For Quick Alerts
ALLOW NOTIFICATIONS  
For Daily Alerts

ಸಡನ್ ಆಗಿ ಎದೆ ನೋವು ಕಾಣಿಸಿಕೊಂಡರೆ ಯಾವತ್ತೂ ನಿರ್ಲಕ್ಷಿಸಬೇಡಿ!

|

ಎದೆನೋವು ಕಾಣಿಸಿಕೊಂಡರೆ ಹೆಚ್ಚಿನವರು ಅದು ಗ್ಯಾಸ್ ಸಮಸ್ಯೆ ಎಂದು ಕಡೆಗಣಿಸುವುದು ಇದೆ. ಗ್ಯಾಸ್ ಸಮಸ್ಯೆಯಾಗಿದ್ದರೆ ಅದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಅದಕ್ಕೂ ಮೊದಲು ನೀವು ಇಂತಹ ಎದೆನೋವನ್ನು ಕಡೆಗಣಿಸಬಾರದು. ಯಾಕೆಂದರೆ ಇದರಿಂದ ದೊಡ್ಡ ಮಟ್ಟದ ಆಪತ್ತು ನಿಮಗೆ ಎದುರಾಗಬಹುದು. ನೀವು ಗ್ಯಾಸ್ ಎಂದು ಕಡೆಗಣಿಸುವಂತಹ ಎದೆನೋವು ಬೇರೆ ಯಾವುದೇ ರೀತಿಯ ಸಮಸ್ಯೆಯ ಲಕ್ಷಣವಾಗಿರಲೂ ಬಹುದು. ಇದರಿಂದ ಈ ಲೇಖನದಲ್ಲಿ ನೀವು ಎದೆ ನೋವನ್ನು ಯಾಕೆ ಕಡೆಗಣಿಸಬಾರದು ಎಂದು ಹೇಳಲಾಗಿದೆ. ಇದು ಯಾಕೆ ಎಂದು ತಿಳಿಯಿರಿ.

ನೀವು ವಿಶ್ರಾಂತಿ ಮಾಡುತ್ತಲಿರುವಾಗ, ನಡೆಯುತ್ತಿರುವಾಗ ಅಥವಾ ವ್ಯಾಯಾಮ ಮಾಡುತ್ತಲಿರುವಾಗ ಎದೆನೋವು ಕಾಣಿಸಿದರೆ ಅದನ್ನು ಖಂಡಿತವಾಗಿಯೂ ಕಡೆಗಣಿಸಬೇಡಿ. ಎದೆಯಲ್ಲಿ ಹಿಸುಕಿದಂತೆ, ಒತ್ತಡ ಬೀಳುವುದು ಹಲವಾರು ರೀತಿಯ ಹಾನಿಯಲ್ಲದೆ ಇರುವಂತಹ ಒತ್ತಡ ಮತ್ತು ಅಜೀರ್ಣದ ಲಕ್ಷಣವಾಗಿರಲೂ ಬಹುದು. ಅದೇ ರೀತಿಯಾಗಿ ಇದೇ ರೀತಿಯ ಲಕ್ಷಣಗಳು ಹೃದಯಾಘಾತ ಅಥವಾ ಆಂಜಿನಾದ ಲಕ್ಷಣಗಳು ಆಗಿರಬಹುದು. ಆಂಜಿನಾ ಪದೇ ಪದೇ ಕಾಡುವಂತಹ ಎದೆನೋವಾಗಿದ್ದು, ಇದು ಅಪಧಮನಿ ಕಾಯಿಲೆಯ ಚಿಹ್ನೆಯು ಆಗಿರಬಹುದು.

ಎದೆನೋವು 15-20 ನಿಮಿಷಕ್ಕಿಂತಲೂ ಹೆಚ್ಚಾಗಿದ್ದರೆ ಆಗ ನೀವು ತಕ್ಷಣ ವೈದ್ಯರನ್ನು ಭೇಟಿಯಾಗುವುದು ಅಗತ್ಯವಾಗಿರುವುದು. ಇದೇ ವೇಳೆ ನಿಮಗೆ ವಾಕರಿಕೆ, ಬೆವರು, ಉಸಿರಾಟದ ತೊಂದರೆ ಅಥವಾ ಪ್ರಜ್ಞೆ ಕಳಕೊಂಡರೆ ಆಗ ನೀವು ವೈದ್ಯರನ್ನು ಭೇಟಿಯಾಗಿ. ಯಾಕೆಂದರೆ ಕೆಲವೊಂದು ಸಲ ಎದೆ ನೋವಿನ ಸರಿಯಾದ ಕಾರಣ ತಿಳಿಯಲು ತುಂಬಾ ಕಷ್ಟವಾಗುವುದು. ಆದರೆ ಅಪಾಯ ಹೆಚ್ಚಿರುವ ರೋಗಿಗಳಲ್ಲಿ ಅನಿರೀಕ್ಷಿತ ಮತ್ತು ಹಠಾತ್ ಎದೆನೋವಿನಿಂದಾಗಿ ಕೆಲವೊಂದು ಹೃದಯದ ಸಮಸ್ಯೆಯು ಬರಬಹುದು ಎಂದು ವೈದ್ಯರು ತಿಳಿಸುತ್ತಾರೆ.....

ವಿವಿಧ ರೀತಿಯ ಎದೆನೋವನ್ನು ಗುರುತಿಸುವಿಕೆ

ವಿವಿಧ ರೀತಿಯ ಎದೆನೋವನ್ನು ಗುರುತಿಸುವಿಕೆ

ಆಂಜಿನಾ ನೋವು

ಆಂಜಿನಾ ಎದೆನೋವು ಎದೆಮೂಳೆಯ ಕೆಳಭಾಗದಲ್ಲಿ ಕಾಣಿಸಿಕೊಳ್ಳುವಂತಹ ನೋವಾಗಿದೆ ಮತ್ತು ಇದು ಮುಖ್ಯ ಅಪಧಮನಿಗಳಲ್ಲಿ ಆಗಿರುವ ತಡೆಯಿಂದಾಗಿ ರಕ್ತವು ಹೃದಯಕ್ಕೆ ಸರಿಯಾಗಿ ಪೂರೈಕೆಯಾಗದೆ ಇರುವ ಕಾರಣ ಈ ನೋವು ಬರುವುದು.

ಆಂಜಿನಾದ ಲಕ್ಷಣಗಳು

ಆಂಜಿನಾದ ಲಕ್ಷಣಗಳು

ಎದೆನೋವು, ಎದೆಭಾರವಾಗುವುದು, ಬಿಗಿಯಾಗುವುದು ಮತ್ತು ಎದೆಮೂಳೆಯ ಕೆಳಗೆ ಪುಡಿಮಾಡಿದಂತಹ ಅನುಭವ, ಇದು ಎರಡರಿಂದ 15 ನಿಮಿಷ ಕಾಲ ಇರುವುದು ಮಾನಸಿಕ ಒತ್ತಡ, ಶ್ರಮದಾಯಕ ವ್ಯಾಯಮ ಮತ್ತು ಅತಿಯಾದ ಭಾರ ಎತ್ತುವಿಕೆ ಇದಕ್ಕೆ ಮುಖ್ಯ ಕಾರಣಗಳು. ಆಂಜಿನಾವು ಅದರ ವಿಧಕ್ಕೆ ಅನುಗುಣವಾಗಿ ತೀವ್ರತೆಯನ್ನು ಪಡೆದುಕೊಳ್ಳುವುದು. ಸಾಮಾನ್ಯವಾದ ಆಂಜಿನಾ ನೋವೆಂದರೆ ಅದು ಸ್ಥಿರ ಆಂಜಿನಾ. ಇದು ಕೆಲವೇ ನಿಮಿಷಗಳ ಕಾಲ ಮಾತ್ರ ಇರುವುದು ಮತ್ತು ಹೆಚ್ಚಾಗಿ ದೈಹಿಕ ಶ್ರಮದ ವೇಳೆ ಕಂಡುಬರುವುದು. ಮೆಟ್ಟಿಲುಗಳನ್ನು ಹತ್ತುವುದು ಅಥವಾ ಮಾನಸಿಕ ಅಥವಾ ಭಾವನಾತ್ಮಕ ಒತ್ತಡದ ವೇಳೆ ಬರುವುದು. ವಿಶ್ರಾಂತಿ ಅಥವಾ ಔಷಧಿ ತೆಗೆದುಕೊಂಡರೆ ಇದು ತಕ್ಷಣ ಮಾಯವಾಗುವುದು. ಇದು ಯಾವುದೇ ಹೃದಯಾಘಾತದ ಲಕ್ಷಣವಾಗಿಲ್ಲ.

Most Read:ಅಂಗೈ ಶಾಸ್ತ್ರ: ಅಂಗೈ ಮೇಲಿನ ರೇಖೆಗಳು ಸಂತಾನಫಲದ ಬಗ್ಗೆ ತಿಳಿಸುತ್ತದೆಯಂತೆ!

ಅಸ್ಥಿರ ಆಂಜಿನಾ

ಅಸ್ಥಿರ ಆಂಜಿನಾ

ಇದು ಸ್ಥಿರ ಅಂಜಿನಾಕ್ಕಿಂತ ತುಂಬಾ ಗಂಭೀರ ಸ್ವರೂಪದ್ದಾಗಿದೆ ಮತ್ತು ವಿಶ್ರಾಂತಿ ವೇಳೆಯು ಇದು ಕಾಣಿಸುವುದು. ಎದೆನೋವು ಸುಮಾರು 30 ನಿಮಿಷ ಕಾಲ ಹಾಗೆ ಇರುವುದು. ವಿಶ್ರಾಂತಿ ಅಥವಾ ಔಷಧಿಯಿಂದ ಇದು ಕಡಿಮೆಯಾಗುವುದಿಲ್ಲ. ಅಪಧಮನಿಯಲ್ಲಿ ಸಂಪೂರ್ಣವಾಗಿ ತಡೆ ಉಂಟಾಗಿರುವ ವೇಳೆ ಇದು ಹೃದಯಾಘಾತಕ್ಕೂ ಕಾರಣವಾಗಬಹುದು.

ಅಸ್ಥಿರ ಆಂಜಿನಾ

ಅಸ್ಥಿರ ಆಂಜಿನಾ

ದೈಹಿಕ ಶ್ರಮವು ಕಡಿಮೆ ಇರುವಾಗ ಹೊಸದಾಗಿ ಬರುವಂತಹ ಸ್ಥಿರ ಆಂಜಿನಾ ಅಥವಾ ಸ್ಥಿರ ಆಂಜಿನಾದ ಆವರ್ತನದಲ್ಲಿ ಪುನರಾವರ್ತನೆಯು ಕಾಣಿಸಿದರೆ ಇದನ್ನು ಅಸ್ಥಿರ ಆಂಜಿನಾವೆಂದು ವಿಭಾಗಿಸಬಹುದು. ಅಸ್ಥಿರ ಆಂಜಿನಾವು ಅಪಧಮನಿಗಳಲ್ಲಿ ತಡೆ ಉಂಟಾಗಿ ರಕ್ತನಾಳಗಳು ಕಿರುದಾಗುವಿಕೆಯ ಲಕ್ಷಣಗಳನ್ನು ಹಠಾತ್ ಆಗಿ ತೋರಿಸುವುದು. ಅಪಧಮನಿಗಳಲ್ಲಿ ಹಠಾತ್ ಆಗಿ ಬರುವಂತಹ ಸೆಳೆತವು ಹೃದಯಕ್ಕೆ ಸರಿಯಾಗಿ ರಕ್ತ ಸಂಚಾರವಾಗದೆ ಇರುವ ಲಕ್ಷಣವಾಗಿದೆ. ತೀವ್ರ ರೀತಿಯ ಎದೆನೋವು ಅಥವಾ ವಿಶ್ರಾಂತಿ ವೇಳೆ ಕಾಣಿಸಿಕೊಳ್ಳುವುದನ್ನು ಭಿನ್ನ ಆಂಜಿನಾವೆಂದು ಕರೆಯಲಾಗುತ್ತದೆ. ಇದನ್ನು ಸಹಜವಾಗಿ ಬಗೆಹರಿಸಬಹುದು. ಆದರೆ ಸೆಳೆತವು ನಿಯಂತ್ರನಕ್ಕೆ ಬರದೆ ಇದ್ದರೆ ಆಗ ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಔಷಧಿಯು ಇದಕ್ಕೆ ತಕ್ಷಣ ಪರಿಹಾರ ನೀಡಬಹುದು.

Most Read:ಚಿಕನ್ ಕಾಲಿನ ರಸಭರಿತ ಮಾಂಸ ಆರೋಗ್ಯಕ್ಕೆ ಬಹಳ ಒಳ್ಳೆಯದು! ಚಪ್ಪರಿಸಿ ತಿನ್ನಿ

ಹೃದಯಾಘಾತದ ಎದೆನೋವು

ಹೃದಯಾಘಾತದ ಎದೆನೋವು

ಹೃದಯಾಘಾತದಿಂದಾಗಿ ಬರುವಂತಹ ಎದೆನೋವು ಎನ್ನುವುದು ಆಂಜಿನಾ ಎದೆನೋವಿಗಿಂತಲೂ ತುಂಬಾ ತೀವ್ರವಾಗಿರುವುದು ಮತ್ತು ಇದು ಸುಮಾರು 15 ನಿಮಿಷಕ್ಕಿಂತಲೂ ಹೆಚ್ಚಿರುವುದು. ವಿಶ್ರಾಂತಿ ಪಡೆಯುವುದರಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ.

 ಇತರ ಕೆಲವೊಂದು ಲಕ್ಷಣಗಳು ಹೀಗೆ ಇವೆ

ಇತರ ಕೆಲವೊಂದು ಲಕ್ಷಣಗಳು ಹೀಗೆ ಇವೆ

*ಬೆವರು

*ಉಸಿರಾಡಲು ತೊಂದರೆ

*ವಾಂತಿ

*ವಾಕರಿಕೆ

*ನಿಶ್ಯಕ್ತಿ

*ವೇಗ ಮತ್ತು ಅನಿಯಮಿತ ಹೃದಯಬಡಿತ

*ಎದೆನೋವು ಕುತ್ತಿಗೆ, ಕೈಗಗಳು ಮತ್ತು ಭುಜಗಳಿಗೆ ವಿಸ್ತರಣೆಯಾಗುವುದು.

ಹೃದಯದ ಗೋಡೆಯಲ್ಲಿ ನೋವು

ಹೃದಯದ ಗೋಡೆಯಲ್ಲಿ ನೋವು

ಹೃದಯ ಗೋಡೆಯಲ್ಲಿನ ನೋವು ಸಾಮಾನ್ಯವಾಗಿ ಯಾವುದೇ ಹಾನಿ ಉಂಟು ಮಾಡುವುದಿಲ್ಲ ಮತ್ತು ಇದರಿಂದ ತೀವ್ರ ಹಾಗೂ ತೀಕ್ಷ್ಣ ನೋವು ಹೃದಯದ ಗೋಡೆ ನಿರ್ಮಾಣ ಮಾಡಿರುವಂತಹ ಮೂಳೆಗಳು, ಸ್ನಾಯುಗಳು ಮತ್ತು ಮೃಧು ಎಲುಬುಗಳಲ್ಲಿ ಕಾಣಿಸುವುದು. ಇದಕ್ಕೆ ಮುಖ್ಯ ಕಾರಣಗಳೆಂದರೆ ಗಾಯಾಳು, ದೀರ್ಘಕಾಲದ ಕೆಮ್ಮುವಿಕೆ, ಎದೆಯ ಸ್ನಾಯುಗಳ ಮೇಲೆ ಒತ್ತಡ, ಪಕ್ಕೆಲುಬುಗಳಲ್ಲಿ ಮೃಧು ಎಲುಬುಗಳ ಉರಿಯೂತದ ಲಕ್ಷಣಗಳು ಮತ್ತು ಜೀರ್ಣಾಂಗವ್ಯೂಹದ ವ್ಯವಸ್ಥೆಯಿಂದಾಗಿ ಕಾಡುವ ನೋವು(ಉದಾಹರಣೆಗೆ ಜಠರ ಅನ್ನನಾಳದ ಹಿಮ್ಮುಖ ಹರಿವು ಅಥವಾ ಜಠರದ ಹುಣ್ಣಿನ ಕಾಯಿಲೆ).

ಪಲ್ಮನರಿ ಎಂಬಾಲಿಸಮ್

ಪಲ್ಮನರಿ ಎಂಬಾಲಿಸಮ್

ಶ್ವಾಸಕೋಶದ ಅಪಧಮನಿಯಲ್ಲಿ ಕಾಣಿಸಿಕೊಳ್ಳುವ ರಕ್ತದ ತಡೆಯನ್ನು ಪಲ್ಮನರಿ ಎಂಬಾಲಿಸಮ್ ಎಂದು ಕರೆಯಲಾಗುತ್ತದೆ. ಇದು ಹಠಾತ್ ಮತ್ತು ತೀವ್ರ ರೀತಿಯ ಎದೆ ನೋವಿಗೆ ಕಾರಣವಾಗಬಹುದು. ಇದು ದೀರ್ಘಕಾಲದ ತನಕ ಕಾಲುಗಳು ನಿಶ್ಚಲತೆಯಿಂದಾಗಿ ಕಾಡಬಹುದು. ಉದಾಹರಣೆಗೆ ಯಾವುದೇ ವಿಮಾನ ಅಥವಾ ಬಸ್ಸಿನಲ್ಲಿ ದೀರ್ಘಕಾಲ ಪ್ರಯಾಣ ಮಾಡುವುದರಿಂದ ಇದು ಬರಬಹುದು. ಕಾಲುಗಳ ರಕ್ತನಾಳಗಳಲ್ಲಿ ಉಂಟಾಗುವಂತಹ ತಡೆಯು ಶ್ವಾಸಕೋಶದ ಅಪಧಮನಿಗಳಿಗೆ ವಿಸ್ತರಣೆಯಾಗುವುದು. ಇದರಿಂದಾಗಿ ಶ್ವಾಸಕೋಶಕ್ಕೆ ಸರಿಯಾಗಿ ರಕ್ತಸಂಚಾರವು ಕಡಿಮೆಯಾಗುವುದು ಮತ್ತು ಇದರಿಂದ ರಕ್ತದಲ್ಲಿನ ಆಮ್ಲಜನಕ ಕೂಡ. ಎದೆನೋವಿನಿಂದಾಗಿ ಯಾವಾಗಲು ಉಸಿರಾಟದ ತೊಂದರೆ ಮತ್ತು ಎದೆಬಡಿತವು ಅತಿಯಾಗುವುದು. ನೀವು ಕೆಮ್ಮಿದಾಗ ಅಥವಾ ದೀರ್ಘವಾಗಿ ಉಸಿರಾಡಿದಾಗ ನೋವು ಮತ್ತಷ್ಟು ಹೆಚ್ಚಾಗುವುದು. ಪಲ್ಮನರಿ ಎಂಬಾಲಿಸಮ್ ಎನ್ನುವುದು ತುರ್ತು ವೈದ್ಯಕೀಯ ಸಮಸ್ಯೆಯ ಲಕ್ಷಣವಾಗಿದೆ.

ಮಹಾಪಧಮನಿ ಛೇದನ

ಮಹಾಪಧಮನಿ ಛೇದನ

ದೇಹದಲ್ಲಿರುವಂತಹ ಮುಖ್ಯ ಅಪಧಮನಿಯ, ಮಹಾಪಧಮನಿಯ ಗೋಡೆಯ ಪದರವು ಬಿರುಕು ಬಿಡುವುದು. ಇದು ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿರುವಂತಹ ಸಮಸ್ಯೆಯಾಗಿದೆ. ಈ ನೋವನ್ನು ಎದೆಯಲ್ಲಿ ಛೇದನದ ಅನುಭವ ಉಂಟು ಮಾಡುವಂತಹ ನೋವಾಗಿದೆ. ಇದು ಬೆನ್ನಿಗೂ ಹರಡಬಹುದು. ಇದು ಅಪಧಮನಿಗಳ ಇತರ ಕೆಲವು ಭಾಗಗಳಿಗೂ ಹರಡಬಹುದು. ಅಂತಿಮವಾಗಿ ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ವಿಭಜನೆಯು ಮಹಾಪಧಮನಿಯ ಮೂಲಕ್ಕೂ ಹರಡಬಹುದು ಮತ್ತು ಇದು ಒಂದು ಅಥವಾ ಅದಕ್ಕಿಂತ ಹೆಚ್ಚಿನ ರಕ್ತನಾಳಗಳಲ್ಲಿ ತಡೆ ಉಂಟು ಮಾಡಬಹುದು. ಇದರಿಂದ ಹೃದಯಾಘಾತ ಆಗಬಹುದು. ಮಹಾಪಧಮನಿಯ ಛೇದನಕ್ಕೆ ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ.

English summary

​Why You Shouldn't Ignore That Sudden Chest Pain

Don’t ignore the chest pain that suddenly hits you while at rest or during walking or exercising. The sensation of squeezing, crushing or pressure on the chest could indicate many things – from “harmless” stress and indigestion to something as serious as an impending heart attack or angina. Angina is recurring chest pain that usually signals coronary artery disease.
X
Desktop Bottom Promotion