For Quick Alerts
ALLOW NOTIFICATIONS  
For Daily Alerts

ಜಿರಳೆ ಹಾಲು ಮುಂದೊಂದು ದಿನ ಯಾಕೆ ಅತ್ಯುತ್ತಮ ಆಹಾರವಾಗಲಿದೆ ಗೊತ್ತಾ?

By Sushma Charhra
|

ಹೆಚ್ಚಿನವರಿಗೆ ಇದನ್ನು ಕೇಳಿ ಆಶ್ಚರ್ಯ ಅನ್ನಿಸಬಹುದು ಮತ್ತೂ ಕೆಲವರು ವ್ಯಾಕ್ ಎಂದು ಮುಖ ತಿರುಗಿಸಿಕೊಳ್ಳುತ್ತಿರಬಹುದು. ಆದರೆ ಎಸ್ ನೀವು ಕೇಳುತ್ತಿರುವುದು ನಿಜ. ಜಿರಲೆ ಹಾಳು ಮುಂದೊಂದು ದಿನ ಅತ್ಯುತ್ತಮ ಆಹಾರ ಎಂದು ಪರಿಗಣಿಸಬಹುದು ಮತ್ತು ಡೈರಿಯಲ್ಲಿ ಸಿಕ್ಕರೂ ಆಶ್ಚರ್ಯ ಪಡಬೇಕಿಲ್ಲ. ಇದನ್ನು ಕೇಳಿ ನಿಮ್ಮ ಹಸಿವೆಯೇ ಹೋಗಿ ಬಿಡ್ತಾ? ಆದರೆ ಇಲ್ಲಿ ಕೇಳಿ, ಮಿಡತೆ, ಮರಿಹುಳುಗಳು, ಜೀರುಂಡೆಗಳು, ಜೇಡಗಳು,ಇರುವೆಗಳು, ಗೆದ್ದಲು ಹುಳುಗಳನ್ನು ಕೆಲವೊಂದು ದೇಶದ ಮಂದಿ ತಿನ್ನುತ್ತಾರೆ.ಯಾಕೆಂದರೆ ಅದರಲ್ಲಿ ಪ್ರೋಟೀನಿನ ಅಂಶ ಅಧಿಕವಾಗಿರುತ್ತೆ ಎಂದು ಹೇಳಲಾಗಿದೆ.

ಪೆಸಿಫಿಕ್ ನಲ್ಲಿರುವ ಜೀರುಂಡೆ ಮತ್ತು ಜಿರಲೆಗಳು ಹೆಚ್ಚು ನ್ಯೂಟ್ರೀಷಿಯಸ್ ಆಗಿರುತ್ತವಂತೆ ಮತ್ತು ಅವುಗಳಲ್ಲಿ ಹಾಲಿನ ಹರಳುಗಳು ಕಂಡುಬಂದಿದ್ದು, ಅದು ಮನುಷ್ಯನ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತೆ ಎಂದು 2016 ರ ಸಂಶೋಧನಾ ವರದಿಯೊಂದು ತಿಳಿಸಿದೆ. ಕೀಟಗಳ ಹಾಲು ಅಥವಾ ಎಂಟೋಮಿಲ್ಕ್ ಅನ್ನು ಈಗಾಗಲೇ ಕೆಲವು ಪ್ರದೇಶಗಳಲ್ಲಿ ಬಳಸುತ್ತಿದ್ದಾರಂತೆ. ಕೀಟಗಳಿಂದ ತಯಾರಿಸಲ್ಪಟ್ಟ ಪದಾರ್ಥಗಳು ಕೆಲವು ಕಡೆಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದು, ವಿಶ್ವದ ಹಲವು ಪ್ರದೇಶಗಳಲ್ಲಿ ಜನರು ತುಂಬಾ ಇಷ್ಟಪಡುತ್ತಿದ್ದಾರೆ. ಆ ಮೂಲಕ ಅವರಿಗೆ ಪ್ರೋಟೀನ್ ಅಂಶ ಅಧಿಕವಾಗಿ ದೊರಕುತ್ತೆ ಮತ್ತು ಶತಮಾನಗಳ ಹಿಂದೆಯೂ ಕೂಡ ಜನಸಾಮಾನ್ಯರು ಇದನ್ನು ಬಳಸುತ್ತಿದ್ದರು ಎಂದು ಹೇಳಲಾಗುತ್ತೆ.

ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯು (Food and Agriculture Organization of the United Nation) 2013 ರಲ್ಲಿ ನೀಡಿದ ಮಾಹಿತಿಯ ಪ್ರಕಾರ 1900 ಕ್ಕೂ ಹೆಚ್ಚು ಜಾತಿಯ ಕೀಟಗಳನ್ನು ವಿಶ್ವದಾದ್ಯಂತ ಜನರು ತಿನ್ನಲು ಬಳಸುತ್ತಾರಂತೆ.ಇದನ್ನು ನಂಬಲು ಅಸಾಧ್ಯ ಅಲ್ವಾ? ಆದರೆ ಇದು ನಿಜ ಮತ್ತು ಜನರು ಹೀಗೆ ಕೀಟಗಳನ್ನು ತಿನ್ನಲು ಇರುವ ಪ್ರಮುಖ ಕಾರಣವೆಂದರೆ ಅದರಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಪ್ರಮುಖ ಪೋಷಕಾಂಶಗಳು ಇರುತ್ತೆ ಎನ್ನುವುದೇ ಆಗಿದೆ.

ಹಾಲಿವುಡ್ ನ ಪ್ರಸಿದ್ಧ ನಟಿ, ಆಂಜಲಿನಾ ಜೂಲಿ ತನ್ನ ಮಕ್ಕಳಿಗೆ ಹೀಗೆ ಕೀಟಗಳಿಂದ ತಯಾರಿಸಿದ ಕರುಂಕುರಂ ಎಂಬ ಸ್ನ್ಯಾಕ್ಸ್ ಅನ್ನು ಅಂತರ್ಜಾಲದಲ್ಲಿ ಹಂಚಿಕೊಂಡಿದ್ದರು. ನಿಜಾಂಶವೇನೆಂದರೆ,ಕೀಟಗಳಲ್ಲಿ ಮನುಷ್ಯನ ದೇಹಕ್ಕೆ ಅಗತ್ಯವಿರುವ ಶೇಕಡಾ 80 ರಷ್ಟು ಪ್ರೋಟೀನ್ ಅಂಶವು ಲಭ್ಯವಾಗುತ್ತೆ. ಅಷ್ಟೇ ಅಲ್ಲ ಅಮೈನೋ ಆಸಿಡ್ ಅಂಶವೂ ಕೂಡ ಇದರಲ್ಲಿದೆ. ಇನ್ನು ಕೀಟಗಳಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಗಳು ಕೂಡ ಇರುತ್ತೆ. ಜೊತೆಗೆ ಇದರಲ್ಲಿರುವ ಪ್ರೋಟೀನ್ ಅಂಶವು ಬೇಗನೆ ಜೀರ್ಣವಾಗುವ ಸಾಮರ್ಥ್ಯವನ್ನು ಕೂಡ ಹೊಂದಿರುತ್ತದೆಯಂತೆ.

Cockroach

ಕೀಟಗಳನ್ನು ತಿನ್ನುವುದರಿಂದಾಗುವ ಲಾಭಗಳೇನು?
ಅಧ್ಯಯನಗಳಿಂದ ತಿಳಿದುಬಂದಿರುವ ಸಂಗತಿ ಏನೆಂದರೆ,ಕೀಟಗಳಲ್ಲಿ ಅತ್ಯಧಿಕ ಪ್ರೋಟೀನ್ ಇರುತ್ತೆ ಮತ್ತು ವಿಟಮಿನ್ ಬಿ12 ಇರುತ್ತೆ. ಕೀಟಗಳು ಹೆಚ್ಚು ಪ್ರಸಿದ್ಧಿ ಪಡೆಯಲು ಕಾರಣವೇನೆಂದರೆ, ಅವುಗಳಿಗೆ ಕಡಿಮೆ ಆಹಾರ ಸಾಕಾಗುತ್ತೆ,ಕಡಿಮೆ ಜಾಗದಲ್ಲಿ ಅವುಗಳು ಲಭ್ಯವಾಗುತ್ತೆ,ಕಡಿಮೆ ಶಕ್ತಿಯ ವೆಚ್ಚ ಮಾಡಿದರೆ ಅವುಗಳು ಕೈಗೆ ಸಿಗುತ್ತೆ, ಕಡಿಮೆ ನೀರಿನ ಪ್ರಮಾಣದಲ್ಲೂ ಕೂಡ ಕೀಟಗಳನ್ನು ಬೆಳೆಸಬಹುದು, ಮತ್ತು ಅವುಗಳನ್ನು ಬೆಳೆಸುವುದು ಪರಿಸರ ಸ್ನೇಹಿಯಾಗಿರುತ್ತೆ, ಪರಿಸರಕ್ಕೆ ಹಾನಿಯುಂಟು ಮಾಡುವ ಯಾವುದೇ ಕೆಮಿಕಲ್ ಗಳು, ಪೆಸ್ಟಿಸೈಡ್ಸ್ ಗಳನ್ನು ಬಳಸದೆ ಕೂಡ ಕೀಟಗಳನ್ನು ಉತ್ಪತ್ತಿ ಮಾಡಬಹುದು.

ಕೀಟಗಳ ಪುಡಿಯೂ ಕೂಡ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಪ್ರಮಾಣವನ್ನು ಹೊಂದಿರುತ್ತದೆ. 3 ಔನ್ಸ್ ನಷ್ಟು ಒಣಗಿಸಿದ ಮರಿಹುಳುಗಳ ಪೌಡರ್ ನಿಂದ ಸುಮಾರು 50 ಗ್ರಾಂ ನಷ್ಟು ಪ್ರೋಟೀನ್ ಲಭ್ಯವಾಗುತ್ತೆ. ಇದು ಕೋಳಿಯ ಮಾಂಸಕ್ಕಿಂತ ಹೆಚ್ಚಿನ ಪ್ರಮಾಣದ್ದಾಗಿದೆ. ಅಷ್ಟೇ ಅಲ್ಲ, ಇವುಗಳಲ್ಲಿ ಮೋನೋ ಅನ್ಸ್ಯಾಚುರೇಟೆಡ್ ಫ್ಯಾಟ್, ವಿಟಮಿನ್ ಗಳು ಮತ್ತು ಅಗತ್ಯ ಮಿನರಲ್ ಗಳೂ ಕೂಡ ಇರುತ್ತೆ.

ವೆಜಿನಿನ್ಜನ್ ಯುನಿವರ್ಸಿಟಿಯಲ್ಲಿರುವ ಡಚ್ ಸಂಶೋಧನಾಕಾರರು ತಿಳಿಸಿರುವಂತೆ ಸುಮಾರು 1400 ಜಾತಿಯ ತಿಗಣೆಗಳು ತಿನ್ನಲು ಯೋಗ್ಯವಾಗಿರುತ್ತವೆಯಂತೆ. ಇದರಲ್ಲಿ ಮಿಡತೆಗಳು,ನೊಣಗಳು,ಜೀರುಂಡೆಗಳು,ಜಿರಲೆಗಳು, ಇರುವೆಗಳು,ಬೆಳೆಯನ್ನು ಹಾನಿ ಮಾಡುವ ಹಲವು ಜಾತಿಯ ಹುಳುಗಳು, ಮಣ್ಣಿನ ಒಳಗಿರುವ ಕೆಲವು ಜಾತಿಯ ಕೀಟಗಳು, ಹಾರುವ ಕೆಲವು ಕೀಟಗಳು ಸೇರಿರುತ್ತವೆ.,

ಥೈಲ್ಯಾಂಡ್ ಮತ್ತು ಮೆಕ್ಸಿಕೋ ದೇಶಗಳಲ್ಲಿ , ಹಲವು ದಶಕಗಳಿಂದ ತಮ್ಮ ಆಹಾರ ಕ್ರಮದಲ್ಲಿ ಅವರು ಕೀಟಗಳನ್ನು ತಿನ್ನುವ ಪರಿಪಾಠವನ್ನು ಅಳವಡಿಸಿಕೊಂಡಿದ್ದಾರೆ. ತಮ್ಮ ಸ್ನ್ಯಾಕ್ ಗೆ ಅವರು ಕೀಟಗಳನ್ನು ತಿನ್ನುವುದನ್ನು ಬಹಳ ಇಷ್ಟಪಡುತ್ತಾರೆ.ನಾವುಗಳು ಚಿಪ್ಸ್ ಕರಿದು ತಿಂದಂತೆ ಅವರುಗಳು ಕೀಟಗಳನ್ನು ಕರಿದು ತಿನ್ನುತ್ತಾರೆ.

ಜಿರಲೆಗಳ ಹಾಲು ಹೇಗೆ ಕೆಲಸ ಮಾಡುತ್ತೆ?
ಪೆಸಿಫಿಕ್ ಖಂಡಗಳಲ್ಲಿ ಕಾಣಸಿಗುವ ಹೆಣ್ಣು ಜಿರಲೆಗಳು ಪ್ರೋಟೀನ್ ಅಂಶಗಳನ್ನೊಂಡಗಳ ರಸವನ್ನು ಬಿಡುಗಡೆ ಮಾಡುತ್ತವಂತೆ. ಈ ಜಿರಲೆಗಳು ಮೊಟ್ಟೆಗಳನ್ನು ಇಡುವುದಿಲ್ಲವಂತೆ ಬದಲಾಗಿ ನೇರವಾಗಿ ಮರಿಗಳನ್ನೇ ಹಾಕುವ ಜಾತಿಗೆ ಸೇರಿದ ಜಿರಲೆಗಳಾಗಿರುತ್ತವೆ. ಯಾವಾಗ ಮರಿಗಳು ಉತ್ಪತ್ತಿಯಾಗುತ್ತೋ ಆಗ ತಾಯಿ ಜಿರಲೆ ತನ್ನ ಅಂಡವೃದ್ಧಿಯ ಚೀಲದಲ್ಲಿ ಉತ್ಪತ್ತಿಯಾಗುವ ಹಾಲನ್ನು ಮರಿಗಳಿಗೆ ನೀಡುತ್ತಂತೆ. ಅದು ಹಳದಿ ಬಣ್ಣದ ದ್ರವವಾಗಿರುತ್ತೆ.ವಿಜ್ಞಾನಿಗಳು ತಿಳಿಸುವಂತೆ, ಈ ಹಾಲು ಅಥವಾ ರಸ,ಅತೀಹೆಚ್ಚು ನ್ಯೂಟ್ರೀಷಿಯಸ್ ಆಗಿರುತ್ತೆ ಮತ್ತು ಅಧ್ಬುತ ಆಹಾರವಾಗಿದೆ.

ಅವರು ತಿಳಿಸುವಂತೆ ಸದ್ಯ ಭೂಮಿಯಲ್ಲಿರುವ ಅತ್ಯಂತ ನ್ಯೂಟ್ರೀಷಿಯಸ್ ಆಹಾರ ಮತ್ತು ಹೈ ಕ್ಯಾಲೋರಿ ಹೊಂದಿರುವ ಆಹಾರವೆಂದರೆ ಅದು ಜಿರಲೆಯ ಈ ರಸ. ದನದ ಹಾಲಿಗೆ ಹೋಲಿಸಿ ನೋಡಿದರೆ ನಾಲ್ಕು ಪಟ್ಟು ಅಧಿಕ ಪ್ರೋಟೀನ್ ಅಂಶವನ್ನು ಈ ಜಿರಲೆ ಹಾಲು ಹೊಂದಿರುತ್ತದೆಯಂತೆ. ಅಗತ್ಯ ಅಮೈನೋ ಆಸಿಡ್ ಗಳನ್ನು ಕೂಡ ಇದು ಹೊಂದಿರುತ್ತೆ ಮತ್ತು ಜೀವಕೋಶಗಳ ಬೆಳವಣಿಗೆಗೆ ಇದು ಸಹಕಾರಿಯಾಗಿದೆ. ಶಕ್ತಿಯ ವರ್ಧನೆಗೆ ಬೇಕಾಗುವ ಸಕ್ಕರೆ ಅಂಶವನ್ನೂ ಇದು ಒಳಗೊಂಡಿರುತ್ತದೆಯಂತೆ. ದೇಹದ ಆರೋಗ್ಯ ಕಾಪಾಡಲು ಇದು ನೆರವಾಗುತ್ತದೆ ಎಂದು ತಿಳಿಸುತ್ತಾರೆ. ನೀವು ಕೂಡ 6 ಕಾಲುಗಳ ಕೀಟಗಳನ್ನು ತಿನ್ನಲು ಬಯಸುತ್ತೀರಾ.. ನಿಮ್ಮ ಕಮೆಂಟ್ ಗಳನ್ನು ಕೆಳಗೆ ಬರೆಯಿರಿ..

English summary

Why Cockroach Milk Is The Next Superfood?

This might come in as a surprise to most people that cockroach milk is the new superfood and could be the next dairy alternative. It doesn't look appetising, does it? In general, insects like grasshoppers, caterpillars, beetles, spiders, ants and termites are eaten because they are considered staple sources of protein.
X
Desktop Bottom Promotion