For Quick Alerts
ALLOW NOTIFICATIONS  
For Daily Alerts

ಚರ್ಮದ ಮೇಲೆ ಕೆಟ್ಟದಾಗಿ ಕಾಣುವ ದದ್ದುಗಳ ನಿಯಂತ್ರಣ ಹೇಗೆ?

By Hemanth
|

ಜೀವನದಲ್ಲಿ ಒಂದು ಸಲವಾದರೂ ದೇಹದ ಮೇಲೆ ದದ್ದು ಕಾಣಿಸಿಕೊಂಡು ಸಮಸ್ಯೆ ಉಂಟುಮಾಡುವುದು ಇದೆ. ದೇಹದಲ್ಲಿ ಇದು ಕಾಣಿಸಿಕೊಳ್ಳಲು ಹಲವಾರು ರೀತಿಯ ಕಾರಣಗಳು ಹಾಗೂ ಅಂಶಗಳಿರಬಹುದು. ಮೊದಲು ಇದು ಚರ್ಮದ ಮೇಲೆ ತುರಿಕೆ ರೂಪದಲ್ಲಿ ಕಾಣಿಸಿಕೊಂಡ ಬಳಿಕ ನಿಧಾನವಾಗಿ ಕೆಂಪು, ಊದಿಕೊಂಡು ಬೊಕ್ಕೆಗಳ ರೂಪ ಪಡೆದುಕೊಳ್ಳುವುದು.

ದೀರ್ಘಕಾಲದ ದದ್ದುಗಳೆಂದರೇನು?

ಆರು ವಾರಕ್ಕಿಂತ ಹೆಚ್ಚು ಕಾಲ ಈ ದದ್ದುಗಳು ಕಾಣಿಸಿಕೊಂಡರೆ, ಕೆಲವೊಂದು ಸಲ ಇದು ತಿಂಗಳುಗಳು ಅಥವಾ ವರ್ಷಗಳೇ ಬೇಕಾಗಬಹುದು. ಇಂತಹ ಪರಿಸ್ಥಿತಿಯನ್ನು ದೀರ್ಘಕಾಲದ ದದ್ದುಗಳೆಂದು ಅಥವಾ ಹುಳುಕಡ್ಡಿ ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದರಲ್ಲಿ ಎರಡು ವಿಧಗಳಿವೆ. ಮೊದಲನೇಯದ್ದು ತೀವ್ರ ಅಥವಾ ಕಡಿಮೆ ಸಮಯವಿರುವ, ಇನ್ನೊಂದು ದೀರ್ಘಕಾಲದ ತನಕ ಇರುವುದು.

ways to manage chronic urticaria

ದೀರ್ಘಕಾಲದ ದದ್ದುಗಳನ್ನು ವೈದ್ಯರು ರೋಗಿಯ ವೈದ್ಯಕೀಯ ಇತಿಹಾಸ ಮತ್ತು ಕೆಲವೊಂದು ಪರೀಕ್ಷೆಗಳನ್ನು ಮಾಡುವರು. ಆದರೆ ಈ ಕಾಯಿಲೆಯು ಯಾವುದರಿಂದ ಬರುವುದು ಎಂದು ವೈದ್ಯರಿಗೂ ಇದುವರೆಗೆ ತಿಳಿದಿಲ್ಲ. ಈ ದದ್ದುಗಳು ಕೆಲವೊಂದು ಕಾಯಿಲೆಗಳಾಗಿರುವ ಥೈರಾಯ್ಡ್ ಕಾಯಿಲೆ, ಸಂಧಿವಾತ, ಟೈಪ್ 1 ಮಧುಮೇಹ, ಉದರದ ಕಾಯಿಲೆ, ಹಾರ್ಮೋನು ಸಮಸ್ಯೆ ಅಥವಾ ತುಂಬಾ ಅಪರೂಪದಲ್ಲಿ ಅಪರೂಪದಲ್ಲಿ ಇದು ಕ್ಯಾನ್ಸರ್ ಲಕ್ಷಣವಾಗಿರಬಹುದು.

ದೀರ್ಘಕಾಲದ ದದ್ದು ನಿವಾರಣೆ ಮಾಡಲು ಕೆಲವೊಂದು ಕ್ರಮಗಳನ್ನು ನೀವು ತೆಗೆದುಕೊಳ್ಳಬೇಕು.

ದೀರ್ಘಕಾಲದ ದದ್ದು ಬರಲು ಕಾರಣವೇನು?

ದೀರ್ಘಕಾಲದ ದದ್ದು ಉಂಟಾಗಲು ಮುಖ್ಯ ಕಾರಣವೆಂದರೆ ಅದು ಆಟೋ ಇಮ್ಯೂನ್. ಎಂಡೋಕ್ರೈನ್ ಮತ್ತು ಆಟೋ ಇಮ್ಯೂನ್ ರೋಗಗಳು ದೀರ್ಘಕಾಲದ ದದ್ದುಗಳಿಗೆ ಪ್ರಮುಖ ಕಾರಣವಾಗಿದೆ. ಸಿಸ್ಟಮ್ಯಾಟಿಕ್ ಲೂಪಸ್ ಎರಿಥೆಮಾಟೋಸಸ್, ಕಿವುಡು ಸಂಧಿವಾತ, ಆಟೋ ಇಮ್ಯೂನ್ ಥೈರಾಯ್ಡ್ ರೋಗ ಮತ್ತು ಕ್ರೈಗ್ಲೋಬುಲಿನ್ಮೈಮಿಯಾ ಇದರಲ್ಲಿ ಕೆಲವು. ಬ್ಯಾಕ್ಟೀರಿಯಾದ ಸೋಂಕುಗಳಿಂದ ಬರುವಂತಹ ಮೂತ್ರನಾಳದ ಸೋಂಕು ಮತ್ತು ವೈರಲ್ ಸೋಂಕಿನಿಂದ ಬರುವಂತಹ ಹೆಪಟಿಟಿಸ್ ಮತ್ತು ಹೊಟ್ಟೆಯ ಜ್ವರವು ದೀರ್ಘಕಾಲದ ದ್ದುಗಳನ್ನು ಉಂಟು ಮಾಡಬಹುದು.

ದದ್ದುಗಳು ಉಂಟಾಗಲು ಕೆಲವು ಸಾಮಾನ್ಯ ಕಾರಣಗಳು

•ಆಹಾರಗಳಾದ ನೆಲಗಡಲೆ, ಚಿಪ್ಪುಮೀನು ಮತ್ತು ಮೊಟ್ಟೆ

•ಕೀಟಗಳ ಕಡಿತ

•ಕೆಲವೊಂದು ಔಷಧಿಗಳು(ಆಸ್ಪರಿನ್, ಆ್ಯಂಟಿಬಯೋಟಿಕ್, ಇಬುಪ್ರೊಫೇನ್)

•ಪರಾಗ

•ಸಾಕುಪ್ರಾಣಿಗಳ ತೊಗಲು

•ಕೆಲವೊಂದು ಸಸ್ಯಗಳು(ಪಾಯಿಸನ್ ಓಕ್, ಪಾಯಿಸನ್ ಇವಿ)

•ಬಿಸಿಲಿಗೆ ಮೈಯೊಡ್ಡುವುದು

•ಅತಿಯಾದ ಚಳಿ ಅಥವಾ ಬಿಸಿ

•ಲ್ಯಾಟೆಕ್ಸ್

•ರಕ್ತವರ್ಗಾವಣೆ

ಲಕ್ಷಣಗಳು ಏನು?

ದದ್ದುಗಳ ಲಕ್ಷಣಗಳು ಕೆಲವು ನಿಮಿಷಗಳ ಕಾಲ ಇರಬಹುದು. ದೀರ್ಘಕಾಲದ ದದ್ದುಗಳಾದರೆ ಆಗ ಲಕ್ಷಣಗಳು ತಿಂಗಳುಗಳ ಅಥವಾ ವರ್ಷಗಳ ತನಕ ಇರಬಹುದು.

ಕೀಟಗಳ ಕಡಿತದಂತೆ ಇದು ಅನುಭವ ನೀಡಿದರೂ ಇದಕ್ಕೆ ಕೆಲವು ಬೇರೆ ಲಕ್ಷಣಗಳು ಕೂಡ ಇದೆ.

•ದದ್ದುಗಳು ದೊಡ್ಡ ಬೊಕ್ಕೆಗಳಾಗಿ ತುರಿಕೆ ಉಂಟು ಮಾಡಬಹುದು. ಇದು ಕೆಂಪು ಅಥವಾ ಚರ್ಮದ ಬಣ್ಣದಲ್ಲಿ ಇರಬಹುದು

•ನಾವು ಇದನ್ನು ಒತ್ತಿದಾಗ ದದ್ದುವಿನ ಮಧ್ಯದಲ್ಲಿ ಬಿಳಿ ಬಣ್ಣವು ಕಾಣಿಸುವುದು.

•ದದ್ದುಗಳಿಗೆ ಸ್ಪಷ್ಟ ಅಂಚುಗಳು ಇರುವುದು.

•ದೇಹದ ಯಾವುದೇ ಭಾಗದಲ್ಲೂ ಇದು ಕಾಣಿಸಬಹುದು.

•ದದ್ದುಗಳು ಬಣ್ಣ, ಗಾತ್ರ ಬದಲಾಯಿಸಬಹುದು. ಮತ್ತೆ ಇದು ಕಾಣಿಸಿಕೊಳ್ಳಬಹುದು.

•ಇದು ದೇಹದ ಬೇರೆ ಭಾಗಗಳಿಗೆ ಹರಡಬಹುದು.

ದೀರ್ಘಕಾಲದ ದದ್ದುಗಳ ಕೆಲವೊಂದು ವಿಶೇಷ ಲಕ್ಷಣಗಳು

•ಇದು ಪ್ರತಿನಿತ್ಯ ಬರಬಹುದು

•ಇದು ತುಂಬಾ ತುರಿಸಬಹುದು ಮತ್ತು ಆರು ವಾರಗಳ ಕಾಲ ಇರಬಹುದು.

•24 ಗಂಟೆಗಳ ಕಾಲ ಇದು ಇರುವುದು.

•ಇವುಗಳು ಕಲೆಗಳನ್ನು ಉಂಟು ಮಾಡಲ್ಲ.

ಇದು ಪ್ರಾಣಹಾನಿಯನ್ನು ಉಂಟು ಮಾಡಬಹುದೇ?

ಇದು ಯಾವುದೇ ರೀತಿಯ ಪ್ರಾಣಹಾನಿ ಉಂಟು ಮಾಡುವುದಿಲ್ಲ. ಕುತ್ತಿಗೆಯಲ್ಲಿ ಕಾಣಿಸಿಕೊಂಡ ದದ್ದುಗಳ ಊತವು ಉಸಿರಾಟಕ್ಕೆ ತೊಂದರೆ ಮಾಡಿದರೆ ಸಮಸ್ಯೆಯಾಗಬಹುದು. ಈ ವೇಳೆ ವೈದ್ಯಕೀಯ ನೆರವು ಪಡೆಯಿರಿ.

ಇದಕ್ಕೆ ಚಿಕಿತ್ಸೆ ಏನು?

ಆಹಾರಗಳಿಂದ ಬರುವಂತಹ ದದ್ದುಗಳಿಗೆ ಚಿಕಿತ್ಸೆಯು ತುಂಬಾ ಸುಲಭವಾಗಿರುವುದು. ಬೇರೆ ಸಂದರ್ಭಗಳಲ್ಲಿ ಇದಕ್ಕೆ ಸವಾಲಿನ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ. ಒಂದು ಸಲ ಬಂದು ಹೋಗಿದ್ದರೆ ಅದರ ಬಗ್ಗೆ ಪರೀಕ್ಷೆ ಮಾಡಬೇಕಿಲ್ಲ.

ತಜ್ಞರು ದೀರ್ಘಕಾಲದ ದದ್ದುಗಳನ್ನು ತೆಗೆಯುವರು. ಮೂತ್ರ, ಚರ್ಮ ಮತ್ತು ರಕ್ತದ ಪರೀಕ್ಷೆಯನ್ನು ಮಾಡಿಕೊಳ್ಳಬೇಕಾಗಬಹುದು.

ದದ್ದುಗಳು ಕಾಣಿಸಿಕೊಂಡಿದ್ದರೆ ಆಗ ನೀವು ಇವುಗಳಿಂದ ದೂರವಿರಬೇಕು...

•ದದ್ದುಗಳನ್ನು ಉಂಟುಮಾಡುವ ಆಹಾರ ಸೇವಿಸಬೇಡಿ.

•ಗಡಸು ಸೋಪ್ ಬಳಸಬೇಡಿ. ಪದೇ ಪದೇ ಸ್ನಾನ ಮಾಡುವುದರಿಂದ ತುರಿಕೆ ಕಡಿಮೆ ಮಾಡಬಹುದು. ಉಜ್ಜುವುದನ್ನು ತಡೆಯಿರಿ.

•ಬಿಗಿಯಾಗಿರುವ ಬಟ್ಟೆಗಳನ್ನು ಧರಿಸಬೇಡಿ.

•ದದ್ದುಗಳಿಂದ ಶೀತದಿಂದ ಬಂದಿದ್ದರೆ ತಣ್ಣಗಿನ ನೀರಿನಲ್ಲಿ ಈಜಬೇಡಿ. ಎಪಿನೆಫ್ರಿನ್ ಆಟೋ-ಇಂಜೆಕ್ಟರ್ ನಿಮ್ಮ ಬಳಿಯಿರಲಿ.

•ಶೀತವಾತಾವರಣದಲ್ಲಿ ಯಾವಾಗಲೂ ಮೈಮುಚ್ಚುವಂತಹ ಬಟ್ಟೆಗಳನ್ನು ಧರಿಸಿ.

•ಬಿಸಿಲಿಗೆ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಹಚ್ಚಿ.

•ನಿಮಗೆ ಅಲರ್ಜಿ ಉಂಟುಮಾಡುವ ಔಷಧಿ ಬಗ್ಗೆ ಗಮನಹರಿಸಿ.

ಆಂಟಿಹಿಸ್ಟಮೈನ್ಸ್ ದದ್ದುಗಳ ಚಿಕಿತ್ಸೆಗೆ ತುಂಬಾ ಒಳ್ಳೆಯದು. ಇದನ್ನು ನೀವು ವೈದ್ಯರಿಂದ ಅಥವಾ ಮೆಡಿಕಲ್ ನಿಂದ ಪಡೆಯಬಹುದು. ಇದು ಹಿಸ್ಟಮೈನ್(ರಾಸಾಯನಿಕದಿಂದ ಉಂಟಾಗುವಂತಹ ಅಲರ್ಜಿ ಲಕ್ಷಣಗಳು)ನ್ನು ತಡೆಯುವುದು.

ಆಂಟಿಹಿಸ್ಟಮೈನ್ಸ್ ತುಂಬಾ ದೀರ್ಘಕಾಲ ಬರುವುದು. ದದ್ದುಗಳ ಸ್ಥಿತಿ ಮತ್ತು ಅದಕ್ಕೆ ಕಾರಣಗಳನ್ನು ತಿಳಿದುಕೊಂಡು ವೈದ್ಯರು ನಿಮಗೆ ಆಂಟಿಹಿಸ್ಟಮೈನ್ಸ್ ಸೂಚಿಸಬಹುದು.

ದೀರ್ಘಕಾಲದ ದದ್ದುಗಳಾಗಿದ್ದರೆ ಆಗ ನಿಮಗೆ ಚಿಕಿತ್ಸೆ ಅಗತ್ಯವಿರುವುದು. ಪ್ರೆಡ್ನಿಸೋನ್ ದದ್ದುಗಳ ತೀವ್ರತೆಯನ್ನು ಕಡಿಮೆ ಮಾಡುವುದು.

ಉಸಿರಾಟಕ್ಕೆ ಸಮಸ್ಯೆಯಾಗುತ್ತಲಿದ್ದರೆ ಆಗ ನೀವು ಎಪಿನೆಫ್ರಿನ್ ಆಟೋ ಇಂಜೆಕ್ಟರ್ ಬೇಕಾಗಬಹುದು. ನೀವು ಇದನ್ನು ಯಾವಾಗಲೂ ಜತೆಯಾಗಿಟ್ಟುಕೊಳ್ಳಿ.

ಇದನ್ನು ತಡೆಯುವುದು ಹೇಗೆ?

ದದ್ದುಗಳನ್ನು ತಡೆಯಲು ಮೇಲೆ ಹೇಳಿರುವಂತಹ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಉದಾಹರಣೆಗೆ ನಿಮಗೆ ನೆಲಗಡಲೆ ಅಥವಾ ಮೊಟ್ಟೆಯಿಂದ ಇದು ಬರುತ್ತಲಿದ್ದರೆ ಆಗ ನೀವು ಇದನ್ನು ಸೇವಿಸಬಾರದು. ಇದನ್ನು ಬಳಸಿರುವ ಆಹಾರ ಕೂಡ ತ್ಯಜಿಸಬೇಕು.

ಪ್ರತೀ ಸಲ ದದ್ದು ಕಾಣಿಸಿಕೊಂಡಾಗ ನೀವು ವೈದ್ಯರನ್ನು ಭೇಟಿಯಾಗಿ. ಇದನ್ನು ಭವಿಷ್ಯದಲ್ಲಿ ಬರದಂತೆ ತಡೆಯಲು ನಿಮಗೆ ಔಷಧಿ ಸೂಚಿಸಬಹುದು.

ದದ್ದುಗಳ ಪದೇ ಪದೇ ಬರುವುದನ್ನು ತಡೆಯಲು ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಕೂಡ ಮಾಡಿಕೊಳ್ಳಬಹುದು. ನಿಮಗೆ ಅಲರ್ಜಿ ಉಂಟುಮಾಡುವ ವಸ್ತುಗಳಿಂದ ದೂರವಿರಿ. ಭವಿಷ್ಯದಲ್ಲಿ ದದ್ದುಗಳು ಬರದಂತೆ ತಡೆಯಲು ನೀವು ಅಲರ್ಜಿ ನಿರೋಧಕ ತೆಗೆದುಕೊಳ್ಳಬಹುದು.

English summary

what is chronic urticaria is it life threatening

When the appearance of hives lasts for more than six weeks, sometimes until months or years, then this condition is known as chronic urticaria. In general, there are two kinds: acute or the short-lived one and long-term, which is chronic.The prime causes of chronic urticaria are autoimmunity and endocrine and autoimmune diseases.
Story first published: Tuesday, September 4, 2018, 7:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more