For Quick Alerts
ALLOW NOTIFICATIONS  
For Daily Alerts

ನೋಡಿ ಇದೇ ಕಾರಣಕ್ಕೆ ಕಣ್ಣುಗಳಲ್ಲಿ ಸದಾ ನೀರು ತುಂಬಿಕೊಂಡಿರುವುದು!

|

ನಮ್ಮ ದೇಹದ ಅತಿ ಸೂಕ್ಷ್ಮ ಹಾಗೂ ಮುಖ್ಯ ಅಂಗಗಳಲ್ಲೊಂದಾದ ಕಣ್ಣುಗಳನ್ನು ಅತಿ ಹೆಚ್ಚಿನ ಜತನದಿಂದ ಕಾಪಾಡಿಕೊಳ್ಳಬೇಕಾಗಿರುವ ಅಂಗವಾಗಿದೆ. ಕಣ್ಣುಗಳಿಗೆ ಕೊಂಚವೂ ತೊಂದರೆಯುಂಟಾದರೆ ಹೆಚ್ಚಿನ ನೋವು ಹಾಗೂ ಅಸ್ವಸ್ಥತೆ ಉಂಟಾಗುತ್ತದೆ.

ವಾಸ್ತವದಲ್ಲಿ, ಕಣ್ಣುಗಳಲ್ಲಿ ಕೊಂಚವೂ ಸೋಂಕು ಎದುರಾದರೆ ನಿತ್ಯದ ಸಾಮಾನ್ಯ ಚಟುವಟಿಕೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಓದಿನಲ್ಲಿ ತೊಂದರೆಯುಂಟಾಗುತ್ತದೆ. ಹಾಗಾಗಿ, ಪ್ರತಿ ದಿನವೂ ಮುಖ್ಯವಾದ ಈ ಪರಿಕ್ಷಾ ಅಭ್ಯಾಸದ ಸಮಯದಲ್ಲಿ ಕಣ್ಣುಗಳ ಬಗ್ಗೆ ಹೆಚ್ಚಿನ ಅಸ್ಥೆ ವಹಿಸುವುದು ಅಗತ್ಯವಾಗಿದ್ದು ಯಾವುದೇ ತೊಂದರೆ, ಅಲ್ಪವೆನಿಸಿದರೂ ಸರಿ, ತಕ್ಷಣವೇ ನೇತ್ರವೈದ್ಯರಲ್ಲಿ ತೋರಿಸಿ ಸೂಕ್ತ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ. ಹಲವು ಸಮಯದಲ್ಲಿ, ಕೆಲವರಿಗೆ ಇಡಿಯ ದಿನ ಕಣ್ಣುಗಳು ತೇವಗೊಂಡೇ ಇರುತ್ತವೆ.

Why Your Eyes Are Constantly Watery?

ಇದರ ಜೊತೆಗೇ ಕೊಂಚ ಉರಿ, ತುರಿಕೆ, ಕಣ್ಣು ಕೆಂಪಗಾಗುವುದು, ಪ್ರಖರ ಬೆಳಕನ್ನು ನೋಡಲು ಸಾಧ್ಯವಾಗದೇ ಹೋಗುವುದು ಇತ್ಯಾದಿಗಳೂ ಎದುರಾಗಬಹುದು. ಸತತವಾಗಿ ಕಣ್ಣುಗಳಲ್ಲಿ ನೀರು ತುಂಬಿರುವ ಕಾರಣ ನಿತ್ಯದ ಕೆಲಸಗಳಿಗೆ ಅಡ್ಡಿಯಾಗುವುದೂ ಅಲ್ಲದೇ ಮುಂದೆ ಇದು ದೊಡ್ಡ ತೊಂದರೆಗೂ ಮೂಲವಾಗಬಹುದು. ಕಣ್ಣುಗಳಲ್ಲಿ ನೀರು ತುಂಬಿಕೊಂಡಿದ್ದು ಕೊಂಚ ತುರಿಕೆಯೂ ಇರುವ ಕಾರಣ ಸತತವಾಗಿ, ಅನೈಚ್ಛಿಕವಾಗಿ ಬೆರಳುಗಳಿಂದ ಕಣ್ಣುಗಳನ್ನು ಮುಟ್ಟುತ್ತಾ ಕಣ್ಣೀರನ್ನು ಒರೆಸಿಕೊಳ್ಳುತ್ತಾ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಈ ತೊಂದರೆಗೆ ಈ ಕೆಳಗಿನ ಏಳು ಕಾರಣಗಳಲ್ಲಿ ಒಂದು ಪ್ರಮುಖವಾಗಿರಬಹುದು:

ಒಣ ಕಣ್ಣುಗಳ ಲಕ್ಷಣ (Dry Eye Syndrome)

ಒಣ ಕಣ್ಣುಗಳ ಲಕ್ಷಣ (Dry Eye Syndrome)

ಇದೊಂದು ನೇತ್ರಗಳಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಈ ಸ್ಥಿತಿ ಎದುರಾದಾಗ ಸದಾ ತೇವಗೊಂಡೇ ಇರಬೇಕಾಗಿರುವ ಕಣ್ಣುಗಳ ಅಂಗಾಂಶಗಳು ಯಾವುದೋ ಕಾರಣದಿಂದ ಒಣಗತೊಡಗುತ್ತವೆ. ಸಾಮಾನ್ಯವಾಗಿ ಪ್ರಖರ ಬೆಳಕನ್ನೇ ಸತತವಾಗಿ ನೋಡುವ, ಉದಾಹರಣೆಗೆ ಕಂಪ್ಯೂಟರ್ ಪರದೆ, ಬೆಂಕಿಯ ಜ್ವಾಲೆ, ಹಾಗೂ ವಾತಾವರಣದಲ್ಲಿರುವ ಧೂಳು, ಹೊಗೆಯ ಕಣಗಳು ಮೊದಲಾದವು ಕಾರಣವಾಗಬಹುದು. ಈ ಸ್ಥಿತಿ ಎದುರಾದಾಗ, ರೋಗ ನಿರೋಧಕ ಶಕ್ತಿ ಈ ಒಣಗುವಿಕೆಗೆ ವಿರುದ್ದವಾದ ಪ್ರಚೋದನೆಯನ್ನು ನೀಡಿ ಕಣ್ಣಿನ ಗ್ರಂಥಿಗಳು ಹೆಚ್ಚು ನೀರು ಸುರಿಸುವಂತೆ ಮಾಡುತ್ತವೆ. ಈ ಕಣ್ಣೀರು ವಾಸ್ತವವಾಗಿ ಕಣ್ಣುಗಳಿಗೆ ಸದಾ ಆದ್ರತೆ ಮತ್ತು ಜಾರುವಿಕೆಯನ್ನು ನೀಡುವ ದ್ರವವಾಗಿದ್ದು ಕಣ್ಣಿನ ಹೊರಭಾಗ ಸದಾ ತೇವದಲ್ಲಿರಲು ನೆರವಾಗುತ್ತದೆ. ಒಣಗಿರುವ ಪ್ರಚೋದನೆ ಹೆಚ್ಚಿದಷ್ಟೂ ನೀರು ತುಂಬಿಕೊಳ್ಳುವ ಪ್ರಮಾಣವೂ ಹೆಚ್ಚಾಗುತ್ತದೆ. ಒಣ ಕಣ್ಣುಗಳಿಂದ ಸತತ ನೀರು ಹರಿಯುವುದರೊಂದಿಗೇ ತುರಿಕೆ, ಕಿರಿಕಿರಿ, ಸತತವಾಗಿ ಕಣ್ಣುಗಳನ್ನು ಮಿಟುಕಿಸುತ್ತಾ ಇರುವುದು ಮೊದಲಾದವೂ ಎದುರಾಗುತ್ತವೆ.

MOst Read: ಗುರುವಾರ ಮಾಡುವ ಉಪವಾಸದ ಫಲವೇನು?

ಆಹಾರದ ಮೂಲಕ ಸೇವಿಸಿದ ಕೆಲವು ಔಷಧಿಗಳು

ಆಹಾರದ ಮೂಲಕ ಸೇವಿಸಿದ ಕೆಲವು ಔಷಧಿಗಳು

ಕೆಲವು ವ್ಯಕ್ತಿಗಳಿಗೆ ಕೆಲವು ಬಾರಿ ಹೊಸ ಔಷಧಿಯನ್ನು ಸೇವಿಸಲು ಪ್ರಾರಂಭವಾದ ಬಳಿಕ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳಲು ಆರಂಭವಾಗುತ್ತದೆ. ಈ ಬಗ್ಗೆ ನಡೆಸಿದ ಸಂಶೋಧನಾ ಅಧ್ಯಯನಗಳಲ್ಲಿ ಕಂಡುಕೊಂಡ ಪ್ರಕಾರ ಕೆಲವು ಔಷಧಿಗಳಾದ, ಉದಾರಹಣೆಗೆ ಅಲರ್ಜಿ ನಿವಾರಕ(antihistamines), ಮೊಡವೆಗಳ ಔಷಧಿ (ಭಾರೀ ಮೊಡವೆಗಳ ನಿವಾರಣೆಗಾಗಿ ಸೇವಿಸಲು ನೀಡುವ ಗುಳಿಗೆಗಳು), ಖಿನ್ನತಾ ನಿವಾರಕ ಗುಳಿಗೆಗಳು (antidepressants), ಪಾರ್ಕಿನ್ಸನ್ ಕಾಯಿಲೆಯ ಔಷಧಿಗಳು ಮೊದಲಾದವುಗಳ ಸೇವನೆಯ ಬಳಿಕ ಈ ತೊಂದರೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಈ ಗುಳಿಗೆಗಳ ಔಷಧೀಯ ಪ್ರಭಾವಕ್ಕೆ ದೇಹದ ರೋಗ ನಿರೋಧಕ ವ್ಯವಸ್ಥೆ ಸ್ಪಂದಿಸುವುದರಿಂದ ಇದರ ಜೊತೆಗೇ ಕಣ್ಣುಗಳಿಗೆ ಹೆಚ್ಚಿನ ನೀರು ಸುರಿಸುವಂತೆಯೂ ಸೂಚನೆ ಹೋಗುತ್ತದೆ.

ಸ್ವಪ್ರತಿರೋಧ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳು (Autoimmune Diseases)

ಸ್ವಪ್ರತಿರೋಧ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳು (Autoimmune Diseases)

ಕೆಲವೊಮ್ಮೆ ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಆರೋಗ್ಯವಂತ ಜೀವಕೋಶಗಳ ಮೇಲೇ ಪ್ರಭಾವ ಬೀರುತ್ತದೆ. ಈ ಸ್ಥಿತಿಗೆ ಸ್ವಪ್ರತಿರೋಧ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಈ ರೋಗವೂ ಸತತ ಕಣ್ಣುಗಳಲ್ಲಿ ನೀರಿನ ಸುರಿಸುವಿಕೆಗೆ ಕಾರಣವಾಗಬಹುದು.

ಜಾಗ್ರೆನ್ಸ್ ಸಿಂಡ್ರೋಂ (Sjogren's syndrome)

ಜಾಗ್ರೆನ್ಸ್ ಸಿಂಡ್ರೋಂ (Sjogren's syndrome)

ಮೊದಲಾದ ಕಾಯಿಲೆಗಳು ಸ್ವಪ್ರತಿರೋಧ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಯಾಗಿದ್ದು ಕಣ್ಣಿನಲ್ಲಿ ನೀರನ್ನು ಸುರಿಸುವ ಗ್ರಂಥಿಯ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಇವುಗಳನ್ನು ಒಣಗಿಸುತ್ತದೆ. ಇದರ ಪರಿಣಾಮವಾಗಿ ಅಗತ್ಯಕ್ಕೂ ಹೆಚ್ಚು ಕಣ್ಣೀರನ್ನು ಈ ಗ್ರಂಥಿಗಳು ಸುರಿಸುತ್ತವೆ. ಅಲ್ಲದೇ ಈ ನೀರು ಉರಿ ಮತ್ತು ತುರಿಕೆಯಿಂದಲೂ ಕೂಡಿರುತ್ತದೆ.

ಕಣ್ಣೀರ ಗ್ರಂಥಿಗಳು ಮುಚ್ಚಿಕೊಂಡಿರುವುದು (Blocked Tear Ducts)

ಕಣ್ಣೀರ ಗ್ರಂಥಿಗಳು ಮುಚ್ಚಿಕೊಂಡಿರುವುದು (Blocked Tear Ducts)

ಕಣ್ಣೀರು ಸುರಿಸುವ ಸೂಕ್ಷ್ಮ ಗ್ರಂಥಿಗಳು ಕಣ್ಣಿನ ಒಳಭಾಗದಲ್ಲಿದ್ದು ಅತಿ ಸೂಕ್ಷ್ಮ ನಾಳಗಳಿಂದ ಕಣ್ಣುರೆಪ್ಪೆಗಳ ಒಳಭಾಗದಲ್ಲಿ ಸುರಿಸಲ್ಪಡುತ್ತವೆ. ಇವು ಕಣ್ಣು ಮತ್ತು ಕಣ್ಣುರೆಪ್ಪೆಯ ನಡುವೆ ಘರ್ಷಣೆಯಾಗದಂತೆ ತಡೆಯುವ ಜಾರುಕದಂತೆ ಹಾಗೂ ಕಣ್ಣುಗಳನ್ನು ಒಣಗಲು ಬಿಡದ ತೇವಕಾಕರ ದ್ರವದಂತೆ ಕೆಲಸ ಮಾಡುತ್ತದೆ. ಅಲ್ಲದೇ ಅಗಾಗ ಕಣ್ಣು ಮಿಟುಕಿಸುವ ಮೂಲಕ ಈ ದ್ರವ ಕಣ್ಣುಗಳಿಗೆ ಎದುರಾಗುವ ಸೂಕ್ಷ್ಮ ಕಣಗಳನ್ನು ಗುಡಿಸಿ ನಿವಾರಿಸುತ್ತದೆ.

Most Read: ಈ 4 ರಾಶಿಚಕ್ರದವರಿಗೆ ಮೂಗಿನ ಮೇಲೆ ಸಿಟ್ಟು-ಇವರ ಕೋಪವನ್ನು ನಿಯಂತ್ರಿಸುವುದೇ ಕಷ್ಟ!

ಇವೆಲ್ಲಾ ಸಮಸ್ಯೆಯೂ ಕೂಡ ಕಾರಣವಾಗಿರಬಹುದು!

ಇವೆಲ್ಲಾ ಸಮಸ್ಯೆಯೂ ಕೂಡ ಕಾರಣವಾಗಿರಬಹುದು!

ವಾತಾವರಣದ ಪ್ರದೂಷಣೆ, ಸೋಂಕು, ಕಣ್ಣುಗಳ ಸೌಂದರ್ಯಪ್ರಸಾಧನಗಳ ಅತಿಯಾದ ಬಳಕೆ ಇತ್ಯಾದಿಗಳು ಕಣ್ಣುಗಳ ಗ್ರಂಥಿಯನ್ನು ಮುಚ್ಚಿಬಿಡಬಹುದು. ಹೀಗಾದಾಗ ಕಣ್ಣುಗಳು ತೀರಾ ಒಣಗುತ್ತವೆ ಹಾಗೂ ಈ ಒಣಗಿರುವ ಪಾಪೆ ಉರಿಯುಂಟು ಮಾಡುತ್ತದೆ (ಸೋಪು ಕಣ್ಣಿಗೆ ಬಿದ್ದಾಗ ಸೋಪು ಕಣ್ಣಿನ ಮೇಲ್ಭಾಗದ ನೀರಿನ ಅಂಶವನ್ನು ದೂರವಾಗಿಸಿ ಒಣಗಿಸುವುದರಿಂದಲೇ ಅಪಾರ ಉರಿಯಾಗುತ್ತದೆ) ಈ ಉರಿಯನ್ನು ಶಮನ ಮಾಡಲು ರೋಗ ನಿರೋಧಕ ವ್ಯವಸ್ಥೆ ಹೆಚ್ಚಿನ ಕಣ್ಣೀರನ್ನು ಸುರಿಸಲು ನಿರ್ದೇಶನ ನೀಡುತ್ತದೆ. ಪರಿಣಾಮವಾಗಿ ಕಣ್ಣೀರು ಅಗತ್ಯಕ್ಕೂ ಹೆಚ್ಚು ಸುರಿಯತೊಡಗುತ್ತದೆ.

ಅಲರ್ಜಿ

ಅಲರ್ಜಿ

ಕೆಲವು ಬಾಹ್ಯ ಕಣಗಳಾದ ಹೂವಿನ ಪರಾಗ, ಧೂಳಿನ ಕಣ, ಧೂಳಿನ ಕ್ರಿಮಿಗಳು, ಪ್ರದೂಶಣಾಕಾರಕಗಳು, ಏನನ್ನೋ ಸುಟ್ಟರೆ ಗಾಳಿಯಲ್ಲಿ ತೇಲಾಡುವ ಕೆಲವು ರಾಸಾಯನಿಕ ಕಣಗಳು, ಸಾಕು ಪ್ರಾಣಿಗಳ ಕೂದಲು, ತಲೆಹೊಟ್ಟು ಮೊದಲಾದ ಸೂಕ್ಷ್ಮ ಕಣಗಳು ಹಲವು ವ್ಯಕ್ತಿಗಳಿಗೆ ಅಲರ್ಜಿಕಾರಕವಾಗಿದೆ.

ಯಾವಾಗ ಈ ಕಣಗಳು ಕಣ್ಣುಗಳ ಮೇಲೆ ಆವರಿಸುತ್ತವೆಯೋ ಆಗ ನಮ್ಮ ದೇಹದ ಅಲರ್ಜಿಕಾಕರ ಕ್ರಮ ಈ ಕಣಗಳಿಗೆ ಪ್ರತಿರೋಧ ಒಡ್ಡಲು ಸಿದ್ಧವಾಗುತ್ತವೆ. ಪರಿಣಾಮವಾಗಿ ಕಣ್ಣುಗಳು ಹೆಚ್ಚು ನೀರನ್ನು ಸುರಿಸುತ್ತವೆ ಹಾಗೂ ಸತತವಾಗಿ ಕಣ್ಣೀರು ಹರಿಯಲು ತೊಡಗುತ್ತದೆ. ಈ ತೊಂದರೆಯೊಂದಿಗೇ ಸಾಮಾನ್ಯವಾಗಿ ಕಣ್ಣುಗಳಲ್ಲಿ ತುರಿಕೆ, ಕೆಂಪಗಾಗುವುದು ಹಾಗೂ ಕಿರಿಕಿರಿಯೂ ಎದುರಾಗುತ್ತದೆ.

ಕೆಲವು ಕಣ್ಣುಗಳಿಗೆ ಹಾಕುವ ಡ್ರಾಪ್ಸ್ ಗಳು

ಕೆಲವು ಕಣ್ಣುಗಳಿಗೆ ಹಾಕುವ ಡ್ರಾಪ್ಸ್ ಗಳು

ನಿಯಮಿತವಾಗಿ ಅಥವಾ ಅಲ್ಪಕಾಲಕ್ಕೆ ಕಣ್ಣುಗಳಿಗೆ ಕೆಲವು ಹನಿಗಳನ್ನು ಹಾಕಿಕೊಳ್ಳುವಂತೆ ವೈದ್ಯರು ಕೆಲವು ಕಣ್ಣಿನ ಡ್ರಾಪ್ಸ್ ಗಳನ್ನು ಸಲಹೆ ಮಾಡುತ್ತಾರೆ. ಸಾಮಾನ್ಯವಾಗಿ ಮದ್ರಾಸ್ ಕಣ್ಣು, ಒಣಕಣ್ಣುಗಳು, ಕಣ್ಣುಗಳಿಗೆ ಆದ ಪೆಟ್ಟು, ಕಣ್ಣಿನ ಶಸ್ತ್ರಕ್ರಿಯೆಯ ಬಳಿಕ ಮೊದಲಾದ ಸಂದರ್ಭಗಳಲ್ಲಿ ವೈದ್ಯರು ಈ ಡ್ರಾಪ್ಸ್ ಗಳನ್ನು ಸಲಹೆ ಮಾಡುತ್ತಾರೆ. ಆದರೆ ಎಲ್ಲಾ ಔಷಧಿಗಳು ಎಲ್ಲರಿಗೂ ಸೂಕ್ತವಾಗದೇ ಹೋಗುವಂತೆ ಈ ಡ್ರಾಪ್ಸ್ ಗಳೂ ಕೆಲವು ವ್ಯಕ್ತಿಗಳಿಗೆ ಒಗ್ಗದೆ ಹೋವುದಿಲ್ಲ. ಪರಿಣಾಮವಾಗಿ ಕಣ್ಣಿನಲ್ಲಿ ಉರಿ, ಸತತ ಕಣ್ಣುಗಳಲ್ಲಿ ನೀರು ತುಂಬಿಕೊಳ್ಳುವುದು ಹಾಗೂ ತುರಿಕೆ ಎದುರಾಗುತ್ತದೆ.

Most Read: ವಾರದ ಪ್ರಕಾರ ದೇವರ ಮಂತ್ರ ಪಠಿಸಿ- ಸಕಲ ಸಂಕಷ್ಟ ಪರಿಹಾರವಾಗುವುದು

ಕಣ್ಣುಗಳಲ್ಲಿ ಉಂಟಾದ ಸೋಂಕು:

ಕಣ್ಣುಗಳಲ್ಲಿ ಉಂಟಾದ ಸೋಂಕು:

ಕೆಲವೊಮ್ಮೆ ಕಣ್ಣುಗಳಲ್ಲಿ ಎದುರಾಗುವ ಕೆಲವು ಬ್ಯಾಕ್ಟೀರಿಯಾ ಅಥವಾ ವೈರಸ್ಸುಗಳು ಸೋಂಕನ್ನು ಉಂಟುಮಾಡುತ್ತವೆ. ಪರಿಣಾಮವಾಗಿ ಕಣ್ಣುಗಳು ಕೆಂಪಗಾಗುವುದು, ತುರಿಕೆ, ಕಿರಿಕಿರಿಯಾಗುವುದು ಹಾಗೂ ಕಣ್ಣುಗಳಿಂದ ಹೆಚ್ಚೇ ನೀರು ಸುರಿಯುತ್ತದೆ. ಒಂದು ವೇಳೆ ಈ ಸೋಂಕು ಪ್ರಾರಂಭವಾದ ತಕ್ಷಣ ಚಿಕಿತ್ಸೆ ಪಡೆಯದೇ ಹೋದಲ್ಲಿ ಕಣ್ಣುಗಳಲ್ಲಿ ನೀರು ಸುರಿಯುವುದು ಸತತವಾಗತೊಡಗುತ್ತದೆ.

English summary

Why Your Eyes Are Constantly Watery?

The eyes are extremely sensitive organs of the human body and even a minor problem can cause a lot of discomfort and pain. In fact, even if you suffer from a minor eye infection, you may not be able to carry on with your daily activities, especially work or studies for a few days. So, it is very important to take care of your eyes and get any potential problems checked by professionals. Many a time, people experience a persistent wateriness in their eyes.
X
Desktop Bottom Promotion