ಸಿ ಪ್ರಮಾಣವನ್ನೆಲ್ಲಾ ಕಬಳಿಸಿ ಬಿಡುತ್ತದೆ. ಇದೇ ಕಾರಣದ ವ್ಯತಿರಿಕ್ತ ಪರಿಣಾಮವಾಗಿ ದೇಹದಲ್ಲಿ ವಿಟಮಿನ್ ಸಿ ಕೊರತೆಯಾದಾಗಲೆಲ್ಲಾ ಸಿಗರೇಟು ಸೇದುವಂತೆ ಮೆದುಳಿಗೆ ಸೂಚನೆ ಹೋಗುತ್ತದೆ ಎಂಬ ವಿಷಯವನ್ನು American Journal of Public Health ಎಂಬ ಪತ್ರಿಕೆಯಲ್ಲಿ ವರದಿ ಮಾಡಲಾಗಿದೆ. ಆದ್ದರಿಂದ ನಿತ್ಯವೂ ಸಾಕಷ್ಟು ವಿಟಮಿನ್ ಸಿ ಹೆಚ್ಚಿರುವ ಆಹಾರಗಳನ್ನು ತಿನ್ನುವ ಮೂಲಕ ನಿಕೋಟಿನ್ ಮೇಲಿನ ನಿರ್ಭರತೆಯನ್ನು ಮೆದುಳು ಕಳೆದುಕೊಳ್ಳುವಂತೆ

ತಂಬಾಕು ತಡೆಯಲು ಕೆಲವು ಸಲಹೆಗಳು
*ನಿಮಗೆ ಹಸಿವಾಗಿದ್ದರೆ ಆಗ ನೀವು ಆರೋಗ್ಯಕರ ಆಹಾರ ಸೇವಿಸಿ.
*ತಿಂಡಿ ತಿನ್ನುವುದು ಅಥವಾ ಚೂಯಿಂಗ್ ಗಮ್ ಜಗಿಯುವುದರಿಂದ ಧೂಮಪಾನದ ಬಯಕೆ ಕಡಿಮೆ ಮಾಡಬಹುದು.
*ಯಾವಾಗಲೂ ಬಾಯಿಯಲ್ಲಿ ಏನಾದರೂ ಜಗಿಯುತ್ತಲಿರಿ.

English summary

World No Tobacco Day: Foods To Prevent Tobacco Use

In India, lung cancer constitutes about 6.9 percent and 9.3 percent of all cancer-related deaths in both males and females. Tobacco use increases the risk of coronary heart disease, stroke, and peripheral vascular disease. Let's have a look at the best foods to prevent tobacco use.
X
Desktop Bottom Promotion