For Quick Alerts
ALLOW NOTIFICATIONS  
For Daily Alerts

ಹೆಮಟುರಿಯಾ ಎಂದರೇನು? ಪ್ರತಿಯೊಬ್ಬರೂ ತಿಳಿದಿರಬೇಕಾದ ಮಾಹಿತಿಗಳು

|

ಮೂತ್ರದ ಬಣ್ಣ ತಿಳಿಯಾಗಿರಬೇಕು, ಇದು ಗಾಢವಾದಷ್ಟೂ ಆರೋಗ್ಯ ಕೆಟ್ಟಿರುವ ಸೂಚನೆಯಾಗಿದೆ. ಮೂತ್ರದ ಬಣ್ಣ ಗಾಢ ಹಳದಿಗೆ ಬದಲಾಗಿ ಗಾಢ ಕಂದು ವರ್ಣ ಪಡೆದಿದ್ದರೆ ಮೂತ್ರದಲ್ಲಿ ರಕ್ತ ಬೆರೆತಿರುವ ಸ್ಪಷ್ಟ ಸೂಚನೆಯಾಗಿದೆ. ಯಾವಾಗ ರಕ್ತದಲ್ಲಿ ಮೂತ್ರ ಮಿಶ್ರಣವಾಗುತ್ತದೆಯೋ ಆ ಸ್ಥಿತಿಯನ್ನೇ ಹೆಮಟುರಿಯಾ(ಅಥವಾ ಹೀಮಾಟ್ಯೂರಿಯಾ) ಎಂದು ಕರೆಯಲಾಗುತ್ತದೆ. ರಕ್ತದ ಪ್ರಮಾಣ ಕೊಂಚವೇ ಇದ್ದರೂ ಸಹಾ ಈ ಸ್ಥಿತಿ ಅಪಾಯಕಾರಿಯಾಗಿದೆ ಹಾಗೂ ವಿಳಂಬ ಮಾಡದೇ ತಕ್ಷಣ ಚಿಕಿತ್ಸೆಯನ್ನು ಪಡೆಯಬೇಕು.

ಮೂತ್ರದಲ್ಲಿ ರಕ್ತ ಬೆರೆತಿರುವುದು ಪ್ರಾರಂಭದಲ್ಲಿ ತಿಳಿಯಾಗಿರುವುದರಿಂದ ಅಷ್ಟು ಬೇಗನೇ ಗಮನಕ್ಕೆ ಬರುವುದಿಲ್ಲ. ಆದರೆ ಯಾವಾಗ ಗಮನಕ್ಕೆ ಬರುತ್ತದೆಯೋ, ತಕ್ಷಣವೇ ತಪಾಸಣೆಗೊಳಗೊಂಡು ಇದಕ್ಕೆ ಕಾರಣವನ್ನು ಕಂಡುಕೊಳ್ಳಬೇಕು. ಈ ವರದಿಯನ್ನು ಕಂಡ ಬಳಿಕವೇ ಇದಕ್ಕೆ ಏನು ಕಾರಣ ಹಾಗೂ ಇದು ಎಷ್ಟು ಮಾರಕ ಎಂದು ವೈದ್ಯರೇ ನಿರ್ಧರಿಸುತ್ತಾರೆ. ಹೆಮಟುರಿಯಾವ್ಯಾಧಿಗೆ ಸ್ಪಷ್ಟವಾದ ಕಾರಣವಿಲ್ಲ. ಹದಿಹರೆಯದವರಿಂದ ಎಂಭತ್ತರ ವರ್ಷದವರೆಗಿನ ಯಾವುದೇ ವಯಸ್ಸಿನಲ್ಲಿ ಈ ತೊಂದರೆ ಎದುರಾಗಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ....

urine test

ಹೆಮಟುರಿಯಾ ಎಂದರೇನು?
ಮೂತ್ರದಲ್ಲಿ ಕೆಂಪು ರಕ್ತಕಣಗಳು (RBCs) ಕಂಡುಬರುವ ಸ್ಥಿತಿಯನ್ನೇ ಹೆಮಟುರಿಯಾ ಎಂದು ಕರೆಯಲಾಗುತ್ತದೆ. ನಮ್ಮ ದೇಹದಲ್ಲಿ ರಕ್ತ ಕೇವಲ ರಕ್ತನಾಳಗಳ ಮೂಲಕ ಮಾತ್ರವೇ ಒಂದು ಕಡೆಯಿಂದ ಇನ್ನೊಂದು ಕಡೆ ಹರಿಯಬೇಕು. ಇದರಲ್ಲಿ ಒಳ್ಳೆಯರಕ್ತವನ್ನು ಕೊಂಡೊಯ್ಯಲು ಹಾಗೂ ಮಲಿನ ರಕ್ತವನ್ನು ಸಾಗಿಸಲು ಬೇರೆಯೇ ನರವ್ಯವಸ್ಥೆಗಳಿವೆ. ಹಾಗಾಗಿ ರಕ್ತ ಸಾಮಾನ್ಯ ಸ್ಥಿತಿಯಲ್ಲಿ ಮೂತ್ರ ಅಥವಾ ಬೇರೆ ಅಂಗಗಳಿಗೆ ಸೋರಿಕೆಯಾಗುವುದಿಲ್ಲ. ಆದರೆ ಕೆಲವು ತೊಂದರೆಗಳ ಕಾರಣ ಪ್ರಮುಖ ಅಂಗಗಳಿಂದ ಮೂತ್ರಕ್ಕೆ ಕೊಂಚ ಕೆಂಪುರಕ್ತಕಣಗಳು ಸೋರಿಕೆಯಾಗಬಹುದು.


ಒಂದು ವೇಳೆ ಮೂತ್ರದ ಬಣ್ಣ ನಸುಗುಲಾಬಿ, ಕೆಂಪು, ಇಟ್ಟಿಗೆಯ ಕೆಂಪು ಅಥವಾ ಕುದಿಸಿದ ಟೀ ಯಂತಹ ಬಣ್ಣ ಹೊಂದಿದ್ದರೆ ಮೂತ್ರದಲ್ಲಿ ಕೆಂಪು ರಕ್ತಕಣಗಳಿವೆ ಎಂದು ತಿಳಿಯಬಹುದು. ಅಂದರೆ ಬರಿಗಣ್ಣಿಗೆ ಕಾಣುವಷ್ಟು ಈ ಕಣಗಳು ಮೂತ್ರದಲ್ಲಿ ಬೆರೆತಿವೆ ಎಂದರೆ ಈ ಸ್ಥಿತಿ ಗಹನವಾಗಿದೆ ಎಂದು ತಿಳಿಯಬಹುದು. ಇದಕ್ಕೆ Gross Hematuria ಎಂದು ಕರೆಯುತ್ತಾರೆ. ಆದರೆ ಮೂತ್ರದ ಬಣ್ಣಕ್ಕೆ ಈ ಸ್ಥಿತಿಯೇ ಕಾರಣವಾಗಿರಬೇಕೆಂದೇ ಇಲ್ಲ, ಕೆಲವು ಆಹಾರಗಳು ಹಾಗೂ ಔಷಧಿಗಳೂ ಮೂತ್ರದ ಬಣ್ಣವನ್ನು ಬದಲಿಸುತ್ತವೆ.

ಕೆಲವು ಸಂದರ್ಭಗಳಲ್ಲಿ ಮೂತ್ರದಲ್ಲಿ ಸೋರಿಕೆಯಾದ ರಕ್ತಕಣಗಳ ಸಂಖ್ಯೆ ಕಡಿಮೆ ಇದ್ದು ಬರಿಗಣ್ಣಿಗೆ ಕಾಣದಷ್ಟು ತಿಳಿಯಾಗಿ ಬೆರೆತಿರುತ್ತದೆ. ಮೇಲ್ನೋಟಕ್ಕೆ ಮೂತ್ರ ಆರೋಗ್ಯವಂತರ ಮೂತ್ರದ ಬಣ್ಣವನ್ನೇ ಹೊಂದಿರುತ್ತದೆ. ಆದರೆ ಪ್ರಯೋಗಾಲಯದ ಪರೀಕ್ಷೆಯಲ್ಲಿ ಇದು ಬಹಿರಂಗಗೊಳ್ಳುತ್ತದೆ. ಈ ಸ್ಥಿತಿಗೆ ಮೈಕ್ರೋಸ್ಕೋಪಿಕ್ ಹೆಮಟುರಿಯಾ(Microscopic Hematuria) ಎಂದು ಕರೆಯಲಾಗುತ್ತದೆ. ಇದನ್ನು ಕಂಡುಕೊಳ್ಳಲು ಮೂತ್ರದಲ್ಲಿ ಮರದ ಪಟ್ಟಿಯೊಂದನ್ನು ಮುಳುಗಿಸಿ ಇದರ ಬಣ್ಣ ಬದಲಾಗುವುದನ್ನು ಗಮನಿಸಬಹುದು. ಅಥವಾ ಸೂಕ್ಷ್ಮದರ್ಶಕದಲ್ಲಿ ಇವುಗಳ ಇರುವಿಕೆಯನ್ನು ಕಂಡುಕೊಳ್ಳಬಹುದು.

ಈ ಸ್ಥಿತಿ ಪ್ರಾರಂಭಿಕ ಸ್ಥಿತಿಯಲ್ಲಿದ್ದಾಗ ಯಾವುದೇ ನೋವು ಕೊಡದೇ ಇದ್ದರೂ ಗಾಢವಾಗುತ್ತಾ ಹೋದಂತೆ ಇಡಿಯ ಮೈಯಲ್ಲಿ ನೋವು ಹಾಗೂ ವಿಶೇಷವಾಗಿ ಕೆಳಹೊಟ್ಟೆಯಲ್ಲಿ ಭಾರೀ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಹೆಮಟುರಿಯಾಸ್ಥಿತಿಗೆ ಮೂತ್ರಪಿಂಡದಲ್ಲಿರುವ ಅಥವಾ ಮೂತ್ರನಾಳದಲ್ಲಿರುವ ಕಲ್ಲುಗಳೂ ಕಾರಣವಾಗಿರುತ್ತವೆ. ಮೂತ್ರ ವಿಸರ್ಜಿಸುವ ವೇಳೆ ಪುರುಷರು ಶಿಶ್ನದಲ್ಲಿಯೂ ಮಹಿಳೆಯರು ಮೂತ್ರದ್ವಾರದಲ್ಲಿಯೂ ಉರಿಯಾಗುತ್ತಿದೆ ಎಂದು ತಿಳಿಸಬಹುದು. ಒಂದು ವೇಳೆ ಮೂತ್ರವಿಸರ್ಜನೆ ಪ್ರಾರಂಭಿಸಿದಾಗ ಗಾಢ ಬಣ್ಣ ಹೊಂದಿದ್ದು ನಂತರ ತಿಳಿಯಾಗುತ್ತಾ ಹೋದರೆ ಇದು ಮೂತ್ರನಾಳದಿಂದ ಸೋರಲ್ಪಟ್ಟ ರಕ್ತವೆಂದು ತೀರ್ಮಾನಿಸಬಹುದು.

ಒಂದು ವೇಳೆ ಮೂತ್ರವಿಸರ್ಜನೆಯ ಕಡೆಯ ಹಂತದಲ್ಲಿ ಮೂತ್ರದ ಬಣ್ಣ ಗಾಢವಾಗಿದ್ದರೆ ಇದು ಮೂತ್ರಕೋಶ (ಪುರುಷರಲ್ಲಿಯೂ, ಮಹಿಳೆಯರಲ್ಲಿಯೂ) ಅಥವಾ ಪುರುಷರ ಪ್ರಾಸ್ಟೇಟ್ ಗ್ರಂಥಿಯಿಂದ ಸೋರಿರಬಹುದು. ಮೂತ್ರವಿಸರ್ಜನೆಯ ಎಲ್ಲಾ ಹಂತಗಳಲ್ಲಿ ಏಕಸಮಾನವಾಗಿ ಮೂತ್ರದ ಬಣ್ಣವಿದ್ದರೆ ಇದಕ್ಕೆ ಮೂತ್ರಕೋಶ, ಗರ್ಭಕೋಶ ಅಥವಾ ಮೂತ್ರಪಿಂಡಗಳಿಂದ ಸೋರಿರುವ ರಕ್ತ ಕಾರಣವಾಗಿರಬಹುದು.

ಹೆಮಟುರಿಯಾಸ್ಥಿತಿಗೆ ಏನೆಲ್ಲಾ ಕಾರಣಗಳಿವೆ?
1. ಮೂತ್ರಪಿಂಡ ಅಥವಾ ಮೂತ್ರಕೋಶದಲ್ಲಿ ಕಲ್ಲುಗಳು
2. ಮೂತ್ರನಾಳದ ಸೋಂಕು
3. Pyelonephritis (ಮೂತ್ರಪಿಂಡದಲ್ಲಿ ಉಂಟಾಗಿರುವ ಸೋಂಕು)
4. ಪಾಲಿಸಿಸ್ಟಿಕ್ ಮೂತ್ರಪಿಂಡದ ಕಾಯಿಲೆ
5. ಮೂತ್ರಕೋಶದ ಕ್ಯಾನ್ಸರ್
6. ಪ್ರಾಸ್ಟೇಟ್ ಗ್ರಂಥಿ ವಿಪರೀತವಾಗಿ ಊದಿಕೊಂಡಿರುವುದು
7. ಅತಿಯಾದ ದೈಹಿಕ ವ್ಯಾಯಾಮ
8. ಮೂತ್ರನಾಳದಲ್ಲಿರುವ ಕಲ್ಲುಗಳು
9. ತೂರುನಳಿಕೆಯ ಅಳವಡಿಕೆಯಿಂದಾಗಿ ಆದ ಗಾಯದಿಂದ ಸೋರುವ ರಕ್ತ
10. ಅನುವಂಶಿಕ ಕಾರಣಗಳು
11. ಸಿಕ್ಲ್ ಸೆಲ್ ಅನೀಮಿಯಾ ದಂತಹ ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳು
12. ಸೈಕ್ಲೋಫಾಸ್ಮಾಮೈಡ್, ಪೆನ್ಸಿಲ್ಲಿನ್, ಆಸ್ಪಿರಿನ್ ಮೊದಲಾದ ಔಷಧಿಗಳು ಇತ್ಯಾದಿ.

ಆಲ್ಪ್ರೋಟ್ ಸಿಂಡ್ರೋಂ
ಗ್ರಾಸ್ ಮತ್ತು ಮೈಕ್ರೋಸ್ಕೋಪಿಕ್ ಹೆಮಟುರಿಯಾಹಾಗೂ ಸತತವಾದ ಹೆಮಟ್ಯೂರಿಯಾದೊಂದಿಗೆ ಈ ಲಕ್ಷಣವೂ ನಂಟು ಹೊಂದಿದೆ. ಬಳಿಕ ನಿಧಾನವಾಗಿ ಕಣ್ಣಿನ ದೃಷ್ಟಿ ಹಾಗೂ ಶ್ರವಣ ಸಾಮರ್ಥ್ಯ ಕುಗ್ಗತೊಡಗುತ್ತದೆ. ನಂತರ ಈ ಸ್ಥಿತಿ ಪ್ರೋಟೀನೂರಿಯಾ (Proteinuria) ಅಥವಾ ಮೂತ್ರದಲ್ಲಿ ಪ್ರೋಟೀನ್ ನಷ್ಟವಾಗುವ ಸ್ಥಿತಿಗೂ ತಲುಪಬಹುದು. ಆಲ್ಪ್ರೋಟ್ ಸಿಂಡ್ರೋಮ್ ಸಾಮಾನ್ಯವಾಗಿ ಅನುವಂಶಿಕ ಕಾರಣಗಳಿಂದ ಎದುರಾಗುತ್ತದೆ.

ಹೆಮಟುರಿಯಾಚಿಕಿತ್ಸೆ ಹೇಗೆ?
ಮೊದಲಿಗೆ ಮೂತ್ರದ ಬಣ್ಣಕ್ಕೆ ಹೆಮಟುರಿಯಾಕಾಯಿಲೆಯೇ ನಿಜವಾದ ಕಾರಣವೆಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ವೈದ್ಯರು ಮೂತ್ರಕೋಶ ಮತ್ತು ಮೂತ್ರಪಿಂಡಗಳ ಎಕ್ಸ್ ರೇ ಚಿತ್ರಗಳ ನೆರವಿನೊಂದಿಗೆ ತಪಾಸಣೆಗೊಳಿಸುತ್ತಾರೆ. ಅಲ್ಲದೇ ಈ ರೋಗದ ಇರುವಿಕೆಯನ್ನು ಯೂರಿಅನಾಲಿಸಿಸ್, ಸಿಸ್ಟೋಸ್ಕೋಪಿ, ದರ್ಶನಮಾಧ್ಯಮದ ಉಪಕರಣಗಲಾದ ಸಿಟಿ ಸ್ಕ್ಯಾನ್, ಎಂ ಆರ್ ಐ ಅಥವಾ ಶಬ್ದತರಂಗಗಳ ಅಲ್ಟ್ರಾಸೌಂಡ್ ತಂತ್ರಜ್ಞಾನವನ್ನೂ ಬಳಸುತ್ತಾರೆ. ಹಲವು ಸಂದರ್ಭಗಳಲ್ಲಿ ಈ ಸ್ಥಿತಿಗೆ ಸ್ಪಷ್ಟವಾದ ಕಾರಣ ಗೊತ್ತಾಗುವುದೇ ಇಲ್ಲ! ಕೆಲವು ಸಂದರ್ಭಗಳಲ್ಲಿ ಸತತ ಧೂಮಪಾನ ಅಥವಾ ಬೇರಾವುದೋ ವ್ಯಸನವೂ ಇದಕ್ಕೆ ಕಾರಣವಾಗಿರಬಹುದು. ಆದಷ್ಟೂ ಖಚಿತವಾದ ಕಾರಣವನ್ನು ಕಂಡುಕೊಳ್ಳಲು ವೈದ್ಯರು ರೋಗಿಯನ್ನು ಹಲವು ಬಾರಿ ವಿವಿಧ ಪರೀಕ್ಷೆಗಳಿಗೆ ಒಳಪಡಿಸಬಹುದು.

ಒಂದು ವೇಳೆ ಮೂತ್ರನಾಳದಲ್ಲಿ ಉಂಟಾಗಿರುವ ಸೋಂಕಿನಿಂದ ಹೆಮಟುರಿಯಾಎದುರಾಗಿದ್ದರೆ ಇದಕ್ಕೆ ವೈದ್ಯರು ಪ್ರತಿಜೀವಕ ಅಥವಾ ಆಂಟಿ ಬಯೋಟಿಕ್ ಮಾತ್ರೆಗಳನ್ನು ಸೇವಿಸಲು ನೀಡುತ್ತಾರೆ. ಒಂದು ವೇಳೆ ಮೂತ್ರನಾಳದಲ್ಲಿ ಕಲ್ಲುಗಳಾಗಿದ್ದರೆ ಇದಕ್ಕೆ ಶಾಕ್ ವೇವ್ ಅಥವಾ ಆಘಾತದ ಅಲೆಗಳ ಚಿಕಿತ್ಸೆಯ ಮೂಲಕ ಈ ಕಲ್ಲುಗಳನ್ನು ಪುಡಿಯಾಗಿಸಲಾಗುತ್ತದೆ. ಪ್ರಾಸ್ಟೇಟ್ ಗ್ರಂಥಿಯ ಊತದಿಂದ ಎದುರಾಗಿದ್ದರೆ ಈ ಊತವನ್ನು ಕಡಿಮೆಗೊಳಿಸುವ ಚಿಕಿತ್ಸೆ ಒದಗಿಸಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಈ ತೊಂದರೆಗೆ ಚಿಕ್ಕ ಪುಟ್ಟ ಕಾರಣಗಳಿದ್ದು ಇದಕ್ಕೆ ಮನೆಮದ್ದುಗಳೇ ಸಾಕಷ್ಟು ಉಪಶಮನ ಒದಗಿಸುತ್ತವೆ.

ಆದರೂ, ಯಾವುದೇ ಕಾರಣಕ್ಕೂ ಮೂತ್ರದ ಬಣ್ಣ ಬದಲಾದರೆ ತಜ್ಞರನ್ನು ಭೇಟಿಯಾಗಿ ಇದು ಹೆಮಟುರಿಯಾಹೌದೋ ಅಲ್ಲವೇ, ಹೌದಾದರೆ ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಸಾಧ್ಯವಾದಷ್ಟು ಬೇಗ ಪ್ರಾರಂಭಿಸಬೇಕು. ಈ ರೋಗದ ಲಕ್ಷಣಗಳೂ ಆಲ್ಪೋರ್ಟ್ ಸಿಂಡ್ರೋಮ್ ನಂತಹದ್ದೇ ಆಗಿರುವ ಕಾರಣ ಇದು ಉಲ್ಬಣಗೊಳ್ಳದ ಹೊರತು ತಪ್ಪು ಕಾಯಿಲೆ ಎಂದು ಗುರುತಿಸಲ್ಪಡುವ ಸಾಧ್ಯತೆಯೂ ಇದೆ. ಕೆಲವು ವಿರೇಚಕಗಳಂತಹ ಔಷಧಿಗಳೂ ಈ ಸ್ಥಿತಿಗೆ ಕಾರಣವಾಗಿರ ಬಹುದು.

ಆದರೆ ಸಾಮಾನ್ಯವಾಗಿ ಈ ಸ್ಥಿತಿ ತಾತ್ಕಾಲಿಕವಾಗಿದ್ದು ದಿನೇ ದಿನೇ ಇದು ಕಡಿಮೆಯಾಗುತ್ತಾ ಕೆಲವೇ ದಿನಗಳಲ್ಲಿ ಸಾಮಾನ್ಯ ಸ್ಥಿತಿಗೆ ತಲುಪುತ್ತದೆ. ಆದರೂ, ಯಾವುದಕ್ಕೂ ತಪಾಸಣೆಗೊಳಗಾಗುವುದು ಅಗತ್ಯ. ಆದರೆ ಈ ರೋಗ ಇದೆ ಎಂದು ಗೊತ್ತಾದ ಮಾತ್ರಕ್ಕೇ ಹೆದರಬೇಕಾಗಿಲ್ಲ. ಈ ಸ್ಥಿತಿಗೂ ಸೂಕ್ತ ಚಿಕಿತ್ಸೆ ಇದ್ದು ಸಂಪೂರ್ಣವಾಗಿ ಗುಣಮುಖರಾಗುವ ಸಾಧ್ಯತೆ ಇದ್ದೇ ಇದೆ. ಹಾಗಾಗಿ ಧೈರ್ಯವಾಗಿರಿ, ಆಶಾವಾದಿಗಳಾಗಿರಿ....

English summary

What Is Hematuria? All You Need To Know About The Condition

There's enough to worry about when you see a dark-coloured urine, let alone finding blood in it. It could be really disturbing if a person sees blood in his or her urine. Hematuria is a term given to bloody urine. In most of the cases, it is not considered very harmful, but it could also be very serious if not treated on time and properly. When blood is spotted in urine, it should not be ignored. It is better to consult with a doctor and find out if it is actually a concern or not. There is not a specific treatment for hematuria because there is no specific cause for it.
Story first published: Tuesday, April 3, 2018, 17:02 [IST]
X
Desktop Bottom Promotion