ಬಿಸಿ ನೀರು v/s ತಣ್ಣೀರು, ಆರೋಗ್ಯಕ್ಕೆ ಯಾವುದು ಒಳ್ಳೆಯದು?

Posted By: Hemanth
Subscribe to Boldsky

ದೇಹದ ಶೇ.75ರಷ್ಟು ಭಾಗದಲ್ಲಿ ನೀರಿರುವುದರಿಂದ ನಮ್ಮ ದೇಹಕ್ಕೆ ಹೆಚ್ಚಿನ ನೀರು ಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೆ ನೀರು ಕುಡಿಯುವುದರಿಂದ ದೇಹದ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸುವುದು. ಇದು ರಕ್ತ ಸಂಚಾರವನ್ನು ಹೆಚ್ಚಿಸುವುದಲ್ಲದೆ, ಆಹಾರದಿಂದ ಪಡೆದಿರುವಂತಹ ಪ್ರಮುಖ ಪೋಷಕಾಂಶಗಳನ್ನು ವಿವಿಧ ಅಂಗಾಂಗಗಳು ಹಾಗೂ ಕೋಶಗಳಿಗೆ ತಲುಪಿಸುವಂತಹ ಕೆಲಸವನ್ನು ನೀರು ಮಾಡುತ್ತದೆ. ಆದರೆ ಬಿಸಿಲಿನ ಬೇಗೆಯಲ್ಲಿ ಒಮ್ಮೆ ದಾಹ ತಣಿದರೆ ಸಾಕು ಎನ್ನುವಂತಹ ಪರಿಸ್ಥಿತಿ ಪ್ರತಿಯೊಂದು ಕಡೆಯಲ್ಲೂ ನಿರ್ಮಾಣವಾಗಿದೆ.

ಇಂತಹ ಸಂದರ್ಭದಲ್ಲಿ ಬಿಸಿ ನೀರು ಅಥವಾ ತಣ್ಣೀರು ದೇಹಕ್ಕೆ ಒಳ್ಳೆಯದೇ ಎನ್ನುವ ಬಗ್ಗೆ ವಾದ ಪ್ರತಿವಾದಗಳು ನಡೆಯುತ್ತಿದೆ. ಕೆಲವರ ಪ್ರಕಾರ ಬಿಸಿ ನೀರು ದೇಹಕ್ಕೆ ತುಂಬಾ ಲಾಭಕಾರಿ. ಇದು ಜೀರ್ಣಕ್ರಿಯೆ ಸರಾಗವಾಗಿಸುವುದು. ತಣ್ಣೀರು ಬಿಸಿಲಿನ ತಾಪದಿಂದ ದೇಹವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ಮತ್ತು ಶಮನ ನೀಡುವುದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ. ಆದರೆ ಈ ಲೇಖನದಲ್ಲಿ ನಿಮಗೆ ಬಿಸಿ ಹಾಗೂ ತಣ್ಣೀರಿನ ಬಗ್ಗೆ ತಿಳಿಸಿಕೊಡಲಿದ್ದೇವೆ. ಯಾವುದರಿಂದ ಎಷ್ಟು ಆರೋಗ್ಯ ಲಾಭ ಎಂದು ತಿಳಿದು ನಿಮ್ಮ ಆಯ್ಕೆಯ ನೀರು ಕುಡಿಯಿರಿ. ಬಿಸಿ ನೀರು ಕುಡಿಯುವ ಆರೋಗ್ಯ ಲಾಭಗಳು

water

ಜೀರ್ಣಕ್ರಿಯೆ ಸುಧಾರಣೆ

ಬಿಸಿ ನೀರು ಜೀರ್ಣಕ್ರಿಯೆಯಲ್ಲಿ ತುಂಬಾ ಪರಿಣಾಮಕಾರಿ ಎಂದು ಫಲಿತಾಂಶಗಳು ಹೇಳಿವೆ. ಪುರಾತನ ಚೀನಾದ ವೈದ್ಯಶಾಸ್ತ್ರ ಮತ್ತು ಆಯುರ್ವೇದದ ಪ್ರಕಾರ ಬೆಳಗ್ಗೆ ಎದ್ದ ಬಳಿಕ ಬಿಸಿ ನೀರು ಕುಡಿದರೆ ಜೀರ್ಣಕ್ರಿಯೆಯು ಸರಾಗವಾಗಿರುವುದು ಮತ್ತು ಅಜೀರ್ಣದ ಸಮಸ್ಯೆ ಕಾಡುವುದಿಲ್ಲ. ಬಿಸಿ ನೀರು ಮಲಬದ್ಧತೆ ನಿವಾರಣೆ ಮಾಡಿ ಕರುಳಿಗೆ ರಕ್ತ ಪರಿಚಲನೆ ಹೆಚ್ಚಿಸುವುದು.

ದೇಹವನ್ನು ನಿರ್ವಿಷಗೊಳಿಸುವುದು

ಒಂದು ಲೋಟ ಬಿಸಿ ನೀರಿಗೆ ಅರ್ಧ ಲಿಂಬೆ ರಸ ಹಾಕಿದರೆ ಅದರಿಂದ ದೇಹವನ್ನು ನಿರ್ವಿಷಗೊಳಿಸಬಹುದು. ನೀರನ್ನು ಸೇವಿಸುವುದರಿಂದ ಪಿತ್ತ ಕಡಿಮೆಯಾಗುವುದು ಮತ್ತು ಇದು ಮೊಡವೆ ಹಾಗೂ ಇತರ ಹಲವು ಚರ್ಮದ ಸಮಸ್ಯೆ ನಿವಾರಿಸುವುದು.

water bottle

ಕಟ್ಟಿದ ಮೂಗು ಶಮನ

ನಿಮಗೆ ಕಟ್ಟಿದ ಮೂಗಿನ ಸಮಸ್ಯೆಯಾಗುತ್ತಾ ಇದ್ದರೆ ಆಗ ಬಿಸಿ ನೀರು ಒಳ್ಳೆಯ ಔಷಧಿ. ಇದು ನೈಸರ್ಗಿಕ ಕಫಹಾರಿಯಾಗಿ ಕೆಲಸ ಮಾಡಿ ಶ್ವಾಸಕೋಶದಲ್ಲಿರುವಂತಹ ಕಫವನ್ನು ತೆಗೆದುಹಾಕುವುದು.

ನೋವು ನಿವಾರಕ

ದೇಹದಲ್ಲಿ ನೋವಿದ್ದರೆ ಆಗ ಐಸ್ ಬಳಸುವ ಬದಲು ಸ್ವಲ್ಪ ಬಿಸಿ ನೀರನ್ನು ಆ ಭಾಗಕ್ಕೆ ಹಾಕಿ. ಇದು ನೋವು ನಿವಾರಕವಾಗಿ ಕೆಲಸ ಮಾಡುವುದು. ಋತುಚಕ್ರದ ಸೆಳೆತ ಮತ್ತು ಗಂಟು ನೋವನ್ನು ಇದು ನಿವಾರಿಸುವುದು. ಬಿಸಿ ನೀರು ಕುಡಿಯುವುದರಿಂದ ರಕ್ತ ಪರಿಚಲನೆ ಹೆಚ್ಚಾಗಿ ನೋವು ಕಡಿಮೆಯಾಗುವುದು.

water

ತಣ್ಣೀರು ಕುಡಿಯುವ ಆರೋಗ್ಯ ಲಾಭಗಳು

ವ್ಯಾಯಾಮದ ಬಳಿಕ ಅದ್ಭುತ ನೀರು

ತೂಕ ಕಳೆದುಕೊಳ್ಳಲು ಅತಿಯಾಗಿ ವ್ಯಾಯಾಮ ಮಾಡಿಕೊಂಡು ದೇಹದ ಉಷ್ಣತೆ ಹೆಚ್ಚು ಮಾಡಿರುತ್ತೀರಿ. ಇಂತಹ ಸಂದರ್ಭದಲ್ಲಿ ತಣ್ಣೀರು ಕುಡಿದರೆ ಅದರಿಂದ ದೇಹದ ತಾಪಮಾನ ಕಡಿಮೆ ಮಾಡಬಹುದು.

ಬಿಸಿಲಿನ ತಾಪ ತಡೆಯಲು

ನಡು ಮಧ್ಯಾಹ್ನ ಬಿಸಿಲಿಗೆ ಹೊರಹೋದಾಗ ನಿಮ್ಮ ದೇಹದಲ್ಲಿರುವ ಶಕ್ತಿಯನ್ನು ಸೂರ್ಯನ ಬಿಸಿಲು ಹೀರಿಕೊಳ್ಳುವುದು. ಇಂತಹ ಸಮಯದಲ್ಲಿ ಬಿಸಿಲಿನ ಹೊಡೆತ ತಪ್ಪಿಸಿಕೊಳ್ಳಲು ತಣ್ಣೀರು ಕುಡಿಯಿರಿ.

ತೂಕ ಕಳೆದುಕೊಳ್ಳಲು

ಬೊಜ್ಜಿನ ದೇಹವು ಇಂದು ಹೆಚ್ಚಿನವರ ಸಮಸ್ಯೆಯಾಗಿಬಿಟ್ಟಿದೆ. ಇಂತಹ ಸಂದರ್ಭದಲ್ಲಿ ದೇಹದ ಚಯಾಪಚಯಾ ಕ್ರಿಯೆ ಹೆಚ್ಚಿಸಿದರೆ ಅದರಿಂದ ದೇಹದ ಕೊಬ್ಬನ್ನು ಕರಗಿಸಬಹುದು. ಇದರಿಂದ ತಣ್ಣೀರು ಕುಡಿಯುವುದು ಮತ್ತು ಅದರಿಂದ ಸ್ನಾನ ಮಾಡಿದರೆ ಕೊಬ್ಬು ಕರಗಲು ಸಹಕಾರಿ.

ಬಿಸಿ ನೀರು ಮತ್ತು ತಣ್ಣೀರಿನಲ್ಲಿ ದೇಹಕ್ಕೆ ಯಾವುದು ಒಳ್ಳೆಯದು?

ಬಿಸಿನೀರು ಮತ್ತು ತಣ್ಣೀರು ಕುಡಿಯುವ ಬಗ್ಗೆ ಗೊಂದಲ ಇನ್ನು ಕೂಡ ಮುಂದುವರಿದಿದೆ. ಎರಡರಲ್ಲೂ ಕೆಲವೊಂದು ಆರೋಗ್ಯ ಲಾಭಗಳು ಇವೆ. ಆಯುರ್ವೇದ ಮತ್ತು ಚೀನಾದ ವೈದ್ಯಕೀಯ ಶಾಸ್ತ್ರದ ಪ್ರಕಾರ ತಣ್ಣೀರು ಸ್ನಾಯುಗಳ ಸಂಕೋಚನ ಉಂಟು ಮಾಡುವುದು. ಇದರಿಂದ ಹಲವಾರು ಆರೋಗ್ಯ ತಜ್ಞರ ಪ್ರಕಾರ ಬಿಸಿ ನೀರು ಕುಡಿಯುವುದರಿಂದ ರಕ್ತ ಪರಿಚಲನೆ ಸರಾಗವಾಗಿ ಆಗುವುದು ಮತ್ತು ಇದು ಒಳಗಿನ ಅಂಗಾಂಗಗಳನ್ನು ರಕ್ಷಿಸುವುದು. ಬೇಸಿಗೆಯಲ್ಲಿ ಬಿಸಿ ನೀರು ಮತ್ತು ತಣ್ಣೀರು ಎರಡೂ ದೇಹಕ್ಕೆ ಶಮನಕಾರಿ.

drinking water

ಬಿಸಿ ನೀರು ಅಥವಾ ತಣ್ಣೀರನ್ನು ಯಾವಾಗ ಕುಡಿಯಬೇಕು?

ಪ್ರತಿಯೊಂದರಲ್ಲೂ ಒಳಿತು ಮತ್ತು ಕೆಡುಕುಗಳು ಇರುವುದು. ಬಿಸಿ ಮತ್ತು ತಣ್ಣೀರನ್ನು ಕುಡಿಯುವಾಗ ಕೆಲವೊಂದು ವಿಚಾರಗಳನ್ನು ನೀವು ಗಮನದಲ್ಲಿರಿಸಿಕೊಳ್ಳಬೇಕು. ಊಟ ಮಾಡುವಾಗ ತಣ್ಣೀರು ಕುಡಿದರೆ ಅದರಿಂದ ಅಜೀರ್ಣ ಉಂಟಾಗುವುದು. ಯಾಕೆಂದರೆ ದೇಹದ ತಾಪಮಾನ ವೃದ್ಧಿಸಲು ಹೆಚ್ಚು ಶಕ್ತಿ ಬೇಕಾಗುವುದು. ವ್ಯಾಯಾಮ ಮಾಡಿಕೊಂಡು ಬಂದ ಬಳಿಕ ಬಿಸಿ ನೀರು ಕುಡಿಯಬೇಡಿ. ಯಾಕೆಂದರೆ ದೇಹದ ತಾಪಮಾನವು ಅದಾಗಲೇ ಹೆಚ್ಚಾಗಿರುವುದು. ದೇಹದ ತಾಪಮಾನ ಕಡಿಮೆ ಮಾಡಲು ತಣ್ಣೀರು ಕುಡಿಯಿರಿ. ಯಾವ ಪರಿಸ್ಥಿತಿಯಲ್ಲಿ ನಿಮ್ಮ ದೇಹಕ್ಕೆ ಯಾವ ನೀರನ್ನು ಆಯ್ಕೆ ಮಾಡಬೇಕೆನ್ನುವುದು ಈಗ ನಿಮಗೆ ಬಿಟ್ಟಿರುವ ವಿಚಾರ.

English summary

which-is-healthier-for-you-hot-water-or-cold-water

Water helps in keeping you hydrated, in maintaining the balance of body fluids and helping kidneys flush out toxins. The big question is whether warm water is better for your health or cold water? Whether to drink warm or cold depends on various factors like the prevailing weather conditions around you and the functions and activities you are carrying out.