For Quick Alerts
ALLOW NOTIFICATIONS  
For Daily Alerts

ತೆಂಗಿನ ಕಾಯಿ ಸಕ್ಕರೆ ಅಂದರೆ ಏನು ಗೊತ್ತಾ? ಇದರ 10 ಆರೋಗ್ಯ ಲಾಭಗಳು ಇಲ್ಲಿವೆ ನೋಡಿ

By Sushma Charhra
|

ನೀವು ಬಳಸುತ್ತೀರುವ ರಿಫೈನ್ಡ್ ಸಕ್ಕರೆಗಿಂತ, ತೆಂಗಿನಕಾಯಿ ಸಕ್ಕರೆಯು ಉತ್ತಮ ಸಕ್ಕರೆಯಾಗಬಲ್ಲದು ಎಂಬ ಬಗ್ಗೆ ನಿಮಗೆಷ್ಟು ತಿಳಿದಿದೆ?ಹಾಗಾದ್ರೆ, ತೆಂಗಿನಕಾಯಿ ಸಕ್ಕರೆ ಅಂದರೆ ಏನು? ತೆಂಗಿನಕಾಯಿ ಸಕ್ಕರೆ ಅಂದರೆ, ತೆಂಗಿನ ಕಾಯಿಯ ನಿರ್ಜಲೀಕರಣ ಮತ್ತು ಬೇಯಿಸಿ ಮಾಡುವ ಸಿಹಿಯಾದ ಪದಾರ್ಥವಾಗಿದೆ.

ಕಡಿಮೆ ಫ್ರಕ್ಟೋಸ್ ಅಂಶವನ್ನು ಹೊಂದಿರುವ ಮತ್ತು ಕಡಿಮೆ ಗ್ಲಿಸಮಿಕ್ ಇಂಡೆಕ್ಸ್ ಹೊಂದಿರುವ ತೆಂಗಿನಕಾಯಿ ಸಕ್ಕರೆಯು ಸದ್ಯ ಪಟ್ಟಿಯಲ್ಲಿರುವ ಹೊಸದಾದ ಆರೋಗ್ಯಕಾರಿ ಸಕ್ಕರೆಯ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.

ತೆಂಗಿನ ಕಾಯಿ ಸಕ್ಕರೆಯ ಆರೋಗ್ಯಕಾರಿ ಪ್ರಯೋಜನಗಳು

ಈ ಲೇಖನದಲ್ಲಿ ನಾವು ತೆಂಗಿನಕಾಯಿ ಸಕ್ಕರೆಯ ಆರೋಗ್ಯ ಲಾಭಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಜಗತ್ತಿನ ಆರೋಗ್ಯಕಾರಿ ಆಹಾರಗಳ ಪಟ್ಟಿಯಲ್ಲಿ ತೆಂಗಿನಕಾಯಿ ಸಕ್ಕರೆಯು ಅದರ ಅಧ್ಬುತ ಲಾಭಗಳಿಂದಾಗಿ ಪ್ರಮುಖ ಸ್ಥಾನದಲ್ಲಿದ್ದು ಬಹು ಬೇಡಿಕೆಯಲ್ಲಿದೆ.
ಸಾಮಾನ್ಯ ಬಿಳಿ ಸಕ್ಕರೆಗೆ ಹೋಲಿಸಿದರೆ ತೆಂಗಿನಕಾಯಿ ಸಕ್ಕರೆಯಲ್ಲಿ ಅಷ್ಟೇ ಪ್ರಮಾಣದ ಮಿನರಲ್ ಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಒಳಗೊಂಡಿದೆ ಜೊತೆಗೆ ಅದೇ ಪ್ರಮಾಣದ ಕಾರ್ಬೋಹೈಡ್ರೇಟ್ಸ್ ಗಳನ್ನೂ ಕೂಡ ಇದು ಒಳಗೊಂಡಿದೆ.

ತೆಂಗಿನಕಾಯಿ ಸಕ್ಕರೆ ಇತರೆ ಸಿಹಿ ಪದಾರ್ಥಗಳಂತೆ ಸಂಸ್ಕರಿಸಿದ ಅಥವಾ ಯಾವುದೇ ರಾಸಾಯನಿಕಗಳನ್ನೂ ಒಳಗೊಂಡಿಲ್ಲ ಮತ್ತು ಯಾವುದೇ ಕೃತಕ ಪದಾರ್ಥಗಳಿಂದ ಮಿಶ್ರಣಗೊಳ್ಳುವುದಿಲ್ಲ. ಬಿಳಿಯ ಸಾಮಾನ್ಯ ಸಕ್ಕರೆಗಿಂತ ತೆಂಗಿನಕಾಯಿ ಸಕ್ಕರೆಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಮತ್ತು ಮಿನರಲ್ ಗಳಿವೆ. ಇದರಲ್ಲಿ ವಿಟಮಿನ್ ಸಿ, ಪೊಟಾಷಿಯಂ, ಮೆಗ್ನೇಷಿಯಂ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ ಮತ್ತು ಪಾಸ್ಪರಸ್ ಅಂಶಗಳಿವೆ. ಅಷ್ಟೇ ಅಲ್ಲದೆ ಇದರಲ್ಲಿ ಸಣ್ಣ ಪ್ರಮಾಣದಲ್ಲಿ ಫೈಟೋನ್ಯೂಟ್ರಿಯಂಟ್ಸ್ ಉದಾಹರಣೆಗೆ ಫ್ಲೇವನಾಯ್ಡ್ಸ್, ಫಾಲಿಫಿನಾಲ್ ಮತ್ತು ಆಂಥೋಸೈನಿನ್ಸ್ ಗಳಿವೆ. ತೆಂಗಿನಕಾಯಿ ಸಕ್ಕರೆಯನ್ನು ಬಳಸುವುದರಿಂದಾಗುವ ಆರೋಗ್ಯಲಾಭಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.

1. ಡಯಾಬಿಟೀಸ್ ನ್ನು ಪರಿಹರಿಸಲು ಅತ್ಯುತ್ತಮವಾದದ್ದು
2. ಸಾಮಾನ್ಯ ಸಕ್ಕರೆಗಿಂತ ಹೆಚ್ಚು ಪೋಷಕಾಂಶಭರಿತವಾಗಿದೆ
3. ಕಡಿಮೆ ಗ್ಲೈಸಮಿಕ್ ಇಂಡೆಕ್ಸ್ ಹೊಂದಿದೆ
4. ಕಡಿಮೆ ಪ್ರಮಾಣದ ಫ್ರಕ್ಟೋಸ್ ನ್ನು ಹೊಂದಿದೆ
5. ಕರುಳಿನ ಆರೋಗ್ಯಕ್ಕೆ ಒಳ್ಳೆಯದು
6. ಇದು ಭೂ-ಸ್ನೇಹಿ ಆಹಾರವಾಗಿದೆ
7. ಪಾಲಿಯೋ ಡಯಟ್ ನಲ್ಲಿ ತೆಂಗಿನಕಾಯಿ ಸಕ್ಕರೆಯನ್ನು ಬಳಕೆ ಮಾಡಬಹುದು.
8. ತೂಕ ಹೆಚ್ಚಳವಾಗುವುದನ್ನು ತಡೆಯುತ್ತದೆ
9. ರಕ್ತ ಸಂಚಾರವನ್ನು ಅಧಿಕಗೊಳಿಸುತ್ತದೆ
10. ಶಕ್ತಿಯ ಮಟ್ಟವನ್ನು ವೃದ್ಧಿಸುತ್ತದೆ

1. ಡಯಾಬಿಟೀಸ್ ನ್ನು ಪರಿಹರಿಸಲು ಅತ್ಯುತ್ತಮವಾದದ್ದು

ತೆಂಗಿನಕಾಯಿ ಸಕ್ಕರೆಯು ಫೈಬರ್ ಅಂಶವನ್ನು ಒಳಗೊಂಡಿದೆ. ಅಂದರೆ ಇದರಲ್ಲಿ ಇನ್ಸುಲಿನ್ ಪ್ರಮಾಣವೂ ಇದ್ದು, ಅದು ಗ್ಲೂಕೋಸ್ ನ ಅಂಶವನ್ನು ಹೀರಿಕೊಳ್ಳಲು ನೆರವು ನೀಡುತ್ತದೆ. ಇದು ಡಯಾಬಿಟೀಸ್ ಸಮಸ್ಯೆಯಿಂದ ಬಳಲುವವರಿಗೆ ಬಹಳ ಪ್ರಮುಖವಾಗಿ ಬೇಕಾಗಿರುವ ಒಂದು ಅಂಶವಾಗಿದೆ. ಅಮೇರಿಕಾದ ಡಯಾಬಿಟಿಕ್ ಅಸೋಸಿಯೇಷನ್ ಹೇಳುವ ಪ್ರಕಾರ, ಡಯಾಬಿಟೀಸ್ ಇರುವ ರೋಗಿಗಳು ತೆಂಗಿನಕಾಯಿ ಸಕ್ಕರೆಯನ್ನು ಅವರ ಡಯಟ್ ಪ್ಲಾನ್ ನಲ್ಲಿ ಸಿಹಿಗಾಗಿ ಬಳಕೆ ಮಾಡಬಹುದಾಗಿದೆ. ಆದರೆ ಅಲ್ಪ ಪ್ರಮಾಣದಲ್ಲಿ ಬಳಕೆ ಮಾಡಬೇಕಾಗುತ್ತದೆ. ಯಾಕೆಂದರೆ ಸಾಮಾನ್ಯ ಸಕ್ಕರೆಯಂತೆ ಇದು ಕೂಡ 15 ಕ್ಯಾಲೋರಿ ಮತ್ತು 4 ಗ್ರಾಂನಷ್ಟು ಕಾರ್ಬೋಹೈಡ್ರೇಟ್ ನ್ನು ಒಳಗೊಂಡಿರುತ್ತದೆ.

2. ಸಾಮಾನ್ಯ ಸಕ್ಕರೆಗಿಂತ ಹೆಚ್ಚು ಪೋಷಕಾಂಶಭರಿತವಾಗಿದೆ

ಸಾಮಾನ್ಯವಾಗಿ ಸಂಸ್ಕರಿಸಿದ ಸಕ್ಕರೆ ಮತ್ತು ಹೆಚ್ಚು ಫ್ರಕ್ಟೋಸ್ ಕಾರ್ನ್ ರಸಾಯನವು ಖಾಲಿ ಕ್ಯಾಲೋರಿಗಳನ್ನು ಮತ್ತು ಯಾವುದೇ ಪೋಷಕಾಂಶಗಳನ್ನೂ ಹೊಂದಿರುವುದಿಲ್ಲ . ಇನ್ನೊಂದೆಡೆ, ತೆಂಗಿನಮರದಲ್ಲಿ ಗುರುತಿಸಬಹುದಾದ ಪೋಷಕಾಂಶಗಳು ತೆಂಗಿನಕಾಯಿ ಸಕ್ಕರೆಯಲ್ಲೂ ಕಾಣಬಹುದಾಗಿದೆ. ಉದಾಹರಣೆಗೆ ಇದರಲ್ಲಿ ಕಬ್ಬಿಣ, ಸತುವು, ಕ್ಯಾಲ್ಸಿಯಂ, ಪೊಟ್ಯಾಷಿಯಂ, ಪಾಲಿಫಿನಾಲ್, ಮತ್ತು ಆಂಟಿ ಆಕ್ಸಿಡೆಂಟ್ ಗಳಿರುತ್ತದೆ. ಆಹಾರ ಮತ್ತು ಸಂಶೋಧನಾ ಸಂಸ್ಥೆ ಹೇಳುವ ಪ್ರಕಾರ, ಕಬ್ಬಿಣ ಮತ್ತು ಸತುವಿನ ಅಂಶವು ಸಂಸ್ಕರಿಸಿದ ಸಕ್ಕರೆಗಿಂತ ಎರಡು ಪಟ್ಟು ಹೆಚ್ಚು ತೆಂಗಿನಕಾಯಿ ಸಕ್ಕರೆಯಲ್ಲಿ ಇರುತ್ತದೆಯಂತೆ.

3. ಕಡಿಮೆ ಗ್ಲೈಸಮಿಕ್ ಇಂಡೆಕ್ಸ್ ಹೊಂದಿದೆ

ಸಂಸ್ಕರಿಸಿದ ಸಕ್ಕರೆಗೆ ಹೋಲಿಸಿದರೆ, ತೆಂಗಿನಕಾಯಿ ಸಕ್ಕರೆಯಲ್ಲಿ ಅತೀ ಕಡಿಮೆಯಾದ ಗ್ಲಿಸಮಿಕ್ ಇಂಡೆಕ್ಸ್ ಇರುತ್ತದೆ. ಯಾವ ಆಹಾರದಲ್ಲಿ ಹೆಚ್ಚು ಗ್ಲಿಸಮಿಕ್ ಇಂಡೆಕ್ಸ್ ಇರುತ್ತದೆಯೋ ಅದು ನಿಮ್ಮ ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ ಆ ಮುಖಾಂತರ ನಿಮ್ಮ ಇನ್ಸುಲಿನ್ ಲೆವೆಲ್ ಕೂಡ ಅಧಿಕವಾಗುತ್ತೆ. ಆದರೆ ತೆಂಗಿನಕಾಯಿ ಸಕ್ಕರೆಯಲ್ಲಿ ನಿಮ್ಮ ಗ್ಲುಕೋಸ್ ನ್ನು ಹೀರಿಕೊಂಡು ಅದನ್ನು ಕಡಿಮೆ ಮಾಡಿ ಇನ್ಸುಲಿನ್ ನ್ನು ತಗ್ಗಿಸುವ ಸಾಮರ್ಥ್ಯವಿದೆ.

4. ಕಡಿಮೆ ಪ್ರಮಾಣದ ಫ್ರಕ್ಟೋಸ್ ನ್ನು ಹೊಂದಿದೆ

ಫ್ರಕ್ಟೋಸ್ ಹೊಂದಿರುವ ಸಕ್ಕರೆಯಿಂದಾಗಿ ದೇಹವು ಸಕ್ಕರೆಯನ್ನು ಸುಲಭವಾಗಿ ಫ್ಯಾಟ್ ಅಂಶವಾಗಿ ಪರಿವರ್ತಿಸುತ್ತದೆ. ಫ್ರಕ್ಟೋಸ್ ಬೇಗನೆ ಮುರಿದು ಹೋಗುತ್ತೆ ಮತ್ತು ಗ್ಲಿಸರೈಡ್ ಗಳ ಉತ್ಪಾದನೆಗಾಗಿ ಯಕೃತ್ತು ಇದನ್ನು ಬಹಳ ಬೇಗನೆ ಉಪಯೋಗಿಸಿಕೊಳ್ಳುತ್ತದೆ. ರಕ್ತದಲ್ಲಿ ಹೆಚ್ಚಿನ ಟ್ರೈ ಗ್ಲಿಸರೈಡ್ ಗಳಾಗುವುದರಿಂದಾಗಿ ಬ್ಲಡ್ ಪ್ರಶರ್ ಅಧಿಕವಾಗುವ ಸಾಧ್ಯತೆಯಿರುತ್ತದೆ ಮತ್ತು ಒಬೆಸಿಟಿ, ಡಯಾಬಿಟೀಸ್, ಹೆಚ್ಚಿನ ಪ್ರಮಾಣದ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಕಡಿಮೆ ಪ್ರಮಾಣದ ಉತ್ತಮ ಕೊಲೆಸ್ಟ್ರಾಲ್ ಗಳ ಶೇಖರಣೆ ಗೆ ಇದು ಕಾರಣವಾಗುತ್ತೆ. ತೆಂಗಿನಕಾಯಿ ಸಕ್ಕರೆಯಲ್ಲಿ ಸುಮಾರು 20 ರಿಂದ 30 ಶೇಕಡಾದಷ್ಟು ಫ್ರಕ್ಟೋಸ್ ಇದೆ ಮತ್ತು 70 ರಿಂದ 75 ಶೇಕಡಾ ದಷ್ಟು ಸುಕ್ರೋಷ್ ಅಂಶವನ್ನು ಒಳಗೊಂಡಿದೆ.

5. ಕರುಳಿನ ಆರೋಗ್ಯಕ್ಕೆ ಒಳ್ಳೆಯದು

ತೆಂಗಿನ ಕಾಯಿ ಸಕ್ಕರೆಯಲ್ಲಿರುವ ಫೈಬರ್ ಅಂಶದಿಂದಾಗಿ ಕರುಳಿನ ಬೈಫಿಡೋಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಬೈಫಿಡೋಬ್ಯಾಕ್ಟೀರಿಯಾದಿಂದಾಗಿ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಸಂಗ್ರಹವಾಗಿ ನಿಮ್ಮ ರೋಗ ನಿರೋಧಕ ಶಕ್ತಿಯ ಅಭಿವೃದ್ಧಿಯಾಗುತ್ತದೆ.ಹಾಗಾಗಿ ಇಂದಿನಿಂದಲೇ ತೆಂಗಿನಕಾಯಿ ಸಕ್ಕರೆಯನ್ನು ಉಪಯೋಗಿಸಲ ಪ್ರಯತ್ನಿಸಿ ಮತ್ತು ಅದರ ಲಾಭಗಳನ್ನು ಪಡೆಯಿರಿ,

6. ಇದು ಭೂ-ಸ್ನೇಹಿ ಆಹಾರವಾಗಿದೆ

ನಿಮಗೆ ಗೊತ್ತಾ ತೆಂಗಿನಕಾಯಿ ಸಕ್ಕರೆಯು ಭೂ ಸ್ನೇಹಿ ಆಹಾರವಾಗಿದೆ ಎಂದು? ಹೌದು, ಯುನೈಟೆಡ್ ನೇಷನ್ ಫುಡ್ ಮತ್ತು ಅಗ್ರಿಕಲ್ಚರ್ ಆರ್ಗನೈಜೇಷನ್ ಹೇಳಿಕೆಯಂತೆ ವಿಶ್ವದ ಅತ್ಯಂತ ಸಹಿಸಿಕೊಳ್ಳಬಹುದಾಗಿರುವ ಸಿಹಿ ಎಂದರೆ ಅದು ತೆಂಗಿನಕಾಯಿ ಸಕ್ಕರೆಯಂತೆ. ಇದರ ಮರಗಳು ನಾವು ಕಬ್ಬು ಬೆಳೆಗೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರಮಾಣದ ನೀರನ್ನು ಬಯಸುತ್ತವೆ ಮತ್ತು ಕಡಿಮೆ ಪ್ರಮಾಣದ ಗೊಬ್ಬರವನ್ನು ಬಯಸುತ್ತದೆ.ಹಾಗಾಗಿ, ತೆಂಗಿನಕಾಯಿ ಸಕ್ಕರೆಯು ರಾಸಾಯನಿಕ ಮುಕ್ತವಾಗಿರುತ್ತದೆ ಮತ್ತು ಅಸಹಜ ವಸ್ತುಗಳಿಂದ ಮುಕ್ತವಾಗಿರುತ್ತದೆ.

7. ಪಾಲಿಯೋ ಡಯಟ್ ನಲ್ಲಿ ತೆಂಗಿನಕಾಯಿ ಸಕ್ಕರೆಯನ್ನು ಬಳಕೆ ಮಾಡಬಹುದು.

ಅಧ್ಬುತವಾದ ಪಾಲಿಯೋ ಸಲಹೆಗಾರ ಹೇಳುವಂತೆ, ಯಾವುದೇ ವ್ಯಕ್ತಿ ಪಾಲಿಯೋ ಡಯಟ್ ಪಾಲಿಸುತ್ತಿದ್ದರೆ, ಅವರು ತೆಂಗಿನಕಾಯಿಯ ಸಕ್ಕರೆಯನ್ನು ಬಳಕೆ ಮಾಡಬಹುದಾಗಿದ್ದು, ಆ ಮೂಲಕ ತಮ್ಮ ನಾಲಗೆಯ ಸಿಹಿಯ ಆಕಾಂಕ್ಷೆಯನ್ನು ತೀರಿಸಿಕೊಳ್ಳಬಹುದಾಗಿದೆಯಂತೆ. ಯಾರು ಕಠಿಣವಾದ ಪಾಲಿಯೋ ಜೀವನಶೈಲಿಯನ್ನು ಪಾಲಿಸುತ್ತಾರೋ ಅವರು ತೆಂಗಿನಕಾಯಿ ಸಕ್ಕರೆ ಬಳಸಲು ಅವಕಾಶವಿದೆಯಂತೆ.

8. ತೂಕ ಹೆಚ್ಚಳವಾಗುವುದನ್ನು ತಡೆಯುತ್ತದೆ

ಕೊಬ್ಬಿನಾಂಶ ಶೇಖರಣೆಗೊಳ್ಳುವುದನ್ನು ತೆಂಗಿನಕಾಯಿ ಸಕ್ಕರೆ ತಡೆಯುತ್ತದೆ. ತೆಂಗಿನಕಾಯಿ ಸಕ್ಕರೆಯಲ್ಲಿ ಕಡಿಮೆ ಪ್ರಮಾಣದ ಫ್ರಕ್ಟೋಸ್ ಇದೆ ಮತ್ತು ಇದು ತೂಕ ಹೆಚ್ಚಳವಾಗುವುದನ್ನು ತಡೆಯುತ್ತದೆ ಮತ್ತು ಕೊಬ್ಬು ಶೇಖರಣೆಯಾಗುವುದನ್ನು ತಪ್ಪಿಸುತ್ತದೆ. ಹಣ್ಣುಗಳಿಂದ ದೊರಕುವ ಫ್ರಕ್ಟೋಸ್ ದೇಹಕ್ಕೆ ಆರೋಗ್ಯಕಾರಿ ಮತ್ತು ಒಳ್ಳೆಯದು. ಆದರೆ ರಿಫೈನ್ಡ್ ಸಕ್ಕರೆಯಲ್ಲೂ ಫ್ರಕ್ಟೋಸ್ ಇರುತ್ತದೆ, ಇದು ದೇಹಕ್ಕೆ ಬಹಳ ಅಪಾಯಕಾರಿ ಮತ್ತು ಅನಾರೋಗ್ಯಕಾರಿಯಾದದ್ದು.

9. . ರಕ್ತ ಸಂಚಾರವನ್ನು ಅಧಿಕಗೊಳಿಸುತ್ತದೆ

ತೆಂಗಿನ ಕಾಯಿ ಸಕ್ಕರೆಯಲ್ಲಿರುವ ಕಬ್ಬಿಣದ ಅಂಶವು ನಿಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸಲು ನೆರವು ನೀಡುತ್ತದೆ. ಇದು ಪೋಷಕಾಂಶಗಳ ಇರುವಿಕೆ ಮತ್ತು ಆಕ್ಸಿಜನೇಷನ್ ನ್ನು ಹೆಚ್ಚಿಸಲು ಕಾರಣವಾಗುತ್ತದೆ. ಕಬ್ಬಿಣಾಂಶವು ಕೆಂಪು ರಕ್ತ ಕಣಗಳನ್ನು ಅಧಿಕಗೊಳಿಸುತ್ತೆ ಮತ್ತು ಕಡಿಮೆ ಕೆಂಪು ರಕ್ತಗಳಿಂದಾಗಿ ಅನೀಮಿಯಾ ಬರುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ ಮಾಂಸಖಂಡಗಳ ದುರ್ಬಲತೆ, ತಲೆನೋವು, . fatigue, and gastrointestinal problems., ಇತ್ಯಾದಿ ಸಮಸ್ಯೆಗಳು ಬರಬಹುದು., ಆದರೆ ಈ ಸಕ್ಕರೆಯ ಬಳಕೆಯಿಂದ ರಕ್ತ ಸಂಚಾರ ಅಧಿಕವಾಗಿ ಈ ಎಲ್ಲಾ ಸಮಸ್ಯೆಗಳು ಬರದಂತೆ ತಡೆಯುತ್ತದೆ.

10. ಶಕ್ತಿಯ ಮಟ್ಟವನ್ನು ವೃದ್ಧಿಸುತ್ತದೆ

ತೆಂಗಿನಕಾಯಿ ಸಕ್ಕರೆಯು ಕೆಲವು ರಾ-ಮೆಟಿರಿಯಲ್ ಗಳನ್ನುಒಳಗೊಂಡಿರುತ್ತದೆ ಮತ್ತು ಇದು ಶಕ್ತಿಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಈ ರಾ-ಮೆಟಿರಿಯಲ್ ಗಳು ದೇಹದಲ್ಲಿ ಪ್ರೊಸೆಸ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಅಂದರೆ ಇಡೀ ದಿನ ಚಯಾಪಚಯ ಕ್ರಿಯೆಯ ಮುಖಾಂತರ ನಿಮಗೆ ಶಕ್ತಿಯು, ಕಡಿಮೆ ಪ್ರಮಾಣದ ವಸ್ತುಗಳಿಂದಲೇ ಲಭ್ಯವಾಗುತ್ತದೆ.

. ತೆಂಗಿನಕಾಯಿ ಸಕ್ಕರೆಯನ್ನು ಬಳಕೆ ಮಾಡುವುದು ಹೇಗೆ?

ತೆಂಗಿನಕಾಯಿ ಸಕ್ಕರೆಯನ್ನು ನೀವು ಸದ್ಯ ಬಳಸುವ ಸಾಮಾನ್ಯ ಸಕ್ಕರೆಯಂತೆಯೇ ಬಳಕೆ ಮಾಡಬಹುದು. ತೆಂಗಿನಕಾಯಿ ಸಕ್ಕರೆಯು ಸಾಮಾನ್ಯ ಸಕ್ಕರೆಗಿಂತ ಹೆಚ್ಚು ಸಿಹಿಯಾಗಿರುತ್ತದೆ. ಹಾಗಾಗಿ ಕಡಿಮೆ ಪ್ರಮಾಣವನ್ನು ಬಳಕೆ ಮಾಡಿದರೆ ಸಾಕಾಗುತ್ತದೆ.ಕಾಕ್ ಟೈಲ್ ತಯಾರಿಕೆ, ಡೆಸರ್ಟ್ ಗಳ ತಯಾರಿಕೆ, ಜ್ಯೂಸ್, ಸ್ಮೂದಿಗಳ ತಯಾರಿಕೆಯಲ್ಲಿ ಸಿಹಿಯ ಹೆಚ್ಚಳಕ್ಕೆ ಬಳಸಬಹುದಾಗಿದೆ. ನಿಮ್ಮ ಕಾಫಿ, ಟೀ, ಇತ್ಯಾದಿ ಗಳಲ್ಲಿಯೂ ಕೂಡ ತೆಂಗಿನಕಾಯಿ ಸಕ್ಕರೆಯನ್ನು ಬಳಕೆ ಮಾಡಬಹುದು.

English summary

ತೆಂಗಿನ ಕಾಯಿ ಸಕ್ಕರೆ ಅಂದರೆ ಏನು ಗೊತ್ತಾ? ಇದರ 10 ಆರೋಗ್ಯ ಲಾಭಗಳು ಇಲ್ಲಿವೆ ನೋಡಿ

Coconut sugar is the dehydrated and boiled sap of the coconut palm. Being low in fructose content and having a low glycemic index, coconut sugar is the new healthy sugar on the list. In this article, we will be writing about the coconut sugar health benefits. Coconut sugar is a hot commodity in the health food world due to its fantastic benefits. Coconut sugar contains traces of minerals and antioxidants and the same amount of carbohydrates compared to regular white sugar.
Story first published: Friday, June 15, 2018, 12:37 [IST]
X
Desktop Bottom Promotion