For Quick Alerts
ALLOW NOTIFICATIONS  
For Daily Alerts

  ಸೆಕ್ಸ್ ಬಳಿಕ, ಮಹಿಳೆಯರು ಈ ಕೆಲಸಗಳನ್ನು ಮಾತ್ರ ಮಾಡಲೇಬೇಕು!

  By Arshad
  |

  ಮಹಿಳೆಯರು ಹೆಚ್ಚಾಗಿ ಸ್ವಚ್ಛತೆ ಬಗ್ಗೆ ಗಮನಹರಿಸುವವರು. ಮನೆಯಿಂದ ಹಿಡಿದು, ಮಕ್ಕಳು, ಕಚೇರಿ ಹೀಗೆ ಪ್ರತಿಯೊಂದು ಸ್ಥಳದಲ್ಲಿ ಮಹಿಳೆಯರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವರು. ಅದೇ ಅವರು ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಲೈಂಗಿಕ ಕ್ರಿಯೆಗೆ ಮೊದಲು ಅಥವಾ ಬಳಿಕ ಎಷ್ಟು ಸ್ವಚ್ಛವಾಗಿರುವರು ಎನ್ನುವುದು ಕೂಡ ಅತೀ ಅಗತ್ಯವಾಗಿದೆ. ಸ್ವಚ್ಛತೆ ಇಲ್ಲದೆ ಇರುವ ಕಾರಣದಿಂದಾಗಿ ಹೆಚ್ಚಿನ ಸಲ ಸೋಂಕು ಹರಡುವುದು. 

  ಹೌದು, ಹೆಚ್ಚಿನವರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ!, ಆದರೆ ಕೆಲವು ಕ್ರಮಗಳನ್ನು ಮಾತ್ರ ನೈರ್ಮಲ್ಯ ಹಾಗೂ ಆರೋಗ್ಯದ ದೃಷ್ಟಿಯಿಂದ ಅನುಸಸಿರುವುದು ಅವಶ್ಯವಾಗಿದೆ. ಇಂದಿನ ಲೇಖನದಲ್ಲಿ ಇಂತಹ ಕೆಲವು ಕ್ರಮಗಳನ್ನು ಸೂಚಿಸಲಾಗಿದ್ದು ಪ್ರತಿ ವಿವಾಹಿತೆ ಕಡ್ಡಾಯವಾಗಿ ಪಾಲಿಸಬೇಕಾದ ಕ್ರಮಗಳಾಗಿವೆ.

  ಸ್ವಚ್ಛತಾ ಕ್ರಮಗಳನ್ನು ಅನುಸರಿಸದೇ ಇರುವ ಮೂಲಕ ಕೆಲವಾರು ತೊಂದರೆಗಳು ಎದುರಾಗುತ್ತವೆ. ವಿಶೇಷವಾಗಿ ಸೆಕ್ಸ್ ಸಮಯದಲ್ಲಿ ಗುಪ್ತಾಂಗದ ಭಾಗದಲ್ಲಿ ಘರ್ಣಣೆಯ ಕಾರಣ ಈ ಭಾಗದ ಅಂಗಾಂಶಗಳು ಕೊಂಚ ಊದಿಕೊಳ್ಳುತ್ತವೆ ಹಾಗೂ ಸೋಂಕಿಗೆ ಸುಲಭವಾಗಿ ತೆರೆದುಕೊಳ್ಳುತ್ತದೆ.

  ಆದ್ದರಿಂದ ಕೆಲವು ಕ್ರಮಗಳನ್ನು ಇದುವರೆಗೆ ಕೈಗೊಳ್ಳುತ್ತಾ ಬಂದಿದ್ದು ಇವು ತಪ್ಪಾಗಿರಬಹುದು ಅಥವಾ ಕೆಲವು ಅಗತ್ಯ ಕ್ರಮದ ಬಗ್ಗೆ ಮಾಹಿತಿಯೇ ಇಲ್ಲದೇ ಇದನ್ನು ಕೈಗೊಳ್ಳದೇ ಇರಬಹುದು. ಇವೆರಡರಿಂದಲೂ ಸೋಂಕು, ವಿಶೇಷವಾಗಿ ಶಿಲೀಂಧ್ರದ ಸೋಂಕು ಹರಡುವ ಸಾಧ್ಯತೆ ಹೆಚ್ಚುತ್ತದೆ. ಬನ್ನಿ, ಈ ಬಗ್ಗೆ ಪ್ರತಿ ಮಹಿಳೆಯೂ ಅರಿತಿರಬೇಕಾದ ಕೆಲವು ಅಗತ್ಯ ಮಾಹಿತಿಗಳನ್ನು ನೋಡೋಣ....

  ಸೆಕ್ಸ್ ಬಳಿಕ ಶೌಚಾಲಯಕ್ಕೆ ಹೋಗಿ...

  ಸೆಕ್ಸ್ ಬಳಿಕ ಶೌಚಾಲಯಕ್ಕೆ ಹೋಗಿ...

  ಮಿಲನದ ಸಮಯದಲ್ಲಿ ಎಷ್ಟು ಬೇಡವೆಂದರೂ, ಯಾವುದೇ ಕ್ರಮ ಕೈಗೊಂಡರೂ ಕೆಲವಾರು ಬ್ಯಾಕ್ಟೀರಿಯಾಗಳು ಶರೀರವನ್ನು ಪ್ರವೇಶಿಸಿಯೇ ಇರುತ್ತವೆ. ಈ ಭಾಗ ತೇವಭರಿತವಾಗಿರುವ ಕಾರಣ ಬ್ಯಾಕ್ಟೀರಿಯಾಗಳಿಗೆ ಸೂಕ್ತ ಮನೆ ದೊರತಂಗಾಗುತ್ತದೆ ಹಾಗೂ ಇವು ಶೀಘ್ರವಾಗಿ ಅಭಿವೃದ್ದಿಗೊಂಡು ಜನನಾಂಗದ ಮೂಲಕ ದೇಹದ ಇನ್ನಷ್ಟು ಒಳಭಾಗವನ್ನು ಪ್ರವೇಶಿಸಿ ಭಾರೀ ಸೋಂಕಿಗೆ ಕಾರಣವಾಗಬಹುದು. ಆದ್ದರಿಂದ ಈ ಬ್ಯಾಕ್ಟೀರಿಯಾಗಳನ್ನು ಬಾಗಿಲ ಹೊಸ್ತಿಲಿನಿಂದಲೇ ಒದ್ದು ಓಡಿಸಲು ಸುಲಭವಾದ ಮಾರ್ಗವೆಂದರೆ ಮಿಲನದ ಬಳಿಕ ತಕ್ಷಣವೇ ಮೂತ್ರ ವಿಸರ್ಜಿಸುವುದು. ಈ ಕೆಲಸ ಇನ್ನಷ್ಟು ಸುಲಭವಾಗಿಸಲು ಮಿಲನಕ್ಕೂ ಅರ್ಥ ಅಥವಾ ಒಂದು ಘಂಟೆ ಮುನ್ನ ಚೆನ್ನಾಗಿ ನೀರು ಕುಡಿಯಬೇಕು.

  ಸೆಕ್ಸ್ ಬಳಿಕ ಒಂದು ಗ್ಲಾಸ್ ನೀರು ಕುಡಿಯಿರಿ

  ಸೆಕ್ಸ್ ಬಳಿಕ ಒಂದು ಗ್ಲಾಸ್ ನೀರು ಕುಡಿಯಿರಿ

  ಸೆಕ್ಸ್ ಬಳಿಕ ತಕ್ಷಣವೇ ಮಲಗದೇ ಕೊಂಚ ಅಡ್ಡಾಡಿದ ಬಳಿಕ ಮಲಗಬೇಕು. ಇದರಿಂದ ದೇಹದ ಎಲ್ಲಾ ಕಡೆ ರಕ್ತಸಂಚಾರ ಸುಗಮವಾಗಿ ನಡೆಯಲು ಸಾಧ್ಯವಾಗುತ್ತದೆ. ಹಾಗೂ ಒಂದು ಅಥವಾ ಎರಡು ಲೋಟ ನೀರು ಕುಡಿಯಬೇಕು. ಇದರಿಂದ ದೇಹದಿಂದ ತ್ಯಾಜ್ಯಗಳನ್ನು ಹೊರಹಾಕಲು ಹಾಗೂ ದೇಹದ ಇತರ ಚಟುವಟಿಕೆಗಳಿಗೆ ಅಗತ್ಯವಾದ ನೀರನ್ನು ಪಡೆಯಲು ನೆರವಾಗುತ್ತದೆ ಹಾಗೂ ತನ್ಮೂಲಕ ಮೂತ್ರನಾಳದಲ್ಲಿ ಉಂಟಾಗುವ ಸೋಂಕಿನಿಂದ ರಕ್ಷಣೆ ಪಡೆಯಬಹುದು.

   ಆ ಮೇಲೆ ಸ್ವಲ್ಪ ಮೊಸರು ಸೇವಿಸಿ

  ಆ ಮೇಲೆ ಸ್ವಲ್ಪ ಮೊಸರು ಸೇವಿಸಿ

  ಮಿಲನದ ಬಳಿಕ ನೀವು ಯಾವ ಆಹಾರ ಸೇವಿಸುತ್ತೀರಿ ಎಂಬುದೂ ಮುಖ್ಯ. ಅತ್ಯಂತ ಸೂಕ್ತ ಆಯ್ಕೆ ಎಂದರೆ ಜೀರ್ಣಸ್ನೇಹಿ ಬ್ಯಾಕ್ಟೀರಿಯಾ ಅಥವಾ ಜೀರ್ಣಕ್ರಿಯೆಗೆ ಸಹಕರಿಸುವ ಬ್ಯಾಕ್ಟೀರಿಯಾಗಳಿರುವ ಆಹಾರಗಳು. ಮೊಸರು, ಕಿಮ್ಚಿ ಅಥವಾ ಕೊಂಬುಚಾ ಉತ್ತಮವಾಗಿವೆ. ಈ ಅಹಾರಗಳನ್ನು ಕೊಂಚ ಪ್ರಮಾಣದಲ್ಲಿ ಸೇವಿಸುವ ಮೂಲಕ ದೇಹದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಹೆಚ್ಚಿ ಶಿಲೀಂಧ್ರದ ಸೋಂಕು ತಗಲುವ ಸಾಧ್ಯತೆ ಇಲ್ಲವಾಗುತ್ತದೆ.

  ಆ ಭಾಗದಲ್ಲಿ ಸೋಪು ಬಳಸಲೇಬೇಡಿ!

  ಆ ಭಾಗದಲ್ಲಿ ಸೋಪು ಬಳಸಲೇಬೇಡಿ!

  ಹೆಚ್ಚಿನ ಮಹಿಳೆಯರು ಅರಿವಿಲ್ಲದೇ ಮಾಡುತ್ತಾ ಬಂದಿರುವ ತಪ್ಪು ಇದು. ಈ ಭಾಗದಲ್ಲಿ ಸೆಕ್ಸ್ ಬಳಿಕ ಸೋಪು ಉಪಯೋಗಿಸಿ ತೊಳೆದುಕೊಳ್ಳಬಾರದು. ಮಿಲನದ ಬಳಿಕ ಮಾತ್ರವಲ್ಲ, ನಂತರದ ಅವಧಿಯಲ್ಲಿಯೂ ಸೋಪು ಬಳಸಬಾರದು. ಮಹಿಳೆಯರ ಗುಪ್ತಾಂಗ ತನ್ನನ್ನು ತಾನೇ ಸ್ವಚ್ಛಗೊಳಿಸಿಕೊಳ್ಳುವ ಅದ್ಭುತ ಶಕ್ತಿಯನ್ನು ಪಡೆದಿದೆ. ಸೋಪು ಅಥವಾ ಇತ್ತೀಚಿನ ದಿನಗಳಲ್ಲಿ ದೊರಕುತ್ತಿರುವ douche ಎಂಬ ವಸ್ತುವನ್ನು ಉಪಯೋಗಿಸಿದರೆ ಇದು ಗುಪ್ತಾಂಗದ ಒಳಭಾಗದ ಆಮ್ಲೀಯತೆ-ಕ್ಷಾರೀಯತೆಯ ಮಟ್ಟವನ್ನು ಅಳೆಯುವ ಪಿಎಚ್ ಮಟ್ಟವನ್ನು ಏರು ಪೇರುಗೊಳಿಸುತ್ತದೆ. ಇದರಿಂದ ನೈಸರ್ಗಿಕವಾಗಿ ಇರಬೇಕಾದ ತೇವ ಇಲ್ಲವಾಗಿ ಒಳಭಾಗ ತೀರಾ ಒಣಗುತ್ತದೆ ಅಥವಾ ಸೋಂಕಿಗೆ ಸುಲಭವಾಗಿ ತುತ್ತಾಗುತ್ತದೆ.

  ಸಡಿಲವಾದ ಒಳ ಉಡುಪು ಧರಿಸಿ

  ಸಡಿಲವಾದ ಒಳ ಉಡುಪು ಧರಿಸಿ

  ಇಂದಿನ ಹೆಚ್ಚಿನ ಒಳ ಉಡುಪುಗಳು ನೈಲಾನ್ ಅಥವಾ ಪಾಲಿಸ್ಟರ್ ನಿಂದ ತಯಾರಾಗುತ್ತವೆ. ಇವು ನೋಡಲಿಕ್ಕೆ ಮಾತ್ರ ಸುಂದರವೇ ಹೊರತು ಇದರ ಮೂಲಕ ಗಾಳಿಯಾಡದ ಕಾರಣ ಆರೋಗ್ಯಕರವಲ್ಲ. ಆದ್ದರಿಂದ ಮಿಲನದ ಬಳಿಕ ಈ ಉಡುಪುಗಳನ್ನು ತೊಟ್ಟರೆ ಗಾಳಿಯ ಕೊರತೆಯಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚುತ್ತದೆ. ಬದಲಿಗೆ ಸಡಿಲವಾದ ಹತ್ತಿಯ ಒಳ ಉಡುಪುಗಳೇ ಸೂಕ್ತ.

   ಸೆಕ್ಸ್ ಬಳಿಕ ಯೋನಿ ತೊಳೆಯುವುದು

  ಸೆಕ್ಸ್ ಬಳಿಕ ಯೋನಿ ತೊಳೆಯುವುದು

  ಲೈಂಗಿಕ ಕ್ರಿಯೆ ಬಳಿಕ ತೆಗೆದುಕೊಳ್ಳಬೇಕಾದ ಮುಖ್ಯ ಕ್ರಮವೆಂದರೆ ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು. ಕೇವಲ ಮೂತ್ರನಾಳದ ಸೋಂಕು ಮಾತ್ರವಲ್ಲ, ಬೇರೆ ರೀತಿಯ ಸೋಂಕು ನಿಮ್ಮ ದೇಹದೊಳಗೆ ಪ್ರವೇಶ ಮಾಡಬಹುದು. ಕಾಂಡೋಮ್ ಬಳಸಿದರೆ ಅದು ಇಬ್ಬರು ಸಂಗಾತಿಗಳನ್ನು ಕೂಡ ಲೈಂಗಿಕ ಸೋಂಕಿನಿಂದ ರಕ್ಷಿಸುವುದು. ಕಾಂಡೋಮ್ ಬಳಸದೆ ಇದ್ದರೆ ಆಗ ಸರಿಯಾದ ಸ್ವಚ್ಛತೆಯನ್ನು ಪಾಲಿಸಿ.

  ತೇವವಾದ ವೈಪ್ಸ್ ಬಳಸದಿರಿ

  ತೇವವಾದ ವೈಪ್ಸ್ ಬಳಸದಿರಿ

  ಥಟ್ಟನೇ ಒರೆಸಿ ಸ್ವಚ್ಛಗೊಳಿಸಲು ನೆರವಾಗುವ ವೆಟ್ ವೈಪ್ಸ್ ಎಂದು ಈಗ ಮಾರುಕಟ್ಟೆಯಲ್ಲಿ ಸಿಗುತ್ತಿರುವ ವಸ್ತುಗಳು ಬೆವರೊನ್ನೊರೆಸಿಕೊಳ್ಳಲು ಸೂಕ್ತವೇ ಹೊರತು ಮಿಲನದ ಬಳಿಕದ ಉಪಯೋಗಕ್ಕಲ್ಲ. ಈ ವೈಪ್ಸ್ ನಲ್ಲಿರುವ ಸುಗಂಧಕಾರಕ ಹಾಗೂ ಬೆವರನ್ನು ಹೀರಿಕೊಳ್ಳುಲು ಬಳಸುವ ಕೆಲವು ರಾಸಾಯನಿಕಗಳು ಸೂಕ್ಷ್ಮಭಾಗಕ್ಕೆ ಪ್ರಬಲವಾದ ಪರಿಣಾಮವುಂಟುಮಾಡಬಹುದು. ಆದ್ದರಿಂದ ಈ ಭಾಗವನ್ನು ಸ್ವಚ್ಛಗೊಳಿಸಲು ಒಂದು ಲೋಟ ನೀರಿನಲ್ಲಿ ಒಂದೆರಡು ಚಮಚ ಶಿರ್ಕಾ ಸೇರಿಸಿ ಸ್ವಚ್ಛ ಹತ್ತಿಯ ಬಟ್ಟೆಯಿಂದ ಒರೆಸಿಕೊಂಡರೆ ಬೇಕಾದಷ್ಟಾಯಿತು. ಮಿಲನದ ಬಳಿಕ ಕೈಗೊಳ್ಳಬೇಕಾದ ಕ್ರಮಗಳಲ್ಲಿ ಇದು ಅತ್ಯಂತ ಮಹತ್ವದ್ದಾಗಿದೆ.

  ಬಿಸಿನೀರಿನ ಬದಲಿಗೆ ತಣ್ಣೀರಿನ ಸ್ನಾನ ಮಾಡಿ

  ಬಿಸಿನೀರಿನ ಬದಲಿಗೆ ತಣ್ಣೀರಿನ ಸ್ನಾನ ಮಾಡಿ

  ಸಾಮಾನ್ಯವಾಗಿ ಮಿಲನದ ಬಳಿಕ ಯೋನಿಯ ಸ್ನಾಯುಗಳು ಸಡಿಲವಾಗಿ ತೆರೆದ ಸ್ಥಿತಿಯಲ್ಲಿರುತ್ತವೆ. ಈ ಸಮಯದಲ್ಲಿ ಬಿಸಿನೀರಿನ ಸ್ನಾನ ಮಾಡುವುದು ಅಥವಾ ಬಿಸಿನೀರಿರುವ ಸ್ನಾನದ ತೊಟ್ಟಿಯಲ್ಲಿ ಮುಳುಗುವುದು ಸೋಂಕುಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಆದ್ದರಿಂದ ಬಿಸಿನೀರಿನ ಸ್ನಾನ ಬೇಡ.

  ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ...

  ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ...

  ದಂಪತಿಗಳು ಲೈಂಗಿಕ ಕ್ರಿಯೆಗೆ ಮೊದಲು ಮತ್ತು ನಂತರ ಜನನಾಂಗಗಳನ್ನು ಸ್ವಚ್ಛಗೊಳಿಸಿಕೊಂಡು ತಮ್ಮನ್ನು ತಾವು ಸೋಂಕುಗಳಿಂದ ಕಾಪಾಡಿಕೊಳ್ಳುವುದು ಅತ್ಯಗತ್ಯ. ಮಹಿಳೆಯರು ಸಹ ಸಂಭೋಗದ ನಂತರ ಮೂತ್ರ ವಿಸರ್ಜನೆ ಮಾಡಿ, ತಮ್ಮ ಜನನಾಂಗದಲ್ಲಿರುವ ಸೋಂಕನ್ನು ಹೊರ ಹಾಕುವ ಪ್ರಯತ್ನ ಮಾಡಬೇಕು.

  English summary

  Women: Do These Things After Sex !

  Most of us never give a thought to the dos and don'ts after an intercourse or before having one. Most of the time, the reason why we get infections down there is due to the unhygienic habits that we follow. There are some important things that you need to follow after an intercourse. We have listed the must dos in this article. Here are a few of the things that you must do immediately after having an intercourse. Read to find out about these.
  Story first published: Wednesday, May 30, 2018, 15:26 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more