Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಅತಿಯಾಗಿ ಸೆಕ್ಸ್‌ನಲ್ಲಿ ತೊಡಗಿಕೊಂಡರೆ ಇಂತಹ 8 ಸಮಸ್ಯೆಗಳು ಕಾಡಬಹುದು!!
ಪ್ರಕೃತಿಯಲ್ಲಿರುವಂತಹ ಪ್ರತಿಯೊಂದು ಜೀವಿಯಲ್ಲೂ ಲೈಂಗಿಕತೆ ಎನ್ನುವುದು ಇದ್ದೇ ಇರುವುದು. ಹಸಿವು, ದಾಹದಂತೆ ಕಾಮ ಕೂಡ ಒಂದಾಗಿದೆ. ಪ್ರಾಣಿಗಳಲ್ಲಿ ಋತುಮಾನಕ್ಕೆ ಅನುಗುಣವಾಗಿ ಕಾಮಾಸಕ್ತಿಯು ಕೆರಳಿದರೆ ಮನುಷ್ಯನಲ್ಲಿ ಇದು ನಿತ್ಯ ನಿರಂತರ. ಸೆಕ್ಸ್ ನಿಂದಾಗಿ ದೇಹಕ್ಕೆ ಹಲವಾರು ರೀತಿಯ ಆರೋಗ್ಯ ಲಾಭಗಳೂ ಕೂಡ ಇದೆ.
ಲೈಂಗಿಕ ಕ್ರಿಯೆ ವೇಳೆ ಆಗುವಂತಹ ಚಟುವಟಿಕೆಗಳಿಂದ ದೇಹದಲ್ಲಿ ಕೆಲವೊಂದು ಹಾರ್ಮೋನುಗಳ ಬಿಡುಗಡೆಯಿಂದ ಒತ್ತಡ ನಿವಾರಣೆಯಾಗುವುದು. ಆದರೆ ದಿನನಿತ್ಯವೂ ನೀವು ಸೆಕ್ಸ್ ಮಾಡಿದರೆ ಏನಾಗುವುದು ಎಂದು ನಿಮಗೆ ತಿಳಿದಿದೆಯಾ? ಈ ಲೇಖನದಲ್ಲಿ ನಾವು ಈ ಬಗ್ಗೆ ತಿಳಿಸಿಕೊಡಲಿದ್ದೇವೆ... ಮುಂದೆ ಓದಿ..
ಅಮೆರಿಕನ್ ಸೆಕ್ಸುಲ್ ಹೆಲ್ತ್ ಅಸೋಸಿಯೇಶನ್ ನ ಪ್ರಕಾರ
ಅಮೆರಿಕನ್ ಸೆಕ್ಸುಲ್ ಹೆಲ್ತ್ ಅಸೋಸಿಯೇಶನ್ ನ ಪ್ರಕಾರ, ಸೆಕ್ಸುಲ್ ಆರೋಗ್ಯವು ರೋಗಗಳನ್ನು ತಡೆಯುವುದು ಮತ್ತು ಗರ್ಭಧಾರಣೆ ಉಂಟುಮಾಡುವುದು. ಸೆಕ್ಸ್ ಜೀವನದ ಒಂದು ಪ್ರಮುಖ ಅಂಗವೆಂದು ಪರಿಗಣಿಸಲಾಗಿದೆ. ನಿಮ್ಮ ಸಂಗಾತಿ ಜತೆಗೆ ಲೈಂಗಿಕ ಕ್ರಿಯೆ ಎಷ್ಟು ಸಲ ನಡೆಸುತ್ತೀರಿ ಎನ್ನುವುದನ್ನು ತಿಳಿದುಕೊಂಡು ನಿಮ್ಮ ಲೈಂಗಿಕ ಜೀವನವನ್ನು ಮತ್ತಷ್ಟು ಸುಗಮವಾಗಿಸಿ ಕೊಳ್ಳಬಹುದು. ಆದರೆ ಅತಿಯಾದರೆ ಅಮೃತವು ವಿಷ ಎನ್ನುವಂತೆ ಅತಿಯಾದ ಸೆಕ್ಸ್ ನಿಂದಾಗಿ ನಿಮ್ಮ ಮತ್ತು ನಿಮ್ಮ ಸಂಗಾತಿ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗಾದರೆ ಎಷ್ಟು ಸೆಕ್ಸ್ ಆರೋಗ್ಯಕಾರಿ ಎಂದು ನೀವು ಯೋಚಿಸುತ್ತಿರಬಹುದು. ಆದರೆ ಇದಕ್ಕೆ ಸ್ಪಷ್ಟವಾದ ಉತ್ತರವಿಲ್ಲ. ನಿಮ್ಮ ಸಂಗಾತಿ ಹಾಗೂ ನಿಮ್ಮ ಅವಲಂಬಿಸಿ ಎಲ್ಲವೂ ನಿರ್ಧಾರವಾಗಿದೆ. ಅದಾಗ್ಯೂ ದೇಹದಲ್ಲಿನ ಕೆಲವೊಂದು ಭಾಗವು ನೀಡುವಂತಹ ಸೂಚನೆಯು ನೀವು ಅತಿಯಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದೀರಿ ಎನ್ನುವುದರ ಸೂಚನೆಯಾಗಿದೆ. ಅತಿಯಾಗಿ ಸೆಕ್ಸ್ ಮಾಡಿದರೆ ಏನಾಗುವುದು ಎಂದು ನೀವು ತಿಳಿಯಿರಿ.
1. ಬಳಲಿಕೆ
ನೀವು ಅತಿಯಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡರೆ ಆಗ ದೇಹವು ನೊರ್ಪಿನ್ಫ್ರಿನ್, ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ನ್ನು ರಕ್ತನಾಳಗಳಿಗೆ ಬಿಡುಗಡೆ ಮಾಡುವುದು. ಇದರಿಂದ ಹೃದಯಬಡಿತ ಹೆಚ್ಚಾಗುವುದು, ಗ್ಲೂಕೋಸ್ ಚಯಾಪಚಯ ಮತ್ತು ರಕ್ತದೊತ್ತಡವು ಹೆಚ್ಚಾಗುವುದು. ನಿಯಮಿತವಾಗಿ ಇದನ್ನು ಮಾಡಿದರೆ ಆಗ ಇದು ದೇಹಕ್ಕೆ ವ್ಯಾಯಾಮದಂತೆ ಆಗುವುದು ಮತ್ತು ನಿಮಗೆ ಆಯಾಸವನ್ನು ಉಂಟು ಮಾಡುವುದು. ಅತಿಯಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡರೆ ಆಗ ಬಳಲಿಕೆಯಿಂದಾಗಿ ನಿಶ್ಯಕ್ತಿ ಕಾಡಬಹುದು.
2. ಚಟ
ಅತಿಯಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡರೆ ಆಗ ಕಂಡುಬರುವಂತಹ ಮತ್ತೊಂದು ಸಮಸ್ಯೆಯೆಂದರೆ ಚಟ. ಲೈಂಗಿಕ ಚಟ ಅಂಟಿಸಿಕೊಂಡಿರುವಂತಹ ವ್ಯಕ್ತಿಯು ತನ್ನ ಸಂಗಾತಿ ಜತೆಗಿನ ಸಂಬಂಧವನ್ನು ಮುರಿದುಕೊಳ್ಳಬಹುದು. ಯಾಕೆಂದರೆ ಸೆಕ್ಸ್ ಗೀಳು ಅಂಟಿಕೊಂಡಿರಬಹುದು ಅಥವಾ ಅಸಾಮಾನ್ಯ ಸೆಕ್ಸ್ ತೀವ್ರತೆ ಉಂಟಾಗಬಹುದು. ನಿಮ್ಮ ಸಂಗಾತಿಗೆ ಬೇಡವಿದ್ದರೂ ನೀವು ಇದನ್ನು ಬಯಸುವಿರಿ.
Most Read:ಸೆಕ್ಸ್ ಬಗೆಗಿನ ಈ ರಹಸ್ಯ ವಿಷಯಗಳು ನಿಮಗೆ ತಿಳಿದಿರಲಿಕ್ಕೆಯೇ ಇಲ್ಲ!!
3. ಶಿಶ್ನ ಊತ
ಲೈಂಗಿಕ ಕ್ರಿಯೆ ಬಳಿಕ ಕೆಲವು ಪುರುಷರ ಶಿಶ್ನದಲ್ಲಿ ಕೆಲವು ಸೆಕೆಂಡುಗಳ ಕಾಲ ಕಾಣಿಸಿಕೊಳ್ಳುವಂತಹ ನೋವು ಸಾಮಾನ್ಯವಾಗಿರುವುದು. ಅತಿಯಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದರೆ ಆಗ ಸ್ವ ಉತ್ತೇಜನ ಮತ್ತು ಒತ್ತಾಯ ಪೂರ್ವಕವಾಗಿ ಸ್ಖಲನ ಮಾಡುವುದರಿಂದ ಶಿಶ್ನದಲ್ಲಿ ಊತ ಕಾಣಿಸಿಕೊಳ್ಳುವುದು. ಶಿಶ್ನವು ಕೆಲವು ಗಂಟೆಗಳು ಅಥವಾ ಕೆಲವು ದಿನಗಳ ಕಾಲ ಊದಿಕೊಂಡಿದ್ದರೆ ಆಗ ವೃಷಣ, ಪ್ರಾಸ್ಟೇಟ್, ವೃಷಣನಾಳಸುರುಳಿಯಲ್ಲಿ ಸೋಂಕು ಉಂಟಾಗಿರುವ ಸಾಧ್ಯತೆಯಿದೆ ಮತ್ತು ಇದು ಲೈಂಗಿಕ ರೋಗಕ್ಕೆ ಕಾರಣವಾಗ ಬಹುದು.
4. ತರುಚುವಿಕೆ ಅಥವಾ ಸುಟ್ಟಂತಾಗುವುದು
ನಿಮ್ಮ ಸಂಗಾತಿಯು ಗಡಸು ಸೆಕ್ಸ್ ಬಯಸುತ್ತಿದ್ದರೆ ಆಗ ನೀವು ದಿನನಿತ್ಯವು ಹೀಗೆ ಮಾಡುವುದರಿಂದ ತಿಕ್ಕಾಟದಿಂದ ಬರುವಂತಹ ಉಷ್ಣತೆಯಿಂದಾಗಿ ಚರ್ಮವು ಸುಟ್ಟು ಹೋಗಬಹುದು. ಇದು ನಿಮಗೆ ಅಸಮಾಧಾನ ಉಂಟು ಮಾಡಬಹುದು ಮತ್ತು ಕೆಲವೊಂದು ಭಂಗಿಯಲ್ಲಿ ನಿಮಗೆ ಸೆಕ್ಸ್ ನಡೆಸಲು ಸಾಧ್ಯವಾಗದೆ ಇರಬಹುದು. ಜನನೇಂದ್ರೀಯದ ಸುತ್ತ ತರುಚಿದ ಚರ್ಮವನ್ನು ಯಾರು ಬಯಸಲ್ಲ.
5. ಮಹಿಳೆಯರಲ್ಲಿ ಉರಿಯೂತ ಮತ್ತು ಊತ
ಮಹಿಳೆಯರಲ್ಲಿ ಅತಿಯಾದ ಸೆಕ್ಸ್ ನಿಂದಾಗಿ ಯೋನಿಯ ಉಜ್ಜುವಿಕೆಯು ಉಂಟಾಗಬಹುದು. ನುಗ್ಗುವಿಕೆ ವೇಳೆ ಯೋನಿಯ ಚರ್ಮಕ್ಕೆ ಹಾನಿಯಾಗುವುದು ಇದಕ್ಕೆ ಕಾರಣವಾಗಿದೆ. ಸೆಕ್ಸ್ ವೇಳೆ ಅತಿಯಾದ ನುಗ್ಗುವಿಕೆ ಉಂಟಾದರೆ ಆಗ ಯೋನಿಯ ಗೋಡೆಗಳಿಗೆ ಹಾನಿಯಾಗಿ ಮೂತ್ರವಿಸರ್ಜನೆಗೆ ಸಮಸ್ಯೆಯಾಗಬಹುದು ಮತ್ತು ಊತ ಉಂಟಾಗಿ ನಡೆದಾಡಲು ಕಷ್ಟವಾಗಬಹುದು.
6. ಮಧ್ಯದಲ್ಲೇ ಆಸಕ್ತಿ ಕಳೆದುಕೊಳ್ಳುವುದು
ಸೆಕ್ಸ್ ಎನ್ನುವುದು ನಿಮ್ಮನ್ನು ತುಂಬಾ ಚಟುವಟಿಕೆಯಿಂದ ಕೂಡಿಡುವಂತೆ ಮಾಡುವುದು. ಇದು ಅತಿಯಾದರೆ ಆಗ ಮಧ್ಯದಲ್ಲೇ ನಿಮಗೆ ಆಸಕ್ತಿ ಕುಂದಬಹುದು. ಅದರಲ್ಲೂ ದಿನನಿತ್ಯವು ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ. ಯಾಕೆಂದರೆ ದೇಹವು ದೈನಂದಿನ ಸೆಕ್ಸ್ ನಿಂದ ಬಸವಳಿದಿರುವುದು ಮತ್ತು ಅದಕ್ಕೆ ವಿಶ್ರಾಂತಿ ಬೇಕಾಗಿರುವುದು.
Most Read:ಪ್ರತಿ ಮಹಿಳೆಯೂ ತನ್ನ ಪುರುಷನ ಬಗ್ಗೆ ಖಂಡಿತವಾಗಿಯೂ ತಿಳಿದಿರಬೇಕಾದ 5 ಸೆಕ್ಸ್ ರಹಸ್ಯಗಳು
7. ಬೆನ್ನಿನ ಕೆಳಭಾಗದಲ್ಲಿ ನೋವು
ನೀವು ಅತಿಯಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡರೆ ಆಗ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಕೆಲವೊಂದು ಸಲ ನಿಮ್ಮ ಹಠಾತ್ ಚಲನೆಯಿಂದಲೂ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಆದರೆ ಈ ಹಠಾತ್ ಚಲನೆಯು ಅತಿಯಾದರೆ ಆಗ ಬೆನ್ನಿನ ಕೆಳಭಾಗದ ನೋವು ದೀರ್ಘವಾಗುವುದು.
8. ಯುಟಿಐ ತಗಲುವ ಅಪಾಯ
ಲೈಂಗಿಕವಾಗಿ ಹೆಚ್ಚು ಕ್ರಿಯಾತ್ಮಕವಾಗಿರುವಂತಹ ಮಹಿಳೆಯರಲ್ಲಿ ಲೈಂಗಿಕವಾಗಿ ಹೆಚ್ಚು ಕ್ರಿಯಾತ್ಮವಾಗಿರದ ಮಹಿಳೆಯರಿಗಿಂತ ಬೇಗನೆ ಲೈಂಗಿಕ ರೋಗಗಳು ಕಾಣಿಸಿಕೊಳ್ಳುವುದು. ಪ್ರತಿನಿತ್ಯವು ಬೇರೆ ಬೇರೆ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಆಗ ಯುಟಿಐ ಬರುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಲೈಂಗಿಕ ಕ್ರಿಯೆಯಿಂದಾಗಿ ಮಹಿಳೆಯ ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾವು ಹೋಗುವುದು. ಇದು ಯುಟಿಐಗೆ ಕಾರಣವಾಗಬಹುದು. ನಿಮಗೆ ಈ ಲೇಖನವು ಇಷ್ಟವಾಗಿದ್ದರೆ ಶೇರ್ ಮಾಡಲು ಮರೆಯಬೇಡಿ.