For Quick Alerts
ALLOW NOTIFICATIONS  
For Daily Alerts

ವಿಮಾನ ಪ್ರಯಾಣದ ಸಮಯದಲ್ಲಿ ಇದೆಲ್ಲಾ ಮುನ್ನೆಚ್ಚರಿಕೆಗಳು ನೆನಪಿರಲಿ...

|

ಇತ್ತೀಚೆಗೆ ಮುಂಬೈ-ಜೈಪುರ ನಡುವೆ ಸಂಚರಿಸುತ್ತಿದ್ದ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಬೇಕಾಗಿ ಬಂದಿತ್ತು. ಇದಕ್ಕೆ ಕಾರಣವೇನೆಂದರೆ ಮಾರ್ಗಮಧ್ಯದಲ್ಲಿ ವಾಯುವಿನ ಒತ್ತಡ ಕುಸಿದು ಹಲವಾರು ಪ್ರಯಾಣಿಕರು ಅಸ್ವಸ್ಥರಾಗಿದ್ದರು. ಸುಮಾರು ಮೂವತ್ತಾರು ಪ್ರಯಾಣಿಕರ ಮೂಗು ಮತ್ತು ಕಿವಿಗಳಿಂದ ರಕ್ತ ಸುರಿಯುತ್ತಿತ್ತು ಹಾಗೂ ಹೆಚ್ಚಿನವರಿಗೆ ಭಾರೀ ತಲೆನೋವೂ ಎದುರಾಗಿತ್ತು. ಕಾರಣ ಸ್ಪಷ್ಟ, ಚಾಲಕಸ್ಥಾನದಲ್ಲಿ ಕುಳಿತಿದ್ದ ಪೈಲಟ್ ಸಿಬ್ಬಂದಿ ಪ್ರಯಾಣಿಕರ ಸ್ಥಳದ ವಾಯುವಿನ ಒತ್ತಡವನ್ನು ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ಚಾಲೂ ಮಾಡಲೇ ಮರೆತಿದ್ದರು.

ನಾವೆಲ್ಲಾ ತಿಳಿದಿರುವಂತೆ ಭೂಮಿಯ ಮೇಲೆ ವಾಯುವಿನ ಪದರವಿದ್ದು ನೆಲಮಟ್ಟದಲ್ಲಿ ಇದರ ಒತ್ತಡ ಗರಿಷ್ಟವಿರುತ್ತದೆ. (ಸಾಗರ ಮಟ್ಟವನ್ನು ಸೊನ್ನೆ ಎಂದು ಪರಿಗಣಿಸಲಾಗುತ್ತದೆ) ಒಂದೇ ಸ್ಥಳದಲ್ಲಿ ಮೇಲೇರುತ್ತಾ ಹೋದಂತೆ ವಾಯು ವಿರಳವಾಗುತ್ತಾ ಹೋಗುತ್ತದೆ, ಅಂತೆಯೇ ವಾಯುವಿನ ಒತ್ತಡವೂ ಸಹಾ! ವಿಮಾನಗಳು ಸಾಮಾನ್ಯವಾಗಿ ಮೂವತ್ತು ಸಾವಿರ ನಲವತ್ತು ಸಾವಿರ ಅಡಿ ಮೇಲಕ್ಕೇರುತ್ತವೆ. ಈ ಎತ್ತರದಲ್ಲಿ ಅತಿ ಕಡಿಮೆ ವಾಯುವಿನ ಒತ್ತಡ ಇರುತ್ತದೆ. ಹಾಗಾಗಿ ವಿಮಾನ ಮೇಲೇರುವ ಮುನ್ನವೇ ಪ್ರಯಾಣಿಕರು ಮತ್ತು ಸಿಬ್ಬಂದಿ ಇರುವ ಸ್ಥಳವನ್ನು ನೆಲದ ಮೇಲಿದ್ದಷ್ಟೇ ವಾಯುವಿನ ಒತ್ತಡದಲ್ಲಿ ಇರುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ.

ವಿಮಾನದಲ್ಲಿ ಪ್ರಯಾಣಿಸುವಾಗ ಇದೆಲ್ಲಾ ನೆನಪಿರಲಿ...

ವಿಮಾನದಲ್ಲಿ ಪ್ರಯಾಣಿಸುವಾಗ ಇದೆಲ್ಲಾ ನೆನಪಿರಲಿ...

ನಾವು ಕುಳಿತ ನೆಲದಡಿಯಲ್ಲಿ ಸಾಮಾಗ್ರಿಗಳ ಉಗ್ರಾಣವಿದ್ದು ಈ ಭಾಗದಲ್ಲಿ ಈ ವ್ಯವಸ್ಥೆ ಇರುವುದಿಲ್ಲ. ಇದೇ ಕಾರಣಕ್ಕೆ ಸಾಮಾನುಗಳನ್ನಿರಿಸುವ ಸ್ಥಳದಲ್ಲಿ ಮಾನವರು ಇರಲೇಬಾರದು ಎಂಬ ಸ್ಪಷ್ಟ ನಿರ್ದೇಶನವಿದೆ. ಒಂದು ವೇಳೆ ಅಕಸ್ಮಾತ್ತಾಗಿ ಪ್ರಯಾಣಿಕರ ಸ್ಥಳದಲ್ಲಿಯೂ ವಾಯಿವಿನ ಒತ್ತಡ ಇಲ್ಲದೇ ಹೋದರೆ ಉಸಿರಾಟಕ್ಕೆ ಆಮ್ಲಜನಕ ಸಿಗದೇ ಹೋಗುವ ಮೂಲಕ ಮೂಗಿನಲ್ಲಿ ರಕ್ತ ಸುರಿಯುವುದು, ಉಸಿರುಗಟ್ಟುವುದು, ಮೆದುಳು ಊದಿಕೊಳ್ಳುವುದು, ಭಾರೀ ತಲೆನೋವು ಮತ್ತು ಶ್ವಾಸಕೋಶ ಸ್ಥಗಿತಗೊಳ್ಳುವ ಸಾಧ್ಯತೆಯೂ ಇದೆ.

ವಿಮಾನದಲ್ಲಿ ಪ್ರಯಾಣಿಸುವಾಗ ಇದೆಲ್ಲಾ ನೆನಪಿರಲಿ...

ವಿಮಾನದಲ್ಲಿ ಪ್ರಯಾಣಿಸುವಾಗ ಇದೆಲ್ಲಾ ನೆನಪಿರಲಿ...

ಅಷ್ಟಕ್ಕೂ ಪ್ರಯಾಣಿಕರಿರುವ ಸ್ಥಳವನ್ನು ನೆಲದಷ್ಟೇ ವಾಯುಭಾರ ಇರುವಂತೆ ಏಕೆ ಇರಿಸಬೇಕು? ಸುಮಾರು ಎಂಟು ಸಾವಿರ ಅಡಿ ಮೇಲೆ ಹಾರಾಡುತ್ತಿದ್ದಾಗ ಇಂಜಿನ್ನುಗಳಿಂದ ವಾಯುವನ್ನು ಹಾಯಿಸಿ, ತಂಪುಗೊಳಿಸಿ ನೆಲಮಟ್ಟದಲ್ಲಿರುವಷ್ಟೇ ವಾಯುಭಾರವಿರುವಂತೆ ನೋಡಿಕೊಳ್ಳಲಾಗುತ್ತದೆ. ಒಂದು ವೇಳೆ ಈ ವಾಯುವಿನಲ್ಲಿ ಆರ್ದ್ರತೆಯ ಕೊರತೆಯುಂಟಾದರೆ ಪ್ರಯಾಣಿಕರಿಗೆ ಉಸಿರಾಡಲು ವಾಯುವಿದ್ದರೂ ಇದು ತೀರಾ ಒಣದಾಗಿರುವುದ ರಿಂದ ಮೂಗಿನಿಂದ ರಕ್ತ ಸೋರುವುದು ಹಾಗೂ ಉಸಿರೆಳೆದು ಕೊಳ್ಳಲು ಕಷ್ಟವಾಗುತ್ತದೆ. ಪ್ರಯಾಣಿಕರ ಸ್ಥಳ (ಕ್ಯಾಬಿನ್) ನಲ್ಲಿ ವಾಯುಭಾರ ಕುಸಿದರೆ ದೇಹಕ್ಕೇನಾಗುತ್ತದೆ? ಮುಂದೆ ಓದಿ

ಆಮ್ಲಜನಕ ದೊರಕದೇ ಹೋಗುವುದು

ಆಮ್ಲಜನಕ ದೊರಕದೇ ಹೋಗುವುದು

ಇತ್ತೀಚಿನ ಒಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ವಿಮಾನ ಮೇಲಕ್ಕೇರಿದಾದ ಹೆಚ್ಚಿನ ಸಂಸ್ಥೆಗಳು ನೆಲಮಟ್ಟದಲ್ಲಿರುವುದಕ್ಕಿಂತ ಮುಕ್ಕಾಲು ಭಾಗದಷ್ಟೇ ವಾಯುಭಾರ ಇರುವಂತೆ ಮಾಡುತ್ತವೆ. ವಾಯುಭಾರ ಕುಸಿಯುತ್ತಿದ್ದಂತೆಯೇ ಒಳಗಿರುವ ಪ್ರಯಾಣಿಕರಿಗೆ ಸುಸ್ತು ಆವರಿಸಿ ತಲೆ ತಿರುಗುವ, ತಲೆನೋವು, ಉಸಿರಾಡಲು ಕಷ್ಟವಾಗುವುದು ಹಾಗೂ ಮೂಗಿನಿಂದ ರಕ್ತ ಸೋರಲು ಪ್ರಾರಂಭವಾಗುತ್ತದೆ. ಇವೆಲ್ಲವೂ ಉಸಿರಾಡುವ ಗಾಳಿಯಲ್ಲಿ ಆಮ್ಲಜನಕ ಇಲ್ಲದಿರುವ ಕಾರಣದಿಂದ ಎದುರಾಗುತ್ತವೆ.

ರುಚಿ ಮತ್ತು ಶ್ರವಣ ಸಂವೇದನೆ ಇಲ್ಲವಾಗುವುದು

ರುಚಿ ಮತ್ತು ಶ್ರವಣ ಸಂವೇದನೆ ಇಲ್ಲವಾಗುವುದು

ಇನೊಂದು ಸಂಶೋಧನೆಯ ಪ್ರಕಾರ, ವಿಮಾನ ಎತ್ತರದಲ್ಲಿದ್ದಾಗ ನಾಲಿಗೆಯ ರುಚಿಗ್ರಂಥಿಗಳಲ್ಲಿ ಮೂರರಲ್ಲಿ ಒಂದರಷ್ಟು ಗ್ರಂಥಿಗಳು ಸ್ತಬ್ಧವಾಗುತ್ತವೆ ಹಾಗೂ ವಾಯಿವಿನಲ್ಲಿ ಆರ್ದ್ರತೆ ಇಲ್ಲದೇ ಹೋಗುವ ಕಾರಣ ಮೂಗಿನ ಮೇಲ್ಭಾಗದಲ್ಲಿರುವ ಕುಹರ ಅಥವಾ ಸೈನಸ್ ಎಂಬ ಭಾಗ, ಕಿವಿ ಹಾಗೂ ರುಚಿಯನ್ನು ಗ್ರಹಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತವೆ. ಬ್ರಿಟಿಶ್ ಏರ್ವೇಸ್ ಮತ್ತು ಲೆಥರ್ ಹೆಡ್ ಫುಡ್ ರಿಸರ್ಚ್ ಎಂಬ ಸಂಸ್ಥೆಗಳು ನಡೆಸಿದ ಸಂಶೋಧನೆಯಲ್ಲಿ ಕ್ಯಾಬಿನ್ ಸ್ಥಳದಲ್ಲಿ ಇರುವ ಬೆಳಕು ಬೂದು ಬಣ್ಣದಲ್ಲಿದ್ದರೆ ಪ್ರಯಾಣಿಕರು ಆಹಾರದ ಸ್ವಾದವನ್ನು ಆಸ್ವಾದಿಸಲು ಸಾಧ್ಯವಾಗದೇ ಹೋಗುತ್ತದೆ.

Most Read:ನೋಡಿ ಈ ಆರು ರಾಶಿಯವರು ತುಂಬಾನೇ 'ಬುದ್ಧಿವಂತರಂತೆ'!

ನಿರ್ಜಲೀಕರಣ

ನಿರ್ಜಲೀಕರಣ

ಒಂದು ವೇಳೆ ವಿಮಾನ ಮೇಲಕ್ಕೇರಿದ ಬಳಿಕ ವಾಯುಭಾರ ಕುಸಿದರೆ ನಮ್ಮ ದೇಹದಲ್ಲಿ ಸುಮಾರು ಒಂದೂವರೆ ಲೀಟರಿನಷ್ಟು ನಿರಿನ ಕೊರತೆ ಎದುರಾಗುತ್ತದೆ. ಪರಿಣಾಮವಾಗಿ ಗಂಟಲ ಒಳಭಾಗದ ತೇವವಿರುವ ಭಾಗ, ಬಾಯಿ ಮತ್ತು ಮೂಗು ತೀರಾ ಒಣಗುತ್ತದೆ. ಇರುವ ಗಾಳಿಯನ್ನೇ ಗರಿಷ್ಟ ಪ್ರಮಾಣದಲ್ಲಿ ಪಡೆದುಕೊಳ್ಳಲು ಉಸಿರಾಟ ತೀವ್ರವಾಗುತ್ತದೆ ಹಾಗೂ ಈ ಕ್ರಿಯೆ ದೇಹದ ನೀರನ್ನು ಅತಿಯಾಗಿ ಬಳಸಿಕೊಳ್ಳುವುದರಿಂದ ಕೆಲವೇ ಕ್ಷಣಗಳಲ್ಲಿ ದೇಹದಲ್ಲಿ ನಿರ್ಜಲೀಕರಣ ಎದುರಾಗುತ್ತದೆ.

Most Read: ಒಂದೇ ಒಂದು 'ಟೊಮೆಟೊ' ಕೂದಲಿನ ಅಂದ-ಚೆಂದ ಹೆಚ್ಚಿಸುತ್ತದೆ!

ಹೊಟ್ಟೆಯುಬ್ಬರಿಕೆ ಮತ್ತು ಊತ ಕಾಣಿಸಿಕೊಳ್ಳುವುದು

ಹೊಟ್ಟೆಯುಬ್ಬರಿಕೆ ಮತ್ತು ಊತ ಕಾಣಿಸಿಕೊಳ್ಳುವುದು

ಎತ್ತರದಲ್ಲಿ ವಾಯುಭಾರದಲ್ಲಿ ಯಾವುದೇ ಬದಲಾವಣೆಯಾದರೂ ದೇಹದಲ್ಲಿ ಸಂಗ್ರಹಗೊಂಡಿದ್ದ ಅಥವಾ ಜೀರ್ಣಾಂಗಗಳಲ್ಲಿ ಉತ್ಪತ್ತಿಯಾಗಿದ್ದ ವಾಯುಗಳು ಇನ್ನಷ್ಟು ವಿಸ್ತಾರಗೊಳ್ಳಲು ಸಾಧ್ಯವಾಗುತ್ತದೆ ಹಾಗೂ ಪರಿಣಾಮವಾಗಿ ಹೊಟ್ಟೆಯುಬ್ಬರಿಕೆ, ಕರುಳುಗಳು ಸಂಕುಚಿತಗೊಂಡು ಮಲಬದ್ದತೆಯಾವುದು ಹಾಗೂ ಇತರ ಜೀರ್ಣಾಂಗಗಳ ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೇ ಒಂದೇ ಸ್ಥಳದಲ್ಲಿ ಮುದುಡಿ ಕುಳಿತಿದ್ದ ಕಾರಣ ಕಾಲುಗಳಲ್ಲಿ ಹೆಚ್ಚು ರಕ್ತ ಸಂಗ್ರಹಗೊಳ್ಳುತ್ತವೆ ಹಾಗೂ ಇದರಿಂದ ಕಾಲಿನ ನರಗಳು ಉಬ್ಬುವ deep vein thrombosis ಎಂಬ ಕಾಯಿಲೆ ಆವರಿಸುವ ಸಾಧ್ಯತೆ ದಟ್ಟವಾಗುತ್ತದೆ.

ಒಂದು ವೇಳೆ ಈ ಪರಿಸ್ಥಿತಿ ಎದುರಾದರೆ ಈ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕು?

ಒಂದು ವೇಳೆ ಈ ಪರಿಸ್ಥಿತಿ ಎದುರಾದರೆ ಈ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕು?

*ಪ್ರತಿ ಪ್ರಯಾಣದ ಪ್ರಾರಂಭದ ಮುನ್ನ ವಿಮಾನ ಆತಿಥ್ಯ ಕಾರಿಣಿಯರು ಪ್ರಯಾಣಿಕರು ತುರ್ತು ಸಂದರ್ಭದಲ್ಲಿ ನಿರ್ವಹಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡುತ್ತಾರೆ. ಸಾಮಾನ್ಯವಾಗಿ ಪ್ರತಿ ಬಾರಿಯೂ ಒಂದೇ ಬಗೆಯ ಸೂಚನೆಗಳು ಎಂದು ನಾವೆಲ್ಲಾ ಇದನ್ನು ಅಲಕ್ಷಿಸಿಬಿಡುತ್ತೇವೆ. ವಾಯುಭಾರ ಕುಸಿದಾದ ಮುಂದಿನಿಂದ ಬೀಳುವ ಆಮ್ಲಜನಕದ ಮುಖವಾಡವನ್ನು ಹೇಗೆ ಧರಿಸಬೇಕೆಂದು ಇವರು ನೀಡುವ ಸೂಚನೆಗಳನ್ನು ಪರಿಪಾಲಿಸಬೇಕಾಗುತ್ತದೆ. ಹೀಗಾದಾಗ ತಕ್ಷಣ ಮುಖವಾಡವನ್ನು ಧರಿಸಿ ಸರಾಗವಾಗಿ ಉಸಿರಾಡಬೇಕು. ಮಕ್ಕಳಿದ್ದರೆ ಮೊದಲು ತಾವು ಸ್ವತಃ ಧರಿಸಿದ ಬಳಿಕ ಮಕ್ಕಳಿಗೆ ನೆರವಾಗಬೇಕು.

ಒಂದು ವೇಳೆ ಈ ಪರಿಸ್ಥಿತಿ ಎದುರಾದರೆ ಈ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕು?

ಒಂದು ವೇಳೆ ಈ ಪರಿಸ್ಥಿತಿ ಎದುರಾದರೆ ಈ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕು?

*ಸಾಮಾನ್ಯವಾಗಿ ವಾಯುಭಾರ ಕುಸಿದ ಬಳಿಕ ದೇಹದ ತೇವಭಾಗಗಳು ಮೊದಲಾಗಿ ಒಣಗುತ್ತವೆ. ಉದಾಹರಣೆಗೆ ಮೂಗು, ಗಂಟಲು ಬಾಯಿ ಇತ್ಯಾದಿ. ಹೀಗೆ ಒಣಗಿದಾಗ ಮೂಗಿನ ಒಳಗಿನ ಅತಿ ತೆಳ್ಳಗಿರುವ ಏಕಪದರದ ಚರ್ಮ ಸುಲಭವಾಗಿ ಹರಿಯುತ್ತದೆ ಹಾಗೂ ಇಲ್ಲಿಂದ ಮೊದಲಾಗಿ ರಕ್ತ ಹರಿಯಲು ಪ್ರಾರಂಭಿಸುತ್ತದೆ. ಇದನ್ನು ತಡೆಯಲು ಮೂಗಿನೊಳಗೆ ಸಿಂಪಡಿಸಬಹುದಾದ ದ್ರವ ಔಷಧಿಯನ್ನು ಕೊಂಡೊಯ್ಯಬೇಕು ಹಾಗೂ ತಕ್ಷಣ ಸಿಂಪಡಿಸಿ ಕೊಳ್ಳಬೇಕು.

Most Read: ವಾರದ ಪ್ರಕಾರ ದೇವರ ಮಂತ್ರ ಪಠಿಸಿ- ಸಕಲ ಸಂಕಷ್ಟ ಪರಿಹಾರವಾಗುವುದು

ಒಂದು ವೇಳೆ ಈ ಪರಿಸ್ಥಿತಿ ಎದುರಾದರೆ ಈ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕು?

ಒಂದು ವೇಳೆ ಈ ಪರಿಸ್ಥಿತಿ ಎದುರಾದರೆ ಈ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಏನು ಮಾಡಬೇಕು?

*ಸತತವಾಗಿ ನೀರು ಕುಡಿಯುತ್ತಾ ದೇಹದಲ್ಲಿ ನೀರನ್ನು ಉಳಿಸಿಕೊಳ್ಳಿ. ಈ ಲೇಖನ ಉಪಯುಕ್ತವೆನಿಸಿದರೆ ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ.

English summary

What Happens To Your Body When A Plane Loses Cabin Pressure?

During flights, cabin pressure is turned on to balance the loss of oxygen that naturally occurs when a plane reaches high altitude. When the cabin pressure isn't at normal levels, the lack of oxygen at high altitude causes nosebleeds, shortness of breath, swelling of the brain, headaches, and spontaneous lung collapse.
X
Desktop Bottom Promotion