ಒಂದು ಕಪ್ 'ಏಲಕ್ಕಿ ಚಹಾ' ದಲ್ಲಿದೆ 10 ಅದ್ಭುತ ಆರೋಗ್ಯ ಪ್ರಯೋಜನಗಳು

By: Arshad
Subscribe to Boldsky

ಏಲಕ್ಕಿ ಎಂಬ ಅದ್ಭುತ ಸಾಂಬಾರ ಪದಾರ್ಥದ ಬಗ್ಗೆ ನೀವೆಲ್ಲಾ ಕೇಳಿಯೇ ಇದ್ದೀರಿ. ಹಲವಾರು ವಿಶೇಷ ಖಾದ್ಯಗಳು, ಸಿಹಿ ಪದಾರ್ಥಗಳು ಮೊದಲಾದವುಗಳ ರುಚಿ ಮಾತ್ರವಲ್ಲ, ಪರಿಮಳವನ್ನೂ ಇದರಲ್ಲಿರುವ ಏಲಕ್ಕಿ ಹೆಚ್ಚಿಸುತ್ತದೆ. ಇದರ ಪರಿಮಳ ಹಾಗೂ ರುಚಿಯ ಕಾರಣದಿಂದಾಗಿಯೇ ಇದಕ್ಕೆ 'ಸಾಂಬಾರ ಪದಾರ್ಥಗಳ ರಾಣಿ' ಎಂಬ ಬಿರುದನ್ನೂ ನೀಡಲಾಗಿದೆ. ಇದನ್ನು ಯಾವುದೇ ಖಾದ್ಯದಲ್ಲಿ ಬೆರೆಸಿ, ಇದರ ಪರಿಮಳ ಗಾಳಿಯಲ್ಲಿ ತೇಲಿ ಬರುವ ಮೂಲಕ ಈ ಖಾದ್ಯವನ್ನು ತಿನ್ನುವಂತೆ ಪ್ರೇರಣೆ ನೀಡುತ್ತದೆ. ಈ ಪರಿಮಳಕ್ಕೆ ಕಾರಣ ಏಲಕ್ಕಿಯ ಬೀಜದಲ್ಲಿರುವ ಎಣ್ಣೆಯ ಅಂಶ. ಬಿಸಿ ತಾಗಿದಾಗ ಇದು ಭಾಷ್ಪೀಕರಣಗೊಂಡು ದ್ರವ ಹಾಗೂ ಗಾಳಿಯಲ್ಲಿ ಬೆರೆಯುತ್ತದೆ. ಈ ಎಣ್ಣೆ ಅತ್ಯಂತ ಆರೋಗ್ಯಕರವಾಗಿದೆ. ಈ ಎಣ್ಣೆಯಲ್ಲಿ ಟರ್ಪೆಂಟೈನ್, ಬೋರ್ನಿಯಾಲ್, ಯೂಕಲಿಪ್ಟಾಲ್, ಕರ್ಪೂರ ಹಾಗೂ ಲಿಮೋನೀನ್ ಎಂಬ ಪೋಷಕಾಂಶಗಳಿವೆ.

ಈ ಬೀಜಗಳನ್ನು ಕೊಂಚವೇ ಜಜ್ಜಿ ಟೀ ಕುದಿಸುವ ನೀರಿನಲ್ಲಿ ಬೆರೆಸುವ ಮೂಲಕ ಈ ಟೀ ಅತ್ಯಂತ ಆಹ್ಲಾದಕರವಾಗಿಸುತ್ತದೆ. ಏಲಕ್ಕಿ ಟೀ ನಮ್ಮ ಭಾರತದಲ್ಲಿಯೇ ಮೊದಲಿಗೆ ಪ್ರಾರಂಭವಾಯಿತು. ಉತ್ತರ ಭಾರತದಲ್ಲಿ ಪ್ರಾರಂಭವಾದ ಕಾರಣ ಇದು 'ಎಲಾಯ್ಚಿ ಚಾಯ್' ಎಂದೇ ಹೆಚ್ಚು ಜನಪ್ರಿಯವಾಗಿದೆ. ಸಾಮಾನ್ಯವಾಗಿ ಈ ಟೀ ಯನ್ನು ಹಾಲಿನೊಂದಿಗೆ ಕುದಿಸಿದ ಟೀ ಯಲ್ಲಿ ಬಳಸಲಾಗುತ್ತದೆ. ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಇತರ ಸಾಂಬಾರ ಪದಾರ್ಥಗಳನ್ನೂ ಬೆರೆಸಬಹುದು.

ಯಾವುದೇ ಟೀ ಯಲ್ಲಿ ಏಲಕ್ಕಿ ಬೆರೆಸುವ ಮೂಲಕ ಇದು ರುಚಿಕರವಾಗುವುದು ಮಾತ್ರವಲ್ಲ, ಆರೋಗ್ಯಕರವೂ ಆಗುತ್ತದೆ. ವಿಶೇಷವಾಗಿ ಅಧಿಕ ಹೃದಯದೊತ್ತಡ, ಕುಂಠಿತ ರೋಗ ನಿರೋಧಕ ವ್ಯವಸ್ಥೆ, ಉಸಿರಾಟದ ಸೋಂಕು, ಕಬ್ಬಿಣಾಂಶದ ಕೊರತೆ, ಸ್ಥೂಲಕಾಯ, ಅಜೀರ್ಣತೆ ಮೊದಲಾದ ತೊಂದರೆ ಇರುವ ವ್ಯಕ್ತಿಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಏಲಕ್ಕಿ ಬೆರೆಸಿ ತಯಾರಿಸಿದ ಟೀ ಕುಡಿಯುವ ಮೂಲಕ ಪಡೆಯಬಹುದಾದ ಹಲವಾರು ಪ್ರಯೋಜನಗಳಲ್ಲಿ ಪ್ರಮುಖವಾದ ಹತ್ತು ಪ್ರಯೋಜನಗಳನ್ನು ನೀವು ಅರಿತುಕೊಂಡಿರುವುದು ಅಗತ್ಯವಾಗಿದೆ...

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಆಯುರ್ವೇದದ ಪ್ರಕಾರ, ಊಟದ ಬಳಿಕ ಏಲಕ್ಕಿಯ ಸೇವನೆಯಿಂದ ಜೀರ್ಣಕ್ರಿಯೆ ಸುಲಲಿತವಾಗಿ ಜರುಗುತ್ತದೆ. ವಿಶೇಷವಾಗಿ ಸಾಂಬಾರ ಪದಾರ್ಥಗಳ ಸೇವನೆಯಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಎದುರಾಗುತ್ತದೆ. ಅನಾರೋಗ್ಯಕರ ಸಿದ್ಧ ಆಹಾರಗಳ ಸೇವನೆಯಿಂದಲೂ ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳಬಹುದು. ಆದ್ದರಿಂದ ವಾಯುಪ್ರಕೋಪ ಹಾಗೂ ಆಮ್ಲೀಯತೆಯನ್ನು ಕಡಿಮೆಗೊಳಿಸಲು ಊಟದ ಬಳಿಕ ಏಲಕ್ಕಿ ಟೀ ಕುಡಿಯುವುದು ಉತ್ತಮ.

ಹಲ್ಲು ನೋವಿಗೆ ಚಿಕಿತ್ಸೆ

ಹಲ್ಲು ನೋವಿಗೆ ಚಿಕಿತ್ಸೆ

ಏಲಕ್ಕಿಯಲ್ಲಿ ನೈಸರ್ಗಿಕವಾದ ಬ್ಯಾಕ್ಟೀರಿಯಾ ನಿವಾರಕ ಗುಣವಿದೆ ಹಾಗೂ ಈ ಗುಣ ಹಲ್ಲುಗಳ ಸಂದುಗಳಲ್ಲಿ ಬೆಳೆಯುತ್ತಿರುವ ಬ್ಯಾಕ್ಟೀರಿಯಾಗಳನ್ನು ಕೊಂದು ಸ್ವಚ್ಛತೆಯನ್ನು ಕಾಪಾಡುತ್ತದೆ. ಊಟದ ಬಳಿಕ ಒಂದು ಕಪ್ ಏಲಕ್ಕಿ ಟೀ ಕುಡಿಯುವ ಮೂಲಕ ಉಸಿರಿನ ದುರ್ವಾಸನೆ ಇಲ್ಲವಾಗಿಸಬಹುದು ಹಾಗೂ ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು. ಏಲಕ್ಕಿಯ ಗುಣಗಳು ಹಲ್ಲುಗಳನ್ನು ಬಿಳಿಯಾಗಿಸಲು ಹಾಗೂ ಊಟದ ಬಳಿಕ ಬಹುಕಾಲದವರೆಗೆ ದುರ್ವಾಸನೆ ಇಲ್ಲದಂತೆ ನೋಡಿಕೊಳ್ಳಬಹುದು.

ಕಟ್ಟಿಕೊಂಡಿರುವ ಮೂಗನ್ನು ತೆರೆಯುತ್ತದೆ

ಕಟ್ಟಿಕೊಂಡಿರುವ ಮೂಗನ್ನು ತೆರೆಯುತ್ತದೆ

ಒಂದು ವೇಳೆ ನೀವು ಶೀತ ಮತ್ತು ಫ್ಲೂ ಜ್ವರದಿಂದ ನರಳುತ್ತಿದ್ದರೆ ಹಾಗೂ ಮೂಗು ಕಟ್ಟಿಕೊಂಡಿದ್ದರೆ ಒಂದು ಕಪ್ ಏಲಕ್ಕಿ ಟೀ ಕುಡಿಯುವ ಮೂಲಕ ಶೀಘ್ರದಲ್ಲಿಯೇ ಉಪಶಮನ ದೊರಕುತ್ತದೆ. ಅಲ್ಲದೇ ಗಂಟಲ ಬೇನೆ, ಕೆಮ್ಮು ಹಾಗೂ ಕಫ ಕಡಿಮೆಯಾಗುತ್ತದೆ. ಗಂಟಲು ಹಾಗೂ ಮೂಗಿನಲ್ಲಿ ಕಟ್ಟಿಕೊಂಡಿದ್ದ ಕಫವನ್ನು ಸಡಿಲಿಸಿ ನಿವಾರಿಸುವ ಮೂಲಕ ಶ್ವಾಸನಾಳವನ್ನು ನಿರಾಳಗೊಳಿಸಿ ಉಸಿರಾಟವನ್ನು ಸರಾಗಗೊಳಿಸುತ್ತದೆ.

ಬ್ಯಾಕ್ಟೀರಿಯಾ ನಿವಾರಕವಾಗಿದೆ

ಬ್ಯಾಕ್ಟೀರಿಯಾ ನಿವಾರಕವಾಗಿದೆ

ಏಲಕ್ಕಿಯಲ್ಲಿರುವ ಅಪಾರವಾದ ಆರೋಗ್ಯಕರ ಗುಣಗಳಲ್ಲಿ ಬ್ಯಾಕ್ಟೀರಿಯಾನಿವಾರಕ ಗುಣವೂ ಒಂದು. ಈ ಗುಣ ಒಂದು ಅದ್ಭುತವಾದ ಗುಣಪಡಿಸುವ ಶಕ್ತಿಯಾಗಿದ್ದು ಈ ಶಕ್ತಿಯನ್ನು ಚರ್ಮದ ಗಾಯ, ತರಚು ಅಥವಾ ಗೀರುಗಳನ್ನು ಗುಣಪಡಿಸಲು ಬಳಸಬಹುದು. ಚಿಕ್ಕ ಪುಟ್ಟ ಗಾಯಗಳನ್ನು ಗುಣಪಡಿಸಲು ಏಲಕ್ಕಿ ಟೀ ಸೇವನೆ ಉತ್ತಮವಾಗಿದೆ.

ಫ್ರೀ ರ್‍ಯಾಡಿಕಲ್ ಕಣಗಳನ್ನು ಕೊಲ್ಲುತ್ತದೆ

ಫ್ರೀ ರ್‍ಯಾಡಿಕಲ್ ಕಣಗಳನ್ನು ಕೊಲ್ಲುತ್ತದೆ

ಇದರಲ್ಲಿರುವ ಹಲವಾರು ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಕೊಲ್ಲಲು ಸಕ್ಷಮವಾಗಿವೆ. ಇದರ ಉರಿಯೂತ ನಿವಾರಕ ಗುಣ ಸಂಧಿವಾತ, ತಲೆನೋವು ಹಾಗೂ ಪೆಟ್ಟಿನಿಂದ ಆದ ಗಾಯದಿಂದ ಶೀಘ್ರವೇ ಮೊದಲಿನ ಆರೋಗ್ಯ ಪಡೆಯಲು ನೆರವಾಗುತ್ತದೆ.

ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ

ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ

ನಿತ್ಯವೂ ಒಂದು ಅಥವಾ ಎರಡು ಕಪ್ ಏಲಕ್ಕಿ ಟೀ ಕುಡಿಯುವ ಮೂಲಕ ದೇಹದಲ್ಲಿ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ನಿಯಮಿತ ಸೇವನೆಯಿಂದ ದೇಹದ ಇತರ ಪ್ರಮುಖ ಅಂಗಗಳು ಸಹಾ ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಇದರಲ್ಲಿರುವ ಕಬ್ಬಿಣದ ಅಂಶ ರಕ್ತದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ ಹಾಗೂ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸಲು ನೆರವಾಗುತ್ತದೆ.

ಹೃದಯದ ಆರೋಗ್ಯ ಹೆಚ್ಚಿಸುತ್ತದೆ

ಹೃದಯದ ಆರೋಗ್ಯ ಹೆಚ್ಚಿಸುತ್ತದೆ

ಏಲಕ್ಕಿ ಅಧಿಕ ರಕ್ತದೊತ್ತಡ ಇರುವ ವ್ಯಕ್ತಿಗಳಿಗೆ ಹೆಚ್ಚು ಪ್ರಯೋಅಜನಕಾರಿಯಾಗಿದೆ. ಇದರಲ್ಲಿರುವ ಅಧಿಕ ಪ್ರಮಾಣದ ಪೊಟ್ಯಾಶಿಯಂ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಪೊಟ್ಯಾಶಿಯಂ ಒಂದು ರಕ್ತನಾಳಗಳನ್ನು ಹಿಗ್ಗಿಸುವ (vasodilator) ಪೋಷಕಾಂಶವಾಗಿದ್ದು ಈ ಮೂಲಕ ರಕ್ತಪರಿಚಲನೆಯನ್ನು ಸುಗಮಗೊಳಿಸುತ್ತದೆ. ಪರಿಣಾಮವಾಗಿ ಹೃದಯದ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ ಹಾಗೂ ತನ್ಮೂಲಕ ಹೃದಯ ಸ್ತಂಭನದ ಸಾಧ್ಯತೆಯೂ ಕಡಿಮೆಯಾಗುತ್ತದೆ.

ವಿಷಕಾರಿ ವಸ್ತುಗಳನ್ನು ವಿಸರ್ಜಿಸಲು ನೆರವಾಗುತ್ತದೆ

ವಿಷಕಾರಿ ವಸ್ತುಗಳನ್ನು ವಿಸರ್ಜಿಸಲು ನೆರವಾಗುತ್ತದೆ

ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳಬೇಕಾದರೆ ದೇಹದಿಂದ ಕಲ್ಮಶಗಳು ಹೊರಹೋಗುವುದು ಅವಶ್ಯವಾಗಿದೆ. ಹಚ್ಚಿನವರು ಏಲಕ್ಕಿ ಟೀ ಕುಡಿಯುವ ಕಾರಣವೇ ಇದು. ಏಲಕ್ಕಿ ಟೀ ಸೇವನೆಯಿಂದ ಯಕೃತ್ ಇನ್ನೂಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಚೋದನೆ ದೊರಕುತ್ತದೆ ಹಾಗೂ ವಿಷಕಾರಿ ವಸ್ತುಗಳ ವಿಸರ್ಜನೆ ಪರಿಣಾಮಕಾರಿಯಾಗಿ ಜರುಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಏಲಕ್ಕಿಯಲ್ಲಿ ಹಲವಾರು ಜೀವಸತ್ವಗಳಿವೆ. ಇವು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸಲು ಮತ್ತು ದೇಹವನ್ನು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಈ ಕಾರ್ಯಕ್ಕೆ ಹೆಚ್ಚಿನ ಕೊಬ್ಬನ್ನು ಬಳಸಬೇಕಾಗಿ ಬರುವ ಮೂಲಕ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುವ ಜೊತೆಗೇ ತೂಕ ಇಳಿಕೆಯಲ್ಲಿಯೂ ನೆರವಾಗುತ್ತದೆ.

ತಲೆನೋವನ್ನು ಕಡಿಮೆ ಮಾಡುತ್ತದೆ

ತಲೆನೋವನ್ನು ಕಡಿಮೆ ಮಾಡುತ್ತದೆ

ಅಪಾರವಾಗಿ ನೋವು ನೀಡುವ ತಲೆನೋವು ಬಾಧಿಸುತ್ತಿದೆಯೇ? ತಕ್ಷಣವೇ ಏಲಕ್ಕಿ ಟೀ ಸೇವಿಸಿ. ಇದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ ಹಾಗೂ ದೇಹದ ಒತ್ತಡವನ್ನು ನಿವಾರಿಸುತ್ತದೆ. ಬಿಸಿಬಿಸಿ ಏಲಕ್ಕಿ ಟೀ ಕುಡಿದ ಬಳಿಕ ತಲೆನೋವು ಕಡಿಮೆಯಾಗುತ್ತದೆ.

ಏಲಕ್ಕಿ ಟೀ ತಯಾರಿಸುವ ವಿಧಾನ

ಏಲಕ್ಕಿ ಟೀ ತಯಾರಿಸುವ ವಿಧಾನ

*ಏಲಕ್ಕಿ ಟೀ ಸುಲಭವಾಗಿ ತಯಾರಿಸಬಹುದು. ಇದಕ್ಕಾಗಿ ಒಂದೆರಡು ಏಲಕ್ಕಿಗಳನ್ನು ಕುಟ್ಟಿ ಪುಡಿಮಾಡಬೇಕು.

*ಒಂದು ಪಾತ್ರೆಯಲ್ಲಿ ಒಂದು ಟೀ ಗೆ ಅಗತ್ಯವಿರುವಷ್ಟು ನೀರನ್ನು ಹಾಕಿ, ಇದರಲ್ಲಿ ಏಲಕ್ಕಿ ಪುಡಿಯನ್ನು ಹಾಕಿ ಕುದಿಸಿ

*ನೀರು ಕುದಿಯಲು ಪ್ರಾರಂಭವಾಗುತ್ತಿದ್ದಂತೆಯೇ ಟೀಪುಡಿ ಮತ್ತು ಸಕ್ಕರೆ ಬೆರೆಸಿ

ಈ ಟೀಯನ್ನು ಹಾಲಿಲ್ಲದೇ ಕುಡಿಯುವುದಾದರೆ ಹತ್ತು ಸೆಕೆಂಡುಗಳ ಬಳಿಕ ಟೀ ಬ್ಯಾಗ್ ನಿವಾರಿಸಿ ಅಥವಾ ಸೋಸಿ.

*ಹಾಲಿನ ಜೊತೆಗೆ ಸೇವಿಸುವುದಾದರೆ ಕುದಿಸುವುದನ್ನು ಎರಡರಿಂದ ಮೂರು ನಿಮಿಷಗಳವರೆಗೆ ಮುಂದುವರೆಸಿ. ಬಳಿಕ ಹಾಲು ಬೆರೆಸಿ ಸೋಸಿ ಬಿಸಿಬಿಸಿಯಾಗಿಯೇ ಕುಡಿಯಿರಿ.

English summary

Wonderful Health Benefits Of Cardamom Tea

Drinking cardamom tea is good for people suffering from high blood pressure, a weak immune system, respiratory infections, iron deficiency, obesity, indigestion, etc. To know more about the reasons on why you should be drinking cardamom tea more often, here are 10 health benefits of cardamom tea you should know.
Subscribe Newsletter