For Quick Alerts
ALLOW NOTIFICATIONS  
For Daily Alerts

ಸೆಕ್ಸ್ ಬಳಿಕ ಯೋನಿಭಾಗದಲ್ಲಿ ಉರಿ ಕಂಡುಬರುತ್ತದೆಯೇ? ಇಲ್ಲಿದೆ ನೋಡಿ ಕಾರಣಗಳು

|

ದಂಪತಿಗಳ ನಡುವಣ ಮಿಲಿನಕ್ರಿಯೆ ಅಪ್ಯಾಯಮಾನವಾದ ಅನುಭವವೇ ಆಗಿದ್ದರೂ ಆಗಾಗ ಕೆಲವೊಂದು ತೊಂದರೆಗಳು ಎದುರಾಗುತ್ತಲೇ ಇರುತ್ತವೆ. ಇದರಲ್ಲಿ, ವಿಶೇಷವಾಗಿ ಮಹಿಳೆಯರಿಗೆ ಎದುರಾಗುವ ತೊಂದರೆ ಎಂದರೆ ಮಿಲನಕ್ರಿಯೆಯ ಬಳಿಕ ಜನನಾಂಗದ ಒಳಭಾಗದಲ್ಲಿ ಕಾಣಿಸಿಕೊಳ್ಳುವ ಉರಿ. ಮೂತ್ರನಾಳದಲ್ಲಿ ಆಗಿರುವ ಸೋಂಕು ಈ ಉರಿಗೆ ಪ್ರಮುಖ ಕಾರಣವಾಗಿದ್ದರೂ ಇತರ ತೊಂದರೆಗಳೂ ಕಾರಣವಾಗಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಅಷ್ಟೇ ಅಲ್ಲ, ಈ ಬಾರಿಯ ಮಿಲನದ ಬಳಿಕ ಉರಿ ಕಾಣಿಸಿಕೊಂಡಾಕ್ಷಣ ಇದೇ ನಿಮ್ಮ ಅಂತಿಮ ಮಿಲನವಾಗಬೇಕೆಂದೂ ಇಲ್ಲ. ಸಾಮಾನ್ಯವಾಗಿ ಇದು ಬಹುತೇಕ ಎಲ್ಲಾ ಮಹಿಳೆಯರಿಗೆ ಆಗಾಗ ಕಾಣಿಸಿಕೊಳ್ಳುವ ತೊಂದರೆಯಾಗಿದ್ದು ಇದಕ್ಕೆ ಒಂದಕ್ಕಿಂತ ಹೆಚ್ಚು ಕಾರಣಗಳಿರಬಹುದು.

"ಈ ಉರಿಗೆ ಕೆಲವಾರು ಕಾರಣಗಳಿವೆ ಹಾಗೂ ಉರಿಯ ಜೊತೆಗೆ ಇತರ ಲಕ್ಷಣಗಳನ್ನೂ ಅರಿತುಕೊಳ್ಳುವ ಮೂಲಕ ಇದರ ಕಾರಣವನ್ನು ಕಂಡುಕೊಳ್ಳಬಹುದು" ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ. ಸಾಮಾನ್ಯವಾಗಿ ಈ ಉರಿ ಮಿಲನಕ್ರಿಯೆ ಬಳಿಕ ತಕ್ಷಣವೇ ಆರಂಭವಾಗಿ ಕೊಂಚ ಕಾಲದ ಬಳಿಕ ಇಲ್ಲವಾಗುತ್ತದೆಯೋ ಅಥವಾ ಸತತವಾಗಿ ಉಳಿದುಕೊಳ್ಳುತ್ತದೆಯೋ ಎಂಬುದನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ.

ಈ ಉರಿ ಅಲ್ಲಗಳೆಯುವ ಅಥವಾ ನಿರ್ಲಕ್ಷಿಸುವ ಮಾತಲ್ಲ, ಅಲ್ಲದೇ ಇದೇ ಏನೋ ಭಾರೀ ದೊಡ್ಡ ಗಂಡಾಂತರ ಎಂದು ಭಯಬೀಳುವ ಅಗತ್ಯವೂ ಇಲ್ಲ. ಈ ಉರಿಗೆ ಏನು ಕಾರಣ ಎಂಬುದನ್ನು ಅರಿತುಕೊಳ್ಳುವುದು ಪ್ರಥಮ ಆದ್ಯತೆಯಲ್ಲಿ ನಡೆಸಬೇಕಾಗಿದ್ದು ಆದಷ್ಟೂ ಬೇಗನೇ ಇದಕ್ಕೆ ಯಾವ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ನಿರ್ಧರಿಸುತ್ತಾರೆ. ಲೈಂಗಿಕ ಕ್ರಿಯೆ ಅತ್ಯಂತ ಆತ್ಮೀಯ ಅನುಭವವನ್ನು ನೀಡಿದರೂ ಇದರ ಬಳಿಕ ತಾತ್ಕಾಲಿಕ ಅವಧಿಗಾದರೂ ಸರಿ, ಉರಿ ಅಥವಾ ನೋವು ಕಾಣಿಸಿಕೊಂಡರೆ ಈ ತೊಂದರೆಯನ್ನು ಪೂರ್ಣವಾಗಿ ಗುಣಪಡಿಸುವವರೆಗೂ ಮಿಲನದಿಂದ ದೂರವಿರುವುದು ಅಗತ್ಯ. ಆಷ್ಟಕ್ಕೂ ಈ ಉರಿಗೆ ಏನು ಕಾರಣವಿರಬಹುದು? ಇಲ್ಲಿದೆ ನೋಡಿ ಸಂಪೂರ್ಣ ವಿವರಣೆಗಳು...

ಅಂಗರಚನೆಯಲ್ಲಿ ವ್ಯತ್ಯಾಸ

ಅಂಗರಚನೆಯಲ್ಲಿ ವ್ಯತ್ಯಾಸ

ಈ ವಿಷಯವನ್ನು ಇಲ್ಲಿ ಬರೆಯಲು ನನಗೆ ಅತೀವ ನೋವಾಗುತ್ತದೆ, ಏಕೆಂದರೆ ಕೆಲವು ಮಹಿಳೆಯರಲ್ಲಿ ಅಂಗಾಂಗಳ ರಚನೆಯಲ್ಲಿಯೇ ಕೊಂಚ ವ್ಯತ್ಯಾಸವಿದ್ದು ಕೆಲವರಿಗೆ ಮಿಲನಕ್ರಿಯೆಯಲ್ಲಿ ತೊಂದರೆಯನ್ನುಂಟುಮಾಡಬಹುದು. ಮಿಲನಕ್ರಿಯೆಯ ಸಮಯದಲ್ಲಿ ದೇಹದಲ್ಲಿ ಸ್ರವಿಸುವ ಹಲವಾರು ರಸದೂತಗಳ ಪರಿಣಾಮವಾಗಿ ದೇಹ ಈ ಕ್ರಿಯೆಯಲ್ಲಿ ಎದುರಾಗುವ ನೋವನ್ನು ಗ್ರಹಿಸದೇ ಇದ್ದರೂ ಮಿಲನಕ್ರಿಯೆಯ ಬಳಿಕವೇ ಈ ನೋವಿನ ಇರುವಿಕೆ ಕಂಡುಬರುತ್ತದೆ.

"ಅಂಗರಚನೆಯ ವ್ಯತ್ಯಾಸದಿಂದ ದಂಪತಿಗಳ ಮಿಲನಕ್ರಿಯೆಯಲ್ಲಿ ಜನನಾಂಗದ ಭಾಗದಲ್ಲಿ ಹೆಚ್ಚಿನ ಘರ್ಷಣೆಯುಂಟಾಗುತ್ತದೆ ಹಾಗೂ ಇದು ಉರಿಗೆ ಕಾರಣವಾಗುತ್ತದೆ, ಮಹಿಳೆಯ ಜನನಾಂಗದ ದ್ವಾರದಲ್ಲಿ ಮತ್ತು/ಅಥವಾ ಪುರುಷನ ಜನನಾಂಗದ ಸುತ್ತಳತೆ ಜನನಾಂಗದ ಸ್ನಾಯುಗಳನ್ನು ಮತ್ತು ಚರ್ಮವನ್ನು ಹೆಚ್ಚೇ ಹಿಗ್ಗಿಸುವ ಕಾರಣ ಇದು ಉರಿಗೆ ಕಾರಣವಾಗುತ್ತದೆ ಹಾಗೂ ವೈದ್ಯಕೀಯ ಭಾಷೆಯಲ್ಲಿ ಈ ಸ್ಥಿತಿಗೆ vaginal burning ಎಂದು ಕರೆಯುತ್ತಾರೆ"

ಮಿಲನದ ಸಮಯದಲ್ಲಿ ಅತಿ ಹೆಚ್ಚಿನ ಘರ್ಷಣೆ

ಮಿಲನದ ಸಮಯದಲ್ಲಿ ಅತಿ ಹೆಚ್ಚಿನ ಘರ್ಷಣೆ

" ಒಂದು ವೇಳೆ ಮಿಲಿನಪೂರ್ವ ಚಟುವಟಿಕೆಗಳಾದ ಮುನ್ನಲಿವಿನ ಕೊರತೆ, ಸಾಕಷ್ಟು ಜಾರುಕ ದ್ರವವನ್ನು ಉಪಯೋಗಿಸದಿರುವುದು, ಅಥವಾ ಪ್ರವೇಶಕ್ಕೆ ಅತಿಯಾಗಿ ಅವಸರಿಸುವುದು ಸಹಾ ಈ ಉರಿಗೆ ಕಾರಣವಾಗಬಲ್ಲುದು. ಹಾಗಾಗಿ ಮಹಿಳೆಯ ಜನನಾಂಗದಲ್ಲಿ ಸಾಕಷ್ಟು ಜಾರುಕದ್ರವ ಒಸರುವವರೆಗೂ ಮುನ್ನಲಿವಿನ ಕ್ರಿಯೆಗಳಲ್ಲಿ ಮಗ್ನರಾಗುವುದು ಹಾಗೂ ಉತ್ತಮ ಗುಣಮಟ್ಟದ ಜಾರುಕದ್ರವವನ್ನು ಬಳಸುವುದು ಸಹಾ ಅಗತ್ಯವಾಗಿದೆ. ಹಾಗಾಗಿ, ಮಿಲನಕ್ರಿಯೆಯಲ್ಲಿ ಮುನ್ನಲಿವಿಗೆ ಎಷ್ಟು ಮಹತ್ವವಿದೆ ಎಂದು ತಿಳಿದುಬರುತ್ತದೆ ಹಾಗೂ ವಿಶೇಷವಾಗಿ ಮಹಿಳೆಯರ ಅಂಗರಚನೆಯಲ್ಲಿ ಮುನ್ನಲಿವು ಹೆಚ್ಚಿನ ಪಾತ್ರ ವಹಿಸುತ್ತದೆ. ನೆನಪಿರಲಿ, ಮಹಿಳೆ ಪೂರ್ಣವಾಗಿ ಉದ್ರೇಕಗೊಂಡು ಮಿಲನಕ್ಕೆ ಸಿದ್ಧಳಾಗಲು ಕನಿಷ್ಠ ಇಪ್ಪತ್ತು ನಿಮಿಷದವರೆಗಿನ ಮುನ್ನಲಿವಿನ ಚಟುವಟಿಕೆಗಳು ಅಗತ್ಯವಾಗಿವೆ.

ಜನನಾಂಗದೊಳಗಿನ ಸೋಂಕುಗಳ ಸಾಧ್ಯತೆ

ಜನನಾಂಗದೊಳಗಿನ ಸೋಂಕುಗಳ ಸಾಧ್ಯತೆ

ಮಹಿಳೆಯರ ದೇಹದಲ್ಲಿನ ಎಲ್ಲಾ ಅಂಗಗಳಿಗಿಂತಲೂ ಜನನಾಂಗ ವಿಶಿಷ್ಟವಾಗಿದ್ದು ಅತಿ ತೇವವಾದ ಮತ್ತು ಸೋಂಕಿಗೊಳಗಾಗುವ ಗರಿಷ್ಟ ಸಾಧ್ಯತೆ ಇದ್ದರೂ ತನ್ನನ್ನು ತಾನೇ ಸ್ವಚ್ಛಗೊಳಿಸಿಕೊಳ್ಳುವ ಗುಣವನ್ನು ಹೊಂದಿದೆ. ಆದರೆ ಕೆಲವು ಇತರ ಕಾರಣಗಳಿಂದ, ಉದಾಹರಣೆಗೆ ಮಾನಸಿಕ ಒತ್ತಡ, ಈ ಭಾಗದಲ್ಲಿಯೂ ಅನೈಚ್ಛಿಕವಾಗಿ ಶಿಲೀಂಧ್ರದ ಸೋಂಕುಗಳು ಎದುರಾಗುತ್ತವೆ. ಹೌದು, ಮಹಿಳೆಯರಿಗೆ ಜನನಾಂಗದಲ್ಲಿ ಸೋಂಕು ಉಂಟಾಗುವುದು ಸಾಮಾನ್ಯ. ಆದರೆ ಇದಕ್ಕೆ ಯಾವುದೇ ಚಿಕಿತ್ಸೆ ಪಡೆಯದಿರುವುದು ಮಾತ್ರ ನಿರ್ಲಕ್ಷತನದ ಪರಮಾವಧಿಯಾಗಿದೆ. ಸೋಂಕು ಉಂಟಾದ ಬಗ್ಗೆ ಕೊಂಚವೂ ಗಮನಕ್ಕೆ ಬಂದರೆ, ತಕ್ಷಣವೇ ಸೂಕ್ತ ಕ್ರಮ ಕೈಗೊಂಡರೆ ಇದು ಲೈಂಗಿಕ ಜೀವನಕ್ಕೆ ಅಡ್ಡಿಯುಂಟುಮಾಡುವುದಿಲ್ಲ. "ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳ ಸೋಂಕು ಉಂಟಾಗಲು ಜನನಾಂಗದ ಒಳಭಾಗದ ತೇವದ ಪಿಎಚ್ ಮಟ್ಟ ಅಂದರೆ ಆಮ್ಲೀಯ-ಕ್ಷಾರೀಯ ಮಟ್ಟ ಸಮತೋಲನ ಕಳೆದುಕೊಳ್ಳುವುದು ಪ್ರಮುಖ ಕಾರಣವಾಗಿದ್ದು ಇದು ಮಿಲನಕ್ರಿಯೆಯಲ್ಲಿಯೂ ಹಾಗೂ ಮಿಲನದ ಬಳಿಕವೂ ನೋವು ಮತ್ತು ಉರಿಗೆ ಕಾರಣವಾಗಬಹುದು"

ಕೆಲವು ಬಗೆಯ ಜಾರುಕದ್ರವಗಳು

ಕೆಲವು ಬಗೆಯ ಜಾರುಕದ್ರವಗಳು

ಒಂದು ವೇಳೆ ಮಹಿಳೆ ಬೇರೊಂದು ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು ಇದರ ಔಷಧಿಗಳ ಪರಿಣಾಮದಿಂದ ನೈಸರ್ಗಿಕ ಜಾರುಕದ್ರವ ಉತ್ಪತ್ತಿಯಾಗದೇ ಇದ್ದಾಗ ವೈದ್ಯರೇ ಜಾರುಕದ್ರವವನ್ನು ಬಳಸಲು ಸೂಚಿಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ಜಾರುಕದ್ರವಗಳ ಮೂಲವಸ್ತುಗಳಲ್ಲಿ ವ್ಯತ್ಯಾಸವಿದ್ದು ಕೆಲವು ಮಹಿಳೆಯರಿಗೆ ಒಗ್ಗದೇ ಇರಬಹುದು. "ಮಾರುಕಟ್ಟೆಯಲ್ಲಿ ಕಾಮಶಕ್ತಿಯನ್ನು ವಿಜೃಂಭಿಸುವಂತೆ ಜಾಹೀರಾತು ನೀಡುವ ಜಾರುಕದ್ರವಗಳು ವಾಸ್ತವವಾಗಿ ಮಹಿಳೆಯರಿಗೆ ಒಗ್ಗದೇ ಇರಬಹುದು ಹಾಗೂ ಇದು ಜನನಾಂಗದ ಉರಿಗೆ ಕಾರಣವಾಗಬಹುದು, ಈ ಉತ್ಪನ್ನಗಳಲ್ಲಿರುವ ರಾಸಾಯನಿಕಗಳು ಕೆಲವರಿಗೆ ಅಲರ್ಜಿಕಾರಕವಾಗಿಯೂ ಒಂದು ವೇಳೆ ಮಹಿಳೆಯ ತ್ವಚೆ ಅತಿ ಸಂವೇದಿಯಾಗಿದ್ದರೆ ಸಂವೇದನೆರಹಿತವಾಗಿಯೂ ಪರಿಣಮಿಸಬಹುದು, ಹಾಗಾಗಿ ವೈದ್ಯರು ಸೂಚಿಸುವ ಉತ್ಪನ್ನಗಳನ್ನೇ ಬಳಸುವುದು ಅಗತ್ಯ.

ಅತಿಯಾದ ಕಾಮವಾಂಛೆ

ಅತಿಯಾದ ಕಾಮವಾಂಛೆ

"ಒಂದು ವೇಳೆ ಕಾಮವಾಂಛೆ ಅತಿಯಾಗಿದ್ದರೆ ಇದೂ ಸಹಾ ಜನನಾಂಗದ ಉರಿಗೆ ಕಾರಣವಾಗಬಹುದು" ಎಂದು ಡಾ. ಶೀಲಾ ವಿವರಿಸುತ್ತಾರೆ. ಕೆಲವು ದಂಪತಿಗಳು ಒಂದೇ ರಾತ್ರಿಯಲ್ಲಿ ಸುಮಾರು ಆರು ಬಾರಿ ಮಿಲನಕ್ರಿಯೆ ನಡೆಸುತ್ತಾರೆ (ಅಬ್ಬಾ!) ಇನ್ನೂ ಕೆಲವು ದಂಪತಿಗಳು ದಿನದ ಅವಧಿಯಲ್ಲಿಯೂ ಸಮಯ ಸಿಕ್ಕಿದರೆ ಇನ್ನೊಂದೆರಡು ಬಾರಿ ಮುಂದುವರೆಯಬಹುದು! ಒಂದು ವೇಳೆ ಇದು ಕೆಲವು ದಿನಗಳವರೆಗೆ ಸತತವಾಗಿ ಮುಂದುವರೆದರೆ'ಅತಿಯಾದರೆ ಅಮೃತವೂ ವಿಷ' ಎಂಬಂತೆ ಜನನಾಂಗದಲ್ಲಿ ಉರಿ ಎದುರಾಗಬಹುದು. ಮಹಿಳೆಯರ ಜನನಾಂಗಕ್ಕೂ ವಿಶ್ರಾಂತಿಯ ಅಗತ್ಯವಿದ್ದು ಈ ಭಾಗದಲ್ಲಿ ಮಿಲನಕ್ರಿಯೆಯ ಹೊರತಾಗಿಯೂ ಇನ್ನೂ ಹಲವಾರು ಕೆಲಸಗಳು ಬಾಕಿ ಇರುತ್ತವೆ. ಹಾಗಾಗಿ ನಿಸರ್ಗದ ಕರೆಯನ್ನು ನಿಸರ್ಗದ ನಿಮಯಕ್ಕೆ ಅನುಸಾರವಾಗಿಯೇ ನಿರ್ವಹಿಸಿದರೇ ಒಳ್ಳೆಯದು.

ವಯಸ್ಸಿನ ಪರಿಣಾಮ

ವಯಸ್ಸಿನ ಪರಿಣಾಮ

'ವಯಸ್ಸಾಗುತ್ತಿದ್ದಂತೆಯೇ, ರಜೋನಿವೃತ್ತಿಯ ಸಮಯ ಹತ್ತಿರಾಗುತ್ತಾ ಹೋಗುತ್ತದೆ ಹಾಗೂ ಹತ್ತಿರಾದಂತೆ 'atrophic vaginitis' ಎಂಬ ಸ್ಥಿತಿಯೂ ಆವರಿಸುತ್ತಾ ಜನನಾಂಗದಲ್ಲಿ ಉರಿ ಎದುರಾಗತೊಡಗುತ್ತದೆ' ಎಂದು ಡಾ. ಶೀಲಾ ವಿವರಿಸುತ್ತಾರೆ. "ರಜೋನಿವೃತ್ತಿ ಹತ್ತಿರಾಗುತ್ತಿದ್ದಂತೆಯೇ ದೇಹದಲ್ಲಿ ಈಸ್ಟ್ರೋಜೆನ್ ರಸದೂತದ ಮಟ್ಟವೂ ಕಡಿಮೆಯಾಗುತ್ತದೆ ಹಾಗೂ ಇದು ಜನನಾಂಗದ ಸ್ನಾಯುಗಳು ತೆಳುವಾಗಲು ಕಾರಣವಾಗುತ್ತದೆ ಹಾಗೂ ಇದು ಸಹಾ ಜನನಾಂಗದ ಉರಿಗೆ ಕಾರಣವಾಗಬಹುದು. ಹಾಗಾಗಿ ಮಹಿಳೆಯರಲ್ಲಿ ವಯಸ್ಸಿನ ಪರಿಣಾಮಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ, ತಕ್ಷಣವೇ ಸ್ತ್ರೀರೋಗ ತಜ್ಞರನ್ನು ಕಂಡು ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯ" ಅಷ್ಟಕ್ಕೂ, ಮಿಲನಕ್ರಿಯೆ ಸಂತೋಷಕರ ಅನುಭವವೇ ಆಗಿದ್ದರೂ ಬಳಿಕ ಉರಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಪ್ರತಿ ಮಹಿಳೆಗೂ ಎದುರಾಗುವ ತೊಂದರೆಯಾಗಿದೆ ಹಾಗೂ ಇದಕ್ಕೆ ಕಾರಣವನ್ನು ಕಂಡುಕೊಳ್ಳುವುದು ಮಾತ್ರ ತಕ್ಷಣದ ಅಗತ್ಯವಾಗಿದ್ದು ಆದಷ್ಟೂ ಬೇಗನೇ ಇದಕ್ಕೆ ಚಿಕಿತ್ಸೆ ಪ್ರಾರಂಭಿಸಿದರೆ ದಾಂಪತ್ಯ ಜೀವನ ಇನ್ನಷ್ಟು ಸುಖಕರ ಮತ್ತು ಆರೋಗ್ಯಕರವಾಗಿರಲು ಸಾಧ್ಯ.

English summary

Why Does Vagina Burn After Sex?

Despite being a boatload of fun, sex doesn't come without the occasional downsides. And one such downside is vaginal burning after intercourse. You know, because the weird noises, the suspicious smells, the possibility of a urinary tract infection, and a whole slew of other somewhat problematic issues weren't enough. But just because your vagina burns after sex, it doesn't necessarily mean doomsday. In fact, it's a fairly common occurrence and can be the result of any number of things.
X
Desktop Bottom Promotion