For Quick Alerts
ALLOW NOTIFICATIONS  
For Daily Alerts

ಒಂದೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕರಗಿಸಬಲ್ಲ ಶಕ್ತಿ ಲಿಂಬೆ ಹಣ್ಣಿನಲ್ಲಿದೆ!

By Hemanth
|

ಹಣ್ಣುಗಳ ಸಾಲಿನಲ್ಲಿ ತುಂಬಾ ಸಣ್ಣ ಗಾತ್ರ ಹೊಂದಿದ್ದರೂ ಹಲವಾರು ರೀತಿಯ ಆರೋಗ್ಯ ಲಾಭಗಳನ್ನು ಹೊಂದಿರುವಂತಹ ಲಿಂಬೆಯು ತೂಕ ಹಾಗೂ ಕೊಬ್ಬು ಇಳಿಸಲು ತುಂಬಾ ಪರಿಣಾಮಕಾರಿ. ಇದರಲ್ಲಿ ಇರುವಂತಹ ಉನ್ನತ ಮಟ್ಟದ ಆಮ್ಲೀಯ ಗುಣ ಮತ್ತು ವಿಟಮಿನ್ ಸಿಯು ಚಯಾಪಚಯವನ್ನು ಉತ್ತೇಜಿಸಿ, ಜೀರ್ಣಕ್ರಿಯೆ ಸುಧಾರಿಸಿ, ಕೊಬ್ಬು ಮತ್ತು ವಿಷಕಾರಿ ಸಕ್ಕರೆ ಹೀರುವಿಕೆ ಕಡಿಮೆ ಮಾಡುವುದು. ಇದರಿಂದ ಒಂದೇ ವಾರದಲ್ಲಿ ನೀವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿ, ಬೊಜ್ಜು ಇಳಿಸಲು ನೆರವಾಗುವುದು. ಇದು ಹೇಗೆ ಎಂದು ನೀವು ಲೇಖನದಲ್ಲಿ ತಿಳಿಯಿರಿ.

1. ಲಿಂಬೆ ರಸ ಮತ್ತು ಜೇನುತುಪ್ಪ

1. ಲಿಂಬೆ ರಸ ಮತ್ತು ಜೇನುತುಪ್ಪ

ಜೇನುತುಪ್ಪದ ಪ್ರಮುಖ ಲಾಭವೆಂದರೆ ಇದು ಉನ್ನತ ಮಟ್ಟದ ಪೋಷಕಾಂಶಗಳನ್ನು ದೇಹಕ್ಕೆ ಒದಗಿಸುವುದು ಮತ್ತು ತುಂಬಾ ಸುರಕ್ಷಿತ ಕೂಡ. ಇದು ನೀವು ಭಾವಿಸಿದಂತೆ ಸಕ್ಕರೆ ಮಟ್ಟವು ಜಮೆಯಾಗುವಂತೆ ಮಾಡುವುದಿಲ್ಲ. ಇದರಿಂದ ಹೊಟ್ಟೆಯ ಬೊಜ್ಜು ಕರಗಿಸಲು ಜೇನುತುಪ್ಪ ಕೂಡ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದು ದೀರ್ಘಕಾಲ ತನಕ ಹೊಟ್ಟೆ ತುಂಬಿರುವಂತೆ ಮಾಡುವುದು ಮತ್ತು ಆಹಾರ ಸೇವನೆ ಮಿತಿ ಕಡಿಮೆ ಮಾಡುವುದರೊಂದಿಗೆ ಲಿಂಬೆಯ ಅತಿಯಾಗಿರುವ ಕೊಬ್ಬು ಕರಗಿಸುವುದು. ಜೇನುತುಪ್ಪ ಮತ್ತು ಲಿಂಬೆಯ ಮಿಶ್ರಣವು ಬೊಜ್ಜು ಇಳಿಸುವ ನಿಮ್ಮ ಗುರಿಯನ್ನು ಬೇಗನೆ ಸಾಧಿಸಲು ನೆರವಾಗುವದು. ತುಂಬಾ ರುಚಿಕರವಾಗಿರುವ ಜೇನುತುಪ್ಪದ ಲಿಂಬೆನೀರನ್ನು ಕುಡಿಯುವುದು ಕಷ್ಟವೇನಲ್ಲ.

ತಯಾರಿಸುವ ವಿಧಾನ

300 ಮಿ.ಲೀ. ಬಿಸಿ ನೀರಿಗೆ ಒಂದು ಚಮಚ ಲಿಂಬೆರಸ ಮತ್ತು 2 ಚಮಚ ಜೇನುತುಪ್ಪ ಹಾಕಿ ಮತ್ತು ಸರಿಯಾಗಿ ಕಲಸಿಕೊಳ್ಳಿ. ದಿನದಲ್ಲಿ ಎರಡು ಸಲ ಇದನ್ನು ಕುಡಿಯಿರಿ. ಬೆಳಗ್ಗೆ ಉಪಾಹಾರಕ್ಕೆ 30 ನಿಮಿಷ ಮೊದಲು ಮತ್ತು ರಾತ್ರಿ ಮಲಗುವ 30 ನಿಮಿಷ ಮೊದಲು ಸೇವಿಸಿ. ಇದನ್ನು ಪ್ರತಿನಿತ್ಯ ಸೇವನೆ ಮಾಡಿದರೆ ವಾರದಲ್ಲಿ ಕೊಬ್ಬು ಕರಗಿರುವುದು ಗಮನಕ್ಕೆ ಬರುವುದು.

2. ಲಿಂಬೆರಸದ ನೀರು

2. ಲಿಂಬೆರಸದ ನೀರು

ಲಿಂಬೆರಸದ ನೀರನ್ನು ನೀವು ನೀರಿನ ಬದಲಿಗೆ ಸೇವಿಸಬಹುದು. ಒಂದು ತಾಜಾ ಲಿಂಬೆಯನ್ನು ತುಂಡು ಮಾಡಿಕೊಂಡು ಅದರ ರಸವನ್ನು ಕುಡಿಯು ನೀರಿಗೆ ಹಾಕಿಕೊಳ್ಳಿ ಮತ್ತು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ನೀವು ನೀರಿನ ಬದಲಿಗೆ ಕುಡಿಯಬಹುದು. ಬೇಸಗೆಯಲ್ಲಿ ತಂಪಾಗಿಸಿ ಕುಡಿದರೆ ಉಲ್ಲಾಸ ಬರುವುದು. ಹೊಟ್ಟೆಯ ಕೊಬ್ಬು ಕರಗಿಸಲು ಇದು ಕೆಲವು ಪರಿಣಾಮಕಾರಿ ವಿಧಾನಗಳು. ಆದರೆ ನಿಮ್ಮ ಆರೋಗ್ಯದ ಮೇಲೆ ಯಾವುದೇ ಪರಿಣಾಮವಾಗದಂತೆ ಎಚ್ಚರಿಕೆ ವಹಿಸಬೇಕು. ಬೆಳಗ್ಗೆ ನೀವು ತುಂಬಾ ಹುಳಿಯಾಗಿರುವಂತಹ ಲಿಂಬೆ ನೀರು ಕುಡಿಯಬಾರದು. ಯಾಕೆಂದರೆ ಈ ವೇಳೆ ಹೊಟ್ಟೆ ಖಾಲಿಯಾಗಿರುವುದು. ತುಂಬಾ ಆಮ್ಲೀಯವಾಗಿರುವುದನ್ನು ದೀರ್ಘಕಾಲ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವನೆ ಮಾಡಿದರೆ ಆಗ ಇದು ಅಲ್ಸರ್ ನ ಉರಿಯೂತ ಉಂಟು ಮಾಡಬಹುದು.

3. ಉಪ್ಪು ಮತ್ತು ಲಿಂಬೆರಸ

3. ಉಪ್ಪು ಮತ್ತು ಲಿಂಬೆರಸ

ಲಿಂಬೆರಸವನ್ನು ನೀರಿಗೆ ಹಾಕಿ ಕುಡಿಯುವುದು ತುಂಬಾ ಹುಳಿಯಾಗಿರುವುದು ಮತ್ತು ಕುಡಿಯಲು ಕಷ್ಟವಾಗುವುದು ಎಂದು ನಿಮಗೆ ಅನಿಸಿದರೆ ಆಗ ನೀವು ಲಿಂಬೆರಸಕ್ಕೆ ಉಪ್ಪು ಹಾಕಿಕೊಂಡು ಕುಡಿಯಿರಿ. ಇದನ್ನು ಮಾಡುವುದು ಕಷ್ಟವೇನಲ್ಲ.

250 ಮಿ.ಲೀ. ಬಿಸಿನೀರಿಗೆ ಅರ್ಧ ಲಿಂಬೆರಸ ಹಾಕಿ ಮತ್ತು ಬಿಳಿಉಪ್ಪು ಹಾಕಿಕೊಂಡು ಮಿಶ್ರಣ ಮಾಡಿ ಕುಡಿಯಿರಿ. ಈ ರೀತಿಯ ಉಪ್ಪು ಬೆರೆಸಿದ ಲಿಂಬೆ ನೀರು ಜೀರ್ಣಕ್ರಿಯೆ ವೃದ್ಧಿಸುವುದು ಮತ್ತು ಕೊಬ್ಬು ಕಡಿಮೆ ಮಾಡುವುದು. ಇದು ವಾರದಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು ಮಾತ್ರವಲ್ಲದೆ ಆರೋಗ್ಯಕಾರಿ ಕೂಡ.

4. ಲಿಂಬೆ ಸಿಪ್ಪೆಯ ನೀರು

4. ಲಿಂಬೆ ಸಿಪ್ಪೆಯ ನೀರು

ತೂಕ ಇಳಿಸಿಕೊಳ್ಳಲು ಲಿಂಬೆರಸವು ಮಾತ್ರ ಪರಿಣಾಮಕಾರಿಯಲ್ಲ. ಅದರ ಸಿಪ್ಪೆ ಕೂಡ ತುಂಬಾ ಲಾಭಕಾರಿ. ಲಿಂಬೆಯ ಸಿಪ್ಪೆಯಲ್ಲಿ ಪೆಕ್ಟಿನ್ ಎನ್ನುವ ಅಂಶವಿದೆ. ಇದು ಸಕ್ಕರೆ ಹೀರಿಕೊಳ್ಳುವಿಕೆ ಕಡಿಮೆ ಮಾಡುವುದು ಮತ್ತು ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇದು ನೆರವಾಗುವುದು.

ವಾರದಲ್ಲೇ ಹೊಟ್ಟೆ ಬೊಜ್ಜು ಕರಗುವಂತೆ ಮಾಡಲು ನೀವು 10 ಲಿಂಬೆಯ ಸಿಪ್ಪೆಯನ್ನು 200ಮಿ.ಲೀ. ನೀರಿನಲ್ಲಿ ಬೇಯಿಸಿ. ಈ ನೀರು ಹತ್ತು ನಿಮಿಷ ಕಾಲ ಕುದಿಸಿ ಮತ್ತು ಬಳಿಕ ಬೆಂಕಿ ನಂದಿಸಿ. ಇದು ತಣ್ಣಗಾದ ಬಳಿಕ ನೇರವಾಗಿ ನೀವು ಇದನ್ನು ಸೇವಿಸಬಹುದು. ಈ ನೀರು ಸ್ವಲ್ಪ ಕಹಿ ಕೂಡ ಹೊಂದಿರುವ ಕಾರಣದಿಂದಾಗಿ ಮೊದಲ ಸಲ ಸೇವನೆ ಮಾಡುವಾಗ ನಿಮಗೆ ಅಸಾಮಾನ್ಯವೆನಿಸಬಹುದು. ಇದರಿಂದ ನೀರು ಕುಡಿದ ಬಳಿಕ ಒಂದು ತುಂಡು ಸೇಬು ಸೇವನೆ ಮಾಡಿದರೆ ಇದು ಕಹಿ ಕಡಿಮೆ ಮಾಡುವುದು.

ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

5. ಲಿಂಬೆ ಹಾಗೂ ಜೇನು ಬೆರೆಸಿದ ಉಗುರುಬೆಚ್ಚನೆಯ ನೀರು

5. ಲಿಂಬೆ ಹಾಗೂ ಜೇನು ಬೆರೆಸಿದ ಉಗುರುಬೆಚ್ಚನೆಯ ನೀರು

ಲಿಂಬೆರಸ ಬೆರೆಸಿದ ಉಗುರುಬೆಚ್ಚನೆಯ (ಕೊಂಚ ಜೇನನ್ನು ಬೆರೆಸಿ ) ನೀರನ್ನು ಕುಡಿಯುವ ಮೂಲಕ ದೇಹದಲ್ಲಿರುವ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ತನ್ಮೂಲಕ ಯಕೃತ್ ನ ಮೇಲಿರುವ ದೊಡ್ಡ ಹೊರೆಯನ್ನು ಸಾಕಷ್ಟು ಕಡಿಮೆ ಮಾಡಿದಂತಾಗುತ್ತದೆ. ತೂಕ ಇಳಿಕೆಗೆ ಇದು ಮುಖ್ಯ ಅಂಶವಾಗಿದೆ. ಅಲ್ಲದೇ ಈ ನೀರು ಉಗುರುಬೆಚ್ಚಗಿರುವ ಮೂಲಕ ಕಲ್ಮಶಗಳನ್ನು ನಿವಾರಿಸುವ ಕೆಲಸಕ್ಕೆ ಹೆಚ್ಚಿನ ಚುರುಕು ದೊರಕುತ್ತದೆ ಹಾಗೂ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ, ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ ಹಾಗೂ ಜೀರ್ಣರಸಗಳ ಆಮ್ಲೀಯ-ಕ್ಷಾರೀಯ ಮಟ್ಟ ಅಥವಾ ಪಿ ಎಚ್ ಮಟ್ಟವನ್ನು ಸಂತುಲಿತ ಮಟ್ಟದಲ್ಲಿರಿಸಲು ಹಾಗೂ ಕಲ್ಮಶಗಳನ್ನು ನಿವಾರಿಸಲು ನೆರವಾಗುತ್ತದೆ. ಉಗುರುಬೆಚ್ಚನೆಯ ನೀರಿನಲ್ಲಿ ಲಿಂಬೆರಸ ಬೆರೆಸಿ ಕುಡಿಯುವ ಮೂಲಕ ಜೀವರಾಸಾಯನಿಕ ಕ್ರಿಯೆ ಇನ್ನಷ್ಟು ಚುರುಕುಗೊಳ್ಳುತ್ತದೆ ಹಾಗೂ ಲಿಂಬೆರಸದಲ್ಲಿರುವ ಪೆಕ್ಟಿನ್ ಹಸಿವಿನ ಬಯಕೆಗಳನ್ನು ಅದುಮಿಡುತ್ತದೆ. ತನ್ಮೂಲಕ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ ಹಾಗೂ ಹೊಟ್ಟೆಯ ಗಾತ್ರವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಲಿಂಬೆರಸವನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಪ್ರಮಾಣದ ಕೊಬ್ಬನ್ನು ಬಳಸಿಕೊಳ್ಳುವ ಮೂಲಕ ಸೊಂಟದ ಕೊಬ್ಬು ಅನಿವಾರ್ಯವಾಗಿ ಕರಗಲೇಬೇಕಾಗುತ್ತದೆ. ಒಂದು ವೇಳೆ ಸೊಂಟದ ಕೊಬ್ಬನ್ನು ಕರಗಿಸುವುದು ನಿಮ್ಮ ಪ್ರಾಮಾಣಿಕ ಪ್ರಯತ್ನವಾಗಿದ್ದರೆ ಬೆಳಗ್ಗಿನ ಪ್ರಥಮ ಆಹಾರವಾಗಿ ಲಿಂಬೆರಸವನ್ನು ಸೇವಿಸುವುದರ ಮೂಲಕ ಹೆಚ್ಚಿನ ಪ್ರಗತಿಯನ್ನು ಗಮನಿಸಬಹುದು.

ಸಲಹೆಗಳು

ಸಲಹೆಗಳು

*ಉತ್ತಮ ಪರಿಣಾಮಕ್ಕಾಗಿ ಲಿಂಬೆರಸವನ್ನು ಉಗುರುಬೆಚ್ಚನಿಯ ನೀರಿನಲ್ಲಿ ಬೆಳಿಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಸಕ್ಕರೆ ಸೇರಿಸುವುದರಿಂದ ಲಿಂಬೆಯ ಗುಣಗಳು ನಾಶವಾಗುವುದರಿಂದ ಸಕ್ಕರೆ, ಉಪ್ಪು, ಬೆಲ್ಲ ಯಾವುದನ್ನೂ ಸೇರಿಸಬೇಡಿ. ಕೆಲವು ಹನಿ ಜೇನನ್ನು ಬೇಕಾದರೆ ಸೇರಿಸಬಹುದು.

*ಜೇನು ಸೇರಿಸಿದ ನೀರು ಕುಡಿಯುವುದರಿಂದ ದೇಹ ಲಿಂಬೆ ಮತ್ತು ಜೇನು ಎರಡರ ಪ್ರಯೋಜನವನ್ನೂ ಪಡೆಯಬಹುದು. ಈ ನೀರನ್ನು ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.

*ಉತ್ತಮ ಪರಿಣಾಮಕ್ಕಾಗಿ ಲಿಂಬೆರಸವನ್ನು ಸೇವಿಸಿದ ಬಳಿಕ ದೀರ್ಘ ಉಸಿರಾಟದ ಮೂಲಕ ಸಾಕಷ್ಟು ನಡೆಯಿರಿ ಅಥವಾ ಲಘು ವ್ಯಾಯಾಮ ಮಾಡಿ. ಇದರಿಂದ ದೇಹಕ್ಕೆ ಹೆಚ್ಚಿನ ಆಮ್ಲಜನಕ ದೊರಕುತ್ತದೆ ಮತ್ತು ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಕರಗಲು ನೆರವಾಗುತ್ತದೆ.

ಮನೆಮದ್ದು: ಹೊಟ್ಟೆಯ ಬೊಜ್ಜು ಕರಗಿಸುವ, ಅದ್ಭುತ ಜ್ಯೂಸ್

English summary

Ways to reduce belly fat in 1 week with lemon

With the characteristic of high acidity and abundant vitamin C, lemon is particularly good for your weight loss as it enhances metabolism, aids in digestion, reduces the absorption of fat and toxic sugar and thus make your one – week weight loss plan way much easier and faster.
X
Desktop Bottom Promotion