For Quick Alerts
ALLOW NOTIFICATIONS  
For Daily Alerts

ಹಾವು ಕಚ್ಚಿದರೆ ತಕ್ಷಣಕ್ಕೆ ಏನ್ ಮಾಡಬೇಕು? ಪ್ರಥಮ ಚಿಕಿತ್ಸೆ ಏನು?

|

ಹಾವುಗಳನ್ನು ನೋಡಿದರೆ ಭಯ ಪಡದೇ ಇರುವಂತಹವರು ತುಂಬಾ ಕಡಿಮೆ. ಹಾವುಗಳ ಲೋಕವನ್ನು ತಿಳಿದುಕೊಂಡಿರುವವರಿಗೆ ಇದರಿಂದ ಭಯವಾಗದೆ ಇದ್ದರೂ ಕೆಲವೊಂದು ಸಲ ಹಾವು ಕಡಿತದಿಂದಾಗಿ ತುಂಬಾ ನೋವು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಇದರಿಂದ ಕಡಿದಿರುವಂತಹ ಹಾವು ವಿಷಕಾರಿಯೇ ಅಥವಾ ನಿರ್ವಿಷವಾಗಿರುವುದೇ ಎಂದು ತಿಳಿಯುವುದು ಅತೀ ಅಗತ್ಯ. ಇದನ್ನು ತಿಳಿದುಕೊಂಡರೆ ಆಗ ಹಾವು ಕಡಿತದಿಂದಾಗಿ ಉಂಟಾಗುವಂತಹ ಪ್ರಾಣಹಾನಿಯನ್ನು ಒಂದು ಹಂತದಲ್ಲಿ ತಪ್ಪಿಸಬಹುದಾಗಿದೆ.

ಹಾವು ಕಡಿತದ ವಿಧಗಳು

ಹಾವು ಕಡಿತದ ವಿಧಗಳು

ಹಾವು ನಿಮ್ಮನ್ನು ಕಡಿದರೆ ಆಗ ಹಾವು ಕಡಿತದ ಗಾಯವು ಕಾಣಿಸುವುದು. ತಾಂತ್ರಿಕವಾಗಿ ಹಾವು ಕಡಿತವನ್ನು ಈ ವಿಧಗಳಿಂದ ವಿಂಗಡಿಸಲಾಗಿದೆ.

ಒಣ ಕಡಿತ

ವಿಷಕಾರಿ ಹಾವು ಕಡಿದಾಗ ಯಾವುದೇ ರೀತಿಯ ವಿಷವನ್ನು ಹೊರಹಾಕದೆ ಇದ್ದರೆ ಇದನ್ನು ಒಣ ಕಡಿತವೆಂದು ಕರೆಯಲಾಗುವುದು. ಹಾವುಗಳ ಜಾತಿಗೆ ಅನುಗುಣವಾಗಿ ಒಣ ಕಡಿತದ ಪರಿಣಾಮವು ಅವಲಂಬಿಸಿರುವುದು. ಹಲ್ಲಿನ ಗುರುರುತಗಳು ಮತ್ತು ವಿಷದ ಹಲ್ಲುಗಳಿಂದ ಇದನ್ನು ಗುರುತಿಸಲಾಗುವುದು. ಆದರೆ ಯಾವುದೇ ವಿಷವು ಇದರಲ್ಲಿ ಇರಲ್ಲ. ಅದಾಗ್ಯೂ, ಹಾನಿಕಾರವಲ್ಲದ ಹಾವು ಕಡಿದಿದೆಯಾ ಎಂದು ತಿಳಿಯಬೇಕು. ಹಾವು ಕಡಿತದಿಂದಾಗಿ ಸೋಂಕು ಉಂಟಾಗುವಂತಹ ಸಾಧ್ಯತೆಯು ಹೆಚ್ಚಾಗಿರುವುದು.

ವಿಷಪೂರಿತ ಕಡಿತ

ವಿಷಪೂರಿತ ಕಡಿತ

ಹಾವು ಕಡಿದಾಗ ಅದು ವಿಷವನ್ನು ಹೊರಹಾಕಿದರೆ, ಇದು ವಿಷಪೂರಿತ ಕಡಿತವೆಂದು ಹೇಳಲಾಗುತ್ತದೆ. ಇದು ನೋವು ಉಂಟು ಮಾಡಿ, ಬಳಿಕ ಊತ ಕಾಣಿಸಿಕೊಳ್ಳುವುದು. ವಿಷಪೂರಿತ ಕಡಿತಕ್ಕೆ ಚಿಕಿತ್ಸೆ ನೀಡದೆ ಇದ್ದರೆ ಲಕ್ಷಣಗಳು ಮತ್ತಷ್ಟು ಹದಗೆಡಬಹುದು. ಇದರಲ್ಲಿನ ಕೆಲವೊಂದು ಲಕ್ಷಣಗಳಲ್ಲಿ ವಾಕರಿಕೆ, ಸೆಳೆತ ಮತ್ತು ಪಾರ್ಶ್ವವಾಯು ಉಂಟಾಗಬಹುದು. ಯಾವ ಜಾತಿಯ ಹಾವು ಕಡಿದಿದೆ ಎನ್ನುವ ಮೇಲೆ ಹಾವಿನ ಕಡಿತದ ಲಕ್ಷಣಗಳು ಅವಲಂಬಿಸಿದೆ.

ವಿಷಪೂರಿತ ಹಾವು ಕಡಿತದ ಸಾಮಾನ್ಯ ಲಕ್ಷಣಗಳು

ವಿಷಪೂರಿತ ಹಾವು ಕಡಿತದ ಸಾಮಾನ್ಯ ಲಕ್ಷಣಗಳು

ಹಾವು ಕಡಿತವಾಗಿರುವಂತಹ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು. ಇದರೊಂದಿಗೆ ಆಸ್ಪತ್ರೆಗೆ ಕೊಂಡೊಯ್ಯುವ ಮೊದಲು ಕೆಲವೊಂದು ಪ್ರಥಮ ಚಿಕಿತ್ಸೆ ಕೂಡ ಮಾಡಬೇಕು.

* ಕಡಿತಕ್ಕೊಳಗಾಗಿರುವ ವ್ಯಕ್ತಿಯ ಚಟುವಟಿಕೆ ನಿಯಂತ್ರಿಸಿ. ಆತ ಅಥವಾ ಆಕೆ ತುಂಬಾ ಶಾಂತವಾಗಿರಲು ಹೇಳಿ ಮತ್ತು ಇದರ ಬಗ್ಗೆ ಭೀತಿ ಪಡಬಾರದು. ವ್ಯಕ್ತಿಯು ಭಯಭೀತಗೊಂಡರೆ ಆಗ ಹೃದಯಬಡಿತವು ಹೆಚ್ಚಾಗುವುದು ಮತ್ತು ವಿಷವು ಬೇಗನೆ ದೇಹದೆಲ್ಲೆಡೆ ಬೇಗನೆ ಪಸರಿಸುವುದು.

* ಕಡಿತಕ್ಕೊಳಗಾಗಿರುವ ಜಾಗವು ಬೇಗನೆ ಊದಿಕೊಳ್ಳುವುದು. ಇದರಿಂದ ಉಂಗುರ, ಬ್ರಾಸ್ಲೆಟ್ ಇತ್ಯಾದಿಗಳಿದ್ದರೆ ತೆಗೆಯಿರಿ.

* ಕಡಿತದ ಜಾಗ ಅಥವಾ ಗಾಯವನ್ನು ಮುಚ್ಚಬೇಡಿ. ನಂಜುನಿರೋಧಕ ಬಳಸಿ ಇದನ್ನು ಸ್ವಚ್ಛಗೊಳಿಸಿ.

* ದುಗ್ದನಾಳವು ವಿಷ ಪಸರಿಸುವುದನ್ನು ನೀವು ನಿಲ್ಲಿಸಬೇಕು. ಈ ಭಾಗಕ್ಕೆ ಗಟ್ಟಿಯಾಗಿ ಬ್ಯಾಂಡೇಜ್ ಕಟ್ಟಿ, ಪ್ರದೇಶವನ್ನು ನಿಶ್ಚಲವಾಗಿಸಿ. ಕೈ ಅಥವಾ ಕಾಲಿನ ಭಾಗಕ್ಕೆ ಕಡಿದಿದ್ದರೆ ಆಗ ಸ್ಪ್ಲಿಂಟ್ ಬಳಸಿಕೊಂಡು ಈ ಭಾಗ ನಿಶ್ಚಲವಾಗಿಸಿ. ಕಡಿತದ ಭಾಗವನ್ನು(ಕೈಯಾಗಿದ್ದರೆ) ಆಗ ಹೃದಯದ ಮಟ್ಟದಲ್ಲಿಡಿ. ಇದರಿಂದ ವಿಷವು ಬೇರೆ ಭಾಗಕ್ಕೆ ಹರಡುವುದು ತಪ್ಪುವುದು.

* ಸ್ಪ್ಲಿಂಟ್ ನೊಂದಿಗೆ ನೀವು ಸಂಕೋಚನ ಬ್ಯಾಂಡೇಜ್ ನಿಂದ ಸಂಪೂರ್ಣ ಭಾಗವನ್ನು ಸುತ್ತುವರಿಯಿರಿ. ಇದನ್ನು ನೀವು ತುಂಬಾ ಬಿಗಿಯಾಗಿ ಕಟ್ಟಿಕೊಳ್ಳಿ. ಕೈಯ ಭಾಗದಲ್ಲಿ ಕಡಿತವಾಗಿದ್ದರೆ ಆಗ ನೀವು ಬ್ಯಾಂಡೇಜ್ ನ್ನು ಕಂಕುಳಿನ ತನಕ ಬಿಗಿಯಾಗಿ ಕಟ್ಟಿಕೊಳ್ಳಿ. ಕಾಲಿನ ಭಾಗಕ್ಕೆ ಕಡಿತವಾಗಿದ್ದರೆ ಆಗ ತೊಡೆಸಂಧಿನ ತನಕ ಕಟ್ಟಿಕೊಳ್ಳಿ.

* ಕಡಿತಕ್ಕೊಳಗಾಗಿರುವ ವ್ಯಕ್ತಿ ಚಯಾಪಚಯವನ್ನು ತಗ್ಗಿಸಬೇಕು. ಇದರಿಂದ ಯಾವುದೇ ಆಹಾರ ಅಥವಾ ಪಾನೀಯ ನೀಡಬಾರದು.

* ಸಾಧ್ಯವಾದರೆ ಕಡಿತಗೊಳಗಾದ ಐದು ನಿಮಿಷದೊಳಗಡೆ ನೀವು ಹೀರಿಕೊಳ್ಳುವ ಯಂತ್ರ ಬಳಸಿ ವಿಷ ಹೊರತೆಗೆಯಿರಿ.

 ಹಾವು ಕಡಿತದ ಬಳಿಕ ದೇಹಕ್ಕೆ ಏನಾಗುವುದು?

ಹಾವು ಕಡಿತದ ಬಳಿಕ ದೇಹಕ್ಕೆ ಏನಾಗುವುದು?

ಹಾವಿನ ಕಡಿತದ ಬಳಿಕ ದೇಹವನ್ನು ಸೇರಿಕೊಂಡಿರುವ ವಿಷವು ಹೆಮೊಟಾಕ್ಸಿಕ್ ವಿಷವಾಗಿದ್ದರೆ ಆಗ ಕಡಿತಗೊಳಗಾದ ವ್ಯಕ್ತಿಯ ರಕ್ತದೊತ್ತಡವು ಹೆಚ್ಚುವುದು ಮತ್ತು ರಕ್ತ ಹೆಪ್ಪುಗಟ್ಟಬಹುದು. ಇನ್ನೊಂದು ಕಡೆಯಲ್ಲಿ ಸೈಟೊಟಾಕ್ಸಿಕ್ ವಿಷವು ಮನುಷ್ಯನ ದೇಹದ ಅಂಗಾಂಗಗಳಿಗೆ ಹಾನಿಯುಂಟು ಮಾಡುವುದು. ನ್ಯುರೋಟಾಕ್ಸಿಕ್ ವಿಷವು ಮೆದುಳು ಮತ್ತು ನರವ್ಯವಸ್ಥೆಯ ಕಾರ್ಯಚಟುವಟಿಕೆಯನ್ನು ನಿಲ್ಲಿಸಿಬಿಡುವುದು.

Most Read:ಅಕಾಲಿಕ ಕೂದಲು ಬಿಳಿಯಾಗುವುದಕ್ಕೆ ಕರ್ಪೂರದ ಚಿಕಿತ್ಸೆ

ಹಾವು ಕಡಿತದ ತೊಡಕುಗಳೇನು?

ಹಾವು ಕಡಿತದ ತೊಡಕುಗಳೇನು?

ಪ್ರಮುಖವಾಗಿ ಕೇಳಿಬಂದಿರುವ ತೊಡಕೆಂದರೆ ಪಿಟ್ ಪೈಪರ್ ಹಾವು ಕಡಿದರೆ ಆಗ ಕೊಗುಲೊಪಥಿ ವಿಳಂಬವಾಗುವುದು. ಕಡಿತದ ಜಾಗವು ಸೋಂಕಿಗೆ ಒಳಗಾಗಬಹುದು ಮತ್ತು ಕಡಿತದ ಸುತ್ತಲಿನ ಚರ್ಮವು ಎದ್ದುಬರಬಹುದು. ತುಂಬಾ ಅಪರೂಪದಲ್ಲಿ ಹಾವು ಕಡಿತದಿಂದಾಗಿ ರಕ್ತದ ಸಮಸ್ಯೆಗಳು, ಹೃದಯದ ಕಾಯಿಲೆಗಳು ಕಾಣಿಸಬಹುದು.

ಚಿಕಿತ್ಸೆ ಆಯ್ಕೆಗಳು

ಚಿಕಿತ್ಸೆ ಆಯ್ಕೆಗಳು

ಹಾವಿನ ವಿಷವು ಬೇಟೆಯನ್ನು ಕೊಂದು ಅದನ್ನು ಜೀರ್ಣಿಸಿಕೊಳ್ಳುವಂತಹ ಜೊಲ್ಲು ಸ್ರವಿಸುವಿಕೆಯನ್ನು ಹೊಂದಿದೆ. ತಾಂತ್ರಿಕವಾಗಿ ಎರಡು ವಿಧದ ಹಾವಿನ ವಿಷಗಳು ಇವೆ. ಮೊದಲನೇ ವಿಧದ್ದು ನರಗಳ ಮೇಲೆ ಪರಿಣಾಮ ಬೀರುವುದು(ಸಾಮಾನ್ಯ ಕಟ್ಟುಹಾವು ಅಥವಾ ನಾಗರಹಾವು). ಎರಡನೇ ವಿಧದ್ದು ನೇರವಾಗಿ ರಕ್ತವನ್ನು ಸೇರಿಕೊಳ್ಳುವುದು (ಮಂಡಲಹಾವುಗಳು). ನಿಮ್ಮ ಜತೆಗಿದ್ದವರಿಗೆ ಹಾವು ಕಡಿದರೆ ಆಗ ಭಯಭೀತರಾಗಬೇಡಿ. ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ವಿಷನಿರೋಧಕ ಚುಚ್ಚುಮದ್ದು ತೆಗೆದುಕೊಳ್ಳಿ.

ಇನ್ನು ಕೆಲವೊಂದು ಹಾವುಗಳ ವಿಷವು ಅಧಿಕವಾಗಿರುವ ಕಾರಣದಿಂದ ತಕ್ಷಣ ಸಾವು ಸಂಭವಿಸುತ್ತದೆ. ಒಂದು ವೇಳೆ ಯಾವ ಹಾವು ಕಚ್ಚಿದೆ ಎಂದು ಸರಿಯಾಗಿ ತಿಳಿದಿದ್ದರೆ ಈ ಮದ್ದನ್ನು ಬಳಸಬಹುದು. ಎಲ್ಲಕ್ಕಿಂತ ಮೊದಲು ಹಾವು ಕಚ್ಚಿದಾಗ ಪ್ರಥಮ ಚಿಕಿತ್ಸೆ ಅಗತ್ಯವಾಗಿ ಬೇಕೇಬೇಕು.. ತದನಂತರ ಯಾವ ಚಿಕಿತ್ಸೆ ಮಾಡಬಹುದು? ಇಲ್ಲಿದೆ ನೋಡಿ ಉತ್ತರ...
ಹಾವು ಕಚ್ಚಿದ ಸಂದರ್ಭದಲ್ಲಿ ಮೊದಲು ಮಾಡುವ ಕೆಲಸ

ಹಾವು ಕಚ್ಚಿದ ಸಂದರ್ಭದಲ್ಲಿ ಮೊದಲು ಮಾಡುವ ಕೆಲಸ

ಹಾವು ಕಚ್ಚಿದ ಸಂದರ್ಭದಲ್ಲಿ ಕಚ್ಚಿದ ಜಾಗಕ್ಕೆ ಯಾವುದಾದರೂ ಚಾಕುವಿಂದ ಸ್ವಲ್ಪ ಗಾಯವನ್ನು ದೊಡ್ಡದು ಮಾಡಿ ವಿಷವನ್ನು ಹೊಂದಿರುವ ರಕ್ತವನ್ನು ಹೊರಹಾಕಬೇಕು. ಇದರ ಬಳಿಕ ಪೊಟಾಶಿಯಂ ಪಾರಾಗ್ನೆಟ್ ಹುಡಿಯನ್ನು ಹಾಕಿಕೊಳ್ಳಿ. ಹಿಂದಿನ ಕಾಲದಲ್ಲಿ ಹಾವು ಕಚ್ಚಿದಾಗ ಗಾಯಕ್ಕೆ ಬಾಯಿ ಹಾಕಿ ವಿಷವನ್ನು ಹೀರಿ ತೆಗೆಯಲಾಗುತ್ತಾ ಇತ್ತು. ಆದರೆ ವಿಷ ಹೀರುವವರಿಗೆ ಇದು ಅಪಾಯಕಾರಿ. ಬೆಟ್ಟ ಪ್ರದೇಶದಲ್ಲಿರುವ ಕೆಲವು ತಜ್ಞರು ಈಗಲೂ ಇದೇ ತಂತ್ರವನ್ನು ಅನುಸರಿಸುತ್ತಾರೆ.

5-8 ಇಂಚು ಮೇಲಕ್ಕೆ ಹಾಗೂ ಕೆಳಕ್ಕೆ ಬಟ್ಟೆಯಿಂದ ಬಲವಾಗಿ ಕಟ್ಟಿ

5-8 ಇಂಚು ಮೇಲಕ್ಕೆ ಹಾಗೂ ಕೆಳಕ್ಕೆ ಬಟ್ಟೆಯಿಂದ ಬಲವಾಗಿ ಕಟ್ಟಿ

ಹಾವು ಕಡಿದ ಜಾಗದಿಂದ ವಿಷವನ್ನು ತೆಗೆದ ಬಳಿಕ ಕಡಿದ ಜಾಗಕ್ಕಿಂತ 5-8 ಇಂಚು ಮೇಲಕ್ಕೆ ಹಾಗೂ ಕೆಳಕ್ಕೆ ಬಟ್ಟೆ ಅಥವಾ ಹಗ್ಗದಿಂದ ದೇಹದ ಭಾಗವನ್ನು ಬಲವಾಗಿ ಕಟ್ಟಿ. ಇದರಿಂದ ವಿಷವು ದೇಹಕ್ಕೆ ಹರಡುವುದು ತಪ್ಪುತ್ತದೆ.

ಮನೆಯಲ್ಲೇ ತಯಾರಿಸಿದ ಅಪ್ಟಟ ತುಪ್ಪ

ಮನೆಯಲ್ಲೇ ತಯಾರಿಸಿದ ಅಪ್ಟಟ ತುಪ್ಪ

ಮನೆಯಲ್ಲೇ ತಯಾರಿಸಿದ ತುಪ್ಪ, ಬೆಣ್ಣೆ ಅಥವಾ ಫಿಟ್ಕರಿ/ ಅಲಮ್ ಹುಡಿಯನ್ನು ಹಾಕಿದರೆ ವಿಷದ ಪ್ರಭಾವವು ಕಡಿಮೆಯಾಗುವುದು. 50 ಗ್ರಾಂ ದೇಶೀಯ ತುಪ್ಪಕ್ಕೆ 2-3 ಗ್ರಾಂ ಫಿಟ್ಕರಿ ಹುಡಿಯನ್ನು ಬೆರೆಸಿ ಹಾವು ಕಡಿದ ಜಾಗಕ್ಕೆ ಹಚ್ಚಿಕೊಳ್ಳಿ.

ಅಶ್ವತ್ಥ ವೃಕ್ಷದ ಎಲೆಗಳು...

ಅಶ್ವತ್ಥ ವೃಕ್ಷದ ಎಲೆಗಳು...

ಹಾವು ಕಡಿದಿರುವುದಕ್ಕೆ ಚಿಕಿತ್ಸೆ ನೀಡಲು ಅಶ್ವತ್ಥ ಮರವು ತುಂಬಾ ಪರಿಣಾಮಕಾರಿ. 40ರಿಂದ ಅಶ್ವತ್ಥ ವೃಕ್ಷದ ಎಲೆಗಳನ್ನು ತೆಗೆದುಕೊಂಡು ಒಂದರ ಹಿಂದೆ ಒಂದರಂತೆ ನಿಮ್ಮ ಎರಡೂ ಕಿವಿಗೂ ಇಟ್ಟುಕೊಳ್ಳಿ. ಎಲೆಯ ಕಾಂಡವನ್ನು ಹಾವು ಕಚ್ಚಿದ ಜಾಗಕ್ಕೆ ಇಟ್ಟುಬಿಡಿ. ಇದರಿಂದ ವಿಷದ ಪರಿಣಾಮವು ಕಡಿಮೆಯಾಗುವುದು.

Most Read:ದೇಹದ ಇಂತಹ ಜಾಗದಲ್ಲಿ ಮಚ್ಚೆಗಳಿದ್ದರೆ ಮದುವೆ ಬಳಿಕ ಅದೃಷ್ಟವೇ ಬದಲಾಗಲಿದೆ!

ಆಹಾರದಲ್ಲಿ ಉಪ್ಪನ್ನು ಸೇರಿಸಬೇಡಿ

ಆಹಾರದಲ್ಲಿ ಉಪ್ಪನ್ನು ಸೇರಿಸಬೇಡಿ

ಸಂಪೂರ್ಣವಾಗಿ ಚೇತರಿಸಿಕೊಳ್ಳುವ ತನಕ ಆಹಾರದಲ್ಲಿ ಉಪ್ಪನ್ನು ಸೇರಿಸಬೇಡಿ. ನಿರ್ಗುಂಡಿ ಹಸಿರು ಎಲೆಯನ್ನು ಹಾವು ಕಡಿದ ಜಾಗಕ್ಕೆ ಇಟ್ಟುಕೊಂಡರೆ ಅದರಿಂದ ಸೋಂಕು ಕಡಿಮೆಯಾಗುವುದು.

ಕರಿಬೇವಿನ ಎಲೆಗಳು

ಕರಿಬೇವಿನ ಎಲೆಗಳು

ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕರಿಬೇವಿನ ಎಲೆಗಳಿಂದ ಚಿಕಿತ್ಸೆ ಮಾಡಬಹುದು. ಯಾವುದೇ ಆಹಾರದ ರುಚಿಯನ್ನು ಹೆಚ್ಚಿಸುವ ಕರಿಬೇವಿನ ಗಂಜಿಯಿಂದ ವಿಷವನ್ನು ತೆಗೆಯಬಹುದು ಮತ್ತು ಹಾವು ಕಡಿತಕ್ಕೆ ಚಿಕಿತ್ಸೆ ನೀಡಬಹುದು.

ಎಚ್ಚರಿಕೆಯ ಸಲಹೆಗಳು

ಎಚ್ಚರಿಕೆಯ ಸಲಹೆಗಳು

ಹಾವು ಕಚ್ಚಿದಂತಹ ಸಂದರ್ಭದಲ್ಲಿ ಆದಷ್ಟು ಬೇಗ ವೈದ್ಯಕೀಯ ನೆರವನ್ನು ಪಡೆಯಲು ಪ್ರಯತ್ನಿಸಿ. ಇದರಿಂದ ಪ್ರಾಣಾಪಾಯ ಕಡಿಮೆಯಾಗುವುದು. ಆದಷ್ಟು ಬೇಗನೆ ಹಾವು ಕಡಿದ ವ್ಯಕ್ತಿಗೆ ಆಂಟಿವಿನಿನ್ ನೀಡಬೇಕು. ಮೇಲೆ ಸೂಚಿಸಿದ ಚಿಕಿತ್ಸಾ ಕ್ರಮಗಳು ಪ್ರಥಮ ಚಿಕಿತ್ಸೆ ಮತ್ತು ಸ್ವಲ್ಪ ವಿಷವಿರುವ ಹಾವುಗಳು ಕಡಿದಾಗ ಬಳಸಿ ಕೊಳ್ಳಬಹುದು. ಹೆಚ್ಚು ವಿಷವಿರುವ ಹಾವುಗಳ ಕಡಿತಕ್ಕೆ ಅಲ್ಲ.

English summary

What To Do If A Snake Bites You?

Most of us are scared of snakes or at least at some point in our life would have come across a situation where the thought of a snakebite might have left us with goosebumps. It is, therefore, extremely important to be aware of the types of snakebites (poisonous, non-poisonous) and what you should be doing so that you can eliminate any life-threatening hazards arising out of a snakebite episode.
X
Desktop Bottom Promotion